Tag: Manvita Kamath

  • ಮಾನ್ವಿತಾ, ಶ್ರೇಯಶ್ ಸೂರಿ ನಟನೆಯ ‘ಒನ್ ಅಂಡ್ ಆ ಹಾಫ್’ ಚಿತ್ರದ ಸಾಂಗ್ ರಿಲೀಸ್

    ಮಾನ್ವಿತಾ, ಶ್ರೇಯಶ್ ಸೂರಿ ನಟನೆಯ ‘ಒನ್ ಅಂಡ್ ಆ ಹಾಫ್’ ಚಿತ್ರದ ಸಾಂಗ್ ರಿಲೀಸ್

    ಸ್ಟ್ ಲುಕ್ ಮೂಲಕವೇ ಗಮನಸೆಳೆದಿರುವ ‘ಒನ್ ಅಂಡ್ ಆ ಹಾಫ್’ (One And A Half) ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ. ಗಣೇಶನಿಂದ ‘ಹೇ ನಿಧಿ’ ಎಂಬ ಮೆಲೋಡಿ ಗೀತೆ ರಿಲೀಸ್ ಮಾಡಲಾಗಿದೆ. ‘ಹೇ ನಿಧಿ’ ಅಂತಾ ನಾಯಕ ಶ್ರೇಯಶ್ ಸೂರಿ ಹಾಗೂ ಮಾನ್ವಿತಾ ಹರೀಶ್ (Manvita Harish) ಹೆಜ್ಜೆ ಹಾಕಿದ್ದಾರೆ. ಶ್ರೇಯಶ್ ಸೂರಿ ಪದ ಪೊಣಿಸಿರುವ ಹಾಡಿಗೆ ಶ್ರೀರಾಜ್ ಧ್ವನಿಯಾಗಿದ್ದಾರೆ.

    ನವ-ಯುವ ಪ್ರತಿಭೆಗಳ ಜೊತೆ ಪ್ರತಿಭಾನ್ವಿತರು ಸೇರಿ ಮಾಡಿರುವ `ಒನ್ ಅಂಡ್ ಆ ಹಾಫ್’ ಸಿನಿಮಾಗೆ ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ತಾವೇ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಅವರೀಗ ಶ್ರೇಯಸ್ ಚಿಂಗಾ ಬದಲಾಗಿ ಶ್ರೇಯಶ್ ಸೂರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಶ್ರೇಯಶ್ ಸೂರಿ ನಾಯಕನಾಗಿದ್ದರೇ, ಮಾನ್ವಿತಾ ಹರೀಶ್ ಕಾಮತ್, ಸಾಧು ಕೋಕಿಲಾ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್,ಅಮಾನ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ.

    ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ, ಮುಕೇಶ್ ಜೆ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಹಾಡುಗಳಿಗೆ ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ‘ಒನ್ ಅಂಡ್ ಆ ಹಾಫ್’ ಸಿನಿಮಾವನ್ನು ಸುಲಕ್ಷ್ಮಿ ಫಿಲಂಸ್ ನಡಿ ಆರ್.ಚರಣ್, ಬಿ.ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ, ಕದ್ರಿ ಮಣಿಕಂಠ್ ನಿರ್ಮಾಣ ಮಾಡುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ‘ಒನ್ ಅಂಡ್ ಆ ಹಾಫ್’ ಸಿನಿಮಾದ ರಿಲೀಸ್ ಬಗ್ಗೆ ಸದ್ಯದಲ್ಲೇ ತಿಳಿಸಲಿದೆ.

    ‘ಹೇ ನಿಧಿ’ ಮೆಲೋಡಿ ಹಾಡಿನ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಇದೇ ಸೆಪ್ಟೆಂಬರ್ 24ಕ್ಕೆ ನಾಯಕ ಶ್ರೇಯಶ್ ಸೂರಿ ಜನ್ಮದಿನದಂದು ಹೀರೋ ಇಂಟ್ರೂಡಕ್ಷನ್ ಹಾಡನ್ನು ಅನಾವರಣ ಮಾಡಲಿದೆ. ಎಂ.ಸಿ.ಬಿಜ್ಜು ಸಾಹಿತ್ಯ ರಚಿಸಿ ಈ ಹಾಡಿಗೆ ಧ್ವನಿಯಾಗಿದ್ದಾರೆ.

  • ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

    ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮದುವೆಯ ಬಳಿಕ ಪತಿ ಜೊತೆ ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ (Bali) ತೆಗೆದ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಗೂಢಚಾರಿ’ ಚಿತ್ರಕ್ಕೆ 6 ವರ್ಷದ ಸಂಭ್ರಮ- ಸೀಕ್ವೆಲ್ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಅಪ್‌ಡೇಟ್

    ನವದಂಪತಿ ಮಾನ್ವಿತಾ ಮತ್ತು ಅರುಣ್ ಜೋಡಿ ಬಾಲಿಯಲ್ಲಿ ಕಾಫಿ ಕಿಚನ್ ಸೇರಿದಂತೆ ಹಲವು ಕಡೆ ಭೇಟಿ ಕೊಟ್ಟಿದ್ದಾರೆ. ಪತಿ ಜೊತೆ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ. ಮದುವೆಯ ನಂತರ ಗೋವಾ, ಥೈಲ್ಯಾಂಡ್ ಸೇರಿದಂತೆ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಈ ಜೋಡಿಯ ಕಲರ್‌ಫುಲ್‌ ಫೋಟೋ ನೋಡಿ, ಇವರ ಮೇಲೆ ಯಾರ್‌ ಕಣ್ಣು ಬೀಳದೇ ಇರಲಿ ಎಂದು ಫ್ಯಾನ್ಸ್‌ ಆಶಿಸುತ್ತಿದ್ದಾರೆ.

    ಅಂದಹಾಗೆ, ಮೇ 1ರಂದು ಅರುಣ್ ಜೊತೆ ಮಾನ್ವಿತಾ ಕಾಮತ್ ಮದುವೆಯಾದರು. ಅಮ್ಮನ ಆಸೆಯಂತೆಯೇ ಅವರು ಮೆಚ್ಚಿದ ಹುಡುಗನನ್ನೇ ನಟಿ ಹೊಸ ಬಾಳಿಗೆ ಕಾಲಿಟ್ಟರು. ಈಗ ವೈವಾಹಿಕ ಜೀವನ ಮತ್ತು ಕೆರಿಯರ್ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

    ಸದ್ಯ ಮಾನ್ವಿತಾ ನಟನೆಯ ‘ರಾಜಸ್ತಾನ ಡೈರೀಸ್’ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದು ಕನ್ನಡದ ಜೊತೆ ಮರಾಠಿಯಲ್ಲೂ ರಿಲೀಸ್ ಆಗಲಿದೆ. ಪೃಥ್ವಿ ಅಂಬರ್ ಜೊತೆ ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾದಲ್ಲಿ ನಾಯಕಿಯಾಗಿ ಮಾನ್ವಿತಾ ನಟಿಸಿದ್ದಾರೆ.

  • ಪತಿ ಅರುಣ್ ಜೊತೆ ಬಾಲಿಯಲ್ಲಿ ಮಾನ್ವಿತಾ ಕಾಮತ್

    ಪತಿ ಅರುಣ್ ಜೊತೆ ಬಾಲಿಯಲ್ಲಿ ಮಾನ್ವಿತಾ ಕಾಮತ್

    ‘ಟಗರು’ (Tagaru) ನಟಿ ಮಾನ್ವಿತಾ ಕಾಮತ್ (Manvita Kamath) ಸದ್ಯ ಬಾಲಿಗೆ ಹಾರಿದ್ದಾರೆ. ಪತಿ ಅರುಣ್ ಜೊತೆ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಸದ್ಯ ಹನಿಮೂನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಕೇಸರಿ ಬಣ್ಣದ ಡ್ರೆಸ್ ಧರಿಸಿ ತಲೆಗೆ ಹ್ಯಾಟ್ ಹಾಕಿ ಬಾಲಿಯ (Bali) ಸುಂದರ ಜಾಗಗಳಿಗೆ ಪತಿ ಜೊತೆ ನಟಿ ಭೇಟಿ ನೀಡುತ್ತಿದ್ದಾರೆ. ಮಾನ್ವಿತಾ ಪ್ರವಾಸದ ಫೋಟೋಗೆ ಬಗೆ ಬಗೆಯ ಕಾಮೆಂಟ್ಸ್ ಹರಿದು ಬಂದಿದೆ. ಇದನ್ನೂ ಓದಿ:ಈ ಕಂಡೀಷನ್‌ಗೆ ಓಕೆ ಅಂದ್ರೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಲು ಸಿದ್ಧ: ರಕುಲ್

    ಅಂದಹಾಗೆ, ಮೇ 1ರಂದು ಕಳಸದಲ್ಲಿ ಅರುಣ್ ಎಂಬುವವರ ಜೊತೆ ಮಾನ್ವಿತಾ ಕೊಂಕಣಿ ಸಂಪ್ರದಾಯಂತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ತಾಯಿಯ ಆಸೆಯಂತೆ ನಟಿ ಮದುವೆಯಾದರು.

