Tag: Mantar Gowda

  • ಕೊಡಗು | ಪಿಪಿಪಿ ಮಾದರಿಯಲ್ಲಿ ಕ್ಯಾತ್‌ ಲ್ಯಾಬ್‌ ಸ್ಥಾಪಿಸಲು ತಯಾರಿ

    ಕೊಡಗು | ಪಿಪಿಪಿ ಮಾದರಿಯಲ್ಲಿ ಕ್ಯಾತ್‌ ಲ್ಯಾಬ್‌ ಸ್ಥಾಪಿಸಲು ತಯಾರಿ

    ಮಡಿಕೇರಿ: ಕೊಡಗಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ PPP (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಕಾರ್ಡಿಯಾಕ್ ಯೂನಿಟ್ (ಕ್ಯಾತ್‌ ಲ್ಯಾಬ್‌ – Cardiac Unit) ಸ್ಥಾಪಿಸಲು ತಯಾರಿ ನಡೆದಿದೆ.

    ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Sharanprakash Patil) ಅವರ ಅಧ್ಯಕ್ಷತೆಯಲ್ಲಿಂದು ವಿಕಾಸ ಸೌಧದಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸುವ ಸಂಬಂಧ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ (Mantar Gowda) ಅವರು ಪಾಲ್ಗೊಂಡು ಯೋಜನೆ ಕಾರ್ಯಗತಗೊಳಿಸುವ ಸಂಭಂಧ ಚರ್ಚಿಸಿದರು.

    ಇದಕ್ಕೆ ಸಚಿವರು ಯೋಜನೆ ಪ್ರಗತಿ ವಿವರ ಪರಿಶೀಲಿಸಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾತ್‌ಲ್ಯಾಬ್‌ ಸ್ಥಾಪಿಸುವ ಸಂಬಂಧ ಅಗತ್ಯ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಿ, ಟೆಂಡರ್ ಆಹ್ಚಾನಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ಡಾ. ವೆಂಕಟೇಶ್ ಮೂರ್ತಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಡಾ.ಸುಜಾತ ರಾಥೋಡ್, ರಾಜ್ಯ ಪಿಪಿಪಿ ಕೋಶದ ನಿರ್ದೇಶಕ ಪುರುಷೋತ್ತಮ್ ಸಿಂಗ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಎ.ಜೆ ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  • `ಪಬ್ಲಿಕ್ ಟಿವಿ’ ಮನವಿಗೆ ಮಿಡಿದ ಹೃದಯ – ರುಂಡ ಕತ್ತರಿಸಿದ ಬಾಲಕಿ ಕುಟುಂಬಕ್ಕೆ ಹೊಸ ಮನೆ ಹಸ್ತಾಂತರಿಸಿದ ಮಂತರ್ ಗೌಡ

    `ಪಬ್ಲಿಕ್ ಟಿವಿ’ ಮನವಿಗೆ ಮಿಡಿದ ಹೃದಯ – ರುಂಡ ಕತ್ತರಿಸಿದ ಬಾಲಕಿ ಕುಟುಂಬಕ್ಕೆ ಹೊಸ ಮನೆ ಹಸ್ತಾಂತರಿಸಿದ ಮಂತರ್ ಗೌಡ

