Tag: Mansoon Rain

  • ಮುಂಗಾರು ಚುರುಕು – ಕರಾವಳಿಗೆ ಮೂರು ದಿನ ರೆಡ್ ಅಲರ್ಟ್

    ಮುಂಗಾರು ಚುರುಕು – ಕರಾವಳಿಗೆ ಮೂರು ದಿನ ರೆಡ್ ಅಲರ್ಟ್

    ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಮುಂಗಾರು (Mansoon) ಚುರುಕುಗೊಳ್ಳಲಿದ್ದು, ಕರಾವಳಿಗೆ ಮುಂದಿನ ಮೂರು ದಿನ ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಕಳೆದ ಮೂರ್ನಾಲ್ಕು ದಿನದಿಂದ ಕರಾವಳಿ (Karavali) ಸೇರಿದಂತೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಕೊಂಚ ಬಿಡುವು ನೀಡಿದ್ದ ವರುಣಾ, ಇಂದಿನಿಂದ ಮತ್ತೆ ಜೋರು ಮಳೆ ಸುರಿಸುವ ಮುನ್ಸೂಚನೆ ನೀಡಿದ್ದಾನೆ. ಕರಾವಳಿ ಜಿಲ್ಲೆಗಳಾದ ಉಡುಪಿ , ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದಿನಿಂದ ಮುಂದಿನ ಮೂರು ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಇಂದು ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಗಳಿಗೂ ರೆಡ್ ಅಲರ್ಟ್ ನೀಡಲಾಗಿದೆ. ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ – ಸೇವೆಗೆ ಸಿದ್ಧವಾಯ್ತು ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ

    ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಗೆ ಮುಂದಿನ ಒಂದು ವಾರ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಸಾಧಾರಣ ಮಳೆ ಮತ್ತು ಮೋಡ ಕವಿದ ವಾತಾವರಣ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

  • ರಾಜ್ಯದಲ್ಲಿ ಮುಂದಿನ 4 ದಿನಗಳವರೆಗೆ ಭಾರೀ ಮಳೆ – 30 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ರಾಜ್ಯದಲ್ಲಿ ಮುಂದಿನ 4 ದಿನಗಳವರೆಗೆ ಭಾರೀ ಮಳೆ – 30 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ಮುಂದಿನ ನಾಲ್ಕು ದಿನಗಳವರೆಗೆ ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಉತ್ತರ ಕನ್ನಡ ಹೊರತುಪಡಿಸಿ ಉಳಿದ ಎಲ್ಲಾ 30 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಜೂನ್ 14ರವರೆಗೆ ಮಳೆ ಅಲರ್ಟ್ ನೀಡಲಾಗಿದೆ. ಗುರುವಾರ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ದಾವಣಗೆರೆ, ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ ಸೇರಿದಂತೆ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ಹಗರಣ; ಸಂಸದ ತುಕಾರಾಂ, ಮೂವರು ಶಾಸಕರ ಮನೆ ಮೇಲೆ ED ದಾಳಿ

    ಜೂನ್ 13ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ತುಮಕೂರು ಸೇರಿದಂತೆ ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ರಾಜಾ ರಘುವಂಶಿ ಕೊಲೆ ಪ್ರಕರಣ – ಹಂತಕಿ ಸೇರಿ ಐವರನ್ನು ಮೇಘಾಲಯಕ್ಕೆ ಕರೆತಂದ ಪೊಲೀಸರು

    ಜೂನ್ 14ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಮೈಸೂರಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಉಳಿದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

  • ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

    ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ (Rain) ಸಾಧ್ಯತೆಯಿದ್ದು, ಇಂದು ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಜೂ.11ರಂದು ಮಲೆನಾಡು, ಕರಾವಳಿ ಕರ್ನಾಟಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಉಳಿದೆಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂ.12ರಂದು ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದನ್ನೂ ಓದಿ: ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

    ಜೂ. 13ರಂದು 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು, ಕರಾವಳಿ ಸೇರಿ ಇತರೆ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಉಳಿದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕಿಡಿ

  • ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಚುರುಕು – ಜೂ.13ರವರೆಗೆ ವ್ಯಾಪಕ ಮಳೆ ಸಾಧ್ಯತೆ

    ನಾಳೆಯಿಂದ ರಾಜ್ಯದಲ್ಲಿ ಮುಂಗಾರು ಚುರುಕು – ಜೂ.13ರವರೆಗೆ ವ್ಯಾಪಕ ಮಳೆ ಸಾಧ್ಯತೆ

    – ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

    ಬೆಂಗಳೂರು: ನಾಳೆಯಿಂದ (ಸೋಮವಾರ) ರಾಜ್ಯದಲ್ಲಿ ಮುಂಗಾರು (Mansoon Rain) ಚುರುಕುಗೊಳ್ಳಲಿದ್ದು, ವ್ಯಾಪಕ ಮಳೆಯಾಗುವ ಕುರಿತು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    ಜೂ.09ರಿಂದ ಜೂ.13ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 11ರಂದು ಬಳ್ಳಾರಿ, ದಾವಣಗೆರೆ, ವಿಜಯನಗರಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: 55ರ ಆಂಟಿ ಜೊತೆಗೆ ಯುವಕ ಲವ್ವಿಡವ್ವಿ; ಲವರ್‌ಗಾಗಿ ಆಕೆಯ ಗಂಡನನ್ನೇ ಕೊಂದು ಸುಟ್ಟುಹಾಕಿದ್ದ ಮೂವರು ಅರೆಸ್ಟ್‌

    ಜೂನ್ 12ಕ್ಕೆ ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

  • ದೇಶದಲ್ಲಿ ಮಾನ್ಸೂನ್ ಅಬ್ಬರ – ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ದೇಶದಲ್ಲಿ ಮಾನ್ಸೂನ್ ಅಬ್ಬರ – ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    – ಮುಂಬೈನಲ್ಲಿ 24 ಗಂಟೆಗಳಲ್ಲಿ 135.4 ಮಿ.ಮೀ ಮಳೆ
    – ಹಿಮಾಚಲ ಪ್ರದೇಶದಲ್ಲಿ ಆಲಿಕಲ್ಲು ಮಳೆ

    ನವದೆಹಲಿ: ದೇಶದಲ್ಲಿ ಮಾನ್ಸೂನ್ ಅಬ್ಬರ ಜೋರಾಗಿದ್ದು, ಕೇರಳದಲ್ಲೂ ಭಾರೀ ಮಳೆಯಾಗಿದೆ. ಕಣ್ಣೂರು, ವಯನಾಡ್, ಕೋಝಿಕ್ಕೋಡ್‌ನಲ್ಲಿ ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಕೊಚ್ಚಿಯ ಕಡಲತೀರದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ವರುಣನ ಆರ್ಭಟಕ್ಕೆ ಸಮುದ್ರಗಳು ಪ್ರಕ್ಷುಬ್ದಗೊಂಡಿದೆ. ಭಾರೀ ಮಳೆಯಿಂದಾಗಿ ಜನ ತತ್ತರಿಸಿದ್ದಾರೆ. ಇದನ್ನೂ ಓದಿ: ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ – ರಾಜ್ಯದಲ್ಲಿ ಎಲ್ಲೆಲ್ಲಿ ಏನಾಗಿದೆ?

    ಮಹಾರಾಷ್ಟ್ರದ ಪುಣೆ, ಸತಾರಾ, ಸೋಲಾಪುರ, ರಾಯಗಢ ಮತ್ತು ಮುಂಬೈನಂತಹ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ರಾಯಗಢದಲ್ಲಿ ಸಿಡಿಲು ಬಡಿದು ಒಬ್ಬರು ಸಾವನ್ನಪ್ಪಿದರೇ, ಮುಂಬೈನಲ್ಲಿ ಮರ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಮುಂಬೈ 24 ಗಂಟೆಗಳಲ್ಲಿ 135.4 ಮಿಮೀ ಮಳೆಯಾಗಿದೆ. ಹಿಮಾಚಲ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: 1200 ರೂ. ಬೆಲೆಯ ಟಿಕೆಟ್‌ 6000ಕ್ಕೆ ಸೇಲ್‌ – ಐಪಿಎಲ್‌ ಟಿಕೆಟ್‌ ಮಾರುತ್ತಿದ್ದ ಟೆಕ್ಕಿ ಬಂಧನ

  • ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ – ರಾಜ್ಯದಲ್ಲಿ ಎಲ್ಲೆಲ್ಲಿ ಏನಾಗಿದೆ?

    ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ – ರಾಜ್ಯದಲ್ಲಿ ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು: ದೇಶದಲ್ಲಿ ಮುಂಗಾರು ಅಬ್ಬರ ಶುರುವಾಗಿರೋ ಹೊತ್ತಲ್ಲೇ ಹವಾಮಾನ ಇಲಾಖೆ ಮತ್ತೊಂದು ಶುಭಸುದ್ದಿ ನೀಡಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ಆಗಲಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಯ ಪ್ರಮಾಣ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇನ್ನು, ರಾಜ್ಯದಲ್ಲಿ ಮುಂಗಾರು ಆರ್ಭಟಕ್ಕೆ ಜನ ತತ್ತರಿಸಿದ್ದು, ಕೊಡಗು ಹಾಗೂ ಹಾವೇರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಥಣಿಯ ನಾಗನೂರು ಗ್ರಾಮದಲ್ಲಿ ಎತ್ತಿನಗಾಡಿ ಹಳ್ಳಕ್ಕೆ ಬಿದ್ದು ಇಬ್ಬರು ಮಕ್ಕಳಾದ ಗಣೇಶ ಸಂಜು ಕಾಂಬಳೆ (9), ದೀಪಕ್ ಸಂಜು ಕಾಂಬಳೆ (11)ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉರ್ದುಗೆ 100 ಕೋಟಿ – ಕನ್ನಡಕ್ಕೆ ಬರೀ 32 ಕೋಟಿನಾ..? – ಬಿಜೆಪಿ ಪೋಸ್ಟರ್ ತಂತ್ರಕ್ಕೆ ಸಿಎಂ ಕೆಂಡ

    ದಕ್ಷಿಣಕನ್ನಡದಲ್ಲಿ ಮಳೆ ಆರ್ಭಟ ಜೋರಾಗಿತ್ತು. ಮಂಗಳೂರಿನ ಬಜಾಲ್ ಜಲ್ಲಿಗುಡ್ಡೆಯ ಒಂದು ಭಾಗದ ಮಣ್ಣು ಕುಸಿದು 150 ಕ್ಕೂ ಹೆಚ್ಚು ಮನೆಗಳಿಗೆ ತೊಂದರೆ ಉಂಟಾಗಿದೆ. ರಾಮಕುಂಜ ಎಂಬಲ್ಲಿ ಬೃಹತ್ ಮರವೊಂದು ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪಾರಾಗಿದ್ದಾರೆ. ನೇತ್ರಾವತಿಯಲ್ಲಿ ನೀರು ಹೆಚ್ಚಾಗಿದೆ. ಇದನ್ನೂ ಓದಿ: ಮಂಗಳೂರು| ತಲ್ವಾರ್‌ನಿಂದ ದಾಳಿ ನಡೆಸಿ ಯುವಕನ ಬರ್ಬರ ಹತ್ಯೆ

    ಮಳೆ ಆರ್ಭಟದಿಂದ ಉಡುಪಿಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಚಿಕ್ಕಮಗಳೂರಿನ ಕೊಪ್ಪದ ಬಿಂತ್ರವಳ್ಳಿ ಗ್ರಾಮದಲ್ಲಿ ಧರೆ ಕುಸಿದು ಮನೆ ಮುಂದೆ ಕಲ್ಲು-ಮಣ್ಣು ಬಂದು ನಿಂತಿದ್ದು, ಕೂದಲೆಳೆ ಅಂತರದಲ್ಲಿ ಮನೆಯಲಿದ್ದವರು ಪಾರಾಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗಿದ್ದು. ಪ್ರವಾಸಿಗರು ಹುಚ್ಚಾಟದಲ್ಲಿ ತೊಡಗಿದ್ದಾರೆ. ಹಾಸನ ಜಿಲ್ಲೆಯಲ್ಲೂ ಅಲ್ಲಲ್ಲಿ ಮನೆಗಳು ಕುಸಿತವಾಗಿದೆ. ಹೇಮಾವತಿ ಡ್ಯಾಮ್‌ನ ಒಳಹರಿವು ಹೆಚ್ಚಿದೆ. ಒಂದೇ ದಿನಕ್ಕೆ 8,004 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಇದನ್ನೂ ಓದಿ: IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?

    ಸಕಲೇಶಪುರದ ಗುಡ್ಡಕುಸಿತ ಸ್ಥಳಕ್ಕೆ ವಿಪಕ್ಷ ನಾಯಕ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಡಗಿನಲ್ಲೂ ಮಳೆ ನಾನಾ ಅವಾಂತರ ಸೃಷ್ಟಿಸಿದೆ. ಎನ್‌ಡಿಆರ್‌ಎಫ್ ತಂಡ ಮಡಿಕೇರಿ ನಗರಕ್ಕೆ ಆಗಮಿಸಿದೆ. ಕೆಆರ್‌ಎಸ್‌ಗೆ ಒಂದೇ ದಿನ 3 ಅಡಿ ನೀರು ಬಂದಿದ್ದು, 93 ಅಡಿ ಆಗಿದೆ. ಕೊಪ್ಪಳದ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ 12 ಟಿಎಂಸಿ ನೀರು ಸಂಗ್ರಹವಾಗಿದೆ. ಬೆಳಗಾವಿಯಲ್ಲಿ ಕೃಷ್ಣಾ, ದೂದಗಂಗಾ, ವೇದಗಂಗಾ ಹಿರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆ ಆಗಿದೆ. ಇದನ್ನೂ ಓದಿ: ಗ್ರಾಮೀಣ ಯುವಸಮೂಹವನ್ನು ಸಬಲರನ್ನಾಗಿಸುವುದೇ ನಮ್ಮ ಗುರಿ: ಶರಣಪ್ರಕಾಶ್‌ ಪಾಟೀಲ್‌

  • ಮಂಡ್ಯದಲ್ಲಿ ಭಾರೀ ಮಳೆ – ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ

    ಮಂಡ್ಯದಲ್ಲಿ ಭಾರೀ ಮಳೆ – ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ

    ಮಂಡ್ಯ: ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಭಾನುವಾರದಿಂದ ಮುಂಗಾರು ಮಳೆ (Mansoon Rain) ಅಬ್ಬರಿಸುತ್ತಿರುವ ಹಿನ್ನೆಲೆ ಹಳೆ ಮೈಸೂರು (Mysuru) ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ (KRS Dam) ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳದ ಪರಿಣಾಮ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ 15 ಟಿಎಂಸಿ ನೀರು ಇತ್ತು. ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಭಾನುವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದ ಡ್ಯಾಂ ಭರ್ತಿಯಾಗುತ್ತದೆ ಎಂಬ ಆಶಾ ಭಾವನೆ ಜನರಲ್ಲಿ ಮೂಡಿದೆ. ಇದನ್ನೂ ಓದಿ: ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಮುಖ್ಯರಸ್ತೆ, ಸರ್ವಿಸ್ ರಸ್ತೆ ವಿಲೀನ – ಡಿಕೆಶಿ ಸ್ಥಳ ಪರಿಶೀಲನೆ

    ಇದೀಗ ಕೆಆರ್‌ಎಸ್ ಡ್ಯಾಂಗೆ 2,053 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಂಗಳವಾರಕ್ಕೆ ನೀರಿನ ಪ್ರಮಾಣವು 5,000 ಕ್ಯೂಸೆಕ್‌ಗೆ ಹೆಚ್ಚುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 89.35 ಅಡಿ ನೀರು ಇದೆ. ಇನ್ನೂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಈಗ 15.555 ಟಿಎಂಸಿ ನೀರಿದೆ. ಹೊರ ಹರಿವಿನ ಪ್ರಮಾಣ 347 ಕ್ಯೂಸೆಕ್ ಇದೆ.