    ಮದುವೆ ಬಳಿಕ ಪತಿಯ ಜೊತೆ ಅತ್ತೆ ಮತ್ತು ಮಾವನ ಜೊತೆ ಸೇರಿ ಗೋವಾಗೆ ತೆರಳಿದ್ದರು. ಕುಟುಂಬದ ಜೊತೆ ನಟಿ ಕಾಲ ಕಳೆದಿದ್ದರು.

  • ಮಾನ್ವಿತಾ, ಶ್ರೇಯಸ್ ಕಾಂಬಿನೇಷನ್ ನ ‘ಒನ್ ಅಂಡ್ ಹಾಫ್’ ಶೂಟಿಂಗ್ ಕಂಪ್ಲೀಟ್

    ಮಾನ್ವಿತಾ, ಶ್ರೇಯಸ್ ಕಾಂಬಿನೇಷನ್ ನ ‘ಒನ್ ಅಂಡ್ ಹಾಫ್’ ಶೂಟಿಂಗ್ ಕಂಪ್ಲೀಟ್

    ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ R. ಚರಣ್ ‘ಒನ್ ಅಂಡ್ ಹಾಫ್’ (One and Half) ಸಿನಿಮಾ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರತಿಕಾಗೋಷ್ಠಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ.

    ನಟಿ ಮಾನ್ವಿತಾ (Manvita Kamath), ನನಗೆ ಇದು ಸ್ಪೆಷಲ್ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್ ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್ ಗೆ ಕುಂತ್ರೆ ಮಣಿ ಅಣ್ಣ ಸೂಪರ್. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ 3 ಜನಕ್ಕೂ ಒಳ್ಳೆ ಬಾಂಡಿಂಗ್ ಇತ್ತು. ಶ್ರೇಯಸ್ (Shreyas Chinga) ಡೈರೆಕ್ಟರ್ ಆಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು.  ನಿರ್ದೇಶಕ ಕಂ ನಾಯಕ ಶ್ರೇಯಸ್ ಚಿಂಗಾ ಮಾತನಾಡಿ, ಇದು ತಂತ್ರಜ್ಞನರ ಸಿನಿಮಾ..ಪ್ರತಿಯೊಬ್ಬ ತಂತ್ರಜ್ಞರು ಕೂಡ ಫ್ಯಾಮಿಲಿ ತರ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನಾನು ಸಿನಿಮಾವನ್ನು ತೆರೆಗೆ ತರಲು ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ. ಈ ಸಮಯದಲ್ಲಿ ಜನ ಥಿಯೇಟರ್ ಗೆ ಬರುತ್ತಿಲ್ಲ. ನಿಮ್ಮ ಬೆಂಬಲ ನಮಗೆ ಇರಬೇಕು. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆ ಎಂದು ಅಭಿಪ್ರಾಯಪಟ್ಟರು.

    ನಿರ್ಮಾಪಕ ಆರ್.ಚರಣ್ ಸುಬ್ಬಯ್ಯ ಮಾತನಾಡಿ,  ನಾನು ಗಾಂಧಿನಗರದ ಹುಡ್ಗ. ಶ್ರೇಯಸ್ ಮಾಡಿದ ಡೆವಿಡ್ ಸಿನಿಮಾ ನೋಡಿ ಇಷ್ಟವಾಯ್ತು. ನನಗೆ ಊಹೆ ಕೂಡ ಮಾಡಲು ಆಗಲಿಲ್ಲ. ಈ ರೀತಿ ಸಿನಿಮಾ ಮಾಡಿದ್ದಾನೆ ಎಂದು. ಯಾವುದಾದರೂ ಕನ್ಸೆಪ್ಟ್ ಇದ್ದರೆ ಹೇಳು ಎಂದು ಹೇಳಿದೆ. ಅವನು ಹೇಳಿದ ಕೇಳಿದ ಕಥೆ ನನಗೆ ಇಷ್ಟವಾಗಿ ಅಡ್ವಾನ್ಸ್ ಕೊಟ್ಟಿದ್ದೆ. ಒಂದೊಳ್ಳೆ ಬ್ಯೂಟಿಫುಲ್ ಸಬ್ಜೆಕ್ಟ್. ಈ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕು ಎಂದರು.

