Tag: mann ki baat

  • ಮೋದಿ ಮೆಚ್ಚಿದ್ದ ರಾಜ್ಯದ ಕವಿ ಮಂಜುನಾಥ್‌ಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ

    ಮೋದಿ ಮೆಚ್ಚಿದ್ದ ರಾಜ್ಯದ ಕವಿ ಮಂಜುನಾಥ್‌ಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ

    ಚಾಮರಾಜನಗರ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚಿದ್ದ ಕವಿ ಮಂಜುನಾಥ್‌ಗೆ (Poet Manjunath) ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

    ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲದ ಕವಿ ಮಂಜುನಾಥ್ ಅವರಿಗೆ ಕೇಂದ್ರ ಸರ್ಕಾರದ ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿದೆ. ವೃತ್ತಿಯಲ್ಲಿ ಎಲ್ಐಸಿ ವಿಮಾ ಪಾಲಿಸಿದಾರರಾಗಿರುವ ಮಂಜುನಾಥ್‌, ಪ್ರವೃತ್ತಿಯಲ್ಲಿ ಕವಿಯಾಗಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ರಾಜ್ಯದ ಲಾಲಿಹಾಡು ಪ್ರಸಾರ – ʼಮಲಗು ಕಂದʼ ಹಾಡಿಗೆ ಪ್ರಧಾನಿ ಮೋದಿ ಪ್ರಶಂಸೆ

    ಕೋವಿಡ್ ವೇಳೆ ‘ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ’ ಎಂಬ ಸಾಲಿನಿಂದ ಜೋಗುಳ ಪದ ರಚಿಸಿದ್ದರು. ಕೇಂದ್ರ ಸರ್ಕಾರದ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆನ್‌ಲೈನ್ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆ ಆಯೋಜಿಸಲಾಗಿತ್ತು. ಪುತ್ರನ ಒತ್ತಾಸೆಗೆ ಮಣಿದು ಜೋಗುಳದ ಹಾಡು ರಚಿಸಿದ್ದ ಕವಿ ಮಂಜುನಾಥ್.

    ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಪೆನ್ ಎ ಲೋರಿ ಎಂಬ ಜೋಗುಳ ಗೀತೆ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಕವಿ ಮಂಜುನಾಥ್ ಪ್ರಥಮ ಸ್ಥಾನ ಪಡೆದಿದ್ದರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಹಿನ್ನೆಲೆ ಹೈಅಲರ್ಟ್ – ಜ.22ರಂದು ರಾಜ್ಯದ ಪೊಲೀಸ್ ಸಿಬ್ಬಂದಿಗೆ ರಜೆ ಇಲ್ಲ..?

    “ಮಲಗು ಕಂದ, ಮಲಗು ಕೂಸೆ” ಎಂಬ ಈ ಲಾಲಿಹಾಡಿಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗೆ ಪಾತ್ರವಾಗಿದ್ದ ಹಾಡಿಗೆ 6 ಲಕ್ಷ ರೂ. ನಗದು ಬಹುಮಾನದ ಮನ್ನಣೆ ಸಿಕ್ಕಿತ್ತು. ಈಗ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಕವಿ ಮಂಜುನಾಥ್‌ ಅವರಿಗಾಗಿ ಟಿಕೆಟ್ ಬುಕ್ ಮಾಡಲಾಗಿದೆ. ಮಂಜುನಾಥ್‌ ದಂಪತಿ ಗಣರಾಜ್ಯೋತ್ಸವದಂದು ದೆಹಲಿಗೆ ತೆರಳಲಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್‌

  • ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ

    ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ

    ನವದೆಹಲಿ: ವಿದೇಶಗಳಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಬೇಡಿ ಎಂದು ಭಾರತೀಯ ಜೋಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಲಹೆ ನೀಡಿದ್ದಾರೆ.

    ಮನ್‌ ಕಿ ಬಾತ್‌ (Mann Ki Baat) ಕಾರ್ಯಕ್ರಮದಲ್ಲಿ ಇಂದು (ಭಾನುವಾರ) ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಮದುವೆಗಳಿಗೆ ಶಾಪಿಂಗ್ ಮಾಡುವಾಗ, ಜನರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿಯ ಮಾಜಿ ಸ್ನೇಹಿತ ಎಂದಿರೋ ರಾಹುಲ್‍ಗೆ ಓವೈಸಿ ತಿರುಗೇಟು

    ಶ್ರೀಮಂತ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿಯಿಂದ ದೇಶಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ದೇಶದ ಹಣ ಹೊರಗಡೆ ಹೋಗದಂತೆ ಭಾರತದ ನೆಲದಲ್ಲಿ ಇಂತಹ ಸಮಾರಂಭಗಳನ್ನು ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

    ಈಗ ಮದುವೆ ಸೀಸನ್ ಕೂಡ ಶುರುವಾಗಿದೆ. ಈ ಮದುವೆ ಸೀಸನ್‌ನಲ್ಲಿ ಸುಮಾರು 5 ಲಕ್ಷ ಕೋಟಿ ರೂ. ವ್ಯಾಪಾರ ಆಗಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತವೆ. ಮದುವೆಗೆ ಶಾಪಿಂಗ್ ಮಾಡುವಾಗ ನೀವೆಲ್ಲರೂ ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪ್ರತಿಭಟನಾಕಾರರ ದಿಗ್ಬಂಧನ- ಅಧಿಕಾರಿಯ ಅಮಾನತು

    ಹೌದು, ಮದುವೆಯ ವಿಷಯ ಬಂದಾಗಿನಿಂದ ಒಂದು ವಿಷಯವು ನನ್ನನ್ನು ಬಹಳ ಸಮಯದಿಂದ ಕಾಡುತ್ತಿದೆ. ಮನಸ್ಸಿನ ನೋವನ್ನು ನನ್ನ ಕುಟುಂಬದವರನ್ನು ಬಿಟ್ಟು ಬೇರೆ ಯಾರ ಹತ್ತಿರ ಹೇಳಿಕೊಳ್ಳಲಿ? ಸುಮ್ಮನೆ ಯೋಚಿಸಿ.. ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ಮದುವೆಗಳನ್ನು ನಡೆಸುವ ಹೊಸ ಪರಿಪಾಠ ಶುರುಮಾಡಿಕೊಂಡಿವೆ. ಇದು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ.

    ಭಾರತದ ನೆಲದಲ್ಲಿ ಜನರು ಮದುವೆ ಸಮಾರಂಭ ಆಯೋಜಿಸಿದರೆ, ದೇಶದ ಹಣವು ದೇಶದಲ್ಲೇ ಉಳಿಯುತ್ತದೆ. ಇಂತಹ ಮದುವೆಗಳಲ್ಲಿ ದೇಶದ ಜನರಿಗೆ ಒಂದಿಷ್ಟು ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

    ಬಡವರು ಕೂಡ ತಮ್ಮ ಮಕ್ಕಳಿಗೆ ಅವರ ಮದುವೆಯ ಬಗ್ಗೆ ಹೇಳುತ್ತಾರೆ. ‘ವೋಕಲ್ ಫಾರ್ ಲೋಕಲ್’ನ ಈ ಮಿಷನ್ ಅನ್ನು ನೀವು ವಿಸ್ತರಿಸಬಹುದೇ? ನಮ್ಮ ದೇಶದಲ್ಲಿಯೇ ಇಂತಹ ಮದುವೆ ಸಮಾರಂಭಗಳನ್ನು ಏಕೆ ನಡೆಸಬಾರದು? ನೀವು ಬಯಸಿದಂತಹ ವ್ಯವಸ್ಥೆ ಎಲ್ಲಾ ಕಡೆ ಇಲ್ಲದಿರಬಹುದು. ಆದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಗಳೂ ಅಭಿವೃದ್ಧಿ ಹೊಂದುತ್ತವೆ. ಇದು ಬಹಳ ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದೆ. ನನ್ನ ಈ ನೋವು ಖಂಡಿತವಾಗಿಯೂ ಆ ದೊಡ್ಡ ಕುಟುಂಬಗಳನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪ್ರಧಾನಿ.

  • ‘ಮನ್ ಕಿ ಬಾತ್’ನಲ್ಲಿ 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯ ವ್ಯಕ್ತಿಗೆ ಮೋದಿ ಮೆಚ್ಚುಗೆ

    ‘ಮನ್ ಕಿ ಬಾತ್’ನಲ್ಲಿ 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯ ವ್ಯಕ್ತಿಗೆ ಮೋದಿ ಮೆಚ್ಚುಗೆ

    ಶಿಲ್ಲಾಂಗ್: ಭಾನುವಾರ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯದ (Meghalaya) ನಿವಾಸಿ ಬ್ರಿಯಾನ್ ಡಿ ಖರ್ಪ್ರಾನ್ (Brian D Kharpran) ಅವರನ್ನು ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.

    ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 1964ರಲ್ಲಿ ಬ್ರಿಯಾನ್ ಶಾಲೆಗೆ ಹೋಗುವ ಹುಡುಗನಾಗಿ ತಮ್ಮ ಅನ್ವೇಷಣೆಯನ್ನು ಪ್ರಾರಂಭಿಸಿದರು. 1990ರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಒಂದು ಸಂಘವನ್ನು ಸ್ಥಾಪಿಸಿ ಮೇಘಾಲಯದಲ್ಲಿರುವ ಅಜ್ಞಾತ ಗುಹೆಗಳ (Caves) ಬಗ್ಗೆ ಹುಡುಕಲು ಪ್ರಾರಂಭಿಸಿದರು. ಬ್ರಿಯಾನ್ ತಮ್ಮ ತಂಡದೊಂದಿಗೆ ಮೇಘಾಲಯದಲ್ಲಿ 1,700ಕ್ಕೂ ಹೆಚ್ಚು ಗುಹೆಗಳನ್ನು ಕಂಡುಹಿಡಿದರು ಮತ್ತು ರಾಜ್ಯವನ್ನು ವಿಶ್ವ ಗುಹೆ ನಕ್ಷೆಯಲ್ಲಿ ಸೇರಿಸಿದರು. ಭಾರತದ ಕೆಲವು ಉದ್ದವಾದ ಮತ್ತು ಆಳವಾದ ಗುಹೆಗಳು ಮೇಘಾಲಯದಲ್ಲಿವೆ ಎಂದರು. ಇದನ್ನೂ ಓದಿ: ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಅಲ್ಲದೇ ಮೇಘಾಲಯದ ಗುಹೆಗಳಿಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಜನರನ್ನು ಒತ್ತಾಯಿಸಿದರು. ಅವುಗಳಲ್ಲಿ ಕೆಲವು ದೇಶದ ಅತ್ಯಂತ ಉದ್ದವಾದ ಮತ್ತು ಆಳವಾದ ಗುಹೆಗಳಾಗಿವೆ. ಮೇಘಾಲಯ ಅಡ್ವೆಂಚರರ್ಸ್ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿರುವ ಬ್ರಿಯಾನ್ ಡಿ ಖರ್ಪ್ರಾನ್ ಅವರು ಇದುವರೆಗೆ ರಾಜ್ಯದಲ್ಲಿ 537.6 ಕಿಲೋ ಮೀಟರ್ ಗುಹೆಗಳನ್ನು ನಕ್ಷೆ ಮಾಡಿದ್ದಾರೆ. ಇದನ್ನೂ ಓದಿ: ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ

    ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ

    ನವದೆಹಲಿ: ವಿಶ್ವದಲ್ಲಿ 57 ಮುಸ್ಲಿಂ ರಾಷ್ಟ್ರಗಳಿವೆ (Muslim Nations), ಅಲ್ಲಿ ಮುಸ್ಲಿಮೇತರರೂ ಇದ್ದಾರೆ. ಅಲ್ಲಿ ಯಾರಿಗೂ ತೊಂದರೆ ಆಗುತ್ತಿಲ್ಲ. ಆದ್ರೆ ಭಾರತದಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಂಬಂಧ ಅಪಾಯದಲ್ಲಿದೆ. ದೇಶದಲ್ಲಿ ಏಕೆ ಮುಸ್ಲಿಮರನ್ನ ಕಂಡರೆ ಇಷ್ಟೊಂದು ದ್ವೇಷ? ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತೀಯ ಮುಸ್ಲಿಮರ ಮನದ ಮಾತನ್ನೂ ಕೇಳಿ, ಅವರ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಜಾಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ (Shahi Imam Syed Ahmed Bukhari) ಮನವಿ ಮಾಡಿದ್ದಾರೆ.

    ಹರಿಯಾಣದ ನುಹ್‌ ಜಿಲ್ಲೆಯ (Nuh Communal Violence) ಗಲಭೆಗಳು ಹಾಗೂ ಚಲಿಸುತ್ತಿದ್ದ ರೈಲಿಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಗಳನ್ನ ಉಲ್ಲೇಖಿಸಿ ಜಾಮಾ ಮಸೀದಿಯಲ್ಲಿ ನಡೆದ ಧರ್ಮೋಪದೇಶದಲ್ಲಿ ಮಾತನಾಡಿದ್ದಾರೆ. ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೊಂದು ಭಯಾನಕ ಗ್ಯಾಂಗ್ ರೇಪ್ – ಕರಾಳ ದಿನದ ಕಹಿ ಅನುಭವ ಬಿಚ್ಚಿಟ್ಟ ಸಂತ್ರಸ್ತೆ

    ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ದ್ವೇಷದ ಅಲೆಗಳು ದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತಿವೆ. ಮೋದಿ ಅವರೇ ನೀವು ಮನ್‌ ಕಿ ಬಾತ್‌ ಹೇಳುತ್ತೀರಿ, ಅದೇ ರೀತಿ ಮುಸ್ಲಿಮರ ಮನ್‌ ಕಿ ಬಾತ್‌ ಅನ್ನೂ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ

    ಇತ್ತೀಚಿನ ಘಟನೆಗಳಿಂದ‌ ದೇಶದ ಮುಸ್ಲಿಮರು ತೊಂದರೆಗೀಡಾಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ದ್ವೇಷ ಮತ್ತು ಹಿಂಸಾಚಾರ ಎದುರಿಸುವಲ್ಲಿ ಕಾನೂನು ದುರ್ಬಲವಾಗಿದೆ ಎಂದು ಸಾಬೀತುಪಡಿಸುತ್ತಿದೆ. ಒಂದು ಧರ್ಮದ ಜನರಿಗೆ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದೆ. ಮುಸ್ಲಿಮರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ ಬಹಿಷ್ಕರಿಸಲಾಗುತ್ತಿದೆ. ವಿಶ್ವದಾದ್ಯಂತ 57 ಮುಸ್ಲಿಂ ರಾಷ್ಟ್ರಗಳಿದ್ದು, ಅಲ್ಲಿ ಮುಸ್ಲಿಮೇತರರೂ ವಾಸಿಸುತ್ತಿದ್ದಾರೆ. ಆದ್ರೆ ಅವರಿಗೆ, ಅವರ ಜೀವನೋಪಾಯಕ್ಕೆ ಯಾವುದೇ ಬೆದರಿಕೆ ಒಡ್ಡುತ್ತಿಲ್ಲ ಎಂದು ಹೇಳಿದ್ದಾರೆ.

    ಭಾರತದಲ್ಲಿ ಮಾತ್ರ ಹಿಂದೂ-ಮುಸ್ಲಿಮರ ನಡುವಿನ ಸಂಬಂಧ ಅಪಾಯದಲ್ಲಿದೆ. ಭಾರತದಲ್ಲಿ ಮಾತ್ರ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ? ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಸಹ ಹೋರಾಡಿದ್ದಾರೆ. ಈಗ ಯಾಕೆ ಮತ್ತೆ ಹಿಂದೂ ಮುಸ್ಲಿಮರನ್ನು ಪ್ರತ್ಯೇಕಿಸುತ್ತಿದ್ದಾರೆ? ಪರಿಸ್ಥಿತಿಯನ್ನು ನಿಯಂತ್ರಿಸುವುದು ಸರ್ಕಾರದ ಕೈಯಲ್ಲಿದೆ ಎಂದು ಅಹ್ಮದ್ ಬುಖಾರಿ ಹೇಳಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ 830 ಕೋಟಿ ಖರ್ಚಾಗಿದೆ ಎಂದ ಆಪ್ ಮುಖ್ಯಸ್ಥನ ವಿರುದ್ಧ ಕೇಸ್

    ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ 830 ಕೋಟಿ ಖರ್ಚಾಗಿದೆ ಎಂದ ಆಪ್ ಮುಖ್ಯಸ್ಥನ ವಿರುದ್ಧ ಕೇಸ್

    ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ‘ಮನ್ ಕಿ ಬಾತ್’ (Mann Ki Baat) ರೇಡಿಯೋ ಕಾರ್ಯಕ್ರಮದ 100 ಸಂಚಿಕೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ 830 ಕೋಟಿ ರೂ. ಹಣವನ್ನು ಖರ್ಚು ಮಾಡಿದೆ ಎಂದು ಟ್ವೀಟ್ ಮಾಡಿದ್ದ ಆಮ್ ಆದ್ಮಿ ಪಕ್ಷದ (AAP) ಗುಜರಾತ್ ಅಧ್ಯಕ್ಷ ಇಸುದನ್ ಗಧ್ವಿ (Isudan Gadhvi) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಇಸುದನ್ ಗಧ್ವಿ ಅವರು ಯಾವುದೇ ಆಧಾರಗಳಿಲ್ಲದೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಈ ವಿಚಾರ ತಿಳಿದು ಬಂದ ತಕ್ಷಣವೇ ಶನಿವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏಪ್ರಿಲ್ 26 ರಂದು ಟ್ವೀಟ್ ಮಾಡಿದ್ದ ಗಧ್ವಿ, ಮನ್ ಕಿ ಬಾತ್‌ನ 1 ಸಂಚಿಕೆಗೆ 8.3 ಕೋಟಿ ರೂ. ವೆಚ್ಚವಾಗುತ್ತದೆ. ಹಾಗಾದರೆ ಕೇಂದ್ರ ಇದುವರೆಗೆ ಮನ್ ಕಿ ಬಾತ್‌ನ 100 ಸಂಚಿಕೆಗಳಿಗೆ 830 ಕೋಟಿ ರೂ. ಖರ್ಚು ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ನಾಲಾಯಕ್‌ ಹೇಳಿಕೆ – ಪ್ರಿಯಾಂಕ್‌ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

    ಈ ಟ್ವೀಟ್ ಗಮನಕ್ಕೆ ಬರುತ್ತಿದ್ದಂತೆ ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಏಪ್ರಿಲ್ 29ರಂದು ಗಧ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಸೈಬರ್ ಕ್ರೈಂ ಸಹಾಯಕ ಪೊಲೀಸ್ ಆಯುಕ್ತ ಜೆಎಂ ಯಾದವ್ ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 100ನೇ ಸಂಚಿಕೆ ಭಾನುವಾರ ಪ್ರಸಾರವಾಯಿತು. ಇದೀಗ ಗಧ್ವಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿರುವುದಕ್ಕೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಇಂತಹ ಸುಳ್ಳು ಎಫ್‌ಐಆರ್‌ಗಳ ಮೂಲಕ ಆಡಳಿತಾರೂಢ ಬಿಜೆಪಿ ತನ್ನ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಹಣವನ್ನ ಜನರಿಗೆ ವಾಪಸ್‌ ಕೊಡ್ತೀವಿ – ರಾಗಾ

  • ‘ಮನ್ ಕಿ ಬಾತ್’ ದೇಶದ ಭಾವನೆ ಅಭಿವ್ಯಕ್ತಪಡಿಸುವ ವೇದಿಕೆಯಾಗಿದೆ: ಬೊಮ್ಮಾಯಿ

    ‘ಮನ್ ಕಿ ಬಾತ್’ ದೇಶದ ಭಾವನೆ ಅಭಿವ್ಯಕ್ತಪಡಿಸುವ ವೇದಿಕೆಯಾಗಿದೆ: ಬೊಮ್ಮಾಯಿ

    ಹಾವೇರಿ: ‘ಮನ್ ಕಿ ಬಾತ್’ (Mann Ki Baat) ದೇಶದ ಭಾವನೆ ಅಭಿವ್ಯಕ್ತಪಡಿಸುವ ವೇದಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮೆಚ್ಚುಗೆ ವ್ಯಕ್ತಪಡಿಸಿದರು.

