Tag: Manohar Lal Khattar

  • ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

    ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ (Housing Quota) ದಿವ್ಯಾಂಗರಿಗೆ 4% ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಉದ್ದೇಶಕ್ಕೆ ಪೂರಕವಾಗುವಂತೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಪ್ರವೇಶ ಭಾರತ ಅಭಿಯಾನದಡಿಯಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ

    ಇನ್ಮುಂದೆ ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ ಶೇ.4 ರಷ್ಟು ಮೀಸಲಾತಿ ನೀಡಲಾಗುವುದು, ಇದು ಸಾರ್ವಜನಿಕ ಸೇವೆಗಳಲ್ಲಿ ಸಮಾನತೆ, ಘನತೆ ಮತ್ತು ಪ್ರವೇಶದತ್ತ ಗಣನೀಯ ಹೆಜ್ಜೆಯಾಗಿದೆ ಎಂದು ಖಟ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಂಗವಿಕಲ ವ್ಯಕ್ತಿಗಳ ಹಕ್ಕುಗಳ (RPWD) ಕಾಯ್ದೆ, 2016 ರ ಅಡಿಯಲ್ಲಿ, ಎಸ್ಟೇಟ್ ನಿರ್ದೇಶನಾಲಯವು ಅಂಗವಿಕಲರಿಗೆ ಕೇಂದ್ರ ಸರ್ಕಾರಿ ನಿವಾಸಗಳಿಗೆ ಸಮಂಜಸವಾದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿದೆ. ಇದನ್ನೂ ಓದಿ: ಒಂದೇ ಕಾರ್ಯಕ್ರಮದಲ್ಲಿ ಕಾಣಿಸಕೊಂಡ ಮಾಜಿ ಅತ್ತೆ, ಸೊಸೆ – ಸಮಂತಾ ಮಾತಿಗೆ ಅಮಲಾ ಚಪ್ಪಾಳೆ

  • ಹರಿಯಾಣದಲ್ಲಿ ದಿಢೀರ್‌ ಸರ್ಕಾರ ವಿಸರ್ಜನೆ – ನೂತನ ಸಿಎಂ ನಯಾಬ್ ಸಿಂಗ್ ಯಾರು?

    ಚಂಡೀಗಢ: ಬಿಜೆಪಿ (BJP) ಮತ್ತು ಜೆಜೆಪಿ (JJP) ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ತಾರಕಕ್ಕೇರಿದ ಹೊತ್ತಲ್ಲಿಯೇ ಹರಿಯಾಣ ಸರ್ಕಾರವೇ (Haryana Government) ಬದಲಾಗಿ ಹೋಗಿದೆ.

    ದಿಢೀರ್ ಬೆಳವಣಿಗೆಯಲ್ಲಿ ಸಿಎಂ ಮನೋಹರ್‌ಲಾಲ್ ಖಟ್ಟರ್ (Manohar Lal Khattar) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಸಂಪುಟ ವಿಸರ್ಜನೆ ಆಗಿದೆ. ಈ ಬೆನ್ನಲ್ಲೇ ಹರಿಯಾಣದ ನೂತನ ಸಿಎಂ ಆಗಿ ಪಕ್ಷದ ರಾಜ್ಯಾಧ್ಯಕ್ಷ ನಯಾಬ್ ಸಿಂಗ್ ಸೈನಿ ಆಯ್ಕೆಯಾಗಿದ್ದಾರೆ.

    ಫಟಾಫಟ್ ಎಂಬಂತೆ ಮಂಗಳವಾರ ಸಂಜೆ ಐದು ಗಂಟೆಗೆ ನೂತನ ಸಿಎಂ ನಯಾಬ್ ಸಿಂಗ್ (Nayab Singh Saini) ಮತ್ತು ಐವರು ಶಾಸಕರು ಮಾಣವಚನ ಕಾರ್ಯಕ್ರಮವೂ ಮುಗಿದುಹೋಗಿದೆ. ಮೂಲಗಳ ಪ್ರಕಾರ ಮನೋಹರ್ ಲಾಲ್ ಖಟ್ಟರ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎನ್ನಲಾಗಿದೆ.

    ನಯಾಬ್ ಸಿಂಗ್ ಸೈನಿ ಓಬಿಸಿ ಮುಖಂಡರಾಗಿದ್ದು (OBC Leader) ಲೋಕಸಭೆ ಚುನಾವಣೆ (Lok Sabha Election) ದೃಷ್ಟಿಯಿಂದಲೇ ಬಿಜೆಪಿ ಹೈಕಮಾಂಡ್ (BJP High Command) ಈ ಬದಲಾವಣೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: Citizenship Law: ಸಿಎಎ ಜಾರಿಗೆ ದಳಪತಿ ವಿಜಯ್‌ ವಿರೋಧ

    ಯಾರು ನಯಾಬ್ ಸಿಂಗ್ ಸೈನಿ?
    ಕುರುಕ್ಷೇತ್ರದ ಲೋಕಸಭಾ ಸಂಸದರಾಗಿರುವ ಸೈನಿ ಒಬಿಸಿ ಸಮುದಾಯದ ಪ್ರಭಾವಿ ನಾಯಕರಾಗಿದ್ದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರ್ಯಾಣ ಬಿಜೆಪಿ ಮುಖ್ಯಸ್ಥರಾಗಿ ನೇಮಕವಾಗಿದ್ದರು.

    ನಿರ್ಗಮಿತ ಮುಖ್ಯಮಂತ್ರಿ ಎಂಎಲ್ ಖಟ್ಟರ್‌ಗೆ ಆಪ್ತರಾಗಿರುವ ಸೈನಿ 2002ರಲ್ಲಿ ಅಂಬಲದಲ್ಲಿ ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, 2005ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ರೈತ ಘಟಕವಾದ ಕಿಸಾನ್ ಮೋರ್ಚಾದ ಕಾರ್ಯದರ್ಶಿ ಸೇರಿದಂತೆ ಪಕ್ಷದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

    2014ರ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣಗಢದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕುರುಕ್ಷೇತ್ರದಿಂದ ಸ್ಪರ್ಧಿಸಿ ಸುಮಾರು 4 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ನಿರ್ಮಲ್ ಸಿಂಗ್ ಅವರನ್ನು ಸೋಲಿಸಿದ್ದರು.

  • ನಯಾಬ್‌ ಸಿಂಗ್‌ ಸೈನಿ ಹರಿಯಾಣದ ನೂತನ ಸಿಎಂ- ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ

    ಚಂಡೀಗಢ: ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ (Nayab Singh Saini) ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

    ಇಂದು ಬೆಳಗ್ಗೆ ಮನೋಹರ್‌ ಲಾಲ್ ಖಟ್ಟರ್ ಮತ್ತು ಸಚಿವ ಸಂಪುಟವು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿತ್ತು. ಈ ಬೆನ್ನಲ್ಲೇ ಖಟ್ಟರ್ ಮತ್ತು ಹರಿಯಾಣದ ಉಸ್ತುವಾರಿ ಬಿಪ್ಲಬ್ ದೇವ್ ಅವರ ಸಮ್ಮುಖದಲ್ಲಿ ನಯಾಬ್ ಸಿಂಗ್ ಸೈನಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು.

    ಹರಿಯಾಣದಲ್ಲಿ ಬಿಜೆಪಿ-ಜನನಾಯಕ ಜನತಾ ಪಕ್ಷ (JJP)ಯ ಆಡಳಿತ ಸಮ್ಮಿಶ್ರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಎಲ್ಲಾ ಸಚಿವರು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ಪ್ರತಿಯೊಬ್ಬ ಮುಸ್ಲಿಮರೂ ಸಿಎಎಯನ್ನು ಸ್ವಾಗತಿಸಬೇಕು: ಮುಸ್ಲಿಂ ಜಮಾತ್‌ ಅಧ್ಯಕ್ಷ ಕರೆ

    ನಯಾಬ್ ಸಿಂಗ್ ಸೈನಿ ಯಾರು?: ಕುರುಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಮತ್ತು ಒಬಿಸಿ ಸಮುದಾಯದ ಸದಸ್ಯರಾಗಿರುವ 54 ವರ್ಷದ ನಯಾಬ್ ಸಿಂಗ್ ಸೈನಿಯವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಜೆಪಿಯ ಹರಿಯಾಣ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

    1996 ರಲ್ಲಿ ಬಿಜೆಪಿಯೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 2002 ರಲ್ಲಿ ಅಂಬಾಲಾದಲ್ಲಿ ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ 2005 ರಲ್ಲಿ ಅಂಬಾಲಾದಲ್ಲಿ ಜಿಲ್ಲಾ ಅಧ್ಯಕ್ಷರಾದರು. 2014 ರಲ್ಲಿ ನಾರಾಯಣಗಢ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2016 ರಲ್ಲಿ ಹರಿಯಾಣ ಸರ್ಕಾರದಲ್ಲಿ ಸಚಿವರಾಗಿ ನೇಮಕಗೊಂಡರು.

