Tag: marakastra film

  • ನ್ಯೂಸ್ ರಿರ್ಪೋಟರ್ ಆದ್ರು ನಟಿ ಹರ್ಷಿಕಾ ಪೂಣಚ್ಚ

    ನ್ಯೂಸ್ ರಿರ್ಪೋಟರ್ ಆದ್ರು ನಟಿ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಕನ್ನಡ ಮಾತ್ರವಲ್ಲದೇ ಬಹುಭಾಷಾ ಚಿತ್ರಗಳಲ್ಲೂ ಆಕ್ಟೀವ್ ಆಗಿರೋ ನಟಿ, ಈಗ ನ್ಯೂಸ್ ರಿರ್ಪೋಟರ್ ಆಗಿ ಬಣ್ಣ ಹಚ್ಚೋದಕ್ಕೆ ರೆಡಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಕೈಯಲ್ಲಿರಬೇಕಾದರೆ ಕನ್ನಡದ ಥ್ರೀಲರ್ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇದೀಗ ಬೋಜಪರಿ ಚಿತ್ರರಂಗದಲ್ಲೂ ಬ್ಯುಸಿಯಿರೋ ಹರ್ಷಿಕಾ, ಕನ್ನಡದ `ಮಾರಕಾಸ್ತç’ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನ್ಯೂಸ್ ರಿರ್ಪೋಟರ್ ಆಗಿ ಗಟ್ಟಿ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಎಲ್ಲೆ ಕ್ರೈಂ ನಡೆದರು ಅದನ್ನು ಭೇದಿಸುವ ಕ್ರೈಂ ವರದಿಗಾರ್ತಿ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.

    ಗುರುಮೂರ್ತಿ ಸುನಾಮಿ ನಿರ್ದೇಶನದ ಸಸ್ಪೆನ್ಸ್ ಥ್ರಿಲರ್ ಚಿತ್ರದಲ್ಲಿ ಹೊಸ ಪ್ರತಿಭೆ ಆನಂದ್ ಆರ್ಯಗೆ ನಾಯಕಿಯಾಗಿ ಹರ್ಷಿಕಾ ಕಾಣಿಸಿಕೊಳ್ಳತ್ತಿದ್ದಾರೆ. ಕ್ರೈಂ ಪ್ರಕರಣವನ್ನು ಭೇದಿಸುವ ವರದಿಗಾರ್ತಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ನಟಿ ಹರ್ಷಿಕಾ ಕೈಯಲ್ಲಿ ಎರಡು ಬೋಜಪುರಿ ಚಿತ್ರಗಳಿದ್ದು, ತಾಯ್ತ, ಓ ಪ್ರೇಮ, ಸ್ತಬ್ಧ, ಸೂಪರ್ ಆಗಿದೆ ಲವ್ ಸ್ಟೋರಿ ಚಿತ್ರಗಳು ರಿಲೀಸ್‌ಗೆ ರೆಡಿಯಿದೆ. ಇದನ್ನೂ ಓದಿ: ಹೈದರಾಬಾದ್ ನಲ್ಲಿ ‘ಕೆಜಿಎಫ್ 2’ ಡೈರೆಕ್ಟರ್ ಪ್ರಶಾಂತ್ ನೀಲ್ ಗೆ ಮನೆ ಬೇಕಾಗಿದೆ

    ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ತಿರೋ ಹರ್ಷಿಕಾ ನಟನೆಯ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಹರ್ಷಿಕಾ ಅಭಿನಯದ ಸಿನಿಮಾ ನೋಡಲು ಥ್ರೀಲ್ ಆಗಿದ್ದಾರೆ.

  • ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆ

    ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆ

    ಪುನೀತ್ ರಾಜ್ ಕುಮಾರ್ ನಿಧನಾ ನಂತರ ಅವರ ಹೆಸರಿನಲ್ಲಿ ಏನೆಲ್ಲ ಕೆಲಸಗಳು ನಡೆಯುತ್ತಿವೆ. ಸಿನಿಮಾಗಳ ಟ್ರೇಲರ್, ಟೀಸರ್, ಚಿತ್ರಗಳ ಬಿಡುಗಡೆಯಲ್ಲೂ ಪುನೀತ್ ಹೆಸರು ಮತ್ತು ಫೋಟೋ ಬಳಕೆ ಆಗುತ್ತಿದೆ. ಆದರೆ, ‘ಮಾರಕಾಸ್ತ್ರ’ ಸಿನಿಮಾದ ನಾಯಕ  ಆನಂದ್ ಆರ್ಯ ಮಾತ್ರ ಇದಕ್ಕೆ ತದ್ವಿರುದ್ಧ. ಯಾವುದೇ ಕಾರಣಕ್ಕೂ ಪುನೀತ್ ಅವರ ಹೆಸರನ್ನು ಬಳಕೆ ಮಾಡಲು ಅವರು ಇಷ್ಟಪಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    “ನಾನು ಥೇಟ್ ಪುನೀತ್ ರಾಜ್ ಕುಮಾರ್ ರೀತಿಯಲ್ಲೇ ಕಾಣುತ್ತೇನೆ, ಹಾಗೆಯೇ ಹಾವಭಾವ ಕೂಡ ಇದೆ. ಅವರಂತೆಯೇ ಡೈಲಾಗ್ ಹೇಳುತ್ತೇನೆ ಎಂದು ಅನೇಕರು ಹೇಳಿದ್ದಾರೆ. ಆದರೆ, ನನಗೆ ಹಾಗೆ ಅನಿಸುವುದಿಲ್ಲ. ಪುನೀತ್ ಅವರನ್ನು ಆದರ್ಶವಾಗಿ ತಗೆದುಕೊಳ್ಳುತ್ತೇನೆಯೇ ವಿನಃ ಅವರ ಹೆಸರನ್ನು ಎಲ್ಲಿಯೂ ದುರ್ಬಳಕೆ ಮಾಡಿಕೊಳ್ಳಲಾರೆ” ಎಂದಿದ್ದಾರೆ.  ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ

    ಇತ್ತೀಚೆಗಷ್ಟೇ ಆನಂದ್ ಆರ್ಯ ನಟನೆಯ ‘ಮಾರಕಾಸ್ತ್ರ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಅಲ್ಲಿಯೂ ಅನೇಕರು ನೀವು ಪುನೀತ್ ಅವರ ಹಾಗೆಯೇ ಕಾಣುತ್ತೀರಿ ಎಂದಾಗ, ನಕ್ಕು ಸುಮ್ಮನಾದರು ಆನಂದ್ ಆರ್ಯ. ಇದು ಇವರ ನಟನೆಯ ಎರಡನೇ ಸಿನಿಮಾ. ಗುರುಮೂರ್ತಿ ಸುನಾಮಿ ನಿರ್ದೇಶನದಲ್ಲಿ ಮಾರಕಾಸ್ತ್ರ ಸಿನಿಮಾ ಮೂಡಿ ಬರುತ್ತಿದ್ದು, ಮಾರ್ಚ್ ನಿಂದ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    ದೇಶಪ್ರೇಮ ಮತ್ತು ಲೇಖನಿಗೆ ಅದೆಷ್ಟು ಶಕ್ತಿ ಇದೆ ಎಂದು ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಿದ್ದಾರಂತೆ ನಿರ್ದೇಶಕರು. ಮಾಧುರ್ಯ ನಾಯಕಿಯಾಗಿ ನಟಿಸುತ್ತಿದ್ದರೆ, ನಟರಾಜ್ ಚಿತ್ರದ ನಿರ್ಮಾಪಕರು.