Tag: Manohar Parikar

  • ರಾಹುಲ್‍ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ

    ರಾಹುಲ್‍ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ

    ಪಣಜಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದರು.

    ಗೋವಾದಲ್ಲಿ ಬಿಜೆಪಿ ಅಭ್ಯಥಿ ಪರ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್‍ನ ಗಾಂಧಿ ಪರಿವಾರವು ಗೋವಾವನ್ನು ತಮ್ಮ ಪ್ರವಾಸದ ತಾಣವಾಗಿ ಪರಿಗಣಿಸುತ್ತದೆ. ಆದರೆ ಬಿಜೆಪಿಯ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಚಿನ್ನದ ಗೋವಾ ಕನಸನ್ನು ನನಸು ಮಾಡಿದ್ದಾರೆ ಎಂದು ತಿಳಿಸಿದರು.

    ಬಿಜೆಪಿಯಿಂದ ಮಾತ್ರ ಗೋವಾದ ಅಭಿವೃದ್ಧಿ ಸಾಧ್ಯ. ನಿಮಗೆ ಬಿಜೆಪಿಯ ಚಿನ್ನದ ಗೋವಾ ಬೇಕಾ ಅಥವಾ ಕಾಂಗ್ರೆಸ್‍ನ ಗಾಂಧಿ ಪರಿವಾರದ ಗೋವಾ ಬೇಕೇ ಎಂಬುದನ್ನು ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ಸೂಪರ್ ಫಾಸ್ಟ್ ಊಟ ಮಾಡಿ 5 ಸಾವಿರ ಹಣ ಗೆದ್ದ!

    ಗೋವಾ ಚುನಾವಣೆಯಲ್ಲಿ ಈ ಬಾರಿ ಟಿಎಂಸಿ, ಆಪ್, ಎನ್‍ಸಿಪಿ ಪಕ್ಷಗಳು ತಮ್ಮ ನೆಲೆಯನ್ನು ವಿಸ್ತರಿಕೊಳ್ಳಲು ಅಥವಾ ತಮ್ಮ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆಗಾಗಿ ಸ್ಪರ್ಧಿಸುತ್ತಿವೆ. ಈ ಪಕ್ಷಗಳಿಂದ ಗೋವಾದಲ್ಲಿ ಸರ್ಕಾರ ರಚನೆ ಅಸಾಧ್ಯ. ಬಿಜೆಪಿಯಿಂದ ಮಾತ್ರವೇ ಸರ್ಕಾರ ರಚನೆ ಮಾಡಬಹುದು. ರಾಜಕೀಯ ಸ್ಥಿರತೆ ಇರದಿದ್ದರೆ, ಅಭಿವೃದ್ಧಿ ನಿರೀಕ್ಷೆ ಸಾಧ್ಯವೇ ಇಲ್ಲ ಎಂದರು. ಇದನ್ನೂ ಓದಿ: ಶಿಲ್ಲಾಂಗ್‍ನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ

  • ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ, ಗೋವಾ ಸಿಎಂ ಪಂಚಭೂತಗಳಲ್ಲಿ ಲೀನ

    ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ, ಗೋವಾ ಸಿಎಂ ಪಂಚಭೂತಗಳಲ್ಲಿ ಲೀನ

    – ಸಹೋದ್ಯೋಗಿಯನ್ನ ಕಳೆದುಕೊಂಡು ಕಣ್ಣೀರಿಟ್ಟ  ಸ್ಮೃತಿ ಇರಾನಿ

    ಪಣಜಿ: ತೀವ್ರ ಅನಾರೋಗ್ಯ ಕಾರಣ ಇಹಲೋಕ ತ್ಯಜಿಸಿದ ಸರಳ ಮತ್ತು ಸಜ್ಜನ ರಾಜಕಾರಣಿ, ದೇಶಕಂಡ ಅತ್ಯುತ್ತಮ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

    ಪಣಜಿಯ ಮಿರಮಾರ್ ಬೀಚ್‍ನಲ್ಲಿ ಪರಿಕ್ಕರ್ ಮಕ್ಕಳಾದ ಉತ್ಪಲ್ ಮತ್ತು ಅಭಿಜಿತ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಮನೋರ್ ಪರಿಕ್ಕರ್ ಅಂತ್ಯಕ್ರಿಯೆಗೆ ನಡೆಯಿತು. ಇದಕ್ಕೂ ಮುನ್ನ ಪರಿಕ್ಕರ್ ಅವರ ಮೃತದೇಹವನ್ನು ಕಲಾ ಅಕಾಡೆಮಿಯಿಂದ ಎಸ್‍ಎಜಿ ಮೈದಾನದವರೆಗೆ ಅಂತಿಮ ಯಾತ್ರೆಯಲ್ಲಿ ತರಲಾಯಿತು. ಈ ಅಂತಿಮ ಯಾತ್ರೆಯಲ್ಲಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವರು ನಮನ ಸಲ್ಲಿಸಿದರು. ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಅವರ ಮಕ್ಕಳ ಬಳಿಗೆ ತೆರಳಿದ ಮೋದಿ ಕ್ಷಣ ಕಾಲ ಮೌನವಾಗಿ ನಿಂತಿದ್ದರು. ಈ ವೇಳೆ ಅಂತಿಮ ದರ್ಶನ ಪಡೆಯಲು ಆಗಮಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು, ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಾ ತೆರಳಿದ್ದು ಕಂಡು ಬಂತು.

