Tag: Mannat

  • ‘ಮನ್ನತ್’ ಮೇಲೆ ನಿಂತು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಶಾರುಖ್

    ‘ಮನ್ನತ್’ ಮೇಲೆ ನಿಂತು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಶಾರುಖ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಡಿ.21ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಂಕಿ ಸಿನಿಮಾಗೆ ಪ್ರೇಕ್ಷಕ ತೋರಿಸುತ್ತಿರುವ ಪ್ರೀತಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ. ಈ ಹಿನ್ನೆಲೆ ಭಾನುವಾರದಂದು ತಮ್ಮ ನಿವಾಸ ಮನ್ನತ್ (Mannat) ಎದುರು ಜಮಾಯಿಸಿದ್ದ ನೂರಾರು ಅಭಿಮಾನಿಗಳಿಗೆ ಶಾರುಖ್ ದರ್ಶನ ಕೊಟ್ಟಿದ್ದಾರೆ. ತಮ್ಮ ಸಿಗ್ನೇಚರ್ ಶೈಲಿಯ ಪೋಸ್ ನೀಡಿ ಫ್ಯಾನ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.

    ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆ ಸೇರಿ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಂದು ಸಿಂಪಲ್ ಕಥೆಯನ್ನು ಬಹಳ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್‌ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ.

    ಕಿಂಗ್ ಖಾನ್- ಹಿರಾನಿ ಒಟ್ಟಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ‘ಡಂಕಿ’ ಎನ್ನುವ ವಿಭಿನ್ನ ಟೈಟಲ್ ಕೂಡ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ‘ಮುನ್ನಾಭಾಯ್’ ಸರಣಿ, ‘ಪಿಕೆ’, ‘ಸಂಜು’ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕರು ಈ ಬಾರಿ ಯಾವ ಕಥೆ ಹೇಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ‘ಜೀರೊ’ ಸಿನಿಮಾ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಶಾರುಖ್ ಖಾನ್ ಈ ವರ್ಷ ‘ಪಠಾಣ್’ ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಚಿತ್ರ ಸಾವಿರ ಕೋಟಿ ರೂ. ಕಲೆಕ್ಷನ್ ಗಡಿ ದಾಟಿತ್ತು. ಬಳಿಕ ಬಂದ ‘ಜವಾನ್’ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗಾಗಿ ‘ಡಂಕಿ’ ಸಿನಿಮಾ ಬಗ್ಗೆ ಸಹಜವಾಗಿಯೇ ಕ್ರೇಜ್ ಹೆಚ್ಚಾಗಿತ್ತು.

    ಸುಖಿ(ವಿಕ್ಕಿ ಕೌಶಲ್), ಮನು(ತಾಪ್ಸಿ), ಬಲ್ಲಿ(ಅನಿಲ್ ಗೋವರ್), ಬುಗ್ಗು(ವಿಕ್ರಂ ಕೌಚರ್) ಎನ್ನುವ ನಾಲ್ಕು ಜನ ಸ್ನೇಹಿತರು. 1995ರಲ್ಲಿ ಪಂಜಾಬ್‌ನ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾರೆ. ಆರ್ಥಿಕ ಸಮಸ್ಯೆ ಎದುರಿಸುವ ಇವರು ಲಂಡನ್‌ಗೆ ಹೋಗಿ ಹಣ ಸಂಪಾದಿಸುವ ಕನಸು ಕಾಣುತ್ತಾರೆ. ಆದರೆ ಅದಕ್ಕೆ ಬೇಕಾದ ವಿದ್ಯಾರ್ಹತೆ, ಇಂಗ್ಲೀಷ್ ಮಾತನಾಡುವ ಕೌಶಲ್ಯ ಇರುವುದಿಲ್ಲ. ಅಷ್ಟರಲ್ಲಿ ಹರ್ಡಿ ಸಿಂಗ್ ಎನ್ನುವ ಮಾಜಿ ಸೈನಿಕ ಆ ಊರಿಗೆ ಬರ್ತಾನೆ. ಆತ ಇವರನ್ನು ಲಂಡನ್‌ಗೆ ತಲುಪಿಸಲು ಪ್ರಯತ್ನಿಸುತ್ತಾನೆ. ಆದರೆ ಅದು ಲೀಗಲ್ ಆಗಿ ಅಲ್ಲ. ಇಲ್ಲೀಗಲ್ ಆಗಿ. ಅಷ್ಟಕ್ಕೂ ಅವರೆಲ್ಲಾ ವಾಮಮಾರ್ಗ(ಡಂಕಿ)ದಲ್ಲಿ ಲಂಡನ್‌ಗೆ ಹೋದ್ರಾ? ಮುಂದೆ ಏನಾಯ್ತು? ಎನ್ನುವುದೇ ಸಿನಿಮಾ ಕಥೆ.

  • ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

    ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

    ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಮನೆಗೆ ಭಾರೀ ಭದ್ರತೆ ನೀಡಲಾಗಿದೆ. ಮುಂಬೈನಲ್ಲಿರುವ (Mumbai) ಮನ್ನತ್ ನಿವಾಸಕ್ಕೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಲಾಗಿದ್ದು, ಮನೆ ಮುಂದೆ ಜನರು ಜಮಾಯಿಸಬಾರದು ಎಂದು ಸೂಚನೆ ನೀಡಲಾಗಿದೆ. ಮನೆ ಮುಂದೆ ಭಾರೀ ಪ್ರತಿಭಟನೆ (Protest) ವ್ಯಕ್ತವಾಗಿದ್ದರೆ, ಶಾರುಖ್ ತಮ್ಮ ಸಿನಿಮಾದ ಪ್ರಮೋಷನ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

    ಶಾರುಖ್ ಖಾನ್ ಮನೆಗೆ ಭದ್ರತೆ ನೀಡಿದ್ದಕ್ಕೆ ಕಾರಣವೂ ಇದೆ. ಶಾರುಖ್ ಖಾನ್ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆನ್ ಲೈನ್ ಆಟಗಳ ಜಾಹೀರಾತುಗಳನ್ನು ಒಪ್ಪಿಕೊಂಡಿದ್ದಾರೆ. ಆ ಆಟಗಳನ್ನು ಆಡಿದ ಹಲವರ ಜೀವನವೇ ನಾಶವಾಗಿದೆ. ಇಂತಹ ಜಾಹೀರಾತುಗಳನ್ನು ಒಪ್ಪಿಕೊಳ್ಳಬಾರದು ಎನ್ನುವುದು ಅನ್ ಟಚ್ ಯೂತ್ ಫೆಡರೇಷನ್ ಆಗ್ರಹ. ಇವರೇ ಶಾರುಖ್ ಖಾನ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

    ಅನ್ ಟಚ್ ಯೂತ್ ಫೆಡರೇಷನ್ ನ ಅಧ್ಯಕ್ಷ ಕೃಷ್ಣ ಚಂದ್ರ ಅಡಾಲ್ (Krishna Chandra Adal) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಾಕಷ್ಟು ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿಯೇ ಶಾರುಖ್ ಮನೆಗೆ ಭದ್ರತೆ ನೀಡಲಾಗಿದೆ. ಹೋರಾಟಗಾರರ ಮನವೊಲಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

     

    ಶಾರುಖ್ ನಟಿಸಿ, ನಿರ್ಮಾಣ ಮಾಡುತ್ತಿರುವ ಜವಾನ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಶಾರುಖ್ ಮತ್ತು ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅತ್ತ ಶಾರುಖ್ ನಾನಾ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡುತ್ತಿದ್ದರೆ, ಇತ್ತ ಮನೆಯ ಮುಂದೆ ಪ್ರತಿಭಟನೆ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್ ಖಾನ್ ಮನೆಯಲ್ಲಿ ಆಗಂತುಕರು : ಎಂಟು ಗಂಟೆ ಮಾಡಿದ್ದೇನು?

    ಶಾರುಖ್ ಖಾನ್ ಮನೆಯಲ್ಲಿ ಆಗಂತುಕರು : ಎಂಟು ಗಂಟೆ ಮಾಡಿದ್ದೇನು?

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ನಿವಾಸದಲ್ಲಿ ಹೈಡ್ರಾಮಾ ನಡೆದಿದೆ. ಅಭಿಮಾನಿ ಹೆಸರಿನ ಇಬ್ಬರು ಆಗಂತುಕರು ಮಧ್ಯರಾತ್ರಿ ಮನೆ ಪ್ರವೇಶಿಸಿ ಎಂಟುಗಂಟೆಗಳ ಕಾಲ ಅವರ ಮೇಕಪ್ ರೂಮ್ ನಲ್ಲಿ ಕಳೆದಿದ್ದಾರೆ. ಅವರನ್ನು ಕಂಡು ಸ್ವತಃ ಶಾರುಖ್ ಖಾನ್ ಬೆಚ್ಚಿಬಿದ್ದಿದ್ದಾರೆ. ರಾತ್ರಿ ಮೂರು ಗಂಟೆಗೆ ಅವರು ಮನೆಯ ಕಾಂಪೌಂಡ್ ಹಾರಿಕೊಂಡು ಮನೆ ಪ್ರವೇಶಿಸಿದ್ದರು ಎಂದು ಹೇಳಲಾಗುತ್ತಿದೆ.

    ಮುಂಬೈನ (Mumbai) ಬಾಂದ್ರಾದಲ್ಲಿರುವ ಶಾರುಖ್ ಅವರ ಮನ್ನತ್ (Mannat) ಮನೆಗೆ ಸಾಕಷ್ಟು ಸೆಕ್ಯೂರಿಟಿ ಇದ್ದರೂ, ಇಬ್ಬರು ವ್ಯಕ್ತಿಗಳು ಮನೆಯನ್ನು ಹೇಗೆ ಪ್ರವೇಶ ಮಾಡಿದರು ಎನ್ನುವ ಆತಂಕ ಎದುರಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮಧ್ಯರಾತ್ರಿ 3 ಗಂಟೆಗೆ ಮನೆ ಪ್ರವೇಶ ಮಾಡಿ, ಬೆಳಗ್ಗೆ 10.30ರವರೆಗೂ ಅಲ್ಲಿಯೇ ಇದ್ದರು. ಮೇಕಪ್ ರೂಮ್ ಗೆ ಬಂದ ಶಾರುಖ್ ಅವರನ್ನು ನೋಡಿ ಗಾಬರಿ ಆಗಿದ್ದರು. ಇದನ್ನೂ ಓದಿ: ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

    ಕೂಡಲೇ ಶಾರುಖ್ ಮನೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಬೈ ಪೊಲೀಸರು ಅವರನ್ನು ಬಂಧಿಸಿ, ಎಫ್.ಐ.ಆರ್ ದಾಖಲಿಸಿದ್ದಾರೆ. ಆ ಇಬ್ಬರೂ ಯುವಕರು ಶಾರುಖ್ ಅಭಿಮಾನಿಗಳು ಎಂದು ಹೇಳಲಾಗುತ್ತಿದೆ. ಗುಜರಾತ್ ನ ಭರೂಚ್ (Bharuch) ಗ್ರಾಮದಿಂದ ಬಂದಿರುವುದಾಗಿ ತಿಳಿಸಿದ್ದಾರೆ. ನಟನಿಗೆ ಸರ್ಪೈಸ್ ನೀಡುವುದಕ್ಕೆ ಹಾಗೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶಾರುಖ್ ಖಾನ್ ಮನೆ ಅದೊಂದು ದೊಡ್ಡ ಬಂಗಲೆ. ಹಲವು ಕೊಠಡಿಗಳನ್ನು ಅದು ಹೊಂದಿದೆ. ಆಮನೆಯಲ್ಲಿ ಸ್ಟುಡಿಯೋ, ಮೇಕಪ್ ರೂಮ್, ಆಫೀಸ್ ಸೇರಿದಂತೆ ಚಿತ್ರೀಕರಣಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳು ಕೂಡ ನಡೆಯುತ್ತವೆ ಎಂದು ಹೇಳಲಾಗುತ್ತಿದೆ.