  • ಮಹಾ ಮಳೆಗೆ ಮುಂಬೈ ಮೆಟ್ರೋ ಸ್ಟೇಷನ್ ಸಂಪೂರ್ಣ ಜಲಾವೃತ

    ಮಹಾ ಮಳೆಗೆ ಮುಂಬೈ ಮೆಟ್ರೋ ಸ್ಟೇಷನ್ ಸಂಪೂರ್ಣ ಜಲಾವೃತ

    – ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ನೀರು

    ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈಗೆ (Mumbai) ಅವಧಿಗೂ ಮುನ್ನವೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ ಭಾರೀ ಮಳೆಗೆ ನೂತನ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ(Acharya Atre Chowk underground Metro Station) ಆಕ್ವಾಲೈನ್-3 ಸಂಪೂರ್ಣ ಜಲಾವೃತವಾಗಿದೆ.

    ಮೇ 10ರಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯ ಅತ್ರೆ ಚೌಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದ ಆಕ್ವಾಲೈನ್ ಮಳೆ ನೀರಿನಿಂದ ತುಂಬಿದ್ದು, ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣದೊಳಗೆ ನೀರು ಹರಿದು ಬಂದಿದೆ. ಇದನ್ನೂ ಓದಿ: ಪ್ರವಾಸಿಗರ ಹಾಟ್‌ಸ್ಪಾಟ್ ಬಲಮುರಿ ಡೆತ್ ಸ್ಪಾಟ್ ಆಯ್ತಾ? – ಒಂದೂವರೆ ವರ್ಷದಲ್ಲಿ 20ಕ್ಕೂ ಅಧಿಕ ಮಂದಿ ಸಾವು

    ಮುಂಬೈ ಆಕ್ವಾಲೈನ್ 3 (Aqua Line 3) ಸೇವಾ ನವೀಕರಣ ಹಾಗೂ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದಾಗಿ, ಆಕ್ವಾಲೈನ್ -3ರಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಆಚಾರ್ಯ ಅತ್ರೆ ಚೌಕ್ ಬದಲಿಗೆ ವರ್ಲಿ ನಿಲ್ದಾಣದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ಲಿಮಿಟೆಡ್  (MMRCL) ಅಧಿಕೃತ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ. ಇದನ್ನೂ ಓದಿ: ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ವರ್ಲಿ ಮತ್ತು ಆಚಾರ್ಯ ಅತ್ರೆ ಚೌಕ್ ನಡುವಿನ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಎಂಆರ್‌ಸಿಎಲ್ ತಿಳಿಸಿದೆ. ಇದನ್ನೂ ಓದಿ: 6 ಗನ್‌ಮ್ಯಾನ್‌ಗಳೊಂದಿಗೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ- ಸ್ಫೋಟಕ ವಿಡಿಯೋ ಔಟ್

    ಮುಂಬೈನಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ, ಆಚಾರ್ಯ ಅತ್ರೆ ಚೌಕ್ ನಿಲ್ದಾಣದ ಪ್ರವೇಶ/ನಿರ್ಗಮನ ಸ್ಟೆಪ್ ಹಾಗೂ ಎಸ್ಕಲೇಟರ್‌ಗಳ ಮೂಲಕ ನಿಲ್ದಾಣದೊಳಗೆ ಮಳೆ ನೀರು ನುಗ್ಗಿದೆ. ಮೆಟ್ರೋ ನಿಲ್ದಾಣದ ಒಳಗೆ ಹಠಾತ್ ನೀರು ಹರಿದು ಬಂದ ಕಾರಣ ಪ್ರವೇಶ/ನಿರ್ಗಮನ ಮಾರ್ಗದಲ್ಲಿನ ಆರ್‌ಸಿಸಿ ನೀರು ತಡೆಗೋಡೆ ಕುಸಿದು ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಪುಟಿನ್ ಹೆಲಿಕಾಪ್ಟರ್ ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ – ರಷ್ಯಾದ ಕಮಾಂಡರ್‌ಗೆ ಗಾಯ

    ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಅವಧಿಪೂರ್ವ ಮುಂಗಾರು ಪ್ರವೇಶಿಸಿದೆ..

  • ಈ ಬಾರಿ 1 ವಾರ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶ?

    ಈ ಬಾರಿ 1 ವಾರ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶ?

    ಬೆಂಗಳೂರು: 16 ವರ್ಷದಲ್ಲೇ ಮೊದಲ ಬಾರಿಗೆ ಅವಧಿಗೂ ಮುನ್ನ ಮುಂಗಾರು ಮಳೆ (Mansoon Rain) ರಾಜ್ಯವನ್ನು ಪ್ರವೇಶಿಸಲಿದೆ. ಈ ಬಾರಿ ಐದಾರು ದಿನ ಮುಂಚೆಯೇ ಅಂದರೆ ಮೇ 27ಕ್ಕೆ ಕೇರಳಕ್ಕೆ (Kerala) ಮುಂಗಾರು ಪ್ರವೇಶಿಸಲಿದ್ದು, ಕರ್ನಾಟಕಕ್ಕೆ (Karnataka) ಮೇ 30 ಅಥವಾ 31ಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಈ ಮೊದಲು 2009ರಲ್ಲಿ ಮೇ 23 ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿತ್ತು. ಅದಾಗಿ 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಬಾರಿ ಮೇ 27ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಸಾಮಾನ್ಯವಾಗಿ ಜೂನ್ 1ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ಅದಕ್ಕಿಂತಲೂ ನಾಲ್ಕು ದಿನ ಮುಂಚಿತವಾಗಿ ಎಂಟ್ರಿ ಕೊಡಲಿದೆ. ಹೀಗಾಗಿ ಈ ಸಲದ ಖಾರಿಫ್ ಬಿತ್ತನೆಯ ಋತುವಿನ ಮೇಲೆ ಒಳ್ಳೆಯ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. 2024ರಲ್ಲಿ ಕರ್ನಾಟಕಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಆಗಿತ್ತು. ಈ ಬಾರಿ ಕೇರಳಕ್ಕೆ ಮೇ 27ಕ್ಕೆ ಆಗಮಿಸುತ್ತಿದ್ದು, ಕರ್ನಾಟಕಕ್ಕೆ ಮೇ 30 ಅಥವಾ 31ಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಕನ್ನಡದ ಸಾಹಿತಿ ಬಾನು ಮುಷ್ತಾಕ್‌ ಅವರ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

    2009ರಲ್ಲಿ ಮುಂಗಾರು ಪ್ರವೇಶ ಅತ್ಯಂತ ವೇಗವಾಗಿ ಬಂದ ಮಾನ್ಸೂನ್ ಆಗಿತ್ತು. ಅಲ್ಲದೇ ಆ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಶೀಘ್ರ ಮುಂಗಾರು ಪ್ರವೇಶಿಸಲಿದ್ದು, ಈ ಸಲವೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ವಾಡಿಕೆ ಅವಧಿಗಿಂತ ಮೊದಲೇ ಬೇಗ ಮುಂಗಾರು ಆಗಮನವಾದರೆ ಅತ್ಯಧಿಕ ಮಳೆ ದಾಖಲಾಗುವ ಸಂಭವವಿದೆ. ಈ ಬಾರಿಯೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: BBMP ವ್ಯಾಪ್ತಿಯಲ್ಲಿನ ಕಾಮಗಾರಿಗಳ ಹಣ ಬಿಡುಗಡೆಗೆ ಆದೇಶ

