Tag: margaret alva

  • ಉಪರಾಷ್ಟ್ರಪತಿ ಚುನಾವಣೆ – ಮಾರ್ಗರೇಟ್ ಆಳ್ವಾಗೆ TRS ಬೆಂಬಲ

    ಉಪರಾಷ್ಟ್ರಪತಿ ಚುನಾವಣೆ – ಮಾರ್ಗರೇಟ್ ಆಳ್ವಾಗೆ TRS ಬೆಂಬಲ

    ಹೈದರಾಬಾದ್: ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಬೆಂಬಲಿಸುವುದಾಗಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಶುಕ್ರವಾರ ತಿಳಿಸಿದೆ.

    ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಸಂಯುಕ್ತ ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಅದರಂತೆಯೇ ಟಿಆರ್‌ಎಸ್ ಸಂಸದರಿಗೆ ಮತದಾನ ಮಾಡುವಂತೆ ಸೂಚಿಸಲಾಗಿದೆ ಎಂದು ಟಿಆರ್‌ಎಸ್‌ನ ಸಂಸದೀಯ ನಾಯಕ ಕೇಶವ್ ರಾವ್ ಸಂಸತ್ತಿನ ಹೊರಗೆ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ರಾಷ್ಟ್ರಪತಿ ಚುನಾವಣೆಯಲ್ಲೂ ಟಿಆರ್‌ಎಸ್ ವಿರೋಧ ಪಕ್ಷದ ಪರವಾಗಿ ನಿಂತು ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿತ್ತು. ಇಂದು ಸಂಜೆ ಮಾರ್ಗರೇಟ್ ಆಳ್ವಾ ಟಿಆರ್‌ಎಸ್ ಸಂಸದರನ್ನು ಭೇಟಿ ಮಾಡಲಿದ್ದಾರೆ ಎಂದು ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಸತತ 3ನೇ ಬಾರಿ ಆರ್‌ಬಿಐ ರೆಪೊ ದರ ಹೆಚ್ಚಳ

    ಆಳ್ವ ಅವರು ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ವಿರುದ್ಧ ಪ್ರತಿಪಕ್ಷಗಳಿಂದ ಉಪರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾನೆ ದೊಡ್ಡಣ್ಣ – ಮಾರ್ಗರೇಟ್ ಆಳ್ವ ಟ್ಟೀಟ್ ಮಾಡಿ ಆರೋಪ

    ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾನೆ ದೊಡ್ಡಣ್ಣ – ಮಾರ್ಗರೇಟ್ ಆಳ್ವ ಟ್ಟೀಟ್ ಮಾಡಿ ಆರೋಪ

    ಕಾರವಾರ: ಉಪರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಅವರು ಕೇಂದ್ರ ಬಿಜೆಪಿ ಸರ್ಕಾರ ತನ್ನ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.

    ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ಟೀಟ್ ಮಾಡಿರುವ ಅವರು, ದೊಡ್ಡಣ್ಣನಿಗೆ ಭಯ ಹಾಗಾಗಿ ರಾಜಕಾರಣಿಗಳ ಫೋನ್ ಟ್ಯಾಪ್ ಮಾಡುತ್ತಿದ್ದಾನೆ. ಆದರೆ ದೊಡ್ಡಣ್ಣನ ಈ ಭಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್ 

    ನಾನು ಬಿಜೆಪಿಯಲ್ಲಿ ಇರುವ ನನ್ನ ಸ್ನೇಹಿತರು, ಆಪ್ತರಲ್ಲಿ ಫೋನ್ ಮೂಲಕ ಮಾತನಾಡಿದೆ. ಅದಾದ ಬಳಿಕ ನನ್ನ ಫೋನ್ ಕರೆಗಳೆಲ್ಲಾ ಡೈವರ್ಟ್‌ ಆಗುತ್ತಿದೆ. ಯಾವುದೇ ಕರೆ ಮಾಡಲು, ಸ್ವೀಕರಿಸಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಇದಲ್ಲದೇ ನನ್ನ ಫೋನ್ ರೀ-ಕನೆಕ್ಟ್ ಮಾಡಿಕೊಡಿ. ಖಂಡಿತವಾಗಿಯೂ ಬಿಜೆಪಿ, ಟಿಎಂಸಿ ಮತ್ತು ಬಿಜೆಡಿಯ ಯಾವುದೇ ಸಂಸದರು, ಶಾಸಕರಿಗೆ ಕರೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ 

    ತಮ್ಮ ಟ್ಟಿಟ್ಟರ್‌ನಲ್ಲಿ ಬಿ.ಎಸ್.ಎನ್.ಎಲ್. ಹಾಗೂ ಎಮ್.ಟಿ.ಎನ್.ಎಲ್‍ಗಳನ್ನು ಟ್ಯಾಗ್ ಮಾಡಿ ಫೋಸ್ಟ್ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ನವದೆಹಲಿ: ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಲ್ಲಗೆಳೆದಿದ್ದಾರೆ.

    ಮಾರ್ಗರೇಟ್ ಆಳ್ವಾ ಅವರ ಫೋನ್ ಅನ್ನು ಯಾರು ಏಕೆ ಟ್ಯಾಪ್ ಮಾಡಬೇಕು? ಉಪರಾಷ್ಟ್ರಪತಿ ಚುನಾವಣೆಯಲ್ಲಿ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಆಳ್ವಾ ಅವರ ಫೋನ್ ಅನ್ನು ಟ್ಯಾಪ್ ಮಾಡುವ ಅಗತ್ಯತೆ ನಮಗಿಲ್ಲ. ಅಂಥಹ ಕೀಳು ಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ತಾಕತ್ತಿದ್ದರೆ ನನ್ನ ವಿಚಾರವನ್ನ ಯಾವುದೇ ನ್ಯಾಯಾಲಯಕ್ಕೆ ಹೋಗಿ ಗೆದ್ದು ತೋರಿಸಲಿ: ಈಶ್ವರಪ್ಪ ಸವಾಲ್

    ಕಾಂಗ್ರೆಸ್‍ನಿಂದ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಬಳಿಕ ಮಾರ್ಗರೇಟ್ ಆಳ್ವಾ ಅವರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಇಂದು ನನ್ನ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ಆಳ್ವಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇಂದು ಬಿಜೆಪಿಯ ಕೆಲವು ಸ್ನೇಹಿತರೊಂದಿಗೆ ಮಾತನಾಡಿದೆ. ಆ ನಂತರ ನನ್ನ ಮೊಬೈಲ್‍ಗೆ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗುತ್ತಿದೆ ಎಂದು ಮಾರ್ಗರೇಟ್ ಆಳ್ವಾ ಅವರು ಆರೋಪಿಸಿದ್ದರು. ನನ್ನ ಫೋನ್ ಟ್ಯಾಪ್ ಆಗಿದ್ದು, ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಫೋನ್ ಸರಿಮಾಡಿದರೆ, ಇಂದು ರಾತ್ರಿ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯಿಂದ ಯಾವುದೇ ಸಂಸದರನ್ನು ಕರೆಯುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಬಿಜೆಪಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದರು.

    ಆಳ್ವಾ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಪ್ರಹ್ಲಾದ್ ಜೋಶಿ ಅವರು, ಇದೊಂದು ಬಾಲಿಶ ಹೇಳಿಕೆ ಅಂತಾ ಲೇವಡಿ ಮಾಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಅದು ಎಲ್ಲರಿಗೂ ಈಗಾಗಲೇ ಗೊತ್ತಿರುವಂತದ್ದು. ಹೀಗಿರುವಾಗ ಯಾರಾದರೂ ಆಳ್ವಾ ಅವರ ಫೋನ್ ಅನ್ನು ಏಕೆ ಟ್ಯಾಪ್ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಮಾರ್ಗರೇಟ್ ಆಳ್ವಾ ಅವರು ಹಿರಿಯ ನಾಯಕಿ. ಈ ರೀತಿಯ ಹೇಳಿಕೆಗಳು ಚೈಲ್ಡಿಶ್ ಮನೋಭಾವವನ್ನು ತೋರಿಸುತ್ತವೆ. ಇಂಥಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಆರೋಪಗಳನ್ನು ಮಾಡುವಾಗ ಕನಿಷ್ಠ ಆಲೋಚನೆ ಮಾಡಿ ಆರೋಪಿಸಲಿ. ಹುರುಳಿಲ್ಲದ, ಆಧಾರವಿಲ್ಲದ ಆರೋಪಗಳಿಗೆ ಅರ್ಥವಿಲ್ಲ ಎಂದು ಆಳ್ವಾ ಅವರಿಗೆ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವ ಆಯ್ಕೆ

    ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವ ಆಯ್ಕೆ

    ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕರ್ನಾಟಕದ ಮಾರ್ಗರೇಟ್ ಆಳ್ವ (80) ಹೆಸರನ್ನು ಪ್ರಸ್ತಾಪಿಸಲಾಗಿದೆ.

    ಎನ್‍ಡಿಎ ನಿನ್ನೆ ಜಗದೀಪ್ ಧನಕರ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಒಂದು ದಿನ ಬಳಿಕ ವಿಪಕ್ಷಗಳೂ ಕೂಡ ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಮಾರ್ಗರೇಟ್ ಆಳ್ವ ವಿಪಕ್ಷಗಳ ಒಮ್ಮತದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಪ್ರತಿಪಕ್ಷಗಳ ಸಭೆಯ ಬಳಿಕ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಮಾರ್ಗರೇಟ್ ಆಳ್ವ ಹೆಸರನ್ನು ಘೋಷಣೆ ಮಾಡಿದರು. ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ – ಎನ್‍ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಆಯ್ಕೆ

    ದೆಹಲಿಯಲ್ಲಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಿತು. ಈ ಸಭೆಯ ಬಳಿಕ ಮಾರ್ಗರೇಟ್ ಆಳ್ವ ಹೆಸರನ್ನು ಫೈನಲ್‍ಗೊಳಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ, ಶಿವಸೇನೆ ಮುಖಂಡ ಸಂಜಯ್ ರಾವತ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್‌ ಹಾಕಿದ ಬಿಜೆಪಿ

    ಮೂಲತಃ ಮಂಗಳೂರಿವರಾದ ಮಾರ್ಗರೇಟ್ ಆಳ್ವ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಬಳಿಕ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲೆಯಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, ಗೋವಾ, ಗುಜರಾತ್, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲೆಯಾಗಿದ್ದರು. ಕಾಂಗ್ರೆಸ್‍ನ ಹಿರಿಯ ನಾಯಕಿಯಾಗಿರುವ ಆಳ್ವಾ ರಾಜ್ಯ ಸಭೆ, ಲೋಕ ಸಭಾ ಸದಸ್ಯೆಯಾಗಿ, ಕೇಂದ್ರ ಸಚಿವೆಯಾಗಿ ಕೆಲಸ ಮಾಡಿದ ಸುದೀರ್ಘ ರಾಜಕೀಯ ಮತ್ತು ಆಡಳಿತ ಅನುಭವ ಹೊಂದಿದ್ದಾರೆ.

    ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನಾಂಕವಾಗಿದ್ದು, ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜುಲೈ 22 ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಅನರ್ಹರು ಸಿದ್ದರಾಮಯ್ಯ ಕರೆದ ಕೂಡ್ಲೇ ಕಾಂಗ್ರೆಸ್ಸಿಗೆ ವಾಪಸ್

    ಮಾಜಿ ಅನರ್ಹರು ಸಿದ್ದರಾಮಯ್ಯ ಕರೆದ ಕೂಡ್ಲೇ ಕಾಂಗ್ರೆಸ್ಸಿಗೆ ವಾಪಸ್

    ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅನರ್ಹರಾಗಿದ್ದ ಶಾಸಕರುಗಳು ಈಗ ಚುನಾವಣೆ ಗೆದ್ದು ಸಚಿವರಾಗಿದ್ದಾರೆ. ಆದರೆ ಆ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ಕರೆದ ಕೂಡಲೇ ಕಾಂಗ್ರೆಸ್ಸಿಗೆ ವಾಪಸ್ ಬರ್ತಾರೆ ಅಂತ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ.

    ಮಾಜಿ ಕೇಂದ್ರ ಸಚಿವೆ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಈ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ವಿಜಯ ನಗರದ ಕಾಸಿಯ ಭವನದಲ್ಲಿ ಸಿಎಎ ಹಾಗೂ ಎನ್ ಆರ್‍ಸಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಮಾರ್ಗರೇಟ್ ಆಳ್ವ, ರಾಜ್ಯದಲ್ಲಿ ಶಾಸಕರ ಬೈ ಆ್ಯಂಡ್ ಸೇಲ್ ಆಗಿ ಬಿಜೆಪಿ ಸರ್ಕಾರ ರಚನೆ ಆಯ್ತು. ಸಿದ್ದರಾಮಯ್ಯಗೆ ಇದು ಚೆನ್ನಾಗಿ ಗೊತ್ತು. ದುಡ್ಡು ತಗೊಂಡು ಹೋದವರು ಎಷ್ಟು ದಿನ ಅಲ್ಲಿ ಇರ್ತಾರೆ. ಸಿದ್ದರಾಮಯ್ಯ ಯಾವಾಗ ಕರಿತರೋ ಅವಾಗ ವಾಪಸ್ ಬಂದೇ ಬರುತ್ತಾರೆ ಎಂದಿದ್ದಾರೆ.

    ಆ ಮೂಲಕ ಆಪರೇಷನ್ ಕಮಲದ ಬಗ್ಗೆ ಸಿದ್ದರಾಮಯ್ಯಗೆ ಸಂಪೂರ್ಣ ಮಾಹಿತಿ ಇತ್ತು ಅನ್ನೋದರ ಜೊತೆಗೆ ಶಾಸಕರು ಸಿದ್ದರಾಮಯ್ಯ ಕರೆದರೆ ಯಾವಾಗ ಬೇಕಾದರೂ ವಾಪಸ್ ಬರುತ್ತಾರೆ ಎಂದಿದ್ದಾರೆ. ಆಳ್ವ ಹೇಳಿಕೆಗೆ ಸ್ವತಹ ಕಾಂಗ್ರೆಸ್ ಕಾರ್ಯಕರ್ತೆಯರೆ ಚಪ್ಪಾಳೆ ಹೊಡೆದು ನಕ್ಕ ಘಟನೆಯು ನಡೆಯಿತು.

  • ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‍ನ ದೊಡ್ಡ ಆಸ್ತಿ: ಮಾರ್ಗರೆಟ್ ಆಳ್ವಾ

    ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‍ನ ದೊಡ್ಡ ಆಸ್ತಿ: ಮಾರ್ಗರೆಟ್ ಆಳ್ವಾ

    ಮಂಗಳೂರು: ಕಾಂಗ್ರೆಸ್‍ಗೆ ಪ್ರಿಯಾಂಕಾ ಗಾಂಧಿ ದೊಡ್ಡ ಆಸ್ತಿ. ಅವರನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳುತ್ತಾರೆ. ಆಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವುದಕ್ಕಿಂತ ಫುಲ್ ಟೈಮ್ ಇದ್ದು ಕೆಲಸ ಮಾಡಿದರೆ ಕಾಂಗ್ರೆಸಿಗೆ ಉತ್ತಮ ಅನ್ನೋದು ನನ್ನ ಭಾವನೆ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ ಹೇಳಿದರು.

    ಎಸ್‍ಎಂಕೆ ಬಗ್ಗೆ ವ್ಯಂಗ್ಯ: ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗಿರುವ ಎಸ್‍ಎಂ ಕೃಷ್ಣ ಅವರು ರಾಷ್ಟ್ರಪತಿಯಾಗಲು ಸೂಕ್ತ ವ್ಯಕ್ತಿ ಅಂತ ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಎಲ್ಲವನ್ನೂ ಅನುಭವಿಸಿದವರು ಎಸ್‍ಎಂ ಕೃಷ್ಣ. ಈಗ ಬಿಜೆಪಿಗೆ ಹೋಗಿ ರಾಷ್ಟ್ರಪತಿ ಸ್ಥಾನ ದೊರಕಬಹುದು. ಕಾಂಗ್ರೆಸಿನಲ್ಲಿದ್ದು ರಾಷ್ಟ್ರಪತಿ ಸ್ಥಾನ ಮಾತ್ರ ಅವರಿಗೆ ಸಿಕ್ಕಿರಲಿಲ್ಲ ಎಂತಾ ಕುಹಕವಾಡಿದ್ರು. ಕೃಷ್ಣ ಅವರ ಬಗ್ಗೆ ತುಂಬಾ ಗೌರವ ಇದೆ. ಆದರೆ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಬಗ್ಗೆ ಹೀಯಾಳಿಸಿ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ನನ್ನ ಸಹಮತ ಇಲ್ಲ ಎಂದು ಹೇಳಿದರು.

    ಬಿಜೆಪಿಗೂ ಸ್ಥಾನ ಸಿಗದ ರಾಜ್ಯಗಳಿವೆ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ದೊಡ್ಡ ವಿಚಾರವಲ್ಲ, ಕೆಲವೊಂದು ಸಲ ಈ ರೀತಿ ಆಗುತ್ತದೆ. ಬಿಜೆಪಿಗೂ ಒಂದೇ ಒಂದು ಸ್ಥಾನ ಸಿಗದ ರಾಜ್ಯಗಳೂ ಇದೆ ಅಂತಾ ಮಾರ್ಗರೆಟ್ ಆಳ್ವ ಹೇಳಿದ್ರು.