Tag: Mansoor Khan

  • ಐಎಎಸ್ ಅಧಿಕಾರಿಯಿಂದ 10 ಕೋಟಿ ರೂ. ಬೇಡಿಕೆ: ಮನ್ಸೂರ್ ಬಾಂಬ್

    ಐಎಎಸ್ ಅಧಿಕಾರಿಯಿಂದ 10 ಕೋಟಿ ರೂ. ಬೇಡಿಕೆ: ಮನ್ಸೂರ್ ಬಾಂಬ್

    – ಸಚಿವ ಜಮೀರ್ ಅಹ್ಮದ್‍ಗೆ ಧನ್ಯವಾದ ತಿಳಿಸಿದ ಆರೋಪಿ

    ಬೆಂಗಳೂರು: ಐಎಎಸ್ ಅಧಿಕಾರಿಯೊಬ್ಬರು  10 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾನೆ.

    ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಯೊಂದು ಐಎಂಎನಲ್ಲಿ ಹೂಡಿಕೆ ಮಾಡಲು ಮುಂದಾಗಿತ್ತು. ಈ ಸಂಬಂಧ ಪರವಾನಿಗೆ ನೀಡಲು ಐಎಎಸ್ ಅಧಿಕಾರಿಯೊಬ್ಬರು 10 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಹಣ ಕೊಡುವುದು ವಿಳಂಬವಾಗಿದ್ದಕ್ಕೆ ಪರವಾನಿಗೆ ಪತ್ರವನ್ನು ನೀಡಲಿಲ್ಲ ಎಂದು ತಿಳಿಸಿದ್ದಾನೆ.

    ನಾನು ಒಬ್ಬರನ್ನು ಭೇಟಿಯಾಗಬೇಕಿದೆ. ಟಿಕೆಟ್ ಬುಕ್ ಮಾಡಿಕೊಟ್ಟರೆ ಹೋಗಿ ಆ ವ್ಯಕ್ತಿಯನ್ನು ಭೇಟಿಯಾಗಿ ಭಾರತಕ್ಕೆ ಮರಳುತ್ತೇನೆ. ಇದಕ್ಕೆ ನೀವು ಸಹಾಯ ಮಾಡಬೇಕಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.

    ಸಚಿವ ಜಮೀರ್ ಅಹ್ಮದ್‍ಖಾನ್ ಅವರು ಹೇಳಿರುವ ಒಂದು ವಿಡಿಯೋವನ್ನು ನಾನು ನೋಡಿದ್ದೇನೆ. ನೀವು ವಾಪಸ್ ಬನ್ನಿ. ನಿಮ್ಮ ಬೆಂಬಲಕ್ಕೆ ನಾನು ಇರುವೆ ಎಂದು ಭರವಸೆ ನೀಡಿದ್ದಾರೆ. ಅವರನ್ನು ಹೊರತುಪಡಿಸಿ ನನ್ನ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಮುಜ್ಜಾಯಿದೀನ್ ಕೂಡ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಹೇಳುವ ಮೂಲಕ ಮನ್ಸೂರ್ ಖಾನ್ ಸಚಿವರಿಗೆ ಧನ್ಯವಾದ ತಿಳಿಸಿದ್ದಾನೆ.

    ಹೂಡಿಕೆದಾರರ ಹಣ ಯಾರ ಬಳಿಯಿದೆ ಎನ್ನುವ ಪಟ್ಟಿ ನನ್ನ ಬಳಿಯಿದೆ. ಅವರ ಜೊತೆ ಬೇಕಾದರೆ ನೀವು ಹೋರಾಡಿ ಹಣ ಪಡೆದುಕೊಳ್ಳಿ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವುದಕ್ಕೆ ಎಲ್ಲಾ ಪ್ಲಾನ್ ನಡೆದಿದೆ. ನನ್ನ ಮುಗಿಸುವುದಕ್ಕೂ ಮುನ್ನ ಎಲ್ಲಾ ಸಾಕ್ಷಾಧಾರಗಳನ್ನು ಅಧಿಕಾರಿಗಳ ಮುಂದಿಡುವೆ. ಹಣ ವಸೂಲಿಗೆ ನೀವೂ ನೀವಾಗಿಯೇ ಹೋರಾಡುತ್ತೀರೋ? ಅಧಿಕಾರಿಗಳಿಗಳ ಮೂಲಕ ಹೋರಾಡುತ್ತೀರೋ ನನಗೆ ಗೊತ್ತಿಲ್ಲ. ಅಲೋಕ್ ಕುಮಾರ್ ಸರ್ ನನಗೆ 2-3 ದಿನ ಕಾಲಾವಕಾಶ ಕೊಡಿ. ನಾನು ಮಾನಸಿಕವಾಗಿ ತಯಾರಾಗಿ ಬರುವೆ. ನೀವು ಯಾರ ಮುಂದೆ ಹೇಳುತ್ತೀರೋ ಅವರನ್ನು ಭೇಟಿಯಾಗುವೆ. ವಿಮಾನ ನಿಲ್ದಾಣದಲ್ಲಿ ಟಿಕೆಟ್ ತಗೆದುಕೊಳ್ಳಬೇಕೋ, ಬೇಡವೋ ಎನ್ನುವುದನ್ನು ನೀವೇ ಹೇಳಿ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ದಿಢೀರ್ ಪ್ರತ್ಯಕ್ಷವಾಗಿ ರಾಜಕಾರಣಿಗಳ ಹೆಸರು ಬಹಿರಂಗ ಪಡಿಸಿದ ಮನ್ಸೂರ್

    ದಿಢೀರ್ ಪ್ರತ್ಯಕ್ಷವಾಗಿ ರಾಜಕಾರಣಿಗಳ ಹೆಸರು ಬಹಿರಂಗ ಪಡಿಸಿದ ಮನ್ಸೂರ್

    ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಯುಟ್ಯೂಬ್‍ನಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದು, ಹಗರಣದ ಸಂಬಂಧ ರಾಜಕಾರಣಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದಾನೆ.

    ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ತನ್ನ ಸಂಸ್ಥೆಯನ್ನು ಮುಚ್ಚಲು ಪ್ರಯತ್ನ ಪಟ್ಟಿದ್ದಕ್ಕೆ ರಾಜಕಾರಣಿಗಳು, ಉದ್ಯಮಿಗಳಿಗೆ ಮನ್ಸೂರ್ ಧನ್ಯವಾದ ತಿಳಿಸಿದ್ದಾನೆ.

    ವಿಡಿಯೋದಲ್ಲಿ ಏನಿದೆ?
    ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ಮೊಹಮದ್ ಉಬೇದುಲ್ಲಾ ಶರೀಫ್, ಪಾಸ್‍ಬನ್ ಪತ್ರಿಕೆ ಸಂಪಾದಕ ಶರೀಫ್, ಟಾಡಾ ಟೆರರಿಸ್ಟ್ ಮುಕ್ತಾರ ಅಹಮದ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ಇರ್ಫಾನ್ ಸೇರಿ ನನ್ನನ್ನು ಮುಗಿಸಿದ್ದಾರೆ. ಐಎಂಎ ಮುಗಿಸಲು ಎಲ್ಲರೂ ಸಫಲರಾಗಿದ್ದಕ್ಕೆ ಅವರಿಗೆ ಧನ್ಯವಾದಗಳು.

    ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಬಂದು ಕುಳಿತಿದ್ದರು. ಅವರಿಂದ ತಪ್ಪಿಸಿಕೊಳ್ಳಲು, ನನ್ನ ಸಹಾಯಕ್ಕೆ ಯಾರು ಇಲ್ಲದ ಕಾರಣ ನಾನು ಕುಟುಂಬದ ಜೊತೆ ಹೊರಡಬೇಕಾಯಿತು. ಜೂನ್ 24ರಂದು ಮರಳಿ ಬೆಂಗಳೂರಿಗೆ ಬರುವ ಪ್ಲಾನ್ ಮಾಡಿದ್ದೆ. ಆದರೆ ನನ್ನ ಪಾಸ್‍ಪೋರ್ಟ್, ಟಿಕೆಟ್ ತಡೆ ಹಿಡಿಯಲಾಯಿತು.

    ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನಾನು ಮನವಿ ಮಾಡುತ್ತೇನೆ. ಜನರಿಗೆ ನೀವು ನ್ಯಾಯ ಒದಗಿಸುತ್ತೀರೆಂಬ ನಂಬಿಕೆ ಇದೆ. ಈ ಹಗರಣದ ಹಿಂದೆ ಇರುವ ಸತ್ಯಾಸತ್ಯೆಯನ್ನು ನಾನು ಬಿಚ್ಚಿಡುತ್ತೇನೆ. ಕಾನೂನು ಯಾವುದೇ ಕ್ರಮಕೈಗೊಂಡರೂ ನಾನು ತಲೆಬಾಗುತ್ತೇನೆ. ಭಾರತದಲ್ಲಿದ್ದ ನಂಬರಿನಲ್ಲೇ ನಾನು ಸಂಪರ್ಕದಲ್ಲಿದ್ದೇನೆ.

    21 ಸಾವಿರ ಹೂಡಿಕೆದಾರರಿಗೆ ಕಳೆದ 13 ವರ್ಷಗಳಿಂದ ಹಣ ನೀಡಿದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಭಾರತದಾದ್ಯಂತ ಬಡ ವಿದ್ಯಾರ್ಥಿಗಳಿಗ ಸಹಾಯ ಮಾಡಿದ್ದೇನೆ. 7 ಸಾವಿರ ಮನೆಗಳಿಗೆ ಪಡಿತರ ಕೊಡುತ್ತಿದ್ದೆ. ಇಷ್ಟು ಸಹಾಯ ಮಾಡಿದರೂ ನನಗೆ ಕರುಣೆ ತೋರಿಲ್ಲ. ಇದು ನನಗೆ ಬೇಸರ ತಂದಿದೆ. ಐಎಂಎ 13 ವರ್ಷದಿಂದ 12 ಸಾವಿರ ಕೋಟಿ ಲಾಭಗಳಿಸಿದೆ. 2006ರಿಂದ 2019 ರವರೆಗೆ ಐಎಂಎ ಸಂಸ್ಥೆ ನಡೆದಿದೆ. 2 ಸಾವಿರ ಕೋಟಿ ಕ್ಯಾಪಿಟಲ್ ಇನ್ವೆಸ್ಟ್‍ಮೆಂಟ್‍ನ್ನ ಕೊಟ್ಟಿದ್ದೇವೆ ಎಂದು ಕಂಪನಿ ಬಗ್ಗೆ ಮಾಹಿತಿ ನೀಡಿದ್ದಾನೆ.

    ನಾನು ಭಾರತಕ್ಕೆ ಬಂದರೆ ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿಯೇ ನನ್ನನ್ನು ಹೊಡೆದು ಹಾಕಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ. ನಾನು ತಪ್ಪಿತಸ್ಥ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ.

    ಈಗಾಗಲೇ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. ಅದಾದ ನಂತರ ಇದೇ ಮೊದಲ ನನ್ನ ವಿಡಿಯೋ ಬಿಡುಗಡೆ ಮಾಡುತ್ತಿರುವೆ. ಶೇ.99 ರಷ್ಟು ನನ್ನ ವಿರುದ್ಧ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. ಹೀಗಾಗಿ ಶೇ.1 ರಷ್ಟು ಜನ ಮಾತ್ರ ನನ್ನ ಬೆಂಬಲಕ್ಕೆ ಇದ್ದಾರೆ. ಐಎಂಎ ಬಿಸಿನೆಸ್ ನಿಜವಾದ ಉದ್ಯಮವಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಬೇಕು ಅಂತಲೇ ಹಾಳು ಮಾಡುತ್ತಿದ್ದಾರೆ. ಐಎಂಎ ಮುಳುಗಿಸಲು ಯಾರು ಪ್ರಯತ್ನ ಪಟ್ಟಿದ್ದಾರೋ ಅವರ ಪಟ್ಟಿ ನನ್ನ ಬಳಿಯಿದೆ. ಎಲ್ಲರ ಹೆಸರುಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸುವೆ. ಇದರಲ್ಲಿ ಭಾಗಿಯಾದವರು ಸಣ್ಣಪುಟ್ಟವರಲ್ಲ.

    ಈ ಕಂಪನಿ ದೊಡ್ಡ ದೊಡ್ಡವರ ಹೆಸರುಗಳಲ್ಲಿ ನಡೆಯುತ್ತಿತ್ತು. ಅವರ ಹೆಸರುಗಳನ್ನ ಬಹಿರಂಗಪಡಿಸಿದರೆ ನನ್ನ ಕುಟುಂಬಕ್ಕೆ ತೊಂದರೆಯಾಗುತ್ತದೆ. ನನ್ನ ಕುಟುಂಬ ಭಾರತದಲ್ಲೇ ಇದೆ. ನಾನು ದೊಡ್ಡವರ ಹೆಸರುಗಳನ್ನ ತಗೆದುಕೊಂಡರೇ ನನ್ನ ಕುಟುಂಬ ಮುಗಿಸಿಬಿಡುತ್ತಾರೆ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವ ಸಾಧ್ಯತೆಯಿದೆ. ಬಾಯಿ ಮುಚ್ಚಿಸಲು ಎಲ್ಲಾ ಪ್ಲಾನ್‍ಗಳನ್ನ ಮಾಡಲಾಗಿದೆ. ನನಗೊಸ್ಕರ ಭಾರತಕ್ಕೆ ಬರುತ್ತಿಲ್ಲ. ಜನರಿಗೆ ನ್ಯಾಯ ಕೊಡಿಸಲು ಬರುತ್ತಿದ್ದೇನೆ.

    ನಾನು ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ನನ್ನನ್ನ ಹೊಡೆಯುತ್ತಾರೆ. ನನಗೆ ಗೊತ್ತಿದೆ, ನಾನು ಸಾಯುತ್ತೇನೆ ಅಂತ. ಗೊತ್ತಿದ್ದರೂ ನಾನು ಹೆದರುತ್ತಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಅಲ್ಲೂ ನನಗೆ ರಕ್ಷಣೆ ಸಿಗಲ್ಲ. ಜಾಮೀನು ತಗೆದುಕೊಂಡು ಬಂದರೂ ರಸ್ತೆಯಲ್ಲಿ ನನ್ನ ಹೊಡೆಯುತ್ತಾರೆ. ಇದು ಸಾರ್ವಜನಿಕರ ಹಣ. ನಾನು ಮರಳಿಸುತ್ತೇನೆ ಎಂದು ಮನ್ಸೂರ್ ಹೇಳಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಐಎಂಎ ಪ್ರಕರಣದಲ್ಲಿ ಅರೆಸ್ಟ್ ಆಗ್ತಾರಾ ರೋಷನ್ ಬೇಗ್?

    ಐಎಂಎ ಪ್ರಕರಣದಲ್ಲಿ ಅರೆಸ್ಟ್ ಆಗ್ತಾರಾ ರೋಷನ್ ಬೇಗ್?

    ಬೆಂಗಳೂರು: ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ರೋಷನ್ ಬೇಗ್ ಅವರು ಐಎಂಎ ಪ್ರಕರಣದಲ್ಲಿ ಬಂಧಿತರಾಗುತ್ತಾರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಹೌದು. ಐಎಂಎ ಹಗರಣದಲ್ಲಿ ಎಸ್ ಐಟಿ ಅಧಿಕಾರಿಗಳು ರೋಷನ್ ಬೇಗ್ ವಿಚಾರಣೆ ಮಾಡೋ ಸಾಧ್ಯತೆ ಇದೆ. ಅದಕ್ಕಾಗಿ ಈಗಾಗಲೇ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ರೋಷನ್ ಬೇಗ್ ಅನ್ನು ಯಾವಾಗ ಬೇಕಿದ್ರೂ ವಿಚಾರಣೆಗೆ ಕರೆಯಬಹುದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರೋಷನ್ ಬೇಗ್ ಹಾಗೂ ಮನ್ಸೂರ್ ವ್ಯವಹಾರಿಕ ಸಂಬಂಧದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಕೆಲವೊಂದು ಬ್ಯಾಂಕ್ ವ್ಯವಹಾರದಲ್ಲಿ ರೋಷನ್ ಬೇಗ್ ನಿಕಟ ಸಂಪರ್ಕ ಹೊಂದಿರೋದು ಗೊತ್ತಾಗಿದೆ. ಮುಂಬೈನಲ್ಲಿ ನಡೆದ ಮಗ ರುಮಾನ್ ಬೇಗ್ ಮದುವೆ ಚಾರ್ಟೆಡ್ ಪ್ಲೈಟ್ ನೀಡಿದ್ದು, ಚುನಾವಣೆಗಾಗಿ ಫಂಡಿಂಗ್ ಮಾಡಿಸಿಕೊಂಡಿದ್ದು, ರೋಷನ್ ಬೇಗ್ ಕುಟುಂಬದವರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿದ್ದು ಹಾಗೂ ಬೇಗ್ ಮಾಲೀಕತ್ವದಲ್ಲಿದ್ದ ಸಿಯಾಸತ್ ಪೇಪರ್ ನಡೆಸಿದ್ದು ಎಲ್ಲದರ ವ್ಯವಹಾರಿಕ ಸಂಬಂಧ ಮಾಹಿತಿ ಕಲೆ ಹಾಕಿದ್ದಾರೆ.

    ಈ ಎಲ್ಲಾ ಮಾಹಿತಿಯನ್ನು ಆಧರಿಸಿ ಬೇಗ್ ಅವರನ್ನು ಯಾವ ದಿನದಲ್ಲಿಯಾದ್ರೂ ವಿಚಾರಣೆಗೆ ಒಳಪಡಿಸಬಹುದು. ಆರೋಪಿ ಮನ್ಸೂರ್ ಖಾನ್ ರೋಷನ್ ಬೇಗ್ ವಿಚಾರ ಹೇಳಿದ್ದರಿಂದ ಈ ಎಲ್ಲಾ ಮಾಹಿತಿಯ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಜೊತೆಗೆ ವಿಚಾರಣೆ ನಡೆಸಿ ಬಳಿಕ ಸತ್ಯಾಸತ್ಯತೆ ಪರೀಕ್ಷೆ ಮಾಡಲಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ವಿಚಾರಣೆಯ ಬಳಿಕ ರೋಷನ್ ಬೇಗ್ ಬಂಧನವಾದ್ರೂ ಆಶ್ಚರ್ಯ ಇಲ್ಲ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಿದ ರೋಷನ್ ಬೇಗ್‍ಗೆ ಹಗ್ಗವೂ ಹಾವಾಗಲಿದೆ.

  • ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಕೊನೆಗೂ ದುಬೈನಲ್ಲಿ ಪತ್ತೆಯಾಗಿದ್ದಾನೆ. ಮನ್ಸೂರ್ ಖಾನ್ ಹಾಗೂ ಆತನ ಕುಟುಂಬವನ್ನು ರಾ ಸಂಸ್ಥೆಯ ಅಧಿಕಾರಿಗಳು ದುಬೈನಿಂದ 122 ಕಿ.ಮೀ. ದೂರವಿರುವ ಬೀಚ್ ಸಿಟಿಯ ರಾಸ್-ಅಲ್- ಕೈಯಮ್ ಬಳಿ ಪತ್ತೆ ಮಾಡಿದ್ದಾರೆ.

