Tag: Manoranjan Ravichandran

  • ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ

    ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ

    ನ್ನಡ ಚಿತ್ರರಂಗದ ಭರವಸೆ ನಾಯಕ ನಟ ಮನೋರಂಜನ್ ರವಿಚಂದ್ರನ್ (Manoranjan Ravichandran) ಹೊಸ ಕಥೆಯೊಂದಿಗೆ ಹಾಜರಾಗಿದ್ದಾರೆ. ಈ ಬಾರಿ ಮನು, ಕಂಟೆಂಟ್ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಸಾಹೇಬ, ಮುಗಿಲ್ ಪೇಟೆ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಭರವಸೆ ಹುಟ್ಟುಹಾಕಿರುವ ಕ್ರೇಜಿಸ್ಟಾರ್ ಪುತ್ರ ಸದ್ದಿಲ್ಲದೆ ಹೊಸ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

    ಮನೋರಂಜನ್ ರವಿಚಂದ್ರನ್ ಅವರ ಐದನೇ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಮನು ಹೊಸ ಸಾಹಸಕ್ಕೆ ಸಹೋದರ ವಿಕ್ರಮ್ ರವಿಚಂದ್ರನ್ ಸಾಥ್ ಕೊಟ್ಟಿದ್ದಾರೆ. ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ವಿಕ್ಕಿ ಶುಭಾಶಯ ತಿಳಿಸಿದರು. ಇದನ್ನೂ ಓದಿ: `ಅನ್‌ಲಾಕ್ ರಾಘವ’ ಖ್ಯಾತಿಯ ಮಿಲಿಂದ್‌ಗೆ ಲಾಟ್ರಿ; ನಾಲ್ಕು ಚಿತ್ರಗಳಿಗೆ ಸಹಿ ಮಾಡಿದ ನಟ

    ಯುವ ಪ್ರತಿಭೆ ರುದ್ರೇಶ್ ನಿರ್ದೇಶನದಲ್ಲಿ ಮನೋರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದು, ಬೃಂದಾ ಆಚಾರ್ಯ ನಾಯಕಿಯಾಗಿ ಜೊತೆಯಾಗಿದ್ದಾರೆ. ನಟಿ ಅನುಷಾ ರೈ ಸ್ಪೆಷಲ್ ರೋಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಒಂದೊಳ್ಳೆ ಕಂಟೆಂಟ್‌ಗೆ ಕಮರ್ಷಿಯಲ್ ಟಚ್ ಕೊಟ್ಟು ರುದ್ರೇಶ್ ಕಥೆ ಹೆಣೆದಿದ್ದಾರೆ.

    ವೈಎಸ್ ಪ್ರೊಡಕ್ಷನ್ ನಡಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೆರ್ಸಿ ಗಿಫ್ಟ್ ಮ್ಯೂಸಿಕ್, ಸೆಲ್ವಂ ಕ್ಯಾಮೆರಾ ವರ್ಕ್ ಹಾಗೂ ಕೆಎಂ ಪ್ರಕಾಶ್ ಸಂಕಲನ ಸಿನಿಮಾಗಿದೆ. ಮುಂದಿನ ವಾರದಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ. ಆ ಬಳಿಕ ಬಾದಾಮಿಯತ್ತ ಇಡೀ ಟೀಂ ಹೆಜ್ಜೆ ಹಾಕಲಿದೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ

  • ಮದುವೆ ಡೇಟ್ ಫೈನಲ್: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಮನೋರಂಜನ್

    ಮದುವೆ ಡೇಟ್ ಫೈನಲ್: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಮನೋರಂಜನ್

    ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಸಾಹೇಬ ಜ್ಯೂನಿಯರ್ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತೆರೆಮರೆಯಲ್ಲಿ ಭರ್ಜರಿಯಾಗಿ ಮದುವೆಯ ತಯಾರಿ ನಡೆಯುತ್ತಿದೆ.

