Tag: Manushi Chiller

  • ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಟಿಸಲಿದ್ದಾರೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಟಿಸಲಿದ್ದಾರೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್

    ಚ್ಚರಿಯ ಮೇಲೆ ಅಚ್ಚರಿ ನೀಡುತ್ತಿದೆ ಹೊಂಬಾಳೆ ಫಿಲ್ಮ್ಸ್. ಈಗಾಗಲೇ ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಕೆಜಿಎಫ್ 2 ಸಾವಿರಾರು ಕೋಟಿ ಗಳಿಸಿದ ನಂತರ ಭಾರತೀಯ ಸಿನಿಮಾ ರಂಗವನ್ನೇ ಹೊಂಬಾಳೆ ಫಿಲ್ಮ್ಸ್ ಆವರಿಸಿಕೊಳ್ಳುತ್ತಿದೆ. ಈ ನಡುವೆ ಮತ್ತೊಂದು ಅಚ್ಚರಿಯ ಸುದ್ದಿ ಸಿಕ್ಕಿದೆ. ನಿನ್ನೆಯಷ್ಟೇ ಸದ್ದಿಲ್ಲದೇ ಹೊಂಬಾಳೆ ಫಿಲ್ಮ್ಸ್ ಕಚೇರಿಗೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಭೇಟಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ಮಾನುಷಿ ನಟನೆಯ ಚೊಚ್ಚಲು ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’ ತೆರೆ ಕಂಡಿದೆ. ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತಹ ಕಮಾಯಿ ಏನೂ ಮಾಡದೇ ಇದ್ದರೂ, ಮಾನುಷಿ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿರುವ ಮಾನುಷಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ ಮಾಡಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಹೊಂಬಾಳೆ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ, ಅವರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಸದ್ಯ ಹೊಂಬಾಳೆ ಫಿಲ್ಮ್ಸ್ ಬಳಿ ಎರಡು ಮೆಗಾ ಪ್ರಾಜೆಕ್ಟ್ ಗಳಿವೆ. ಒಂದು ಸಿನಿಮಾವನ್ನು ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಸಿನಿಮಾ ಬಾಲಿವುಡ್ ನಲ್ಲಿ ಮಾತುಕತೆ ನಡೆದಿದೆ. ಈ ಎರಡು ಸಿನಿಮಾದಲ್ಲಿ ಯಾವುದಾದರೂ ಒಂದು ಸಿನಿಮಾದಲ್ಲಿ ಮಾನುಷಿ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಒಟ್ಟಿನಲ್ಲಿ ಮಾನುಷಿ ಬೆಂಗಳೂರು ಆಫೀಸಿನಲ್ಲಿ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ ಫೋಟೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹೊಂಬಾಳಿ ಫಿಲ್ಮ್ಸ್ ಪೋಸ್ಟ್ ಮಾಡಿ, ಕುತೂಹಲ ಹೆಚ್ಚಿಸಿದೆ.

    Live Tv

  • ರಿಲೀಸ್‌ಗೂ ಮುನ್ನವೇ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಕಂಟಕ: ಈ ದೇಶಗಳಲ್ಲಿ ಈ ಚಿತ್ರ ಬ್ಯಾನ್

    ರಿಲೀಸ್‌ಗೂ ಮುನ್ನವೇ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಕಂಟಕ: ಈ ದೇಶಗಳಲ್ಲಿ ಈ ಚಿತ್ರ ಬ್ಯಾನ್

    ಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ರಿಲೀಸ್‌ಗೂ ಮುನ್ನವೇ ಕಂಟಕ ಏದುರಾಗಿದೆ. ಇದೇ ಜೂನ್ 3ಕ್ಕೆ ಬಿಡುಗಡೆಗೆ ರೆಡಿಯಿರೋ ಚಿತ್ರಕ್ಕೆ ಕೆಲ ದೇಶಗಳಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ.

