Tag: Mantrakshate

  • ಮನೆ ಮನೆಗೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ; ಆರೋಪ

    ಮನೆ ಮನೆಗೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ; ಆರೋಪ

    ವಿಜಯಪುರ: ಮನೆ ಮನೆಗೆ ಶ್ರೀರಾಮಮಂದಿರ (Ram Mandir) ಮಂತ್ರಾಕ್ಷತೆ ಹಂಚುವ ವೇಳೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮನೆ ಮನೆಗೆ ಮಂತ್ರಾಕ್ಷತೆ ಹಂಚಿಕೆ ಕಾರ್ಯ ವಿಜಯಪುರದಲ್ಲಿ ನಡೆದಿತ್ತು.

    ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಮಂತ್ರಾಕ್ಷತೆ (Mantrakshate) ಹಂಚುವ ವೇಳೆ ಹಿಂದೂ ಸಮಾಜದ ಯುವಕರ ಮೇಲೆ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಮಂತ್ರಾಕ್ಷತೆ ಹಂಚುತ್ತಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಪಟ್ಟಣದ ವಾರ್ಡ್ ನಂಬರ್ 8 ರಲ್ಲಿ ಘಟನೆ ನಡೆದಿದೆ. ಈ ವಾರ್ಡ್‌ನಲ್ಲಿ ಮುಸ್ಲಿಮರು ಅಧಿಕವಾಗಿದ್ದಾರೆ. ಈ ಏರಿಯಾದಲ್ಲಿ ಘೋಷಣೆ ಕೂಗದಂತೆ ಗಲಾಟೆ ನಡೆದಿತ್ತು‌ ಎನ್ನಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ – ಜ.22 ಕ್ಕೆ ಭೂಮಿಪೂಜೆ

    ಕಾರಣ ಆರ್‌ಎಸ್‌ಎಸ್, ವಿಹೆಚ್‌ಪಿ, ಹಿಂದೂ ಜಾಗರಣ ವೇದಿಕೆ, ಭಜರಂಗ ದಳ ಸೇರಿದಂತೆ ಇತರೆ ಹಿಂದೂ ಸಂಘಟನೆಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಘಟನೆ ಖಂಡಿಸಿ ಇಂದು ದೇವರಹಿಪ್ಪರಗಿ ಆಗಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ದೇವರಹಿಪ್ಪರಗಿ ಪಟ್ಟಣದಲ್ಲಿ ಜಾಥಾ ಮಾಡಿದ್ದಾರೆ.

    ಶ್ರೀರಾಮ ಮಂತ್ರಾಕ್ಷತೆ, ಶ್ರೀರಾಮ ಮಂತ್ರ ಜಪ ಮಾಡುತ್ತಾ ಜಾಥಾದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಈ ಮೂಲಕ ಹಿಂದೂ ಸಮಾಜದ ಯುವಕರಲ್ಲಿ ಧೈರ್ಯ ತುಂಬಲು ಹಿಂದೂಪರ ಸಂಘಟನೆಗಳು ಮುಂದಾದವು. ಹಿಂದೂ ಯುವಕರ ಮೇಲಿನ ಹಲ್ಲೆ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಕೂಡ ನಡೆದಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಹಿಂದೂ-ಮುಸ್ಲಿಂ ಸಮಾಜದ ಮುಖಂಡರನ್ನು ಕರೆದು ಪೊಲೀಸರು ಸಭೆ ನಡೆಸಿದ್ದಾರೆ. ಯಾವುದೇ ಶಾಂತಿ ಸುವ್ಯವಸ್ಥೆ ಧಕ್ಕೆಗೆ ಅವಕಾಶ ನೀಡಲ್ಲ ಎಂದು ಉಭಯ ಸಮಾಜದ ಮುಖಂಡರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಗಲಾಟೆಯಾಗಿರುವ ವಾರ್ಡ್ ನಂಬರ್ 8 ರಲ್ಲಿ ಹಿಂದೂ ಕಾರ್ಯಕರ್ತರು ಮಂತ್ರಾಕ್ಷತೆ ವಿತರಣೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

  • ಕೈದಿಗಳಿಗೆ ಮಂತ್ರಾಕ್ಷತೆ, ರಾಮ ಕಥಾ ಪುಸ್ತಕ ವಿತರಣೆ – ವಿಭಿನ್ನ ಆಚರಣೆಗೆ ಸಾಕ್ಷಿಯಾಯ್ತು ಚಾಮರಾಜನಗರದ ಜೈಲು