    ನಟ, ನಿರ್ದೇಶಕ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಛಾಪೂ ಮೂಡಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ಚಿತ್ರರಂಗದಲ್ಲಿ ಕಮಾಲ್ ಮಾಡಿದವರು. ಈಗ ಗುರುಹಿರಿಯರು ನಿಶ್ಚಿಯಿಸಿದ ಸಂಗೀತಾ ಮದುವೆಯಾಗಲು ಮನೋರಂಜನ್ ರೆಡಿಯಾಗಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: 

    ಪರಸ್ಪರ ಅರ್ಥ ಮಾಡಿಕೊಂಡು ಹೊಸ ಬಾಳಿಗೆ ಕಾಲಿಡಲು ಸಂಗೀತಾ ಮತ್ತು ಮನೋರಂಜನ್ ಸಜ್ಜಾಗಿದ್ದಾರೆ. ಆಗಸ್ಟ್ 21ರಂದು ಮದುವೆ, ಆಗಸ್ಟ್ 20ಕ್ಕೆ ವಧುವಿನ ಕುಟುಂಬದ ಕಡೆಯಿಂದ ಆರತಕ್ಷತೆ, ಆಗಸ್ಟ್ 22ಕ್ಕೆ ಚಿತ್ರರಂಗದ ಸ್ನೇಹಿತರಿಗೆ ಆರತಕ್ಷತೆ ಏರ್ಪಡಿಸಲಾಗಿದೆ. ಒಟ್ನಲ್ಲಿ ಹಸೆಮಣೆ ಏರಲಿರುವ ಹೊಸ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    Live Tv

    [brid partner=56869869 player=32851 video=960834 autoplay=true]

  • ಬೀಚ್‍ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮುಗಿಲ್ ಪೇಟೆ ಬೆಡಗಿ

    ಬೀಚ್‍ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮುಗಿಲ್ ಪೇಟೆ ಬೆಡಗಿ

    – ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಸಿನಿಮಾ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ವೇಳೆ ಮನೋರಂಜನ್‍ಗೆ ಜೋಡಿಯಾಗಿ ಹೊಸ ನಟಿ ಕಯಾದು ಲೋಹರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅವರಿಗೆ ಇದು ಮೊದಲ ಸಿನಿಮಾ ಆಗಿದೆ.

     

    View this post on Instagram

     

    A post shared by kayadulohar (@kayadu_lohar)

    ರವಿಚಂದ್ರನ್ ರೀತಿಯಲ್ಲೇ ಮನೋರಂಜನ್ ಸಹ ಕ್ರಿಯೇಟಿವಿಟಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಮುಗಿಲ್ ಪೇಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಆದರೆ ಈ ಸಿನಿಮಾದ ನಾಯಕಿಯ ಕುರಿತು ಇದೀಗ ಚರ್ಚೆ ಶುರುವಾಗಿದ್ದು, ಇದಕ್ಕೆ ಕಾರಣ ಕಯಾಲು ಹಾಕಿರುವ ಹಾಟ್ ಫೋಟೋಗಳು. ಹೌದು ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಪಡ್ಡೆ ಹುಡುಗರು ನಿಬ್ಬೆರಗಾಗಿದ್ದಾರೆ.

     

    View this post on Instagram

     

    A post shared by kayadulohar (@kayadu_lohar)

