ಬೆಂಗಳೂರು: ವಿಧಾನ ಪರಿಷತ್ (Vidhan Parishad) ಕಲಾಪದಲ್ಲಿ ಮಂಗಳವಾರ ಸಚಿವ ಮುರುಗೇಶ್ ನಿರಾಣಿ (Murugesh Nirani), ಜೆಡಿಎಸ್ (JDS) ಸದಸ್ಯ ಮರಿತಿಬ್ಬೇಗೌಡ (Maritibbe Gowda) ನಡುವೆ ಏಕವಚನ ಬೈಗಳ ಗಲಾಟೆ ನಡೆಯಿತು. ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಬೈದುಕೊಂಡು ಗಲಾಟೆ ಮಾಡಿದರು.
ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ವೇಳೆ ಮರಿತಿಬ್ಬೇಗೌಡ ಪ್ರಶ್ನೆ ಕೇಳಿದರು. ಈ ವೇಳೆ ಭೂಸ್ವಾಧೀನ ಪರಿಹಾರ ಅಕ್ರಮ ವಿಚಾರದ ಕುರಿತು ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ಎಂದು ಮರಿತಿಬ್ಬೇಗೌಡ ಮಾತನಾಡಿದರು. ಈ ಹೇಳಿಕೆಗೆ ಸಚಿವ ನಿರಾಣಿ ತಿರುಗೇಟು ನೀಡುತ್ತಾ, ಸರಿಯಾಗಿ ಮಾತನಾಡು.. ಅರಚಾಡಬೇಡ. ನಾನು ಉತ್ತರ ಕರ್ನಾಟಕದವನು ನಿನ್ನ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಈ ವೇಳೆ ಸದನದಲ್ಲಿ ಗದ್ದಲ ನಡೆಯಿತು. ಇದನ್ನೂ ಓದಿ: ಮುಸ್ಲಿಂ ಮತಗಳ ಓಲೈಕೆಗೆ ಮುಂದಾದ ಹೈಕಮಾಂಡ್ – ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಸವಾಲು
ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬಿಎಂಆರ್‌ಸಿಎಲ್‌ಗೆ ಹಂಚಿಕೆ ಮಾಡಿ 22 ಕೋಟಿ ಪರಿಹಾರ ಕೊಡಲಾಗಿದೆ. 12 ಗುಂಟೆ ಬಿಡಿಎ ಆಸ್ತಿಗೆ ಖಾಸಗಿ ವ್ಯಕ್ತಿಗೆ 22 ಕೋಟಿ ಪರಿಹಾರ ನೀಡಲಾಗಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಹೋಬಳಿಯಲ್ಲಿ 32 ಗುಂಟೆ ಸ್ವಾಧೀನ ಕಟ್ಟಡಗಳಿದ್ದ ಕಾರಣ 12 ಗುಂಟೆಯನ್ನು ಸ್ವಾಧೀನದಿಂದ ಕೈಬಿಡಲಾಗಿತ್ತು. 15 ವರ್ಷವಾದರೂ ಭೂಮಿ ಕಳೆದುಕೊಂಡ ವ್ಯಕ್ತಿಗೆ ಪರಿಹಾರ ಸಿಕ್ಕಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನು ಸ್ವಾಧೀನವಾಗದೇ ಇದ್ದಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದಾಗಲಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡೇ ಪರಿಹಾರ ನೀಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ನಿಮಗೆ ಎಂದರು. ಈ ಮಾತಿಗೆ ತಿರುಗೇಟು ನೀಡಿದ ಸಚಿವ ನಿರಾಣಿ, ಸರಿಯಾಗಿ ಮಾತನಾಡು.. ಅರಚಾಡಬೇಡ. ನಾನು ಉತ್ತರ ಕರ್ನಾಟಕದವನು. ನಿನ್ನ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಭಿವೃದ್ಧಿ ಮಾಡಿದ್ದು ಯಾರು? – ವೇದಿಕೆಯಲ್ಲೇ ಅಶ್ವಥ್ ನಾರಾಯಣ್ Vs ಅನಿತಾ ಕುಮಾರಸ್ವಾಮಿ ವಾಗ್ವಾದ
ಅಲ್ಲಿಗೆ ಚರ್ಚೆ ಸ್ಥಗಿತಗೊಳಿಸಿ ಸಭಾಪತಿಗಳು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. ಉತ್ತರ ಖಂಡಿಸಿ ಮರಿತಿಬ್ಬೇಗೌಡ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಧ್ಯಪ್ರವೇಶ ಮಾಡಿ, ಸಚಿವರು ಉತ್ತರ ಕೊಡುತ್ತಿದ್ದಾರೆ ಮಾತನಾಡಲು ಬಿಡಿ ಎಂದರು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಾನು ಅನುಮತಿ ನೀಡಲ್ಲ. ಬಾಯಿ ಇದೆ ಎಂದು ಮನಸ್ಸಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಸದನ ನಡೆಸಬೇಕೋ ಬೇಡವೋ? ಬೇರೆ ಸದಸ್ಯರಿಲ್ಲವೆ? ನೀವೇಳಿದಂತೆ ಸದನ ನಡೆಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ಸರ್ಕಾರದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಅವಕಾಶ ಕೊಡಬೇಡಿ ಎಂದರು. ಇದಕ್ಕೆ ಕಿಡಿಕಾರಿದ ಹರಿಪ್ರಸಾದ್, ನೀವು ಅಧ್ಯಕ್ಷರಾ? ಬೇಡ ಎನ್ನಲು ನೀವು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ನಿರ್ಧಾರ ಪ್ರಕಟಿಸಿದ್ದೇನೆ ಎಂದು ಸಭಾಪತಿಗಳು ಸ್ಪಷ್ಟಪಡಿಸಿದರು. ನನ್ನ ನಿರ್ಧಾರದಲ್ಲಿ ಬದಲಿಲ್ಲ. ಬೇರೆ ರೂಪದಲ್ಲಿ ಕೊಡಿ ಪರಿಗಣಿಸಲಾಗುತ್ತದೆ. ನಾಳೆ ನಾಡಿದ್ದರಲ್ಲಿ ಪರಿಗಣನೆ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟರು.
LIVE TV
[brid partner=56869869 player=32851 video=960834 autoplay=true]
ಮೈಸೂರು: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೋಲಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಚುನಾವಣೆ ಫಲಿತಾಂಶ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಧನ್ಯವಾದ ಹೇಳುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ದಾಖಲೆಯ ಗೆಲುವು
ಮತದಾರರು ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಬಿಜೆಪಿಗೆ ಸೋಲಾಗಿದೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಮಹಾತ್ಮರ ಪಠ್ಯ ಕೈ ಬಿಟ್ಟಿದ್ದಕ್ಕೆ ಮತದಾರರು ಆಕ್ರೋಶಗೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕ್ಷೇತ್ರಕ್ಕೆ ಸಂಬಂಧವೇ ಇರದ ವ್ಯಕ್ತಿಯನ್ನು ಜೆಡಿಎಸ್ ಅಭ್ಯರ್ಥಿ ಮಾಡಿದ್ದಕ್ಕೆ ಜೆಡಿಎಸ್‌ಗೆ ಸೋಲಾಗಿದೆ. ಜೆಡಿಎಸ್ ಸೋಲು ನನಗೆ ಅತೀವ ಸಂತಸ ತಂದಿದೆ ಎಂದು ಮರಿತಿಬ್ಬೇಗೌಡ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡ್ತಿದ್ದಾರೆ: ಸಿದ್ದರಾಮಯ್ಯ
ಮಂಡ್ಯ: ಜೆಡಿಎಸ್‍ನಲ್ಲಿ ಹಣವಿದ್ದರೇ ಮಾತ್ರ ಚುನಾವಣೆಗೆ ಟಿಕೆಟ್ ನೀಡ್ತಾರೆ, ಹಣ ಇಲ್ಲ ಅಂದ್ರೆ ಟಿಕೆಟ್ ಸಿಗೋಲ್ಲಾ ಎಂದು ಜೆಡಿಎಸ್‍ನ ಎಂಎಲ್‍ಸಿ ಮರಿತಿಬ್ಬೇಗೌಡ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಮೇಲೆ ಹಾಗೂ ನಾಯಕರ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಆರೋಪ ಮಾಡಿ ವಾಗ್ದಾಳಿ ಮಾಡುತ್ತಿತ್ತು. ಆದರೆ ಇದೀಗ ಜೆಡಿಎಸ್ ಎಂಎಲ್‍ಸಿ ಮರಿತಿಬ್ಬೇಗೌಡ ಸ್ವಪಕ್ಷದ ನಾಯಕರ ಮೇಲೆ ಗಂಭೀರ ಆರೋಪ ಮಾಡುವುದ ಜೊತೆಗೆ ತಮ್ಮ ಅಸಮಧಾನ ತೊಡಿಕೊಂಡು ವಾಗ್ದಾಳಿ ನಡಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆಪ್ತ ಕಿಲಾರ ಜಯರಾಂ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಗೆ ಟಿಕೆಟ್ ಕೇಳಿದಕ್ಕೆ ಆತನ ಬಳಿ ಹಣ ಇಲ್ಲ. ಅವನಿಗೆ ಟಿಕೆಟ್ ಬೇಡಾ ಎಂದು ಜೆಡಿಎಸ್ ವರಿಷ್ಠರು ಹೇಳಿದ್ದರು. ಇದಾದ ಬಳಿಕ ಪಕ್ಷದ ಬಾವುಟ ಹಿಡಿಯದ ಹೆಚ್.ಕೆ.