Tag: Marigold Flower

  • Kolar| ಚೆಂಡು ಹೂವು ಬೆಲೆ ಕುಸಿತ – ರಸ್ತೆಬದಿ ಸುರಿದು ರೈತ ಆಕ್ರೋಶ

    Kolar| ಚೆಂಡು ಹೂವು ಬೆಲೆ ಕುಸಿತ – ರಸ್ತೆಬದಿ ಸುರಿದು ರೈತ ಆಕ್ರೋಶ

    – ಕೆಜಿಗೆ 10 ರೂ.ನಂತೆ ಕೇಳುತ್ತಿರುವ ವ್ಯಾಪಾರಿಗಳು

    ಕೋಲಾರ: ಸಾಲು ಸಾಲು ಹಬ್ಬಗಳು ಮುಗಿದ ಬಳಿಕ ಚೆಂಡು ಹೂವಿನ (Marigold Flower) ಬೆಲೆ ತೀವ್ರ ಕುಸಿತವಾಗಿದೆ. ಈ ಹಿನ್ನೆಲೆ ರೈತರೊಬ್ಬರು ತಾವು ಬೆಳೆದ ಹೂವನ್ನು ರಸ್ತೆಬದಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ನೆರ್ನಹಳ್ಳಿಯ ನಾರಾಯಣಪ್ಪ ಎಂಬ ರೈತ ದೇವರ ಪಾದದ ಬಳಿ ಇರಬೇಕಾದ ಹೂವನ್ನು ರಸ್ತೆಯಲ್ಲಿ ಚೆಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಕೆಜಿಗೆ 10 ರೂ.ನಂತೆ ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಇಲ್ಲದೆ ಹೂವಿನ ಬೆಳೆಗಾರರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸಾವು – ಬಿಮ್ಸ್‌ ಮುಂದೆ ಸಂಬಂಧಿಕರ ಪ್ರತಿಭಟನೆ

    ನಾರಾಯಣಪ್ಪ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಎಕರೆಗೆ 50 ಸಾವಿರದಂತೆ ಖರ್ಚು ಮಾಡಿ ಚೆಂಡು ಹೂವು ಬೆಳೆದಿದ್ದರು. ಆದರೆ ಚೆಂಡು ಹೂವು ಬೆಲೆ ಕುಸಿತ ಕಂಡ ಹಿನ್ನೆಲೆ ಕೋಲಾರ ಮುಖ್ಯರಸ್ತೆ ಬದಿಯಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

  • ಬೆಲೆ ಕುಸಿತದಿಂದ ಕಂಗೆಟ್ಟು ಚೆಂಡು ಹೂ ತೋಟ ನಾಶ ಮಾಡಿದ ರೈತ

    ಬೆಲೆ ಕುಸಿತದಿಂದ ಕಂಗೆಟ್ಟು ಚೆಂಡು ಹೂ ತೋಟ ನಾಶ ಮಾಡಿದ ರೈತ

    ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಚೆಂಡು ಹೂ ಪ್ರತಿ ಕೆ.ಜಿಗೆ 5 ರಿಂದ 10 ರೂಪಾಯಿ ಗೆ ಬಿಕರಿಯಾಗುತ್ತಿದ್ದು, ಇದರಿಂದ ಬೇಸತ್ತ ರೈತ ಚೆಂಡು ಹೂವಿನ ತೋಟವನ್ನೇ ನಾಶ ಮಾಡಿದ್ದಾನೆ.

    ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇನಹಳ್ಳಿ ಗ್ರಾಮದ ರೈತ ರವಿಕುಮಾರ್ ಅವರು 4 ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆದಿದ್ದರು. ಹೂಗಳು ಸಹ ಬಹಳ ಸೊಂಪಾಗಿ ಬೆಳೆದಿದ್ದವು. ಆದರೆ ಹೂ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಪ್ರತಿ ಕೆ.ಜಿಗೆ 05 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ರೋಸಿಹೋದ ರೈತ ರವಿಕುಮಾರ್ ಅವರು ಟ್ರ್ಯಾಕ್ಟರ್ ಮೂಲಕ ಇಡೀ ತೋಟವನ್ನು ಉಳುಮೆ ಮಾಡಿ ಸಂಪೂರ್ಣ ನಾಶ ಮಾಡಿದ್ದಾರೆ.

    ಒಟ್ಟು 4 ಎಕೆರೆಗೆ 4 ಲಕ್ಷ ಬಂಡವಾಳ ಹಾಕಿ ಚೆಂಡು ಹೂವು ಬೆಳೆದಿದ್ದು, ಕೇವಲ 40 ರಿಂದ 50 ಸಾವಿರ ಆದಾಯ ಸಿಕ್ಕಿದೆ. ಇದರಿಂದ ಹೂವು ಕಟಾವು ಮಾಡುವ ಕೂಲಿ ಕಾರ್ಮಿಕರಿಗೆ ನೀಡುವಷ್ಟು ಸಹ ಹಣ ಸಿಗಲ್ಲ. ಅಲ್ಲದೆ ಮುಂದೆ ಬೆಳೆ ಕಾಪಾಡಿಕೊಳ್ಳಲು ಕ್ರೀಮಿನಾಶಕಗಳನ್ನು ಸಿಂಪಡಿಸಲು ಹಣ ಹೆಚ್ಚು ಬೇಕಾಗುತ್ತದೆ. ಹೀಗಾಗಿ ತೋಟ ನಾಶ ಮಾಡುತ್ತಿರುವುದಾಗಿ ರವಿಕುಮಾರ್ ತಿಳಿಸಿದ್ದಾರೆ.