Tag: Manmul

  • ಮನ್‍ಮುಲ್ ಹಗರಣ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳ ಅಮಾನತು

    ಮನ್‍ಮುಲ್ ಹಗರಣ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳ ಅಮಾನತು

    ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಮೂಲಕ ಅಮಾನತುಗೊಂಡ ಅಧಿಕಾರಿಗಳ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.

    ಈ ಪ್ರಕರಣ ಸಂಬಂಧಿಸಿದಂತೆ ಮನ್‍ಮುಲ್‍ನಲ್ಲಿ ಮೊದಲ ಹಂತದಲ್ಲಿ ನಾಲ್ವರು ಅಧಿಕಾರಿಗಳು, ಎರಡನೇ ಹಂತದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ನಾಟಕ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಹಾಗೂ ಮನ್‍ಮುಲ್‍ನ ಉಪ ವ್ಯವಸ್ಥಾಪಕಿ ಶೈಲಜಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಕರ್ನಾಟ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಅವರು ಮನ್‍ಮುಲ್‍ಗೆ ಟ್ಯಾಂಕರ್‍ ಗಳ ಮೂಲಕ ಬರುತ್ತಿದ್ದ ಹಾಲಿನ ಗುಣಮಟ್ಟವನ್ನು ಪರಿಶೀಲನೆ ಮಾಡದ ಕಾರಣ ಕೆಎಂಎಫ್ ಎಂಡಿ ಸತೀಶ್ ಅವರು ಅಮಾನತು ಮಾಡಿದ್ದಾರೆ. ಮನ್‍ಮುಲ್‍ನ ಸಂಸ್ಕರಣಾ ವಿಭಾಗದ ಶೈಲಜಾ ಅವರು ಕರ್ತವ್ಯ ಲೋಪವೆಸಗಿದ ಕಾರಣ ಅವರು ಕೂಡ ಅಮಾನತಿಗೆ ಒಳಗಾಗಿದ್ದಾರೆ.ಇದನ್ನೂ ಓದಿ:  ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

  • ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

    ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳಾದ್ರು ಇನ್ನೂ ಏಕೆ ಯಾರನ್ನು ಬಂಧಿಸಿಲ್ಲ? ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮನ್‍ಮುಲ್‍ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣ ಸಂಬಂಧ ಇಂದು ಮನ್‍ಮುಲ್ ಡೈರಿಗೆ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಪ್ರಕರಣದ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿ ನಿಂತಿದ್ದ ಟ್ಯಾಂಕರನ್ನು ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಮಂಡ್ಯ ಎಎಸ್‍ಪಿ ಧನಂಜಯ್ ಅವರಿಗೆ ಸೋಮಶೇಖರ್ ಅವರು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊರೊನಾ ತೊಲಗಲು ಮಾರಮ್ಮ ದೇವಿಗೆ ಕುರಿ, ಕೋಳಿ ಬಲಿ

    ಪ್ರಕರಣ ಬೆಳಕಿಗೆ ಬಂದು 10 ದಿನ ಕಳೆದದೂ ಸಹ ಇನ್ನೂ ಯಾಕೆ ಒಬ್ಬರನ್ನೂ ನೀವು ಬಂಧಿಸಿಲ್ಲ? ಇಷ್ಟೊತ್ತಿಗೆ ಎಲ್ಲರನ್ನೂ ಬಂಧಿಸಬೇಕಿತ್ತು ಎಂದು ಸಚಿವರು ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಎಎಸ್‍ಪಿ ಇಲ್ಲ ಸರ್ ಒಬ್ಬ ಡ್ರೈವರನ್ನು ಬಂಧಿಸಿದ್ದೇವೆ ಎಂದರು. ಡ್ರೈವರನ್ನು ಅರೆಸ್ಟ್ ಮಾಡೋಕೆ ನೀವೋಬ್ಬರೆ ಆಗಬೇಕಾ? ಬೇರೆಯವರನ್ನು ಬಂಧನ ಮಾಡಲು ನಿಮ್ಮಿಂದ ಆಗಿಲ್ವಾ ಎಂದು ಸೋಮಶೇಖರ್ ಗರಂ ಆದರು. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಹಾಲಿನ ಟ್ಯಾಂಕರ್ ವಿನ್ಯಾಸವನ್ನು ಎಲ್ಲಿ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ ಅನ್ನೋದಾದರೂ ತಿಳಿದುಕೊಂಡಿದ್ದೀರಾ ಎಂದು ಮತ್ತೆ ಸಚಿವರು, ಎಎಸ್‍ಪಿಯನ್ನು ಪ್ರಶ್ನೆ ಮಾಡಿದರು. ಇಲ್ಲ ಸರ್ ಇನ್ನೂ ಸಹ ಅದು ಎಲ್ಲಿ ಮಾಡಿಸಿದ್ದಾರೆ ಎನ್ನೋದೆ ಪತ್ತೆಯಾಗಿಲ್ಲ ಎಂದು ಧನಂಜಯ್ ಹೇಳಿದರು. ಈ ವೇಳೆ ಸೋಮಶೇಖರ್ ಈ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಚುರುಕುಗೊಳ್ಳಿಸಬೇಕೆಂದು ಎಚ್ಚರಿಕೆ ನೀಡಿದರು.