    ಈ ಹಿಂದೆ ‘ರಂಗ್‌ಬಿರಂಗಿ’, ‘ಡೆವಿಡ್’, ‘ದಿ ವೆಕೆಂಟ್ ಹೌಸ್’ ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದ ನಟ ಶ್ರೇಯಸ್ ಚಿಂಗಾ, ಇದೀಗ ‘ಒನ್ ಅಂಡ್ ಹಾಫ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಅವರು ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ‘ಒನ್ ಅಂಡ್ ಹಾಫ್’ ಕಾಮಿಡಿ ಜಾನರ್ ಸಿನಿಮಾವಾಗಿದ್ದು, ಮನರಂಜನೆ ಪಕ್ಕ ಅನ್ನೋದು ಚಿತ್ರತಂಡದ ಭರವಸೆ.ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಹೀರೋ ಹೆಸರು ಕನ್ನಡ ಅಂತಾ ಇಡಲಾಗಿದೆ.

    ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಜೊತೆಗೆ ಸಾಧು ಕೋಕಿಲಾ, ಅನಿನಾಶ್, ಸುಚೇಂದ್ರ ಪ್ರಸಾದ್, ‘ಸ್ಪರ್ಶ’ ರೇಖಾ, ಅನಂತು, ಸುಂದರಶ್ರೀ, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ‘ಒನ್ ಅಂಡ್ ಹಾಫ್’ ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ ಮಾಡುತ್ತಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾಗೆ ಸುಲಕ್ಷ್ಮೀ ಫಿಲ್ಮ್ಸ್‌ ಬ್ಯಾನರ್‌ನಡಿ ಆರ್.ಚರಣ್ ಹಣ ಹಾಕುತ್ತಿದ್ದಾರೆ. ಇಂಪನಾ ಪ್ರಸಾದ್,  ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

  • ‘ಟಗರು’ ಬ್ಯೂಟಿ ಮಾನ್ವಿತಾ ಮದುವೆಯ ಸುಂದರ ಫೋಟೋಗಳು

    ‘ಟಗರು’ ಬ್ಯೂಟಿ ಮಾನ್ವಿತಾ ಮದುವೆಯ ಸುಂದರ ಫೋಟೋಗಳು

    ಸ್ಯಾಂಡಲ್‌ವುಡ್ (Sandalwood) ನಟಿ ಮಾನ್ವಿತಾ ಕಾಮತ್ (Manvita Kamath) ಮೇ 1ರಂದು ಚಿಕ್ಕಮಗಳೂರಿನ ಕಳಸದ ದೇವಸ್ಥಾನವೊಂದರಲ್ಲಿ ಅದ್ಧೂರಿಯಾಗಿ ಮದುವೆ ಜರುಗಿದೆ. ಟಗರು ನಟಿಯ ಮದುವೆ ಸುಂದರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಕೊಂಕಣಿ ಸಾಂಪ್ರದಾಯದಂತೆ ಮಾನ್ವಿತಾ- ಅರುಣ್ ಕುಮಾರ್ (Arun Kumar) ಮದುವೆ ಜರುಗಿದೆ. ಮಾನ್ವಿತಾರ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಮಾನ್ವಿತಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ವರ ಅರುಣ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದಾರೆ. ಸಿಂಪಲ್ ಮೇಕಪ್‌ನಲ್ಲಿ ನಟಿ ಕಂಗೊಳಿಸಿದ್ದಾರೆ.

    ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ಅನುಶ್ರೀ, ನಿರಂಜನ್ ದೇಶಪಾಂಡೆ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

    ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದರು ಮಾನ್ವಿತಾ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

  • ಕಳಸದಲ್ಲಿ ಇಂದು ಹೊಸ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್

    ಕಳಸದಲ್ಲಿ ಇಂದು ಹೊಸ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್

    ಟಿ ಮಾನ್ವಿತಾ ಕಾಮತ್ (Manvita Kamath) ಮದುವೆ ಇಂದು ಚಿಕ್ಕಮಗಳೂರಿನ ಕಳಸದಲ್ಲಿ ನೆರವೇರಿದೆ. ಮೈಸೂರು ಹುಡುಗ ಅರುಣ್ ಕುಮಾರ್ (Arun) ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ. ಎರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

    ನಿನ್ನೆ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದರು. ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ(Nidhi Subbaiah), ಶ್ರುತಿ ಹರಿಹರನ್ (Shruti Hariharan), ರಿಲಾಕ್ಸ್ ಸತ್ಯ ನಟ ಪ್ರಭು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

     

    ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

  • ಮಾನ್ವಿತಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

    ಮಾನ್ವಿತಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮೇ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.

    ಮೈಸೂರಿನ ವರ ಅರುಣ್ ಕುಮಾರ್ (Arun Kumar) ಜೊತೆ ಮಾನ್ವಿತಾ ಮದುವೆಯಾಗುತ್ತಿದ್ದು, ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.

    ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ(Nidhi Subbaiah), ಶ್ರುತಿ ಹರಿಹರನ್ (Shruti Hariharan), ರಿಲಾಕ್ಸ್ ಸತ್ಯ ನಟ ಪ್ರಭು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಾಳೆ ನಡೆಯಲಿರುವ ಮದುವೆಯಲ್ಲಿ ಸ್ಟಾರ್‌ ನಟ-ನಟಿಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಅವಕಾಶವಿಲ್ಲದ ದಿನಗಳನ್ನು ಸ್ಮರಿಸಿದ ಸನ್ನಿ- ಕಣ್ಣೀರಿಟ್ಟ ಬಾಬಿ ಡಿಯೋಲ್

    ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದರು ಮಾನ್ವಿತಾ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

  • ಕೊನೆಗೂ ಮದುವೆಯಾಗುವ ಹುಡುಗನ ಫೋಟೋ ರಿವೀಲ್ ಮಾಡಿದ ಮಾನ್ವಿತಾ

    ಕೊನೆಗೂ ಮದುವೆಯಾಗುವ ಹುಡುಗನ ಫೋಟೋ ರಿವೀಲ್ ಮಾಡಿದ ಮಾನ್ವಿತಾ

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅರುಣ್ ಕುಮಾರ್ (Arun Kumar) ಜೊತೆ ‘ಟಗರು’ ನಟಿ ಮದುವೆಗೆ ರೆಡಿಯಾಗಿದ್ದಾರೆ. ಹಾಗಾದ್ರೆ ಹುಡುಗ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮದುವೆಯಾಗುವ ಹುಡುಗನ ಫೋಟೋ ಕೂಡ ನಟಿ ರಿವೀಲ್ ಮಾಡಿದ್ದಾರೆ.

    ಮದುವೆಗೆ ವಿಶೇಷವಾಗಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ಗೆ (Ashwini Puneeth Rajkumar) ನಟಿ ಮದುವೆಗೆ ಆಮಂತ್ರಣ ನೀಡಿದ್ದಾರೆ. ಈ ವೇಳೆ, ಮದುವೆಯಾಗುವ ಹುಡುಗ ಅರುಣ್ ಕುಮಾರ್ ಕೂಡ ಹಾಜರಿ ಹಾಕಿದ್ದಾರೆ. ಈ ಮೂಲಕ ನಟಿ ಹುಡುಗನ ಮುಖ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ನಿರ್ದೇಶಕ ವೆಟ್ರಿಮಾರನ್

    ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ. ಹಳದಿ ಶಾಸ್ತ್ರವು ಏಪ್ರಿಲ್ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ. ಮದುವೆಗೆ ಸ್ಯಾಂಡಲ್ವುಡ್ ನಟ, ನಟಿಯರು ಭಾಗಿಯಾಗಲಿದ್ದಾರೆ.

    ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದರು ಮಾನ್ವಿತಾ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

  • ಮದುವೆ ತಯಾರಿಯಲ್ಲಿ ಮಾನ್ವಿತಾ ಬ್ಯುಸಿ- ಆಮಂತ್ರಣ ಪತ್ರಿಕೆ ರಿವೀಲ್ ಮಾಡಿದ ನಟಿ

    ಮದುವೆ ತಯಾರಿಯಲ್ಲಿ ಮಾನ್ವಿತಾ ಬ್ಯುಸಿ- ಆಮಂತ್ರಣ ಪತ್ರಿಕೆ ರಿವೀಲ್ ಮಾಡಿದ ನಟಿ

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಇದೇ ಮೇ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಕುಮಾರ್ (Arun Kumar) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೀಗ ಮದುವೆ ತಯಾರಿ ಬಗ್ಗೆ ಮತ್ತು ಆಮಂತ್ರಣ ಪತ್ರಿಕೆಯನ್ನು ನಟಿ ಸೋಶಿಯಲ್‌ ಮೀಡಿಯಾದಲ್ಲಿ ರಿವೀಲ್‌  ಮಾಡಿದ್ದಾರೆ.

    ಮದುವೆಗೆ ಕೆಲವೇ ಕೆಲವು ದಿನಗಳು ಬಾಕಿಯಿದೆ. ಚಿಕ್ಕಮಗಳೂರಿನ ಕಳಸ ಮನೆಯಲ್ಲಿ ಇಂದು (ಏ.22) ನಾಂದಿ ಪೂಜೆ ಮಾಡುವ ಮೂಲಕ ಮದುವೆಯ ತಯಾರಿ ಶುರುವಾಗಿದೆ. ತಯಾರಿ ವೇಳೆ, ನಟಿಯ ಲುಕ್ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಎಂಬುದನ್ನು ಇನ್ಸ್ಟಾಗ್ರಾಂನಲ್ಲಿ ನಟಿ ರಿವೀಲ್ ಮಾಡಿದ್ದಾರೆ. ಮದುವೆಯ ದಿನ ಮುಹೂರ್ತದ ವೇಳೆ ಕೆಂಪು ಸೀರೆಯನ್ನು ಉಡಲಿದ್ದಾರೆ. ಅದನ್ನು ನಟಿ ತಿಳಿಸಿದ್ದಾರೆ. ಸದ್ಯ ಪತ್ರಿಕೆಯ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆಪ್ತರಿಗೆ ಮದುವೆ ಆಹ್ವಾನ ನೀಡುವುದರಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕಾಂಟಾಕ್ಟ್ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ ಮಾನ್ವಿತಾ. ಇದನ್ನೂ ಓದಿ:ಖ್ಯಾತ ಕಿರುತೆರೆ ನಟಿ ದಿವ್ಯಾಂಕಾಗೆ ಅಪಘಾತ: ಕಾಲಿಗೆ ಶಸ್ತ್ರ ಚಿಕಿತ್ಸೆ

    ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

    ಮಾನ್ವಿತಾ ಮತ್ತು ಅವರ ಚಿಕ್ಕಮ್ಮ ಮೈಸೂರಿನಲ್ಲಿರುವ ಅರುಣ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಮದುವೆ ಮಾತುಕತೆಯಾಗಿ ಈಗ ಮದುವೆಗೆ ವೇದಿಕೆ ಸಜ್ಜಾಗಿದೆ. ಅರುಣ್ ಕುಟುಂಬದವರು ತುಂಬ ಒಳ್ಳೆಯವರು. ಅರುಣ್ ಕೂಡ ಅದ್ಭುತ ವ್ಯಕ್ತಿ. ನನ್ನ ತಾಯಿ ಹುಡುಕಿದ ಸಂಬಂಧ ಕೂಡಿ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಮಾನ್ವಿತಾ ತಿಳಿಸಿದ್ದಾರೆ. ಅಲ್ಲದೆ, ಸಂಗೀತ ಪ್ರೇಮಿಯಾಗಿರುವ ಮಾನ್ವಿತಾಗೆ ಮೈಸೂರು ಮೂಲದ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಅರುಣ್ ಕುಮಾರ್ ಪತಿಯಾಗಿ ಸಿಗುತ್ತಿರುವುದು ಖುಷಿಯಿದೆ ಎಂದು ಮಾನ್ವಿತಾ ಮಾತನಾಡಿದ್ದಾರೆ.

    ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ. ಹಳದಿ ಶಾಸ್ತ್ರವು ಏಪ್ರಿಲ್ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ. ಮದುವೆಗೆ ಸ್ಯಾಂಡಲ್ವುಡ್ ನಟ, ನಟಿಯರು ಭಾಗಿಯಾಗಲಿದ್ದಾರೆ.

  • ಪ್ರೇಮ್ ಮತ್ತು ಮಾನ್ವಿತಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್

    ಪ್ರೇಮ್ ಮತ್ತು ಮಾನ್ವಿತಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್

    ಕೆ.ಆರ್.ಎಸ್ ಪ್ರೊಡಕ್ಷನ್ಸ್ ನ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಪ್ಪಾ ಐ ಲವ್ ಯೂ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದು, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.

    ಜೂಟಾಟ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಥರ್ವ್ ಆರ್ಯ ಅಪ್ಪಾ ಐ ಲವ್ ಯೂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಪ್ರಯತ್ನ. ಟೈಟಲ್ ಹೇಳುವಂತೆ ಇದು ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದೇ ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

     

    ಅಪ್ಪಾ ಐ ಲವ್ ಯೂ ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.