    ಪುಣೆ ಮೂಲದ ಕಯಾದು, ಇತ್ತೀಚೆಗೆ ಚೀಚ್‍ಗೆ ತೆರಳಿದ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕಿನಿ ತೊಟ್ಟು ಸೂರ್ಯನ ಕಿರಣಗಳಿಗೆ ಮೈವೊಡ್ಡಿದ್ದಾರೆ. ಈ ಫೋಟೋಗಳನ್ನು ಕಂಡ ಪಡ್ಡೆ ಹುಡುಗರು, ಪುಳಕಿತರಾಗಿದ್ದಾರೆ, ಕಣ್ಣರಳಸಿ ನೋಡುತ್ತಿದ್ದಾರೆ. ಮಾಡೆಲ್ ಆಗಿರುವ ಕಯಾದು ಅವರಿಗೆ ಮುಗಿಲ್ ಪೇಟೆ ಚೊಚ್ಚಲ ಸಿನಿಮಾ ಆಗಿದೆ. ಹೀಗಾಗಿ ಸಂಪೂರ್ಣವಾಗಿ ಸಿನಿಮಾ ತೊಡಗಿಸಿಕೊಂಡಿದ್ದಾರೆ.

    ಮುಗಿಲ್ ಪೇಟೆ ಸಿನಿಮಾ ಚಿತ್ರೀಕಣ ಅಂತಿಮ ಹಂತ ತಲುಪಿದ್ದು, ಕೊನೇ ಹಂತದ ಕೆಲಸಗಳಲ್ಲಿ ತೊಡಗಿದೆ. ಇನ್ನೇನು ಬಿಡುಗಡೆ ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ನಟಿ ಕಯಾದು ಅವರು ಸಖತ್ ಹಾಟ್ ಫೊಟೋಗಳನ್ನು ಹಾಕಿದ್ದಾರೆ.

  • ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಸಿದ್ಧತೆ ನಡೆಸಿದ್ದು, ಈ ಕುರಿತ ಮಾಹಿತಿಯನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

    ‘ಆ ದೃಶ್ಯಂ’ ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರವಿಚಂದ್ರನ್ ಅವರು, ತಮ್ಮ 35 ವರ್ಷದ ಕನಸನ್ನು ಸಾಕಾರಗೊಳಿಸಲು ಸಜ್ಜಾಗಿದ್ದು, ಪ್ರೇಮಲೋಕ-2 ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ರಣಧೀರನಾಗಿ ಗ್ರ್ಯಾಂಡ್ ಕೊಡಲಿದ್ದಾರೆ ಎಂದರು.

    ವಿಶೇಷ ಎಂದರೆ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್‍ಗೂ ಒಂದು ಚಾನ್ಸ್ ಕೊಡುವ ನಿರ್ಧಾರವನ್ನು ಪ್ರಕಟಿಸಿದ ಅವರು, ಈ ಕುರಿತು ಸಿದ್ಧತೆಗಳು ಫೈನಲ್ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೂವರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಬಹುದು ಎಂದು ರವಿಚಂದ್ರನ್ ಹೇಳಿದರು.

    ‘ಆ ದೃಶ್ಯ’ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ನನ್ನನ್ನು ಪ್ರೇಕ್ಷಕರು ಹೀರೋ ಆಗಿಯೇ ನೋಡಲು ಬಯಸುತ್ತಾರೆ. ಅಂತಹವರಿಗೆ ಈ ಸಿನಿಮಾ ಇಷ್ಟವಾಗಿದ್ದು, ನಾನು ಹೀರೋ ಪಾತ್ರ ಹಾಗೂ ವಿಶೇಷ ಪಾತ್ರ ಎರಡರಲ್ಲೂ ಮಾಡಲು ಸಿದ್ಧನಿದ್ದೇನೆ. ಕಳೆದ ಹಲವು ವರ್ಷಗಳಿಂದ ಪ್ರೇಮಲೋಕ-2 ಸಿನಿಮಾ ಮಾಡುವ ತಯಾರಿ ನಡೆಯುತ್ತಿತ್ತು. ಆದರೆ ಇದುವರೆಗೂ ಆದು ಆಗಿರಲಿಲ್ಲ. ಆದರೆ ಮಗಳ ಹುಟ್ಟುಹಬ್ಬದ ಸಂಭ್ರಮ ವೇಳೆ ಕಥೆಗೆ ಸ್ಪಷ್ಟನೆ ಸಿಕ್ತು. ಶೀಘ್ರವೇ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡುತ್ತೇನೆ ಎಂದರು.

  • ‘ಪ್ರಾರಂಭ’ ಚಿತ್ರದ ಚಿತ್ರೀಕರಣ ಮುಕ್ತಾಯ

    ‘ಪ್ರಾರಂಭ’ ಚಿತ್ರದ ಚಿತ್ರೀಕರಣ ಮುಕ್ತಾಯ

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ `ಪ್ರಾರಂಭ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಮುಂತಾದ ಕಡೆ ಚಿತ್ರಕ್ಕೆ 50ದಿನಗಳ ಚಿತ್ರೀಕರಣ ನಡೆದಿದೆ. ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ಅವರು ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ.

    ‘ಪ್ರಾರಂಭ’ ಒಂದು ಅದ್ಭುತ ಕಥಾಹಂದರವಿರುವ ಚಿತ್ರ ಕಥೆಯಲ್ಲಿ ಈ ಸಮಾಜಕ್ಕೆ ಪ್ರತ್ಯೇಕವಾಗಿ ಯುವಕ-ಯುವತಿಯರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಸಿನಿಮಾ. ನಾಯಕ ಮನೋರಂಜನ್ ರವಿಚಂದ್ರನ್ ಅವರು ಮೂರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಮನು ಕಲ್ಯಾಡಿ ತಿಳಿಸಿದ್ದಾರೆ.
    5 ಹಾಡುಗಳಿರುವ ಈ ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ.

    2 ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸುರೇಶ್‍ಬಾಬು ಛಾಯಾಗ್ರಹಣ, ವಿಜಿ.ಎನ್.ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

    ಮನೋರಂಜನ್ ರವಿಚಂದ್ರನ್, ಕೀರ್ತಿ ಕಲಕೇರಿ, ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ  ಸಿಕ್ತು ಬಂಪರ್ ಆಫರ್!

    ಬಿಗ್ ಬಾಸ್ ರನ್ನರ್ ಅಪ್ ದಿವಾಕರ್‌ಗೆ ಸಿಕ್ತು ಬಂಪರ್ ಆಫರ್!

    ಬೆಂಗಳೂರು: ಬಿಗ್ ಬಾಸ್ ಕನ್ನಡ-5 ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೇ ಗದ್ದಲ-ಗಲಾಟೆಯಿಂದ ಗುರುತಿಸಿಕೊಂಡಿದ್ದ ಕಾಮನ್ ಮ್ಯಾನ್ ದಿವಾಕರ್ ಅವರಿಗೆ ಬಂಪರ್ ಆಫರ್ ವೊಂದು ಹುಡುಕಿಕೊಂಡು ಬಂದಿದೆ.

    ದಿವಾಕರ್ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರೂ ‘ಬಿಗ್ ಬಾಸ್’ ಅಂತ ದೊಡ್ಡ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿದ ಬಳಿಕ ಕೆಂಪು ಕಲರ್ ಸ್ವಿಫ್ಟ್ ಕಾರು ಖರೀದಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿನಿಮಾಗಳಲ್ಲಿ ನಟಿಸಬೇಕು ಎಂಬ ತಮ್ಮ ಇಚ್ಛೆಯನ್ನ ಹೊರ ಹಾಕಿದ್ದರು.

    `ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಕುಡುಕನಾಗಿ ತಮ್ಮ ನಟನಾ ಪ್ರತಿಭೆಯನ್ನು ದಿವಾಕರ್ ಹೊರ ಹಾಕಿದ್ದರು. ಈಗ ಅದೆಲ್ಲವೂ ದಿವಾಕರ್ ಭವಿಷ್ಯಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈಗ ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ದಿವಾಕರ್ ಅವರಿಗೆ ಲಭಿಸಿದೆ.

    `ಸಾಹೇಬ’, `ಬೃಹಸ್ಪತಿ’ ಸಿನಿಮಾಗಳ ಬಳಿಕ ನಟ ಮನೋರಂಜನ್ ರವಿಚಂದ್ರನ್ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ `ಚಿಲ್ಲಂ’. ಇದೇ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುವ ಅವಕಾಶ ದಿವಾಕರ್ ಪಾಲಾಗಿದೆ. ಈ ಚಿತ್ರದಲ್ಲಿ ಹೀರೋ ಮನೋರಂಜನ್ ರವಿಚಂದ್ರನ್ ಗೆಳೆಯನ ಪಾತ್ರದಲ್ಲಿ ದಿವಾಕರ್ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ಮಿಂಚಲಿರುವ ದಿವಾಕರ್ ಇಡೀ ಸಿನಿಮಾದಲ್ಲಿ ಹೀರೋ ಜೊತೆಯಲ್ಲೇ ಇರಲಿದ್ದಾರೆ.

    ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಪಾತ್ರ ನಿರ್ವಹಿಸಲಿದ್ದಾರೆ. ‘ಚಿಲ್ಲಂ’ ಚಿತ್ರಕಥೆ ಡ್ರಗ್ಸ್ ಮಾಫಿಯಾ ಸುತ್ತ ಸುತ್ತಲಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಮನೋರಂಜನ್ ಕಾಣಿಸಿಕೊಳ್ಳಲಿದ್ದಾರೆ.

    ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಅಭಿನಯಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಸರಿತಾ ನಟಿಸಲಿದ್ದಾರೆ. ಇಷ್ಟೆಲ್ಲ ವಿಶೇಷತೆಗಳು ಇರುವ ‘ಚಿಲ್ಲಂ’ ಚಿತ್ರಕ್ಕೆ ಜೆ.ಚಂದ್ರಕಲಾ ಆಕ್ಷನ್ ಕಟ್ ಹೇಳಲಿದ್ದಾರೆ.

  • ಹೊಸವರ್ಷದಲ್ಲಿ ಖಾತೆ ಓಪನ್ ಮಾಡ್ತಿರೋ `ಬೃಹಸ್ಪತಿ’- ಕ್ರೇಜಿಸ್ಟಾರ್ ಪುತ್ರನಿಗೆ ಸಿಗುತ್ತಾ ಕನ್ನಡ ಪ್ರೇಕ್ಷಕರ ಪ್ರೀತಿ?

    ಹೊಸವರ್ಷದಲ್ಲಿ ಖಾತೆ ಓಪನ್ ಮಾಡ್ತಿರೋ `ಬೃಹಸ್ಪತಿ’- ಕ್ರೇಜಿಸ್ಟಾರ್ ಪುತ್ರನಿಗೆ ಸಿಗುತ್ತಾ ಕನ್ನಡ ಪ್ರೇಕ್ಷಕರ ಪ್ರೀತಿ?

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ನಟನೆಯ ಬೃಹಸ್ಪತಿ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

    `ಬೃಹಸ್ಪತಿ’. ಆರ್.ಮನೋರಂಜನ್ ನಟನೆಯ ಎರಡನೇ ಸಿನಿಮಾ. ಸ್ಯಾಂಡಲ್‍ವುಡ್ ನ ಡಿಸಿಪ್ಲಿನ್ ಡೈರೆಕ್ಟರ್ ನಂದಕಿಶೋರ್ ಕಲ್ಪನೆಯಲ್ಲಿ ಈ ಸಿನಿಮಾ ಕಲರ್‍ಫುಲ್ ಆಗಿ ಮೂಡಿಬಂದಿದೆ. ಕನ್ನಡದ ಬಾವುಟವನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಹಾರಿಸುತ್ತಿರುವ ನಿರ್ಮಾಪಕ ಧೀರ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಅದ್ಧೂರಿ ಸಿನಿಮಾ ಕೂಡ ಇದಾಗಿದೆ. ಬರಿ ಪ್ರತಿಷ್ಟೆ ಅಷ್ಟೇ ಅಲ್ಲ ಪವರ್‍ಫುಲ್ ಎಂಟರ್‍ಟೈನ್ಮೆಂಟ್ ಪ್ಯಾಕೇಜ್ ಹೊತ್ತು ಬಂದಿದ್ದಾನೆ ಬೃಹಸ್ಪತಿ.

    ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕತ್ವದ ಹಲವು ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿ ಗೆದ್ದಿದ್ದ ರಾಕ್‍ಲೈನ್ ಈಗ ರವಿಚಂದ್ರನ್ ಮಗನ ಸಿನಿಮಾ ನಿರ್ಮಿಸಿ ಗೆಲ್ಲಲು ಹೊರಟಿದ್ದಾರೆ. ಕಾಲಿವುಡ್‍ನ ಧನುಷ್ ನಟನೆಯ `ವಿಐಪಿ’ ಚಿತ್ರವನ್ನು ಕನ್ನಡ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿ ಮನೋರಂಜನ್‍ಗೆ ಹೆಚ್ಚು ಸ್ಕೋಪ್ ಸಿಗುವಂತೆ ಈ ಚಿತ್ರ ಮಾಡಿದ್ದಾರೆ. ವಂಡರ್‍ಫುಲ್ ನಟನೆಯ ಜೊತೆಗೆ ಜಬರ್‍ದಸ್ತ್ ಡ್ಯಾನ್ಸ್, ಪವರ್‍ಫುಲ್ ಫೈಟಿಂಗ್ ಕೂಡ ಮಾಡಿದ್ದಾರೆ ಮರಿ ಕ್ರೇಜಿಸ್ಟಾರ್.

    ಈ ಚಿತ್ರದ ಶಕ್ತಿಯೇ ಕಥೆ ಮತ್ತು ಸ್ಕ್ರೀನ್ ಪ್ಲೇ. ಈ ಜವಾಬ್ದಾರಿಯನ್ನು ನಿರ್ದೇಶಕ ನಂದಕಿಶೋರ್ ಹೊತ್ತಿದ್ದು ಟೀಸರ್ ಮತ್ತು ಟ್ರೇಲರ್‍ಗಳಲ್ಲಿ ಅದು ಎದ್ದು ಕಾಣುತ್ತಿದೆ. ಇನ್ನು ಸಂಗೀತದ ಬಗ್ಗೆ ಮಾತನಾಡದೇ ಮುಗಿಸಿದ್ರೇ ತಪ್ಪಾಗುತ್ತೆ. ವಿ.ಹರಿಕೃಷ್ಣ ತಮ್ಮ ಬತ್ತಳಿಕೆಯಿಂದ ಹೊಸ ಹೊಸ ರಾಗಗಳ ಬಾಣವನ್ನ ಇದರಲ್ಲಿ ಬಿಟ್ಟಿದ್ದಾರೆ. ಅದರಲ್ಲೂ ಪುನೀತ್ ರಾಜ್‍ಕುಮಾರ್ ಹಾಡಿರುವ ಹಾಡಂತೂ ಕೇಳುಗರ ಫೇವರೇಟ್ ಆಗಿದೆ.

    ರಾಜ್ಯಾದ್ಯಂತ `ಬೃಹಸ್ಪತಿ’ಯ ಆಗಮನ ಭರ್ಜರಿಯಾಗಿಯೇ ಆಗಲಿದೆ. ಟ್ರೇಲರ್ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ಈ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗಲಿದ್ದು, ಒಂದೇ ಸಾಲಿನಲ್ಲಿ ಹೇಳಿ ಮುಗಿಸಬೇಕೆಂದರೆ ಫ್ಯಾಮಿಲಿ ಕಮ್ ಮಾಸ್ ಪ್ರೇಕ್ಷಕರಿಗೆ ಈ ಚಿತ್ರ ಪರ್ಫೆಕ್ಟ್.