Tag: Manthralaya

  • ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    -ಈಡೇರಲೇ ಇಲ್ಲ ಅಪ್ಪು ಆಸೆ

    ರಾಯಚೂರು: ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಹಿನ್ನೆಲೆ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ, ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪುನೀತ್ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಪುನೀತ್ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ. ಡಾ.ರಾಜ್‍ಕುಮಾರ್ ಕುಟುಂಬ ರಾಯರ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ ಮಠಕ್ಕೆ ತಪ್ಪದೇ ಬಂದು ಹೋಗುತ್ತಾರೆ. ಮೂರು ಜನ ಅಣ್ಣತಮ್ಮಂದಿರು ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದಾಗಿ ಪುನೀತ್ ಹೇಳಿದ್ದರು. ರಾಯರ ಆರಾಧನ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತೇವೆ ಎಂದಿದ್ದರು ಆದರೆ ಅದು ಈಡೇರಲೇ ಇಲ್ಲ ಎಂದರು. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು

    ಪುನೀತ್ ರಾಜ್‍ಕುಮಾರ್ ಚಿಕ್ಕವರಿದ್ದಾಗಿನಿಂದಲೂ ವಾರ ಬಂತಮ್ಮ ಗುರುವಾರ ಬಂತಮ್ಮ ಹಾಡನ್ನು ಹೇಳುತ್ತಿದ್ದರು. ಅಪ್ಪು ಅಗಲಿಕೆಯ ನೋವು ಭರಿಸುವಂತ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದರು.

    ರಾಯಚೂರಿನಲ್ಲಿ ಅಪ್ಪು ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶ್ರದ್ಧಾಂಜಲಿ ಅರ್ಪಿಸಿದರು. ನಗರದ ಅಂಬೇಡ್ಕರ್ ವೃತ್ತ ಹಾಗೂ ಗಾಂಧಿ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು