Tag: Manmohan Singh

  • ಉಗ್ರ ಹಫೀಜ್‌ ಸಯೀದ್‌ ಜೊತೆ ಸಭೆ ನಡೆಸಿದ್ದಕ್ಕೆ ಸಿಂಗ್‌ ನನಗೆ ಥ್ಯಾಂಕ್ಸ್‌ ಹೇಳಿದ್ದರು: ಭಯೋತ್ಪಾದಕ ಯಾಸಿನ್ ಮಲಿಕ್

    ಉಗ್ರ ಹಫೀಜ್‌ ಸಯೀದ್‌ ಜೊತೆ ಸಭೆ ನಡೆಸಿದ್ದಕ್ಕೆ ಸಿಂಗ್‌ ನನಗೆ ಥ್ಯಾಂಕ್ಸ್‌ ಹೇಳಿದ್ದರು: ಭಯೋತ್ಪಾದಕ ಯಾಸಿನ್ ಮಲಿಕ್

    – ಭಾರತದ ಸರ್ಕಾರದ ಕೋರಿಕೆ ಮೇಲೆ ಪಾಕ್‌ನಲ್ಲಿ ಉಗ್ರರ ಜೊತೆ ಸಭೆ
    – ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಲಿಕ್‌ ಉಲ್ಲೇಖ

    ನವದೆಹಲಿ: ಲಷ್ಕರ್-ಎ-ತೈಬಾ ((LeT) ಸಂಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು (Hafiz Saeed) ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ವೈಯಕ್ತಿಕವಾಗಿ ತನಗೆ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದಕ ಯಾಸಿನ್ ಮಲಿಕ್ (Yasin Malik) ಹೇಳಿದ್ದು ಈಗ ದೇಶದಲ್ಲಿ ಬಿರುಗಾಳಿ ಎಬ್ಬಿಸಿದೆ.

    ಹೌದು. ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ತಿಹಾರ್‌ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಭಯೋತ್ಪಾದಕ ಯಾಸಿನ್ ಮಲಿಕ್ 2006 ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್ ಸಯೀದ್‌ನನ್ನು ಭೇಟಿಯಾಗಿದ್ದ.

    ಹಫೀಜ್ ಸಯೀದ್‌ ಭೇಟಿಯ ಬಳಿಕ ಮನಮೋಹನ್‌ ಸಿಂಗ್‌ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಯಾಸಿನ್ ಮಲಿಕ್ ಆಗಸ್ಟ್ 25 ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಈ ಭೇಟಿಯನ್ನು ನಾನು ನಿಗದಿ ಮಾಡಿರಲಿಲ್ಲ. ಬದಲಾಗಿ ಹಿರಿಯ ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ಉಗ್ರರ ಜೊತೆ ಸಭೆ ಮಾಡಿದ್ದೆ ಎಂದು ತಿಳಿಸಿದ್ದಾನೆ.

    ಉಗ್ರ ಯಾಸಿನ್‌ ಮಲಿಕ್‌ ಕೈ ಕುಲುಕುತ್ತಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌
    ಉಗ್ರ ಯಾಸಿನ್‌ ಮಲಿಕ್‌ ಕೈ ಕುಲುಕುತ್ತಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌

    ಅಫಿಡವಿಟ್‌ನಲ್ಲಿ ಹೇಳಿದ್ದೇನು?
    2005 ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗೂ ಮೊದಲು ಆಗಿನ ಗುಪ್ತಚರ ದಳದ (ಐಬಿ) ವಿಶೇಷ ನಿರ್ದೇಶಕ ವಿ.ಕೆ. ಜೋಶಿ ಅವರು ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು.

    ಈ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ರಾಜಕೀಯ ನಾಯಕರನ್ನು ಮಾತ್ರವಲ್ಲದೇ ಉಗ್ರ ಸಂಘಟನೆಗಳ ಜೊತೆ ಮಾತನಾಡಿ ಶಾಂತಿಗೆ ಸಹಕಾರ ನೀಡುವಂತೆ ಕೇಳಿಕೊಳ್ಳಬೇಕು ಎಂದು ಅವರು ನನ್ನ ಜೊತೆ ವಿನಂತಿ ಮಾಡಿದ್ದರು. ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಶಾಂತಿ ಪ್ರಯತ್ನದ ಭಾಗವಾಗಿ ಈ ಕೆಲಸ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ:  ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ

    ಮಾತುಕತೆಯ ವೇಳೆ ಭಯೋತ್ಪಾದಕ ನಾಯಕರ ಜೊತೆ ಮಾತುಕತೆ ನಡೆಸದ ಹೊರತು ಶಾಂತಿ ಮಾತುಕತೆ ಪೂರ್ಣವಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಸರ್ಕಾರದ ವಿನಂತಿಯ ಮೇರೆಗೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದೆ.

    ಉಗ್ರರ ಜೊತೆ ಸಭೆ ನಡೆಸಿ ನಾನು ಫೆಬ್ರವರಿ, 2006 ರಲ್ಲಿ ಭಾರತಕ್ಕೆ ಮರಳಿದೆ. ಮರಳಿದ ಬಳಿಕ ಐಬಿ ವಿಶೇಷ ನಿರ್ದೇಶಕ ವಿ ಕೆ ಜೋಶಿ ಅವರು ಮಾತುಕತೆಯ ಭಾಗವಾಗಿ ಹೋಟೆಲ್‌ನಲ್ಲಿ ನನ್ನನ್ನು ಭೇಟಿಯಾಗಿ ಪ್ರಧಾನಿಗೆ ತಕ್ಷಣ ವಿವರಿಸುವಂತೆ ವಿನಂತಿಸಿದರು. ಅಂದು ಸಂಜೆ ನಾನು ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಯಾದೆ.

    ಈ ಸಭೆಯಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ನಾನು ತೋರಿಸಿದ ಪ್ರಯತ್ನ, ತಾಳ್ಮೆ ಮತ್ತು ಸಮರ್ಪಣೆಗೆ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಿದರು. ಮನಮೋಹನ್‌ ಸಿಂಗ್ ನನ್ನ ಕೈ ಕುಲುಕಿ “ಕಾಶ್ಮೀರದಲ್ಲಿ ಅಹಿಂಸಾತ್ಮಕ ಚಳವಳಿಯ ಪಿತಾಮಹ” ಎಂದು ನನ್ನನ್ನು ಕರೆದರು.

    ಮನ ಮೋಹನ್‌ ಸಿಂಗ್‌ ಮಾತ್ರವಲ್ಲ ಮಲಿಕ್ ತನ್ನ ಅಫಿಡವಿಟ್‌ನಲ್ಲಿ, ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ, ಪಿ ಚಿದಂಬರಂ, ಐಕೆ ಗುಜ್ರಾಲ್ ಮತ್ತು ರಾಜೇಶ್ ಪೈಲಟ್ ಸೇರಿದಂತೆ ಹಲವಾರು ಉನ್ನತ ರಾಜಕೀಯ ನಾಯಕರೊಂದಿಗಿನ ಮಾತುಕತೆಯ ಬಗ್ಗೆ ಉಲ್ಲೇಖಿಸಿದ್ದಾನೆ.

    1990 ರಲ್ಲಿ ನನ್ನ ಬಂಧನದ ನಂತರ, ವಿಪಿ ಸಿಂಗ್, ಚಂದ್ರಶೇಖರ್, ಪಿವಿ ನರಸಿಂಹ ರಾವ್, ಎಚ್‌ಡಿ ದೇವಗೌಡ, ಇಂದರ್ ಕುಮಾರ್ ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗಲೂ ನಾನು ಸರ್ಕಾರದ ಜೊತೆ ಮಾತನಾಡುತ್ತಿದ್ದೆ. ಅಧಿಕಾರದಲ್ಲಿರುವ ಸರ್ಕಾರಗಳಿಂದ ನಾನು ಸಹಾಯ ಪಡೆದುಕೊಂಡಿದ್ದೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾನೆ.

    1990 ರ ಜನವರಿಯಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಕೊಂದ ಆರೋಪ ಮಲಿಕ್ ಮೇಲಿದೆ. ಮಾಜಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣ, 1990 ರಲ್ಲಿ ಕಾಶ್ಮೀರದಲ್ಲಿ ಪಂಡಿತರ ನರಮೇಧ ಮಾಡಿರುವ ಆರೋಪವೂ ಈತನ ಮೇಲಿದೆ.

    ಆಗಸ್ಟ್ 11 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೇಳಿದೆ. ನ್ಯಾಯಾಲಯವು ಯಾಸಿನ್ ಮಲಿಕ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದೆ.

    2022 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಯಾಸಿನ್ ಮಲಿಕ್, ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವಕ್ಕೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರಿಡಲು ಜೆಡಿಎಸ್ ವಿರೋಧ

    ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರಿಡಲು ಜೆಡಿಎಸ್ ವಿರೋಧ

    – ಕನ್ನಡಿಗರಿಗೆ ಕಾಂಗ್ರೆಸ್‌ನಿಂದ ಮಹಾದ್ರೋಹ ಎಂದು ಕಿಡಿ

    ಬೆಂಗಳೂರು: ಇಲ್ಲಿನ ಕೇಂದ್ರ ವಿಶ್ವವಿದ್ಯಾಲಯಕ್ಕೆ (Bengaluru University) ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ (Manmohan Singh) ಹೆಸರು ಇಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನ ಜೆಡಿಎಸ್ (JDS) ಖಂಡಿಸಿದೆ.

    ಈ ಕುರಿತು ಎಕ್ಸ್‌ನಲ್ಲಿ  (X) ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಕನ್ನಡಿಗರಿಗೆ ಮಹಾದ್ರೋಹ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಲಾಟರಿ ಸಿಎಂ, ಅವ್ರ ಕುರ್ಚಿ ಅಲುಗಾಡ್ತಿದೆ – ಜೆಡಿಎಸ್ ಲೇವಡಿ

    ಎಕ್ಸ್‌ನಲ್ಲಿ ಏನಿದೆ?
    ರಾಜ್ಯದಲ್ಲಿ ಗುಲಾಮಿ ಕಾಂಗ್ರೆಸ್ (Congress) ಸರ್ಕಾರದ ತೊಘಲಕ್ ಆಡಳಿತ ಹೇಗಿದೆ ನೋಡಿ ಕರ್ನಾಟಕದ ಮಹಾಜನತೆ. ರಾಮನ ಹೆಸರಿನ “ರಾಮನಗರ” (Ramanagar) ಜಿಲ್ಲೆಯನ್ನು “ಬೆಂಗಳೂರು ದಕ್ಷಿಣ” (Bengaluru South) ಎಂದು ವಿರೋಧವನ್ನು ಲೆಕ್ಕಿಸದೇ ಮರುನಾಮಕರಣ ಮಾಡಲಾಗಿದೆ. “ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ”ಕ್ಕೆ ಮಾಜಿ ಪಿಎಂ “ಮನಮೋಹನ್ ಸಿಂಗ್ ವಿವಿ ಬೆಂಗಳೂರು” ಎಂದು ಹೆಸರಿಡಲು ಈಗ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.

    ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ವಿಶ್ವಮಟ್ಟದಲ್ಲಿ ಬ್ರ‍್ಯಾಂಡ್ ಆಗಿದೆ. “ಬೆಂಗಳೂರು” ಹೆಸರನ್ನೇ ವಿಶ್ವವಿದ್ಯಾಲಯಕ್ಕೂ ಇಡಲಾಗಿತ್ತು. ಪರ್ಯಾಯಾವಾಗಿ ಮರುನಾಮಕರಣ ಮಾಡುವ ಅವಶ್ಯಕತೆ, ಜರೂರು ಏನಿತ್ತು? ಅಧಿಕಾರದ ಮದ, ದರ್ಪ, ದುರಹಂಕಾರದಲ್ಲಿ ಮೆರೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಹೈಕಮಾಂಡ್ ಮೆಚ್ಚಿಸಲು ಬೆಂಗಳೂರಿನ ಘನತೆ, ಗೌರವಕ್ಕೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವಿರೋಧದ ನಡುವೆಯೂ ಮಾಡುತ್ತಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದೆ.ಇದನ್ನೂ ಓದಿ: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ

  • ಬೆಂಗಳೂರು ವಿವಿಗೆ ಡಾ. ಮನಮೋಹನ್‌ ಸಿಂಗ್‌ ಹೆಸರಿಡಲು ಜೆಡಿಎಸ್‌ ವಿರೋಧ

    ಬೆಂಗಳೂರು ವಿವಿಗೆ ಡಾ. ಮನಮೋಹನ್‌ ಸಿಂಗ್‌ ಹೆಸರಿಡಲು ಜೆಡಿಎಸ್‌ ವಿರೋಧ

    – ಮೈಸೂರಲ್ಲಿ ಕಟ್ಟುತ್ತಿರೋ ನಿಮ್ಮ ಹೊಸ ಮನೆಗೆ ‘ಮನಮೋಹನ್‌ ಸಿಂಗ್’‌ ಅಂತ ಹೆಸರಿಡಿ
    – ನಿಮ್ಮ ಸೊಸೆ ಒಡೆತನದ ಕ್ಲಬ್‌ಗೆ ಮರುನಾಮಕರಣ ಮಾಡಿ ಅಂತ ಸಿದ್ದರಾಮಯ್ಯಗೆ ಟಾಂಗ್‌

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ (Bengaluru University) ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (Manmohan Singh) ಅವರ ಹೆಸರಿಡಲು ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಜೆಡಿಎಸ್‌, ಸಿಎಂ ಸಿದ್ದರಾಮಯ್ಯ ಅವರೇ, ಬೆಂಗಳೂರು ವಿಶ್ವವಿದ್ಯಾಲಯ ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷದ ಆಸ್ತಿಯೂ ಅಲ್ಲ ಎಂದು ಟಾಂಗ್‌ ಕೊಟ್ಟಿದೆ. ಇದನ್ನೂ ಓದಿ: ಹಠಾತ್‌ ಎದೆನೋವು – ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಆಸ್ಪತ್ರೆಗೆ ದಾಖಲು

    ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರು ವಿಶ್ವವಿದ್ಯಾಲಯ ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷದ ಆಸ್ತಿಯೂ ಅಲ್ಲ. ‘ಬೆಂಗಳೂರು’ ಎಂಬುದು ಈ ನೆಲಮೂಲದ ಹೆಗ್ಗುರುತು. ಸಮಸ್ತ ಕನ್ನಡಿಗರ ಹೆಮ್ಮೆ. ಹಾಗೂ ಕನ್ನಡಿಗರ ಪ್ರತಿಧ್ವನಿ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ನಗರ. ಬೆಂಗಳೂರು ಎಂಬುದೇ ಒಂದು ವಿಶ್ವ ಪ್ರಸಿದ್ಧ ಬ್ರ್ಯಾಂಡ್. ಅದೇ ಬೆಂಗಳೂರು ಹೆಸರಿಗೆ ಇರುವ ಶಕ್ತಿ.

    ನಮಗೆ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಅಪಾರವಾದ ಗೌರವವಿದೆ. ಆದರೆ, ‘ಬೆಂಗಳೂರು ನಗರ ವಿವಿ’ಗೆ ಪರ್ಯಾಯವಾಗಿ ಬೇರೆ ಯಾವುದೇ ಹೆಸರಿಡಲು ತೀವ್ರ ವಿರೋಧವಿದೆ. ಈ ವಿಚಾರದಲ್ಲಿ ಕರ್ನಾಟಕದ ಜನತೆಯೂ ಸಹ ಕಾಂಗ್ರೆಸ್‌ ಸರ್ಕಾರದ ಈ ನಿರ್ಧಾರವನ್ನು ಒಪ್ಪುವುದಿಲ್ಲ.

    ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲ ನಾಡಿಗಾಗಿ ಹೋರಾಡಿದ ಸಾವಿರಾರು ಕನ್ನಡಿಗ ಸಾಧಕರು ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದ ಮಹನೀಯರಿದ್ದಾರೆ. ಆ ಕನ್ನಡಿಗರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ?

    ಸಿದ್ದರಾಮಯ್ಯನವರೇ.. ಅಷ್ಟು ಅಭಿಮಾನ, ಗೌರವ ಇದ್ದರೆ ಮೈಸೂರಿನಲ್ಲಿ ನಿರ್ಮಿಸುತ್ತಿರುವ ನಿಮ್ಮ ಹೊಸ ಮನೆಗೆ ಮನಮೋಹನ್ ಸಿಂಗ್ ನಿವಾಸ ಎಂದು ಹೆಸರಿಟ್ಟುಕೊಳ್ಳಿ. ನಿಮ್ಮ ಸೊಸೆಯ ಒಡೆತನದಲ್ಲಿರುವ ಬಹುಕೋಟಿ ಮೌಲ್ಯದ ಐಶಾರಾಮಿ ಕ್ಲಬ್‌ಗೆ ಮರುನಾಮಕರಣ ಮಾಡಿಕೊಳ್ಳಿ.

    ದೆಹಲಿಯ ಹೊಸದಾಗಿ ನಿರ್ಮಿಸಿದ ಕಾಂಗ್ರೆಸ್‌ ಕಚೇರಿಗೆ ‘ಇಂದಿರಾ ಭವನ’ ಎಂದು ಹೆಸರಿಟ್ಟಿರಿ. ಅದಕ್ಕೆ ಮನಮೋಹನ್‌ ಸಿಂಗ್‌ ಹೆಸರಿಡಲು ಇಟಲಿ ಕಾಂಗ್ರೆಸ್‌ನ ಆಪ್ತರ ಗುಂಪು ಒಪ್ಪಲಿಲ್ಲ ಎಂಬುದು ತಮಗೆ ತಿಳಿದಿರುವ ವಿಷಯ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತವಿರುವ ಕಾರಣ ‘ಗುಲಾಮಿ ಕಾಂಗ್ರೆಸ್‌’ ನಾಯಕರು, ಬೆಂಗಳೂರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತೀರಿ. ಇದನ್ನೂ ಓದಿ: ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

    ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಈಗ ಬೆಂಗಳೂರು ವಿವಿಗೆ ಮನಮೋಹನ್‌ ಸಿಂಗ್‌ ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದ್ದೀರಿ. ಹೈಕಮಾಂಡ್‌ ಗುಲಾಮಗಿರಿಗೆ ಸದಾ ‘ಸಿದ್ಧ’ರಾಮಯ್ಯ ಎಂದು ಜೆಡಿಎಸ್‌ ಕಾಲೆಳೆದಿದೆ.