    – 9 ಲಕ್ಷ ರೂ. ವೆಚ್ಚದ ಮನೆ ನಿರ್ಮಿಸಿಕೊಟ್ಟ ಶಾಸಕ

    ಮಡಿಕೇರಿ: ಅಲ್ಲೊಂದು.. ಇಲ್ಲೊಂದು.. ಮನೆ ಇರೋ ಊರಿದು. ಹಸಿರಿನ ಹೊದಿಕೆ ಹೊದ್ದಿಕೊಂಡಿರುವ ಪುಟ್ಟ ಊರು. ಆದ್ರೆ ಇಂತಹ ಊರಲ್ಲಿ ಕಳೆದ ವರ್ಷ ಘನಘೋರ ಕೃತ್ಯವೊಂದು ನಡೆದುಹೋಗಿತ್ತು. ಬಾಳಿ ಬದುಕಬೇಕಿದ್ದ ಬಾಲಕಿಯೊಬ್ಬಳ ರುಂಡವನ್ನೇ ಅದೊಬ್ಬ ಪಾಪಿ ಕತ್ತರಿಸಿದ್ದ. ಊರಿಗೆ ಊರೇ ಈ ಕೃತ್ಯ ಕಂಡು ಬೆಚ್ಚಿ ಬಿದ್ದಿತ್ತು. ಈ ಕುರಿತ ವರದಿಯನ್ನ ನಿಮ್ಮ ʻಪಬ್ಲಿಕ್ ಟಿವಿʼ (PUBLiC TV) ಪ್ರಸಾರ ಮಾಡಿತ್ತು. ಅಲ್ಲದೇ ಬಾಲಕಿ (Girl) ಕುಟುಂಬಕ್ಕೆ ನ್ಯಾಯ.. ನೆರವು ಕೊಡಿಸುವಂತೆಯೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿತ್ತು. ಅದರಂತೆ ಪಬ್ಲಿಕ್‌ ಟಿವಿ ಕರೆಗೆ ಕಿವಿಗೊಟ್ಟ ಶಾಸಕ ಮಂತರ್‌ ಗೌಡ ಅವರಿಂದು ಬಾಲಕಿ ಕುಟುಂಬಸ್ಥರಿಗೆ ನೆರವಿನ ಹಸ್ತ ಚಾಚಿದ್ದಾರೆ.

    ಹೌದು. ನಿಮ್ಮಗೆಲ್ಲ ನೆನಪಿರಬೇಕು ಸೋಮವಾರಪೇಟೆ ತಾಲೂಕಿನ ಕುಂಬಾರಗಡಿ ಗ್ರಾಮದ ಬಾಲಕಿಯೊಬ್ಬಳು ಕಳೆದ ವರ್ಷ 10ನೇ ತರಗತಿಯಲ್ಲಿ ಪಾಸ್‌ ಆಗಿ ಈ ಸಂಭ್ರಮವನ್ನ ಪೋಷಕರೊಂದಿಗೆ ಹಂಚಿಕೊಳ್ಳಲು ಓಡೋಡಿ ಬರ್ತಿದ್ದಳು. ಇದೇ ಸಮಯದಲ್ಲೇ ಪಾಗಲ್ ಪ್ರೇಮಿಯೊಬ್ಬ (Lover) ಆಕೆ ತನಗೆ ಸಿಕ್ಕಲ್ಲ ಅಂತ ಭಾವಿಸಿ ಬಾಲಕಿಯ ರುಂಡವನ್ನೇ ಕತ್ತರಿಸಿಕೊಂಡು ದಟ್ಟ ಅರಣ್ಯಕ್ಕೆ ತೆರಳಿದ್ದ. ನಂತರ ಪೊಲೀಸರು ಮರದ ಮೇಲೆ ಇಟ್ಟಿದ ಬಾಲಕಿ ರುಂಡವನ್ನು ಹುಡುಕಿ ನಂತರ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ರು. ಆದರೆ ಬಾಲಕಿಯ ಕುಟುಂಬ ಮಾತ್ರ ಕಡುಬಡತನದಲ್ಲಿತ್ತು. ಗುಡಿಸಲಿನಲ್ಲಿ ವಾಸ ಮಾಡುವ ಬಾಲಕಿಯ ಕುಟುಂಬದ ಸಂಕಷ್ಟದ ಪರಿಸ್ಥಿತಿ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ನೀರಿನ ಬಾಟಲ್‌ ಸೇರಿದಂತೆ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ಬ್ಯಾನ್‌

