Tag: Manuranjan

  • ಮಕ್ಕಳ ಜೊತೆ ಬ್ಯಾಡ್ ಬಾಯ್ಸ್ ಆಗ್ತಾರಂತೆ ಕ್ರೇಜಿಸ್ಟಾರ್ ರವಿಚಂದ್ರನ್

    ಮಕ್ಕಳ ಜೊತೆ ಬ್ಯಾಡ್ ಬಾಯ್ಸ್ ಆಗ್ತಾರಂತೆ ಕ್ರೇಜಿಸ್ಟಾರ್ ರವಿಚಂದ್ರನ್

    ನಿನ್ನೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸದೇ ಇದ್ದರೂ, ಹಲವು ಯೋಜನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ರವಿಚಂದ್ರನ್ ಅವರ ತಾಯಿಯು ಅಗಲಿದ್ದರಿಂದ, ಆ ನೋವಿನಲ್ಲೂ ಅಭಿಮಾನಿಗಳ ಜೊತೆ ಅವರು ಬೆರೆತಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈ ಹುಟ್ಟು ಹಬ್ಬಕ್ಕೆ ರವಿ ಬೋಪಣ್ಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದ ರವಿಚಂದ್ರನ್, ಈ ಸಿನಿಮಾ ನಂತರ ಮತ್ತೊಂದು ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಈ ಸಿನಿಮಾದ ವಿಶೇಷ ಅಂದರೆ, ಮಕ್ಕಳ ಜೊತೆಗೆ ರವಿಚಂದ್ರನ್ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ಅವರು ವಿಶೇಷ ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ರವಿಚಂದ್ರನ್ ಅವರ ಜೊತೆ ಮಕ್ಕಳು ಈಗಾಗಲೇ ಪುಟ್ಟ ಪುಟ್ಟ ಪಾತ್ರಗಳಲ್ಲಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮನುರಂಜನ್ ಮತ್ತು ವಿಕ್ರಮ್ ಜೊತೆ ರವಿಚಂದ್ರನ್ ತೆರೆ ಹಂಚಿಕೊಳ್ಳುತ್ತಿದ್ದು, ಈ ಸಿನಿಮಾಗೆ ‘ಬ್ಯಾಡ್ ಬಾಯ್ಸ್’ ಎಂದು ಹೆಸರಿಟ್ಟಿದ್ದಾರೆ. ಇಂಥದ್ದೊಂದು ಹೆಸರನ್ನು ಅವರು ಇಟ್ಟಿರುವುದಕ್ಕೂ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ಸಾಮಾನ್ಯವಾಗಿ ನನ್ನ ಸಿನಿಮಾಗಳ ಶೀರ್ಷಿಕೆಗಳು ಪಾಸಿಟಿವ್ ಆಗಿರುತ್ತವೆ. ಆದರೆ, ಈ ಸಿನಿಮಾ ಹಾಗಿಲ್ಲ. ಗುಡ್ ಬಾಯ್ಸ್ ಅಂತ  ಟೈಟಲ್ ಇಡಬಹುದಿತ್ತು. ಹಾಗೆ ಇಟ್ಟರೆ ಯಾರೂ ಸಿನಿಮಾ ನೋಡಲು ಬರುವುದಿಲ್ಲ.  ಬ್ಯಾಡ್ ಬಾಯ್ಸ್ ಎಂದು ಹೆಸರಿಟ್ಟರೆ ಏನಿರಬಹುದು ಎಂದು ಕುತೂಹಲಕ್ಕಾದರೂ ಥಿಯೇಟರ್ ಗೆ ಜನ ಬರುತ್ತಾರೆ ಎನ್ನುತ್ತಾರೆ ಕ್ರೇಜಿಸ್ಟಾರ್.

  • ಕ್ರೇಜಿಸ್ಟಾರ್ ಮನೆಗೆ ಹೊಸ ಅತಿಥಿ ಎಂಟ್ರಿ

    ಕ್ರೇಜಿಸ್ಟಾರ್ ಮನೆಗೆ ಹೊಸ ಅತಿಥಿ ಎಂಟ್ರಿ

    ಬೆಂಗಳೂರು: ಇತ್ತೀಚೆಗಷ್ಟೆ ನಟಿ ರಚಿತಾ ರಾಮ್ ಬರೋಬ್ಬರಿ 1.6 ಕೋಟಿ ರೂ. ಬೆಲೆಯ ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್ 350 ಡಿ ಗ್ರ್ಯಾಂಡ್ ಎಡಿಶನ್ ಕಾರನ್ನು ಖರೀದಿಸಿದ್ದರು. ಇದೀಗ ನಟ ರವಿಚಂದ್ರನ್ ಮನೆಗೆ ಹೊಸದೊಂದು ಕಾರು ಬಂದಿದೆ.

    ಈಗಾಗಲೇ ರವಿಚಂದ್ರನ್ ಮನೆಯಲ್ಲಿ ಮೂರ್ನಾಲ್ಕು ಕಾರುಗಳಿವೆ. ಇದೀಗ ಅವರ ಮಗ ಮನುರಂಜನ್ ಹೊಸ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ತಾವು ಖರೀದಿಸಿರುವ ಕಾರಿನ ಮುಂದೆ ಮನುರಂಜನ್ ಸ್ಟೈಲ್ ಆಗಿ ನಿಂತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹೊಸ ಕಾರು ಖರೀದಿಸಿರುವ ವಿಚಾರವನ್ನು ತಿಳಿಸಿದ್ದಾರೆ.

    https://www.instagram.com/p/B5MtDCUg3dF/

    MG (Morris Garages) ಹೆಕ್ಟರ್ ಕಾರನ್ನು ಮನುರಂಜನ್ ಖರೀದಿಸಿದ್ದು, ಬರ್ಗಂಡಿ ಬಣ್ಣದ ಕಾರ್ ಇದಾಗಿದೆ. ಹೊಸ ಮಾಡೆಲ್ ಕಾರನ್ನು ಇಷ್ಟಪಟ್ಟು ಮನುರಂಜನ್ ಖರೀದಿಸಿದ್ದಾರೆ. ಆದರೆ ಈ ಕಾರಿನ ಬೆಲೆ ಅಧಿಕೃತವಾಗಿ ತಿಳಿದು ಬಂದಿಲ್ಲ.

    ಇತ್ತೀಚೆಗಷ್ಟೆ ಮನೋರಂಜನ್ ತಮ್ಮ ಹೆಸರನ್ನು ಮನುರಂಜನ್ ಎಂದು ಬದಲಾಯಿಸಿಕೊಂಡಿದ್ದಾರೆ. ಸದ್ಯಕ್ಕೆ ಮನುರಂಜನ್ ಅಭಿನಯದ ‘ಪ್ರಾರಂಭ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಇನ್ನೂ ಕೆಲ ದಿನಗಳ ಹಿಂದೆಯಷ್ಟೆ ಮನುರಂಜನ್ ಅಭಿನಯದ ‘ಮುಗಿಲ್ ಪೇಟೆ’ ಸಿನಿಮಾದ ಮುಹೂರ್ತ ನಡೆದಿದೆ.