Tag: Marakumbi Case

  • ಮರಕುಂಬಿ ಪ್ರಕರಣ | 99 ಅಪರಾಧಿಗಳಿಗೆ ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ

    ಮರಕುಂಬಿ ಪ್ರಕರಣ | 99 ಅಪರಾಧಿಗಳಿಗೆ ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ

    – 50 ಸಾವಿರ ರೂ. ಬಾಂಡ್ ಹಣಕ್ಕಾಗಿ ಕುಟುಂಬಸ್ಥರ ಪರದಾಟ

    ಕೊಪ್ಪಳ: ಮರಕುಂಬಿ ಪ್ರಕರಣದ (Marakumbai Case) 99 ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್‌ನಿಂದ (Dharwad HighCourt) ಜಾಮೀನು ದೊರೆತಿದೆ. ಆದರೆ ಜಾಮೀನಿಗೆ ವಿಧಿಸಿರುವ ಷರತ್ತು ಪೂರೈಸಲು ಸಾಧ್ಯವಾಗದೇ ಜೈಲೇಗತಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

    ಮರಕುಂಬಿ ಪ್ರಕರಣದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬರೋಬ್ಬರಿ 101 ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು. ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಟ್ರಾಸಿಟಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದರೆ ಇದೀಗ ಧಾರವಾಡ ಹೈಕೋರ್ಟ್ ಪೀಠ 99 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನಿಗೆ (Bail) ವಿಧಿಸಿರುವ ಷರತ್ತು ಪೂರೈಸಲು ಸಾಧ್ಯವಾಗದೇ ಕುಟುಂಬಗಳು ಪರದಾಡುತ್ತಿವೆ. ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.ಇದನ್ನೂ ಓದಿ: ಇಬ್ಬರು ಸಚಿವರಿಂದಲೇ ಮುಡಾ ಅಕ್ರಮಕ್ಕೆ ಸಹಕಾರ!

    ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014ರ ಆ.28 ರಂದು, ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಕೊಪ್ಪಳದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 2024ರ ಅ.24ರಂದು ಬರೋಬ್ಬರಿ 101 ಆರೋಪಿಗಳನ್ನು ಅಪರಾಧಿಗಳು ಎಂದು ಆದೇಶ ಹೊರಡಿಸಿತ್ತು. ಜೊತೆಗೆ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಕೊಪ್ಪಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜೈಲುಪಾಲಾಗಿದ್ದವರ ಕುಟುಂಬಸ್ಥರು ಧಾರವಾಡ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್ ಪೀಠ ಜೀವಾವಧಿ ಶಿಕ್ಷೆಗೊಳಗಾಗಿದ್ದ ಎ1 ಆರೋಪಿ ಮಂಜುನಾಥ ಹೊರತುಪಡಿಸಿ, ಉಳಿದೆಲ್ಲರಿಗೂ ಜಾಮೀನು ನೀಡಿ ಆದೇಶ ಹೊರಡಿಸಿದೆ. ಜಾಮೀನು ಸಿಕ್ಕಿರುವುದು ಅಪರಾಧಿಗಳ ಕುಟುಂಬಸ್ಥರ ಸಂತಸ ಇಮ್ಮಡಿಗೊಳಿಸಿದೆ. ಆದರೆ ಜಾಮೀನಿಗೆ ವಿಧಿಸಿರುವ ಷರತ್ತುಗಳು ಅನೇಕ ಕುಟುಂಬಗಳನ್ನು ಕಂಗಾಲಾಗಿಸಿದೆ.

    ಈಗಾಗಲೇ ಜೈಲು ಪಾಲಾಗಿರುವ 100 ಜನರ ಪೈಕಿ, ಬಹುತೇಕರು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವವರಾಗಿದ್ದಾರೆ. ಕೆಲ ಕುಟುಂಬಗಳಲ್ಲಿ, ಐದಾರು ಜನ ಜೈಲು ಪಾಲಾಗಿದ್ದಾರೆ. ಆದರೆ ಇದೀಗ ಪ್ರತಿಯೊಬ್ಬರು 50 ಸಾವಿರ ರೂ. ಬಾಂಡ್ ಮತ್ತು ಓರ್ವ ವ್ಯಕ್ತಿಯ ಶ್ಯೂರಿಟಿ ನೀಡಲು ಕೋರ್ಟ್ ಆದೇಶ ಹೊರಡಿಸಿದೆ. ಓರ್ವ ವ್ಯಕ್ತಿಯ ಶ್ಯೂರಿಟಿ ನೀಡಲಿಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಅನೇಕರಿಗೆ ತಲಾ 50 ಸಾವಿರ ರೂ. ಹಣ ಹೊಂದಿಸುವುದು ಕಷ್ಟವಾಗಿದೆ.

    ಗ್ರಾಮದಲ್ಲಿ ಭೀಮಮ್ಮ ಎನ್ನುವ ಮಹಿಳೆಯ ಪುತ್ರ ನಾಗರಾಜ್ ಕೂಡಾ ಜೈಲಲ್ಲಿದ್ದಾನೆ. ಕೂಲಿ ಮಾಡುತ್ತಿದ್ದ ಮಗ ಜೈಲಲ್ಲಿರುವುದರಿಂದ ಮಗನ ಜಾಮೀನಿಗಾಗಿ 50 ಸಾವಿರ ರೂ. ಹೊಂದಿಸುವುದು ಹೇಗೆ ಎನ್ನುವುದನ್ನು ತಿಳಿಯದೆ ಕಂಗಾಲಾಗಿದ್ದಾರೆ. ಇಂತಹದೇ ಸ್ಥಿತಿ ಅನೇಕ ಕುಟುಂಬಗಳಲ್ಲಿ ಇದೆ. ಜಾಮೀನು ಮಂಜೂರಾಗಿರುವುದರಿಂದ ಷರತ್ತು ಪೂರೈಸಲು ಅನೇಕರು ಪ್ರಯತ್ನ ನಡೆಸಿದ್ದು, ಹಣ ಹೊಂದಿಕೆಯಾದವರು ಬಾಂಡ್ ನೀಡಿ, ತಮ್ಮವರನ್ನು ಹೊರಗಡೆ ತರಲು ಯತ್ನ ನಡೆಸಿದ್ದಾರೆ.

    ಜೈಲು ಪಾಲಾಗಿದ್ದವರ ಕುಟುಂಬಸ್ಥರು, ಕಳೆದ ಇಪ್ಪತ್ತು ದಿನಗಳಿಂದ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದರು. ಅವರೆಲ್ಲರ ಪಾಲಿಗೆ ದೀಪಾವಳಿ ಹಬ್ಬ ಕೂಡಾ ಕರಾಳ ಹಬ್ಬವಾಗಿತ್ತು. ಆದರೆ ಇದೀಗ ಜಾಮೀನು ಸಿಕ್ಕಿರುವ ಖುಷಿ ಎಲ್ಲರಲ್ಲಿದ್ದು, ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆ ಮಾತ್ರ ಬಹುತೇಕರನ್ನು ಕಾಡುತ್ತಿದೆ.ಇದನ್ನೂ ಓದಿ: ಬೀದರ್ ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

  • ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಸೇರಿ ಮರಕುಂಬಿಯ 99 ಅಪರಾಧಿಗಳಿಗೆ ಜಾಮೀನು

    ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಸೇರಿ ಮರಕುಂಬಿಯ 99 ಅಪರಾಧಿಗಳಿಗೆ ಜಾಮೀನು

    ಧಾರವಾಡ/ಕೊಪ್ಪಳ: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕೊಪ್ಪಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಧಾರವಾಡದ (Dharwad) ಹೈಕೋರ್ಟ್ (High Court) ವಿಭಾಗೀಯ ಪೀಠ ಅಪರಾಧಿಗಳಿಗೆ ಜಾಮೀನು ನೀಡಿದೆ.

    ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಆದರೆ ಇದೀಗ 99 ಜನ ಅಪರಾಧಿಗಳ ಪೈಕಿ 98 ಜನರಿಗೆ ಧಾರವಾಡದ ಹೈಕೋರ್ಟ್ ಜಾಮೀನು ನೀಡಿದೆ.ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 5.2 ತೀವ್ರತೆಯ ಭೂಕಂಪ ದಾಖಲು

    ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ 98 ಜನ ಅಪರಾಧಿಗಳು ಅ.28 ರಂದು ಧಾರವಾಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠವು 98 ಜನ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.

    ಇದಕ್ಕೆ ಸಂಬಂಧಿಸಿದಂತೆ ವಕೀಲರು ಮಾತನಾಡಿ, ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಧಾರವಾಡ ಹೈಕೋರ್ಟ್, ಪ್ರಕರಣದ ಎ1 ಆರೋಪಿ ಮಂಜುನಾಥ ಎಂಬುವವರನ್ನು ಹೊರತುಪಡಿಸಿ, ಉಳಿದ ಎಲ್ಲ ಅಪರಾಧಿಗಳಿಗೆ ಜಾಮೀನು ನೀಡಿದೆ. ಮಂಜುನಾಥ ಜಾಮೀನಿಗೆ ಅರ್ಜಿ ಹಾಕದೇ ಇದ್ದಿದ್ದರಿಂದ ಆತನಿಗೆ ಜಾಮೀನು ದೊರೆತಿಲ್ಲ ಎಂದು ಹೇಳಿದರು.

    ಪ್ರಕರಣದ ಆರೋಪಿಗಳು ಹತ್ತು ವರ್ಷಗಳಿಂದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಘಟನೆ ಹಾಗೂ ಎಫ್‌ಐಆರ್ ದಾಖಲಾದ ಸಮಯದ ವ್ಯತ್ಯಾಸ ಮತ್ತು ಆರೋಪಿಗಳ ಗುರುತು ಪತ್ತೆ ಮಾಡಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್ ಪ್ರಮುಖವಾಗಿ ಪರಿಗಣಿಸಿದೆ. ಪ್ರತಿಯೊಬ್ಬರಿಗೂ 50 ಸಾವಿರ ರೂ. ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಹೈಕೋರ್ಟ್ ಷರತ್ತು ವಿಧಿಸಿದೆ ಎಂದು ತಿಳಿಸಿದರು.ಇದನ್ನೂ ಓದಿ: ಹಿಪ್ಪರಗಿ ಕಬಡ್ಡಿ ವೈಭವ – ಕಣ್ಮನ ಸೆಳೆದ ಅಂತರ್ ರಾಜ್ಯ ಮಹಿಳಾ ಟೂರ್ನಿ

  • ಜಾತಿ ನಿಂದನೆ ಕೇಸ್‌ನಲ್ಲಿ 98 ಮಂದಿಗೆ ಜೀವಾವಧಿ – ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ದೋಷಿ ಸಾವು

    ಜಾತಿ ನಿಂದನೆ ಕೇಸ್‌ನಲ್ಲಿ 98 ಮಂದಿಗೆ ಜೀವಾವಧಿ – ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ದೋಷಿ ಸಾವು

    ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ (Marakumbi Case) ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡು ಅಪರಾಧಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

    ರಾಮಪ್ಪ ಲಕ್ಷ್ಮಣ ಭೋವಿ (44) ಸಾವಿಗೀಡಾದ ಅಪರಾಧಿ. ಗಲಾಟೆ ಪ್ರಕರಣ ಸಂಬಂಧ ಗುರುವಾರ ಕೊಪ್ಪಳ (Koppal) ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಯಿತು. ಈ ವೇಳೆ ಅಸ್ವಸ್ಥಗೊಂಡಿದ್ದ ಅಪರಾಧಿ ರಾಮಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣದಲ್ಲಿ 98 ಜನಕ್ಕೆ ಜೀವಾವಧಿ – ಕೊಪ್ಪಳ ಜಿಲ್ಲಾ ಕೋರ್ಟ್‌ ಐತಿಹಾಸಿಕ ತೀರ್ಪು!

    ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರ ಅ.28 ರಂದು ಸಂಘರ್ಷ ನಡೆದಿತ್ತು. ದಲಿತರು ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದು ದಲಿತ ಕೇರಿಯ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಹತ್ತು ವರ್ಷಗಳ ವಾದ ಆಲಿಸಿದ ನಂತರ ಈಚೆಗೆ ತೀರ್ಪು ಪ್ರಕಟಗೊಂಡಿತ್ತು.

    ಗುರುವಾರ 101 ಜನ ಆರೋಪಿತರಿಗೆ ಕೋರ್ಟ್‌ ಶಿಕ್ಷೆ ವಿಧಿಸಿತು. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಪರಾಧಿ ರಾಮಪ್ಪ ಅಸ್ವಸ್ಥಗೊಂಡಿದ್ದರು. ಇದನ್ನೂ ಓದಿ: ಕೊಪ್ಪಳದಲ್ಲಿ ಅಸ್ಪೃಶ್ಯತೆ ಆಚರಣೆಗೆ ಗಲಭೆ ಕೇಸ್: 101 ಜನರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದ ನ್ಯಾಯಾಲಯ