  • ಶಾರುಖ್ ಖಾನ್ ಮನೆಯಲ್ಲಿ ಗಣೇಶ: ಮನ್ನತ್ ನಿವಾಸದಲ್ಲಿ ಕಳೆಗಟ್ಟಿದ ಸಂಭ್ರಮ

    ಶಾರುಖ್ ಖಾನ್ ಮನೆಯಲ್ಲಿ ಗಣೇಶ: ಮನ್ನತ್ ನಿವಾಸದಲ್ಲಿ ಕಳೆಗಟ್ಟಿದ ಸಂಭ್ರಮ

    ಬಾಲಿವುಡ್ ಬಹುತೇಕ ಸ್ಟಾರ್ ನಟ ನಟಿಯರು ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಬಹುತೇಕರು ಕಲಾವಿದರು ಮತ್ತು ತಂತ್ರಜ್ಞರು ಶೂಟಿಂಗ್ ಬಂದ್ ಮಾಡಿ, ತಮ್ಮ ಮನೆಯಲ್ಲಿ ಗಣೇಶ ಪೂಜೆ ಮಾಡುತ್ತಾರೆ. ಅದರಂತೆಯೇ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮನೆಯಲ್ಲೂ ಕೂಡ ಗಣೇಶನನ್ನು ಪತ್ರಿಷ್ಠಾಪಿಸಲಾಗಿತ್ತು.