  • ದಿ.ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡುವಂತೆ ಕಾಂಗ್ರೆಸ್ ಒತ್ತಡ

    ದಿ.ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡುವಂತೆ ಕಾಂಗ್ರೆಸ್ ಒತ್ತಡ

    ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ (L.Manmohan Singh) ಅವರ ನಿಧನ ಬಳಿಕ ಅವರಿಗೆ ಭಾರತ ರತ್ನ ಪ್ರಶಸ್ತಿ (Bharat Ratna Award) ನೀಡಬೇಕು ಎನ್ನುವ ಒತ್ತಡ ಹೆಚ್ಚುತ್ತಿದೆ. ಭಾರತ ರತ್ನ ನೀಡುವಂತೆ ಒತ್ತಾಯಿಸಿ ತೆಲಂಗಾಣ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಒತ್ತಡ ಹಾಕಿದ ಬೆನ್ನಲ್ಲೇ ಈ ಚರ್ಚೆ ಮುನ್ನಲೆಗೆ ಬಂದಿದೆ.

    ಮನಮೋಹನ್ ಸಿಂಗ್ ಅವರು ನಮ್ಮ ದೇಶದ ಮಹಾನ್ ನಾಯಕರಾಗಿದ್ದು, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಕೇಂದ್ರ ಸರ್ಕಾರ ತೆಲಂಗಾಣ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸುವಂತೆ ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ವಿಚಾರ, ವ್ಯವಹಾರದಲ್ಲಿ ಕಲಹ – ಆತ್ಮಹತ್ಯೆಗೆ ಶರಣಾದ ದೆಹಲಿ ಉದ್ಯಮಿ

    ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ನರೇಗಾ ಮುಂತಾದ ಕಾರಣಗಳಿಗಾಗಿ ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡಬೇಕೆಂದು ತೆಲಂಗಾಣ ವಿಧಾನಸಭೆ ಒತ್ತಾಯಿಸಿದ್ದು ಸರಿಯಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶುಭರಂಶ್ ಕುಮಾರ್ ರೈ ಹೇಳಿದ್ದಾರೆ. ದೇಶದ ಅತ್ಯುನ್ನತ ಗೌರವ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಿ.ಟಿ ರವಿ ಕೇಸ್ ಸಿಐಡಿ ತನಿಖಾ ವರದಿ ಬಂದ ಬಳಿಕ ಕ್ರಮ: ಸಿದ್ದರಾಮಯ್ಯ

    ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿ, ವಿಧಾನಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸುವ ಬದಲು ಅವರು ಸೋನಿಯಾ ಗಾಂಧಿಯನ್ನು ಕೇಳಬೇಕು ಎಂದು ಟೀಕಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಕಳೆದ ವಾರ 92ನೇ ವಯಸ್ಸಿನಲ್ಲಿ ನಿಧನರಾದರು ಮತ್ತು ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಇಲ್ಲ: ಸಿದ್ದರಾಮಯ್ಯ

  • ಸಿಂಗ್ ಶೋಕಾಚರಣೆ ವೇಳೆ ರಾಹುಲ್ ವಿಯೆಟ್ನಾಂ ಪ್ರವಾಸ – ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ಗರಂ

    ಸಿಂಗ್ ಶೋಕಾಚರಣೆ ವೇಳೆ ರಾಹುಲ್ ವಿಯೆಟ್ನಾಂ ಪ್ರವಾಸ – ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ಗರಂ

    – ಸಿಂಗ್ ಅಸ್ಥಿ ವಿಸರ್ಜನೆಗೆ ಕಾಂಗ್ರೆಸ್ ನಾಯಕರು ಹೋಗಿಲ್ಲ ಯಾಕೆ..?
    – ಮುಂಬೈ ದಾಳಿ ನಡೆದಾಗಲೂ ರಾಹುಲ್‌ ಇಡೀ ರಾತ್ರಿ ಪಾರ್ಟಿ ಮಾಡಿದ್ರು; ಬಿಜೆಪಿ

    ನವದೆಹಲಿ: ದಿ. ಮನಮೋಹನ್ ಸಿಂಗ್ (Manmohan Singh) ವಿಚಾರವಾಗಿ ಪರಸ್ಪರ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಸ್ಥಿ ವಿಸರ್ಜನೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಯಾರೋಬ್ಬರರು ಹಾಜರಾಗದೇ ಇದ್ದುದನ್ನು ಉಲ್ಲೇಖಿಸಿದ ಬಿಜೆಪಿ, ಗಾಂಧಿ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದೆ.

    ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಇಡೀ ದೇಶವೇ 7 ದಿನಗಳ ಶೋಕಾಚರಣೆ ನಡೆಸುವಾಗ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗಾಗಿ ವಿಯೆಟ್ನಾಂ ಪ್ರವಾಸ (Vietnam Trip) ಕೈಗೊಂಡಿದ್ದಾರೆ. ಈ ಮೂಲಕ ಮನಮೋಹನ್‌ಸಿಂಗ್ ಅವರಿಗೆ ರಾಹುಲ್ ಗಾಂಧಿ (Rahul Gandhi) ಮತ್ತೆ ಮತ್ತೆ ಅಪಮಾನ ಮಾಡ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ಈ ನಡುವೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾತನಾಡಿರುವ ಬಿಜೆಪಿ ವಕ್ತಾರ ಬಿಜೆಪಿಯ ಶೆಹ್‌ಜಾದ್ ಪೂನಾವಾಲಾ, ರಾಹುಲ್ ವಿಪಕ್ಷ ನಾಯಕರಲ್ಲ.. ಬದಲಾಗಿ ಪ್ರವಾಸಿ ನಾಯಕ. ಅವರು ತಮ್ಮ ನಿರೀಕ್ಷೆಯಂತೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 25ನೇ ವರ್ಷದ ಅವರೆಬೇಳೆ ಮೇಳಕ್ಕೆ ಡಿಸಿಎಂ ಚಾಲನೆ – ಅವರೆಬೇಳೆ ದೋಸೆ ಮಾಡಲು ಪತ್ನಿಗೆ ಹೇಳ್ತೀನಿ ಎಂದ ಡಿಕೆಶಿ

    ಅಲ್ಲದೇ ಮುಂಬೈ ಮೇಲಿನ ದಾಳಿಗಳು ನಿಮಗೆ ನೆನಪಿದೆಯೇ? ಎಂದು ಪ್ರಶ್ನಿಸಿರುವ ಅವರು 2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಆಗ 38 ವರ್ಷ ವಯಸ್ಸಿನವರಾಗಿದ್ದ ರಾಹುಲ್‌ ಗಾಂಧಿ ಇಡೀ ರಾತ್ರಿ ತಮ್ಮ ಸ್ನೇಹಿತ ಸಮೀರ್‌ ಶರ್ಮಾ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿ ಹೊರವಲಯದಲ್ಲಿ ಇಡೀ ರಾತ್ರಿ ಪಾರ್ಟಿ ಮಾಡಿದ್ದರು. ಅನೇಕ ವರದಿಗಳು ಈ ಸತ್ಯವನ್ನು ಉಲ್ಲೇಖಿಸಿವೆ ಎಂದು ಕುಟುಕಿದ್ದಾರೆ.

    ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್‌ ಕೆರಳಿ ಕೆಂಡವಾಗಿದೆ. ಬಿಜೆಪಿ ಆರೋಕ್ಕೆ ಕಾಂಗ್ರೆಸ್‌ ಸಂಸದ ಬಿ ಮಾಣಿಕಂ ಟ್ಯಾಗೋರ್ ಸ್ಪಷ್ಟನೆ ನೀಡಿದ್ದಾರೆ. ವಿಯೆಟ್ನಾಂ ಪ್ರವಾಸ ರಾಹುಲ್‌ ಗಾಂಧಿ ಅವರ ವೈಯಕ್ತಿಕ ಭೇಟಿ, ಅದರಿಂದ ನಿಮಗೇನು ತೊಂದರೆ? ಹೊಸವರ್ಷದಲ್ಲಾದರೂ ಆರಾಮಾಗಿರಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾಪ್ತತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಶವ ಸ್ಕಾಟ್ಲೆಂಡ್‌ನ ನದಿಯಲ್ಲಿ ಪತ್ತೆ

    ಅಲ್ಲದೇ ಮನಮೋಹನ್ ಸಿಂಗ್ ಕುಟುಂಬ ಅಸ್ಥಿ ವಿಸರ್ಜನೆ ಕಾರ್ಯದ ವೇಳೆ ಖಾಸಗಿತನ ಬಯಸಿತ್ತು. ಅದಕ್ಕೆ ಕಾಂಗ್ರೆಸ್ ನಾಯಕರು ಪಾಲ್ಗೊಂಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಬಿಜೆಪಿ ನಾಯಕರು ತಮ್ಮ ತಪ್ಪುಗಳನ್ನು, ಹುಳುಕುಗಳನ್ನು ಮುಚ್ಚಿಕೊಳ್ಳಲು ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕಿಡಿಕಾರಿದೆ. ಅಷ್ಟಕ್ಕೂ ರಾಹುಲ್ ಗಾಂಧಿ ಖಾಸಗಿ ಪ್ರವಾಸ ಕೈಗೊಂಡ್ರೆ ಅದ್ರಲ್ಲಿ ಏನಿದೆ ತಪ್ಪು..? ನಿಮಗೇಕೆ ಉರಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ಆಹ್ವಾನಿತರಿಗೆ ಈ ಪಬ್‌ನಲ್ಲಿ ಕಾಂಡೋಮ್‌, ಒಆರ್‌ಎಸ್‌ ಗಿಫ್ಟ್‌ – ಕಾಂಗ್ರೆಸ್‌ ದೂರು

  • ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸ್ಥಳ ಪರಿಶೀಲನೆ

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸ್ಥಳ ಪರಿಶೀಲನೆ

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Former PM Manmohan Singh) ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress), ಬಿಜೆಪಿ (BJP) ನಡುವೆ ರಾಜಕೀಯ ಜಟಾಪಟಿ ನಡೆಯುತ್ತಿರುವ ಹೊತ್ತಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ರಾಜ್‌ಘಾಟ್‌ನಲ್ಲಿರುವ ಸಮಾಧಿ ಸ್ಥಳಗಳಿಗೆ ಭೇಟಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

    ರಾಷ್ಟ್ರೀಯ ಸ್ಮೃತಿಸ್ಥಳ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಅಂತ್ಯಕ್ರಿಯೆಗೆ ಗೊತ್ತುಪಡಿಸಿದ ಸ್ಥಳ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಸ್ಮಾರಕ ಕಿಸಾನ್ ಘಾಟ್, ಸಂಜಯ್ ಗಾಂಧಿ ಸಮಾಧಿ, ಪಿ.ವಿ.ನರಸಿಂಹರಾವ್ ಸಮಾಧಿ ಏಕತಾ ಸ್ಥಳದ ಬಳಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಿಸುವ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.ಇದನ್ನೂ ಓದಿ: ಕೈಯಲ್ಲಿ ಡೆತ್‌ನೋಟ್‌ ಹಿಡ್ಕೊಂಡು KSDL ಅಧಿಕಾರಿ ಆತ್ಮಹತ್ಯೆ

    ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರಕ್ಕೆ ಕೇಂದ್ರ ಸರ್ಕಾರ ಸರಿಯಾದ ಮತ್ತು ಗೌರವಾನ್ವಿತ ಸ್ಥಳವನ್ನು ಒದಗಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಅವರ ಸ್ಮಾರಕವನ್ನು ನಿರ್ಮಿಸುವ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಅದಾಗ್ಯೂ ಕೇಂದ್ರ ಸರ್ಕಾರ ನಿಗಮ್‌ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಿತ್ತು.

    ಈ ನಡುವೆ ಕೇಂದ್ರ ಸರ್ಕಾರ ಸ್ಮಾರಕಕ್ಕೆ ಸ್ಥಳ ನೀಡುವ ಭರವಸೆ ನೀಡಿದ್ದು, ಈ ಹಿನ್ನೆಲೆ ಸ್ಥಳ ಪರಿಶೀಲನೆ ಆರಂಭವಾಗಿದೆ. ಈ ನಡುವೆ 2000ನೇ ಇಸವಿಯಲ್ಲಿ ಯುಪಿಎ ಸರ್ಕಾರವು ರಾಜಧಾನಿಯಲ್ಲಿ ಭೂಮಿ ಕೊರತೆ ಹಿನ್ನೆಲೆ ಕಳವಳ ವ್ಯಕ್ತಪಡಿಸಿತ್ತು. ಇದರೊಂದಿಗೆ ಹೊಸ ಸ್ಮಾರಕಗಳನ್ನು ನಿರ್ಮಿಸದಿರಲು ನಿರ್ಧರಿಸಲಾಗಿತ್ತು. ಈ ನಿರ್ಧಾರ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಅಡ್ಡಿಯಾಗಬಹುದು ಎನ್ನಲಾಗುತ್ತಿದೆ.ಇದನ್ನೂ ಓದಿ: ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ಸಹಾಯಧನ: ಕೇಜ್ರಿವಾಲ್‌ ಘೋಷಣೆ

  • ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು

    ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು

    – ರಾಹುಲ್‌ ಗಾಂಧಿ ಹೇಳಿಕೆ ನಾಚಿಗೇಡು ಎಂದು ವಾಗ್ದಾಳಿ

    ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (Manmohan Singh) ಅವರ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ (Sambit Patra) ತಿರುಗೇಟು ನೀಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್‌ ಗಾಂಧಿ (Rahul Gandhi) ಹೇಳಿಕೆ ನಾಚಿಗೇಡು ಮತ್ತು ದುರದೃಷ್ಟಕರ ಸಂಗತಿ, ಕೀಳುಮಟ್ಟದ ರಾಜಕೀಯ ಎಂದು ಕಿಡಿ ಕಾರಿದರು.