    ಶಿಗ್ಗಾಂವಿಯಲ್ಲಿ (Shiggavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರತೀ ಮನೆಯಲ್ಲಿ ‘ಮನ್ ಕಿ ಬಾತ್’ ಕೇಳುತ್ತಾರೆ. ‘ಮನ್ ಕಿ ಬಾತ್’ ದೇಶದ ಜನರ ಭಾವನೆಯಾಗಿದೆ. ಇದು ಜನರ ಸಮಸ್ಯೆ ಕೇಳಿ ಪರಿಹಾರ ಸೂಚಿಸುವ ವೇದಿಕೆಯಾಗಿದೆ. ಹಳ್ಳಿಗಳಲ್ಲಿ, ಸಣ್ಣ ಸಣ್ಣ ಉದ್ಯೋಗ ಮಾಡುವವರನ್ನು ದೇಶಕ್ಕೆ ಪರಿಚಯ ಮಾಡುವ ಕೆಲಸವಾಗುತ್ತಿದೆ. ಇದರಿಂದ ಅನೇಕರು ತಮ್ಮ ಉದ್ಯೋಗ ಬದಲಾಯಿಸಿ ಸ್ವಯಂ ಉದ್ಯೋಗ ಕಂಡು ಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಸ್ಪಷ್ಟವಾಗಿ ಕನ್ನಡ ಮಾತಾಡಿ ಬೇಷ್ ಎನಿಸಿಕೊಂಡ ಯೋಗಿ ಆದಿತ್ಯನಾಥ್

    ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇಷ್ಟು ದೊಡ್ಡ ವೇದಿಕೆ ಸಿಕ್ಕಾಗ ಇಡೀ ದೇಶಕ್ಕೆ ಸ್ಫೂರ್ತಿಯಾಗುತ್ತದೆ. ಸರ್ವರಿಗೂ ಸರ್ವ ವ್ಯಾಪಿಯಾಗಿ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆ ಇದಾಗಿದೆ. ಮೋದಿಯವರು (Narendra Modi) ಮಹಾನ್ ನಾಯಕರಾಗಿದ್ದಾರೆ. ಅವರಿಗೆ 100ನೇ ‘ಮನ್ ಕಿ ಬಾತ್’ ಸಂಚಿಕೆ ನಡೆಸಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಮೋದಿ ಸಿದ್ಧರಿದ್ರೆ ಅವರೊಂದಿಗೆ ಓಟದ ಸ್ಪರ್ಧೆಗೆ ನಾನು ರೆಡಿ: ಸಿದ್ದರಾಮಯ್ಯ

  • ಮೋದಿ ʻಮನ್‌ ಕಿ ಬಾತ್‌ʼ100ನೇ ಸಂಚಿಕೆ ಇಂದು ಪ್ರಸಾರ

    ಮೋದಿ ʻಮನ್‌ ಕಿ ಬಾತ್‌ʼ100ನೇ ಸಂಚಿಕೆ ಇಂದು ಪ್ರಸಾರ

    ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನೂ 10 ದಿನಗಳು ಬಾಕಿಯಿರುವಾಗಲೇ ಪ್ರಧಾನಿ ಮೋದಿ (Narendra Modi) ಅವರ ʻಮನ್‌ ಕಿ ಬಾತ್‌ʼ (100th Mann Ki Baat) ಕಾರ್ಯಕ್ರಮ 100ನೇ ಸಂಚಿಕೆ ಪೂರೈಸುತ್ತಿದೆ. ಸದ್ಯ ಶನಿವಾರ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿ ರೋಡ್‌ ಶೋ ನಡೆಸಿರುವ ಮೋದಿ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ (ಏ.30) ಕಾರ್ಯಕ್ರಮ ಮುಗಿಸಿ ದೆಹಲಿಗೆ ಮರಳಲಿದ್ದಾರೆ.

    ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಬಳಿಕ ಅದೇ ವರ್ಷದ ಅಕ್ಟೋಬರ್‌ನಲ್ಲಿ ಮನ್‌ ಕಿ ಬಾತ್‌ ಕಾರ್ಯಕ್ರಮ ಆರಂಭಿಸಿದರು. ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸದೇ ಇರುವ ಇದೊಂದು ಆತ್ಮೀಯ ಸಂವಹನವೆನಿಸಿದೆ. ಪ್ರತಿ ತಿಂಗಳ ಕೊನೇ ಭಾನುವಾರ ಭಾಷಣ ಪ್ರಸಾರವಾಗುತ್ತದೆ. ಒಂದೇ ಒಂದು ತಿಂಗಳೂ ಕಾರ್ಯಕ್ರಮ ಪ್ರಸಾರ ನಿಂತಿಲ್ಲ. ಇದಕ್ಕೆ ಸುಮಾರು 130 ಕೋಟಿ ಶ್ರೋತೃಗಳಿರುವುದು ಹೆಮ್ಮೆಯ ವಿಚಾರ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ

    ಪ್ರಧಾನಿ ಮೋದಿ ಅವರು ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆಗಳು, ಸಿಹಿ – ಕಹಿ ಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ಬಾಲಿವುಡ್‌ ತಾರೆಯರಿಂದ ಮೆಚ್ಚಿಗೆ:
    ‘ಒಬ್ಬ ನಾಯಕ ಪರಿಣಾಮಕಾರಿ ಸಂವಹನದೊಂದಿಗೆ ದೇಶವನ್ನು ಹೇಗೆ ಮುನ್ನಡೆಸುತ್ತಾರೆ, ಅವರು ದೇಶ- ವಿದೇಶಗಳಲ್ಲಿ ನೋಡುವುದನ್ನು ಜನರಿಗೆ ಹೇಗೆ ಹೇಳುತ್ತಾರೆ, ನಾಯಕನಾದವನು ಭವಿಷ್ಯವನ್ನು ಹೇಗೆ ನೋಡುತ್ತಾನೆ ಮತ್ತು ಜನರಿಂದ ಯಾವ ರೀತಿಯಲ್ಲಿ ಬೆಂಬಲ ಬಯಸುತ್ತಾನೆ ಎಂಬುದಕ್ಕೆ ಮನ್‌ ಕಿ ಬಾತ್‌ ಉತ್ತಮ ಉದಾಹರಣೆಯಾಗಿದೆ’ ಎಂದು ಆಮಿರ್‌ ಖಾನ್‌ ಅಭಿಪ್ರಾಯಪಟ್ಟಿದ್ದರು. ಈ ಬೆನ್ನಲ್ಲೇ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಶ್ಲಾಘಿಸಿದ್ದರು.

    100 ಗಣ್ಯರಿಗೆ ಆಹ್ವಾನ: ಮೋದಿ ಅವರು ಇದುವರೆಗಿನ ತಮ್ಮ ‘ಮನ್‌ ಕಿ ಬಾತ್‌’ ಆಕಾಶವಾಣಿ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಗಣ್ಯರ ಹೆಸರನ್ನು ನಾನಾ ಕಾರಣಗಳಿಗೆ ಪ್ರಸ್ತಾಪಿಸಿದ್ದು, ಅದರಲ್ಲಿ 100 ಗಣ್ಯರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು. ಭಾನುವಾರ 100ನೇ ಸಂಚಿಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಕಾರ್ಯಕ್ರಮ ಕೇಳಲು ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

  • ಪ್ರಧಾನಿ ಮೋದಿ ಕನಸಿನ ‘ಮನ್ ಕಿ ಬಾತ್’ ಗ್ರೇಟ್ ಅಂದ ಆಮೀರ್ ಖಾನ್

    ಪ್ರಧಾನಿ ಮೋದಿ ಕನಸಿನ ‘ಮನ್ ಕಿ ಬಾತ್’ ಗ್ರೇಟ್ ಅಂದ ಆಮೀರ್ ಖಾನ್

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ಮನ್ ಕಿ ಬಾತ್’  (Mann Ki Baat) ನೂರರ ಕಂತು ತಲುಪಿದೆ. ಇದೇ ಏಪ್ರಿಲ್ 30 ರಂದು ನೂರನೇ ಸಂಚಿಕೆ ಪ್ರಸಾರವಾಗಲಿದ್ದು, ಅದಕ್ಕೂ ಮುನ್ನ ದೇಶದ ಗಣ್ಯರನ್ನು ಒಟ್ಟಾಗಿಸಿ ಸ್ಮರಣೀಯ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಈ ಸಮಾವೇಶದಲ್ಲಿ ಬಾಲಿವುಡ್ ನಟರಾದ ಆಮೀರ್ ಖಾನ್ (Aamir Khan), ರವೀನಾ ಟಂಡನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ಸಮಾವೇಶದಲ್ಲಿ ಮಾತನಾಡಿದ ಆಮೀರ್ ಖಾನ್, ಮನ್ ಕಿ ಬಾತ್ ಕಾರ್ಯಕ್ರಮವನ್ನು ಹಾಡಿಹೊಗಳಿದರು. ‘ದೇಶದ ಜನರೊಂದಿಗೆ ದೇಶದ ನಾಯಕ ಸಂವಹನ ಮಾಡುವ ಶಕ್ತಿಯುತ ವೇದಿಕೆ ಇದು. ಅನೇಕ ವಿಷಯಗಳನ್ನು ಮೋದಿ ಅವರು ಇದೇ ವೇದಿಕೆಯಲ್ಲೇ ಚರ್ಚೆ ಮಾಡಿದ್ದಾರೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಲವಾರು ವಿಚಾರಗಳನ್ನು ಜಗತ್ತಿಗೆ ತಿಳಿಸಿದ್ದಾರೆ’ ಎಂದಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಮನ್ ಕಿ ಬಾತ್ ನೂರನೇ ಸಂಚಿಕೆ ವಿಶೇಷತೆಯಿಂದ ಕೂಡಿರಲಿದ್ದು, ಸ್ಮರಣೀಯ ಕಾರ್ಯಕ್ರಮವಾಗಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎರಡು ಪುಸ್ತಕಗಳ ಬಿಡುಗಡೆ, ಸ್ಟಾಂಪ್ ಮತ್ತು ಕಾಯಿನ್ ಕೂಡ ಬಿಡುಗಡೆಗೊಳಿಸಲು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಿದ್ಧಮಾಡಿಕೊಂಡಿದೆ.