  • ನೀರು ಮಿಶ್ರಿತ ಹಾಲು ಕೇಸ್  – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

    ಮಂಡ್ಯ: ಮನ್‍ಮುಲ್‍ಗೆ ಪೂರೈಕೆ ಆಗುತ್ತಿದ್ದ ನೀರು ಮಿಶ್ರಿತ ಹಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‍ಮುಲ್‍ನ ಎಂಡಿಯನ್ನು ವರ್ಗಾವಣೆ ಮಾಡಿ ಏಳು ಮಂದಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

    ಮಂಡ್ಯದ ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲನ್ನು ಹಲವು ತಿಂಗಳಿನಿಂದ ಸರಬರಾಜು ಆಗುತ್ತಿತ್ತು. ಈ ಬಗ್ಗೆ ಮನ್‍ಮುಲ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಹಲವು ದಿನಳ ತನಿಖೆ ಬಳಿಕ ಈ ಜಾಲವನ್ನು ಭೇದಿಸಿ ಪೊಲೀಸರಿಗೂ ದೂರು ನೀಡಿದ್ದರು. ಈ ನಡುವೆ ಕೆಎಂಎಫ್ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದರು. ಇದನ್ನೂ ಓದಿ: ನೀನು ಎಲ್ಲಿದ್ದರೂ ನಿನ್ನ ನಗು ಜೀವಂತ ಚಿರು ಮಗನೆ: ಅರ್ಜುನ್ ಸರ್ಜಾ ಭಾವುಕ

    ಮನ್‍ಮುಲ್‍ನಲ್ಲಿ ನಡೆದಿರುವ ಈ ಹಗರಣಕ್ಕೆ ಅಧಿಕಾರಿಗಳೇ ಕಾರಣ ಎಂದು ಕೆಎಂಎಫ್ ವರದಿ ನೀಡಿ, ಏಳು ಮಂದಿಯನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ ಮನ್‍ಮುಲ್‍ನ ಮದ್ದೂರಿನ ಉಪಕಚೇರಿ ವ್ಯವಸ್ಥಾಪಕ ಮರಿರಾಚಯ್ಯ, ಭರತ್‍ರಾಜ್, ರಾಮಕೃಷ್ಣಯ್ಯ, ವಿಸ್ತಾರಣಾಧಿಕಾರಿಗಳಾದ ಮಧುಕುಮಾರ್, ರಮೇಶ್, ಟ್ರಾನ್ಸ್ ಪೋರ್ಟ್ ವಿಭಾಗದ ಡಾ.ವೆಂಕಟೇಶ್ ಅವರುಗಳನ್ನು ಅಮಾನತು ಮಾಡಲಾಗಿದೆ.

    ಮನ್‍ಮುಲ್‍ನ ಎಂಡಿಯನ್ನು ಸಹ ವರ್ಗಾವಣೆ ಮಾಡಿ ಮೈಸೂರಿನ ಮೈಮುಲ್‍ನ ಎಂಡಿ ಆಗಿದ್ದ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.

  • ಮಗನ ಹುಟ್ಟು ಹಬ್ಬದಂದು ಮನ್‍ಮುಲ್ ನಿರ್ದೇಶಕರಿಂದ ಶಕ್ತಿ ಪ್ರದರ್ಶನ – ಮದ್ದೂರಿನಲ್ಲೂ ಅರಳುತ್ತಾ ಕಮಲ?

    ಮಗನ ಹುಟ್ಟು ಹಬ್ಬದಂದು ಮನ್‍ಮುಲ್ ನಿರ್ದೇಶಕರಿಂದ ಶಕ್ತಿ ಪ್ರದರ್ಶನ – ಮದ್ದೂರಿನಲ್ಲೂ ಅರಳುತ್ತಾ ಕಮಲ?

    ಮಂಡ್ಯ: ಮಗನ ಹುಟ್ಟ ಹಬ್ಬದವನ್ನು ಮಂಡ್ಯದ ಮನ್‍ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಸ್ವಾಮಿ ಅವರ ಮಗ ದಿವಂಗತ ಶ್ರೀನಿಧಿಗೌಡ ಅವರ 25 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮದ್ದೂರಿನ ತಾಲೂಕು ಕ್ರೀಡಾಂಗಣದಲ್ಲಿ ಆರೋಗ್ಯ ಮೇಳವನ್ನು ಆಯೋಜನೆ ಮಾಡುವ ಮೂಲಕ ತಮ್ಮ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ಸ್ವಾಮಿ ಅವರ ಪುತ್ರ ಚಿಕ್ಕವಯಸ್ಸಿನಲ್ಲೇ ಮೃತ ಪಟ್ಟಿದ್ದು, ಅವರ ಹುಟ್ಟು ಹಬ್ಬದ ಹಿನ್ನೆಲೆ ಆರೋಗ್ಯ ಮೇಳವನ್ನು ಆಯೋಜನೆ ಮಾಡಿದ್ದರು. ಈ ಮೇಳದ ಮೂಲಕ ತನ್ನ ರಾಜಕೀಯ ಶಕ್ತಿ ಪ್ರದರ್ಶನ ಮಾಡಿ ಮದ್ದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅಕಾಂಕ್ಷಿ ನಾನು ಎಂದು ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಲು ಮುಂದಾಗಿದ್ದಾರೆ. ಈ ಆರೋಗ್ಯ ಮೇಳವನ್ನು ಡಿಸಿಎಂ ಅಶ್ವತ್ಥ್‍ನಾರಾಯಣ್ ಉದ್ಘಾಟನೆ ಮಾಡಿದ್ರು. ಮೇಳದಲ್ಲಿ ಮದ್ದೂರು ತಾಲೂಕಿನ ಸಾವಿರಾರು ಜನರು ಭಾಗವಹಿಸಿದ್ದರು.