    ಈ ಬಾರಿ ಹಿಂದಿನ ವರ್ಷಗಳಿಗಿಂತ ಮಳೆಯ ಅಬ್ಬರ ಹೆಚ್ಚಿರಲಿದೆ. ಜೂನ್-ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳು ಮುಂಗಾರು ಋತುವಿನಲ್ಲಿ ಹೆಚ್ಚಿನ ಮಳೆಯಾಗಲಿದೆ. ಈ ಬಾರಿ ಸರಾಸರಿ 87 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

  • ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

    ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

    ನವದೆಹಲಿ: ಈ ಬಾರಿಯ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು (Mansoon Rain) ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಕಾಲ ಸರಾಸರಿ 87 ಸೆಂ.ಮೀ. ಮಳೆಯ ದೀರ್ಘಕಾಲೀನ ಸರಾಸರಿಗಿಂತ 105% ಮಳೆಯಾಗುವ ಸಾಧ್ಯತೆಯಿದೆ, ಇದರಲ್ಲಿ ±5% ದೋಷಾಂಶವಿರಲಿದೆ ಎಂದು ಅಂದಾಜಿಸಿದೆ.

    ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳದ ಮೂಲಕ ತನ್ನ ಮುನ್ನಡೆಯನ್ನು ಪ್ರಾರಂಭಿಸಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಹಿಂದೆ ಸರಿಯುತ್ತದೆ. ಸರಾಸರಿಗಿಂತ ಹೆಚ್ಚಿನ ಮಳೆಯು ಕೃಷಿ ವಲಯಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡಬಹುದು ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ಈ ವರ್ಷದ ಮುನ್ಸೂಚನೆಯ ಪ್ರಕಾರ, ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳು ಅನುಕೂಲಕರ ಮಳೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ ಲಡಾಖ್, ಈಶಾನ್ಯ ಮತ್ತು ತಮಿಳುನಾಡಿನಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: Gadag | ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ

    ಐಎಂಡಿ ಸಾಮಾನ್ಯ ಮಳೆಯನ್ನು 50 ವರ್ಷಗಳ ಸರಾಸರಿ 87 ಸೆಂ.ಮೀ (ಸುಮಾರು 35 ಇಂಚುಗಳು) 96% ರಿಂದ 104% ರವರೆಗೆ ವ್ಯಾಖ್ಯಾನಿಸುತ್ತದೆ. ಈ ವ್ಯಾಪ್ತಿಗಿಂತ ಹೆಚ್ಚಿನ ಪ್ರಮಾಣವನ್ನು ‘ಸಾಮಾನ್ಯಕ್ಕಿಂತ ಹೆಚ್ಚು’ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್

    ಭಾರತೀಯ ಸಾಗರದ ಡೈಪೋಲ್ ಸಕಾರಾತ್ಮಕವಾಗಿರುವುದು ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಮಳೆಯನ್ನು ತರಲಿದೆ. ಈ ವರ್ಷದ ಉತ್ತರ ಗೋಳಾರ್ಧದಲ್ಲಿ ಕಡಿಮೆ ಹಿಮಪಾತವೂ ಮುಂಗಾರಿಗೆ ಪೂರಕವಾಗಿದೆ ಎಂದು ಹವಮಾನ ಇಲಾಖೆ ಮುಖ್ಯಸ್ಥ ಡಾ. ಮೃತ್ಯುಂಜಯ್ ಮೊಹಪಾತ್ರಾ ತಿಳಿಸಿದ್ದಾರೆ. ಕಳೆದ ವರ್ಷ ಮುಂಗಾರು 108% LPA ಮಳೆಯನ್ನು ಒದಗಿಸಿತ್ತು. ಆದರೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕಡಿಮೆ ಮಳೆಯಾಗಿತ್ತು. ಐಎಂಡಿ ತನ್ನ ಮುನ್ಸೂಚನೆಯನ್ನು ಮೇ ತಿಂಗಳಲ್ಲಿ ನವೀಕರಿಸಲಿದೆ. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು