Tag: Mantralaya temple

  • ಮಂತ್ರಾಲಯದಲ್ಲಿ 27 ದಿನಕ್ಕೆ 2.89 ಕೋಟಿ ರೂ. ಕಾಣಿಕೆ ಸಂಗ್ರಹ

    ಮಂತ್ರಾಲಯದಲ್ಲಿ 27 ದಿನಕ್ಕೆ 2.89 ಕೋಟಿ ರೂ. ಕಾಣಿಕೆ ಸಂಗ್ರಹ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Temple Mantralayam) ಕಳೆದ 27 ದಿನಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಾಣಿಕೆ ಹುಂಡಿ (Hundi) ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಒಟ್ಟು 2,89,96,295 ರೂ. ಕಾಣಿಕೆ ಸಂಗ್ರಹವಾಗಿದೆ.

    ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ 2,84,12,635 ರೂ. ಕರೆನ್ಸಿ ನೋಟುಗಳು ಹಾಗೂ 5,83,660 ರೂ ನಾಣ್ಯಗಳ ಸಂಗ್ರಹವಾಗಿದೆ. 57 ಗ್ರಾಂ ಚಿನ್ನ ಹಾಗೂ 910 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಇದನ್ನೂ ಓದಿ: ಸ್ಕೂಟರ್‌ನಲ್ಲಿ 7 ಮಕ್ಕಳನ್ನು ಒಟ್ಟಿಗೆ ಕರೆದೊಯ್ದ ವ್ಯಕ್ತಿ ವಿರುದ್ಧ ಎಫ್‍ಐಆರ್

    ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು ಹಾಗೂ ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಕಾಣಿಕೆ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

  • ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದುಬಂದಿದೆ. ಆಗಸ್ಟ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಒಟ್ಟು 2,78,80,586 ರೂಪಾಯಿ ಸಂಗ್ರಹವಾಗಿದೆ.

    ಸಂಗ್ರಹವಾದ ಕಾಣಿಕೆಯಲ್ಲಿ 5,89,300 ರೂ.ಗಳಷ್ಟು ನಾಣ್ಯಗಳು ಹಾಗೂ 2,72,91,286 ರೂ.ನಷ್ಟು ನೋಟುಗಳಿವೆ. 65 ಗ್ರಾಂ. ಬಂಗಾರ, 1.15 ಕೆ.ಜಿ ಬೆಳ್ಳಿಯಿದೆ. ಜುಲೈ ತಿಂಗಳಲ್ಲಿ ಒಟ್ಟು 1,97,21,825 ರೂ. ಸಂಗ್ರಹವಾಗಿತ್ತು, ಜೂನ್‌ನಲ್ಲಿ 2,52,33,205 ರೂಪಾಯಿ ಹಾಗೂ ಮೇ ತಿಂಗಳಲ್ಲಿ 2,27,42,499 ರೂಪಾಯಿ ಸಂಗ್ರಹವಾಗಿತ್ತು. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    ಈ ಬಾರಿ ಭಕ್ತರೊಬ್ಬರು 10 ರೂ. ನೋಟುಗಳಿಂದ ಮಾಡಿದ ಮಾಲೆಯನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದ್ದು ವಿಶೇಷ ಕಾಣಿಕೆ ಎನಿಸಿದೆ ಎಂದು ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ನಂತರ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

    ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]