Tag: Manvita Harish

  • ‘BAD’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ಗಣೇಶ್

    ‘BAD’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ಗಣೇಶ್

    ಪಿ.ಸಿ ಶೇಖರ್ ನಿರ್ದೇಶನದ ಹತ್ತನೇ ಚಿತ್ರ ಹಾಗೂ ನಕುಲ್ ಗೌಡ (ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘BAD’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್  (Ganesh) ಫಸ್ಟ್ ಲುಕ್ (First Look) ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

    ಇದು ನಾಯಕ ಪ್ರಧಾನ ಚಿತ್ರವಲ್ಲ‌‌. ಏಳು ಮುಖ್ಯಪಾತ್ರಗಳಿವೆ.  ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ  ಅರಿಷಡ್ವರ್ಗಗಳಿರುತ್ತದೆ. ಈ ಆರು ಅರಿಷಡ್ವರ್ಗಗಳನ್ನು ಚಿತ್ರದ ಆರು ಪಾತ್ರಗಳು ಪ್ರತಿನಿಧಿಸುತ್ತದೆ. ಆ ಪೈಕಿ ಕ್ರೋಧವನ್ನು ಪ್ರತಿನಿಧಿಸುತ್ತಿರುವ ನಕುಲ್ ಗೌಡ ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

    ಸಾಮಾನ್ಯವಾಗಿ ಕ್ರೋಧವನ್ನು ಕಿರಿಚುವುದು, ಅರಚುವುದು ಮುಂತಾದ ವಿಚಿತ್ರ ರೀತಿಗಳಿಂದ ತೋರಿಸುತ್ತಾರೆ. ನಾವು ಮುಖದ ಹಾವಭಾವದಲ್ಲಿ ಕ್ರೋಧವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಇದೊಂದು ವಿಭಿನ್ನ ಕಥೆಯ ಚಿತ್ರ ಎಂದು ತಿಳಿಸಿರುವ ಮುಖ್ಯ ಪಾತ್ರಧಾರಿ ನಕುಲ್, ನನ್ನದು ಈ ಚಿತ್ರದಲ್ಲಿ ಕ್ರೋಧವನ್ನು ಪ್ರತಿನಿಧಿಸುವ ಪಾತ್ರ. ಕ್ರೋಧವನ್ನು ಚಿತ್ರದಲ್ಲಿ ಭೀಕರವಾಗಿ ತೋರಿಸಿಲ್ಲ. ನಿರ್ದೇಶಕ ಪಿ‌.ಸಿ.ಶೇಖರ್ (PC Shekhar) ಉತ್ತಮವಾದ ಕಥೆ ಮಾಡಿದ್ದಾರೆ. ಚಿತ್ರಕಥೆ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಬಹುತೇಕ ಭಾಗದ ಚಿತ್ರೀಕರಣ ಸೆಟ್ ನಲ್ಲೇ ನಡೆದಿರುವುದು ವಿಶೇಷ ಎನ್ನುತ್ತಾರೆ.

    ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ BAD ಚಿತ್ರದಲ್ಲಿ   ರೋಷಮಾನ್ ಎಫೆಕ್ಟ್ ಎಂಬ ವಿಶೇಷ ವಿಧಾನವನ್ನು ಬಳಸಿಕೊಳ್ಳಲಾಗಿದೆ‌.  ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ   ಸಚಿನ್ ಬಿ ಹೊಳಗುಂಡಿ  ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

    ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ (Nakul Gowda), ಮಾನ್ವಿತ ಹರೀಶ್ (Manvita Harish), ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಲನ್ ಇಟ್ಟುಕೊಂಡು ‘BAD’ ಸಿನಿಮಾ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್

    ವಿಲನ್ ಇಟ್ಟುಕೊಂಡು ‘BAD’ ಸಿನಿಮಾ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್

    ರೋಮಿಯೋ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ ಶೇಖರ್(P.C. Shekhar) ನಿರ್ದೇಶನದಲ್ಲಿ ನಕುಲ್ ಗೌಡ (Nakul Gowda) (ಪ್ರೀತಿಯ ರಾಯಭಾರಿ ಖ್ಯಾತಿ) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ‘BAD’. ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರ ಕನ್ನಡದಲ್ಲಿ ವಿಭಿನ್ನ ಪ್ರಯತ್ನ ಎನ್ನಬಹುದು.

    ಈ ಚಿತ್ರಕ್ಕೆ  BAD ಅಂತ ಹೆಸರಿಡಲು ಕಾರಣವಿದೆ. ಏಕೆಂದರೆ ಇದರಲ್ಲಿ ನಾಯಕ ಹಾಗೂ ನಾಯಕಿ ಅಂತ ಇಲ್ಲ. ಎಲ್ಲಾ ವಿಲನ್ ಪಾತ್ರಗಳೆ. ಅದರಲ್ಲಿ ಮುಖ್ಯ ವಿಲನ್ ಗಳಿರುತ್ತಾರಷ್ಟೆ. ರೋಷಮಾನ್ ಎಫೆಕ್ಟ್ ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ‌. ಜಪಾನ್ ನಿರ್ದೇಶಕರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಒಂದೇ ಕಥೆಯನ್ನೇ ಬೇರೆಬೇರೆಯವರು ಹೇಳುವ ವಿಧಾನ ಬೇರೆ ರೀತಿ ಆಗಿರುತ್ತದೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ನನ್ನ ನಿರ್ದೇಶನದ ಹತ್ತನೇ ಚಿತ್ರ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನನ್ನ ನಿರ್ದೇಶನದ ಹತ್ತು ಚಿತ್ರಗಳಲ್ಲಿ ಒಂಬತ್ತು ಚಿತ್ರಗಳಿಗೆ ಅರ್ಜುನ್ ಜನ್ಯ ಅವರೆ ಸಂಗೀತ ನೀಡಿದ್ದಾರೆ. ನಾನೇ ಕಥೆ, ಚಿತ್ರಕಥೆ ರಚಿಸಿದ್ದೇನೆ.  ಸಂಕಲನವನ್ನು ಮಾಡುತ್ತಿದ್ದೇನೆ. ನನ್ನ ಹಿಂದಿನ ರಾಗ ಹಾಗೂ ದಿ ಟೆರರಿಸ್ಟ್ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನವಿದೆ ಎನ್ನುತ್ತಾರೆ ಶೇಖರ್.

    ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ಬರುವ ಪಾತ್ರಗಳ ಅಭಿನಯ ನೋಡುಗರಿಗೆ ಸಹಜ ರೀತಿಯಲ್ಲಿ ಕಾಣಬೇಕು ಹಾಗೂ ಅವರ ಪಾತ್ರವನ್ನು ನೋಡಿದ ಕೂಡಲೆ, ಇವರದು ಇಂತಹುದೇ ಪಾತ್ರ ಎಂದು ಪ್ರೇಕ್ಷಕರು ಅಂದುಕೊಳ್ಳಬಾರದು. ಹಾಗಾಗಿ ಈ ಚಿತ್ರದಲ್ಲಿ ಹೆಚ್ಚು ಹೊಸ ಕಲಾವಿದರೆ ಅಭಿನಯಿಸುತ್ತಿದ್ದಾರೆ ಎನ್ನುವುದು ನಿರ್ದೇಶಕರ ಮಾತು.

     

    ಪ್ರೀತಿಯ ರಾಯಭಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್ (Manvita Harish), ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಹಾಗೂ ಅನೇಕ ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ‌. ಶಕ್ತಿ ಶೇಖರ್ ಈ ಚಿತ್ರದ ಛಾಯಾಗ್ರಾಹಕರು ಎಂದು ನಿರ್ದೇಶಕ ಪಿ.ಸಿ.ಶೇಖರ್ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.

  • ಅಮ್ಮನಿಗೆ ಕೊಟ್ಟ ಮಾತಿಗಾಗಿ ಸಿನಿಮಾ ರಂಗದಿಂದ ದೂರವಿದ್ದೆ : ಮಾನ್ವಿತಾ ಹರೀಶ್

    ಅಮ್ಮನಿಗೆ ಕೊಟ್ಟ ಮಾತಿಗಾಗಿ ಸಿನಿಮಾ ರಂಗದಿಂದ ದೂರವಿದ್ದೆ : ಮಾನ್ವಿತಾ ಹರೀಶ್

    ಕೆಲ ತಿಂಗಳುಗಳಿಂದ ಮಾನ್ವಿತಾ ಹರೀಶ್ ಸಿನಿಮಾ ರಂಗದಿಂದ ದೂರವಿದ್ದರು. ಟಗರು ಪುಟ್ಟಿಗೆ ಯಾವುದೇ ಸಿನಿಮಾಗಳು ಸಿಗುತ್ತಿಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಅದಕ್ಕೆ ಪೂರಕ ಎನ್ನುವಂತೆ ಮಾನ್ವಿತಾ ಹರೀಶ್ ಕೂಡ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಯಾಕೆ ಅವರು ಸಿನಿಮಾ ರಂಗದಿಂದ ಛೋಟಾ ಬ್ರೇಕ್ ತಗೆದುಕೊಂಡಿದ್ದರು ಎನ್ನುವುದಕ್ಕೆ ಕಾರಣ ಸಿಕ್ಕಿತೆ. ಆ ಕಾರಣವನ್ನೂ ಅವರೇ ಹೇಳಿಕೊಂಡಿದ್ದಾರೆ.

    ಮಾನ್ವಿತಾ ಎಜ್ಯುಕೇಷನ್ ಕಂಪ್ಲೀಟ್ ಮಾಡಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತಂತೆ. ಹಾಗಾಗಿ ಅವರು ಕೆಲ ತಿಂಗಳು ಸಿನಿಮಾ ರಂಗದಿಂದ ದೂರ ಇದ್ದರಂತೆ.  ಹಾಗಾಗಿ ಬ್ಯಾಲೆನ್ಸ್ ಮಾಡಿಕೊಂಡು ಸಿನಿಮಾಗಳ ಜೊತೆಗೆ ವಿದ್ಯಾಭ್ಯಾಸವನ್ನೂ ಅವರು ಮುಂದುವರೆಸಿದ್ದಾರಂತೆ. ಈ ಬಗ್ಗೆ ಮಾನ್ವಿತಾ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಮಾನ್ವಿತಾ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು ಎನ್ನುವುದು ಅವರ ತಾಯಿಯ ಕನಸಾಗಿತ್ತಂತೆ. ಹಾಗಾಗಿ ಅವರು ಮಾಸ್ ಕಮ್ಯೂನಿಕೇಷನ್‍ ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರಂತೆ. ಅದೂ ಡಿಸ್ಟಿಂಕ್ಷನ್‍ ನಲ್ಲಿ ಪಾಸಾಗಿದ್ದಾರಂತೆ. ಈ ಕಾರಣಕ್ಕಾಗಿಯೇ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಅಂದಿದ್ದಾರೆ. ಇನ್ಮುಂದೆ ಹಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]