    ಕೈದಿಗಳಿಗೆ ಮಂತ್ರಾಕ್ಷತೆ, ರಾಮ ಕಥಾ ಪುಸ್ತಕ ವಿತರಣೆ – ವಿಭಿನ್ನ ಆಚರಣೆಗೆ ಸಾಕ್ಷಿಯಾಯ್ತು ಚಾಮರಾಜನಗರದ ಜೈಲು

    ಚಾಮರಾಜನಗರ: ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾಮರಾಜನಗರ ಬಂಧಿಖಾನೆ ವಿಭಿನ್ನ ಆಚರಣೆಗೆ ಸಾಕ್ಷಿಯಾಗಿದೆ.

    ವಿಚಾರಣಾಧೀನ ಕೈದಿಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ, ರಾಮ ಕಥಾ ಮಹಿಮೆ ಪುಸ್ತಕ ಹಾಗೂ ತುಳಸಿಮಾಲೆ ವಿತರಿಸಲಾಗಿದ್ದು ಕೈದಿಗಳ ಬಾಯಲ್ಲಿ ರಾಮ ನಾಮ ಜಪ ಮೂಡಿಬಂದಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣಗೆ ಅಗ್ನಿ ಪರೀಕ್ಷೆ; ಚುನಾವಣೆಯಲ್ಲಿ ಅಕ್ರಮ ಆರೋಪ ಪ್ರಕರಣ ಸುಪ್ರೀಂನಲ್ಲಿ ಇಂದು ವಿಚಾರಣೆ

    ನಗರದ ಜನಾರ್ಧನ ಪ್ರತಿಷ್ಠಾನ ಆಯೋಜಿಸಿದ್ದ ಈ ವಿಭಿನ್ನ ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳೂ ಆದ ನ್ಯಾಯಾಧೀಶ ಎಂ.ಶ್ರೀಧರ್ ಭಾಗಿಯಾಗಿ ಕೈದಿಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ, ರಾಮ ಕಥಾ ಮಹಿಮೆ ಪುಸ್ತಕ, ತುಳಸಿ ಜಪಮಾಲೆ ವಿತರಿಸಿದರು. ಇದನ್ನೂ ಓದಿ: Annapoorni: ರಾಮನ ಕುರಿತು ವಿವಾದಾತ್ಮಕ ಡೈಲಾಗ್- ಕೊನೆಗೂ ಮೌನ ಮುರಿದ ನಯನತಾರಾ

    ಯಾವುದೋ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಮನಃ ಪರಿವರ್ತನೆಯಾಗಿ ಹೊಸ ಜೀವನ ನಡೆಸಿ ಎಂದು ನ್ಯಾಯಾಧೀಶರು ತಿಳಿಹೇಳಿದರು. ಕೈದಿಗಳಿಗೆ ಜನಾರ್ಧನ ಪ್ರತಿಷ್ಠಾನದ ಅರ್ಚಕ ಅನಂತ್ ಪ್ರಸಾದ್‌ರಿಂದ ರಾಮ ನಾಮ ಮಂತ್ರ ಬೋಧನೆ ಮಾಡಿಸಲಾಯಿತು. ರಾಮನಾಮ ಜಪಿಸಿದ ಕೈದಿಗಳು ಭಾವುಕರಾದರು ಕಾರ್ಯಕಮಕ್ಕೂ ಮುನ್ನ ಹರಳುಕೋಟೆ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಇದನ್ನೂ ಓದಿ: ಆನೇಕಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡ ಕುಸಿತ – 20ಕ್ಕೂ ಹೆಚ್ಚು ಕಾರ್ಮಿಕರು ಗಂಭೀರ 

  • ಬಿಜೆಪಿಯಿಂದ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಅಭಿಯಾನ; ಮನೆ ಮನೆಗೆ ಮಂತ್ರಾಕ್ಷತೆ ಹಂಚಿದ ಬಿಎಸ್‌ವೈ, ವಿಜಯೇಂದ್ರ

    ಬಿಜೆಪಿಯಿಂದ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಅಭಿಯಾನ; ಮನೆ ಮನೆಗೆ ಮಂತ್ರಾಕ್ಷತೆ ಹಂಚಿದ ಬಿಎಸ್‌ವೈ, ವಿಜಯೇಂದ್ರ

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನಕ್ಕೆ ಚಾಲನೆ ಕೊಡಲಾಗಿದೆ. ರಾಮನಗರಿಯಿಂದ ತಂದಿರುವ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಣೆ ಅಭಿಯಾನದಲ್ಲಿಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa), ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra), ಶಾಸಕ ಗೋಪಾಲಯ್ಯ ಭಾಗವಹಿಸಿದ್ದರು.