    ದೇಶದ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಸಾವಿನಲ್ಲಿ ಘನತೆ ಮೆರೆಬೇಕು. ಆದ್ರೆ ರಾಹುಲ್‌ ಅವರ ಹೇಳಿಕೆ ನಾಡಿಗೇಡಿನ ಸಂಗತಿಯಾಗಿದೆ. ಕಾಂಗ್ರೆಸ್‌ ಮನಮೋಹನ್‌ ಸಿಂಗ್‌ ಅವರ ಸ್ಮಾರಕಕ್ಕೆ ಜಾಗ ನೀಡುವಂತೆ ಮನವಿ ಮಾಡಿತ್ತು. ಅದಕ್ಕೆ ಸರ್ಕಾರ ಒಪ್ಪಿದೆ, ಸಿಂಗ್‌ರ ಗೌರವಾರ್ಥವಾಗಿ ಸ್ಮಾರಕ ನಿರ್ಮಿಸುವ ಉದ್ದೇಶವನ್ನು ವ್ಯಕ್ತಪಡಿಸಿದೆ. ಸ್ಮಾರಕ ಮಾಡುವುದರಿಂದ ಇಡೀ ಜಗತ್ತು ಅವರ ಸಕಾರಾತ್ಮ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.

    ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಕೆಲವು ಕಾರ್ಯವಿಧಾನವಿದೆ. ಆದ್ರೆ ಅಂತ್ಯಕ್ರಿಯು ಕಾಯಲು ಸಾಧ್ಯವಿಲ್ಲದ ಪ್ರಕ್ರಿಯೆಯಾಗಿದೆ. ಆದ್ದರಿಂದಲೇ ಬೋಧ್‌ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ರಾಹುಲ್‌ ಗಾಂಧಿ ಹೇಳಿದ್ದೇನು?
    ಭಾರತಮಾತೆಯ ಮಹಾನ್ ಪುತ್ರ ಹಾಗೂ ಸಿಖ್ ಸಮುದಾಯದ ಮೊದಲ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಿಗಮಬೋಧ್ ಘಾಟ್‌ನಲ್ಲಿ ನೆರವೇರಿಸುವ ಮೂಲಕ ಪ್ರಸ್ತುತ ಸರ್ಕಾರ ಅವರಿಗೆ ಸಂಪೂರ್ಣ ಅವಮಾನ ಮಾಡಿದೆ. ಮನಮೋಹನ್‌ ಸಿಂಗ್‌ ಒಂದು ದಶಕದ ಕಾಲ ಭಾರತದ ಪ್ರಧಾನಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ದೇಶವು ಆರ್ಥಿಕ ಮಹಾಶಕ್ತಿಯಾಯಿತು ಮತ್ತು ಅವರ ನೀತಿಗಳು ಇನ್ನೂ ದೇಶದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುತ್ತಿವೆ.

    ಇಲ್ಲಿಯವರೆಗೆ, ಎಲ್ಲಾ ಮಾಜಿ ಪ್ರಧಾನಿಗಳ ಘನತೆಯನ್ನು ಗೌರವಿಸಿ, ಅವರ ಅಂತಿಮ ವಿಧಿಗಳನ್ನು ಅಧಿಕೃತ ಸಮಾಧಿಗಳಲ್ಲಿ ನಡೆಸಲಾಯಿತು, ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಅನಾನುಕೂಲತೆ ಇಲ್ಲದೇ ಗೌರವ ಸಲ್ಲಿಸಬದಾಗಿದೆ. ಹಾಗೆಯೇ ದೇಶದ ಈ ಮಹಾನ್ ಪುತ್ರ ಮತ್ತು ಅವರ ಸಮುದಾಯದ ಬಗ್ಗೆ ಸರ್ಕಾರ ಗೌರವ ತೋರಿಸಬೇಕಿತ್ತು. ಆದ್ರೆ ಸಂಪೂರ್ಣ ಅಪಮಾನ ಮಾಡಿದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

