Tag: Marco Rubio

  • ಪಾಕ್‌ ಜೊತೆಗಿನ ಸಂಬಂಧ ಭಾರತದ ಸ್ನೇಹಕ್ಕೆ ಧಕ್ಕೆ ತರುವುದಿಲ್ಲ – ಮಾರ್ಕೊ ರೂಬಿಯೊ

    ಪಾಕ್‌ ಜೊತೆಗಿನ ಸಂಬಂಧ ಭಾರತದ ಸ್ನೇಹಕ್ಕೆ ಧಕ್ಕೆ ತರುವುದಿಲ್ಲ – ಮಾರ್ಕೊ ರೂಬಿಯೊ

    ವಾಷಿಂಗ್ಟನ್‌: ಪಾಕಿಸ್ತಾನದ (Pakistan) ಜೊತೆಗಿನ ಸಂಬಂಧ ಬಲಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆದ್ರೆ ಇದು ಭಾರತದೊಂದಿಗಿನ ಸ್ನೇಹಕ್ಕೆ, ಐತಿಹಾಸಿಕ ಸಂಬಂಧಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ.

    ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭೇಟಿಯ ನಂತರ ಈ ಬೆಳವಣಿಗೆ ನಡೆದಿದೆ. ಉಭಯ ದೇಶಗಳ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದನ್ನು ಭಾರತ ತಿರಸ್ಕರಿಸಿದ್ದರೆ, ಪಾಕಿಸ್ತಾನವು ಸಂಘರ್ಷ ಕೊನೆಗೊಳಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷರಿಗೆ ಮಣೆ ಹಾಕಿದೆ. ಇದನ್ನೂ ಓದಿ: ಅರ್ಧಗಂಟೆ ಅಂತರದಲ್ಲಿ 2 ದುರಂತ – ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್, ಫೈಟರ್ ಜೆಟ್ ಪತನ

    ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಲೇಷ್ಯಾದ ಕ್ವಾಲಾಲಂಪುರಕ್ಕೆ ತೆರಳುವ ಮುನ್ನ ಮಾತನಾಡಿದ ರುಬಿಯೋ, ಪಾಕಿಸ್ತಾನ ಜೊತೆಗಿನ ಸಂಬಂಧ ಬಲಪಡಿಸುವಿಕೆಯೂ ಭಾರತದ ಜೊತೆಗಿನ ಐತಿಹಾಸಿಕ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ. ಆದ್ರೆ ಅಮೆರಿಕಕ್ಕೆ ಎಲ್ಲ ದೇಶದೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದುವುದು ಅನಿವಾರ್ಯ. ಭಾರತ ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ.

    ರಕ್ಷಣಾ ಸಂಬಂಧ ವೃದ್ಧಿಗಾಗಿ ನಾವು ಪಾಕಿಸ್ತಾನದ ಜೊತೆ ಸಂಬಂಧ ಬೆಳೆಸುತ್ತಿದ್ದೇವೆ. ಭಾರತೀಯರು ರಾಜತಾಂತ್ರಿಕತೆ ಮತ್ತು ಅಂತಹ ವಿಷಯಗಳಲ್ಲಿ ಬಹಳ ಪ್ರಬುದ್ಧರಾಗಿದ್ದಾರೆ. ನಾವು ಸಂಬಂಧ ಹೊಂದಿರದಂತಹ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ಬಾಂಧವ್ಯ ಈಗಾಗಲೇ ಹೊಂದಿದೆ. ಹೀಗಾಗಿ ಇವೆಲ್ಲ ಪ್ರಬುದ್ಧತೆಯಿಂದ ಕೂಡಿದ ವಿದೇಶಾಂಗ ನೀತಿಯ ಭಾಗ ಎಂದಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಭಾರತೀಯ ಮೂಲದ 20ರ ಯುವತಿ ಮೇಲೆ ಅತ್ಯಾಚಾರ