    ಪರಿಕ್ಕರ್ ಅವರ ನಿಧನದಿಂದಾಗಿ ಇಂದು ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೇ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಅಂತಿಮವಾಗಿ ಪರಿಕ್ಕರ್ ಅವರು ಜನವರಿಯಲ್ಲಿ ನಡೆದ ಮಾಂಡೋವಿ ನದಿ ನಿರ್ಮಿಸಿಲಾಗಿದ್ದ ಅಟಲ್ ಸೇತುವೆಯನ್ನು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ್ದರು. ಈ ವೇಳೆ ನನ್ನ ಅಂತಿಮ ಉಸಿರು ಇರುವವರೆಗೂ ಗೋವಾ ಸಿಎಂ ಆಗಿ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು. ಇದರಂತೆಯೇ ಅವರು ತಮ್ಮ ಕೊನೆ ಉಸಿರಿನವರೆಗೂ ಸಿಎಂ ಆಗಿಯೇ ಇಹಲೋಕ ತ್ಯಜಿಸಿದ್ದಾರೆ.

  • ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಬ್ಯಾನ್!

    ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಬ್ಯಾನ್!

    ಪಣಜಿ: ಗೋವಾಕ್ಕೆ ನೀವು ಮುಂದೆ ಹೋಗ್ತೀರಾ. ಹಾಗಾದ್ರೆ ಹುಷಾರಾಗಿರಿ. ಹೌದು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಲು ಗೋವಾ ಸರ್ಕಾರ ಮುಂದಾಗಿದೆ.

    ಕೆಲವರು ರಸ್ತೆ ಮಾರ್ಗದಲ್ಲಿ ಕುಡಿಯುತ್ತಾ ಕುಳಿತಿರುತ್ತಾರೆ ಜೊತೆಗೆ ಕುಡಿದ ನಂತರ ಬಾಟಲ್‍ಗಳನ್ನು ರಸ್ತೆಯಲ್ಲಿಯೇ ಬಿಸಾಡುತ್ತಾರೆ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ಸಮಸ್ಯೆ ನಿವಾರಣೆಗಾಗಿ ಸಭೆ ಕರೆದು ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    `ಯಾರು ಕುಡಿಯಲು ಬಯಸುತ್ತಾರೋ ಅವರು ಬಾರ್‍ನ ಒಳಗೆ ಕುಡಿಯಲಿ. ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ’. ಮುಂದಿನ 15 ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ನಿಷೇಧಿಸುವಂತೆ ನಾನು ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದು `ಸ್ವಚ್ಛ ಭಾರತ’ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

    ಮದ್ಯಪಾನ ಅಂಗಡಿಗಳು ಸಮೀಪದ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯಲು ಅವಕಾಶ ಮಾಡಿಕೊಟ್ಟರೆ ಅಂತಹ ಶಾಪ್‍ಗಳಿಗೆ ಸರ್ಕಾರ ದಂಡ ವಿಧಿಸಲಾಗುತ್ತದೆ ಅಥವಾ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

    ಕಳೆದ ವರ್ಷ ಗೋವಾ ಸರ್ಕಾರ 1964ರ ಅಬಕಾರಿ ಸುಂಕ ಕಾಯ್ದೆಗೆ ತಿದ್ದುಪಡಿ ಮಾಡಿ ಕೆಲವು ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಡಲ ತೀರಗಳಲ್ಲಿ ಮದ್ಯಪಾನವನ್ನು ನಿಷೇಧಿಸಿತ್ತು. ಅಷ್ಟೇ ಅಲ್ಲದೇ ಈ ಸ್ಥಳಗಳಲ್ಲಿ ಮದ್ಯಪಾನ ಮಾಡಿದವರಿಗೆ ದಂಡ ವಿಧಿಸುವ ಅಂಶವನ್ನು ಸೇರಿಸಿತ್ತು.

    ಮೇ ತಿಂಗಳಿನಿಂದ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕೆಲವರನ್ನು ಬಂಧಿಸುತ್ತಿದ್ದಾರೆ.