    ಮೇಳದ ಉದ್ಘಾಟನೆ ಬಳಿಕ ಮಾತನಾಡಿದ ಕೆಆರ್ ಪೇಟೆ ಶಾಸಕ ನಾರಾಯಣಗೌಡ, ಆರು ತಿಂಗಳಿಂದ ನನ್ನ ಅನರ್ಹ ಶಾಸಕ ಎಂದು ಹೇಳುತ್ತಿದ್ದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಯಡಿಯೂರಪ್ಪ, ಅಶ್ವತ್ಥ ನಾರಾಯಣ್ ಹಾಗೂ ವಿಜಯೇಂದ್ರ ಅವರ ಆಶೀರ್ವಾದಿಂದ ನಾನು ಗೆದ್ದಿದ್ದೇನೆ. ಶೀಘ್ರದಲ್ಲೇ ರಾಜ್ಯ ಸರ್ಕಾರ ನನ್ನ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ಮಾಡಲಿದೆ. ಆ ಮೂಲಕ ಕೆಆರ್ ಪೇಟೆ ಮಾತ್ರವಲ್ಲ, ಇಡೀ ಮಂಡ್ಯ ಜಿಲ್ಲೆಯನ್ನು ಯಾರು ಅಭಿವೃದ್ಧಿ ಮಾಡದ ರೀತಿ ನಾನು ಮಾಡುತ್ತೇನೆ ಎನ್ನುವ ಮೂಲಕ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು. ಮುಂದುವರಿದು ಮಾತಾನಾಡಿದ ನಾರಾಯಣಗೌಡ, ಈಗ ಕೆಆರ್ ಪೇಟೆಯಲ್ಲಿ ಕಮಲ ಅರಳಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮದ್ದೂರಿನಲ್ಲಿ ಕಮಲ ಅರಳುತ್ತದೆ. ಹೀಗೆ ಜಿಲ್ಲೆಯಲ್ಲಿ ಒಂದೊಂದಾಗಿ ಬಿಜೆಪಿ ಬಾವುಟ ಹಾರಲಿದೆ ಎಂದು ಭವಿಷ್ಯ ನುಡಿದರು.

  • ಸಕ್ಕರೆ ನಾಡಿನ ರೈತರಿಗೆ ಸಿಹಿ ಸುದ್ದಿ ನೀಡಿದ ಮನ್ಮುಲ್

    ಸಕ್ಕರೆ ನಾಡಿನ ರೈತರಿಗೆ ಸಿಹಿ ಸುದ್ದಿ ನೀಡಿದ ಮನ್ಮುಲ್

    ಮಂಡ್ಯ: ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಸಕ್ಕರೆ ನಾಡಿನ ರೈತರಿಗೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ(ಮನ್ಮುಲ್) ಸಿಹಿ ಸುದ್ದಿ ನೀಡಿದೆ.

    ಮನ್ಮುಲ್ ಹೊಸ ಆಡಳಿತ ಮಂಡಳಿಯಿಂದ ಈ ನಿರ್ಧಾರ ತೆಗೆಕೊಳ್ಳಲಾಗಿದೆ. ಪ್ರತಿ ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡುವ ಮೂಲಕ ಮನ್ಮುಲ್ ರೈತರಿಗೆ ದಸರಾ ಗಿಫ್ಟ್ ನೀಡಿದೆ. ಪ್ರಸ್ತುತ ಒಂದು ಲೀಟರ್ ಹಾಲಿಗೆ 22.50 ರೂ. ನೀಡಲಾಗುತ್ತಿದೆ. ಆದರೆ ಶುಕ್ರವಾರದಿಂದ ಹೊಸ ದರ ಜಾರಿಯಾಗಲಿದ್ದು, ರೈತರಿಗೆ ಪ್ರತಿ ಲೀಟರ್ ಹಾಲಿಗೆ 25 ರೂ. ಹಣ ಕೊಟ್ಟು ಮನ್ಮುಲ್ ಹಾಲು ಖರೀದಿಸಲಿದೆ.

    ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಿರುವ ಬಗ್ಗೆ ಮನ್ಮುಲ್ ನೂತನ ಅಧ್ಯಕ್ಷ ರಾಮಚಂದ್ರು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹಾಲಿನ ದರ ಹೆಚ್ಚಳ ವಿಚಾರ ತಿಳಿದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.