    ರಾಜಧಾನಿ ಬೆಂಗಳೂರಿನಲ್ಲಿಂದು (ಭಾನುವಾರ) ಬಿಜೆಪಿ ನಾಯಕರಲ್ಲಿ ರಾಮೋತ್ಸವ ಸಡಗರ ಮನೆ ಮಾಡಿತ್ತು. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡಿರುವ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ರಾಜ್ಯ ನಾಯಕರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಡಾಲರ್ಸ್ ಕಾಲೊನಿಯ ಮನೆಮನೆಗಳಿಗೆ ಅಯೋಧ್ಯೆಯಿಂದ ತಂದ ಪವಿತ್ರ ಮಂತ್ರಾಕ್ಷತೆ ವಿತರಿಸಿದ್ರು. ಜಸ್ಟಿಸ್ ಪತ್ರಿ ಬಸನಗೌಡ ಸೇರಿ ಹಲವು ಮನೆಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿ ಮಂತ್ರಾಕ್ಷತೆ ವಿತರಿಸಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ದಿನವಾದ ಜ.22ರಂದು ಮನೆಗಳಲ್ಲಿ ಪೂಜೆ ಸಲ್ಲಿಸುವಂತೆ ಬಿಎಸ್ವೈ ಕೋರಿದರು‌. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶೇಷಾದ್ರಿಪುರಂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವುದರೊಂದಿಗೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು. ಮನೆ ಮನೆಗೆ ತೆರಳಿ ವಿಜಯೇಂದ್ರ ಮಂತ್ರಾಕ್ಷತೆ‌ ವಿತರಿಸಿದರು. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠೆಯಾಗಲಿದೆ. ಅದೇ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಂಜೆ ಮನೆ ಮುಂದೆ ಉತ್ತರಾಭಿಮುಖವಾಗಿ ಐದು ದೀಪಗಳನ್ನು ಬೆಳಗಿಸುವ ಮೂಲಕ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

    ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡಿನ ಬೋವಿಪಾಳ್ಯದ ಗಣೇಶ ದೇವಸ್ಥಾನ ಬಳಿಯಲ್ಲಿ ಇಂದು ಅಯೋಧ್ಯಾ ಶ್ರೀರಾಮ ಮಂದಿರ ಮಂತ್ರಾಕ್ಷತೆ ಮಹಾ ಅಭಿಯಾನಕ್ಕೆ ಶಾಸಕ ಕೆ.ಗೋಪಾಲಯ್ಯ ಚಾಲನೆ ನೀಡಿದರು. ಇದೇ ವೇಳೆ ಮಾಜಿ ಉಪಮೇಯರ್ ಎಸ್.ಹರೀಶ್ ಮತ್ತಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಮಂತ್ರಾಕ್ಷತೆ ವಿತರಣೆ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದು, ಬಿಜೆಪಿ ಪಾಳಯ ಸಂಭ್ರಮದಿಂದ ಪಾಲ್ಗೊಂಡಿದೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ

  • ರಾಜ್ಯದ ಜನ ಕ್ಷಮಿಸಲ್ಲ- ವಿಜಯೇಂದ್ರ ಹೀಗಂದಿದ್ಯಾಕೆ..?

    ರಾಜ್ಯದ ಜನ ಕ್ಷಮಿಸಲ್ಲ- ವಿಜಯೇಂದ್ರ ಹೀಗಂದಿದ್ಯಾಕೆ..?

    ಬೆಂಗಳೂರು: ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡ್ತೀರಾ?, ಸಮಾಜ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಅಪಾಯಕರ ರಕ್ಷಣೆ ಕುರಿತ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿನಾಶಕಾಲೇ ವಿಪರೀತ ಬುದ್ಧಿ. ಶ್ರೀ ರಾಮಮಂದಿರ ಉದ್ಘಾಟನೆ ವೇಳೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿದೆ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ ಎಂದು ಕಿಡಿಕಾರಿದರು.

