Tag: Marijuana

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನ

    ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನ

    ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸರಿಸುಮಾರು 1 ಲಕ್ಷ ಮೌಲ್ಯದ 2 ಕೆಜಿ 700 ಗ್ರಾಂ ಗಾಂಜಾವನ್ನ ಜಪ್ತಿ ಮಾಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಬಾಗೇಪಲ್ಲಿ ಪೊಲೀಸರು ವಡ್ರೇಪಾಳ್ಯದ ನಾರಾಯಣಪ್ಪ ಎಂಬಾತನನ್ನ ಬಂಧಿಸಿ, ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರದ ಪುಟ್ಟಪರ್ತಿಯಿಂದ ಗಾಂಜಾ ತಂದು ಇಲ್ಲಿ ಹೆದ್ದಾರಿಯಲ್ಲಿ ಬಂದು ಹೋಗುವವರಿಗೆ ಮಾರಾಟ ಮಾಡುತ್ತಿದ್ದಾಗಿ ಆರೋಪಿ ನಾರಾಯಣಪ್ಪ ಪೊಲೀಸರ ಬಳಿ ಹೇಳಿದ್ದಾನೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಧಂಧೆ ಪ್ರಕರಣದ ಸುದ್ದಿ ಮಾಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಸಮರ ಸಾರಿದ್ದು, ಒಂದು ವಾರದಲ್ಲಿ ಪೊಲೀಸರು ಪತ್ತೆ ಹಚ್ಚಿದ ಎರಡನೇ ಪ್ರಕರಣ ಇದಾಗಿದೆ. ಈಗಾಗಲೇ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಗಾಂಜಾ ಸಾಗಾಟ ಪತ್ತೆ ಹಚ್ಚಲು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

  • ಗಾಂಜಾ ಡ್ರಗ್ ಅಲ್ಲ ಅದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ: ಯುವ ನಟ ರಾಕೇಶ್

    ಗಾಂಜಾ ಡ್ರಗ್ ಅಲ್ಲ ಅದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ: ಯುವ ನಟ ರಾಕೇಶ್

    – ನಾನು ಗಾಂಜಾ ತೆಗೆದುಕೊಳ್ಳುತ್ತೇನೆ

    ಬೆಂಗಳೂರು: ಗಾಂಜಾ ಡ್ರಗ್ ಅಲ್ಲ ಅದೊಂದು ಮೆಡಿಸಿನ್ ಎಂದು ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.

    ಚಂದನವದಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ರಾಕೇಶ್, ಗಾಂಜಾದ ಬಗ್ಗೆ ಎಲ್ಲರಿಗೂ ತಪ್ಪು ಕಲ್ಪನೆ ಇದೆ. ಅದನ್ನು ತೆಗೆದು ಹಾಕಬೇಕು. ಗಂಜಾ ಡ್ರಗ್ ಅಲ್ಲ. ಅದು ಮೆಡಿಸಿನ್ ಆಗಿದ್ದು ಅದನ್ನು ಕಾನೂನು ಬದ್ಧಮಾಡಿ ಎಂದು ತಿಳಿಸಿದ್ದಾರೆ.

    ಡ್ರಗ್ ಎಂಬುದು ಇಡೀ ಪ್ರಪಂಚದಲ್ಲೇ ಇದೆ. ಈಗ ಸ್ಯಾಂಡಲ್‍ವುಡ್‍ನಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಅಪರಾಧಿಗಳನ್ನಾಗಿ ಮಾಡಬೇಡಿ. ಅವರನ್ನು ಹೊರಗೆ ಇಡುವುದು ಬೇಡ. ಯಾರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ತಂದು ಮಾರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಗಾಂಜಾವನ್ನು ಡ್ರಗ್‍ನಿಂದ ದೂರ ಇಡಬೇಕು. ಗಾಂಜಾ ಒಂದು ಗಿಡ, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ರಾಕೇಶ್ ಹೇಳಿದರು.

    ಗಾಂಜಾ ತೆಗೆದುಕೊಂಡರೆ ಮಾತ್ರ ನಶೆಯಾಗುತ್ತದೆಯೇ, ಡ್ರಿಂಕ್ಸ್ ಮಾಡಿದರೆ ನಶೆ ಆಗುವುದಿಲ್ಲವೇ? ಗಾಂಜಾ ಬಗ್ಗೆ ಮೋದಿಯವರಿಗೂ ಬಹಿರಂಗ ಪತ್ರ ಬರೆಯಲಾಗಿದೆ. ಅಯಷ್ಮಾನ್ ಇಲಾಖೆಯವರು ಇದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಈ ಹಿಂದೆ ಗಾಂಜಾ ಭಾರತೀಯ ಸಂಸ್ಕೃತಿಗೆ ಬೆರೆತು ಹೋಗಿತ್ತು. 1985ರಲ್ಲಿ ಇದು ಬ್ಯಾನ್ ಆಯ್ತು, ಹಾಗಾದರೆ 1985ರವರೆಗೆ ಭಾರತದಲ್ಲಿ ಎಲ್ಲರೂ ಡ್ರಗ್ ಅಡಿಕ್ಟ್ ಆಗಿದ್ರಾ ಎಂದು ರಾಕೇಶ್ ಪ್ರಶ್ನೆ ಮಾಡಿದ್ದಾರೆ.

    ಮಿಡೀಯಾದಲ್ಲಿ ಡ್ರಿಂಕ್ಸ್ ಮಾಡಿ ಅಪರಾಧ ಮಾಡಿದರೆ, ಗಾಂಜಾ ಮತ್ತಿನಲ್ಲಿ ಮಾಡಿದ್ದಾರೆ ಎಂದು ತೋರಿಸುತ್ತಾರೆ. ಇದರ ಬಗ್ಗೆ ವಿಜ್ಞಾನಿಗಳು ಕೇಳಿ ಗಾಂಜಾದ ಉಪಯೋಗಗಳ ಬಗ್ಗೆ ಹೇಳುತ್ತಾರೆ. ನಾವು ಎಲ್ಲ ವಿಚಾರದಲ್ಲೂ ಅಮೆರಿಕವನ್ನು ಫಾಲೋ ಮಾಡುತ್ತೇವೆ. ಅವರು ಅಲ್ಲಿ ಇದನ್ನು ಕಾನೂನು ಬದ್ಧ ಮಾಡಿದ್ದಾರೆ. ಅವರಿಗೆ ಹೆಚ್ಚು ಆದಾಯ ಬರುತ್ತದೆ. ಗಾಂಜಾದಿಂದ ನಮ್ಮ ಆರ್ಥಿಕತೆ ಮತ್ತು ಮೆಡಿಸಿನ್ ವಿಭಾಗಕ್ಕೆ ಲಾಭವಿದೆ. ಮದ್ಯಕ್ಕಿಂತ ಗಾಂಜಾ ಒಳ್ಳೆಯದು ಎಂದು ರಾಕೇಶ್ ಅಭಿಪ್ರಾಯಪಟ್ಟರು.

    ಜೊತೆಗೆ ನಾನೂ ಗಾಂಜಾವನ್ನು ತೆಗೆದುಕೊಳ್ಳುತ್ತಿದ್ದೆ. ಈಗಲೂ ಅದರಿಂದ ಮಾಡಿದ ಕೇಕ್, ಕುಕಿಗಳನ್ನು ಯಾರದರೂ ಮಾಡಿಕೊಟ್ಟರೆ ತಿನ್ನುತ್ತೇನೆ ಎಂದು ರಾಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದರು.

  • ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಾಂಜಾ ವ್ಯಸನಿಗಳು

    ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಾಂಜಾ ವ್ಯಸನಿಗಳು

    – ಮಂಗಳೂರಿನಲ್ಲಿ ನಿಲ್ಲದ ಗಾಂಜಾ ಜಾಲ

    ಮಂಗಳೂರು: ಗಾಂಜಾ ವ್ಯಸನಿಗಳು ರೆಡ್‍ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಪಣಂಬೂರು ಸಮೀಪ ಬೈಕಂಪಾಡಿ ಬಳಿ ನಡೆದಿದೆ.

    ಸುರತ್ಕಲ್ ಜೆ.ಎಂ ರಸ್ತೆಯ ನಿವಾಸಿ ಮೊಹಮ್ಮದ್ ರಾಜಿಕ್ (32) ಹಾಗೂ ಚೇಳ್ಯಾರು ನಿವಾಸಿ ನಿಖಿಲ್(19) ಬಂಧಿತ ಆರೋಪಿಗಳು. ರಾಜ್ಯದ ಕರಾವಳಿಯ ಗಾಂಜಾ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಗಾಂಜಾ ಮಾರಾಟ, ಸೇವನೆ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕರು ಈ ಚಟಕ್ಕೆ ಬೀಳುತ್ತಿದ್ದಾರೆ.

    ಪೊಲೀಸರು ಅಲ್ಲೊಂದು ಇಲ್ಲೊಂದು ಪ್ರಕರಣಗಳನ್ನು ಪತ್ತೆ ಹಚ್ಚುತ್ತಾರೆ ಬಿಟ್ಟರೆ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದೀಗ ಮೊಹಮ್ಮದ್ ರಾಜಿಕ್ ಹಾಗೂ ನಿಖಿಲ್ ಬೈಕಂಪಾಡಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಮಂಗಳೂರು ಉತ್ತರ ಉಪವಿಭಾಗ ವಿಶೇಷ ಅಪರಾಧ ಪತ್ತೆದಳದ ಕೈಗೆ ಸಿಕ್ಕಿಬಿದ್ದಿದ್ದಾರೆ.

    ನಗರ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದ ಅಪರಾಧ ಪತ್ತೆದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

  • ಗಾಂಜಾಗೆ 50 ರೂ. ನೀಡದ್ದಕ್ಕೆ 16ರ ಬಾಲಕ ಬರ್ಬರ ಕೊಲೆ

    ಗಾಂಜಾಗೆ 50 ರೂ. ನೀಡದ್ದಕ್ಕೆ 16ರ ಬಾಲಕ ಬರ್ಬರ ಕೊಲೆ

    ಬೆಂಗಳೂರು: ಗಾಂಜಾಗೆ 50 ರೂ. ಕೊಟ್ಟಿಲ್ಲ ಎಂದು ಚಾಕುವಿನಿಂದ ಇರಿದು ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಡಿಜೆ ಹಳ್ಳಿಯಲ್ಲಿ ನಡೆದಿದೆ.

    ಡಿಜೆ ಹಳ್ಳಿಯ ಮೋದಿ ರಸ್ತೆ ಬಳಿ ಘಟನೆ ನಡೆದಿದ್ದು, ಮಹಮ್ಮದ್ ವಾಸಿಂ (16)ಕೊಲೆಯಾದ ಬಾಲಕ. ಮೂವರು ದುಷ್ಕರ್ಮಿಗಳು ಮಹಮ್ಮದ್ ವಾಸಿಂ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಬಾಲಕ ಬೇಕರಿಯಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ. ವೇಳೆ ಮೂವರು ದುಷ್ಕರ್ಮಿಗಳು ಗಾಡಿಯಲ್ಲಿ ಬಂದಿದ್ದಾರೆ. ವಾಸಿಂನನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಗಾಂಜಾಗೆ ಹಣ ಕೇಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಹಾಗೂ ವಾಸಿಂ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾಲಕ ಹಣ ಇಲ್ಲ ಎಂದು ಪಕ್ಕಕ್ಕೆ ಹೋಗಿದ್ದಾನೆ. ಆಗ ಬೈಕಿನಿಂದ ಇಳಿದು ಚಾಕು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

    ಬಾಲಕ ಮಹಮ್ಮದ್ ವಾಸಿಂ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಬೇಕರಿಯಿಂದ ಮನೆಗೆ ಹೋಗಬೇಕಾದಾಗ ರಸ್ತೆಯಲ್ಲಿ ಅಡ್ಡ ನಿಲ್ಲಿಸಿ ಹಣ ಕೇಳಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಾಂಜಾ ಅಮಲಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ರಂಪಾಟ

    ಗಾಂಜಾ ಅಮಲಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ರಂಪಾಟ

    ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿರುವ ಪ್ರತಿಷ್ಠಿತ ಅಲಯನ್ಸ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗಾಂಜಾ ಅಮಲಿನಲ್ಲಿ ಕಾಲೇಜು ಗೇಟ್ ಬಳಿಯೇ ರಂಪಾಟ ಮಾಡಿದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.

