Tag: Marathahalli Police Station

  • ವೈದ್ಯೆ ಕೃತಿಕಾ ಹತ್ಯೆ ಕೇಸ್ – 11 ತಿಂಗಳಿಂದ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಲ್ಲರ್ ಪತಿ

    ವೈದ್ಯೆ ಕೃತಿಕಾ ಹತ್ಯೆ ಕೇಸ್ – 11 ತಿಂಗಳಿಂದ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಲ್ಲರ್ ಪತಿ

    ಬೆಂಗಳೂರು: ವೈದ್ಯೆ ಕೃತಿಕಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಮಹೇಂದ್ರ ರೆಡ್ಡಿ 11 ತಿಂಗಳಿಂದಲೇ ಪತ್ನಿಗೆ ಕೊಲೆಗೆ ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಪ್ರಕರಣ ಸಂಬಂಧ ಮಾರತ್ತಹಳ್ಳಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಮತ್ತಷ್ಟು ಭಯಾನಕ ವಿಚಾರಗಳು ಹೊರಬರುತ್ತಿವೆ. ಪತ್ನಿ ಹತ್ಯೆಗೆ ಪತಿ ಹನ್ನೊಂದು ತಿಂಗಳಿಂದ ಪ್ರಯತ್ನ ನಡೆಸುತ್ತಿದ್ದ ಅನ್ನೋ ಆತಂಕಕಾರಿ ವಿಚಾರ ಹೊರಬಿದ್ದಿದೆ.ಇದನ್ನೂ ಓದಿ: ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?

    ಕ್ರಿಮಿನಲ್ ಕಿಲ್ಲರ್ ಡಾ.ಮಹೀಂದ್ರ ರೆಡ್ಡಿ ಹಲವು ಬಾರಿ ಪತ್ನಿಯ ಹತ್ಯೆ ಮಾಡಲು ಪಯತ್ನ ಮಾಡಿದ್ದ. ಮದುವೆಯಾದ ಸ್ಪಲ್ಪ ದಿನಗಳ ಅಂತರದಲ್ಲೇ ಆರೋಪಿ ಪತ್ನಿ ಹತ್ಯೆಗೆ ಪ್ರಯತ್ನ ಪಡುತ್ತಿದ್ದ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಹನ್ನೊಂದು ತಿಂಗಳ ಅವಧಿಯಲ್ಲಿ ಡಾ.ಕೃತಿಕಾ ರೆಡ್ಡಿ ಮೇಲೆ ಹಲವು ಬಾರಿ ಡ್ರಗ್ ಪ್ರಯೋಗ ಮಾಡಿರೋದು ತಿಳಿದುಬಂದಿದೆ. ಪಿರೇಡ್ ಸಮಯದಲ್ಲಿ ನೋವು ಬಾರದಂತೆ ಹಾಗೂ ಕೆಲ ಸಮಯದಲ್ಲಿ ಡ್ರಗ್ ಕೊಟ್ಟಿದ್ದನಂತೆ. ಈ ಬಗ್ಗೆ ಪೊಲೀಸರಿಂದ ಗೊತ್ತಾಗಿದೆ ಎಂದು ಮೃತ ಕೃತಿಕಾ ಪೋಷಕರು ಮಾಹಿತಿ ನೀಡಿದ್ದಾರೆ.

    ಮದುವೆ ಆದ ಒಂದಷ್ಟು ದಿನಗಳ ಬಳಿಕ ಕೃತಿಕಾ ಮೇಲೆ ಡ್ರಗ್ಸ್ ಪ್ರಯೋಗಿಸಿದ್ದಾನೆ. ಬಳಿಕ ಒಮ್ಮೆ ಅಧಿಕವಾಗಿ ಡ್ರಗ್ ಪ್ರಯೋಗಿಸಿದ್ದಾನೆ. ಪರಿಣಾಮ ಡಾ.ಕೃತಿಕಾ ಮೃತಪಟ್ಟಿದ್ದಾರೆ ಎಂದು ಎಫ್‌ಎಸ್‌ಎಲ್ ವರದಿಯಿಂದ ತಿಳಿದು ಬಂದಿದೆ ಎನ್ನಲಾಗ್ತಿದೆ.

    ಸದ್ಯ 9 ದಿನಗಳ ಕಾಲ ಆರೋಪಿ ಮಹೀಂದ್ರ ರೆಡ್ಡಿಯನ್ನು ಕಸ್ಟಡಿಗೆ ಪಡೆದಿರೋ ಮಾರತ್ತಹಳ್ಳಿ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

  • ಸಾಯುವುದಕ್ಕೆ 2 ನಿಮಿಷ ಮುಂಚೆ ರಾಷ್ಟ್ರಪತಿಗಳಿಗೆ ಇ-ಮೇಲ್‌ ಕಳುಹಿಸಿದ್ದ ಟೆಕ್ಕಿ ಅತುಲ್‌!

    ಸಾಯುವುದಕ್ಕೆ 2 ನಿಮಿಷ ಮುಂಚೆ ರಾಷ್ಟ್ರಪತಿಗಳಿಗೆ ಇ-ಮೇಲ್‌ ಕಳುಹಿಸಿದ್ದ ಟೆಕ್ಕಿ ಅತುಲ್‌!

    ಬೆಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ (Atul Subhash Suicide Case) ತನಿಖೆಗೆ ಇನ್ಸ್‌ಪೆಕ್ಟರ್‌ ದರ್ಜೆಯ ಅಧಿಕಾರಿಯನ್ನ ನೇಮಕ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಮೊದಲು ಸಬ್‌ ಇನ್ಸ್‌ಪೆಕ್ಟರ್‌ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು, ಇದೀಗ ಪ್ರಕರಣ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿರುವ ಹಿನ್ನಲೆ, ಮಾರತಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ಗೆ ಅಧಿಕಾರಿ ತನಿಖೆ ಹೊಣೆ ನೀಡಲಾಗಿದೆ. ಈ ನಡುವೆ ಹೊಸ ಹೊಸ ವಿಚಾರಗಳು ಬೆಳಿಕೆ ಬಂದಿವೆ.

    ರಾಷ್ಟ್ರಪತಿಗಳಿಗೆ ಇ-ಮೇಲ್‌:
    ಅತುಲ್‌ ಸುಭಾಷ್‌ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ನಿಮಿಷಗಳಿಗೂ ಮುಂಚೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಾಗೂ ಸುಪ್ರೀಂ ಕೋರ್ಟ್‌ ಜಡ್ಜ್‌ಗೆ ಇ-ಮೇಲ್‌ ಕಳುಹಿಸಿದ್ದ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

    ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷದ ವೇಳೆಗೆ ʻನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ, ಮನಸ್ಸು ಮಾಡಿದ್ರೆ ದೇಶದಲ್ಲಿ ಬದಲಾವಣೆ ತರ್ಬೋದು, ಅಸಮರ್ಥ ಮತ್ತು ಪಕ್ಷಪಾತಿ ನ್ಯಾಯಾಧೀಶರನ್ನು ವಜಾಗೊಳಿಸಬೇಕುʼ ಎಂದು ಉಲ್ಲೇಖಿಸಿ ಮೇಲ್‌ ಕಳುಹಿಸಿದ್ದಾನೆ. ಅಲ್ಲದೇ ತನ್ನ ಮೇಲೆ ಸುಳ್ಳು ಕೇಸ್, ಸೆಕ್ಷನ್‌ಗಳನ್ನ ಹಾಕಿದ್ದಾರೆಂದು ಎಂದು ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ರೀತಿಯ ಇ-ಮೇಲ್‌ವೊಂದನ್ನು ಸುಪ್ರೀಂ ಕೋರ್ಟ್ ಜಡ್ಜ್‌ಗೂ ಕಳುಹಿಸಿದ್ದಾರೆ ಅತುಲ್‌ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ 

    ಪ್ರಕರಣದ ಪ್ರಮುಖ ಅಂಶಗಳು:
    * ನಿಖಿತಾ ಮತ್ತು ಸುಭಾಷ್ ಅತುಲ್ 26 ಏಪ್ರಿಲ್ 2019 ರಲ್ಲಿ ಮ್ಯಾಟ್ರಿಮೋನಿ ಮೂಲಕ ಮದುವೆ
    * 2020 ರಲ್ಲಿ ಒಂದು ಗಂಡು ಮಗುವಿಗೆ ಜನ್ಮ
    * 17 ಮಾರ್ಚ್ 2021 ರಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ಪ್ರಾರಂಭ ಆಯ್ತು.. ನಿಖಿತಾ ದೂರಿನ ಪ್ರಕಾರ ಅತುಲ್ ಮತ್ತು ತಾಯಿಯಿಂದ ಹಲ್ಲೆ.
    * 24 ಏಪ್ರಿಲ್ 2022 ರಲ್ಲಿ ಉತ್ತರ ಪ್ರದೇಶದ ಜೌನಪುರದಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿತ್ತು.
    * ಈ ಪ್ರಕರಣದಲ್ಲಿ, ಅತುಲ್, ತಂದೆ – ತಾಯಿ, ಬಾಮೈದಾ ಎಲ್ಲರ ವಿರುದ್ಧ ದೂರು ದಾಖಲಾಗಿತ್ತು.
    * ವರದಕ್ಷಿಣೆ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು.
    * ಅತುಲ್ ತಂದೆ 10 ಲಕ್ಷ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರೆ ಎಂದು ಆರೋಪವಿತ್ತು.
    * ಆಗಸ್ಟ್ 16, 2019 ರಂದು ನಿಖಿತಾ ಬಳಿ 10 ಲಕ್ಷ ಹಣಕ್ಕಾಗಿ ಬೇಡಿಕೆ
    * ಹಣ ನೀಡದೇ ಇದ್ದಾಗ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ಆರೋಪ
    * ಅತುಲ್ ಕುಡಿದು ನಿರಂತರವಾಗಿ ಹಲ್ಲೆ ನಡೆಸಿದ್ದ ಆರೋಪ
    * ಅತುಲ್ ಕುಟುಂಬದ ಮಾನಸಿಕ ಕಿರುಕುಳಕ್ಕೆ ನಿಖಿತಾ ತಂದೆ ಆಗಸ್ಟ್ 17, 2019 ರಂದು ಸಾವನ್ನಪ್ಪಿದ ಆರೋಪ

  • ಐಷಾರಾಮಿ ಮನೆಯಲ್ಲಿ ಕೆಲಸಕ್ಕೆ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಳು

    ಐಷಾರಾಮಿ ಮನೆಯಲ್ಲಿ ಕೆಲಸಕ್ಕೆ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಳು

    ಬೆಂಗಳೂರು: ಐಷಾರಾಮಿ ಮನೆಯಲ್ಲಿ ಕೆಲಸಕ್ಕೆಂದು ಸೇರಿ ಮಹಿಳೆಯೊಬ್ಬಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾಳೆ. ಈ ಹಿನ್ನೆಲೆ ಪೊಲೀಸರು ಆಕೆಯನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಮಾರತಳ್ಳಿಯಲ್ಲಿ ನಡೆದಿದೆ.

    ಬೆಂಗಳೂರಿನ ಮಾರತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾಟ್ರ್ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಆರೋಪಿ ಸುಮಾ(40) ಬಂಧಿಸಿದ್ದಾರೆ. ಸುಮಾ ಮೂಲತಃ ಶಿವಮೊಗ್ಗ ಮಹಿಳೆಯಾಗಿದ್ದು, ಮುಂಬೈ ಮೂಲದ ಟೆಕ್ಕಿಯ ವಿಲ್ಲಾದಲ್ಲಿ ಚೋರಿ ಕೃತ್ಯ ನಡೆಸಿದ್ದಾಳೆ.

    ನಡೆದಿದ್ದೇನು?
    ಪ್ರತಿಷ್ಠಿತ ಏರಿಯಾಗಳ ಟೆಕ್ಕಿಯ ವಿಲ್ಲಾದಲ್ಲಿ ಸುಮಾ ಕೆಲಸ ಮಾಡುತ್ತಿದ್ದಳು. ಸುಮಾ ಟೆಪ್ರವರಿ ಕೆಲಸಗಾರರನ್ನು ಹುಡುಕಿದ ಮನೆಗೆ ಹೋಗಿದ್ದಳು. ಕೆಲಸ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಕದ್ದಿದ್ದ ಕಳ್ಳಿ. ಕೆಲದಿನಗಳ ಬಳಿಕ ಮುಂಬೈಗೆ ತೆರಳಲು ನಿರ್ಧಾರ ಮಾಡಿದ್ದ ಟೆಕ್ಕಿ ಲಾಕರ್‌ನಲ್ಲಿದ್ದ ಆಭರಣ ಇಡಲು ಹೋದಾಗ ಕಳ್ಳತನ ಕೃತ್ಯ ಬಯಲಾಗಿದೆ. ಇದನ್ನೂ ಓದಿ: ಬೆಂ.ನ.ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು: ಒತ್ತುವರಿಯಾಗಿದ್ದ ರಾಜಕಾಲುವೆ, ಖಾಸಗಿ ಬಡಾವಣೆ ತೆರವು 

    CRIME 2

    ಬಳಿಕ ಟೆಕ್ಕಿ ಮಾರತ್ ಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದು, ದೂರು ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಚರಣೆ ವೇಳೆ ಮಾರತ್ ಹಳ್ಳಿ ಪೊಲೀಸರಿಂದ ಆರೋಪಿತೆ ಸುಮಾಳನ್ನು ಬಂಧನವಾಗಿದೆ. ಬಂಧಿತಳಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಜ್ರಾಭರಣ ವಶಕ್ಕೆ ತೆಗೆದುಕೊಳ್ಳಲಾಗಿದೆ.