Tag: manoj bhajpayee

  • ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ಬಾಲಿವುಡ್ ನಟ ಮನೋಜ್ ಬಾಜಪೇಯಿ (Manoj Bajpayee) ನಟಿಸಿದ ‘ಭಾಯ್ಯಾ ಜಿ’ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಅವರ ಕೆರಿಯರ್‌ನ 100ನೇ ಚಿತ್ರವಾಗಿದೆ. ಈ ಸಂದರ್ಶನವೊಂದರಲ್ಲಿ ಅವರು ಆಡಿದ ಮಾತು ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಯಾರ ಇದುವರೆಗೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಗುಲ್ಜಾರ್ ಸಾಬ್, ಗೋವಿಂದ್ ನಿಹಲಾನಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಸಂಜಯ್ ಲೀಲಾ ಬನ್ಸಾಲಿ ಹೆಸರು ತೆಗೆದುಕೊಂಡು ಅವರ ಜೊತೆ ಕೆಲಸ ಮಾಡುವ ಆಸಕ್ತಿಯಿದೆ ಎಂದಿದ್ದಾರೆ.

    ನಟ ಮನೋಜ್ ನಗುತ್ತಲೇ, ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಚಿತ್ರಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದಿದ್ದಾರೆ. ಅವರು ವಿಭಿನ್ನ ರೀತಿಯ ನಿರ್ಮಾಪಕ, ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಈ ಹಿಂದೆ ‘ದೇವದಾಸ್’ ಸಿನಿಮಾದಲ್ಲಿ ಚುನ್ನಿ ಲಾಲ್ ಪಾತ್ರವನ್ನು ನೀಡಿದರು. ಆದರೆ ಮನೋಜ್ ಅದನ್ನು ರಿಜೆಕ್ಟ್ ಮಾಡಿದ್ದರು. ದೇವದಾಸ್ ಪಾತ್ರದಲ್ಲಿ ನಟಿಸಲು ಇಷ್ಟವಿದ್ದ ಕಾರಣ ಆ ಪಾತ್ರವನ್ನು ಕೈ ಬಿಟ್ಟಿರೋದಾಗಿಯೂ ಹೇಳಿಕೊಂಡಿದ್ದಾರೆ.

  • ʻದಿ ಫ್ಯಾಮಿಲಿ ಮ್ಯಾನ್ -3ʼ ರಿಲೀಸ್ ಬಗ್ಗೆ ಅಪ್‌ಡೇಟ್ ಕೊಟ್ಟ‌ ನಟ ಮನೋಜ್ ಬಾಜಪೇಯಿ

    ʻದಿ ಫ್ಯಾಮಿಲಿ ಮ್ಯಾನ್ -3ʼ ರಿಲೀಸ್ ಬಗ್ಗೆ ಅಪ್‌ಡೇಟ್ ಕೊಟ್ಟ‌ ನಟ ಮನೋಜ್ ಬಾಜಪೇಯಿ

    ಸಿನಿಪ್ರೇಕ್ಷಕರ ಮನಗೆದ್ದ ವೆಬ್ ಸರಣಿ `ದಿ ಫ್ಯಾಮಿಲಿ ಮ್ಯಾನ್’ ಮತ್ತೆ ಒಟಿಟಿಯಲ್ಲಿ ಅಬ್ಬರಿಸಲು ಬರುತ್ತಿದೆ. ಈ ಕುರಿತು ನಟ ಮನೋಜ್ ಬಾಜಪೇಯಿ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಈಗಾಗಲೇ ಎರಡು ಭಾಗಗಳಾಗಿ ಒಟಿಟಿಯಲ್ಲಿ ಪ್ರಸಾರವಾಗಿದೆ. ಮನೋಜ್ ಬಾಜಪೇಯಿ (Manoj Bhajpayee) ನಟನೆಯ ಅಭಿಮಾನಿಗಳಿಗೆ ಇಷ್ಟವಾಗಿದೆ. ಮನೋಜ್ ನಟನನೆಯ `ದಿ ಫ್ಯಾಮಿಲಿ ಮ್ಯಾನ್ 2′ (The Familyman 2) 2021 ರಿಲೀಸ್ ಆಯಿತು. ಮೊದಲ ಸೀಸನ್‌ನಲ್ಲಿ ಪಾಕ್ ಟೆರರಿಸ್ಟ್‌ಗಳ ಕಥೆ ಹೇಳಿದ್ದ ನಿರ್ದೇಶಕರಾದ ರಾಜ್ ಹಾಗೂ ಡಿಕೆ, ಎರಡನೇ ಸೀಸನ್‌ನಲ್ಲಿ ಶ್ರೀಲಂಕಾದ ಕಥೆಯನ್ನ ಹೇಳಿದ್ದರು.

    ಟಾಲಿವುಡ್ (Tollywood) ನಟಿ ಸಮಂತಾ(Samantha) ಪಾತ್ರ ಫ್ಯಾನ್ಸ್‌ಗೆ ಸಾಕಷ್ಟು ಇಷ್ಟ ಆಗಿತ್ತು. ಈ ಸೀಸನ್ ಕೊನೆಯಲ್ಲಿ ಮೂರನೇ ಪಾರ್ಟ್ ಬರಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ವೈರಸ್ ಕಥೆ ಆಧರಿಸಿ `ದಿ ಫ್ಯಾಮಿಲಿ ಮ್ಯಾನ್ 3′ (The Familyman 3) ಬರುತ್ತಿದೆ. ರಿಲೀಸ್ ದಿನಾಂಕದ ಬಗ್ಗೆ ಮನೋಜ್ ಬಾಜ್‌ಪಾಯಿ ಮಾಹಿತಿ ನೀಡಿದ್ದಾರೆ.

     

    View this post on Instagram

     

    A post shared by Manoj Bajpayee (@bajpayee.manoj)

    ಈ ಹೋಳಿ ಹಬ್ಬಕ್ಕೆ ನಿಮ್ಮ ಕುಟುಂಬದ ಎದುರು ನಮ್ಮ ಕುಟುಂಬದ ಜತೆ ಬರುತ್ತಿದ್ದೇನೆ ಎಂದು ಮನೋಜ್ ಬಾಜ್‌ಪಾಯಿ ಹೇಳಿದ್ದಾರೆ. ನಮ್ಮನ್ನು ಸ್ವಾಗತಿಸುವುದಿಲ್ಲವೇ ಎಂದು ಅವರು ಅಡಿಬರಹ ನೀಡಿದ್ದಾರೆ. ಈ ವರ್ಷ ಮಾರ್ಚ್ 8ಕ್ಕೆ ಹೋಳಿ ಹಬ್ಬ ಇದೆ. ಈ ದಿನ ವೆಬ್‌ ಸರಣಿ ಒಟಿಟಿಯಲ್ಲಿ ಬರಲಿದೆ. ಸದ್ಯ ನಟನ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k