ರಾಮುಗೆ ಟಿಕೆಟ್ ನೀಡಿದ್ದಾರೆ. ಈ ಮೂಲಕ ಜೆಡಿಎಸ್‍ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಕೊಡುವುದು ತಿಳಿಯುತ್ತದೆ. ಜೆಡಿಎಸ್‍ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ, ಇಲ್ಲಿ ಹಣ ಇದ್ದವರಿಗೆ ಬೆಲೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿ ಸೋಲಲು ಶಾಸಕರು, ಕಾರ್ಯಕರ್ತರು, ಜನರು ಕಾರಣರಲ್ಲ, ಇದಕ್ಕೆ ಅವರ ಕುಟುಂಬದಲ್ಲಿ ತೆಗೆದುಕೊಂಡ ನಿರ್ಣಯಗಳೇ ಕಾರಣ. ಕುಟುಂಬ ರಾಜಕೀಯದಿಂದಲೇ ಈ ಸೋಲು ಉಂಟಾಗಿದೆ. ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿದ ಮೇಲೆ ದೇವೇಗೌಡರು ಚುನಾವಣೆಗೆ ನಿಲ್ಲುವ ಅವಶ್ಯಕತೆ ಇರಲಿಲ್ಲ. ನಿಖಿಲ್ ಮಂಡ್ಯಗೆ ಬೇಡಾ ಎಂದು ನಾನು ಒತ್ತಿ ಹೇಳಿದೆ. ಹೀಗಿದ್ದರೂ, ನನ್ನ ಮಾತನ್ನು ಕೇಳದೆ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರಿಂದ ಸೋತರು. ಈ ಸೋಲಿಗೆ ಯಾರು ಕಾರಣರಲ್ಲ ಸ್ವತಃ ದೇವೇಗೌಡರ ಕುಟುಂಬವೇ ಇದಕ್ಕೆ ಮೂಲ ಕಾರಣ ಎಂದು ಕಿಡಿಕಾರಿದರು.
ನನಗೆ ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್‍ನಲ್ಲಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ನನ್ನ ಸೋಲಿಸಬೇಕೆಂದು ಪಕ್ಷದ ವರಿಷ್ಠರು, ನಾಯಕರು ಪ್ಲಾನ್ ಮಾಡಿದ್ದರು. ನಾನು ಪಟ್ಟ ಶ್ರಮದಿಂದ ನಾನು ಆಯ್ಕೆಯಾಗಿ ಬಂದೆ. ಇದಾದ ಬಳಿಕವೂ ಪಕ್ಷದಲ್ಲಿ ಒಂದೆಲ್ಲ ಒಂದು ವಿಚಾರಕ್ಕೆ ನನಗೆ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:ಪ್ರವಾಸಿಗರ ಆಕರ್ಷಣೆಗೆ ನಿರ್ಮಾಣವಾಗಿದ್ದ ಮಲ್ಪೆಯ ತೇಲುವ ಸೇತುವೆ ಸ್ಥಗಿತ
ಆದರೂ ನಾನು ಇಷ್ಟು ದಿನ ಸಹಿಸಿಕೊಂಡು ಬಂದಿದ್ದೆ. ಇದೀಗ ಇವರ ನಡವಳಿಕೆಗೆ ಬೇಸತ್ತು ಮಾತನಾಡುತ್ತಿದ್ದೇನೆ. ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗೆ ನನ್ನ ಬೆಂಬಲವಿಲ್ಲ, ಯಾರಿಗಾದರೂ ಮತ ಹಾಕಿ ಜೆಡಿಎಸ್ ಅಭ್ಯರ್ಥಿ ರಾಮುಗೆ ಮತ ಹಾಕಬೇಡಿ ಎಂದು ಬಹಿರಂಗವಾಗಿ ಸಭೆಯಲ್ಲಿ ವಾಗ್ದಾಳಿ ನಡೆಸಿದರು.
ಜಿ.ಟಿ. ದೇವೇಗೌಡ ಬಳಿಕ ಇದೀಗ ಎಂಎಲ್‍ಸಿ ಮರಿತಿಬ್ಬೇಗೌಡ ಜೆಡಿಎಸ್ ನಾಯಕರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಇದರಿಂದ ಜೆಡಿಎಸ್‍ಗೆ ಮತ್ತಷ್ಟು ಟ್ರಬಲ್ ನೀಡಿದೆ. ಈ ಡ್ಯಾಮೆಜ್‍ನ್ನು ಕಂಟ್ರೋಲ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜೆಡಿಎಸ್‍ಗೆ ಮತ್ತಷ್ಟು ಆಘಾತ ಉಂಟಾಗಲಿದೆ. ಇದನ್ನೂ ಓದಿ:ದೆಹಲಿಯ ಶಾಹೀನ್‌ಬಾಗ್ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