    ದುಬೈಯಿಂದ ಬೇರೆ ಕಡೆ ಹೋಗದಂತೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಲ್ಲದೆ ಮನ್ಸೂರ್ ಬಗ್ಗೆ ದುಬೈ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. 15 ದಿನದಲ್ಲಿ ಮನ್ಸೂರ್ ನನ್ನು ಕರ್ನಾಟಕಕ್ಕೆ ಕರೆ ತರಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪತ್ತೆಯಾಗಿದ್ದು ಹೇಗೆ?
    ಮನ್ಸೂರ್ ಸಿಗಲು ಮೌಲ್ವಿಯೊಬ್ಬರು ಸುಳಿವು ಕೊಟ್ಟಿದ್ದರು. ಆ ಮೌಲ್ವಿಯ ಎಡವಟ್ಟಿನಿಂದ ಮನ್ಸೂರ್ ಬಲೆಗೆ ಬಿದ್ದಿದ್ದಾನೆ. ಇಂಟರ್ ನೆಟ್ ಕಾಲ್‍ನಲ್ಲಿ ಮನ್ಸೂರ್ ಬೆಂಗಳೂರಿನ ಮೌಲ್ವಿ ಶೋಯಬ್ ನನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದನು. ಮನ್ಸೂರ್ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆನ್‍ಲೈನ್‍ಗೆ ಬಂದು ಹೋಗುತ್ತಿದ್ದನು. ಹಾಗಾಗಿ ಪೊಲೀಸರು ಆತನ ಇಂಟರ್ ನೆಟ್ ಕಾಲ್ ಮೇಲೆ ಕಣ್ಣಿಟ್ಟಿದ್ದರು. ಮನ್ಸೂರ್ ಮೆಸೆಂಜರ್ ಮೂಲಕ ಮೌಲ್ವಿ ಶೋಯಬ್‍ಗೆ ಕರೆ ಮಾಡುತ್ತಿದ್ದನು.

    ಯಾರು ಮೌಲ್ವಿ ಶೋಯಬ್?
    ಶೋಯಬ್ ಹೆಣ್ಣೂರು ರಸ್ತೆಯಲ್ಲಿ ಮದರಸ ನಡೆಸುತ್ತಿದ್ದು, ಮನ್ಸೂರ್ ಈ ಮೌಲ್ವಿ ಜೊತೆ ನಿಕಟ ಸಂಪರ್ಕ ಹೊಂದಿದ್ದನು. ಬೆಂಗಳೂರಿನಲ್ಲಿದ್ದಾಗ ಮದರಸ ಕಟ್ಟಲು ಮನ್ಸೂರ್, ಮೌಲ್ವಿಗೆ 20 ಕೋಟಿ ಹಣ ನೀಡಿದ್ದನು. ಮನ್ಸೂರ್ ಸಹಾಯದೊಂದಿಗೆ ಮೌಲ್ವಿ ಮದರಸ ನಿರ್ಮಾಣ ಮಾಡಿಕೊಂಡಿದ್ದನು. ಆ ಮದರಸದಲ್ಲಿಯೇ ಮನ್ಸೂರ್ ಖಾನ್ ಜನರಿಗೆ ಮರಳು ಮಾಡುತ್ತಿದ್ದನು.

  • ಹಿಂದೂ, ಮುಸ್ಲಿಮರ ಆಭರಣ ಕುತಂತ್ರ – IAM ಗೋಲ್ಡ್ ಕಂಪನಿ ಮಾಲೀಕನ ದೋಖಾ ಸ್ಟೋರಿ

    ಹಿಂದೂ, ಮುಸ್ಲಿಮರ ಆಭರಣ ಕುತಂತ್ರ – IAM ಗೋಲ್ಡ್ ಕಂಪನಿ ಮಾಲೀಕನ ದೋಖಾ ಸ್ಟೋರಿ

    ಬೆಂಗಳೂರು: ಐಎಎಂ ಗೋಲ್ಡ್ ಕಂಪನಿ ಮಾಲೀಕ ಮನ್ಸೂರ್ ಖಾನ್ ದೋಖಾ ಪ್ರಕರಣ ಹೊರ ಬರುತ್ತಿದ್ದಂತೆ ದಿನಕ್ಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಅಸಲಿಗೆ ಐಎಂಎ ಕಂಪನಿಯ ಮನ್ಸೂರ್ ಟಾರ್ಗೆಟ್ ಮಾಡಿದ್ದು ತನ್ನ ಸಮುದಾಯವರನ್ನೇ ಅನ್ನೋದು ಕುತೂಹಲಕಾರಿಯಾದ ಸಂಗತಿಯಾಗಿದೆ. ಆಭರಣಗಳಲ್ಲಿಯೂ ಮುಸ್ಲಿಂ ಆಭರಣ ಅಂತ ಡಿವೈಡ್ ಮಾಡಿ ಮಾರಾಟ ಮಾಡುತ್ತಿದ್ದನು. ಈತನ ಜ್ಯುವೆಲ್ಲರಿ ಶಾಪ್‍ಗೆ ಮುಸ್ಲಿಂ ಮಹಿಳೆಯರು ಬಿಟ್ಟರೆ ಅನ್ಯ ಧರ್ಮದವರು ಹೋಗುತ್ತಿದ್ದಿದ್ದು ತೀರ ಕಡಿಮೆ. ಇದನ್ನೂ ಓದಿ:  ಬೆಂಗ್ಳೂರು ಅಲ್ಲ ರಾಜ್ಯವ್ಯಾಪಿ ಜನರಿಂದ ಐಎಂಎಗೆ ಹಣ ಹೂಡಿಕೆ