    ಹಾಗಾಗಿಯೇ ಪೂರ್ವಭಾವಿಯಾಗಿ ನಡೆದ ಚರ್ಚೆಯಲ್ಲಿ ಆಮೀರ್ ಖಾನ್ ಹಲವು ಸಲಹೆಗಳನ್ನೂ ನೀಡಿದ್ದಾರಂತೆ. ಮನ್ ಕಿ ಬಾತ್ ಕುರಿತಾಗಿ ವಿಶೇಷವಾಗಿ ಅವರು ಮಾತನಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

  • ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್‌ ಕಿ ಬಾತ್‌ನಲ್ಲಿ ಮೋದಿ ಕರೆ

    ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್‌ ಕಿ ಬಾತ್‌ನಲ್ಲಿ ಮೋದಿ ಕರೆ

    ನವದೆಹಲಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ (Organ Donation) 8ರಿಂದ 9 ಮಂದಿಗೆ ಜೀವದಾನ ಮಾಡಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜನತೆಗೆ ಅಂಗಾಂಗ ದಾನದ ಮಹತ್ವವನ್ನು ತಿಳಿಸಿದ್ದಾರೆ. ಅಂಗಾಂಗ ದಾನ ಮಾಡುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.

    ಮನ್‌ ಕಿ ಬಾತ್‌ (Mann Ki Baat) ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತರರಿಗೆ ಹೊಸ ಜೀವನ ನೀಡುವ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಲು ಸರ್ಕಾರವು ಹಲವಾರು ನಿಯಮಗಳನ್ನು ಸಡಿಲಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನರ್ಹಗೊಂಡ ಸಂಸದ – ಅಧಿಕೃತ ಟ್ವಿಟ್ಟರ್ ಖಾತೆಯ ಬಯೋದಲ್ಲಿ ಬರೆದುಕೊಂಡ ರಾಹುಲ್ ಗಾಂಧಿ

    ಇಂದು ನಾವು ಆಜಾದಿ ಕಾ ಅಮೃತಕಲ್ ಅನ್ನು ಆಚರಿಸುತ್ತಿದ್ದೇವೆ. ಜೊತೆಗೆ ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಿದ್ದೇವೆ. ಈಗ ‘ಮನ್‌ ಕಿ ಬಾತ್‌’ 99ನೇ ಸಂಚಿಕೆ ಮುಗಿಸಿದ್ದು, 100ನೇ ಸಂಚಿಕೆಗೆ ನಿಮ್ಮೆಲ್ಲರ ಸಲಹೆಗಳನ್ನು ಪಡೆಯಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮ ಸಲಹೆಗಳು 100 ನೇ ಸಂಚಿಕೆಯನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಹೇಳಿದ್ದಾರೆ.

    ಅಂಗಾಂಗ ದಾನ ಮಹತ್ವ ಕುರಿತು ಮಾತನಾಡಿದ ಮೋದಿ, ಒಬ್ಬ ವ್ಯಕ್ತಿಯು ಮರಣದ ನಂತರ ತನ್ನ ಅಂಗಗಳನ್ನು ದಾನ ಮಾಡಿದಾಗ, ಅದು 8ರಿಂದ 9 ಜನರಿಗೆ ಹೊಸ ಜೀವನ ನೀಡಲು ಸಾಧ್ಯವಾಗುತ್ತದೆ. ಅಂಗಾಂಗ ದಾನವನ್ನು ಉತ್ತೇಜಿಸಲು, ಇಡೀ ದೇಶದಲ್ಲಿ ಇದೇ ರೀತಿಯ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವುದು ನನಗೆ ತುಂಬಾ ತೃಪ್ತಿ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ವೃದ್ಧ ರೋಗಿಯನ್ನು ಎಳೆದೊಯ್ದರು!

    ಅಂಗಾಂಗ ದಾನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಅದಕ್ಕೆ ಸಂಬಂಧಿಸಿದ ಕನಿಷ್ಠ ವಯೋಮಿತಿ ಮತ್ತು ವಾಸಸ್ಥಳ ನಿಯಮವನ್ನು ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ.

    ವ್ಯಕ್ತಿಯು ಯಾವುದೇ ರಾಜ್ಯಕ್ಕೆ ಹೋಗಿ ಅಂಗಾಂಗ ದಾನಕ್ಕಾಗಿ ನೋಂದಾಯಿಸಿಕೊಳ್ಳಬಹುದು. ಅಂಗಾಂಗ ದಾನಕ್ಕೆ ಕನಿಷ್ಠ ವಯಸ್ಸು 65 ವರ್ಷ ಎಂಬ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದೆ. ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕೆಂದು ನಾನು ಕೋರುತ್ತೇನೆ. ನಿಮ್ಮ ಒಂದು ನಿರ್ಧಾರವು ಅನೇಕ ಜೀವಗಳನ್ನು ಉಳಿಸಬಹುದು. ಅನೇಕ ಜೀವಗಳಿಗೆ ಜೀವದಾನ ಮಾಡಬಹುದು ಎಂದು ಕರೆ ನೀಡಿದ್ದಾರೆ.

