Tag: marali manasagidhe

  • ತೆಲುಗಿನಲ್ಲಿ ಚಂದನ್ ಬ್ಯಾನ್? ಪ್ರಕರಣದಲ್ಲಿ ಏನಿದು ಹೊಸ ಟ್ವಿಸ್ಟ್!

    ತೆಲುಗಿನಲ್ಲಿ ಚಂದನ್ ಬ್ಯಾನ್? ಪ್ರಕರಣದಲ್ಲಿ ಏನಿದು ಹೊಸ ಟ್ವಿಸ್ಟ್!

    ತೆಲುಗು ಧಾರಾವಾಹಿ ಸೆಟ್‌ನಲ್ಲಿ ಚಂದನ್ ಕುಮಾರ್ ಮೇಲಿನ ಹಲ್ಲೆ ವಿಚಾರ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿರವ ಬೆನ್ನಲ್ಲೇ ಹೊಸ ವಿಚಾರವೊಂದು ಸಖತ್ ಸುದ್ದಿ ಮಾಡುತ್ತಿದೆ. ಚಂದನ್ ತೆಲುಗು ಸೀರಿಯಲ್‌ನಿಂದ ಹೊರ ಬರುವ ಮುಂಚೆನೇ ಅವರನ್ನ ಬ್ಯಾನ್ ಮಾಡಿದ್ರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

    ಕನ್ನಡ ನಟ ಚಂದನ್ ಮೇಲೆ ಹಲ್ಲೆ ವಿಚಾರವಾಗಿ ಈಗಾಗಲೇ ಹಲವಾರು ಸುದ್ದಿಗಳು ಹರಿದಾಡಿದೆ. ಚಂದನ್ ಸಹ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಡದ ತಪ್ಪಿಗೆ ತನ್ನ ಮೇಲೆ ತೆಲುಗು ಸೀರಿಯಲ್ ಸೆಟ್‌ನಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ, ಈ ಕಾರಣದಿಂದ ನಾನು ಮತ್ತೆಂದೂ ತೆಲುಗಿನ ಸಿರೀಯಲ್‌ಗೆ ಹೋಗಲ್ಲ ಎಂದು ಚಂದನ್ ಹೇಳಿದ್ದರು. ಆದರೆ ಇದೀಗ ತೆಲುಗಿನ ಟಿಲಿವಿಶನ್ ಟೆಕ್ನೀಶಿಯನ್ಸ್ ಮತ್ತು ವರ್ಕರ್ಸ್ ಫೆಡರೇಶನ್ ಬರೆದಿರುವ ಪತ್ರವೊಂದು ವೈರಲ್ ಆಗಿದ್ದು, ಈ ಕಥೆಗೆ ಬೇರೆ ಟ್ವಿಸ್ಟ್ ಸಿಕ್ಕಿದೆ.

    ಚಂದನ್ ನಟನೆಯ ತೆಲುಗು ಸೀರಿಯಲ್ ಒಂದರ ಚಿತ್ರೀಕರಣ ನಡೆಯುತ್ತಿತ್ತು. ಆಗ ಸಹಾಯಕ ನಿರ್ದೇಶಕ 3 ರಿಂದ 4 ಬಾರಿ ಶಾಟ್‌ಗೆ ಬರುವಂತೆ ಹೇಳಿದ್ದಾರೆ. ಆಗ ಚಂದನ್, ಹೇಳಿದ್ದನ್ನೇ ಎಷ್ಟು ಬಾರಿ ಹೇಳ್ತೀಯಾ ಅಂತ ಜಗಳ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಹಾಯಕ ನಿರ್ದೇಶಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪತ್ರದ ವಿಚಾರ ಹೊರ ಬಂದ ಬೆನ್ನಲ್ಲೆ ಚಂದನ್ ಪ್ರೆಸ್ ಮೀಟ್ ಮಾಡೋದಕ್ಕೆ ಮೊದಲೇ ಬ್ಯಾನ್ ಆಗಿದ್ರಾ ಎಂಬ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ಬಾಲಿವುಡ್ ಸೂಪರ್ ಸ್ಟಾರ್ಸ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್

    ನಟ ಚಂದನ್ ಈಗಾಗಲೇ ಹೇಳಿರುವ ವಿಚಾರವೇ ಬೇರೆ, ಈ ಪತ್ರದಲ್ಲಿ ಇರೋದೇ ಬೇರೇ. ಚಂದನ್ ಪ್ರೆಸ್ ಮೀಟ್ ಮಾಡುವ ಮುನ್ನವೇ ಬ್ಯಾನ್ ಆಗಿದ್ರಾ ಎಂಬ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅಸಲಿ ವಿಚಾರವೇನು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    Live Tv
    [brid partner=56869869 player=32851 video=960834 autoplay=true]