    2019 ರ ಲೋಕಸಭಾ ಚುನಾವಣೆಯಲ್ಲಿ ಸೈನಿ ಕುರುಕ್ಷೇತ್ರ ಕ್ಷೇತ್ರದಿಂದ ಕಣಕ್ಕಿಳಿದು ಜಯಗಳಿಸಿದ್ದರು. ಮನೋಹರ್ ಲಾಲ್ ಖಟ್ಟರ್ ಅವರ ವಿಶ್ವಾಸಾರ್ಹ ಮಿತ್ರ ಎಂದು ಕರೆಯಲ್ಪಡುವ ಸೈನಿ ಅವರು 2014 ರಲ್ಲಿ ಶಾಸಕರಾದ ನಂತರ ಹರಿಯಾಣ ರಾಜಕೀಯದಲ್ಲಿ ಗಟ್ಟಿಯಾದ ಅಸ್ತಿತ್ವವನ್ನು ಹೊಂದಿದ್ದಾರೆ. ಸೈನಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು.

  • ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ಚಂಡೀಗಢ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಮಹಿಳೆಯೊಬ್ಬರು (Woman) ಮಾಡಿದ ಮನವಿಗೆ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗವೊಂದು ನಡೆದಿದೆ.

    ಸದ್ಯ ಖಟ್ಟರ್ ಅವರು ಮಹಿಳೆಗೆ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣಗಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿಎಂ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

    ಮಹಿಳೆ ಹೇಳಿದ್ದೇನು..?: ಸಿಎಂ ಇದ್ದ ಕಾರ್ಯಕ್ರಮದಲ್ಲಿ ಮಹಿಳೆ ತನ್ನ ನೆರೆಯ ಗ್ರಾಮವಾದ ಭಟೋಲ್ ಜತ್ತನ್‍ನಲ್ಲಿ ಕಾರ್ಖಾನೆಯನ್ನು (Factory) ಸ್ಥಾಪಿಸಲು ಮನವಿ ಮಾಡಿಕೊಂಡರು. ಇದರಿಂದ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಈ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದು ಎಂಬುದು ಆಕೆಯ ಉದ್ದೇಶವಾಗಿತ್ತು.

    ಮಹಿಳೆಯ ಮನವಿಗೆ ಪ್ರತಿಕ್ರಿಯಿಸಿದ ಖಟ್ಟರ್, ಮುಂದಿನ ಬಾರಿ ಚಂದ್ರಯಾನ-4 ರಲ್ಲಿ ನಿಮ್ಮನ್ನು ಚಂದ್ರನಲ್ಲಿಗೆ ಕಳುಹಿಸಲಾಗುವುದು. ಈಗ ಕುಳಿತುಕೊಳ್ಳಿ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ

    ಸದ್ಯ ವೈರಲ್ ಆದ ವೀಡಿಯೋದಲ್ಲಿ ಸಾರ್ವಜನಿಕ ಸಭೆ ನಡೆಯುವ ಸ್ಥಳ ಸ್ಪಷ್ಟವಾಗಿಲ್ಲ. ಖಟ್ಟರ್ ಅವರು ತಮ್ಮ ಜನಸಂವಾದ್ ಕಾರ್ಯಕ್ರಮದ ಭಾಗವಾಗಿ ಪ್ರಸ್ತುತ ಹಿಸಾರ್ ಜಿಲ್ಲೆಯಲ್ಲಿದ್ದಾರೆ. ಈ ವಿಡಿಯೋವನ್ನು ರಾಜ್ಯದ ಕೆಲವು ಕಾಂಗ್ರೆಸ್ ಮತ್ತು ಎಎಪಿ ನಾಯಕರು ಹಂಚಿಕೊಂಡಿದ್ದಾರೆ. ಖಟ್ಟರ್ ಅವರ ‘ಚಂದ್ರಯಾನ’ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಎಪಿ ವಾಗ್ದಾಳಿ ನಡೆಸಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

    ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

    ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryan) ತತ್ತರಿಸಿದೆ. ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿದ್ದು, ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಶನಿವಾರವೂ ಅಲ್ಲಲ್ಲಿ ಮಳಿಗೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಸತತ 3ನೇ ದಿನ ಹರಿಯಾಣದಲ್ಲಿ ಬುಲ್ಡೋಜರ್‌ (Bulldozer) ಕಾರ್ಯಾಚರಣೆ ನಡೆದಿದೆ.

