Tag: Mankala Vaidya

  • ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ

    ಹಣಕಾಸು ಇಲಾಖೆ ಅಧಿಕಾರಿಗಳು ಸಹಕಾರ ಕೊಡ್ತಿಲ್ಲ, ನಾನು ಹೇಗೆ ಜಾರಿ ಮಾಡಲಿ: ಮಂಕಾಳ್ ವೈದ್ಯ ಅಸಹಾಯಕತೆ

    ಬೆಂಗಳೂರು: ಹಣಕಾಸು ಇಲಾಖೆ (Finance Department) ಅಧಿಕಾರಿಗಳು ನನ್ನ ಇಲಾಖೆಗೆ ಸಹಕಾರ ಕೊಡುತ್ತಿಲ್ಲ. ಹಣಕಾಸು ಇಲಾಖೆಯವರು ದುಡ್ಡು ಕೊಡದೇ ನಾನು ಹೇಗೆ ಯೋಜನೆ ಅನುಷ್ಠಾನ ಮಾಡಲಿ ಎಂದು ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯ (Mankala Vaidya) ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.

    ಪ್ರಶ್ನೋತ್ತರ ಅವಧಿ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಘೋಷಣೆ ಮಾಡಿದ್ದ ಯೋಜನೆ ಅನುಷ್ಠಾನ ಮಾಡಲು ಎಫ್‌ಡಿ (ಹಣಕಾಸು ಇಲಾಖೆ) ಸಹಕಾರ ಕೊಡದ ಕಾರಣ ಕೆಲಸ ಆಗುತ್ತಿಲ್ಲ ಎಂದರು. ಮೀನುಗಾರಿಕೆ ಇಲಾಖೆಗೆ ಸಿಎಂ ಅವರು2024-25ನೇ ಸಾಲಿಗೆ 3 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ನಮ್ಮ ಇಲಾಖೆಯಿಂದ ಯೋಜನೆಗಳಿಗೆ ಡಿಪಿಆರ್ ಸಿದ್ಧ ಮಾಡಿ ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಡದೇ ಕೇಂದ್ರ ಸರ್ಕಾರದ ಯೋಜನೆ ಅಡಿ ಕೆಲಸ ಪ್ರಾರಂಭ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಯೋಜನೆಗಳ ಡಿಪಿಆರ್ ಅನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ.ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ. ಹೀಗಾಗಿ ಯೋಜನೆ ಪ್ರಾರಂಭ ಮಾಡಲು ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರ್ಕಾರದ ವೇತನ; ಸಮಿತಿ ರದ್ದಿಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಪ್ರತಿಭಟನೆ

    ಮಂಕಾಳ್ ವೈದ್ಯ ಮಾತಿಗೆ ಸದಸ್ಯ ನಾಗರಾಜ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು. 3 ಸಾವಿರ ಕೋಟಿ ಇದ್ದರೂ ಯಾಕೆ ಇಲಾಖೆ ಕೆಲಸ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಚಿವರ ಮೇಲೆ ಏರು ಧ್ವನಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!

    ನಾಗರಾಜ್ ಯಾದವ್ ಮಾತಿಗೆ ಆಕ್ರೋಶಗೊಂಡ ಸಚಿವ ಮಂಕಾಳ್ ವೈದ್ಯ, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ ಅಂದರೆ ನಾನೇನು ಮಾಡಲಿ. ನನ್ನ ಇಲಾಖೆ ತಪ್ಪೇನಿದೆ? ಹಣ ಕೊಡದೆ ಹೇಗೆ ಕೆಲಸ ಮಾಡೋದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಶಕ್ತಿ ಯೋಜನೆಗೆ ಸರ್ಕಾರ 2,000 ಕೋಟಿ ಹಣ ಬಾಕಿ ಕೊಡಬೇಕು: ರಾಮಲಿಂಗಾ ರೆಡ್ಡಿ

  • ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ: ಸಚಿವ ಮಂಕಾಳ ವೈದ್ಯ

    ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ: ಸಚಿವ ಮಂಕಾಳ ವೈದ್ಯ

    ಕಾರವಾರ: ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ ಎಂದು ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದರು.

    ಕಾರವಾರದಲ್ಲಿ (Karwar) ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡ್ತೀವಿ. ಪಕ್ಷದ ಆದೇಶದ ಪ್ರಕಾರ ಹೇಳಿದ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡ್ತೀನಿ. ಇದುವರೆಗೂ ಎಲ್ಲಿಗೆ ಯಾರು ಹೋಗಬೇಕು ಅಂತಾ ಹೇಳಿಲ್ಲ. ಅಭ್ಯರ್ಥಿಗಳ ಆಯ್ಕೆ ಬಳಿಕ ಪ್ರಚಾರದ ಬಗ್ಗೆ ಹೇಳ್ತಾರೆ ಎಂದು ತಿಳಿಸಿದರು.‌

    ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿ ವಿಚಾರವಾಗಿ ಮಾತನಾಡಿ, ಅಧಿಕಾರಿಗಳು ವರ್ಗಾವಣೆ ಆದ ಬಳಿಕ ಬರೋದು ಹೋಗುವುದು ಸಾಮಾನ್ಯ. ಈ ಹಿಂದೆ ಎಷ್ಟೋ ತಿಂಗಳುಗಳ ಕಾಲ ಕುರ್ಚಿ ಖಾಲಿ ಇತ್ತು. ಆರ್ಡರ್ ಆಗಿ 20 ದಿನ ಆದ್ರೂ ಬರದೆ ಇರೋದು ದೊಡ್ಡ ವಿಷಯ ಅಲ್ಲ. ಈ ಹಿಂದೆ ತಿಂಗಳುಗಟ್ಟಲೇ ಕುರ್ಚಿ ಖಾಲಿ ಇತ್ತು ಎಂದರು.

    ಅವರು ಅಧಿಕಾರ ಸ್ವೀಕರಿಸಿಲ್ಲ ಅಂತಾ ಯಾರಿಗಾದ್ರೂ ಸಮಸ್ಯೆ ಆಗಿದೆಯಾ? ಜಿಲ್ಲಾಡಳಿತದ ಕೆಲಸಗಳು ಎಲ್ಲವೂ ಎಂದಿನಂತೆ ನಡೆಯುತ್ತಿವೆ. ವರ್ಗಾವಣೆ ಆದವರು ಆದಷ್ಟು ಬೇಗ ಹಾಜರಾಗಬಹುದು ಎಂದು ಹೇಳಿದರು.

  • ಮುಡಾ ಕೇಸ್ – ಸಿಎಂ ರಾಜೀನಾಮೆ ಪ್ರಮೇಯವೆ ಇಲ್ಲ ಮಂಕಾಳ ವೈದ್ಯ

    ಮುಡಾ ಕೇಸ್ – ಸಿಎಂ ರಾಜೀನಾಮೆ ಪ್ರಮೇಯವೆ ಇಲ್ಲ ಮಂಕಾಳ ವೈದ್ಯ

    ಬಳ್ಳಾರಿ: ಮುಡಾ ವಿಚಾರದಲ್ಲಿ (MUDA Case) ಸಿಎಂ ಸಿದ್ದರಾಮಯ್ಯ (Siddaramaiah) ಯಾವುದೇ ತಪ್ಪು ಮಾಡಿಲ್ಲ. ಅವರ ರಾಜೀನಾಮೆ ಪ್ರಮೇಯವೇ ಇಲ್ಲ ಎಂದು ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದ್ದಾರೆ.

    ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ನೆಪವೊಡ್ಡಿ ಬಿಜೆಪಿಗರು ಸುಖಾ ಸುಮ್ಮನೇ ಆರೋಪ ಮಾಡಿ ಪಾದಯಾತ್ರೆ ಮಾಡಿದ್ದಾರೆ. ಈ ವಿಷಯದಲ್ಲಿ ರಾಜ್ಯಪಾಲರ ನಡೆ ಖಂಡನೀಯ. ಅವರು ಕೇಂದ್ರದ ಬಿಜೆಪಿಯ ಏಜೆಂಟ್‍ನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಸ್ಸಾಂ ಲೈಂಗಿಕ ದೌರ್ಜನ್ಯ ಆರೋಪಿ ಪೊಲೀಸರಿಂದ ಎಸ್ಕೇಪ್ ವೇಳೆ ಕೆರೆಗೆ ಬಿದ್ದು ಸಾವು

    ಮುಖ್ಯಮಂತ್ರಿಯವರ ಬದಲಾವಣೆಯ ಸುಳಿವು ಸಿಕ್ಕಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆಗೆ, ಬಿಜೆಪಿಯವರು ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವಲ್ಲಿ ನಿಸ್ಸೀಮರು. 136 ಶಾಸಕರ ಬೆಂಬಲದಿಂದ ಸರ್ಕಾರ ರಚನೆಯಾಗಿದೆ. ಸ್ಪಷ್ಟ ಬಹುಮತ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪೋಲೆಂಡ್, ಉಕ್ರೇನ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಭಾರತಕ್ಕೆ ವಾಪಸ್

  • ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ

    ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ

    ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು (Congress Guarantee) ರಾಜ್ಯದ ಎಲ್ಲರಿಗೂ ಉಚಿತ ಎಂದು ಪ್ರಚಾರ ಮಾಡಿದ್ದ ಕಾಂಗ್ರೆಸ್‌ ನಾಯಕರು ಈಗ ನಿಧಾನವಾಗಿ ತಮ್ಮ ವರಸೆಯನ್ನು ಬದಲಾಯಿಸುತ್ತಿದ್ದು ಇದಕ್ಕೆ ಹೊಸದಾಗಿ ಮಂಕಾಳು ವೈದ್ಯ (Mankala Vaidya) ಸೇರ್ಪಡೆಯಾಗಿದ್ದಾರೆ.

    ಆರ್ಥಿಕ ಸ್ಥಿತಿವಂತರು ಗ್ಯಾರಂಟಿ ಯೋಜನೆಯ (Guarantee scheme) ಲಾಭ ಪಡೆಯದೇ ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

    ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಕಾಳು ವೈದ್ಯ, ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಹೆಚ್ಚು ಹೊರೆಯಾಗುತ್ತಿದೆ. ಹೀಗಾಗಿ ಆರ್ಥಿಕವಾಗಿ ಸ್ಥಿತಿವಂತರಿರುವ ಜನ ಇದರ ಲಾಭ ಪಡೆಯದೇ ಬಿಡಬೇಕು. ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ‘ಗ್ಯಾರಂಟಿ’ಗಾಗಿ ಭೂಮಿ ಮಾರಲು ಮುಂದಾಯ್ತಾ ಸರ್ಕಾರ?

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೆಲಸ ಮಾಡಿಲ್ಲ. ಜನ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್‌ ನೀಡಿದಂತೆ ಜನರ ಬಳಿಯೂ ಕಾಂಗ್ರೆಸ್‌ಗೆ ಮತ ಹಾಕುವಂತೆ ಬರೆಸಿಕೊಂಡಿದ್ದರೆ ಪಕ್ಷ ಗೆಲ್ಲುತಿತ್ತೇನೋ ಎಂದು ಹೇಳಿದರು.

    ನಮಗೆ ಮತ ಹಾಕಬೇಕು ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆ ತಂದಿಲ್ಲ. ಎಷ್ಟೋ ಜನ ಬಡವರು ವಿದ್ಯುತ್ ಬಿಲ್ ಸಹ ಕಟ್ಟಲಾಗದಿದ್ದನ್ನು ನಾವು ಕಂಡಿದ್ದೇವೆ. ಅಂತವರಿಗೆ ಸಹಾಯ ಆಗಬೇಕು, ಬಡವರಿಗೆ ಇದರಿಂದ ಸಹಾಯವಾಗಬೇಕು ಎಂದು ತಂದಿದ್ದೇವೆ ಎಂದರು‌. ಇದನ್ನೂ ಓದಿ: ಅನುದಾನ ಸಿಗುತ್ತಿಲ್ಲ – ಸರ್ಕಾರದ ವಿರುದ್ಧವೇ ಕೈ ಶಾಸಕ ನಾಡಗೌಡ ಅಸಮಾಧಾನ

  • ಬಿಜೆಪಿಯವರದ್ದು ಬೋಗಸ್ ಪ್ರೀತಿ, ಇವೆಲ್ಲಾ ನಾಟಕ ಬಂದ್ ಮಾಡಲಿ: ಮಂಕಾಳು ವೈದ್ಯ

    ಬಿಜೆಪಿಯವರದ್ದು ಬೋಗಸ್ ಪ್ರೀತಿ, ಇವೆಲ್ಲಾ ನಾಟಕ ಬಂದ್ ಮಾಡಲಿ: ಮಂಕಾಳು ವೈದ್ಯ

    ಕಾರವಾರ: ಬಿಜೆಪಿಯವರು (BJP) ರಾಜಕಾರಣಕ್ಕೋಸ್ಕರ (Politics) ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿಯವರದ್ದು ಮೂರು ಅಜೆಂಡಾವಿದೆ. ಸುಳ್ಳು ಹೇಳೋದು, ಗಲಭೆ ಮಾಡೋದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Mankala Vaidya) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಅಯೋಧ್ಯೆ (Ayodhya) ರಾಮಮಂದಿರ (Ram Mandir) ಉದ್ಘಾಟನೆ ಕಾರ್ಯಕ್ರಮದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು ಬೋಗಸ್ ಭಕ್ತಿ. ರಾಮಮಂದಿರ ಉದ್ಘಾಟನೆ ಆಗದೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ಪೂಜೆಯೇ ಆಗದೇ ಮಂತ್ರಾಕ್ಷತೆ ಹೇಗೆ ಕೊಡುತ್ತಾರೆ? ಅಕ್ಷತೆ ಕೊಟ್ಟು, ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ. ಯಾಕೆ ಮೋದಿ ಫೋಟೋ, ಕಟೌಟ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಅಕ್ಷತೆ ಕೊಡುವಲ್ಲಿ ಮೋದಿ ವಿಚಾರ ಏಕೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನ ಕರೆದು ಸಿಎಂ ಬುದ್ಧಿ ಮಾತು ಹೇಳಲಿ: ಹೆಚ್‌ಡಿಕೆ

    ಇದು ಯಾರ ದುಡ್ಡು? ಹಣ ನಾವು ಕೂಡ ಕೊಟ್ಟಿದ್ದೇವೆ. ಇದೆಲ್ಲಾ ನಾಟಕವನ್ನು ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು. ಬಿಜೆಪಿಯವರು ಸತ್ಯ ಹೇಳುವುದಿಲ್ಲ. ಸುಳ್ಳನ್ನೇ ಹೇಳುತ್ತಾರೆ. ಯಾವ ಎಲೆಕ್ಷನ್‌ನಲ್ಲೂ ಗಲಭೆ ಮಾಡದೇ ಇಲ್ಲ. ರಾಮನ ನಿಜಭಕ್ತರಾದರೇ ಹೀಗೆ ಮಾಡುವುದಿಲ್ಲ. ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ. ನಾವು ಕೂಡ ರಾಜ್ಯದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು. ಇನ್ನೂ ಬಿಕೆ ಹರಿಪ್ರಸಾದ್ ಅವರು ನೀಡಿದ ಗೋಧ್ರಾ ಹತ್ಯೆ ಹೇಳಿಕೆ ಸರಿಯಾಗಿದ್ದು, ಅವರು ಜನರಲ್ಲಿ ಜಾಗೃತಿ ಮೂಡಿಸಲು ಗೋಧ್ರಾ ಹತ್ಯೆ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬೆಂ-ಮೈ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ 688 ಕೋಟಿ ವ್ಯಯಿಸಲು ಕೇಂದ್ರ ನಿರ್ಧಾರ

  • ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    – ನಾನೂ ಶ್ರೀರಾಮನ ಭಕ್ತ ಎಂದ ಮಂಕಾಳ ವೈದ್ಯ
    – ಶ್ರೀರಾಮ ಮಂದಿರ ಕಟ್ಟಿದೋರು ನಾವು
    – ಆಮಂತ್ರಣ ನೀಡದಿದ್ರೆ ಶ್ರೀರಾಮ ನೋಡಿಕೊಳ್ತಾನೆ ಎಂದ ಸಚಿವ

    ಕಾರವಾರ: ಅಯೋಧ್ಯೆಯ ಶ್ರೀರಾಮ ಮಂದಿರ (Ram Mandir) ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಬಿಜೆಪಿಯವರಿಗೆ ನಿಜವಾದ ರಾಮಭಕ್ತಿಯಿದ್ದರೆ ಪಕ್ಷಾತೀತವಾಗಿ ಆಹ್ವಾನ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ (Mankala Vaidya) ಒತ್ತಾಯಿಸಿದ್ದಾರೆ.

    ಕಾರವಾರದಲ್ಲಿ (Karwar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಶ್ರೀರಾಮನ ಭಕ್ತ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ಆಹ್ವಾನ ಬಂದರೂ ಬಾರದಿದ್ದರೂ ಅಯೋಧ್ಯೆಗೆ (Ayodhya) ತೆರಳುತ್ತೇನೆ. ಜ.22ಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಆಗ ಆಗದಿದ್ದರೆ ನಂತರವಾದರೂ ತೆರಳಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಅಕ್ಕಿ, ತರಕಾರಿ, ಸಾಂಬಾರ್ ಪದಾರ್ಥಗಳ ಅರ್ಪಣೆ – ಪ್ರಾಣಪ್ರತಿಷ್ಠೆಗೆ ಶ್ರೀರಾಮ ಭಕ್ತರ ಕಾಣಿಕೆ

    ರಾಮನ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ರಾಮನೇ ನೋಡಿಕೊಳ್ಳುತ್ತಾನೆ. ನಮಗೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಸಂಸ್ಕೃತಿ. ದುಡ್ಡು ನಮ್ಮದು ರಾಮಮಂದಿರ ಕಟ್ಟಿದೋರು ನಾವು, ಸರ್ಕಾರದ ದುಡ್ಡು, ಜನರ ದುಡ್ಡು ಇದು. ಆಮಂತ್ರಣ ಪತ್ರ ನೀಡದಿದ್ರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ನಡೆಸ್ತಿದ್ದಾರೆ ಎಂದರ್ಥ, ರಾಮ ನೋಡಿಕೊಳ್ತಾನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಹೋಗಲು ಹಿಂದೇಟು ಹಾಕ್ತಿದ್ದವರು ಈಗ ಆಹ್ವಾನ ಬಯಸ್ತಿದ್ದಾರೆ: ಯೋಗಿ ಆದಿತ್ಯನಾಥ್‌

  • ಕಾಂಗ್ರೆಸ್‍ನವರಿಗೆ ಏನೂ ಮಾಡಲು ಸಾಧ್ಯವಿಲ್ಲ, ಜೆಡಿಎಸ್‍ನೊಂದಿಗೆ ಗೆಲ್ಲಲು ಹೋಗಿದ್ದಾರೆ: ಮಂಕಾಳು ವೈದ್ಯ ಯಡವಟ್

    ಕಾಂಗ್ರೆಸ್‍ನವರಿಗೆ ಏನೂ ಮಾಡಲು ಸಾಧ್ಯವಿಲ್ಲ, ಜೆಡಿಎಸ್‍ನೊಂದಿಗೆ ಗೆಲ್ಲಲು ಹೋಗಿದ್ದಾರೆ: ಮಂಕಾಳು ವೈದ್ಯ ಯಡವಟ್

    ಕಾರವಾರ: ಭಾಷಣ ಮಾಡುವಾಗ ಕಾಂಗ್ರೆಸ್‍ನವರಿಗೆ (Congress) ಏನೂ ಮಾಡಲು ಸಾಧ್ಯವಾಗುವುದಿಲ್ಲ, ಜೆಡಿಎಸ್ (JDS) ಜೊತೆ ಸೇರಿ ಗೆಲ್ಲಲು ಹೋಗಿದ್ದಾರೆ ಎಂದು ಹೇಳುವ ಮೂಲಕ ಮೀನುಗಾರಿಕಾ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Mankala Vaidya) ಯಡವಟ್ ಮಾಡಿಕೊಂಡಿದ್ದಾರೆ.

    ಮುರ್ಡೇಶ್ವರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಒಟ್ಟಾದರೂ ನಮಗೆ ಏನೂ ತೊಂದರೆ ಆಗುವುದಿಲ್ಲ. ನಾವು ಎಲ್ಲಾ ರೀತಿಯಲ್ಲೂ ತಯಾರಾಗಿದ್ದೇವೆ ಎಂದು ಬಾಯಿತಪ್ಪಿ ಹೇಳಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿ, ಕೂಡಲೇ ಎಚ್ಚೆತ್ತುಕೊಂಡು ಕಾಂಗ್ರೆಸ್ ಯಾರೇ ಒಟ್ಟಾದರೂ ಗೆಲ್ಲಲಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ವಾವಲಂಬಿ ಭಾರತವನ್ನು ರಚಿಸಲು ಬದ್ಧರಾಗಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

    ಮುಂದುವರೆದು ಬಿಜೆಪಿ (BJP) ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಹಿಂದುತ್ವದ ಅಜೆಂಡಾ ಸೃಷ್ಟಿ ಮಾಡಿದವರು. ಹಿಂದೂಗಳು ಹಿಂದುತ್ವ ಅಜೆಂಡಾವನ್ನು ಯಾವ ಪಕ್ಷಕ್ಕೂ ಮಾರಿಕೊಂಡಿಲ್ಲ. ಹಿಂದೂಗಳು ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೆ ಹೇಗೆ ಬದುಕಬೇಕು, ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಗೊತ್ತಿದೆ. ನಾವು ಸಹ ಹಿಂದೂಗಳೇ ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ಬಿಜೆಪಿಯವರು ರಾಜಕಾರಣಕ್ಕೆ ಮಾತ್ರ ಹಿಂದುತ್ವ ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

    ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಸ್ತಾಪಿಸಿದ ಅವರು ಬಿಜೆಪಿಯವರು ಚುನಾವಣೆ ಬಂದ ಸಂದರ್ಭದಲ್ಲಿ ಏನಾದರೂ ಗಲಾಟೆ ಗೌಜು ಮಾಡಿಕೊಂಡು ರಾಜಕಾರಣ ಮಾಡುವುದು ಬಿಟ್ಟರೆ ಬೇರೆ ಯಾವ ನೈತಿಕತೆಯೂ ಅವರಿಗಿಲ್ಲ. ನೈತಿಕತೆ ಇದ್ದಿದ್ದರೇ ಇಂತಹ ಕ್ಷುಲ್ಲಕ ಕೆಲಸ ಮಾಡಲು ಹೋಗುತ್ತಿರಲಿಲ್ಲ. ಅಂತಹ ನೀಚ ಕೆಲಸ ಮಾಡಿದವರು ಬಿಜೆಪಿಗರು. ನಮ್ಮ ಕ್ಷೇತ್ರದಲ್ಲೂ 2018 ರಲ್ಲಿ ಅವರೇ ಕೊಲೆ ಮಾಡಿ, ಅವರೇ ಕೇಸ್ ಮಾಡಿ ಅವರೇ ಸಿಬಿಐಗೆ ಕೊಡಬೇಕು ಎಂದು ಕೊಟ್ಟು ಅವರದ್ದೇ ಸಿಬಿಐ ಸಹಜ ಸಾವು ಎಂದು ವರದಿ ಕೊಟ್ಟಿದೆ. ಇದಕ್ಕಿಂತ ಬೇರೆಯ ಉದಾಹರಣೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.

    ಲಿಂಗಾಯಿತ ಸಿಎಂ ವಿಚಾರವಾಗಿ ಬಸವರಾಜ್ ರಾಯರೆಡ್ಡಿ ಹೇಳಿಕೆ ಅವರ ವಯಕ್ತಿಕವಾದದ್ದು. ಇದು ಕಾಂಗ್ರೆಸ್‍ಗೆ ಸಂಬಂಧ ಇಲ್ಲ. ರಾಜ್ಯದ ಎಲ್ಲಾ ಸಮುದಾಯವನ್ನು ಕಾಂಗ್ರೆಸ್ ಸಮಾನವಾಗಿ ನೋಡಿಕೊಂಡು ಕೆಲಸ ಮಾಡಿದೆ ಎಂದರು.

    ಬಿಜೆಪಿಯಿಂದ ಕಾಂಗ್ರೆಸ್‍ಗೆ ಬರುವವರ ವಿಚಾರವಾಗಿ, ಬಿಜೆಪಿಯ ಕತೆ ಮುಗಿಯಿತು ಎಂದು ಹೇಳಿ ಬರುವವರಿಗೆ ನಮ್ಮ ಸ್ವಾಗತವಿದೆ. ನಮ್ಮ ತತ್ವ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಯಾವಾಗಲೂ ಸ್ವಾಗತವಿದೆ. ನಾವು ಆಪರೇಷನ್ ಮಾಡುವವರಲ್ಲ. ಹೆಬ್ಬಾರ್ ಅವರಿಗೆ ಇವತ್ತೇ ನಮ್ಮ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ಅವರು ಆಪರೇಷನ್ ಮಾಡಿಕೊಂಡು ಹೋಗಿದ್ದರು. ಅವರಿಗೆ ಅಲ್ಲಿ ಆಪರೇಷನ್ ಸಕ್ಸಸ್ ಆಗಲಿಲ್ಲ ನಾವು ಇಲ್ಲಿ ಮೆಡಿಸಿನ್ ಕೊಟ್ಟು ಸರಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಹರಿಸದಂತೆ ಮನವಿ – ಗಜೇಂದ್ರ ಸಿಂಗ್ ಭೇಟಿಯಾದ ರಾಜ್ಯ ರೈತರ ನಿಯೋಗ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]