Tag: Mantralaya Shree

  • ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ

    ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ

    – ನಾವೆಲ್ಲರೂ ನಿದ್ರಾವಸ್ಥೆಯಿಂದ ಎಚ್ಚೆತ್ತು ಮೇಲ್ಬರಬೇಕು; ಶ್ರೀಗಳ ಕರೆ

    ರಾಯಚೂರು: ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ರಾಜ್ಯದ ಮೂವರ ಕುಟುಂಬಕ್ಕೆ ಮಠದಿಂದ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಪಹಲ್ಗಾಮ್ ದಾಳಿಯ ಕುರಿತು ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಯನ್ನ ತೀವ್ರವಾಗಿ ಖಂಡಿಸುತ್ತೇವೆ. ನಾವೆಲ್ಲಾ ಭಾರತೀಯರು ಶಾಂತಿ ಪ್ರಿಯರು. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಸಮುದಾಯದವರು ಒಂದೇ ತಾಯಿ ಮಕ್ಕಳು. ನಾವೆಲ್ಲರೂ ಒಂದೇ ನಮ್ಮಲ್ಲಿ ಬೇಧ ಭಾವನೆ ಇಲ್ಲ. ಆದರೆ ಬೇರೆ ದೇಶದವರು, ಉಗ್ರರು ಬಂದು ನಮ್ಮಲ್ಲಿ ಒಡೆದಾಳುವ ನೀತಿ ಮಾಡಿ ಜಾತಿ, ಕೋಮು ಗಲಭೆ ಸೃಷ್ಟಿಸುವ ಮೂಲಕ ಅಶಾಂತಿ ಉಂಟುಮಾಡುವ ದುಷ್ಟ ಕೃತ್ಯ ಮಾಡುತ್ತಿದ್ದಾರೆ. ಇಂಥಹ ಉಗ್ರರನ್ನ ನಾವೆಲ್ಲಾ ಸಂಘಟಿತರಾಗಿ ಎದುರಿಸಬೇಕು ಎಂದು ಕರೆ ನೀಡುತ್ತೇವೆ ಎಂದರು. ಇದನ್ನೂ ಓದಿ: Pahalgam Terrorist Attack | ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್‌, ಖರ್ಗೆ ಭಾಗಿ

    ನಮ್ಮ ಮಹಿಳೆಯರನ್ನ ರಕ್ಷಣೆ ಮಾಡಬೇಕು. ನಮ್ಮ ಧರ್ಮ, ದೇವಸ್ಥಾನ, ಮಠಮಾನ್ಯ ಶ್ರದ್ಧಾಕೇಂದ್ರಗಳನ್ನ ರಕ್ಷಣೆ ಮಾಡಬೇಕು. ನಿದ್ರಾವಸ್ಥೆಯಿಂದ ಎಚ್ಚೆತ್ತು ಮೇಲ್ಬರಬೇಕು. ಕಾಶ್ಮೀರದಲ್ಲಿ ನಡೆದ ಘಟನೆ ಎಲ್ಲಾದರೂ ನಡೆಯಬಹುದು. ಯಾರೂ ಎಚ್ಚರ ತಪ್ಪಿ ಇರಬಾರದು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ

    ಮೃತರ ಕುಟುಂಬಗಳಿಗೆ ನೈತಿಕ ಬೆಂಬಲದ ಅವಶ್ಯಕತೆಯಿದೆ. ಈ ದುಷ್ಕೃತ್ಯದ ಕಾರಣಕರ್ತರನ್ನ ಸರ್ಕಾರಗಳು ಅನ್ವೇಷಣೆ ಮಾಡಿ ಸೂಕ್ತ ಶಿಕ್ಷೆಗೆ ಒಳಪಡಿಸಬೇಕು. ಅಶಾಂತಿ ಕದಡದಂತೆ ದೇಶದಲ್ಲಿ ಭದ್ರತೆ, ಜಾಗ್ರತೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಕಾಶ್ಮೀರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.

  • ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ರಾಯಚೂರು: ಪ್ರಧಾನಿ ಮೋದಿಯಂತಹ (Narendra Modi) ನಾಯಕರು ದೇಶಕ್ಕೆ ಅನಿವಾರ್ಯ. ದೇಶಕ್ಕೆ ಮತ್ತೊಮ್ಮೆ ಅವರ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ. ಹಾಗೆಂದ ಮಾತ್ರಕ್ಕೆ ಇನ್ನೊಬ್ಬರು ಅಸಮರ್ಥರು ಅನ್ನೋ ಅರ್ಥವಲ್ಲ ಎಂದು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ (Mantralaya Shree) ಹೇಳಿದರು.

    ಮೋದಿಯನ್ನ ಮತ್ತೆ ಆರಿಸಿ ತಂದರೆ ಉಳಿತೀರಿ. ಇಲ್ಲ, ನೀವ್ಯಾರು ಉಳಿಯಲ್ಲ ಎಂಬ ಬಾಗಲಕೋಟೆಯ ಮಹಲಿಂಗೇಶ್ವರ ಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸುಬುಧೇಂದ್ರ ತೀರ್ಥ ಶ್ರೀ, ದೇಶದ ಘನತೆ ಗೌರವ, ಭದ್ರತೆ ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ಜನಮನ ಗೆದ್ದಿದ್ದಾರೆ. ಪ್ರಭಾವಶಾಲಿಯಾಗಿ, ಪ್ರಭಾವಿ ನಾಯಕರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ಮತ್ತೆ ಮೋದಿ ನಾಯಕತ್ವ ಬೇಕು ಎಂದು ಹೇಳಿರುವುದು ತಪ್ಪಲ್ಲ ಎಂದರು. ಇದನ್ನೂ ಓದಿ: ಭಾನುವಾರ ದುಬೈನಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ಸವ

    ಈಗ ಮೋದಿ ದೇಶವನ್ನ ಸುಭದ್ರ, ಸದೃಢವಾಗಿ ಮುನ್ನಡೆಸುತ್ತಿದ್ದಾರೆ. ಅವರಿಗೆ ಕ್ಷೇಮವಾಗಲಿ ಅಂತ ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ ಎಂದು ಮಂತ್ರಾಲಯದ ಶ್ರೀ ಹೇಳಿದರು.

    ಹುಲಿ ಉಗುರು (Tiger Claw Row) ವಿವಾದ ಕುರಿತು ಮಾತನಾಡಿದ ಶ್ರೀಗಳು, ವನ್ಯಜೀವಿಗಳ ರಕ್ಷಣೆ, ಪರಿಸರದ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ. ಸರ್ಕಾರ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತವಾದ ರೀತಿಯಲ್ಲಿ ವಿಚಾರ ಮಾಡುತ್ತೆ ಅಂತ ಭಾವಿಸಿದ್ದೇವೆ ಎಂದರು. ಇದನ್ನೂ ಓದಿ: ದಸರಾ ವಜ್ರಮುಷ್ಠಿ ಕಾಳಗದ ವಿಜೇತ ಚನ್ನಪಟ್ಟಣದ ಪ್ರವೀಣ್ ಜೆಟ್ಟಿಗೆ ಸನ್ಮಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೇಜಾವರಶ್ರೀ ರಾಮಮಂದಿರದ ಭೂಮಿಪೂಜೆ ಮಾಡಬೇಕು – ಮಂತ್ರಾಲಯ ಶ್ರೀ

    ಪೇಜಾವರಶ್ರೀ ರಾಮಮಂದಿರದ ಭೂಮಿಪೂಜೆ ಮಾಡಬೇಕು – ಮಂತ್ರಾಲಯ ಶ್ರೀ

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಉಸಿರಾಟ ಸಮಸ್ಯೆಯಿಂದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಮಂತ್ರಾಲಯ ಮಠಾಧೀಶ ಸುಬುಧೇದ್ರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಮಂತ್ರಾಲಯದಲ್ಲಿ ದೈನಂದಿನ ಪೂಜೆ ಮುಗಿಸಿ ಬಂದಿದ್ದೇವೆ. ಶ್ರೀಗಳನ್ನು ಕಣ್ಣಾರೆ ನೋಡಿ ಈಗ ತೃಪ್ತಿ ಆಯಿತು. ಕ್ರಮ ಕ್ರಮವಾಗಿ ಗುಣಮುಖ ಆಗ್ತಾಯಿದ್ದಾರೆ. ಮಠದ ವತಿಯಿಂದ ಹೋಮ, ಜಪ, ಧಾರ್ಮಿಕ ವಿಧಿ ವಿಧಾನ ಏರ್ಪಡಿಸಿದ್ದೇವೆ. ಶಾಖಾಮಠ, ಭಕ್ತರು ಮತ್ತು ವಿದ್ವಾಂಸರಿಗೆ ಕರೆ ಕೊಟ್ಟು ಪ್ರಾರ್ಥನೆಗಳನ್ನು ಮಾಡಿದ್ದೇವೆ. ವೈದ್ಯ ತಂಡ ತುಂಬಾ ಶ್ರಮ ವಹಿಸುತ್ತಿದೆ. ಕೆಎಂಸಿ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

    ಕಿರಿಯ ಸ್ವಾಮೀಜಿಗಳಿಗೂ ಧೈರ್ಯ ನೀಡಿದ್ದೇವೆ. ದೇವರು ಅವರನ್ನು ಬೇಗ ಗುಣಮುಖವಾಗುವಂತೆ ಮಾಡಲಿ. ಪೇಜಾವರ ಶ್ರೀ ರಾಮಮಂದಿರಕ್ಕೆ ಧಾರ್ಮಿಕ ಲೌಕಿಕ ಹೋರಾಟ ಮಾಡಿದ ಹಿರಿಯ ವ್ಯಕ್ತಿ. ರಾಮಮಂದಿರ ನಿರ್ಮಾಣವಾಗಲಿ, ಪೇಜಾವರ ಶ್ರೀಗಳೇ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿ ಎಂದು ಮಂತ್ರಾಲಯ ಸ್ವಾಮೀಜಿ ಹಾರೈಸಿದರು.