    ಇತ್ತೀಚೆಗಷ್ಟೇ ಅಲಯನ್ಸ್ ಕಾಲೇಜಿನ ಮಾಜಿ ಕುಲಪತಿ ಹತ್ಯೆ ನಡೆದು ಸುದ್ದಿಯಾಗಿದ್ದ ಯುನಿವರ್ಸಿಟಿ ಈಗ ಮತ್ತೆ ಸುದ್ದಿಯಾಗಿದೆ. ಇದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಗಾಂಜಾ ಸೇವನೆ ಮಾಡಿ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರಿನ ಗಾಜನ್ನು ಪುಡಿ ಮಾಡಿ ರಂಪಾಟ ಮಾಡಿದ್ದಾಳೆ.

    ಕಾನೂನು ಪದವಿ ಕಾಲೇಜಿನಲ್ಲಿ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೇ ಅರಿವೇ ಇಲ್ಲ ಎನ್ನುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ರೀತಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ನಡು ರಸ್ತೆಯಲ್ಲೇ ಗಾಂಜಾ, ಮದ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದರೂ ಕಾಲೇಜು ಆಡಳಿತ ಮಂಡಳಿ ಮಾತ್ರ ತಮಗೆ ಏನೂ ಗೊತ್ತೇ ಇಲ್ಲ ಎನ್ನವ ರೀತಿ ನಡೆದುಕೊಳ್ಳುತ್ತಿದೆ. ಈ ರೀತಿಯ ಘಟನೆಗಳು ಈ ಕಾಲೇಜಿನಲ್ಲಿ ತುಂಬಾ ಆಗಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಕಾಲೇಜು ವಿದ್ಯಾರ್ಥಿಗಳ ಅತಿರೇಕದ ನಡವಳಿಕೆ ಬಗ್ಗೆ ಆನೇಕಲ್ ಪೋಲೀಸ್ ಠಾಣೆಗೆ ಸಾಕಷ್ಟು ದೂರು ಹೋಗಿದ್ದರೂ ಪೊಲೀಸರು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

  • ಬಂಧಿಸಿದ್ದು ಗಾಂಜಾ ಮಾರಾಟಕ್ಕೆ – ಬೆಳಕಿಗೆ ಬಂತು ಬೃಹತ್ ದ್ವಿಚಕ್ರ ಕಳ್ಳತನ ಜಾಲ

    ಬಂಧಿಸಿದ್ದು ಗಾಂಜಾ ಮಾರಾಟಕ್ಕೆ – ಬೆಳಕಿಗೆ ಬಂತು ಬೃಹತ್ ದ್ವಿಚಕ್ರ ಕಳ್ಳತನ ಜಾಲ

    ಬೆಂಗಳೂರು: ಗಾಂಜಾ ಮಾರಾಟದೊಂದಿಗೆ, ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಗ್ಯಾಂಗ್ ಸದಸ್ಯರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ಈ ಸಂಬಂಧ ತಮಿಳುನಾಡು ಮೂಲದ ಪರಮೇಶ್, ಸೈಯ್ಯದ್ ಫಾರೂಕ್, ಬಸವರಾಜ್, ಬಾಲಾಜಿ, ತಿಮ್ಮರಾಜು ಮತ್ತು ಅರುಣ್ ಹಾಗೂ ಬೆಂಗಳೂರು ಮೂಲದ ಸೈಯ್ಯದ್ ಸಾಧಿಕ್ ಮತ್ತು ಸೈಯ್ಯದ್ ದಾವುದ್ ಬಂಧಿತ ಆರೋಪಿಗಳು.

    ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಸಹ ಕಳ್ಳತನ ಮಾಡುತ್ತಿದ್ದೇವು ಎಂದು ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ ಒಟ್ಟು 25 ದ್ವಿಚಕ್ರ ವಾಹನಗಳು, 400 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 11 ದ್ವಿಚಕ್ರ ವಾಹನಗಳನ್ನು ಆರೋಪಿಗಳು ಕದ್ದಿದ್ದರು. ಇನ್ನೂ ಉಳಿದ 14 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

  • ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 250 ಕೆ.ಜಿ.ಗಾಂಜಾ ವಶಕ್ಕೆ

    ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 250 ಕೆ.ಜಿ.ಗಾಂಜಾ ವಶಕ್ಕೆ

    ಬೆಂಗಳೂರು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದು, ಆತನಿಂದ 250 ಕೆಜೆ ಗಾಂಜಾ ವಶಕ್ಕೆ ಪಡೆದಿದ್ದಾರೆ.