  • ಮನ್ ಕಿ ಬಾತ್‌ನಲ್ಲಿ ರಾಜ್ಯದ ಲಾಲಿಹಾಡು ಪ್ರಸಾರ – ʼಮಲಗು ಕಂದʼ ಹಾಡಿಗೆ ಪ್ರಧಾನಿ ಮೋದಿ ಪ್ರಶಂಸೆ

    ಮನ್ ಕಿ ಬಾತ್‌ನಲ್ಲಿ ರಾಜ್ಯದ ಲಾಲಿಹಾಡು ಪ್ರಸಾರ – ʼಮಲಗು ಕಂದʼ ಹಾಡಿಗೆ ಪ್ರಧಾನಿ ಮೋದಿ ಪ್ರಶಂಸೆ

    ನವದೆಹಲಿ: ಮನ್ ಕಿ ಬಾತ್.. (Mann Ki Baat) ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿ ತಿಂಗಳು ಆಕಾಶವಾಣಿಯಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಸರ್ಕಾರದ ಆಶಯಗಳನ್ನು ತಿಳಿಸುತ್ತಲೇ ದೇಶದ ವಿವಿಧೆಡೆ ಎಲೆ ಮರೆಕಾಯಿಯಂತೆ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವವರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬೆಳಕಿಗೆ ಬಾರದಂತೆ ಗಣನೀಯ ಸಾಧನೆ ಮಾಡುತ್ತಿರುವವರ ವಿವರಗಳನ್ನು ತಿಳಿಸಿ ಬೆನ್ನುತಟ್ಟುವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ಈ ಬಾರಿ ಗಡಿ ಜಿಲ್ಲೆ ಚಾಮರಾಜನಗರದ (Chamarajanagar) ಬಾಳಗುಣಸೆ ಮಂಜುನಾಥ್ ಎಂಬ ಕವಿ ಬರೆದ ಜೋಗುಳ ಗೀತೆಯನ್ನು ಪ್ರಸ್ತಾಪಿಸಿ ಪ್ರಶಂಸಿಸಿದ್ದಾರೆ.

    ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ ಪೆನ್ ಎ ಲೋರಿ ಎಂಬ ಜೋಗುಳ ಗೀತೆ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಎಂಬ ಕವಿ ಪ್ರಥಮ ಸ್ಥಾನ ಪಡೆದಿದ್ದಾರೆ. “ಮಲಗು ಕಂದ, ಮಲಗು ಕೂಸೆ” ಎಂಬ ಈ ಲಾಲಿಹಾಡಿಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಎಚ್ಚರಿಕೆ ಬಳಿಕವೂ ಸಿಂಧೂರಿ ವಿರುದ್ಧ ಗುಡುಗಿದ ರೂಪಾ

    ಬಿ.ಎನ್.ಮಂಜುನಾಥ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಡಂಚಿನ ಬಾಳೆಗುಣಸೆ ಎಂಬ ಗ್ರಾಮದವರು. ಎಲ್ಐಸಿ ಪ್ರತಿನಿಧಿ ಆಗಿರುವ ಮಂಜುನಾಥ್ ‌ಪ್ರವೃತ್ತಿಯಲ್ಲಿ ಕವಿ. ಕೇಂದ್ರ ಸಂಸ್ಕೃತಿ ಸಚಿವಾಲಯ ಜೋಗುಳ ಗೀತೆ ರಚಿಸುವ ಸ್ಪರ್ಧೆಗೆ ಆಹ್ವಾನಿಸಿದಾಗ ಪತ್ನಿ ಹಾಗೂ ಮಗನ ಒತ್ತಾಯಕ್ಕೆ ಕಟ್ಟುಬಿದ್ದ ಮಂಜುನಾಥ್, ಮಲಗು ಕಂದ, ಮಲಗು ಕೂಸೆ ಎಂಬ ಜೋಗುಳ ಗೀತೆ ರಚಿಸಿ ಕಳುಹಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಈ ಜೋಗುಳ ಗೀತೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ ಮಂಜುನಾಥ್ ಅವರನ್ನು ಪ್ರಶಂಸಿಸಿದ್ದಾರೆ. ಸ್ವತಃ ಪ್ರಧಾನಿ ಹೊಗಳಿಕೆಯ ಬಗ್ಗೆ ಹರ್ಷಗೊಂಡಿರುವ ಕವಿ ಮಂಜುನಾಥ್, ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಖಂಡಿತವಾಗಿಯೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ತಮ್ಮ ಮನ್‌ ಕಿ‌ ಬಾತ್‌ನಲ್ಲಿ‌ ಕವಿ ಮಂಜುನಾಥ್ ಅವರ ಜೋಗುಳದ ಗೀತೆಯನ್ನು‌ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಂತೆ ಮಂಜುನಾಥ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ವತಃ ಶಾಸಕ ಎನ್.ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರಗ ಸುರಾನ ಕವಿ ಮಂಜುನಾಥ್ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ

    ಕವಿ ಬಾಳಗುಣಸೆ ಮಂಜುನಾಥ್ ಅವರು ಚಿತ್ತ ಚಿತ್ತಾರದ ಹೂವು ಎಂಬ ಕವನ ಸಂಕಲನ ಹಾಗೂ ಶಾಪ ಎಂಬ ನಾಟಕ ಪುಸ್ತಕಗಳನ್ನು ಹೊರತಂದಿದ್ದಾರೆ. ಇನ್ನೆರಡು ಕೃತಿಗಳು ಅಚ್ಚಿನ ಹಂತದಲ್ಲಿವೆ. ಈ ನಡುವೆ ಪ್ರಧಾನಿ ಮೋದಿ ಅವರ ಪ್ರಶಂಸೆಯಿಂದ ಮಂಜುನಾಥ್ ಅವರ ಕುಟುಂಬ ಸಂತಸದ ಹೊನಲಿನಲ್ಲಿ ತೇಲುತ್ತಿದೆ.