    ಪಾಕ್‌ ಜೊತೆಗೆ ಸ್ನೇಹ ಬೆಳೆಸಬೇಕು
    ಪಾಕಿಸ್ತಾನ ಜೊತೆಗಿನ ಪಾಲುದಾರಿಕೆ, ವ್ಯಾಪಾರ ಸಂಬಂಧ ಮತ್ತಷ್ಟು ಹೆಚ್ಚಿಸಲು ಅಮೆರಿಕ ಬಯಸುತ್ತದೆ. ಆದರೆ, ಇಲ್ಲಿಯವರೆಗೂ ಭಾರತದೊಂದಿಗೆ ಇರುವ ಐತಿಹಾಸಿಕ ಸಂಬಂಧಕ್ಕೆ ಧಕ್ಕೆಯನ್ನುಂಟು ಮಾಡಿಕೊಂಡು, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಳೆಸಲು ಇಷ್ಟಪಡುವುದಿಲ್ಲ ಅಂತಲೂ ರುಬಿಯೋ ಹೇಳಿದ್ದಾರೆ.

  • ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    – ಯುದ್ಧ ನಿಲ್ಲಿಸಿದ್ದು ನಾನೇ ನಾನೇ – ಟ್ರಂಪ್‌ ಅದೇ ರಾಗ

    ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ (India-Pakistan Situation) ಹಾಗೂ ವಿಶ್ವದಾದ್ಯಂತ ಉದ್ವಿಗ್ನತೆ ಇರುವ ಇತರ ತಾಣಗಳ ಮೇಲೆ ಅಮೆರಿಕ ಪ್ರತಿದಿನ ನಿಗಾ ಇಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಡುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ (Ceasefires) ಒಪ್ಪಂದಗಳು ದುರ್ಬಲವಾಗಿವೆ. ಅವುಗಳನ್ನ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಕದನ ವಿರಾಮ ಶೀಘ್ರದಲ್ಲೇ ಸ್ಥಗಿತಗೊಳ್ಳಬಹುದು ಎಂದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

    ಪ್ರತಿದಿನ ನಾವು ಭಾರತ-ಪಾಕಿಸ್ತಾನದ ನಡುವೆ ಏನಾಗುತ್ತಿದೆ? ಕಾಂಬೋಡಿಯಾ – ಥೈಲ್ಯಾಂಡ್‌ ನಡ್ವೆ ಏನಾಗುತ್ತಿದೆ? ಅನ್ನೋದರ ಮೇಲೆ ಕಣ್ಣಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ನೋಡಿದಾಗ ಭಾರತ-ಪಾಕ್‌ ಕದನ ವಿರಾಮ ಸ್ಥಗಿತವಾಗಬಹುದು ಅನ್ನಿಸಿರುವುದಾಗಿ ತಿಳಿಸಿದರು.

    ಟ್ರಂಪ್‌ ಹಾಡಿ ಹೊಗಳಿದ ರುಬಿಯೊ
    ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದು ಟ್ರಂಪ್‌ ಅಂತ ರೂಬಿಯೋ ಕೂಡ ಬೊಬ್ಬೆ ಹೊಡೆದಿದ್ದಾರೆ. ನಾವು ತುಂಬಾ ಅದೃಷ್ಟವಂತರು. ಶಾಂತಿ ಮತ್ತು ಶಾಂತಿ ಸಾಧನೆಯನ್ನೇ ತಮ್ಮ ಆಡಳಿತದ ಆದ್ಯತೆಯನ್ನಾಗಿ ಮಾಡಿಕೊಂಡ ಅಧ್ಯಕ್ಷರನ್ನ ಹೊಂದಿರುವುದಕ್ಕೆ ಕೃತಜ್ಞರಾಗಿರಬೇಕು ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ.

    ಒಂದು ದಿನದ ಹಿಂದೆಯಷ್ಟೆ ಟ್ರಂಪ್‌ ಮಾಧ್ಯಮದಲ್ಲಿ ಮಾತನಾಡುವಾಗ ಭಾರತ ಮತ್ತು ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಮತ್ತೆ ಹೇಳಿಕೊಂಡಿದ್ದರು. ಇದನ್ನೂ ಓದಿ: 2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?