    ಆರೋಪಿಯನ್ನು ಮಧುರೈ ಮೂಲದ ಕುಮಾರ್ ಎಂದು ಗುರುತಿಸಲಾಗಿದ್ದು, ಆರೋಪಿ ಜೊತೆಗಿದ್ದ ಮತ್ತೊರ್ವ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ.

    ಆರೋಪಿ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 125 ಪ್ಯಾಕೆಟ್ ನಲ್ಲಿದ್ದ 250 ಕೆ.ಜಿ. ಗಾಂಜಾ ಹಾಗೂ ಆಂಧ್ರ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ನಂಬರ್ ಪ್ಲೇಟ್ ವಶಕ್ಕೆ ಪಡೆದಿದ್ದಾರೆ. ಆರೋಪಿ ಯಾವ ರಾಜ್ಯ ಪ್ರವೇಶಿಸುತ್ತಾನೋ ಆಗೆಲ್ಲ ಆಯಾ ರಾಜ್ಯದ ನಂಬರ್ ಪ್ಲೇಟ್‍ನ್ನು ಬದಲಿಸಿ ಕಾರಿಗೆ ಅಳವಡಿಸುತ್ತಿದ್ದ ಎನ್ನುವ ವಿಚಾರ ತಿಳಿದು ಬಂದಿದೆ.

  • ಗಾಂಜಾ ಬೆಳೆಯ ಮೊರೆ ಹೋದ ಹನೂರು ಕ್ಷೇತ್ರದ ರೈತರು!

    ಗಾಂಜಾ ಬೆಳೆಯ ಮೊರೆ ಹೋದ ಹನೂರು ಕ್ಷೇತ್ರದ ರೈತರು!

    ಚಾಮರಾಜನಗರ: ಸರ್ಕಾರ ಮತ್ತು ಶಾಸಕರ ನಿರ್ಲಕ್ಷ್ಯದಿಂದಾಗಿ ಚಾಮರಾಜನಗರದ ಹನೂರು ಕ್ಷೇತ್ರದ ಕೆಲ ರೈತರು ಗಾಂಜಾ ಬೆಳೆ ಮೊರೆ ಹೋಗಿದ್ದಾರೆ.

    ಈ ಕ್ಷೇತ್ರ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಸರಿಯಾದ ನೀರಾವರಿ ಇಲ್ಲ. ಒಂದು ವೇಳೆ ರೈತರು ಕಷ್ಟಪಟ್ಟು ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈ ಕ್ಷೇತ್ರದ ರೈತರು ದಾರಿ ಕಾಣದ ಗಾಂಜಾ ಬೆಳೆದು ಹಣ ಸಂಪಾದನೆಗೆ ಮುಂದಾಗಿದ್ದಾರೆ.

    ಇಲ್ಲಿ ಬೆಳೆದ ಗಾಂಜಾ ಬೆಳೆಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆಯಿದ್ದು, ಈ ಭಾಗದ ಗಾಂಜಾ ಸೊಪ್ಪಿಗೆ ದೊಡ್ಡ ಬೆಟ್ಟದ ಸೊಪ್ಪು ಎಂಬ ಕೋಡ್ ವರ್ಡ್ ಕೂಡ ಇದೆ. ಅರಿಶಿಣ, ಟೊಮೊಟೊ, ಜೋಳ ಸೇರಿದಂತೆ ಇನ್ನಿತರ ಬೆಳೆಗಳ ಮಧ್ಯ ಗಾಂಜಾ ಬೆಳೆಯಲಾಗುತ್ತಿದೆ. 2 ತಿಂಗಳ ಅವಧಿಯಲ್ಲೇ ಹನೂರು ಭಾಗದಲ್ಲಿ 42 ಗಾಂಜಾ ಬೆಳೆ ಪ್ರಕರಣಗಳು ಬೆಳಕಿಗೆ ಬಂದಿವೆ. ಕ್ಷೇತ್ರ ಅಭಿವೃದ್ಧಿಯಾಗದೇ ಇರೋದು ಇದಕ್ಕೆ ಮೊದಲ ಕಾರಣವಾದ್ರೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರೋದು 2ನೇ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv