Tag: Mantralaya Sri

  • ನವಾಬರು ಕೊಡುವುದಕ್ಕಿಂತ ಮೊದಲೇ ಮಂತ್ರಾಲಯ ಮಠಕ್ಕೆ ಸೇರಿದ್ದು: ಮಂತ್ರಾಲಯ ಶ್ರೀ

    ನವಾಬರು ಕೊಡುವುದಕ್ಕಿಂತ ಮೊದಲೇ ಮಂತ್ರಾಲಯ ಮಠಕ್ಕೆ ಸೇರಿದ್ದು: ಮಂತ್ರಾಲಯ ಶ್ರೀ

    ರಾಯಚೂರು: ಮಂತ್ರಾಲಯ ಮಠಕ್ಕೆ ಸಾಬ್ರು ಜಾಗ ಕೊಟ್ಟಿದ್ದು, ಬೇಡ ಅಂದ್ರೆ ಆ ಜಾಗ ಕೊಟ್ಟು ಹೋಗಿ ಅನ್ನೋ ಸಿಎಂ ಇಬ್ರಾಹಿಂ ಹೇಳಿಕೆಗೆ ಮಂತ್ರಾಲಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

    ಮಂತ್ರಾಲಯ ನಮ್ಮ ಮಠಕ್ಕೆ ತುಂಬಾ ಪೂರ್ವದಲ್ಲೇ ಬಂದಿರುವ ಜಾಗ. ನವಾಬ ಸಿದ್ದಿ ಮಸೂದ್ ಖಾನ್ ಪುನಃ ಮಠಕ್ಕೆ ಮಂತ್ರಾಲಯವನ್ನು ನೀಡಿದ್ದಾರೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ಇವಿಎಂ ತಿರುಚಬಹುದು ಅನ್ಸುತ್ತೆ: ವಿಧಾನಸಭೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

    ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು ರಾಯರಿಗಿಂತಲೂ ಪೂರ್ವದಿಂದಲೇ ಮಂತ್ರಾಲಯ ನಮ್ಮ ಮಠಕ್ಕೆ ಸೇರಿದ್ದಾಗಿದೆ. ಈ ವಿಚಾರದಲ್ಲಿ ಯಾರೂ ಶಾಂತಿ ಸೌಹಾರ್ದತೆ ಕದಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಮ್ಮಪ್ಪನ ಬಿಟ್ಟು ಯಾರಿಗೂ ನಾನು ಅಪ್ಪಾಜಿ ಎಂದಿಲ್ಲ: ಯತ್ನಾಳ್

    ಭಾರತೀಯರೆಲ್ಲರೂ ಸೌಹಾರ್ದಯುತವಾಗಿ ಬಾಳಬೇಕು. ಇಲ್ಲಸಲ್ಲದ ಗಲಭೆ ಮಾಡಿ ಶಾಂತಿಯನ್ನು ಕೆಡಿಸಬಾರದು ಎನ್ನುವ ನಿಟ್ಟಿನಲ್ಲಿ ಸಿಎಂ ಇಬ್ರಾಹಿಂ ಆ ಮಾತನ್ನು ಆಡಿದ್ದಾರೆ. ಸಿಎಂ ಇಬ್ರಾಹಿಂ ರಾಯರ ಪರಮ ಭಕ್ತರು. ರಾಯರ ಬಗ್ಗೆ ಗೌರವ ಭಕ್ತಿ ಎಲ್ಲವೂ ಅವರಿಗೆ ಇದೆ. ಅವರ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಬಾರದು. ಹಿಂದೂ, ಮುಸ್ಲಿಂ ಶಾಂತಿ ಸೌಹಾರ್ದತೆಯನ್ನು ಯಾರೂ ಕದಡಬಾರದು ಎಂದು ಮಂತ್ರಾಲಯ ಶ್ರೀಗಳು ಹೇಳಿದ್ದಾರೆ.

  • ಮಂತ್ರಾಲಯ ಶ್ರೀಗಳ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ದಾಸಸಾಹಿತ್ಯ ಸಮ್ಮೇಳನ

    ಮಂತ್ರಾಲಯ ಶ್ರೀಗಳ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ದಾಸಸಾಹಿತ್ಯ ಸಮ್ಮೇಳನ

    ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ಇಂದಿನಿಂದ ಮೂರು ದಿನಕಾಲ ದಾಸಸಾಹಿತ್ಯ ಸಮ್ಮೇಳನ ನಡೆಯಲಿದೆ.

    ಜವಾಹರ ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯಲ್ಲಿ ಸತತ ಎರಡು ವರ್ಷ ಕಾಲ ಹೇಳಿದ 25 ಟಿಪ್ಪಣಿಗಳ ಶ್ರೀಮನ್ನ್ಯಾಯಸುಧಾ ಗ್ರಂಥದ ಮಂಗಳೋತ್ಸವವನ್ನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಿದ್ವಾಂಸರಿಂದ ಶಾಸ್ತ್ರೀಯ ಚರ್ಚಾಗೋಷ್ಠಿ, ವ್ಯಾಸದಾಸ ಸಾಹಿತ್ಯದ ಉಪನ್ಯಾಸಗಳು, ವಿದ್ಯಾರ್ಥಿಗಳ ಸುಧಾನುವಾದ, ಪರೀಕ್ಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಕಾರ್ಯಕ್ರಮಕ್ಕೂ ಮುನ್ನ ಮಂತ್ರಾಲಯದ ಮಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ರಾಮದೇವರ ಪೂಜೆ ನೇರವೇರಿಸಿದ್ರು. ಈ ವೇಳೆಯಲ್ಲಿ ಮಠದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಬ್ರಾಹ್ಮಣ ಮಠಾಧಿಪತಿಗಳು ಭಾಗವಹಿಸಿದ್ರು. ಇನ್ನೂ ಮಠದಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹತ್ತಾರು ಗಣ್ಯರು ಭಾಗವಹಿಸಲಿದ್ದಾರೆ.