    ಇನ್ನೂ ಹರಿಯಾಣದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ ಶಾಕ್ ನೀಡಿದೆ. ಸತತ 3ನೇ ದಿನವೂ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ 24 ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ 50-60 ಮಳಿಗೆಗಳನ್ನ ಧ್ವಂಸಗೊಳಿಸಲಾಗಿದೆ. ಶುಕ್ರವಾರ ಸುಮಾರು ಒಂದು ಎಕರೆ ಜಮೀನಿನಲ್ಲಿ ಅಕ್ರಮ ವಲಸಿಗರು ನಿರ್ಮಿಸಿಕೊಂಡಿದ್ದ 250ಕ್ಕೂ ಅಧಿಕ ಗುಡಿಸಲುಗಳನ್ನ ಕೆಡವಲಾಗಿತ್ತು. ಇದನ್ನೂ ಓದಿ: ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 102 ಕೇಸ್‌ಗಳು ದಾಖಲಾಗಿದ್ದು, 202 ಮಂದಿಯನ್ನ ಬಂಧಿಸಲಾಗಿದೆ. 80 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಘಟನೆ ಹಿಂದೆ ಯಾವುದೇ ಮಾಸ್ಟರ್ ಮೈಂಡಗ್ ಪತ್ತೆಯಾಗಿಲ್ಲ ಎಂದು ನುಹ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

    ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryana) ತತ್ತರಿಸಿದೆ. ನಿನ್ನೆಯಿಂದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳನ್ನೂ ಹಾನಿ ಮಾಡಿದ್ದಾರೆ.

    ಇನ್ನೂ ಹರಿಯಾಣದಲ್ಲಿ ನಡೆದ ಕೋಮುಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ (Bulldozer) ಶಾಕ್ ನೀಡಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ (Haryana Government) ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ – ಶನಿವಾರ `ಕೈ’ನಾಯಕರ ಹೈವೋಲ್ಟೇಜ್ ಮೀಟಿಂಗ್

    ಸರ್ಕಾರಿ ಜಮೀನನ್ನು ಅತಿಕ್ರಮಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಆದೇಶದಂತೆ ಗಲಭೆಕೋರರು ವಾಸವಿರುವ ಮನೆಗಳನ್ನ ತೆರವುಗೊಳಿಸಲಾಗಿದೆ. ಬಾಂಗ್ಲಾದೇಶದಿಂದ ಬಂದ ಅಕ್ರಮವಾಗಿ ಮೊದಲು ಅಸ್ಸಾಂನಲ್ಲಿ ವಾಸವಿದ್ದರು. ಅವರೀಗ ನೂಹ್ ಜಿಲ್ಲೆಯ ತೌರು ಪಟ್ಟಣದ ಮಹಮ್ಮದಪುರ ರಸ್ತೆಯ ವಾರ್ಡ್ ನಂ.1 ಹರಿಯಾಣ ನಗರ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದನ್ನೂ ಓದಿ: ಫಾರಿನ್‍ನಿಂದ ಬಂದ ಹೆಚ್‍ಡಿಕೆಯಿಂದ ಮಿಡ್‍ನೈಟ್ ಬಾಂಬ್?: ಮೆಸ್‍ನಲ್ಲಿ ನಡೆದ ಸಭೆಯಲ್ಲಿ YST!

    ಸುಮಾರು ಒಂದು ಎಕರೆ ಜಮೀನಿನಲ್ಲಿ 250ಕ್ಕೂ ಅಧಿಕ ಗುಡಿಸಲುಗಳನ್ನ ನಿರ್ಮಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರು ಇದೇ ಜಾಗದಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಗುಡಿಸಲುಗಳನ್ನ ನೆಲಸಮಗೊಳಿಸಲಾಗಿದೆ.

