Tag: manvi constituency

  • 40ಕಿ.ಮೀ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಜೆಡಿಎಸ್ ಶಾಸಕನ ಅಭಿಮಾನಿ!

    40ಕಿ.ಮೀ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಜೆಡಿಎಸ್ ಶಾಸಕನ ಅಭಿಮಾನಿ!

    ರಾಯಚೂರು: ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಅವರ ಅಭಿಮಾನಿ 40 ಕಿ.ಮೀ ವರೆಗೆ ದೀಡ್ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.

    ಮಾನ್ವಿಯ ಅತ್ತನೂರು ಗ್ರಾಮದ ಚನ್ನಪ್ಪ ಈ ಬಾರಿ ವೆಂಕಟಪ್ಪ ನಾಯಕ್ ಗೆದ್ದರೆ ದೀಡ್ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದರು. ಹೀಗಾಗಿ ಮಾನ್ವಿ ಪಟ್ಟಣದ ಅನ್ನಮಯ್ಯ ತಾತನಿಗೆ ಹೊತ್ತಿದ್ದ ಹರಕೆ ತೀರಿಸಲು ಅತ್ತನೂರು ಗ್ರಾಮದಿಂದ ನಾಗಡದಿನ್ನಿ, ಶಾಖಾಪುರ ,ಮಾಚನೂರು ಮಾರ್ಗದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ದೀಡ್ ನಮಸ್ಕಾರ ಹಾಕಿದ್ದಾರೆ.

    ಸುಮಾರು 24 ಗಂಟೆಗಳ ಕಾಲ ದೀಡ್ ನಮಸ್ಕಾರ ಹಾಕಿ ಅನ್ನಮಯ್ಯ ತಾತ ದೇವಸ್ಥಾನ ತಲುಪಿ ಹರಕೆ ತೀರಿಸಿದ್ದಾರೆ.