ಬೆಳಗಾವಿ: ಜಿಲ್ಲೆಯ 18 ಕ್ಷೇತ್ರದಲ್ಲಿ 10 ಕ್ಷೇತ್ರ ಮರಾಠ ಸಮುದಾಯ (Maratha Community) ಸಹಕಾರ ಇಲ್ಲದೇ ಯಾವುದೇ ಪಕ್ಷವೂ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದರು.
ಗೋಕಾಕ್‌ನಲ್ಲಿ ಕ್ಷತ್ರಿಯ ಮರಾಠಾ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಕಾಕ್‌ನಲ್ಲಿ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ತಮ್ಮ ವಿರುದ್ಧ ಮಾತನಾಡಿದ ನಾಯಕರಿಗೆ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದರು. ಚುನಾವಣೆಯಲ್ಲಿ (Assembly Election) ಎಷ್ಟೇ ಒಗ್ಗಟ್ಟಾಗಿದ್ದರೂ ಸಾಕಾಗುವುದಿಲ್ಲ. ಪಕ್ಷದ ಪ್ರಮುಖ ನಾಯಕ ಇರುವುದರಿಂದ ಒಂದೇ ಹಾದಿಯಲ್ಲಿ ಮಾತನಾಡಲು ಬರಲ್ಲ. ನಾವು ಬೇಡಿಕೊಳ್ಳುತ್ತಾ ಅಡ್ಡಾಡೋದಕ್ಕಿಂತ ನಮ್ಮಲ್ಲೇ ಬರಬೇಕು ಎಂದರೆ ಒಗ್ಗಟ್ಟಾಗಬೇಕು. ಚುನಾವಣೆಯಲ್ಲಿ ಒಗ್ಗಟ್ಟಾಗಿ, ಮುಗಿದಮೇಲೆ ಮನೆಯಲ್ಲಿದ್ದರೆ ಏನೂ ಪ್ರಯೋಜನವಿಲ್ಲ ಎಂದರು. ಇದನ್ನೂ ಓದಿ: ರಾಜ್ಯ ರಾಜಕಾರಣದ ಮೇಲೆ ಆಸಕ್ತಿ ಇಲ್ಲ: ಡಿಕೆ ಸುರೇಶ್
ಬೆಳಗಾವಿ: ರಾಜ್ಯದಲ್ಲಿ ಮರಾಠಾ ದೊಡ್ಡ ಪ್ರಮಾಣದಲ್ಲಿ ಇದೆ. ಹೀಗಾಗಿ ಅದನ್ನು ಪ್ರತಿನಿಧಿಸುವ ಸಲುವಾಗಿ ಸಮಾಜದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ನೀಡಬೇಕು ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಆಗ್ರಹಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇದೆ. ಆದರೆ, ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ರಾಜ್ಯದಲ್ಲಿ ಮರಾಠ ದೊಡ್ಡ ಸಮುದಾಯವಿದ್ದು ಅದನ್ನ ಪ್ರತಿನಿಧಿಸುವುದಕ್ಕೆ ನಮ್ಮ ಸಮಾಜದವರಿಗೆ ಸಚಿವ ಸ್ಥಾನ ಬೇಕು ಎಂಬುವುದು ಸಮಾಜದ ಬೇಡಿಕೆ ಆಗಿದೆ. ಪಕ್ಷ ನಮ್ಮ ಸಮಾಜದ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೀಗಾಗಿ ಸಮಾಜದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ನೀಡಬೇಕು. ಯಾರಿಗೆ ಕೊಟ್ಟರು ತೊಂದರೆ ಇಲ್ಲ. ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ಉಪ ಚುನಾವಣೆ ಗೆಲ್ಲಲು ಬಿಜೆಪಿ ಮರಾಠಿ ಮಂತ್ರ ಜಪಿಸುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಘೋಷಿಸಿರುವ ಮರಾಠ ಅಭಿವೃದ್ಧಿ ನಿಗಮ ಕರುನಾಡಿನಲ್ಲಿ ಕಿಚ್ಚು ಹೊತ್ತಿಸಿದೆ.
ಬಿಎಸ್‍ವೈ ಸರ್ಕಾರ ಶಿರಾ ಬೈ ಎಲೆಕ್ಷನ್ ಗೆಲ್ಲಲು ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮ ರಚಿಸಿ, 50 ಕೋಟಿ ಮೀಸಲಿರಿಸಿತ್ತು. ಎರಡು ದಿನಗಳ ಹಿಂದೆ ಮಠ ಮಾನ್ಯಗಳಿಗೆ 88 ಕೋಟಿ ರೂಪಾಯಿಯ ಹೊಳೆ ಹರಿಸಿತ್ತು. ಬೆಳಗಾವಿ ಲೋಕಸಭೆ ಉಪ ಚುನಾವಣೆ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಗೆಲ್ಲುವ ಸಲುವಾಗಿ ನಿನ್ನೆಯಷ್ಟೇ ಮರಾಠ ಅಭಿವೃದ್ಧಿ ನಿಗಮ ರಚಿಸಿ, ಅದಕ್ಕೂ 50 ಕೋಟಿ ಮೀಸಲಿರಿಸಿದೆ. ಮರಾಠ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಭು ಚೌಹಾಣ್ ಬಹಿರಂಗವಾಗಿ ಘೋಷಿಸಿದ್ದಾರೆ.
ಈ ಮೂಲಕ ಸಮುದಾಯಗಳ ಓಲೈಕೆ ಪಾಲಿಟಿಕ್ಸ್ ನ್ನು ಬಿಜೆಪಿ ಸರ್ಕಾರ ಮುಂದುವರಿಸಿದೆ. ಕಾರಣ ಬಸವ ಕಲ್ಯಾಣದಲ್ಲಿ ಮರಾಠ ಸಮುದಾಯದ 40 ಸಾವಿರ ಮತಗಳು ಇವೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕೂಡ ಯಾರೇ ಗೆಲ್ಲಬೇಕಿದ್ರೂ ಮರಾಠ ಸಮುದಾಯದ ಬೆಂಬಲ ಬೇಕೇಬೇಕು. ಅಲ್ಲಿ ಅಂದಾಜು 6 ಲಕ್ಷಕ್ಕೂ ಹೆಚ್ಚು ಮರಾಠ ಮತಗಳಿವೆ. ಈ ಮತಗಳನ್ನು ಗುರಿಯಾಗಿಸಿಕೊಂಡೇ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ಅಸ್ತ್ರವನ್ನು ಬಿಎಸ್‍ವೈ ಸರ್ಕಾರ ಪ್ರಯೋಗಿಸಿದೆ. ಇದನ್ನೂ ಓದಿ:ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ
ಕೇವಲ ಮತಕ್ಕಾಗಿ ನಾಡದ್ರೋಹಿಗಳು ಎನಿಸಿಕೊಂಡ ಮರಾಠ ಸಮುದಾಯವನ್ನು ಈ ರೀತಿ ಓಲೈಸುವುದು ಎಷ್ಟು ಸರಿ ಅನ್ನೋದು ಕನ್ನಡ ಪರ ಹೋರಾಟಗಾರರ ಪ್ರಶ್ನೆ. ಸರ್ಕಾರ ಕೂಡಲೇ ಅಭಿವೃದ್ಧಿ ನಿಗಮ ರಚನೆಯ ಆದೇಶವನ್ನು ಹಿಂಪಡೆಯಬೇಕು. ಇಲ್ಲದೇ ಇದ್ರೇ ನಾಡಿದ್ದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಸ್ತಿದ್ದಾರೆ.
ಬೆಳಗಾವಿ- ಮರಾಠ ಸಮುದಾಯದ ಓಲೈಕೆ ಏಕೆ?
ಬೆಳಗಾವಿಯ 17 ಲಕ್ಷ ಮತಗಳ ಪೈಕಿ 6.5 ಲಕ್ಷಕ್ಕೂ ಹೆಚ್ಚು ಮರಾಠ ಮತಗಳಿವೆ. ಮರಾಠ ಸಮುದಾಯದ ಬೆಂಬಲ ಗಿಟ್ಟಿಸಿದ್ದ ಬಿಜೆಪಿಯ ಸುರೇಶ್ ಅಂಗಡಿ ಈಗಿಲ್ಲ. ಸುರೇಶ್ ಅಂಗಡಿ ಅನುಪಸ್ಥಿತಿಯಲ್ಲಿ ಮರಾಠ ವೋಟ್ ಬ್ಯಾಂಕ್ ಛಿದ್ರವಾಗುವ ಭೀತಿ ಬಿಜೆಪಿಗೆ ಕಾಡುತ್ತಿದೆ. ಮಹಾರಾಷ್ಟ್ರದ ರಾಜಕೀಯ ಉಪ ಲೋಕಸಮರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ ಜೊತೆ ಶಿವಸೇನೆ ಇರುವ ಕಾರಣ, ಮರಾಠ ಮತಗಳು ಕೈಗೆ ಹೋಗುವ ಸಂಭವ ಹೆಚ್ಚು ಎನ್ನಲಾಗಿದೆ. ಹೀಗಾಗಿಯೇ ಮರಾಠ ಸಮುದಾಯದ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ನಿಗಮ ರಚಿಸಿದೆ ಎಂದು ಹೇಳಲಾಗುತ್ತಿದೆ.
ಬಸವಕಲ್ಯಾಣ- ಮರಾಠ ಸಮುದಾಯದ ಓಲೈಕೆ ಏಕೆ?
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ 2.40 ಲಕ್ಷ ಮತಗಳನ್ನು ಹೊಂದಿದೆ. ಇದರಲ್ಲಿ ಮರಾಠ ಸಮುದಾಯದ ಅಂದಾಜು 45,000 ಮತಗಳಿವೆ. ಇಲ್ಲಿ ಯಾರೇ ಗೆಲ್ಲಬೇಕಿದ್ದರೂ ಮರಾಠ ಮತಗಳು ಬೇಕೇಬೇಕು. ಬಸವಕಲ್ಯಾಣದ ಮೇಲೆಯೂ ‘ಮಹಾ’ ಪಾಲಿಟಿಕ್ಸ್ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಹೀಗಾಗಿಯೇ, ಸಮುದಾಯದ ಓಲೈಕೆಗಾಗಿ ಮರಾಠ ಅಭಿವೃದ್ಧಿ ನಿಗಮದ ಅಸ್ತ್ರ ಪ್ರಯೋಗಿಸಿದೆ ಎಂಬುವುದು ರಾಜಕೀಯ ಅಂಗಳದ ಮಾತು.
ವಿರೋಧ ಏಕೆ?: ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಕಡಿಮೆ ಅನುದಾನ ನೀಡಲಾಗಿದೆ. ಈ ವರ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಈ ಮೊದಲು ವಾರ್ಷಿಕ 5 ಕೋಟಿ ರೂ. ನೀಡಲಾಗಗುತ್ತಿತ್ತು. 2 ಕೋಟಿ ಎಲ್ಲಿ?50 ಕೋಟಿ ಎಲ್ಲಿ? ಕನ್ನಡಕ್ಕಿಂತ ಮರಾಠಿನೇ ಮುಖ್ಯನಾ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರತಿ ವರ್ಷ ನ.1ರಂದು ಮರಾಠಿಗರಿಂದ ಕರಾಳ ದಿನ ಆಚರಣೆ ಮಾಡುತ್ತಾರೆ. ಹೀಗಿದ್ದರೂ ಮರಾಠಿ ಸಮುದಾಯದ ಮೇಲೆ ಸರ್ಕಾರಕ್ಕೆ ಪ್ರೀತಿ ಏಕೆ?. ಹೀಗಾಗಿಯೇ ಕನ್ನಡ ಪರ ಹೋರಾಟಗಾರರಿಂದ ಮರಾಠ ನಿಗಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೊಕ್ಕಸದಲ್ಲಿ ದುಡ್ಡಿಲ್ಲ ಎಂಬ ನೆಪ ಹೆಳಿ, ವಿವಿಧ ಪ್ರಶಸ್ತಿಗಳು, ಪಿಹೆಚ್‍ಡಿ, ಎಂಫಿಲ್ ಮಾಡೋರ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಹಾಕಿರೋದು ಕನ್ನಡ ಪರ ಹೋರಾಟಗಾರರನ್ನು ಸಿಟ್ಟಿಗೆಬ್ಬಿಸಿದೆ.
ಮುಂಬೈ: ಸರ್ಕಾರಿ ಕೆಲಸದಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮರಾಠ ಸಮುದಾಯದ 8 ಲಕ್ಷಕ್ಕೂ ಹೆಚ್ಚು ಜನ ಇಂದು ಬೆಳಿಗ್ಗೆ ಮುಂಬೈನಲ್ಲಿ ಮನ ಮೆರವಣಿಗೆ ನಡೆಸಿದ್ದಾರೆ.
ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ಮರಾಠ ಕ್ರಾಂತಿ ಮೊರ್ಚಾದಿಂದ ಈ ಜಾಥಾ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ರೈಲು ಸಂಚಾರಕ್ಕೂ ಕೂಡ ತೊಂದರೆಯಾಗಿದೆ. ಮರಾಠ ಸಮುದಾಯದ ಯುವಕ ಯುವತಿಯರು ಹಾಗೂ ಹಿರಿಯ ನಾಗರೀಕರು ಕೇಸರಿ ಧ್ವಜಗಳನ್ನ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಗೆ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಮುಂಬೈನ ಬಹುತೇಕ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸುವಂತೆ ಸುಚಿಸಲಾಗಿದೆ. ಅಲ್ಲದೆ ಇಲ್ಲಿನ ಅನೇಕ ಶಾಲೆಗಳನ್ನ ಇಂದು ಮುಚ್ಚಲಾಗಿದೆ. ಮುಂಬೈನಲ್ಲಿ ಕಚೇರಿಗಳಿಗೆ ಮಧ್ಯಾಹ್ನದ ಊಟದ ಡಬ್ಬಗಳನ್ನ ತಲುಪಿಸೋ ಡಬ್ಬಾವಾಲಾಗಳು ಇಂದು ತಮ್ಮ ಸೇವೆಯನ್ನ ಸ್ಥಗಿತಗೊಳಿಸಿದ್ದಾರೆ.
ಕೃಷಿಯಿಂದ ಅಗತ್ಯ ಆದಾಯ ಬರುತ್ತಿಲ್ಲ. ಹಾಗೇ ಉದ್ಯೋಗ ಸಿಗುತ್ತಿಲ್ಲ. ಮೀಸಲಾತಿಯಿಂದ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಸಿಗುವ ಭರವಸೆ ಇರುತ್ತದೆ ಅಂತ ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆದೀ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಪ್ರತಿಭಟನೆಯನ್ನ ನಿಲ್ಲಿಸುವುದಿಲ್ಲೆ ಂಧು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.