  • ಮನಮೋಹನ್ ಸಿಂಗ್‌ಗೆ ಕೇಂದ್ರ ಸರ್ಕಾರದಿಂದ ಅವಮಾನ – ರಾಹುಲ್ ಗಾಂಧಿ ಆರೋಪ

    ಮನಮೋಹನ್ ಸಿಂಗ್‌ಗೆ ಕೇಂದ್ರ ಸರ್ಕಾರದಿಂದ ಅವಮಾನ – ರಾಹುಲ್ ಗಾಂಧಿ ಆರೋಪ

    – ಸ್ಮಾರಕ ನಿರ್ಮಿಸುವ ಸ್ಥಳದಲ್ಲೇ ಅಂತ್ಯಕ್ರಿಯೆಗೆ ಅವಕಾಶ ಕೊಡಿ ಎಂದು ಕೇಳಿದ್ದ ಕಾಂಗ್ರೆಸ್

    ನವದೆಹಲಿ: ಡಾ. ಮನಮೋಹನ್ ಸಿಂಗ್ (Manmohan Singh) ಅಂತ್ಯಕ್ರಿಯೆ ವಿಚಾರದಲ್ಲೂ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಬೋಧ್‌ ಘಾಟ್‌ನಲ್ಲಿಂದು ಅಂತ್ಯಕ್ರಿಯೆ ನೆರವೇರಿದ ಬಳಿಕ ಕೆರಳಿ ಕೆಂಡವಾದ ರಾಹುಲ್‌ ಗಾಂಧಿ (Rahul Gandhi) ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಅವಮಾನ ಮಾಡಿದೆ ಅಂತ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಾಗಾ ಎಕ್ಸ್‌ ನಲ್ಲಿ ಏನಿದೆ?
    ಭಾರತಮಾತೆಯ ಮಹಾನ್ ಪುತ್ರ ಹಾಗೂ ಸಿಖ್ ಸಮುದಾಯದ ಮೊದಲ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಿಗಮಬೋಧ್ ಘಾಟ್‌ನಲ್ಲಿ ನೆರವೇರಿಸುವ ಮೂಲಕ ಪ್ರಸ್ತುತ ಸರ್ಕಾರ ಅವರಿಗೆ ಸಂಪೂರ್ಣ ಅವಮಾನ ಮಾಡಿದೆ. ಮನಮೋಹನ್‌ ಸಿಂಗ್‌ ಒಂದು ದಶಕದ ಕಾಲ ಭಾರತದ ಪ್ರಧಾನಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ದೇಶವು ಆರ್ಥಿಕ ಮಹಾಶಕ್ತಿಯಾಯಿತು ಮತ್ತು ಅವರ ನೀತಿಗಳು ಇನ್ನೂ ದೇಶದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುತ್ತಿವೆ.

    ಇಲ್ಲಿಯವರೆಗೆ, ಎಲ್ಲಾ ಮಾಜಿ ಪ್ರಧಾನಿಗಳ ಘನತೆಯನ್ನು ಗೌರವಿಸಿ, ಅವರ ಅಂತಿಮ ವಿಧಿಗಳನ್ನು ಅಧಿಕೃತ ಸಮಾಧಿಗಳಲ್ಲಿ ನಡೆಸಲಾಯಿತು, ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಅನಾನುಕೂಲತೆ ಇಲ್ಲದೇ ಗೌರವ ಸಲ್ಲಿಸಬದಾಗಿದೆ. ಹಾಗೆಯೇ ದೇಶದ ಈ ಮಹಾನ್ ಪುತ್ರ ಮತ್ತು ಅವರ ಸಮುದಾಯದ ಬಗ್ಗೆ ಸರ್ಕಾರ ಗೌರವ ತೋರಿಸಬೇಕಿತ್ತು. ಆದ್ರೆ ಸಂಪೂರ್ಣ ಅಪಮಾನ ಮಾಡಿದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

    ಏನಿದು ವಿವಾದ?
    ಸ್ಮಾರಕ (Manmohan Singh Memorial) ನಿರ್ಮಿಸಬಹುದಾದ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನಡೆಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅಲ್ಲದೆ, ಮೋದಿ ಜೊತೆ ದೂರವಾಣಿ ಮಾತುಕತೆಯನ್ನೂ ನಡೆಸಿದ್ದರು. ರಾಷ್ಟ್ರನಾಯಕರು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಸಂಪ್ರದಾಯವಿದೆ. ಅದರಂತೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿಯೇ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಖರ್ಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ.

    ಈ ಬಗ್ಗೆ ಸಿಂಗ್ ಕುಟುಂಬ ಮತ್ತು ಎಐಸಿಸಿ ಅಧ್ಯಕ್ಷ ಖರ್ಗೆಗೆ ಕೇಂದ್ರ ಗೃಹಸಚಿವಾಲಯ ಮಾಹಿತಿ ನೀಡಿದೆ. ಆದ್ರೆ ಅಂತ್ಯಸಂಸ್ಕಾರ ನಿಗಮ್ ಬೋಧ್ ಘಾಟ್‌ನಲ್ಲಿ ನೆರವೇರಿದ್ದರಿಂದ ಕೆರಳಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಅವಮಾನ ಮಾಡಿದೆ ಅಂತ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. ಇದಕ್ಕೆ ಕೌಂಟರ್ ಕೊಟ್ಟಿರುವ ಬಿಜೆಪಿ, ಡಾ. ಸಿಂಗ್‌ರ ಸ್ಮಾರಕ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡ್ತಿರೋದು ದುಃಖಕರ ಅಂದಿದೆ. ಈ ಮಧ್ಯೆ, ಕಾಂಗ್ರೆಸ್ ವಿರುದ್ಧ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಕಿಡಿಕಾರಿದ್ದಾರೆ. ನನ್ನ ತಂದೆ ಸಾವನ್ನಪ್ಪಿದ್ದಾಗ ಕಾಂಗ್ರೆಸ್ ತಲೆಕೆಡಿಸಿಕೊಂಡಿರಲಿಲ್ಲ. ಕನಿಷ್ಠ ಪಕ್ಷ ಶ್ರದ್ಧಾಂಜಲಿ ಸಭೆಯನ್ನೂ ನಡೆಸಿರಲಿಲ್ಲ ಅಂತ ಟೀಕಿಸಿದ್ದಾರೆ.

  • ಸಿಖ್ ಸಂಪ್ರದಾಯದಂತೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ; ಗೌರವ ಸಮರ್ಪಣೆ

    ಸಿಖ್ ಸಂಪ್ರದಾಯದಂತೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ; ಗೌರವ ಸಮರ್ಪಣೆ

    ನವದೆಹಲಿ: ದೇಶಕಂಡ ಅಪರೂಪದ ರಾಜಕಾರಣಿ, ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ (Manmohan Singh) ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದೆಹಲಿಯ ನಿಗಮ ಬೋಧ್ ಘಾಟ್‌ನಲ್ಲಿ (Nigam Bodh Ghat) ಸಕಲ ಸರ್ಕಾರಿ ಗೌರವಗಳೊಂದಿಗೆ ಮತ್ತು ಸಿಖ್ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.

    ಹಿರಿಯ ಪುತ್ರಿ ಉಪಿಂದರ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ, ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ನಿಗಮ ಬೋಧ್‌ ಘಾಟ್‌ನಲ್ಲಿ ನೆರೆದಿದ್ದ ನಾಯಕರು ಭಾವುಕರಾಗಿ ಬೀಳ್ಕೊಟ್ಟರು. ಈ ವೇಳೆ ʻಮನಮೋಹನ್ ಸಿಂಗ್ ಅಮರ್ ರಹೇʼ, ಸೂರ್ಯ-ಚಂದ್ರ ಇರೋವರೆಗೂ ಸಿಂಗ್ ಅಮರ ಎಂಬ ಘೋಷಣೆ ಮೊಳಗಿದವು. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್‌ – ಡ್ರಂಕ್‌ & ಡ್ರೈವ್‌ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್‌ ರದ್ದು!