    ಮುಸ್ಲಿಂ ಮಹಿಳೆಯರನ್ನ ನಯವಾಗಿ ಮಾತನಾಡಿಸಲು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದನು. ನಮ್ಮ ಕಂಪನಿಯಲ್ಲಿ ಇಂತಿಷ್ಟು ಅಂತ ಹಣ ಹೂಡಿಕೆ ಮಾಡಿದರೆ ಕಂಪನಿಯ ಮೆಂಬರ್ ಕಾರ್ಡ್ ನೀಡುತ್ತೇವೆ. ನಿಮಗೆ ಆಭರಣ ಖರೀದಿಯ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್ ಜೊತೆಗೆ ಝೀರೋ ಫರ್ಸೆಂಟ್ ಮೇಕಿಂಗ್ ಚಾರ್ಜಸ್ ಮತ್ತು ನಿಮ್ಮ ಹೂಡಿಕೆಗೆ ಶೇಕಡಾ 7 ರಿಂದ 10 ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ್ದನು. ಈತನ ಸಿಬ್ಬಂದಿ ಮಾತಿಗೆ ಮರುಳಾದ ಬಡ ಮುಸ್ಲಿಂ ಮಹಿಳೆಯರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಈಗ ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್

    ಇತ್ತ ಮನ್ಸೂರ್ ಖಾನ್ ಮಾತಿನಲ್ಲೇ ಮನೆ ಕಟ್ಟಿ ಸಾವಿರಾರು ಮಂದಿಯನ್ನು ಯಾಮಾರಿಸಿದ್ದಾನೆ. ನಾನು ವಾಪಸ್ ಬರುತ್ತೀನಿ. ನನ್ನ ಮೇಲೆ ನಂಬಿಕೆ ಇರುವವರು ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಹಣ ನಿಮಗೆ ವಾಪಸ್ಸು ಆಗೇ ಆಗುತ್ತದೆ. ಯಾರಿಗೂ ನಾನು ಮೋಸ ಮಾಡುವುದಿಲ್ಲ. ಅಷ್ಟು ನಂಬಿಕೆ ಇಲ್ಲದವರು ನಿಮ್ಮ ಹಣ ವಾಪಸ್ಸು ಪಡೆದುಕೊಳ್ಳಬಹುದು. ನಾನೊಂದು ದಿನಾಂಕವನ್ನು ಹೇಳುತ್ತೀನಿ ಅವತ್ತು ಹಣ ಪಡೆದುಕೊಳ್ಳಬಹುದು ಎಂದು ಡೈಲಾಗ್ ಮೇಲೆ ಡೈಲಾಗ್ ಹೊಡೆದು ಯಾಮಾರಿಸಿದ್ದನು.

  • ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು  ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಬೆಂಗಳೂರು: ಐಎಂಎ ಗೋಲ್ಡ್ ಕಂಪನಿಗೆ ಎನ್‍ಒಸಿ ನೀಡುವಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರು ಆರ್.ವಿ ದೇಶಪಾಂಡೆ ಬಳಿ ಮನ್ಸೂರ್ ಖಾನ್‍ನನ್ನು ಕರೆದೊಯ್ದಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಃ ಕಂದಾಯ ಸಚಿವರೇ ಬಾಯಿಬಿಟ್ಟಿದ್ದಾರೆ.

    ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶಪಾಂಡೆ ಈ ಬಗ್ಗೆ ಬಿಚ್ಚಿಟ್ಟಿದ್ದಾರೆ. ಕಳೆದ ತಿಂಗಳು ವಂಚಕ ಮನ್ಸೂರ್ ಖಾನ್ ಹಾಗೂ ರೋಷನ್ ಬೇಗ್ ನನ್ನನ್ನು ಭೇಟಿ ಆಗಿದ್ದರು. ಮನ್ಸೂರ್ ಖಾನ್ ನನ್ನ ಕ್ಷೇತ್ರದವರು, ತುಂಬಾ ಒಳ್ಳೆಯ ಮನುಷ್ಯ. ಮನ್ಸೂರ್ ಖಾನ್ ಕಂಪನಿಗೆ ಎನ್‍ಒಸಿ ಕೊಡುವಂತೆ ನನ್ನ ಬಳಿ ಬೇಗ್ ಮನವಿ ಮಾಡಿದ್ದರು. ಯಾಕೆಂದರೆ ಎನ್‍ಒಸಿ ಸಿಕ್ಕಿದ್ದರೆ ಮನ್ಸೂರ್ ಖಾನ್ ಕಂಪನಿಗೆ ಬ್ಯಾಂಕ್‍ನಿಂದ 600 ಕೋಟಿ ಸಾಲ ಸಿಗುತ್ತಿತ್ತು. ಆದರೆ ಕಾನೂನಿನ ಚೌಕ್ಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನಷ್ಟೇ ಮಾಡಲು ಸಾಧ್ಯ ಎಂದು ಬೇಗ್‍ಗೆ ನಾನು ಸ್ಪಷ್ಟವಾಗಿ ಹೇಳಿದ್ದೆ ಎಂದು ತಿಳಿಸಿದರು.ಇದನ್ನೂ ಓದಿ:ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

    ಈ ಮೂಲಕ ಮನ್ಸೂರ್ ಖಾನ್ ಕಂಪನಿಯನ್ನು ಉಳಿಸಲು ಶಿವಾಜಿನಗರದ ಕಾಂಗ್ರೆಸ್ ಶಾಸಕ ಯತ್ನಿಸಿದ್ದರಾ? ದೇಶಪಾಂಡೆ ಬಳಿಗೆ ಖಾನ್‍ನನ್ನು ಕರೆದುಕೊಂಡು ಹೋಗಿದ್ದ ಬೇಗ್ ಅವರಿಗೆ ಇದರಿಂದ ಲಾಭವೇನಿತ್ತು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಒಟ್ಟಿನಲ್ಲಿ ಈ ಪ್ರಕರಣ ಯಾವೆಲ್ಲಾ ತಿರುವು ಪಡೆದುಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

  • ಐಎಂಎ ‘ಚೋರ್’ಖಾನ್‍ಗೆ ಶಾಕ್- ಆಸ್ತಿ ಜಪ್ತಿಗೆ ಮುಂದಾದ ಎಸ್‍ಐಟಿ

    ಐಎಂಎ ‘ಚೋರ್’ಖಾನ್‍ಗೆ ಶಾಕ್- ಆಸ್ತಿ ಜಪ್ತಿಗೆ ಮುಂದಾದ ಎಸ್‍ಐಟಿ

    ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಎಸ್ಕೇಪ್ ಆಗಿರೋ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಆಸ್ತಿಯನ್ನ ಮುಟ್ಟುಗೋಲು ಹಾಕಲು ಎಸ್‍ಐಟಿ(ವಿಶೇಷ ತನಿಖಾ ದಳ) ಮುಂದಾಗಿದೆ. ಐಎಂಎ ಸಂಸ್ಥೆಯಿಂದ ಸಾವಿರಾರು ಕೋಟಿ ವಂಚನೆಯಾಗಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ದೂರುಗಳನ್ನ ನೀಡಿ ನ್ಯಾಯ ಕೋರಿದ್ದಾರೆ.