    ಅಕ್ಷಯ್ ಕುಮಾರ್ ನಟನೆಯ `ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ, ರಿಲೀಸ್‌ಗೆ ಒಂದು ದಿನ ಇರುವಾಗ ಕೆಲ ದೇಶಗಳಲ್ಲಿ ಈ ಚಿತ್ರ ಬ್ಯಾನ್ ಮಾಡಲಾಗಿದೆ. ಓಮನ್ ಮತ್ತು ಕುವೈತ್‌ನಲ್ಲಿ ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ.

     

    View this post on Instagram

     

    A post shared by Akshay Kumar (@akshaykumar)

    ಐತಿಹಾಸಿಕ ಹಿನ್ನೆಲೆ ಇರುವ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಪ್ರದರ್ಶನಕ್ಕೆ ಯಾಕೆ ಅಡ್ಡಗಾಲು ಹಾಕಿದ್ದಾರೆ ಎಂಬುದುದಕ್ಕೆ ಈ ಕುರಿತು ಮಾಹಿತಿ ಸಿಕ್ಕಿಲ್ಲ. ಈಗ ರಿಲೀಸ್‌ ತಡೆ ನೀಡಿರುವ ವಿಚಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

     

    View this post on Instagram

     

    A post shared by Akshay Kumar (@akshaykumar)

    ಪೃಥ್ವಿರಾಜ್ ಚೌಹಾಣ್ ಕಥಾಹಂದರವಿರುವ ಈ ಸಿನಿಮಾಗೆ ಅಕ್ಷಯ್‌ಗೆ ಜೋಡಿಯಾಗಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಚಿತ್ರ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಜೂನ್ ೩ಕ್ಕೆ ತೆರೆ ಕಾಣಲಿದೆ. ಇನ್ನು ಈ ಎಲ್ಲಾ ಅಡೆ ತಡೆಗಳ ಮಧ್ಯೆ ಗೆದ್ದು ನಿಂತು ಬಾಲಿವುಡ್ ರಂಗಕ್ಕೆ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ಹೊಸ ಚೈತನ್ಯ ನೀಡುತ್ತಾ ಅಂತಾ ಕಾದು ನೋಡಬೇಕಿದೆ.

  • ಬಾಲಿವುಡ್ ಚೇತರಿಕೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್: ಮೋಡಿ ಮಾಡ್ತಾರಾ ಮಾಜಿ ವಿಶ್ವಸುಂದರಿ?

    ಬಾಲಿವುಡ್ ಚೇತರಿಕೆಗೆ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್: ಮೋಡಿ ಮಾಡ್ತಾರಾ ಮಾಜಿ ವಿಶ್ವಸುಂದರಿ?

    ಆರ್.ಆರ್.ಆರ್ ಮತ್ತು ಕೆಜಿಎಫ್ 2 ಸಿನಿಮಾದಿಂದಾಗಿ ಅಕ್ಷರಶಃ ನಲುಗಿದೆ ಬಾಲಿವುಡ್. ಬಿಟೌನ್ ನಲ್ಲಿ ದಕ್ಷಿಣದ ಸಿನಿಮಾಗಳು ನೂರಾರು ಕೋಟಿ ಬಾಚುತ್ತಿವೆ. ಹೀಗಾಗಿ ಅಲ್ಲಿನ ನಿರ್ಮಾಪಕರು, ನಿರ್ದೇಶಕರು ನಿದ್ದೆಗೆಟ್ಟು ಕೂತಿದ್ದಾರೆ. ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ತತ್ತರಿಸುತ್ತಿದ್ದ ಬಾಲಿವುಡ್ ನಲ್ಲಿ ಭರವಸೆಯ ಸಿನಿಮಾ ಎನ್ನುವಂತೆ ಪೃಥ್ವಿರಾಜ್ ಮೂಡಿ ಬಂದಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಇಂದು ಪೃಥ್ವಿರಾಜ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಇಡೀ ಸಿನಿಮಾ ಎಷ್ಟೊಂದು ಅದ್ಧೂರಿಯಾಗಿ ಮೂಡಿ ಬಂದಿರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಯುದ್ಧದ ಸನ್ನಿವೇಶಗಳು ಸೇರಿದಂತೆ ಹಾಕಿರುವ ಸೆಟ್ ಸಿನಿಮಾದ ಗೆಲುವಿಗೆ ಸಾಕ್ಷಿ ಅನ್ನುವಂತಿವೆ. ಹಾಗಾಗಿ ಬಾಲಿವುಡ್ ಗೆ ಈ ಸಿನಿಮಾ ಚೇತರಿಕೆಯ ಟಾನಿಕ್ ಎಂದು ಕರೆಯಲಾಗುತ್ತಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಅದ್ಭುತವಾಗಿ ಅಕ್ಷಿ ಕಾಣಿಸಿಕೊಂಡಿದ್ದಾರೆ. ಮ್ಯಾನರಿಸಂ ಮತ್ತು ಲುಕ್ ಹೇಳಿ ಮಾಡಿಸಿದಂತಿವೆ. ಅಕ್ಷಯ್ ಕುಮಾರ್ ಜತೆ ಸಂಜಯ್ ದತ್ ಮತ್ತು ಸೋನು ಸೂದ್ ಕೂಡ ಪಾತ್ರ ಮಾಡಿರುವುದರಿಂದ ಬಾಲಿವುಡ್ ಪಾಲಿಗೆ ಪೃಥ್ವಿರಾಜ್ ಸಿನಿಮಾ ಅಕ್ಷಯಪಾತ್ರೆ ಆಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಈ ಸಿನಿಮಾದ ಮೂಲಕ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಪೃಥ್ವಿರಾಜ್ ಇವರ ಚೊಚ್ಚಲು ನಟನೆಯ ಸಿನಿಮಾ. ಈ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನೇ ನಿರ್ವಹಿಸಿದ್ದಾರೆ. ಟ್ರೇಲರ್ ನಲ್ಲೂ ಈ ಪಾತ್ರವನ್ನು ಹೈಲೈಟ್ ಮಾಡಲಾಗಿದೆ. ಈ ಸಿನಿಮಾ ಇವರಿಗೆ ಬ್ರೇಕ್ ನೀಡುವ ಎಲ್ಲ ಸೂಚನೆಯನ್ನೂ ನೀಡಿದೆ.

    ಸದ್ಯ ಬಿಡುಗಡೆ ಆಗಿರುವ ಪೃಥ್ವಿರಾಜ್ ಟ್ರೇಲರ್ ಅದ್ದೂರಿ ಮೇಕಿಂಗ್ ನಿಂದ ಕೂಡಿದ್ದು, ಕಾಸ್ಟ್ಯೂಮ್, ಸೆಟ್, ಯುದ್ಧ ಮತ್ತು ಭಾರೀ ಗ್ರಾಫಿಕ್ಸ್ ಕಾರಣದಿಂದಾಗಿ ಕುತೂಹಲ ಮೂಡಿಸಿದೆ. ಈ ವರ್ಷದಲ್ಲಿ ತೆರೆ ಕಾಣುತ್ತಿರುವ ಮೊದಲ ಬಾಲಿವುಡ್ ನ ಅದ್ಧೂರಿ ಸಿನಿಮಾ ಇದಾಗಿದ್ದು, ಬಾಲಿವುಡ್ ಸಿನಿಮಾ ರಂಗಕ್ಕೆ ಹಿಡಿದಿರುವ ಗ್ರಹಣವನ್ನು ಈ ಸಿನಿಮಾ ಬಿಡಿಸಲಿದೆ.

  • ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಪ್ರಿಯಾ ವಾರಿಯರ್

    ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಪ್ರಿಯಾ ವಾರಿಯರ್

    ನವದೆಹಲಿ: ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿರೋ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ.

    ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯನ್ನ ಕೇವಲ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದರು. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪ್ರಿಯಾ ಪಾತ್ರರಾಗಿದ್ದರು.

    ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿಗೆ 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಸೇರಿದ್ದರು. ಕೇವಲ ಒಂದು ದಿನದಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನ ಪಡೆಯುವ ಮೂಲಕ ಈ ಪ್ರಸಿದ್ಧ ವ್ಯಕ್ತಿಗಳ ಸಾಲಿನಲ್ಲಿ ನಿಂತಿದ್ರು. ಒಂದೇ ದಿನದಲ್ಲಿ ಕೈಲೀ ಜೆನ್ನರ್ ರನ್ನ 8 ಲಕ್ಷ ಹಾಗೂ ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು.

    ಪ್ರಸ್ತುತ ಪ್ರಿಯಾ ವಾರಿಯರ್ 37 ಲಕ್ಷ (3.7 ಮಿಲಿಯನ್) ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದಿದ್ದು, ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನ ಹಿಂದಿಕ್ಕಿದ್ದಾರೆ. ಪ್ರಿಯಾ ಇನ್ ಸ್ಟಾಗ್ರಾಮ್ ಖಾತೆಗೆ `ಬ್ಲೂ ಟಿಕ್ ಮಾರ್ಕ್’ ಕೂಡ ಲಭಿಸಿದೆ. ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಪ್ರಸ್ತುತ 28 ಲಕ್ಷ (2.8 ಮಿಲಿಯನ್) ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಮಾನುಷಿ ಚಿಲ್ಲರ್ ಅವರಿಗಿಂತ ಪ್ರಿಯಾ ವಾರಿಯರ್ ಸುಮಾರು 9 ಲಕ್ಷ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

    ಮಾನುಷಿ ಚಿಲ್ಲರ್ 2017ರಲ್ಲಿ ಚೀನಾದ ಸನ್ಯ ಸಿಟಿಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. 2000 ಇಸವಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಅದಾಗಿ 17 ವರ್ಷಗಳ ನಂತರ ಮಾನುಷಿ ಮತ್ತೆ ವಿಶ್ವಸುಂದರಿ ಸ್ಪರ್ಧೆ ಗೆದ್ದು ಭಾರತಕ್ಕೆ ಹಮ್ಮೆ ತಂದಿದ್ದರು. ನವೆಂಬರ್ 18, 2017ರಲ್ಲಿ ವಿಶ್ವಸುಂದರಿ ಸ್ಪರ್ಧೆ ಗೆದ್ದು ಮಾನುಷಿ ಭಾರತದ 6ನೇ ವಿಶ್ವಸುಂದರಿ ಆಗಿದ್ದಾರೆ.

    ಇತ್ತ ಕೇವಲ ಒಂದು ದಿನದಲ್ಲಿ `ಒರು ಆಡಾರ್ ಲವ್’ ಚಿತ್ರದ `ಮಾಣಿಕ್ಯಾ ಮಲರಾಯಾ ಪೂವಿ’ ಹಾಡಿನ ಮೂಲಕ ಪ್ರಿಯಾ ವಾರಿಯರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಚಿತ್ರದ ಈ ಹಾಡನ್ನು ವಿನೀತ್ ಶ್ರೀನಿವಾಸನ್ ಅವರು ಹಾಡಿದ್ದು, ಶಾನ್ ರೆಹಮಾನ್ ಗೀತೆ ಸಂಯೋಜನೆ ಮಾಡಿದ್ದಾರೆ.

    ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಕಂಡ ಪ್ರಿಯಾ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು. ಇದನ್ನು ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

    https://www.instagram.com/p/Be-0hR9jBqT/?hl=en&taken-by=priya.p.varrier

    https://www.instagram.com/p/BfKMOySjhKR/?hl=en&taken-by=priya.p.varrier

  • ಭಾರತಕ್ಕೆ ಮರಳಿದ ವಿಶ್ವ ಸುಂದರಿಗೆ ಸಿಕ್ತು ಅದ್ಧೂರಿ ಸ್ವಾಗತ: ಫೋಟೋಗಳಲ್ಲಿ ನೋಡಿ

    ಭಾರತಕ್ಕೆ ಮರಳಿದ ವಿಶ್ವ ಸುಂದರಿಗೆ ಸಿಕ್ತು ಅದ್ಧೂರಿ ಸ್ವಾಗತ: ಫೋಟೋಗಳಲ್ಲಿ ನೋಡಿ

    ಮುಂಬೈ: 108 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ 2017ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಮಾನುಷಿ ಛಿಲ್ಲರ್ ತಮ್ಮ ತವರಿಗೆ ಇಂದು ಮರಳಿದ್ದಾರೆ.

    ವಿದೇಶದಲ್ಲಿ ಭಾರತ ಬೀಗುವಂತೆ ಮಾಡಿದ್ದ ಮಾನುಷಿ ಛಿಲ್ಲರ್ ಮೂಲತಃ ಹರ್ಯಾಣದವರಾಗಿದ್ದು, ಶನಿವಾರ ರಾತ್ರಿ ಸುಮಾರು 1 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರಿಗೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ.

    ಮಾನುಷಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಅವರಿಗೆ ಕಾಯುತ್ತಿದ್ದರು. ಬಂದ ತಕ್ಷಣ ಅಭಿಮಾನಿಗಳು `ಇಂಡಿಯಾ, ಇಂಡಿಯಾ’ ಎಂದು ಹೆಮ್ಮೆಯಿಂದ ಕೂಗಿದ್ದಾರೆ. ಇನ್ನೂ ಕೆಲವರು ತ್ರಿವರ್ಣ ಧ್ವಜವನ್ನು ಹಿಡಿದ್ದರು. ಜೊತೆಗೆ ಮಾನುಷಿಯವರ ಪೋಸ್ಟರ್ ಹಿಡಿದು ಸಂತಸದಿಂದ ವಿಶ್ವ ಸುಂದರಿಯನ್ನು ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ನಿಲ್ದಾಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದಂತಿತ್ತು.

    “ನಮ್ಮ ದೇಶಕ್ಕೆ ಹಿಂದಿರುಗಿರುವುದು ನನಗೆ ತುಂಬಾ ಖುಷಿಯಾಗಿದೆ. ಅದ್ಧೂರಿಯಾಗಿ ಸ್ವಾಗತ ಕೋರಿದಕ್ಕೆ ತುಂಬಾ ಧನ್ಯವಾದಗಳು” ಎಂದು ಮಾನುಷಿ ಟ್ವೀಟ್ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಚೀನಾದ ಸಾನ್ಯಾ ಸಿಟಿಯಲ್ಲಿ ಇದೇ ನವೆಂಬರ್ 18 ರಂದು ನಡೆದ ಮಿಸ್ ವಲ್ರ್ಡ್-2017 ಸ್ಪರ್ಧೆಯಲ್ಲಿ 21 ವರ್ಷದ ಮನುಷಿ ಛಿಲ್ಲರ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

    ಭಾರತದ ಮೆಡಿಕಲ್ ವಿದ್ಯಾರ್ಥಿನಿಯಾಗಿರುವ ಮನುಷಿ, 1994 ರಲ್ಲಿ ಐಶ್ವರ್ಯ ರೈ ಮಿಸ್ ವಲ್ರ್ಡ್ ಆಗಿ ಹೊರಹೊಮ್ಮಿದ್ದರು. ನಂತರ 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತ ಮುಖಿ ಹಾಗೂ 2000 ರಲ್ಲಿ ಪ್ರಿಯಾಂಕಾ ಚೋಪ್ರಾ ಮಿಸ್ ವಲ್ರ್ಡ್ ಪಟ್ಟ ಅಲಂಕರಿಸಿದ್ದರು. ಇದೀಗ 17 ವರ್ಷಗಳ ಬಳಿಕ ಮಾನುಷಿ ಭಾರತಕ್ಕೆ ವಿಶ್ವಸುಂದರಿ ಪಟ್ಟ ತಂದಿದ್ದಾರೆ. ಭಾರತದಲ್ಲಿ 17 ವರ್ಷಗಳ ನಂತರ ಮಿಸ್ ವಲ್ರ್ಡ್ ಪಟ್ಟ ದಕ್ಕಿಸಿಕೊಟ್ಟಿದ್ದಾರೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

    ಇದನ್ನು ಓದಿ: ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    https://twitter.com/stregismumbai/status/934534893115138048

    https://www.instagram.com/p/Bb7Zf-gAzDA/?hl=en&tagged=indiawelcomesmissworld