ಕಾರವಾರ: ಮ್ಯಾರಥಾನ್ ವೇಳೆ ಕುಸಿದು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿ ಶಾಸಕ ಸತೀಶ್ ಸೈಲ್ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತು ನಿಯಂತ್ರಣ ಜಾಗೃತಿಗಾಗಿ ಮ್ಯಾರಥಾನ್ ಆಯೋಜಿಸಲಾಗಿತ್ತು. ನಗರದ ಮಾಲಾದೇವಿ ಮೈದಾನದ ಬಳಿ ನೌಕಾದಳ ಉದ್ಯೋಗಿ ಗುರುಚರಣ್ ಕುಸಿದು ಬಿದ್ದರು.
ತಕ್ಷಣ ಅವರನ್ನು ಅಂಬುಲೆನ್ಸ್ನಲ್ಲಿ ಶಾಸಕ ಸೈಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರನ್ನ ಕರೆಸಿ ಚಿಕಿತ್ಸೆಗೆ ಸಹಕರಿಸಿದರು. ಚಿಕಿತ್ಸೆ ನಂತರ ವ್ಯಕ್ತಿ ಚೇತರಿಸಿಕೊಂಡರು.
ಗದಗ: ಕರ್ನಾಟಕ ರಾಜ್ಯ ಹಾಗೂ ಗದಗ (Gadag) ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ (SBI) ನೇತೃತ್ವದಲ್ಲಿ ಜನಜಾಗೃತಿ ಮ್ಯಾರಥಾನ್ ನಡೆಯಿತು.
ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಸೀನಿಯರ್ ಹಾಗೂ ಜೂನಿಯರ್ 2 ತಂಡ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ 5 ಕಿ.ಮೀ ಹಾಗೂ 10 ಕಿ.ಮೀ ಮ್ಯಾರಥಾನ್ ನಡೆಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ
ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕ್ರೀಡಾ ಇಲಾಖೆ, ಎನ್‌ಎಸ್‌ಎಸ್, ಎನ್.ಸಿ.ಸಿ, ಆರ್.ಡಿ.ಪಿ.ಆರ್. ಯೂನಿವರ್ಸಿಟಿ, ಮೆಡಿಕಲ್, ಇಂಜನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: Ramanagara| ಊರಹಬ್ಬದ ದಿನವೇ ಗ್ರಾಮಕ್ಕೆ 4 ಕಾಡಾನೆಗಳ ಎಂಟ್ರಿ – ದಿಕ್ಕಾಪಾಲಾಗಿ ಓಡಿದ ಜನ
ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ಕಂಪನಿಗಳ ಕಾರ್ಯದರ್ಶಿಗಳ ಸಂಸ್ಥೆ ವಾಕಥಾನ್ (Walkathon) ಅನ್ನು ಆಯೋಜನೆ ಮಾಡಿದೆ. ರಾಜಾಜಿನಗರದ ಇಂಡಸ್ಟ್ರೀಯಲ್ ಏರಿಯಾದ ಐಸಿಎಸ್‌ಐ (ICSI) ಕಚೇರಿಯಿಂದ ಈ ವಾಕಥಾನ್ ಆರಂಭವಾಯಿತು.
ರನ್ ಫರ್ ಕಾರ್ಪೋರೇಟ್ ಎಕ್ಸಲೆನ್ಸ್ ಘೋಷವ್ಯಾಕ್ಯದೊಂದಿದೆ ಕಂಪನಿಯ ಸಿಬ್ಬಂದಿ, ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಸೇರಿ 500ಕ್ಕೂ ಹೆಚ್ಚು ಜನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೂಲಕ, ವಿಜಯನಗರ, ದೀಪಾಂಜಲಿ ನಗರ ಸೇರಿ ಹಲವು ರಸ್ತೆಗಳಲ್ಲಿ ಓಡಿದರು. ಇದನ್ನೂ ಓದಿ: ನವರಾತ್ರಿ 2023: ಶೈಲಪುತ್ರಿಯ ಮಹತ್ವವೇನು?
ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಿಬ್ಬಂದಿಯನ್ನು ಹುರಿದುಂಬಿಸಿದರು. ಆರೋಗ್ಯದ ಕಾಳಜಿ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ರಂಗನಾಥ್ ಅವರು ಸಿಬ್ಬಂದಿಗೆ ಸಲಹೆಯನ್ನು ನೀಡಿದರು. ಇದನ್ನೂ ಓದಿ: ಸಿಕ್ಸ್ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ
ಚೆನ್ನೈ: ಮ್ಯಾರಥಾನ್‌ನಲ್ಲಿ (Marathon) ಭಾಗವಹಿಸಿದ 20 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಆಘಾತಕಾರಿ ಘಟನೆ ಭಾನುವಾರ ತಮಿಳುನಾಡಿನ (Tamil Nadu) ಮಧುರೈನಲ್ಲಿ (Madurai) ನಡೆದಿದೆ.
ಮೃತನನ್ನು ಕಲ್ಲಕುರಿಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಭಾನುವಾರ ನಡೆದ ಉತಿರಂ 2023 ರಕ್ತದಾನ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಬ್ರಮಣಿಯನ್ ಹಾಗೂ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಪಿ ಮೂರ್ತಿ ಅವರು ಚಾಲನೆ ನೀಡಿದ್ದರು.
ಆಸ್ಪತ್ರೆಯ ಅಧಿಕಾರಿಗಳು ವಿದ್ಯಾರ್ಥಿಯನ್ನು 8:45ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದ್ದಾರೆ. ಅಲ್ಲಿ ಆತನಿಗೆ ಕೃತಕ ಉಸಿರಾಟದ ಬೆಂಬಲ ನೀಡಲಾಗಿದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಬೆಳಗ್ಗೆ 10:10ರ ಸುಮಾರಿಗೆ ಆತ ಹೃದಯ ಸ್ಥಂಭನಕ್ಕೆ ಒಳಗಾಗಿದ್ದಾನೆ. ಆತನನ್ನು ವೈದ್ಯರು ಬದುಕಿಸಲು ಪ್ರಯತ್ನಿಸಿದರೂ ಬೆಳಗ್ಗೆ 10:45ಕ್ಕೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದಿನೇಶ್ ಕುಮಾರ್ ಮಧುರೈನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಸಿದು ಬಿದ್ದ ಜಿಮ್ ಛಾವಣಿ- 10 ಮಂದಿ ದುರ್ಮರಣ
ಬೀಜಿಂಗ್: ಚೀನಾದ (China) 50 ವಯಸ್ಸಿನ ವ್ಯಕ್ತಿಯೊಬ್ಬರು ಸಿಗರೇಟ್ (Cigarette) ಸೇದುತ್ತಾ 42 ಕಿ.ಮೀ. ಮ್ಯಾರಥಾನ್ (Marathon) ಓಡಿರುವ ಅಚ್ಚರಿದಾಯಕ ಘಟನೆ ನಡೆದಿದೆ.
ಮ್ಯಾರಥಾನ್ ಓಟದ ಪ್ರಮುಖ ಉದ್ದೇಶವೆಂದರೆ ಫಿಟ್‌ನೆಸ್ ಉತ್ತೇಜಿಸುವುದು ಮತ್ತು ಆರೋಗ್ಯ ಸುಧಾರಿಸುವುದು. ಮ್ಯಾರಥಾನ್ ಓಡುವುದು ಸುಲಭವಲ್ಲ. ಅದಕ್ಕೆ ತರಬೇತಿ ಮತ್ತು ಆರೋಗ್ಯಕರ ಜೀವನಶೈಲಿ ಮುಖ್ಯ. ಆದರೆ ಅಂಕಲ್ ಚೆನ್ ಎಂದೇ ಹೆಸರಾಗಿರುವ ಚೀನಾದ ವ್ಯಕ್ತಿ ಸಿಗರೇಟ್ ಸೇದುತ್ತಲೇ 42 ಕಿ.ಮೀ. ಮ್ಯಾರಥಾನ್ ಓಡಿದ್ದಾರೆ. ಇದನ್ನೂ ಓದಿ: ಆರ್ಥಿಕವಾಗಿ ಕಂಗೆಟ್ಟಿರುವ ವಿಶ್ವಕ್ಕೆ ಜಿ20 ಶೃಂಗಸಭೆಯಲ್ಲಿ ಸಿಗುತ್ತಾ ಬೂಸ್ಟರ್ ಡೋಸ್?
ಸಿಗರೇಟ್ ಸೇದುವುದು ದೈಹಿಕ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಧೂಮಪಾನ ಮಾಡುತ್ತಿದ್ದರೆ ಹೃದಯ, ಶ್ವಾಸಕೋಶಗಳು ಮತ್ತು ಸ್ನಾಯುಗಳಿಗೆ ಕಡಿಮೆ ಆಮ್ಲಜನಕ ಸಿಗುತ್ತದೆ. ಇದರಿಂದ ಓಡಲು ತುಂಬಾ ಕಷ್ಟವಾಗುತ್ತದೆ. ಅದರ ಹೊರತಾಗಿಯೂ 50 ವರ್ಷ ವಯಸ್ಸಿನ ಚೆನ್ ಚೀನಾದ ಜಿಯಾಂಡೆಯಲ್ಲಿ ಮ್ಯಾರಥಾನ್ ಓಡಿದ್ದಾರೆ. ಅವರು 3 ಗಂಟೆ 28 ನಿಮಿಷಗಳಲ್ಲಿ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಮಾರು 1,500 ಓಟಗಾರರಲ್ಲಿ ಈ ವ್ಯಕ್ತಿ 574 ನೇ ಸ್ಥಾನ ಪಡೆದಿದ್ದಾರೆ. ಮ್ಯಾರಥಾನ್ ಪೂರ್ಣಗೊಳಿಸುವಷ್ಟರಲ್ಲಿ ಒಂದು ಪ್ಯಾಕ್ ಸಿಗರೇಟ್ ಸೇದಿದ್ದಾರೆ.
ಅಂಕಲ್ ಚೆನ್ ಇಂತಹ ವಿಚಿತ್ರ ಸಾಹಸವನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ರನ್ನಿಂಗ್ ಮ್ಯಾಗಜೀನ್ ಪ್ರಕಾರ, ಅವರು ಸಿಗರೇಟ್ ಸೇದಿಯೇ 2018ರ ಗುವಾಂಗ್‌ಝೌ ಮ್ಯಾರಥಾನ್ ಮತ್ತು 2019 ರ ಕ್ಸಿಯಾಮೆನ್ ಮ್ಯಾರಥಾನ್ ಓಡಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲಿಯೇ ಅತೀ ಉದ್ದದ ಮೂಗಿನ ವ್ಯಕ್ತಿ – ಫೋಟೋ ವೈರಲ್
ಅಂಕಲ್ ಚೆನ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಅನೇಕರು ಇದನ್ನು ಹಾಸ್ಯ ಮಾಡಿದ್ದಾರೆ. ʼಇಂತಹ ಕೃತ್ಯಗಳು ಕೆಟ್ಟ ನಿದರ್ಶನʼ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು(ಆನೇಕಲ್): ಯುವರತ್ನ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಈಗಾಗಲೇ ಮೂರು ತಿಂಗಳು ಕಳೆದಿದೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅದೇ ರೀತಿ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಇಂದು ಪುನೀತ್ ರಾಜ್‍ಕುಮಾರ್ ಅವರ ನೆನಪಿಗೋಸ್ಕರ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.
ಚಿಕ್ಕ ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲಾ ರೀತಿಯ ವ್ಯಕ್ತಿಗಳು ಸಹ ಮ್ಯಾರಥಾನ್‍ನಲ್ಲಿ ಪಾಲ್ಗೊಂಡು 5 ಕಿಲೋಮೀಟರ್ ಓಡುವ ಮೂಲಕ ಪುನೀತ್ ಅವರನ್ನು ಸ್ಮರಿಸಿದ್ದಾರೆ. ಫ್ಯಾಟ್ ಟು ಫಿಟ್ ಜಿಮ್ ಸೆಂಟರ್ ವತಿಯಿಂದ ಈ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ
ಪುನೀತ್ ರಾಜ್‍ಕುಮಾರ್ ಪ್ರೇರಣೆಯಿಂದ ಇಲ್ಲಿಗೆ ಬರುವಬರುವವರಿಗೆ ಫಿಟ್ನೆಸ್ ಬಗ್ಗೆ ಸಲಹೇ ನೀಡುತ್ತಿದ್ದಾರೆ. ಆದರೆ ಇದೀಗ ಅವರ ಅಗಲಿಕೆ ಸಾಕಷ್ಟು ನೋವನ್ನು ರಾಜ್ಯದ ಜನತೆಗೆ ನೀಡಿದ್ದು ಅವರ ಫಿಟ್ನೆಸ್‌ಗೆ ಪ್ರೇರಣೆಗೊಂಡು ಈ ಮ್ಯಾರಥಾನ್ ಆಯೋಜಿನೆ ಮಾಡಲಾಗಿದೆ. ಇದನ್ನೂ ಓದಿ: ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !
ಕೊಪ್ಪಳ: ಮೈ ಕೊರೆಯುವ ಚಳಿ, ಗುರಿ ಮುಟ್ಟಬೇಕೆಂಬ ಛಲ ಹೀಗಾಗಿ ಬೆಳ್ಳಂಬೆಳಗ್ಗೆ ನೂರಾರು ಯುವಕರು, ಯುವತಿಯರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಲಗುಬಗೆಯಿಂದ ಓಡಿದರು.
ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ಭಾಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಆನೆಗೊಂದಿವರೆಗೆ 12 ಕಿ.ಮೀ ಪುರುಷರ ಮ್ಯಾರಾಥಾನ್ ಹಾಗೂ ಗಂಗಾವತಿಯಿಂದ ಸಂಗಾಪುರದವರೆಗೆ 5 ಕಿ.ಮೀ ಮಹಿಳಾ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧಾಳುಗಳು ಉತ್ಸಾಹದಿಂದಲೇ ಈ ಮ್ಯಾರಾಥಾನ್‍ನಲ್ಲಿ ಪಾಲ್ಗೊಂಡಿದ್ದರು. ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿದರು. 200ಕ್ಕೂ ಹೆಚ್ಚು ಪುರುಷ 100ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಮಡಿಕೇರಿ: ಮಂಜಿನ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಮೈಕೊರೆಯುವ ಚಳಿಯಲ್ಲಿ ನೂರಾರು ಮಂದಿ ಬಹಳ ಉತ್ಸಾಹದಿಂದ ಸೈಕ್ಲಿಂಗ್, ಮ್ಯಾರಥಾನ್‍ನಲ್ಲಿ ಭಾಗಿಯಾಗಿ ಖುಷಿಪಟ್ಟರು.
ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಆಯೋಜಿಸಲಾಗಿತ್ತು. ನಗರದ ಕಾರ್ಯಪ್ಪ ವೃತ್ತದಿಂದ ಕೋಟೆ ಆವರಣದವರೆಗೆ 5 ಕಿ.ಮೀ ಸೈಕ್ಲಿಂಗ್, ಮ್ಯಾರಥಾನ್‍ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್ ಚಾಲನೆ ನೀಡಿದರು.
ಮೈಕೊರೆಯುವ ಚಳಿಯ ನಡುವೆಯೂ ಸೈಕ್ಲಿಂಗ್ ಮತ್ತು ಮ್ಯಾರಥಾನ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಡಿಸಿ, ಎಸ್‌ಪಿ ಇಬ್ಬರೂ ಖುದ್ದು ಸೈಕ್ಲಿಂಗ್ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೊಡಗು ಪ್ರಾಕೃತಿಕ ವಿಕೋಪ ನಡುವೆಯೂ ಕೊಡಗು ಪ್ರವಾಸೋದ್ಯಮ ಸೇಫ್ ಎನ್ನುವ ಸಂದೇಶ ಸಾರಿದರು. ಅಲ್ಲದೆ ಕೊಡಗಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುವಂತೆ ಕರೆಯಿತ್ತರು.
ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡಲು ಕಾರ್ಯಕ್ರಮವನ್ನು ಆಯೋಜಿಸಿ ಮೊದಲ ದಿನವೇ 15 ಲಕ್ಷ ರೂ. ಹಣ ಸಂಗ್ರಹ ಮಾಡಿದ್ದಾರೆ.
ದೆಹಲಿಯ ಮ್ಯಾರಾಥಾನ್ ನಲ್ಲಿ ಚಾಲನೆ ನೀಡಲು ಆಗಮಿಸಿದ್ದ ಸಚಿನ್ ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ 10 ಪುಶ್ ಅಪ್ ಮಾಡುವ ಕಿಪ್‍ಮೂವಿಂಗ್ ಪುಶ್ ಅಪ್ ಅಭಿಯಾನಕ್ಕೆ ಚಾಲನೆ ನೀಡಿದರು. ಅಲ್ಲದೇ ಎಲ್ಲರೂ ಈ ಚಾಲೆಜ್ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜನರಿಂದ ಸಂಗ್ರಹಿಸಿದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಲಾಗುತ್ತದೆ. ನಮ್ಮ ಕಾರ್ಯಕ್ರಮದ ಉದ್ದೇಶವನ್ನು ಅರ್ಥೈಸಿಕೊಂಡು ಬೆಂಬಲ ನೀಡುವುದಾಗಿ ನನಗೆ ನಂಬಿಕೆ ಇದೆ ಎಂದು ಸಚಿನ್ ವಿಶ್ವಾಸ ವ್ಯಕ್ತಪಡಿಸಿದರು.
ಉಳಿದಂತೆ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಮಕ್ಕಳು, ಯುವಕ, ಯುವತಿಯರು, ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಿದ್ದರು. ಸಚಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪುಶ್ ಅಪ್ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದ್ದಾರೆ.
ಪುಣೆ: ಒಂದು ಕಾಲನ್ನು ಹೊಂದಿರುವ ವಿಕಲ ಚೇತನ ವ್ಯಕ್ತಿಯೊಬ್ಬರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ನಂತರ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಭಾನುವಾರ ಪುಣೆಯಲ್ಲಿ ಆಫ್ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿಕಲಚೇತನ ಜಾವೇದ್ ರಂಜಾನ್ ಚೌಧರಿ ಪಾಲ್ಗೊಂಡು ನಂತರ ಸಖತ್ ಸ್ಟೆಪ್ ಹಾಕಿದ್ದಾರೆ.
ಮೂಲತಃ ಮಹಾರಾಷ್ಟ್ರದ ಬುಲ್‍ಧನ್ ಜಿಲ್ಲೆಯ ಲೋನಾರ್ ನವರಾದ ಜಾವೇದ್ ವೀಲ್‍ಚೇರ್ ಬಾಸ್ಕೆಟ್‍ಬಾಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನರು ನನಗೆ ಮಾಡಲು ಸಾಧ್ಯವಿಲ್ಲ ಎಂದಿದ್ದನ್ನು ನಾನು ಮಾಡಿ ತೋರಿಸಿದ್ದೇನೆ. ಬೈಕ್ ಸಾಹಸಗಳನ್ನು ಸಹ ಮಾಡುತ್ತೇನೆ ಎಂದು ಜಾವೇದ್ ಸಂತಸ ವ್ಯಕ್ತಪಡಿಸಿದ್ದಾರೆ.
2015 ರಲ್ಲಿ ಬೈಕ್ ಅಪಘಾತದಲ್ಲಿ ನಾನು ಒಂದು ಕಾಲನ್ನು ಕಳೆದುಕೊಂಡಿದ್ದೇನೆ. ಬಾಸ್ಕೆಟ್ ಬಾಲ್, ಸ್ವಿಮ್ಮಿಂಗ್ ಹೊರತುಪಡಿಸಿ, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಯಾರೂ ವಿದ್ಯಾವಂತರಾಗಿಲ್ಲ, ನಾನೇ ಕುಟುಂಬಕ್ಕೆ ಮೊದಲ ಪದವೀಧರರಾಗಿದ್ದೇನೆ ಎಂದು ಜಾವೇದ್ ಹೇಳಿದ್ದಾರೆ.
ಈ ಆಫ್ ಮ್ಯಾರಥಾನ್ ನಲ್ಲಿ 21 ಕಿ.ಮೀ, 10 ಕಿ.ಮೀ ಮತ್ತು 6 ಕಿ.ಮೀ. ಎಂದು ಮೂರು ವಿಭಿನ್ನ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಸುಮಾರು 2500 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಾವೇದ್‍ಗೂ ಸೇರಿದಂತೆ ಪ್ರತಿ ಸ್ಪರ್ಧಿಗಳಿಗೂ ಪದಕಗಳನ್ನು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ವಚ್ಛ ಭಾರತ್ ಪ್ರಮಾಣಪತ್ರವನ್ನು ಈ ವೇಳೆ ನೀಡಲಾಯಿತು.