    ದೋಖಾ ಖಚಿತವಾದ ಹಿನ್ನೆಲೆಯಲ್ಲಿ ಮಹಾ ಮೋಸಗಾರ ಮನ್ಸೂರ್ ಮತ್ತವನ ಪಟಾಲಂ ವಿರುದ್ಧ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಕಂಪನಿ ಮಾಲೀಕನ ಸ್ಥಿರ ಹಾಗೂ ಚರಾಸ್ತಿಗಳ ಮುಟ್ಟುಗೊಲು ಹಾಕಿಕೊಳ್ಳಲು ಎಸ್‍ಐಟಿ ತಂಡ ನಿರ್ಧರಿಸಿದೆ. ಈಗಾಗಲೇ ಮನ್ಸೂರ್ ಸೇರಿದಂತೆ 7 ಜನ ನಿರ್ದೇಶಕರ 621 ಕೋಟಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದ ಆಸ್ತಿಗಾಗಿ ಹುಡುಕಾಟ ನಡೆಸಿದೆ.

    ಈ ಸಂಬಂಧ ಎಸ್‍ಐಟಿ ತಂಡ ಇಂದು ಐಎಂಎ ಕಚೇರಿಯಲ್ಲಿ ಪರಿಶೀಲನೆ ನಡೆಸಲಿದೆ. ದಾಳಿ ವೇಳೆ ಪತ್ತೆಯಾದ ಮಹತ್ವದ ದಾಖಲೆ ಹಾಗೂ ಚಿನ್ನಾಭರಣಗಳ ಮೌಲ್ಯಮಾಪನ ನಡೆಯಲಿದೆ. ಮನ್ಸೂರ್ ಮಾಲೀಕತ್ವದ ಐಎಂಎ ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಅನುಮತಿ ಅಗತ್ಯವಿದೆ. ಹೀಗಾಗಿ ಶೀಘ್ರವೇ ಎಸ್‍ಐಟಿ ಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

    ಸರ್ಕಾರದ ನಡೆದ ಹೆಚ್.ಕೆ.ಪಾಟೀಲ್ ಗರಂ:
    ಐಎಂಎ ಪ್ರಕರಣದಲ್ಲಿ ಸರ್ಕಾರ ಕೇವಲ ತನಿಖೆಯ ದಿಕ್ಕಿನಲ್ಲಿ ಸಾಗುತ್ತಿದೆ. ದೋಷರೋಪ ಪಟ್ಟಿ, ದಂಡನೆ ಮೂಲಕ ಹೂಡಿಕೆದಾರರಿಗೆ ನ್ಯಾಯ ಒದಗಿಸಲು ಆಗುತ್ತಾ? ಇದರಿಂದ ಏನೂ ಆಗಲ್ಲ. ನೊಂದವರ ಬದುಕು ಕಟ್ಟಿಕೊಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ಕ್ರಮಗಳು ಏನೇನೂ ಸಾಲದು ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

    ಪಾಟೀಲ್ ಬರೆದಿರುವ ಪತ್ರವನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಇದು ಆಲಿಬಾಬಾ 40 ಕಳ್ಳರ ಸರ್ಕಾರ, ಐಎಂಎ ದೋಖಾ ಪ್ರಕರಣದಲ್ಲಿ ಜಮೀರ್ ಕೂಡ ಇದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಲ್ಲಿ ಸಿಎಂ ಕೈವಾಡವೂ ಇದೆ. ದೇವೇಗೌಡರೇಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಮುಖಂಡ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಐಎಂಎ ಪ್ರಕರಣದಲ್ಲಿ ಒಂದು ದೊಡ್ಡ ಜಾಲವೇ ಇದೆ. ಸಚಿವರು ಭಾಗಿಯಾದ ಆರೋಪಗಳಿವೆ. ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

  • ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ- ಸತೀಶ್ ಜಾರಕಿಹೊಳಿ

    ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ- ಸತೀಶ್ ಜಾರಕಿಹೊಳಿ

    ಬೆಳಗಾವಿ: ಐಎಂಎ ಬಹುಕೋಟಿ ಹಗರಣ ಪ್ರಕರಣ ಸಂಬಂಧ ಇಚ್ಚಾಶಕ್ತಿ ಇದ್ದರೆ ಆರೋಪಿಯನ್ನ ಬಂಧಿಸುತ್ತಾರೆ. ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಆರೋಪಿಯನ್ನ ಸಚಿವ ಜಮೀರ್ ಅಹ್ಮದ್ ಮನೆಯಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯ. ಸೌಹಾರ್ದ ಕಾಯ್ದೆ ಬಂದ ಮೇಲೆ ಕೋ ಆಪರೇಟಿವ್ ಸರ್ಕಾರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಅವರು ಸ್ವತಂತ್ರ ಇದ್ದಾರೆ. ಈ ಕುರಿತು ಸರ್ಕಾರ ಮರು ಚಿಂತನೆ ಮಾಡುವುದು ಅಗತ್ಯವಿದೆ. ಐಎಂಎ ಹಗರಣದ ಕುರಿತು ಸರ್ಕಾರ ಗಮನ ಹರಿಸುವುದು ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

    ಎಸ್‍ಐಟಿಯವರು ಆರೋಪಿಯನ್ನು ಪತ್ತೆ ಹಚ್ಚುತ್ತಾರೆ. ಜಮೀರ್ ಮೇಲೆ ಆರೋಪ ಇದೆ. ಆದರೆ ಯಾವುದೂ ಪ್ರೂವ್ ಮಾಡಿಲ್ಲ. ಅವರಿಗೆ ರಾಜೀನಾಮೆ ಕೊಡು ಎನ್ನುವುದು ಸರಿಯಲ್ಲ. ಬಿಜೆಪಿಯವರದ್ದು ಎಲ್ಲವನ್ನೂ ವಿರೋಧ ಮಾಡುವ ಭಾವನೆ ಎಂದು ಕಿಡಿಕಾರಿದ್ದಾರೆ.

    ಇದೇ ವೇಳೆ ಜಿಂದಾಲ್ ಗೆ ಭೂಮಿ ಕೊಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಭೂಮಿಯನ್ನ ಯಾರ ಅವಧಿಯಲ್ಲಿ ನೀಡಿದ್ದಾರೆ. ಈ ಕುರಿತು ಟಿವಿಯಲ್ಲಿ ಬಿಜೆಪಿ ಕಾಂಗ್ರೆಸ್ ಎಲ್ಲರನ್ನೂ ಕುಡಿಸಿ ಪ್ಯಾನಲ್ ಡಿಸ್ಕಷನ್ ಮಾಡಲಿ. ಇದರ ನಿಯಮವೇನಿದೆ, ವಿರೋಧ ಪಕ್ಷದವರದ್ದು ಎಷ್ಟು ನಿಜಾಂಶ ಇದೆ ಎಂಬುದು ಜನರಿಗೆ ಗೊತ್ತಾಗಬೇಕು ಎಂದರು.

    ಬಿಜೆಪಿಯವರ ಪ್ರತಿಭಟನೆಯಲ್ಲಿ ಯಾವುದೇ ಅರ್ಥ ಇಲ್ಲ. ಅವರ ಅವಧಿಯಲ್ಲೇ ಜಮೀನು ಕೊಟ್ಟಿದ್ದು. ಈಗ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ರಮೇಶ್ ಜಾರಕಿಹೊಳಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅವರ ಕುರಿತು ನಾನೇನು ಹೇಳುವುದಿಲ್ಲ ಅಂದರು.

    ಆಡಳಿತ ಪಕ್ಷದಲ್ಲಿ ವಿರೋಧಗಳು ಹೆಚ್ಚಾಗುತ್ತಿದೆ ಎಂಬ ವಿಚಾರ ಸಂಬಂಧ ಮಾತನಾಡಿದ ಅವರು, ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದೆ ಅದಕ್ಕೆ ಹೀಗಾಗುತ್ತಿದೆ. ಟ್ವೆಂಟಿ ಟ್ವೆಂಟಿ ಮ್ಯಾಚ್ ಇದ್ದಂಗೆ ಸ್ವಲ್ಪ ಸಮಸ್ಯೆ ಇರುತ್ತದೆ. ಶಾಸಕರು ಅವರ ಭಾವನೆಗಳನ್ನ ಹೇಳಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತದೆ ಎಂದು ತಿಳಿಸಿದರು.

  • ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

    ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

    – ಐಎಎಸ್ ಅಧಿಕಾರಿ ದಿಟ್ಟತನಕ್ಕೆ ಉಳೀತು ಬ್ಯಾಂಕ್ ಕಾಸು

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಸಚಿವರನ್ನೇ ಮರಳು ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಲು ಮುಂದಾಗಿದ್ದನು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮನ್ಸೂರ್ ಖಾನ್ ತನ್ನ ಕಂಪನಿಯನ್ನು ಅಭಿವೃದ್ಧಿಗೊಳಿಸಲು 600 ಕೋಟಿ ಸಾಲ ಪಡೆಯುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದನು. 600 ಕೋಟಿ ಸಾಲಕ್ಕಾಗಿ ಮನ್ಸೂರ್ ಬ್ಯಾಂಕ್‍ಗಳ ಮೊರೆ ಹೋಗಿದ್ದನು. ಆದರೆ ಬ್ಯಾಂಕ್ ಗಳು ಮಾತ್ರ ನಿನ್ನ ಕಂಪನಿಯ ಮೇಲೆ ನಮಗೆ ನಂಬಿಕೆ ಇಲ್ಲ. ನಿನ್ನದು ದೋಖಾ ಕಂಪನಿ ಎಂದು ಈಗಾಗಲೇ ಆರ್ ಬಿಐ ನೋಟಿಸ್ ನೀಡಿದೆ. ನಿನ್ನ ಕಂಪನಿಗೆ ಸಾಲ ಕೊಡುವುದಕ್ಕೆ ಆಗುವುದಿಲ್ಲ. ಸಾಲ ಕೊಡಬೇಕೆಂದರೆ ರಾಜ್ಯ ಸರ್ಕಾರದಿಂದ ಎನ್‍ಓಸಿ ತರಬೇಕು ಎಂದು ಹೇಳಿದ್ದರು.

    ತಕ್ಷಣ ಮನ್ಸೂರ್ ಮುಸ್ಲಿಂ ಸಮುದಾಯದ ಸಚಿವರೊಬ್ಬರ ಮುಖಾಂತರ ಫೀಲ್ಡ್ ಗೆ ಇಳಿದಿದ್ದನು. ಹೇಗಾದರೂ ಮಾಡಿ 600 ಕೋಟಿ ಪಡೆಯಲೇಬೇಕು ಎನ್ನುವುದು ಆತನ ಹೆಬ್ಬಯಕೆ ಆಗಿತ್ತು. ಮುಸ್ಲಿಂ ಸಚಿವರು ಮನ್ಸೂರ್ ಪರ ಲಾಭಿ ನಡೆಸಿ ಹಿರಿಯ ಸಚಿವರಿಗೆ ದುಂಬಾಲು ಬಿದ್ದಿದ್ದರು. ಪ್ರತಿ ಬಾರಿಯೂ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭರವಸೆಯಲ್ಲಿದ್ದ ಸಚಿವರೇ ಮನ್ಸೂರ್ ಗೆ ಮರುಳಾಗಿದ್ದರು. ಮನ್ಸೂರ್ ಕಂಪನಿಗೆ ಸಾಲ ಕೊಡಿಸೋಣ, ಸಾಲ ಕೊಡೋದಕ್ಕೆ ಎನ್‍ಓಸಿ(ನಿರಾಕ್ಷೇಪಣಾ ಪತ್ರ) ಕೊಡಿ ಎಂದು ಐಎಎಸ್ ಅಧಿಕಾರಿಗೆ ಸೂಚನೆ ನೀಡಿದ್ದರು.