    ಮನಮೋಹನ್ ಸಿಂಗ್‌ಗೆ ನಿಗಮ ಬೋಧ್ ಘಾಟ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಧನ್ಖರ್, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಈ ಎಲ್ಲಾ ನಾಯಕರು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು. ಮೂರೂ ಸೇನಾಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    ಸಕಲ ಸರ್ಕಾರಿ ಗೌರವಗಳೊಂದಿಗೆ 21 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೇ, ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಡಾ. ಸಿಂಗ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್, ಮಾರಿಷಿಯಸ್ ವಿದೇಶಾಂಗ ಸಚಿವ ಮನೀಶ್ ಗೋಬಿನ್ ಕೂಡ ತಮ್ಮ ಅಂತಿಮ ನಮನ ಸಲ್ಲಿಸಿದರು. ಸಿಖ್ ಧರ್ಮದ ಧಾರ್ಮಿಕ ಕ್ರಮದಂತೆ ಶ್ಲೋಕಗಳನ್ನು ಪಠಣೆ ಮಾಡಿ, ಮಧ್ಯಾಹ್ನ 12:55ಕ್ಕೆ ಸರಿಯಾಗಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

    ಡಾ. ಸಿಂಗ್ ಪಾರ್ಥಿವ ಶರೀರವನ್ನು ದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿ ಅವರ ನಿವಾಸದಿಂದ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಗೆ ಮೆರವಣಿಗೆ ಮೂಲಕ ತರಲಾಯ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ದೆಹಲಿಯ ಜನತೆ ಡಾ. ಮನಮೋಹನ್ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ್ರು. ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಮನಮೋಹನ್ ಸಿಂಗ್‌ರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಡಿ.ಕೆ ಸುರೇಶ್ ತಂಗಿ ಅಂತ ಹೇಳ್ಕೊಂಡು ವಂಚನೆ ಕೇಸ್ -ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್‌ ಅರೆಸ್ಟ್

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ವಿವಿಧ ರಾಜ್ಯಗಳ ಸಿಎಂಗಳು ಸಹಿತ ಕೇಂದ್ರ ಸಚಿವರು ಕಾಂಗ್ರೆಸ್ ನಾಯಕರು ಹಾಜರಿದ್ದರು. ಎಐಸಿಸಿ ಕಚೇರಿಯಿಂದ ಡಾ. ಮನಮೋಹನ್ ಸಿಂಗ್ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯ್ತು. ಯಮುನಾ ನದಿ ತಟದಲ್ಲಿರುವ ನಿಗಮ್‌ ಬೋಧ್ ಘಾಟ್‌ವರೆಗೂ ಸೇನಾ ವಾಹನದಲ್ಲಿ ಮನಮೋಹನ್ ಸಿಂಗ್ ಅಂತಿಮ ಯಾತ್ರೆ ನಡೀತು. ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ಮಾಜಿ ಪ್ರಧಾನಿಯನ್ನು ಬೀಳ್ಕೊಟ್ಟರು. ಪಾರ್ಥಿವ ಶರೀರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಹೆಗಲು ಕೊಟ್ಟರು.

  • ‘ಅರ್ಥ’ ಮಾಂತ್ರಿಕ ಮನಮೋಹನ್‌ ಸಿಂಗ್‌ಗೆ ಕಣ್ಣೀರ ವಿದಾಯ – ಸಿಖ್‌ ಸಂಪ್ರದಾಯದಂತೆ ನೆರವೇರಿದ ಅಂತ್ಯಸಂಸ್ಕಾರ

    ‘ಅರ್ಥ’ ಮಾಂತ್ರಿಕ ಮನಮೋಹನ್‌ ಸಿಂಗ್‌ಗೆ ಕಣ್ಣೀರ ವಿದಾಯ – ಸಿಖ್‌ ಸಂಪ್ರದಾಯದಂತೆ ನೆರವೇರಿದ ಅಂತ್ಯಸಂಸ್ಕಾರ

    – ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಭಾಗಿ
    – ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯಿಂದ ಸಿಂಗ್‌ಗೆ ಅಂತಿಮ ನಮನ

    ನವದೆಹಲಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನಿಗಮ್ ಬೋಧ ಘಾಟ್‌ನಲ್ಲಿ ಶನಿವಾರ ಸಿಖ್‌ ಸಂಪ್ರದಾಯದಂತೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಅವರ ಅಂತ್ಯಕ್ರಿಯೆ ನೆರವೇರಿತು.

    ಅಂತ್ಯಸಂಸ್ಕಾರದ ವೇಳೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಅಂತ್ಯಕ್ರಿಯೆಗೂ ಮುನ್ನ ಡಾ. ಸಿಂಗ್‌ ಅವರಿಗೆ ಮೂರು ಸೇನಾ ಪಡೆಗಳು ಗೌರವ ಸಮರ್ಪಣೆ ಮಾಡಿದವು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮನಮೋಹನ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವನ್ನಿರಿಸಿ ಗೌರವ ನಮನ ಸಲ್ಲಿಸಿದರು. ಇದನ್ನೂ ಓದಿ: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಒಪ್ಪಿಗೆ

    ಬಳಿಕ ಸಿಂಗ್‌ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ನಡುವೆ ‘ಮನಮೋಹನ್‌ ಸಿಂಗ್‌ ಅಮರ್‌ ರಹೇ.. ಅಮರ್‌ ರಹೇ’ ಎಂದು ಘೋಷಣೆ ಕೂಗಲಾಯಿತು. ನಂತರ ಸಿಖ್‌ ಸಂಪ್ರದಾಯದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಯಿತು.

    ಉಪರಾಷ್ಟ್ರಪತಿ ಜಗದೀಪ್‌ ಧನಕರ್, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌,‌ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ಇದನ್ನೂ ಓದಿ: ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ – ಅಂತ್ಯಸಂಸ್ಕಾರಕ್ಕೂ ಮುನ್ನ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಹೆಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌, ಹೆಚ್‌.ಸಿ.ಮಹದೇವಪ್ಪ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಆರ್‌.ವಿ.ದೇಶಪಾಂಡೆ ಮುಂತಾದವರು ಮನಮೋಹನ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

    ಅಂತ್ಯಕ್ರಿಯೆಗೂ ಮುನ್ನ ಬೆಳಗ್ಗೆ 8 ಗಂಟೆಗೆ ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಇರಿಸಿ ಸಾರ್ವಜನಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 9:30 ಬಳಿಕ ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆ ನಡೆಯಿತು.