    ಇನ್ನೂ ಗುರುಗ್ರಾಮದಲ್ಲಿ ಇವತ್ತೂ ಕೂಡ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಾ ರೆಸ್ಟೋರೆಂಟ್, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ನಿನ್ನೆ ರಾತ್ರಿ ನಡೆದ ಘರ್ಷಣೆಯಲ್ಲಿ ಐವರು ಬಲಿ ಆಗಿದ್ದಾರೆ. ನಿನ್ನೆ ಮೆವಾತ್‌ನಲ್ಲಿ ವಿಹೆಚ್‌ಪಿ- ಬಜರಂಗದಳದ ಶೋಭಾಯಾತ್ರೆ ವೇಳೆ ನಡೆದ ಮತ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್ಗಳು ಸಾವನ್ನಪ್ಪಿದ್ರು. ರಾತ್ರಿ ಮತ್ತೆ ನಡೆದ ಘರ್ಷಣೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ.

    ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 41 ಕೇಸ್‌ಗಳು ದಾಖಲಾಗಿದ್ದು, 176 ಮಂದಿಯನ್ನ ಬಂಧಿಸಲಾಗಿದೆ. 90 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅವಿವಾಹಿತರಿಗೆ ಶೀಘ್ರವೇ ಪಿಂಚಣಿ ಜಾರಿಗೆ- ಹರಿಯಾಣ ಸಿಎಂ ಘೋಷಣೆ

    ಅವಿವಾಹಿತರಿಗೆ ಶೀಘ್ರವೇ ಪಿಂಚಣಿ ಜಾರಿಗೆ- ಹರಿಯಾಣ ಸಿಎಂ ಘೋಷಣೆ

    ಚಂಡೀಗಢ: 45 ರಿಂದ 60 ವರ್ಷದೊಳಗಿನ ಅವಿವಾಹಿತರಿಗೆ (Unmarried) ಶೀಘ್ರವೇ ಪಿಂಚಣಿ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು ಎಂದು ಹರಿಯಾಣದ (Haryana) ಸಿಎಂ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಭಾನುವಾರ ಘೋಷಿಸಿದ್ದಾರೆ.

    ಕರ್ನಾಲ್‌ನ ಕಲಂಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮನೋಹರ್ ಲಾಲ್ ಖಟ್ಟರ್, 60 ವರ್ಷದ ಅವಿವಾಹಿತ ವ್ಯಕ್ತಿಯೊಬ್ಬರ ಪಿಂಚಣಿ (Pension) ಬೇಡಿಕೆಗೆ ಸ್ಪಂದಿಸಿ, ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಒಂದು ತಿಂಗಳೊಳಗೆ ಯೋಜನೆಯ ಬಗ್ಗೆ ಸರ್ಕಾರ ಘೋಷಣೆ ಮಾಡಲಿದೆ ಎಂದು ಭರವಸೆ ನೀಡಿದರು.

    ಮಾತ್ರವಲ್ಲದೇ ಹೆಚ್ಚುವರಿಯಾಗಿ ಮುಂದಿನ 6 ತಿಂಗಳಲ್ಲಿ ರಾಜ್ಯದ ಹಳೆಯ ಪಿಂಚಣಿ ತಿಂಗಳಿಗೆ 3,000 ರೂ.ಗೆ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 20 ಬಾಕ್ಸ್ ಟೊಮೆಟೋ 58 ಸಾವಿರಕ್ಕೆ ಮಾರಾಟ- ರೈತ ಫುಲ್ ಖುಷ್

    ಜಿಲ್ಲೆಯ ಗ್ರಾಮಗಳನ್ನು ಆನ್‌ಲೈನ್ ಜಗತ್ತಿಗೆ ಜೋಡಿಸಲು ಮುಖ್ಯಮಂತ್ರಿಗಳು ಕರ್ನಾಲ್ ಉಪ ಆಯುಕ್ತರಿಗೆ ಸೂಚನೆಗಳನ್ನು ನೀಡಿದರು. ಇಂದು 70 ರಿಂದ 80% ರಷ್ಟು ಕೆಲಸವು ಆನ್‌ಲೈನ್‌ನಲ್ಲಿ ಪೂರ್ಣಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದ ಉಪಸ್ಥಿತಿಯ ಅಗತ್ಯವಿದೆ. ಕರ್ನಾಲ್ ಪ್ರತಿ ಕುಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಇಂಟರ್ನೆಟ್ ಪಡೆಯುವ ಮೊದಲ ಜಿಲ್ಲೆಯಾಗಿದೆ ಎಂದು ಖಟ್ಟರ್ ಹೇಳಿದರು. ಇದನ್ನೂ ಓದಿ: Odisha Train Tragedy: ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸಿದ ವೀಡಿಯೋ ವೈರಲ್

    ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸಿದ ವೀಡಿಯೋ ವೈರಲ್

    ಮುಂಬೈ: ಆಗಸ್ಟ್ 23ರಂದು ನಿಧನರಾದ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಅವರಿಗೆ ಪಬ್‌ನಲ್ಲಿ ಬಲವಂತವಾಗಿ ಮದ್ಯ ಕುಡಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸುತ್ತಿರುವ ವ್ಯಕ್ತಿ ಸುಧೀರ್ ಸಾಂಗ್ವಾನ್ ಎಂಬುದು ತಿಳಿದುಬಂದಿದೆ.

    ಈ ನಡುವೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ, ಸೋನಾಲಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ(ಸಿಬಿಐ) ತನಿಖೆ ನಡೆಸುವಂತೆ ಗೋವಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಭೇಟಿಯ ಬಳಿಕ ಮಾತನಾಡಿದ ಸೋನಾಲಿ ಸಹೋದರಿ ರೂಪೇಶ್, ಘಟನೆ ಬಗ್ಗೆ ಸಿಬಿಐ ತನಿಖೆ ನಡೆಯಲಿದೆ ಮತ್ತು ನಮಗೆ ನ್ಯಾಯ ಸಿಗಲಿದೆ ಎಂದು ಸಿಎಂ ಖಟ್ಟರ್ ನಮಗೆ ಭರವಸೆ ನೀಡಿದ್ದಾರೆ. ಇನ್ನು ಎಲ್ಲವೂ ಮುನ್ನೆಲೆಗೆ ಬರಲಿದೆ. ಬಲವಂತವಾಗಿ ಮಾಡಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ಅವಳ ಫೋನ್ ಆಫ್ ಆದ ಬಳಿಕ ಏನೋ ತಪ್ಪಾಗಿದೆ ಎಂದು ಆಕೆ ನನಗೆ ಹೇಳಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಗೋವಾದ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿಗಳಾದ ಸುಧೀರ್ ಸಾಂಗ್ವಾನ್(ಸೋನಾಲಿ ಆಪ್ತ ಸಹಾಯಕ) ಮತ್ತು ಸುಖ್ವಿಂದರ್ ಸಿಂಗ್(ಸುಧೀರ್ ಸಾಂಗ್ವಾನ್ ಸ್ನೇಹಿತ)ನನ್ನು ಅಂಜುನಾ ಪೊಲೀಸರು ಶನಿವಾರ ಮಪುಸಾ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    ಆರೋಪಿಗಳು ಸೋನಾಲಿಗೆ ಗೋವಾದ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಬಲವಂತವಾಗಿ ಮಾದಕ ದ್ರವ್ಯ ನೀಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್

    ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್

    ಗುರುಗ್ರಾಮ: ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಯ ಏಕೀಕರಣದಂತೆಯೇ, ಭಾರತದೊಂದಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿಲೀನವೂ ಸಾಧ್ಯ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

    ಗುರುಗ್ರಾಮದಲ್ಲಿ ಬಿಜೆಪಿಯ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಮೂರು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, 1947ರಲ್ಲಿ ನಡೆದ ದೇಶದ ವಿಭಜನೆ ಕುರಿತು ನೋವಿನ ಮಾತುಗಳನ್ನು ಆಡಿದರು. ಭಾರತವು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ 

    ಪೂರ್ವ ಮತ್ತು ಪಶ್ಚಿಮಗಳು ಏಕೀಕರಣದಂತೆಯೇ, ಭಾರತದೊಂದಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿಲೀನವೂ ಸಾಧ್ಯ. ಬಹಳ ಹಿಂದೆಯೇ ಅಂದರೆ 1991ರಲ್ಲಿ ಸಂಭವಿಸಿತ್ತು. ಆದರೆ ಕೆಲವರು ಅದನ್ನು ಕೆಡಿಸಿದರು. ದೇಶದ ವಿಭಜನೆ ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಅಲ್ಪಸಂಖ್ಯಾತ ಸಮುದಾಯದ ಜನರು ಭಯ ಮತ್ತು ಅಭದ್ರತೆಯ ಭಾವನೆ ಬೆಳೆಸಿಕೊಳ್ಳದಂತೆ ಅಲ್ಪಸಂಖ್ಯಾತರನ್ನು ಟ್ಯಾಗ್ ನೀಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮನೋಹರ್ ಲಾಲ್ ಖಟ್ಟರ್, ಹಳೆಯ ಪಕ್ಷವು ಸಂಘದ ಶಕ್ತಿ ಪ್ರದರ್ಶಿಸುವ ಮೂಲಕ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಮೂಡಿಸಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಪಕ್ಷವು ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

    Live Tv
    [brid partner=56869869 player=32851 video=960834 autoplay=true]

  • ಇ-ಹರಾಜು ಮೂಲಕ ಸಾರಿಗೆಯೇತರ ವಾಹನಗಳಿಗೆ ‘ವಿಐಪಿ ಸಂಖ್ಯೆ’: ಹರಿಯಾಣ ಸಿಎಂ

    ಇ-ಹರಾಜು ಮೂಲಕ ಸಾರಿಗೆಯೇತರ ವಾಹನಗಳಿಗೆ ‘ವಿಐಪಿ ಸಂಖ್ಯೆ’: ಹರಿಯಾಣ ಸಿಎಂ

    ಚಂಡೀಗಢ: ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಬೆಂಗಾವಲು ಪಡೆಯ ನಾಲ್ಕು ವಾಹನಗಳ ‘ವಿಐಪಿ’ ನೋಂದಣಿ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಹಿಂಪಡೆಯುವುದಾಗಿ ಮಂಗಳವಾರ ಘೋಷಿಸಿದ್ದಾರೆ.

    ಮಂಗಳವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹರಿಯಾಣ ಮೋಟಾರು ವಾಹನ ನಿಯಮ-1993ರ ತಿದ್ದುಪಡಿ ಕುರಿತು ಚರ್ಚೆಯಾಗುತ್ತಿತ್ತು. ಈ ವೇಳೆ ಮನೋಹರ್ ಲಾಲ್ ಅವರು, ಇಂದಿನಿಂದ ಎಲ್ಲ ‘ವಿಐಪಿ’ ವಾಹನಗಳ ನೋಂದಣಿ ಸಂಖ್ಯೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ. ‘ವಿಐಪಿ’ ಸಂಖ್ಯೆಗಳನ್ನು ಇ-ಹರಾಜು ಮೂಲಕ ಹಂಚಲಾಗುತ್ತದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನನಗೆ ದ್ರೋಹ ಮಾಡಿದೆ: ಚಿರಾಗ್ ಪಾಸ್ವಾನ್

    ಈ ಘೋಷಣೆಯ ನಂತರ, ಸಾರ್ವಜನಿಕರು ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಖರೀದಿಸಲು ಇಷ್ಟಪಡುವವರು ರಾಜ್ಯ ಸರ್ಕಾರಿ ವಾಹನಗಳ ವಿಐಪಿ ಸಂಖ್ಯೆ ‘179’ ಖರೀದಿಸಲು ಸಾಧ್ಯವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Vehicles can even ply after 15 years with a fitness certificate, here's how! | The Financial Express

    ಇ-ಹರಾಜು ಮೂಲಕ ಸಾರಿಗೆಯೇತರ ವಾಹನಗಳಿಗೆ ‘ವಿಐಪಿ ಸಂಖ್ಯೆ’ ನೋಂದಣಿ ಸಂಖ್ಯೆಗಳ ವ್ಯವಸ್ಥೆಯನ್ನು ಜಾರಿಗೆ ತರಲು ಹರಿಯಾಣ ಮೋಟಾರು ವಾಹನಗಳ(ತಿದ್ದುಪಡಿ) ನಿಯಮಗಳು-2022 ಅನ್ನು ಸಂಪುಟ ಅನುಮೋದಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಹೇಳಿಕೆಯ ಪ್ರಕಾರ, ಈ 179 ‘ವಿಐಪಿ ಸಂಖ್ಯೆ’ ಗಳನ್ನು ಇ-ಹರಾಜು ಮಾಡುವ ಮೂಲಕ 18 ಕೋಟಿಗಳಷ್ಟು ಆದಾಯವನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