    ಸಚಿವರು ಸೂಚನೆಯನ್ನೇ ಧಿಕ್ಕರಿಸಿದ ಅಧಿಕಾರಿ, ಇಲ್ಲ ಸಾರ್ ಎನ್‍ಓಸಿ ಕೊಡುವುದಕ್ಕೆ ಆಗೋದಿಲ್ಲ. ಮನ್ಸೂರ್ ಮೇಲೆ ಸಾಕಷ್ಟು ಆರೋಪ ಇದೆ. ಈಗ ಎನ್‍ಓಸಿ ಕೊಟ್ಟರೆ ಮುಂದೆ ನಾನು ಜೈಲಿಗೆ ಹೋಗುತ್ತೇನೆ. ಏನೇ ಆದರೂ ನಾನು ಎನ್‍ಓಸಿ ನೀಡೋದಿಲ್ಲ ಎಂದು ಖಡಕ್ ಅಧಿಕಾರಿ ಧಿಕ್ಕರಿಸಿ ನಿಂತಿದ್ದರು. ಅಧಿಕಾರಿಯ ಧಿಕ್ಕಾರದಿಂದ ಬ್ಯಾಂಕ್ ಗಳ 600 ಕೋಟಿ ಹಣ ಉಳಿಯಿತು. ಇಲ್ಲದೇ ಇದ್ದಿದ್ರೆ ಈತ ಕೂಡ ಮಲ್ಯನ ರೀತಿ ಬ್ಯಾಂಕ್‍ಗೆ ದೋಖಾ ಮಾಡಿ ಎಸ್ಕೇಪ್ ಆಗುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

  • ಐಎಂಎ ದ್ರೋಹಕ್ಕೆ ಮೊದಲ ಬಲಿ – 8 ಲಕ್ಷ ಕಳೆದುಕೊಂಡ ವ್ಯಕ್ತಿಗೆ ಹೃದಯಾಘಾತ

    ಐಎಂಎ ದ್ರೋಹಕ್ಕೆ ಮೊದಲ ಬಲಿ – 8 ಲಕ್ಷ ಕಳೆದುಕೊಂಡ ವ್ಯಕ್ತಿಗೆ ಹೃದಯಾಘಾತ

    – ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಮೊದಲ ಬಲಿಯಾಗಿದೆ. ಐಎಂಎಯಲ್ಲಿ ಹಣ ಹೂಡಿದ್ದ ಅಫ್ಜಲ್ ಪಾಷಾ ವಂಚನೆಗೊಳಗಾದ ಆಘಾತದಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

    ಬೆಂಗಳೂರು ಹಳೇಗುಡ್ಡದಹಳ್ಳಿ ನಿವಾಸಿಯಾದ ಪಾಷಾ, ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

    ಅಪ್ಜಲ್ ಪಾಷಾ ಫುಟ್ ಬಾತ್ ಮೇಲೆ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ಬಂದ ಹಣದಲ್ಲಿ ಕುಟುಂಬ ಸಾಗಿಸುತ್ತಾ ಇದ್ದರು. ನಾಲ್ಕು ಹೆಣ್ಣು ಮಕ್ಕಳ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಅಪ್ಜಲ್ ಪಾಷಾ, ಮಕ್ಕಳು, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ ಎಂದು ಅವರ ಸಂಬಂಧಿ ಮಹಮ್ಮದ್ ಹನೀಫ್ ಹೇಳಿದ್ದಾರೆ. ಇದನ್ನೂ ಓದಿ: ಐಎಂಎ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ವಂತೆ – ಲಾಭಾಂಶದ ಆಸೆಗೆ ಲಕ್ಷ, ಕೋಟಿ ಕಳೆದುಕೊಂಡ್ರು, ವಂಚನೆ ಹೇಗೆ..?

    ನಾಲ್ವರು ಹೆಣ್ಣು ಮಕ್ಕಳಲ್ಲಿ ಇಬ್ಬರಿಗೆ ಮದುವೆ ಮಾಡಿದ್ದಾರೆ. ಮೂರನೇ ಮಗಳ ಮದುವೆಗೆ ಎಂದು 2017ರಲ್ಲಿ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಅಪ್ಜಲ್ ಪಾಷಾ 2 ಲಕ್ಷ ತನ್ನ ಇಬ್ಬರು ಹೆಣ್ಣು ಮಕ್ಕಳ ಕಡೆಯಿಂದ ತಲಾ ಮೂರು ಲಕ್ಷ ಒಟ್ಟು ಎಂಟು ಲಕ್ಷ ಹಣ ಹೂಡಿಕೆ ಮಾಡಿದ್ದರು. ಆಗಸ್ಟ್ 4 ರಂದು ಮೂರನೇ ಮಗಳ ಮದುವೆ ಐಎಂಎ ಕಂಪನಿಗೆ ಕಟ್ಟಿದ್ದ ಹಣ ಆಪ್ಲೇ ಮಾಡಿದ್ದರು. ಕಂಪನಿ ಮಾರ್ಚ್ 30 2019ಕ್ಕೆ ಹಣ ಮರುಪಾವತಿ ಮಾಡುವುದಾಗಿ ಲೆಟರ್ ಕೊಟ್ಟಿದೆ. ಏಳು ಎಂಟು ತಿಂಗಳಾದರೂ ಹಣ ಬಂದಿರಲಿಲ್ಲ. ಕಟ್ಟಿದ ಹಣ ಬಂದೇ ಬರುತ್ತದೆ ಎಂಬ ಆಶಾ ಭಾವನೆಯಲ್ಲಿದ್ದ ಅಪ್ಜಲ್ ಪಾಷಾ ಕಾಲ ದೂಡುತ್ತಿದ್ದರು ಎಂದು ಅವರ ಮತ್ತೊಬ್ಬ ಸಂಬಂಧಿ ಇಮ್ರಾನ್ ತಿಳಿಸಿದ್ದಾರೆ.

    ಆದರೆ ಇತ್ತ ನಯವಂಚಕ ಮನ್ಸೂರ್ ಖಾನ್ ನ ಅಸಲಿ ಬಣ್ಣ ಬಯಲಾಗುತ್ತಿದ್ದಂತೆ ಅಪ್ಜಲ್ ಪಾಷಾ ಆತಂಕಗೊಂಡಿದ್ದರು. ಇದೇ ಟೆನ್ಷನ್‍ನಲ್ಲಿ ನಿನ್ನೆ ಪೀಣ್ಯಾದ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ, ವಂಚನೆಯ ಬಗ್ಗೆ ಭಾವುಕರಾಗಿ ಮಾತನಾಡುವಾಗ ಹೃದಯಾಘಾತವಾಗಿದೆ. ತಕ್ಷಣವೇ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಆದರೂ ರಾತ್ರಿ 9.30ರ ಸುಮಾರಿಗೆ ಅಫ್ಜಲ್ ಸಾವಿಗೀಡಾಗಿದ್ದಾರೆ ಎಂಬುದಾಗಿ ಇಮ್ರಾನ್ ವಿವರಿಸಿದ್ದಾರೆ.