    ತಮ್ಮ ನಿವಾಸ ಮನ್ನತ್ ನಲ್ಲಿ ಗಣೇಶನ ಹಬ್ಬವನ್ನು ಸಡಗರಿಂದ ಮಾಡಿದ ಫೋಟೋವನ್ನು ಶಾರುಖ್ ಹಂಚಿಕೊಂಡಿದ್ದು, ಮೋದಕ ತಿಂದು ಸಂತೃಪ್ತನಾದ ಬಗ್ಗೆ ಹೇಳಿದ್ದಾರೆ. ಎಲ್ಲರಿಗೂ ವಿಘ್ನ ವಿನಾಶಕ ಗಣಪತಿ ಒಳ್ಳೆಯದ್ದನ್ನು ಮಾಡಲಿ ಎಂದು ಕೇಳಿಕೊಂಡಿದ್ದಾರೆ. ದೇವರ ಮೇಲಿನ ನಂಬಿಕೆ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಪ್ರೇರಕವಾದ ಸಾಲುಗಳನ್ನೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಶಾರುಖ್ ಖಾನ್ ನಿವಾಸದಲ್ಲಿ ಇಡಲಾದ ಗಣೇಶನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶಾರುಖ್ ಖಾನ್ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಗಲಾಟೆಯ ಮಧ್ಯ ಶಾರುಖ್ ಖಾನ್ ಹಿಂದೂ ದೇವರನ್ನು ಪೂಜಿಸುವ ಮೂಲಕ ಉತ್ತಮ ಸಂದೇಶ ಸಾರಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶಾರುಖ್ ಖಾನ್ ಕನಸಿನ ಸೌಧ ‘ಮನ್ನತ್’. ಮುಂಬೈನ ಬಾಂದ್ರಾ ಎನ್ನುವ ದುಬಾರಿ ಪ್ರದೇಶದಲ್ಲಿ ಈ ಮನೆಯಿದ್ದು, ಈ ಮನೆಯಿಂದಲೇ ಸಮುದ್ರವನ್ನು ವೀಕ್ಷಿಸುವಂತೆ ಕಟ್ಟಿದ್ದಾರೆ ಶಾರುಖ್ ಮತ್ತು ಪತ್ನಿ ಗೌರಿ ಖಾನ್. ಬರೋಬ್ಬರಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನ್ನತ್ ಒಂದು ಅರ್ಥದಲ್ಲಿ ಪ್ರವಾಸಿ ತಾಣವೇ ಆಗಿದೆ. ಮುಂಬೈಗೆ ಬಂದವರು ದೂರದಿಂದಲೇ ಮನ್ನತ್ ಕಣ್ಣುತುಂಬಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಇನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮನ್ನತ್ ಸೌಧದಲ್ಲಿ ಅಷ್ಟೇ ಬೆಲೆ ಬಾಳುವ ವಸ್ತುಗಳು ಇವೆ ಎನ್ನುವುದು ಗುಟ್ಟಿನ ಸಂಗತಿ. ಈಗ ಆ ಗುಟ್ಟುಗಳೆಲ್ಲ ಒಂದೊಂದೆ ರಟ್ಟಾಗುತ್ತಿವೆ. ಈ ಮೊದಲು ಮನ್ನತ್ ಮನೆಯಲ್ಲಿರುವ ಟಿವಿ ರೇಟ್ ಬಗ್ಗೆ ಮೊನ್ನೆಯಷ್ಟೇ ಟ್ರೆಂಡ್ ಆಗಿತ್ತು. ಭಾರೀ ದುಬಾರಿಯ ಟಿವಿಗಳನ್ನು ಈ ಮನೆಯಲ್ಲಿ ಅಳವಡಿಸಲಾಗಿದೆಯಂತೆ. ಅದು ಕೋಟಿ ಲೆಕ್ಕದಲ್ಲಿ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಟಿವಿ ನಂತರ ಮನ್ನತ್ ಮನೆಯ ನೇಮ್ ಪ್ಲೇಟ್ ಬಗ್ಗೆಯೂ ಭಾರೀ ಸುದ್ದಿ ಆಗಿತ್ತು. ಬರೋಬ್ಬರಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೇಮ್ ಪ್ಲೇಟ್ ತಯಾರಾಗಿದೆಯಂತೆ. ವಜ್ರದ ಹರಳುಗಳನ್ನು ಈ ನೇಮ್ ಪ್ಲೇಟ್ ನಲ್ಲಿ ಅಳವಡಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ರಾತ್ರಿ ವೇಳ ಫಳಫಳ ಹೊಳೆಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಈಗ ಆ ನೇಮ್ ಪ್ಲೇಟ್ ನಾಪತ್ತೆ ಆಗಿದೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಕಳೆದ ಒಂದು ವಾರದಿಂದ ‘ಮನ್ನತ್’ ಎನ್ನುವ ನೇಮ್ ಪ್ಲೇಟ್ ಮನೆಯ ಮುಂದೆ ಕಾಣಿಸುತ್ತಿಲ್ಲವಂತೆ. ಕಳ್ಳತನವಾಗಿದೆಯಾ? ಅಥವಾ ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಾ? ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ನೇಮ್ ಪ್ಲೇಟ್ ಮಾತ್ರ ಇರಬೇಕಾಗಿದ್ದ ಜಾಗದಲ್ಲಿ ಕಾಣಿಸುತ್ತಿಲ್ಲ ಎನ್ನುವುದು ಲೇಟೆಸ್ಟ್ ಸುದ್ದಿ. ಈ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.  ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಶಾರುಖ್ ಖಾನ್ ಆಪ್ತರು ಹೇಳುವ ಪ್ರಕಾರ, ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಂತೆ. ಅದು ಹೊಸ ನೇಮ್ ಪ್ಲೇಟ್ ಆದ ಕಾರಣ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಅದರಲ್ಲಿ ಅಳವಡಿಸಿದ್ದರಿಂದ, ರಿಪೇರಿಗೆ ಬಂದಿದೆಯಂತೆ. ಅದನ್ನು ಸರಿ ಮಾಡಿಸಿ, ಮತ್ತೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.

  • ಶಾರುಕ್ ಖಾನ್ ‘ಮನ್ನತ್’ ಬಂಗಲೆಗೆ ಪ್ಲಾಸ್ಟಿಕ್ ಹೊದಿಕೆ- ವೈರಲ್ ಫೋಟೋ

    ಶಾರುಕ್ ಖಾನ್ ‘ಮನ್ನತ್’ ಬಂಗಲೆಗೆ ಪ್ಲಾಸ್ಟಿಕ್ ಹೊದಿಕೆ- ವೈರಲ್ ಫೋಟೋ

    ಮುಂಬೈ: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಮುಂಬೈ ನಿವಾಸ ‘ಮನ್ನತ್’ಗೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೊರೊನಾ ಭಯದಿಂದ ಮನೆಗೆ ಈ ರೀತಿ ಪ್ಲಾಸ್ಟಿಕ್ ಹೊದಿಕೆ ಹಾಕಿಲಾಗಿದೆಯೇ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    ???? #Mannat #ShahRukhKhan

    A post shared by King of World (@king_of_bollywoodsrk) on

    ಶಾರುಖ್ ಫ್ಯಾನ್ ಕ್ಲಬ್ ಇನ್‍ಸ್ಟಾದಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ‘ಮನ್ನತ್’ ನಿವಾಸದಲ್ಲಿ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಾರೆ. ಪುತ್ರಿ ಸುಹನಾ ಮತ್ತು ಅರ್ಯನ್ ವಿದೇಶಿದಲ್ಲಿ ಓದುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಕಾರಣದಿಂದ ಎಲ್ಲರು ಮನೆಗೆ ಹಿಂದಿರುಗಿದ್ದಾರೆ. ಮುಂಬೈನಲ್ಲಿ ಮಹಾಮಾರಿ ಕೊರೊನಾ ತೀವ್ರತೆ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ಸರಾಸರಿ 1 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದೆ. ಅಲ್ಲದೇ ಸೋಂಕಿತರ ಸಂಖ್ಯೆ 3.27 ಲಕ್ಷಕ್ಕೇರಿದೆ.

    ಅಂದಹಾಗೇ ಮುಂಬೈನಲ್ಲಿ ಕೊರೊನಾದೊಂದಿಗೆ ಮಳೆಯ ಅರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶಾರುಕ್ ಖಾನ್ ಮನೆಯ ಬಾಲ್ಕನಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಈ ರೀತಿ ಮಳೆ ನೀರು ಮನೆ ಒಳಬಾರದಂತೆ ಹೊದಿಕೆ ಹಾಕಿರುವುದು ಇದೇ ಮೊದಲೇನಲ್ಲಾ. ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಇದೇ ರೀತಿ ಮಾಡುತ್ತಾರೆ.

    ಕಳೆದ ತಿಂಗಳು ಶಾರುಖ್ ಖಾನ್ ತಮ್ಮ ಮನೆಯ ಬಾಲ್ಕನಿಯಲ್ಲಿ ಶೂಟಿಂಗ್ ಮಾಡುತ್ತಿದ್ದರು. ಈ ವೇಳೆಯೂ ಅವರ ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದರು. ಉಳಿದಂತೆ ಶಾರುಖ್ ಖಾನ್ 2018ರಲ್ಲಿ ಬಿಡುಗಡೆಯಾಗಿದ್ದ ‘ಝೀರೋ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ನಟಿಸಿದ್ದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸದ್ಯ ಶಾರುಖ್, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಪಂಜಾಬ್‍ನಿಂದ ಕೆನಡಾಗೆ ವಲಸೆ ಹೋಗುವ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದು, ಕಾಮಿಡಿ ಹಾಗೂ ಎಮೋಷನಲ್ ಆಗಿ ಅವರ ಪಾತ್ರ ಮೂಡಿ ಬರಲಿದೆಯಂತೆ.