Tag: MannKiBaat

  • ಬೆಂಗ್ಳೂರು ಬಾಲೆಗೆ ಫಿದಾ ಆದ್ರು ಪ್ರಧಾನಿ ಮೋದಿ

    ಬೆಂಗ್ಳೂರು ಬಾಲೆಗೆ ಫಿದಾ ಆದ್ರು ಪ್ರಧಾನಿ ಮೋದಿ

    ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರು ಬಾಲೆಯ ಸಂಸ್ಕೃತ ಭಾಷೆಗೆ ಫಿದಾ ಆಗಿದ್ದಾರೆ. ಭಾನುವಾರ ನಡೆದ ಮನ್ ಕೀ ಬಾತ್ ನಲ್ಲಿ ಗಿರಿನಗರದ ನಿವಾಸಿ ಚಿನ್ಮಯಿ ಕುರಿತು ನಾಲ್ಕು ನಿಮಿಷ ಮಾತನಾಡಿದ್ದಾರೆ.

    ಗಿರಿನಗರದ ವಿಜಯಭಾರತಿ ಶಾಲೆಯಲ್ಲಿ ಹತ್ತನೆ ತರಗತಿ ಓದ್ತಾ ಇರುವ ಚಿನ್ಮಯಿ ಪ್ರಧಾನಿ ಜೊತೆ ಸಂಸ್ಕೃತ ಭಾಷೆ ವೈಶಿಷ್ಟ್ಯತೆ, ಸಂಸ್ಕೃತ ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತಾ ಸಂಸ್ಕೃತದಲ್ಲಿಯೇ ಕೇಳಿದ್ದಳು. ಚಿನ್ಮಯಿ ಸಂಸ್ಕೃತ ಪಾಂಡಿತ್ಯಕ್ಕೆ ಮೋದಿ ಖುಷಿ ವ್ಯಕ್ತಪಡಿಸಿ ಸುಮಾರು ನಾಲ್ಕು ನಿಮಿಷ ಇಪ್ಪತ್ತು ಸಕೆಂಡ್ ಗಳ ಕಾಲ ಸಂಸ್ಕೃತ ಭಾಷೆಯ ವೈಶಿಷ್ಟ್ಯದ ಬಗ್ಗೆ ಮಾತಾನಾಡಿದ್ದಾರೆ. ಚಿನ್ಮಯಿಯ ಜ್ಞಾನಕ್ಕೆ ತಲೆದೂಗಿದ ಮೋದಿ ಸಂಸ್ಕೃತವನ್ನು ನಿತ್ಯ ಭಾಷೆಯಾಗಿ ಬಳಸುವ ಶಿವಮೊಗ್ಗದ ಮತ್ತೂರು ಗ್ರಾಮದ ಬಗ್ಗೆಯೂ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದ್ದಾರೆ.

    ಭಾನುವಾರ ಸಂಸ್ಕೃತ ದಿನವಾಗಿದ್ದರಿಂದ ಪ್ರಧಾನಿಗಳಿಗೆ ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದೆ. ಪ್ರಧಾನಿಗಳು ಸಂಸ್ಕೃತದಲ್ಲಿ ಉತ್ತರಿಸಿದರು. ಅವರ ಜೊತೆ ಮಾತನಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತಿದೆ ಎಂದು ಚಿನ್ಮಯಿ ಪಬ್ಲಿಕ್ ಟಿವಿಗೆ ಹೇಳಿದ್ದಾಳೆ. ಇತ್ತ ಚಿನ್ಮಯಿ ಪೋಷಕರು ಸಹ ಮಗಳು ದೇಶದ ಪ್ರಧಾನಿಗಳ ಜೊತೆ ಮಾತನಾಡಿದ್ದಕ್ಕೆ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.