Tag: mann ki bath

  • ಪ್ರಧಾನಿ ಮೋದಿ ಜೊತೆ ಕೆ.ಸಿ. ಜನರಲ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಸುರೇಖಾ ಮಾತು

    ಪ್ರಧಾನಿ ಮೋದಿ ಜೊತೆ ಕೆ.ಸಿ. ಜನರಲ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಸುರೇಖಾ ಮಾತು

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಸುರೇಖಾ ಮಾತನಾಡಿದ್ದಾರೆ. ಈ ಬಾರಿಯ ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಕೊರೊನಾ ವಾರಿಯರ್, ಗುಣಮುಖರಾದವರ ಜೊತೆ ಮಾತುಕತೆ ನಡೆಸಿದರು. ಇದರ ಜೊತೆಗೆ ಕೊರೊನಾ ಜಾಗೃತಿ ಮೂಡಿಸಿದರು.

    ಮನ್ ಕೀ ಬಾತ್ ನಲ್ಲಿ ಮಾತನಾಡಿದ ಸುರೇಖಾ ಅವರು, ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಇದರಿಂದ ಸಾವಿನ ಸಂಖ್ಯೆ ಮತ್ತು ಹರಡುವಿಕೆ ಪ್ರಮಾಣ ತಡೆಯಬಹುದು. ಅನಗತ್ಯ ಜನರೊಂದಿಗೆ ಬೆರೆಯಬಾರದು. ಸಾಧ್ಯವಾದಷ್ಟು ಮನೆಯಲ್ಲಿ ಸುರಕ್ಷಿತವಾಗಿರಬೇಕು. ಪದೇ ಪದೇ ಮೂಗು, ಬಾಯಿ ಕಣ್ಣು ಮುಟ್ಟಿಕೊಳ್ಳಬಾರದು ಎಂದು ಹೇಳಿದರು.

    ಇದೇ ವೇಳೆ ವ್ಯಾಕ್ಸಿನ್ ಸುರಕ್ಷಿತವಾಗಿದೆ ಎಲ್ಲರೂ ಪಡೆದುಕೊಳ್ಳಬೇಕು. ನಾನು ಈಗಾಗಲೇ ವ್ಯಾಕ್ಸಿನ್ ಪಡೆದಿದ್ದು ಯಾವುದೇ ಅಡ್ಡ ಪರಿಣಾಮಗಳು ಬೀರಿಲ್ಲ. ಈ ಎಲ್ಲ ಕ್ರಮಗಳಿಂದ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಬಹುದು ಎಂದು ಮನ್ ಕೀ ಬಾತ್ ನಲ್ಲಿ ಸುರೇಖಾ ಅಭಿಪ್ರಾಯ ವ್ಯಕ್ತಪಡಿಸಿದರು.

  • ಮನ್ ಕೀ ಬಾತ್‍ನಲ್ಲಿ ಮೈಸೂರಿಗನ ಬಗ್ಗೆ ಮೋದಿ ಮೆಚ್ಚುಗೆ ಮಾತು!

    ಮನ್ ಕೀ ಬಾತ್‍ನಲ್ಲಿ ಮೈಸೂರಿಗನ ಬಗ್ಗೆ ಮೋದಿ ಮೆಚ್ಚುಗೆ ಮಾತು!

    ಬೆಂಗಳೂರು: 2017ನೇ ವರ್ಷದ 2ನೇ ಹಾಗೂ ಮನ್ ಕೀ ಬಾತ್‍ನ 29ನೇ ಸರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಸಂತೋಷ್ ಎಂಬವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂತೋಷ್ ಬಗ್ಗೆ ಮೋದಿ ಅವರು ಏನು ಹೇಳಿದ್ರು ಅನ್ನೋದನ್ನು ಅವರ ಮಾತುಗಳಲ್ಲೇ ಓದಿ.

    ಮೈಸೂರಿನ ಸಂತೋಷ್ ಎಂಬವರು ನರೇಂದ್ರ ಮೋದಿ ಆಪ್‍ನಲ್ಲಿ ಲಕ್ಕಿ ಗ್ರಾಹಕ್ ಯೋಜನೆಯಡಿ 1000 ರೂಪಾಯಿ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಬರೆದಿದ್ದರು. ಇದರ ಜೊತೆಗೆ ಅವರು ಹೇಳಿರುವ ಒಂದು ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕೆಂದೆನಿಸುತ್ತಿದೆ. ನನಗೆ ಒಂದು ಸಾವಿರ ರೂಪಾಯಿ ಬಹುಮಾನ ಸಿಕ್ಕಿತ್ತು. ಇದೇ ವೇಳೆ ಬಡ ವೃದ್ಧ ಮಹಿಳೆಯೊಬ್ಬರ ಮನೆಗೆ ಬೆಂಕಿ ಬಿದ್ದ ವಿಚಾರವೂ ನನ್ನ ಗಮನಕ್ಕೆ ಬಂತು. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಅಗ್ನಿಗಾಹುತಿಯಾಗಿದ್ದವು. ಇದನ್ನು ತಿಳಿದಾಗ ನನಗೆ ಸಿಕ್ಕಿದ ಹಣ ಈ ಮಹಿಳೆಯ ಹಕ್ಕು ಎಂದೆನಿಸಿತು. ಹೀಗಾಗಿ ನಾನು 1 ಸಾವಿರ ರೂಪಾಯಿಯನ್ನು ಆ ವೃದ್ಧೆಗೆ ನೀಡಿದೆ. ನನಗೆ ಇದರಿಂದ ತುಂಬಾ ಸಂತಸವಾಗಿದೆ ಸಂತೋಷ್‍ಜೀ. ನಿಮ್ಮ ಹೆಸರು ಮತ್ತು ನಿಮ್ಮ ಕೆಲಸ ನಮಗೆಲ್ಲರಿಗೂ ಸಂತಸ ನೀಡಿದೆ. ನೀವು ಬಹುದೊಡ್ಡ ಪ್ರೇರಣೆಯ ಕೆಲಸ ಮಾಡಿದ್ದೀರಿ.