Tag: marati

  • ತಾಯಿಗೆ 2ನೇ ಮದುವೆ ಮಾಡಿಸಿದ ಮರಾಠಿ ನಟ ಸಿದ್ಧಾರ್ಥ್ ಚಂದೇಕರ್

    ತಾಯಿಗೆ 2ನೇ ಮದುವೆ ಮಾಡಿಸಿದ ಮರಾಠಿ ನಟ ಸಿದ್ಧಾರ್ಥ್ ಚಂದೇಕರ್

    ತಿ ತೀರಿ ಹೋದ ಮೇಲೆ ಪತ್ನಿ 2ನೇ ಮದುವೆಯಾಗಬಾರದು ಎಂಬುದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ. ಆದರೆ ಇದೀಗ ತನ್ನ ತಾಯಿಗೆ ಮಗ ಮುಂದೆ ನಿಂತು 2ನೇ ಮದುವೆ ಮಾಡಿಸಿದ್ದಾರೆ. ಮರಾಠಿ ನಟ(Marathi Actor)  ಸಿದ್ಧಾರ್ಥ್ ಚಂದೇಕರ್ (Siddarth Chandekar) ತನ್ನ ತಾಯಿಗೆ ಮರು ಮದುವೆ ಮಾಡಿಸಿದ್ದಾರೆ. ಈ ಕುರಿತ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

    ನಟ ಸಿದ್ಧಾರ್ಥ್ ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ತಾಯಿಗೆ 2ನೇ ಮದುವೆ ಮಾಡಿಸಿ ಸಿದ್ದಾರ್ಥ್ ಆದರ್ಶವಾಗಿ ನಿಂತಿದ್ದಾರೆ. ನಿತಿನ್ ಎಂಬುವವರ ಜೊತೆ ಸಿದ್ಧಾರ್ಥ್ ತಾಯಿ, ಸೀಮಾ ಚಂದೇಕರ್ (Seema Chandekar) ಮದುವೆ ನಡೆದಿದೆ. ಈ ಬಗ್ಗೆ ಸಿದ್ದಾರ್ಥ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಬರೆದುಕೊಂಡಿದ್ದಾರೆ. ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಸೀಮಾ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

    ಅಮ್ಮ, ಹ್ಯಾಪಿ ಸೆಕೆಂಡ್ ಇನ್ನಿಂಗ್ಸ್. ನಿಮ್ಮ ಮಕ್ಕಳ ಜೊತೆ ನಿನ್ನು ಜೀವನ ಇನ್ನು ಬಾಕಿಯಿದೆ. ನಿನಗೆ ಸ್ವತಂತ್ರವಾದ ಸುಂದರ ಪ್ರಪಂಚ ಇದೆ. ಇವತ್ತಿನವರೆಗೆ ನಮಗಾಗಿ ಬಹಳ ತ್ಯಾಗ ಮಾಡಿದ್ದೀಯಾ. ಈಗ ನಿಮ್ಮ ಕುರಿತು, ನಿಮ್ಮ ಹೊಸ ಸಂಗಾತಿ ಬಗ್ಗೆ ಆಲೋಚಿಸಬೇಕಾದ ಸಮಯ ಬಂದಿದೆ. ಈ ವಿಷಯದಲ್ಲಿ ನಿಮ್ಮ ಮಕ್ಕಳು ಯಾವಾಗಲೂ ನಿಮೊಟ್ಟಿಗೆ ಇರುತ್ತೇವೆ. ನೀವು ನನ್ನ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದಿರಿ. ಈಗ ನಾನು ಅದನ್ನೇ ಮಾಡಿದ್ದೇನೆ. ನನ್ನ ಜೀವನದಲ್ಲಿ ಹೆಚ್ಚು ಸಂತೋಷಪಟ್ಟ ಮದುವೆ. ಐ ಲವ್ ಯೂ ಅಮ್ಮ. ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮರಾಠಿ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಕೂಡ ಜೋಡಿಗೆ ಶುಭಹಾರೈಸಿದ್ದಾರೆ.

    ಮರಾಠಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ಸಿದ್ದಾರ್ಥ್ ಚಂದೇಕರ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೆಂಡಾ, ಕ್ಲಾಸ್‌ಮೇಟ್ಸ್, ಬಾಲ ಗಂಧರ್ವ ಹೀಗೆ ಒಂದಷ್ಟು ಮರಾಠಿ- ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಮರಾಠಿ ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ. ಇತ್ತೀಚೆಗೆ ನಾಗೇಶ್ ಕುಕುನೂನ್ ನಿರ್ದೇಶನದ ‘ಸಿಟಿ ಆಫ್ ಡ್ರೀಮ್ಸ್’ ವೆಬ್ ಸೀರಿಸ್‌ನಲ್ಲಿ ಸಿದ್ದಾರ್ಥ್ ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

    ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

    ನ್ನಡದ ‘ಕಾಂತಾರ’ (Kantara) ಸಂಗೀತ ಡೈರೆಕ್ಟರ್ ಅಜನೀಶ್ ಲೋಕನಾಥ್ (Ajaneesh Lokanath)  ಅವರಿಗೆ ಬೇಡಿಕೆ ಜಾಸ್ತಿಯಾಗಿದೆ. ಪರಭಾಷೆಗಳಿಂದ ಅಜನೀಶ್‌ಗೆ ಬುಲಾವ್ ಬರುತ್ತಿದೆ. ತೆಲುಗು ಆಯ್ತು ಮರಾಠಿ (Marati) ಚಿತ್ರರಂಗದತ್ತ ಮುಖ ಮಾಡಿದ್ದಾರೆ.

    ಅಜನೀಶ್ ಲೋಕನಾಥ್ ಪರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲೂ ತಮ್ಮ ಸಂಗೀತ ಪ್ರತಿಭೆಯನ್ನ ಅದ್ಭುತ ಹಾಡುಗಳನ್ನ ನೀಡುವ ಮೂಲಕ ಅಲ್ಲಿಯ ಜನರ ಮನಸ್ಸು ಕದ್ದಿಯುತ್ತಿದ್ದಾರೆ. ‘ಕಾಂತಾರ’ (Kantara) ಮೂಲಕ ಎಲ್ಲೆಡೆ ಚಿರಪರಿಚಿತರಾಗಿರೋ ಅಜನೀಶ್ ಇದೀಗ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಮಹಾಭಾರತ ಸಿನಿಮಾ ಮಾಡುವ ಕನಸಿನ ಯೋಜನೆ ಬಗ್ಗೆ ರಾಜಮೌಳಿ ಮಾಸ್ಟರ್‌ ಪ್ಲ್ಯಾನ್

    ಇತ್ತೀಚಿನ ಅಜನೀಶ್ ಲೋಕನಾಥ್ ‘ವಿರೂಪಾಕ್ಷ’ (Veerupaksha Film) ಸಿನಿಮಾದಲ್ಲೂ ಒಂದು ಅದ್ಭತ ಹಾಡನ್ನ ಮಾಡಿಕೊಟ್ಟಿದ್ದಾರೆ. ಸಾಯಿ ಧರ್ಮ ತೇಜ್, ಗಾಳಿಪಟ 2 ನಾಯಕಿ ಸಂಯುಕ್ತಾ ಈ ಹಾಡಿಗೆ ಅಭಿನಯಿಸಿದ್ದಾರೆ. ಈಗ ಈ ಹಾಡು ರಿಲೀಸ್ ಕೂಡ ಆಗಿದೆ. ಇದರ ಹೊರತಾಗಿ ಅಜನೀಶ್ ಮೊನ್ನೆ ರಿಲೀಸ್ ಆದ ‘ಸರಿ’ (Sari Film) ಸಿನಿಮಾ ಮೂಲಕ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಕೂಡ ಸಂಗೀತ ಮಾಡಿದ್ದಾರೆ. ಕನ್ನಡದ ‘ದಿಯಾʼ ಹೀರೋ ಪೃಥ್ವಿ ಅಂಬರ್ ನಟಿಸಿರುವ ಸಿನಿಮಾ ಇದಾಗಿದೆ. ‘ದಿಯಾ’ ಚಿತ್ರವನ್ನೇ ಮರಾಠಿ ‘ಸರಿ’ ಟೈಟಲ್‌ನಲ್ಲಿ ಸಿನಿಮಾ ಮಾಡಲಾಗಿದೆ.

    ಅಜನೀಶ್ ಲೋಕನಾಥ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಆದರೆ ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿರಲಿಲ್ಲ. ಈಗ ಅದು ಕೂಡ ಆಗಿದೆ. ಮೇ-5 ರಂದು ಮರಾಠಿ ಭಾಷೆಯ ಸರಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿವೆ ಅನ್ನುವ ಮಾಹಿತಿ ಕೂಡ ಇದೆ. ಮರಾಠಿಗರು ಕೂಡ ಅಜನೀಶ್ ಸಂಗೀತಕ್ಕೆ ಫಿದಾ ಆಗಿದ್ದಾರೆ. ಇನ್ನೂ ಕನ್ನಡದ ಕಾಂತಾರ 2ಗೂ ಅಜನೀಶ್‌ ಮ್ಯೂಸಿಕ್‌ ಕಂಪೋಸ್‌ ಮಾಡಲಿದ್ದಾರೆ.

  • ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ (Karnataka-Maharashtra Dispute) ವಿವಾದ ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮರಾಠಿ (Marati) ಭಾಷಿಕರು ಪುಂಡಾಟ ಮೆರೆಯುತ್ತಿದ್ದಾರೆ. ಎಂಇಎಸ್ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಯತ್ನಿಸುತ್ತಿದೆ.

    ಹೌದು, ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಫೆರವಲ್ ಡೇ ಆಚರಣೆ ವೇಳೆ ಕನ್ನಡ ಬಾವುಟ (Karnataka Flag) ಹಿಡಿದು ಡಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲ ಮರಾಠಿ ಭಾಷಿಕ ವಿದ್ಯಾರ್ಥಿಗಳು ಆತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ವರುಣಾದಿಂದಲೇ ತಂದೆ ಸ್ಪರ್ಧಿಸಲಿ ಎಂದ ಯತೀಂದ್ರ – ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ

    ಕಾಲೇಜು ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಲೇಜಿಗೆ ಕರುನಾಡ ವಿಜಯ ಸೇನೆ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ಹಾಗೂ ಕಾರ್ಯಕರ್ತರು ಭೇಟಿ ನೀಡಿದ್ದಾರೆ.

    ಇಂದು ಕಾಲೇಜಿಗೆ ಮುತ್ತಿಗೆ ಹಾಕೋದಾಗಿ ಕನ್ನಡಪರ ಸಂಘಟನೆ ಎಚ್ಚರಿಕೆ ನೀಡಿದೆ. ಇನ್ನು ಸ್ಥಳಕ್ಕೆ ಟಿಳಕವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ನಿಂತವರಲ್ಲಿ ಒಳ್ಳೆಯವರು ಕಾಣದಿದ್ರೆ ನೋಟಾಗೆ ಒತ್ತಿ: ಕಾಗೇರಿ ಕರೆ

    Live Tv
    [brid partner=56869869 player=32851 video=960834 autoplay=true]

  • ಮರಾಠಿ ಬರೋಲ್ಲ ಕ್ಷಮಿಸಿ ಅಂತ ಸಿಎಂ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ: ಪ್ರತಾಪ್ ಸಿಂಹ ಕಿಡಿ

    ಮರಾಠಿ ಬರೋಲ್ಲ ಕ್ಷಮಿಸಿ ಅಂತ ಸಿಎಂ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ: ಪ್ರತಾಪ್ ಸಿಂಹ ಕಿಡಿ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡದ ಅರಿವಿಲ್ಲ ಅಂತ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಪ್ರಣಾಳಿಕೆ, ಪ್ರನಾಳಿಕೆ ಈ ಪದಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ. ಬೆಳಗಾವಿಯಲ್ಲಿ ನನಗೆ ಮರಾಠಿ ಬರೋಲ್ಲ ಕ್ಷಮಿಸಿ ಅಂತ ಭಾಷಣ ಮಾಡಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ

    ಕನ್ನಡಿಗರಿಗೆ ಅವಮಾನ ಮಾಡಿದ್ದಕ್ಕೆ ಸಿಎಂ ಅವರು ಈ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಬೆಳಗಾವಿಯಲ್ಲಿ ನಿಂತು ಮರಾಠ ಪ್ರೇಮ ಮೆರೆಯುವ ಇವರು ಕನ್ನಡ ಅಸ್ಮಿತೆ ಬಗ್ಗೆ ಮಾತನಾಡುತ್ತಾರೆ. ಇವರದ್ದು ಕೇವಲ ರಾಜಕೀಯಕ್ಕಾಗಿ ಕನ್ನಡ ಪ್ರೇಮ. ನಿಜವಾದ ಕನ್ನಡ ಪ್ರೇಮ ಇದ್ದೀದ್ದರೆ ಬೆಳಗಾವಿಯಲ್ಲಿ ಮರಾಠಿಗರ ಕ್ಷಮೆ ಕೇಳುತ್ತಿರಲಿಲ್ಲ. ರಾಜ್ಯದ ಜನರಿಗೆ ಸಿದ್ದರಾಮಯ್ಯರ ಬೋಗಸ್ ಕನ್ನಡ ಪ್ರೇಮ ಅರ್ಥವಾಗಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರಿಗೆ ಕನ್ನಡಿಗರೇ ಪಾಠ ಕಲಿಸುತ್ತಾರೆ ಅಂತ ಸಿಎಂ ವಿರುದ್ಧ ಹರಿಹಾಯ್ದರು.