    ಅಲ್ಪಸಂಖ್ಯಾತರಿಂದಲೇ ತಾವು ಅಧಿಕಾರಕ್ಕೆ ಬಂದಿರುವ ಭಾವನೆ ಕಾಂಗ್ರೆಸ್ ನಲ್ಲಿದೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆಯಲ್ಲಿ ಪೆÇಲೀಸ್ ಠಾಣೆಗೆ ಬೆಂಕಿ ಹಾಕಿದ ದೇಶದ್ರೋಹಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡ್ತೀರಾ?, ಸಮಾಜ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವುದನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮನೆ ಮನೆಗೆ ತೆರಳಿ ಅಯೋಧ್ಯೆಯ ಮಂತ್ರಾಕ್ಷತೆ ವಿತರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    ಬಿಜೆಪಿಯಿಂದ ಅಯೋಧ್ಯೆ ರಾಮಮಂದಿರದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನ ಹಿನ್ನೆಲೆಯಲ್ಲಿ ಇಂದು ವಿಜಯೇಂದ್ರ ಅವರಿಂದ ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡಲಾಗಿದೆ. ಬಳಿಕ ಶೇಷಾದ್ರಿಪುರದಲ್ಲಿ ಮನೆಮನೆಗಳಿಗೆ ಮಂತ್ರಾಕ್ಷತೆ ವಿತರಣೆ ಮಾಡಿದರು. ಮಂತ್ರಾಕ್ಷತೆ ವಿತರಣೆಗೂ ಮುನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಜಯೇಂದ್ರ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ವಿಜಯೇಂದ್ರ ಪಾಲ್ಗೊಂಡರು.

  • ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ – ಭಜನೆಯೊಂದಿಗೆ ಅದ್ಧೂರಿ ಮೆರವಣಿಗೆ

    ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ – ಭಜನೆಯೊಂದಿಗೆ ಅದ್ಧೂರಿ ಮೆರವಣಿಗೆ

    ಧಾರವಾಡ: ದೇಶದ ಹಳ್ಳಿ ಹಳ್ಳಿಗಳಲ್ಲೂ ಈಗ ರಾಮ ಜಪ ಆರಂಭಗೊಂಡಿದೆ. ಇದೇ ಜ.22 ರಂದು ಅಯೋಧ್ಯೆಯಲ್ಲಿ (Ayodhya) ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು, ಈ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ.

    ಈಗಾಗಲೇ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ (Mantrakshate) ಹಾಗೂ ಪ್ರಭು ಶ್ರೀರಾಮಚಂದ್ರನ ಫೋಟೋಗಳನ್ನು ಜ.22 ರಂದು ಪೂಜೆ ಮಾಡಲು ಎಲ್ಲೆಡೆ ವಿತರಣೆ ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಹಾಗೂ ಶ್ರೀರಾಮನ ಭಾವಚಿತ್ರಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: Ram Mandir: ಏನಿದು ಪ್ರಾಣ ಪ್ರತಿಷ್ಠೆ? ಆಚರಣೆ ಹೇಗಿರುತ್ತೆ?

    ಆರ್‌ಎಸ್‌ಎಸ್ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರೆಲ್ಲರೂ ಸೇರಿ ಭಜನಾ ಮೆರವಣಿಗೆ ಮಾಡುವ ಮೂಲಕ ಮಂತ್ರಾಕ್ಷತೆ ಮತ್ತು ಶ್ರೀರಾಮನ ಭಾವಚಿತ್ರವನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿದರು.

    ಈ ಮೆರವಣಿಗೆಯಲ್ಲಿ ಹೆಣ್ಣುಮಕ್ಕಳೂ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಂತ್ರಾಕ್ಷತೆಯ ಬಾಕ್ಸ್ ಹಿಡಿದು ಮೆರವಣಿಗೆ ಹೊರಟ ಯುವಕರ ಪಾದಕ್ಕೆ ಗ್ರಾಮಸ್ಥರು ನೀರು ಹಾಕಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಪುಣ್ಯ ಭಾವದಿಂದ ಸ್ವಾಗತಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಸಹ ಒದಗಿಸಲಾಗಿತ್ತು. ಇದನ್ನೂ ಓದಿ: Ram Mandir Inauguration: ತಿರುಪತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ

  • ಮಂತ್ರಾಕ್ಷತೆಯಾಯ್ತು ನಿರ್ಮಾಲ್ಯ ಸಾಲಿಗ್ರಾಮ!- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪವಾಡ

    ಮಂತ್ರಾಕ್ಷತೆಯಾಯ್ತು ನಿರ್ಮಾಲ್ಯ ಸಾಲಿಗ್ರಾಮ!- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪವಾಡ

    ಬಾಗಲಕೋಟೆ: ನಗರದ ವಿದ್ಯಾಗಿರಿಯ ಮನೆಯೊಂದರಲ್ಲಿ ಮಂತ್ರಾಲಯದಿಂದ ತಂದಿದ್ದ ಮಂತ್ರಾಕ್ಷತೆ ನಿರ್ಮಾಲ್ಯ ಸಾಲಿಗ್ರಾಮವಾಗಿ ಪರಿವರ್ತನೆಯಾರುವ ಪವಾಡ ಬುಧವಾರದಂದು ನಡೆದಿದೆ.

    ಬಾಗಲಕೋಟೆಯ ವಿದ್ಯಾಗಿರಿಯ ನಿವಾಸಿ ಪ್ರಹ್ಲಾದ್ ಸೀಮಿಕೇರಿ ಎಂಬವರ ಮನೆಯಲ್ಲಿ ಈ ಪವಾಡ ಜರುಗಿದೆ. ಪ್ರಹ್ಲಾದ್ ಅವರು ಮಂತ್ರಾಲಯ ಶ್ರೀ ಗುರು ರಾಘವೇಂದ್ರರಾಯರ ಪರಮ ಭಕ್ತರು. ಪ್ರಹ್ಲಾದ್ ಹಾಗೂ ಅವರ ಕುಟುಂಬ 6 ತಿಂಗಳ ಹಿಂದೆ ಮಂತ್ರಾಲಯದಿಂದ ಮಂತ್ರಾಕ್ಷತೆಯನ್ನು ಮನೆಗೆ ತಂದಿದ್ದರು. 15 ದಿನಗಳ ಹಿಂದೆ ದೇವರಿಗೆ ಪೂಜೆ ಮಾಡುವ ವೇಳೆ ಮಂತ್ರಾಕ್ಷತೆಯು ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿದೆ. ತಕ್ಷಣ ಈ ಪವಾಡವನ್ನು ಮಂತ್ರಾಲಯ ಶ್ರೀಗಳಿಗೆ ಕೆರೆ ಮಾಡಿ ಪ್ರಹ್ಲಾದ್ ತಿಳಿಸಿದ್ದಾರೆ.

    ನಂತರ ಈ ಪವಾಡ ಸತ್ಯವೆಂದು ಮಂತ್ರಾಲಯದ ಶ್ರೀ ಸುಬುಧೆಂದ್ರತೀರ್ಥರು ಖಚಿತ ಪಡಿಸುವವರೆಗೂ ಸಾಲಿಗ್ರಾಮ ವಿಚಾರವನ್ನು ಪ್ರಹ್ಲಾದ್ ಗುಟ್ಟಾಗಿಟ್ಟಿದ್ದರು. ಆದರೆ ಶ್ರೀಗಳು ನಡೆದಿರುವ ಸಾಲಿಗ್ರಾಮ ಪವಾಡ ಸತ್ಯವೆಂದು ತಿಳಿಸಿದ ಮೇಲೆ ಪವಾಡವನ್ನು ಬಹಿರಂಗ ಮಾಡಲಾಗಿದೆ. ಇಂದು ಶುಭದಿನ ರಾಘವೇಂದ್ರರ ವಾರ ಎಂದು ಪವಾಡವನ್ನು ಪ್ರಹ್ಲಾದ್ ಹಾಗೂ ಅವರ ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ.

    ಮಂತ್ರಾಕ್ಷತೆಯು ಸುಮಾರು ಹತ್ತು ನಿರ್ಮಾಲ್ಯ ಸಾಲಿಗ್ರಾಮವಾಗಿ ಬದಲಾಗಿತ್ತು. ಅದರಲ್ಲಿ ನಿತ್ಯನಿರಂತರ ಪೂಜೆಗಾಗಿ ಐದು ಸಾಲಿಗ್ರಾಮಗಳನ್ನು ಮಂತ್ರಾಲಯ ಮಠಕ್ಕೆ ನೀಡಲಾಗಿದೆ. ಈ ಪವಾಡ ರಾಘವೇಂದ್ರ ರಾಯರ ಅನುಗ್ರಹದಿಂದ ನಡೆದಿದೆ. ಬ್ರಾಹ್ಮಣ ಸಂಪ್ರದಾದಲ್ಲಿ ಪವಿತ್ರವಾದ ಸ್ಥಾನ ಪಡೆದ ಸಾಲಿಗ್ರಾಮ ದೇವರ ಸ್ವರೂಪ ಎಂದು ಪ್ರಹ್ಲಾದ್ ಹೇಳಿದ್ದಾರೆ.

    https://www.youtube.com/watch?v=AOCiD1p5AGc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv