Tag: maria vorontsova

  • ಉಕ್ರೇನ್‌ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್‌ ಮಗಳ ಮದುವೆ!

    ಉಕ್ರೇನ್‌ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್‌ ಮಗಳ ಮದುವೆ!

    ಮಾಸ್ಕೋ: ಉಕ್ರೇನ್‌ ವಿರುದ್ಧದ ಯುದ್ಧದ ದುಷ್ಪರಿಣಾಮ ರಷ್ಯಾದ ಜನತೆ ಮೇಲಷ್ಟೇ ಅಲ್ಲ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ಕುಟುಂಬಕ್ಕೂ ತಟ್ಟಿದೆ. ಉಕ್ರೇನ್‌ ವಿಚಾರವಾಗಿ ಪುಟಿನ್‌ ತೆಗೆದುಕೊಂಡ ನಿರ್ಧಾರವು ಈಗ ಅವರ ಮಗಳ ಮದುವೆಗೇ ಕಂಟಕ ಪ್ರಾಯವಾಗಿ ಪರಿಣಮಿಸಿದೆ.

    ಹೌದು, ಉಕ್ರೇನ್‌ ಮೇಲೆ ಯುದ್ಧ ಸಾರಿದ್ದಕ್ಕಾಗಿ ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಗೆ ಹಲವು ನಿರ್ಬಂಧಗಳನ್ನು ವಿಧಿಸಿವೆ. ಪರಿಣಾಮವಾಗಿ ಪುಟಿನ್‌ ಅವರ ಹಿರಿಯ ಮಗಳ ಎರಡು ಮಹತ್ವಾಕಾಂಕ್ಷೆಯ ಕನಸು ನುಚ್ಚು ನೂರಾಗಿದೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ಡಾ. ಮರಿಯಾ ವೊರೊಂಟ್ಸೊವಾ (36) ಅವರೇ ವ್ಲಾಡಿಮಿರ್‌ ಪುಟಿನ್ ಮತ್ತು ಲ್ಯುಡ್ಮಿಲಾ ದಂಪತಿ ಹಿರಿಯ ಪುತ್ರಿ. ಮರಿಯಾ ಅವರ ಮದುವೆ ಮುರಿದು ಬಿದ್ದಿದೆ. ಇದರ ಜೊತೆಗೆ ಮರಿಯಾ ಅವರ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ಬಹುದೊಡ್ಡ ಕನಸು ಕನಸಾಗಿಯೇ ಉಳಿದಿದೆ.

    ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ದೊಡ್ಡ ಯೋಜನೆ ಹೊಂದಿದ್ದೇನೆ. ಯುರೋಪ್‌ ಮತ್ತು ಪರ್ಷಿಯನ್ ಗಲ್ಫ್ ದೇಶಗಳಿಂದ ಶ್ರೀಮಂತ ಶೇಖ್‌ ರೋಗಿಗಳನ್ನು ಆಕರ್ಷಿಸುವ ಯೋಜನೆ ಇದಾಗಿದೆ ಎಂದು ಮಾಧ್ಯಮದೊಂದಿಗೆ ಈ ಹಿಂದೆ ಮರಿಯಾ ಹೇಳಿಕೊಂಡಿದ್ದರು. ಆದರೆ ಉಕ್ರೇನ್‌ ಮೇಲಿನ ಯುದ್ಧದ ನಂತರ ರಷ್ಯಾಗೆ ಯೂರೋಪಿಯನ್ನರಾಗಲಿ ಅಥವಾ ಶೇಖ್‌ಗಳಾಗಲಿ ಯಾರು ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ಡಚ್‌ ಉದ್ಯಮಿ ಜೋರಿಟ್‌ ಫಾಸೆನ್‌ ಅವರೊಂದಿಗಿನ ಮರಿಯಾ ವೊರೊಂಟ್ಸೊವಾ ಸಂಬಂಧವೂ ಮುರಿದು ಬಿದ್ದಿದೆ. ಯುದ್ಧ ಆರಂಭವಾದ ನಂತರ ಈ ಜೋಡಿ ಬೇರ್ಪಟ್ಟಿದೆ. ಇವರು ಮಕ್ಕಳನ್ನೂ ಹೊಂದಿದ್ದಾರೆ. ಆದರೆ ಡಚ್‌ ಉದ್ಯಮಿ ಫಾಸೆನ್‌ ತಾನು ಪುಟಿನ್‌ ಅವರ ಅಳಿಯ ಅಲ್ಲ ಎಂದು ಹೇಳಿಕೊಂಡಿದ್ದಾರೆ.

    2017ರಲ್ಲಿ ಸಂದರ್ಶನವೊಂದರಲ್ಲಿ ಪುಟಿನ್‌, ನಾನು ತಾತಾ ಆಗಿದ್ದೇನೆ. ಮೊಮ್ಮಕ್ಕಳೊಂದಿಗೆ ಆಟ ಆಡಿರುವುದು ತುಂಬಾ ಕಡಿಮೆ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಪುಟಿನ್‌ ಮಗಳು ವೊರೊಂಟ್ಸೊವಾ ಪ್ರಖ್ಯಾತ ವೈದ್ಯೆ. ಮಕ್ಕಳಲ್ಲಿ ಕಂಡುಬರುವ ಅಪರೂಪದ ಆನುವಂಶಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ತುಂಬಾ ಪ್ರಖ್ಯಾತಿ ಪಡೆದಿದ್ದಾರೆ. ರಷ್ಯಾ ಆರೋಗ್ಯ ಸಚಿವಾಲಯದ ಎಂಡೊಕ್ರಿನಾಲಜಿ ನ್ಯಾಷನಲ್‌ ಮೆಡಿಕಲ್‌ ರಿಸರ್ಚ್‌ ಸೆಂಟರ್‌ನಲ್ಲಿ ವೈದ್ಯಕೀಯ ಸಂಶೋಧನೆಯ ಮುಖ್ಯಸ್ಥರಾಗಿದ್ದಾರೆ.

    ವೊರೊಂಟ್ಸೊವಾ ಅವರು 1986ರಲ್ಲಿ ಜನಿಸಿದರು. ಪುಟಿನ್‌ ಅವರು ಕೆಜಿಬಿ ಗೂಡಾಚಾರರಾಗಿದ್ದಾಗ ಇವರ ಜನನವಾಯಿತು. ಪುಟಿನ್‌ ಅವರಿಗೆ ಕತ್ರಿನಾ ಎಂಬ ಮತ್ತೊಬ್ಬರು ಮಗಳಿದ್ದಾರೆ. ವೊರೊಂಟ್ಸೊವಾ ಜನಿಸಿದ ಒಂದು ವರ್ಷದ ನಂತರ ಈಕೆ ಜರ್ಮನಿಯಲ್ಲಿ ಜನಿಸಿದರು. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

    ಪುಟಿನ್ ತನ್ನ ಪ್ರೇಯಸಿ ಅಲೀನಾ ಕಬೇವಾ ಅವರೊಂದಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಅಲೀನಾ ಈಗ ಸ್ವಿಟ್ಜರ್ಲೆಂಡ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಸಹ ವರದಿಯಾಗಿದೆ.