Tag: Manvitha

  • ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಉತ್ಸವಕ್ಕೆ ಅಕ್ಟೋಬರ್ 3ರಂದು ಟಗರು ಸಿನಿಮಾ ನಾಯಕಿ ಮಾನ್ವಿತಾ ಚಾಲನೆ ನೀಡಿದ್ದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು ಡಾನ್ಸ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿಗೆ ಒಪ್ಪಿದ ಮಾನ್ವಿತಾ, ಟಗರು ಸಿನಿಮಾದ ಟಗರು ಬಂತು ಟಗರು ಹಾಡಿಗೆ ವೇದಿಕೆ ಮೇಲೆ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ ಮಾಡಿಸಿ ಮಾನ್ವಿತಾ ಬಾಲಿವುಡ್‍ಗೆ ಎಂಟ್ರಿ!

    ಮಾನ್ವಿತಾ ನೃತ್ಯಕ್ಕೆ ಫಿದಾ ಆದ ವಿದ್ಯಾರ್ಥಿಗಳು, ನಿಮ್ಮೊಂದಿಗೆ ನಾವು ವೇದಿಕೆ ಮೇಲೆ ಹೆಜ್ಜೆ ಹಾಕಬಹುದಾ ಎಂದು ಕೇಳಿದರು. ಆಗ ಮಾನ್ವಿತಾ ನೃತ್ಯ ಮಾಡುತ್ತ ಬನ್ನಿ ಎಂದು ಕರೆದರು. ಮಾನ್ವಿತಾ ಕರೆದಿದ್ದೇ ತಡ ಕೆಲ ವಿದ್ಯಾರ್ಥಿಗಳು ವೇದಿಕೆಗೆ ಎಂಟ್ರಿ ಕೊಟ್ಟು ಸ್ಟೆಪ್ ಹಾಕಿದ್ದಾರೆ.

    ವೇದಿಕೆ ಮೇಲೆ ಹೆಚ್ಚಿನ ವಿದ್ಯಾರ್ಥಿಗಳು ಸೇರುತ್ತಿದ್ದಂತೆ ಉಪನ್ಯಾಸಕರು ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿದರು. ಮಾನ್ವಿತಾ ಡ್ಯಾನ್ಸ್ ವಿಡಿಯೋ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಖತ್ ವೈರಲ್ ಆಗಿದೆ.

  • ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಬೆಂಗಳೂರು: ನಮ್ಮ ನಡುವಿದ್ದೂ ನಾವ್ಯಾರೂ ಗಮನಿಸದ ರೋಚಕ ಕಥಾನಕ ಹೊಂದಿದ್ದ ಚಿತ್ರ ತಾರಕಾಸುರ. ಭರ್ಜರಿಯಾಗಿಯೇ ಓಪನಿಂಗ್ ಪಡೆದುಕೊಂಡು ಪ್ರೇಕ್ಷಕರನ್ನ ಆವರಿಸಿಕೊಂಡಿದ್ದ ಈ ಸಿನಿಮಾ ಈಗ ಐವತ್ತನೇ ದಿನ ಪೂರೈಸಿಕೊಂಡು ಯಶಸ್ಸಿನ ಓಟವನ್ನ ಮುಂದುವರೆಸಿದೆ. ಈ ಮೂಲಕ ಭರಪೂರವಾದ ಗೆಲುವೊಂದನ್ನು ತನ್ನದಾಗಿಸಿಕೊಂಡಿದೆ.

    ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರೂ ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಶ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ನರಸಿಂಹಲು ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಡ್ಯಾನಿ ಸಫಾನಿಯಂಥಾ ರಾಕ್ಷಸ ಪ್ರತಿಭೆಯ ಮುಂದೆ ನಟಿಸಿ, ಥರ ಥರದ ಶೇಡುಗಳನ್ನು ಆವಾಹಿಸಿಕೊಂಡಿರೋ ವೈಭವ್ ಪಾಲಿಗೂ ಇದು ಮಹಾ ಗೆಲುವು. ಪ್ರತಿ ಸೀನುಗಳಲ್ಲಿಯೂ ಅಚ್ಚರಿಗಳನ್ನೇ ತೆರೆದಿಡುವ ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಆದ್ದರಿಂದಲೇ ತಾರಕಾಸುರ ಐವತ್ತನೇ ದಿನದಾಚೆಗೂ ಗೆಲುವಿನ ಪಯಣ ಮುಂದುವರೆಸಿದ್ದಾನೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟಿ ಮಾನ್ವಿತಾ ಟ್ವೀಟ್ ಗೆ ಕಿಚ್ಚ ಸುದೀಪ್ ಕನ್ಫ್ಯೂಸ್

    ನಟಿ ಮಾನ್ವಿತಾ ಟ್ವೀಟ್ ಗೆ ಕಿಚ್ಚ ಸುದೀಪ್ ಕನ್ಫ್ಯೂಸ್

    ಬೆಂಗಳೂರು: ನಟಿ ಮಾನ್ವಿತಾ ಮಾಡಿದ್ದ ಟ್ವೀಟ್ ಅರ್ಥವೇನೆಂದು ತಿಳಯದೆ ಕನ್ಫ್ಯೂಸ್ ಆದ ಕಿಚ್ಚ ಸುದೀಪ್, ನೀವೇ ಅರ್ಥ ತಿಳಿಸಿ ಎಂದು ಕೇಳಿದ್ದಾರೆ.

    ನಿರ್ದೇಶಕ ಅನೂಪ್ ಭಂಡಾರಿ ಅವರು, ” ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಕೆಆರ್ ಕೆ ಶೋರೀಲ್ ನಿರ್ಮಾಣ ಮಾಡುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಬೇಕು” ಎಂದು ಟ್ವೀಟ್ ಮಾಡಿದ್ದರು.

    ಅನೂಪ್ ಭಂಡಾರಿ ಮಾಡಿದ್ದ ಟ್ವೀಟ್ ಗೆ ನಟಿ ಮಾನ್ವಿತಾ ಅವರು, “ಸೂಪರ್-ಇನ್-ದಿ-ಮಾರ್ಕೆಟ್-ಇನ್-ದಿ-ಮೆಜೆಸ್ಟಿಕ್”ಎಂದು ರೀಟ್ವೀಟ್ ಮಾಡಿದ್ದರು. ಆದರೆ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಸುದೀಪ್ ಅವರಿಗೆ ಅರ್ಥವಾಗಿಲ್ಲ. ಹೀಗಾಗಿ ಮಾನ್ವಿತಾ ಅವರಿಗೆ ಟ್ವೀಟ್ ಮಾಡಿ ಅದರ ಅರ್ಥವನ್ನು ತಿಳಿಸಿ ಎಂದು ಸುದೀಪ್ ಅವರು ಕೇಳಿದ್ದಾರೆ.

    ನಟಿ ಮಾನ್ವಿತಾ ಅವರು ಮಾಡಿದ್ದ ಟ್ವೀಟ್ ಅನ್ನು ಅವರಿಗೆ ಟ್ಯಾಗ್ ಮಾಡಿ ನಟ ಸುದೀಪ್ ಅವರು, Oxford dictionary ಬಿಟ್ಟು ಇಂಗ್ಲೀಷ್ ನಲ್ಲಿ ದಯವಿಟ್ಟು ಇದರ ಅರ್ಥವನ್ನು ವಿವರಿಸಿ” ಎಂದು ಫನ್ನಿಯಾಗಿ ರೀಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • #MeToo  ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    ಬೆಂಗಳೂರು: ಬಾಲಿವುಡ್‍ನಿಂದ ಹಿಡಿದು ಸ್ಯಾಂಡಲ್‍ವುಡ್ ವರೆಗೂ `ಮಿ ಟೂ’ದೇ ಸಿಕ್ಕಾ ಪಟ್ಟೆ ಸದ್ದು, ಈಗ ಇದೇ ಟಾಪಿಕ್ ಬಗ್ಗೆ ಚಂದನವನದ ಟಗರು ಪುಟ್ಟಿ ಮಾನ್ವಿತಾ ಖಡಕ್ ಆಗಿ ಮಾತನಾಡಿದ್ದಾರೆ.

    ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಅವರು ಸಿನಿರಂಗದಲ್ಲಿ ನಡೆಯುತ್ತಿದ್ದ ‘ಮಿ ಟೂ’ ಬಗ್ಗೆ `ತಾರಕಾಸುರ’ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಮಾತನಾಡಿದ್ದಾರೆ. ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ ಆರೋಪ ಮಾಡಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಅವರು ಹೇಳಿದ್ದಾರೆ.

    ಸದ್ಯಕ್ಕೆ ಮಾನ್ವಿತಾ ನಟಿಯಾಗಿ ‘ತಾರಕಾಸುರ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಂಗೀತ ನಿರ್ದೇಶಕ ಧರ್ಮ ವಿಶ್ ಮತ್ತು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಷನ್‍ನ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ರಥಾವರ ಸಿನಿಮಾದಲ್ಲಿ `ಹುಡುಗಿ ಕಣ್ಣು ಲೋಡೆಡ್ ಗನ್ನು’ ಹಾಡಿನ ಈ ಜೋಡಿ ಮತ್ತೆ ಮೋಡಿ ಮಾಡುವುದಕ್ಕೆ ನಾಲ್ಕು ಹಾಡುಗಳನ್ನ ರೆಡಿ ಮಾಡಿಕೊಂಡಿದೆ.

    ವಿ. ನಾಗೇಂದ್ರ ಪ್ರಸಾದ್, ಬಹುದ್ಧೂರ್ ಚೇತನ್, ನಾಗತಿಹಳ್ಳಿ ಚಂದ್ರ ಶೇಖರ್, ಕವಿರಾಜ್ ತಾರಕಾಸುರನಿಗೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಶಿವಣ್ಣ ಹಾಡಿರುವ ಕನ್ನಡ ಕಲಿಯೋ ಸಾಂಗ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದೆ. ಈಗ ಸಾಧು ಕೋಕಿಲಾ ಕಂಠಸಿರಿಯಲ್ಲಿ ಮೂಡಿ ಬಂದಿರುವ ಮತ್ತೊಂದು ಹಾಡು ಸದ್ದು ಮಾಡುವ ಕ್ಲೂ ಕೊಟ್ಟಿದೆ. ಇನ್ನು ನವೀನ್ ಸಜ್ಜು ಮತ್ತು ಕೈಲಾಶ್ ಖೇರ್ ಕೂಡ ಅಷ್ಟೇ ಖಡಕ್ ಆಗಿ ಹಾಡಿದ್ದಾರೆ.

    ಅಳಿವಿನ ಅಂಚಿನಲ್ಲಿರುವ ಒಂದು ಜನಪದ ಕಲೆಗೆ ಸಿನಿಮಾ ಟಚ್ ಕೊಟ್ಟು ಥೇಟರ್ ಗೆ ಎಂಟ್ರಿ ಕೊಡುವುದಕ್ಕೆ ‘ತಾರಕಾಸುರ’ ಸಿನಿಮಾ ರೆಡಿಯಾಗಿದೆ. ಹಾಲಿವುಡ್‍ನ ಡ್ಯಾನಿ ಕೂಡ ಈ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ಸ್ಪೆಷಲ್ ಆಗಿದೆ. ಸದ್ಯದಲ್ಲೇ ಟ್ರೇಲರ್ ಕೂಡ ರಿಲೀಸ್ ಮಾಡುವ ಪ್ಲಾನ್‍ ನಲ್ಲಿ ಚಿತ್ರತಂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv