Tag: Manoj Desai

  • ಅನಕೊಂಡ ಅಂತ ಬೈದ ಥಿಯೇಟರ್ ಮಾಲೀಕನನ್ನು ಭೇಟಿ ಮಾಡಿದ ವಿಜಯ್ ದೇವರಕೊಂಡ

    ಅನಕೊಂಡ ಅಂತ ಬೈದ ಥಿಯೇಟರ್ ಮಾಲೀಕನನ್ನು ಭೇಟಿ ಮಾಡಿದ ವಿಜಯ್ ದೇವರಕೊಂಡ

    ಮುಂಬೈನ ಸುಪ್ರಸಿದ್ಧ ಮರಾಠ ಮಂದಿರ್ ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ಎರಡು ದಿನಗಳ ಹಿಂದೆಯಷ್ಟೇ ವಿಜಯ್ ದೇವರಕೊಂಡ ಅವರನ್ನು ಹಿಗ್ಗಾಮುಗ್ಗ ಬೈದಿದ್ದರು. ಲೈಗರ್ ಸಿನಿಮಾದಲ್ಲಿ ನಟಿಸಿರುವ ಆ ವಿಜಯ್ ದೇವರಕೊಂಡ ಎನ್ನುವ ನಟ, ದೇವರಕೊಂಡ ಅಲ್ಲ, ಅನಕೊಂಡ ಎಂದು ಜರಿದಿದ್ದರು. ಮನೋಜ್ ದೇಸಾಯಿ ಆಡಿದ ಮಾತುಗಳ ವಿಡಿಯೋ ಸಖತ್ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ವಿಜಯ್ ಮುಬೈಗೆ ತೆರಳಿ, ಮನೋಜ್ ದೇಸಾಯಿ ಅವರನ್ನು ಭೇಟಿ ಮಾಡಿದ್ದಾರೆ.

    ವಿಜಯ್ ದೇವರಕೊಂಡ ಮೊದಲ ಸಿನಿಮಾದಲ್ಲೇ ಅಹಂಕಾರ ತೋರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಮನೋಜ್ ದೇಸಾಯಿ ಹಿಗ್ಗಾಮುಗ್ಗ ಝಾಡಿಸಿದ್ದರು. ‘ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎನ್ನುವ ಮಾತುಗಳನ್ನು ಬಾಯ್ಕಾಟ್ ಸೇರಿದಂತೆ ತಮ್ಮ ಸಿನಿಮಾವನ್ನು ವಿರೋಧಿಸುವವರಿಗೆ ವಿಜಯ್ ದೇವರಕೊಂಡ ಈ ಮಾತುಗಳನ್ನು ಆಡಿದ್ದರು. ಇದಕ್ಕೆ ಮನೋಜ್ ವಿರೋಧ ವ್ಯಕ್ತ ಪಡಿಸಿದ್ದರು. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

    ಲೈಗರ್ ಸಿನಿಮಾ ವಿಚಾರದಲ್ಲಿ ವಿಜಯ್ ದೇವರಕೊಂಡ ಅತಿರೇಕವಾಗಿ ಮಾತನಾಡುತ್ತಿದ್ದಾರೆ ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದೆ. ಓಟಿಟಿ ಹಕ್ಕುಗಳು 200 ಕೋಟಿಗೆ ಸೇಲ್ ಆದಾಗ, ನಾವು ಥಿಯೇಟರ್ ನಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಮಾಡುತ್ತೇವೆ ಎಂದು ನಿರಾಕರಿಸಿದ ಪೋಸ್ಟ್ ವೊಂದನ್ನು ವಿಜಯ್ ಮಾಡಿದ್ದರು. ಅದು ಕೂಡ ಇದೀಗ ಟ್ರೋಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಬಾಲಿವುಡ್ ಮತ್ತು ದಕ್ಷಿಣ ತಾರೆಯರ ಮುಸುಕಿನ ಗುದ್ದಾಟ ಕಲಾವಿದರು ಮತ್ತು ತಾಂತ್ರಿಕ ವರ್ಗದವರನ್ನು ದಾಟಿ ಥಿಯೇಟರ್ ಮಾಲೀಕರ ಅಂಗಳ ತಲುಪಿದೆ. ಭಾರತೀಯ ಸಿನಿಮಾ ರಂಗ ಎಂದರೆ, ಅದು ಕೇವಲ ಬಾಲಿವುಡ್ ಎಂದು ಬಿಂಬಿಸುತ್ತಿದ್ದ ಮನಸುಗಳು ಮತ್ತೆ ಇದೀಗ ಸೌತ್ ನಟನೊಬ್ಬನನ್ನು ಬಾಲಿವುಡ್ ಒಳಗೆ ಬಿಟ್ಟುಕೊಳ್ಳದಂತೆ ಕಿಡಿಕಾರುತ್ತಿವೆ.

    ನಿನ್ನೆಯಷ್ಟೇ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ರಿಲೀಸ್ ಆಗಿದೆ. ಅದು ನೇರವಾಗಿ ಹಿಂದಿ ಭಾಷೆಯಲ್ಲಿ ನಿರ್ಮಾಣವಾದರೂ, ಈ ಸಿನಿಮಾದ ನಿರ್ದೇಶಕರು ಮತ್ತು ಹೀರೋ ದಕ್ಷಿಣದವರು. ಹಾಗಾಗಿ ಈ ಸಿನಿಮಾವನ್ನು ಸೋಲಿಸುವಂತಹ ಪ್ರಯತ್ನ ನಡೆದಿದೆಯಾ ಎನ್ನುವಂತಹ ಘಟನೆಗಳು ಮುಂಬೈ ಬಜಾರ್ ನಲ್ಲಿ ನಡೆಯುತ್ತಿವೆ. ಈ ಸಿನಿಮಾವನ್ನು ಪ್ರದರ್ಶನ ಮಾಡುತ್ತಿರುವ ಮುಂಬೈ ಥಿಯೇಟರ್ ಮಾಲಿಕ ಮನೋಜ್ ದೇಸಾಯಿ ಲೈಗರ್ ಸಿನಿಮಾದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಮನೋಜ್ ದೇಸಾಯಿ ಮುಂಬೈನಲ್ಲಿ ಗೈಟಿ ಗ್ಯಾಲಾಕ್ಷಿ ಮತ್ತು ಮರಾಠ ಮಂದಿರ ಎಂಬ ಎರಡು ಥಿಯೇಟರ್ ನಡೆಸುತ್ತಿದ್ದಾರೆ. ಇವರು ವಿಜಯ್ ದೇವರಕೊಂಡ ಬಗ್ಗೆ ಮಾತನಾಡುತ್ತಾ, ‘ಆತ ದೇವರಕೊಂಡ ಅಲ್ಲ, ಅನಕೊಂಡ ಎಂದು ಜರೆದಿದ್ದಾರೆ. ಈ ಹುಡುಗನ ಅಹಂಕಾರವೇ ಸಿನಿಮಾ ಸೋಲಿಗೆ ಕಾರಣವೆಂದು ನೇರವಾಗಿಯೇ ಆರೋಪಿಸಿದ್ದಾರೆ. ಬಾಯ್ಕಾಟಿ ವಿಚಾರವಾಗಿ ದೇವರಕೊಂಡ ಅಹಂಕಾರದ ಮಾತುಗಳನ್ನು ಆಡಿದ್ದರು ಎಂದು ಹೇಳಿದ್ದಾರೆ.

    ಬಾಯ್ಕಾಟ್ ವಿಚಾರವಾಗಿ ವಿಜಯ್ ದೇವರಕೊಂಡ ಧ್ವನಿ ಎತ್ತಿದ್ದರು. ಸಿನಿಮಾ ನೋಡುವವರು ಬಾಯ್ಕಾಟ್ ಅನ್ನುವುದಿಲ್ಲ. ಹಾಗೆ ಎನ್ನುವವರು ನನ್ನ ಸಿನಿಮಾ ನೋಡಬೇಕು ಎಂದು ಹೇಳಿಕೆಕೊಟ್ಟಿದ್ದರು. ಈ ಅಹಂಕಾರವೇ ಲೈಗರ್ ಹಿನ್ನೆಡೆಗೆ ಕಾರಣವಾಗಿದೆ ಎಂದು ಮನೋಜ್ ದೇಸಾಯಿ ವಿಡಿಯೋ ಮೂಲಕ ಹೇಳಿಕೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]