    ಅಷ್ಟೇ ಅಲ್ಲದೇ ಸ್ಥಳೀಯ ಶಾಸಕರಿಗೆ ಆ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಿಕೋಡುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಮಂತರ್‌ಗೌಡ (Mantar Gowda) ಅವರು ಕಳೆದ ಬಾರಿ ಆ ಬಾಲಕಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಮುಂದಿನ ವರ್ಷದಲ್ಲೇ ತಮ್ಮ ಕುಟುಂಬಕ್ಕೆ ಒಂದು ಸೂರು ಕಲ್ಪಿಸುತ್ತೇನೆ ಎಂದು ಭರವಸೆ ಸಹ ನೀಡಿದ್ರು. ಅದರಂತೆ ಬಾಲಕಿ ಸತ್ತು 1 ವರ್ಷ ಕಳೆಯುತ್ತಿದ್ದಂತೆ ಬಾಲಕಿ ಮೀನಾಳ ಕುಟುಂಬಕ್ಕೆ ಹೊಸ ಮನೆಯೊಂದನ್ನ ಕಟ್ಟಿ ಇಂದು (ಜೂ.9) ಬಾಲಕಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಈ ಕೆಲಸಕ್ಕೆ ತನ್ನೊಂದಿಗೆ ಕೈಜೋಡಿಸಿದ್ದಕ್ಕೂ ಶಾಸಕ ಮಂತರ್ ಗೌಡ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಇನ್ನೂ ಶಾಸಕ ಮಂತರ್ ಗೌಡ ಮನೆ ಹಸ್ತಾಂತರ ಮಾಡುವ ವೇಳೆ ಮೃತ ಬಾಲಕಿಯ ತಂದೆ-ತಾಯಿ ಹಾಗೂ ಕುಟುಂಬಸ್ಥರ ಮೋಗದಲ್ಲಿ ಬಾಲಕಿ ಮೀನಾಳ ನೆನಪು ಮಾಡಿಕೊಂಡು ನಗುಮುಖದಲ್ಲೇ ಮನೆಯ ಒಳಗೆ ಪ್ರವೇಶ ಮಾಡಿದ್ರು. ತನ್ನ ಮಗಳ ಸಾವಿಗೆ ಕಾರಣರಾದ ಅರೋಪಿಗೆ ಶಿಕ್ಷೆ ಅಯ್ತು. ಆದರು ಮಗಳ ನೆನಪು ಪದೇ ಪದೇ ಕಾಡುತ್ತಿದೆ. ಅಷ್ಟೇ ಅಲ್ಲದೇ ಇಂತಹ ಶಾಶ್ವತವಾದ ಸೂರು ಕಲ್ಪಿಸುವುದಕ್ಕೆ ಒಂದು ರೀತಿಯಲ್ಲಿ ʻಪಬ್ಲಿಕ್ ಟಿವಿʼಯೇ ಕಾರಣ. ಮಗಳ ನೆನಪಿನಲ್ಲೇ ನಾವು ಜೀವನ ಕಳೆಯುತ್ತೇವೆ ಎಂದು ಭಾವುಕರಾದರಲ್ಲದೇ ಶಾಸಕ ಮಂತರ್‌ಗೌಡ ಅವರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

  • ನಮ್ಮ ತಂದೆ ಯಾವ್ದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಶಾಸಕ ಮಂಥರ್ ಗೌಡ

    ನಮ್ಮ ತಂದೆ ಯಾವ್ದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಶಾಸಕ ಮಂಥರ್ ಗೌಡ

    – ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ ಎಂದಿದ್ದ ಎ. ಮಂಜು

    ಮಡಿಕೇರಿ: ಜಾತಿ ಜನಗಣತಿ ವರದಿ ಜಾರಿಗೆ ತರುವ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲೇ ಆಂತಕರಿಕ ಕಚ್ಚಾಟ ಹೆಚ್ಚಾಗಿದೆ. ಪ್ರತಿಪಕ್ಷಗಳಿಂದಲೂ ವಾಗ್ದಾಳಿ ನಡೆಯುತ್ತಿದೆ. ಈ ನಡುವೆ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಕ್ಕೂ ಸಿದ್ಧ ಎಂದು ಶಾಸಕ ಎ. ಮಂಜು (A Manju) ಹೇಳಿದ್ದಾರೆ. ಆದ್ರೆ ಅವರ ಪುತ್ರ ಮಡಿಕೇರಿಯ ಕಾಂಗ್ರೆಸ್‌ ಶಾಸಕ ಮಂಥರ್‌ ಗೌಡ (Mantar Gowda) ಯಾವುದೇ ಕಾರಣಕ್ಕೂ ನಮ್ಮ ತಂದೆ ರಾಜೀನಾಮೆ ಕೊಡಲ್ಲ ಅಂದಿದ್ದಾರೆ.

    ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ಜಾತಿ ಜನಗಣತಿ (Caste Census) ವಿಚಾರವಾಗಿ ಮೊನ್ನೆ ಉಪ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಜಾತಿ ಜನಗಣತಿ ಸರ್ವೇ ಇನ್ನೊಂದು ಬಾರಿ ಮಾಡಲಿ ಎಂಬ ಚರ್ಚೆಯಾಗಿದೆ. ಬಹಳಷ್ಟು ಮಂದಿ ನಮ್ಮನೆಗೆ ಬಂದಿಲ್ಲ ಅಂತಾರೆ, ಆದ್ದರಿಂದ ಮರು ಸರ್ವೆಗೆ ಸಿಎಂ ಒಪ್ಪಿಗೆ ಸೂಚಿಸುತ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಸಿದ್ಧ: ಎ.ಮಂಜು

    ನಮ್ಮ ತಂದೆ ಅವರು ಈ ವಿಚಾರವಾಗಿ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಮ್ಮ ತಂದೆಯ ಪಕ್ಷ ಬೇರೆ ಇದೆ. ಅದಕ್ಕೆ ನಾವು ನಮ್ಮ ಪಕ್ಷವನ್ನು ಬಿಟ್ಟು ಕೋಡೋಕೆ ಆಗಲ್ಲ. ರಾಜೀನಾಮೆ ವಿಚಾರ ಅವರ ಅನಿಸಿಕೆ… ಅವರ ಪಾರ್ಟಿ.. ಅವರ ನಿಲುವು ಇರಬಹುದು. ಅದಕ್ಕೂ ನಮಗೂ ಸಂಬಂಧ‌ ಇಲ್ಲ. ನಮ್ಮ ತಂದೆ ಅವರು ಹಿರಿಯ ರಾಜಕಾರಣಿಗಳು, ಮಕ್ಕಳ ಮಾತು ಯಾವತ್ತೂ ಕೇಳುವುದಿಲ್ಲ. ಒಟ್ಟಿನಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ಕೊಡಲ್ಲ. ಜಾತಿ ಜನಗಣತಿ ವರದಿ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನುಡಿದಿದ್ದಾರೆ.

    ಶಾಸಕ ಎ. ಮಂಜು ಹೇಳಿದ್ದೇನು?
    ಈ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅಧಿಕಾರ‌ ಕೊಟ್ಟವರು ಯಾರು? ಜಾತಿಗಣತಿ ಮಾಡಬೇಕಿರೋದು ಕೇಂದ್ರ ಸರ್ಕಾರ. ರಾಜ್ಯ ಯಾಕೆ ಜನಗಣತಿ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ಮಾಡಿರೋದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ.ಇಂತಹ ಸಮೀಕ್ಷೆಯಲ್ಲಿ ಜನರ ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ಅಂಕಿಅಂಶಗಳನ್ನ ಕೊಡಬೇಕು. ಅದು ಬಿಟ್ಟು ಇವರು ಯಾಕೆ ಜಾತಿಗಣತಿ ಅಂಕಿಅಂಶಗಳನ್ನ ಕೊಡ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದೆ.ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ.ಇದು ಸರಿಯಲ್ಲ.  ಇದನ್ನೂ ಓದಿ: ಕೋಮುದ್ವೇಷ ಪ್ರಚೋದನಾ ಭಾಷಣ ಆರೋಪ; ಆಂದೋಲಾ ಶ್ರೀ ವಿರುದ್ಧ FIR ದಾಖಲು

    ಸಿದ್ದರಾಮಯ್ಯ ಅವರು ಈ ಜಾತಿಗಣತಿ ವರದಿ ಅಂಗೀಕಾರ ಮಾಡಬಾರದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ‌ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಈ ಬಗ್ಗೆ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯ ಆದ್ರೆ ನಾವು ಸಹಿಸೊಲ್ಲ. ನನಗೆ ಸಮುದಾಯದ ಮುಖ್ಯ ಶಾಸಕ ಸ್ಥಾನ ಮುಖ್ಯ ಅಲ್ಲ. ಸಮುದಾಯಕ್ಕಾಗಿ ಬೇಕಿದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ‌ಕೊಡೋಕೆ ಸಿದ್ಧ.

    ನನ್ನ ಮನೆಗೆ ಬಂದು ಸಮೀಕ್ಷೆಯೇ ಮಾಡಿಲ್ಲ. ಇದಕ್ಕೇನು ಹೇಳೋದು. ಜಯಪ್ರಕಾಶ್ ಹೆಗ್ಡೆ ಇದನ್ನ ಜಾತಿ ಸಮೀಕ್ಷೆ ಅಂತ ಹೇಳಲಿ ನೋಡೋಣ.ಡಿಕೆಶಿವಕುಮಾರ್ ಸಮುದಾಯಕ್ಕೆ ಅನ್ಯಾಯ ಮಾಡಲು ಬಿಡಬಾರದು. ಇವತ್ತಿನ ‌ಕ್ಯಾಬಿನೆಟ್‌ನಲ್ಲಿ ಇದನ್ನ ಅಂಗೀಕಾರ ‌ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಶಾಸಕ ಎ ಮಂಜು ಎಚ್ಚರಿಕೆ ಕೊಟ್ಟಿದ್ದರು.  ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

  • ಮಂಥರ್ ಗೌಡ ಗೆಲುವು – 135 ಕಿಮೀ ದೂರದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ

    ಮಂಥರ್ ಗೌಡ ಗೆಲುವು – 135 ಕಿಮೀ ದೂರದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ

    ಮಡಿಕೇರಿ: ಮಡಿಕೇರಿಯಲ್ಲಿ ಕಾಂಗ್ರೆಸ್‍ನ (Congress) ಮಂಥರ್ ಗೌಡ (Mantar Gowda) ಶಾಸಕರಾಗಿ ಆಯ್ಕೆಯಾದರೆ ಚಾಮುಂಡಿ ಬೆಟ್ಟಕ್ಕೆ (Chamundi Hill) ಪಾದಯಾತ್ರೆ ಮಾಡುವುದಾಗಿ ಹರಕೆ ಹೊತ್ತಿದ್ದ ಅಭಿಮಾನಿಗಳು ಗುರುವಾರ ಯಾತ್ರೆ ಆರಂಭಿಸಿದ್ದಾರೆ.

    ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಿಂದ ಪಾದಯಾತ್ರೆ ಆರಂಭಗೊಂಡು ಚಾಮುಂಡಿ ಬೆಟ್ಟದಲ್ಲಿ ಕೊನೆಯಾಗಲಿದೆ. ಈ ಪಾದಯಾತ್ರೆಯಲ್ಲಿ ಸಂತೋಷ್, ಅರುಣ್ ಹಾಗೂ ಮಾದಪ್ಪ ಎಂಬ ಯುವಕರು ಪಾಲ್ಗೊಂಡಿದ್ದಾರೆ. ಎರಡು ದಿನಗಳು ನಡೆಯಲಿರುವ ಈ ಪಾದಯಾತ್ರೆಯ ದಾರಿ 135 ಕಿಮೀ ಆಗಿರಲಿದೆ. ಶುಕ್ರವಾರ ಮೈಸೂರಿಗೆ (Mysuru) ಯುವಕರು ತಲುಪಲಿದ್ದು, ನಂತರ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

    ಈ ಬಗ್ಗೆ ಮಾತಾನಾಡಿದ ಶಾಸಕ ಮಂಥರ್ ಗೌಡ, ಯುವಕರ ಅಭಿಮಾನಕ್ಕೆ ಚಿರಋಣಿಯಾಗಿದ್ದಾನೆ. ಚುನಾವಣೆ ಸಮಯದಲ್ಲಿ ಅವರು ನನಗಾಗಿ ಶ್ರಮಪಟ್ಟಿದ್ದಾರೆ. ಅವರು ದೇವಾಲಯಕ್ಕೆ ತೆರಳಿದ ಬಳಿಕ ಪೂಜೆಯಲ್ಲಿ ನಾನು ತಾಲೂಕಿನ ಜನರೊಂದಿಗೆ ಪಾಲ್ಗೊಳ್ಳಲಿದ್ದೇನೆ ಎಂದಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಮಂಥರ್ ಗೌಡ 83,949 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ 79,429 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: ಪ್ರಿಯತಮೆಗೆ ಮೆಸೇಜ್ ಮಾಡಿದ ರೂಂಮೇಟ್‍ಗೆ ಚಾಕುವಿನಿಂದ ಇರಿದ!