Tag: Mankal Vaidya

  • ಇನ್ಮುಂದೆ ಗೋಹತ್ಯೆ ಏನಾದ್ರೂ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕ್ತೀವಿ: ಮಂಕಾಳು ವೈದ್ಯ

    ಇನ್ಮುಂದೆ ಗೋಹತ್ಯೆ ಏನಾದ್ರೂ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕ್ತೀವಿ: ಮಂಕಾಳು ವೈದ್ಯ

    ಕಾರವಾರ: ಇನ್ಮುಂದೆ ಗೋಹತ್ಯೆ (Cow Slaughter) ಏನಾದ್ರೂ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕ್ತೀವಿ ಎಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ (Mankal Vaidya) ಗುಡುಗಿದ್ದಾರೆ.

    ಹೊನ್ನಾವರದ ಸಾಲಕೋಡು ಅರಣ್ಯದಲ್ಲಿ ಗರ್ಭ ಧರಿಸಿದ ಗೋಹತ್ಯೆ ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಹತ್ಯೆ ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲೂ ಜಿಲ್ಲೆಯಲ್ಲಿ ಗೋಹತ್ಯೆ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಮನೆಯಲ್ಲಿ ಪಿ.ರಾಜೀವ್ ಗುಪ್ತ ಮೀಟಿಂಗ್

    ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ದಿನಕರ ಶೆಟ್ಟಿ ಈಗ ಏನು ದಿನಕರ ಖಾನ್ ಆಗಿದ್ದಾರಾ? ದಿನಕರ ಶೆಟ್ಟಿ ಅವರೇ ನಮ್ಮ ಸಿಎಂ ಬಗ್ಗೆ, ಸಚಿವರ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡಬೇಡಿ. ಗೋವುಗಳ ಹಂತಕರನ್ನು ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ. ಆರೋಪಿಗಳನ್ನ ಕೂಡಲೇ ಬಂಧಿಸಿ ಶಿಕ್ಷೆ ನೀಡುವಂತೆ ಹೇಳಿದ್ದೇನೆ. ಪೊಲೀಸರು ಆರೋಪಿಗಳನ್ನ ಬಂಧಿಸಿ ಅದರ ಮುಂದೆ ಇನ್ನೊಂದ ಹೆಜ್ಜೆ ಇಟ್ಟಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ಗೋವು ಕಳ್ಳತನ, ಗೋಹತ್ಯೆ ಆಗಬಾರದು. ಗೋಹತ್ಯೆ ಏನಾದ್ರೂ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡ ಹಾಕ್ತೀವಿ ಎಂದು ಎಚ್ಚರಿಸಿದ್ದಾರೆ.

    ದುಡಿದುಕೊಂಡು ತಿನ್ನೋಕೆ ಬಹಳಷ್ಟು ದಾರಿ ಇದೆ. ಬದುಕಿ ಜೀವನ ಮಾಡಿ, ಗೋಹತ್ಯೆ ಮಾಡಿ ಜೀವನ ಮಾಡುವುದನ್ನ ನಿಲ್ಲಿಸಿ. ಈ ಕೃತ್ಯದ ಹಿಂದೆ ಯಾವುದೇ ಧರ್ಮದವರಿದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ವಾರದಲ್ಲಿ ಪಕ್ಷದ ಗೊಂದಲಗಳಿಗೆ ತೆರೆ – ಮತ್ತೆ ರಾಜ್ಯಾಧ್ಯಕ್ಷನಾಗಿ ಪಕ್ಷ ಬಲಪಡಿಸ್ತೇನೆ : ವಿಜಯೇಂದ್ರ ವಿಶ್ವಾಸ

  • ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟಿಲ್ಲ – 8.17 ಲಕ್ಷ ಬಿಲ್ ಬಾಕಿ ಉಳಿಸಿಕೊಂಡ ಮಂಕಾಳ ವೈದ್ಯ

    ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟಿಲ್ಲ – 8.17 ಲಕ್ಷ ಬಿಲ್ ಬಾಕಿ ಉಳಿಸಿಕೊಂಡ ಮಂಕಾಳ ವೈದ್ಯ

    ಕಾರವಾರ: ರಾಜ್ಯ ಸರ್ಕಾರದ ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಘಟನೆ ಕಾರವಾರದಲ್ಲಿ (Karwar) ನಡೆದಿದೆ.

    ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು (Mankal Vaidya) ಹೆಸ್ಕಾಂಗೆಗೆ ಒಂದು ವರ್ಷದಿಂದ ವಿದ್ಯುತ್ ಬಿಲ್ ತುಂಬದೇ ಬಾಕಿದಾರರ ಪಟ್ಟಿ ಸೇರಿದ್ದಾರೆ. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಸಚಿವರು ಭಟ್ಕಳದ ತಮ್ಮ ಸ್ವಾಮ್ಯದ ಮನೆ, ಶಾಲೆ ಕಟ್ಟಡಗಳು, ಮಗಳ ಹೆಸರಿನಲ್ಲಿ ಇರುವ ಕಟ್ಟಡಗಳು ಸೇರಿದಂತೆ ಬರೋಬ್ಬರಿ 8,17,415 ರೂ.ಗಳಷ್ಟು ವಿದ್ಯುತ್ ಬಿಲ್ ಭರಣ ಮಾಡುವುದನ್ನು ಬಾಕಿ ಇರಿಸಿಕೊಂಡಿದ್ದಾರೆ.

    ಭಟ್ಕಳದ ನಾಗೇಶ್ ನಾಯ್ಕ ಎಂಬವರು ಈ ಕುರಿತು ಮಾಹಿತಿ ಹಕ್ಕಿನಲ್ಲಿ ಹೆಸ್ಕಾಂ ನಿಂದ ಮಾಹಿತಿ ಪಡೆದಿದ್ದು, ಕಳೆದ ನವಂಬರ್‌ನಿಂದ ಒಂದು ವರ್ಷದ ಮಾಹಿತಿ ಕೇಳಿದ್ದರು. ಭಟ್ಕಳದ ಹೆಸ್ಕಾಂ ಇಲಾಖೆ ಈ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿದಾರರಿಗೆ ಮಾಹಿತಿ ನೀಡಿದ್ದು, ಇದರಲ್ಲಿ ಒಂದು ವರ್ಷದಲ್ಲಿ 8,17,415 ರೂ.ಗಳಷ್ಟು ಹೆಸ್ಕಾಂಗೆ ವಿದ್ಯುತ್ ಬಿಲ್ ಬಾಕಿ ಇದೆ. ಅದರಲ್ಲಿ ಸಚಿವ ಮಂಕಾಳು ವೈದ್ಯ ಹಾಗೂ ಅವರ ಪುತ್ರಿ ಬೀನಾ ಮಂಕಾಳು ವೈದ್ಯರ ಸ್ವಾಮ್ಯದ ಕಟ್ಟಡ, ಕಚೇರಿ, ಮನೆಗಳು ಸೇರಿವೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಾಹಿತ್ಯ ಹಬ್ಬ – ಸಾರ್ವಜನಿಕರಿಗೆ ಎಂಟ್ರಿ: ಯು‌.ಟಿ ಖಾದರ್

  • ಸೆಟ್ಲ್‌ಮೆಂಟ್‌ ಆರೋಪ ಮಾಡಿದ್ದ ಸಚಿವ ಮಂಕಾಳು ವೈದ್ಯ – ಉ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬದಲಾವಣೆ

    ಸೆಟ್ಲ್‌ಮೆಂಟ್‌ ಆರೋಪ ಮಾಡಿದ್ದ ಸಚಿವ ಮಂಕಾಳು ವೈದ್ಯ – ಉ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬದಲಾವಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಗುತ್ತಿಗೆ ಕಂಪನಿಯೊಂದಿಗೆ ಸೆಟ್ಲ್‌ಮೆಂಟ್‌ ಮಾಡಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬದಲಾವಣೆ ಮಾಡಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಎಸ್.ಕಲ್ಪನಾ ಆದೇಶ ಹೊರಡಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರ ಸ್ಥಾನಕ್ಕೆ ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷಮಾ ಗೋಡಬೋಲೆ ಅವರನ್ನು ನೇಮಿಸಲಾಗಿದೆ.

    ಸಚಿವರ ಆರೋಪ ಏನಾಗಿತ್ತು?
    ನ.1 ರಂದು ಕಾರವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ರಾಷ್ಟ್ರೀಯ ಹೆದ್ದಾರಿ 766E ಕಾಮಗಾರಿ ನಿಮಿತ್ತ ಶಿರಸಿ-ಕುಮಟಾ ಹೆದ್ದಾರಿ ಬಂದ್ ಮಾಡುವ ಕುರಿತು ಮಾತನಾಡಿ, ಇಲ್ಲಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬರಿದ್ದಾರೆ. ರಿತೇಶ್ ಕುಮಾರ್ ಸಿಂಗ್ ಎಂದು ಇಲ್ಲಿ ಉಸ್ತುವಾರಿನೋ ಅಥವಾ ಆರ್‌ಎನ್‌ಎಸ್ , IRB ಕಂಪನಿಗಳ ಸೆಟ್ಲ್‌ಮೆಂಟ್‌ಗೆ ಬರುತ್ತಾರೋ ಗೊತ್ತಿಲ್ಲ. ನಮ್ಮ ಯಾವ ಮೀಟಿಂಗ್‌ಗೂ ಬಂದಿಲ್ಲ.

    ಅವರು ಬಂದ್ ಮಾಡಿಸುವಂತೆ ಮಾಡಲು ಕೊಟ್ಟು ಹೋಗಿದ್ದಾರೆ. ಕಳೆದ ತಿಂಗಳು ಬಂದ್ ಆಗಬೇಕಿತ್ತು. ನ.1 ರಲ್ಲಿ ಬಂದ್ ಮಾಡಿಸುವಂತೆ ಕೊಟ್ಟಿದ್ದಾರೆ. ಉಸ್ತುವಾರಿ ಎಂದು ಇದ್ದಾರೆ. ನಮ್ಮಲ್ಲಿ ಯಾವುದು ಉಸ್ತುವಾರಿ ಎಂದು ನೋಡಬೇಕು. ಸೆಟ್ಲ್‌ಮೆಂಟ್‌ ಉಸ್ತುವಾರಿಯೋ ಏನು ಎಂದು ತಿಳಿದುಕೊಳ್ತೇನೆ. ಯಾವುದೇ ಕಾರಣಕ್ಕೆ ಶಿರಸಿ-ಕುಮಟಾ ರಸ್ತೆ ಬಂದ್ ಆಗಬಾರದು. ಕಂಪನಿಗೆ 3 ವರ್ಷ ಅಗ್ರಿಮೆಂಟ್ ಮಾಡಿ ಕೊಟ್ಟಿದ್ರೂ ಕೆಲಸ ಆಗಲಿಲ್ಲ.

    ಪುನಃ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಯಾವುದೇ ಅಗ್ರಿಮೆಂಟ್‌ನಲ್ಲಿ ಬಂದ್ ಮಾಡಿ ಕೊಡಬೇಕು ಎಂದು ಇಲ್ಲ. ಸಂಸದರು ಬಂದ್ ಮಾಡಬೇಕು ಎಂದು ಹೇಳಿತ್ತಿದ್ದಾರೆ. ಅವರ ಆಸಕ್ತಿ ಏನಿದೆ ಗೊತ್ತಿಲ್ಲ. ನಮ್ಮ ಶಾಸಕರೂ ಬೆಂಬಲ ಕೊಡ್ತಾ ಇದ್ದಾರೆ. ಅವರು ಆ ರೀತಿ ಬೆಂಬಲ ಕೊಡುತ್ತಿರುವುದರಿಂದ ನಾನೂ ಸುಮ್ಮನಿದ್ದೇನೆ ಎಂದ ಸಚಿವ ಮಂಕಾಳು ವೈದ್ಯ ಹೇಳಿದ್ದರು.

    ಇದರ ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಸಚಿವರ ಯಾವುದೇ ಸಭೆಗೆ ಹಾಜುರಾಗದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ಕರ್ತವ್ಯದ ಬಗ್ಗೆ ಉಸ್ತುವಾರಿ ಸಚಿವರೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಘಟನೆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಡುವೆ ವೈಮನಸ್ಸು ಉಂಟಾಗಿತ್ತು. ಇದೀಗ ಕಾರ್ಯದರ್ಶಿ ಬದಲಾವಣೆ ಸಹ ಮಾಡಲಾಗಿದೆ.

  • ಕರ್ನಾಟಕ-ಲಕ್ಷದ್ವೀಪ ವ್ಯಾಪಾರ ಮಾರ್ಗ ಪುನರುಜ್ಜೀವನಗೊಳಿಸಲು ಕೆಎಂಬಿ ಪೂರ್ವ ಭಾವಿಯಾಗಿ ಕೆಲಸ ಮಾಡಲಿದೆ: ಸಚಿವ ವೈದ್ಯ

    ಕರ್ನಾಟಕ-ಲಕ್ಷದ್ವೀಪ ವ್ಯಾಪಾರ ಮಾರ್ಗ ಪುನರುಜ್ಜೀವನಗೊಳಿಸಲು ಕೆಎಂಬಿ ಪೂರ್ವ ಭಾವಿಯಾಗಿ ಕೆಲಸ ಮಾಡಲಿದೆ: ಸಚಿವ ವೈದ್ಯ

    ಬೆಂಗಳೂರು : ಕರ್ನಾಟಕ (Karnataka) ಮತ್ತು ಲಕ್ಷದ್ವೀಪ (Lakshadweepa) ನಡುವಿನ ಐತಿಹಾಸಿಕ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿ (KMB) ಪೂರ್ವಭಾವಿಯಾಗಿ ಕೆಲಸ ಮಾಡುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ಎಸ್. ವೈದ್ಯ (Mankal Vaidya) ತಿಳಿಸಿದರು.

    ಲಕ್ಷದ್ವೀಪದ ಕವರತ್ತಿಗೆ (Kavaratti) ಭೇಟಿ ನೀಡಿದ ಸಚಿವ ಮಂಕಾಳ್ ಎಸ್. ವೈದ್ಯ ಅವರು, ಕಡಲ ವಲಯದಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳ ಬಗ್ಗೆ ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿ, ಮಾತನಾಡಿದರು.

    ಮಂಗಳೂರಿನಲ್ಲಿ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯನ್ನು ಅಭಿವೃದ್ಧಿಪಡಿಸುವ ಯೋಜನೆಯ ಪ್ರಗತಿಯನ್ನು ವೇಗಗೊಳಿಸಲಾಗುತ್ತಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಸಾಗರಮಾಲಾ ಯೋಜನೆಯಡಿ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯ ಬಿಡುವ ಮಾತೇ ಇಲ್ಲ: ಎಸ್ಎನ್ ನಾರಾಯಣಸ್ವಾಮಿ

    ಸಾಗಾರಮಾಲಾ ಯೋಜನೆಯಿಂದ ಲಕ್ಷದ್ವೀಪ ದ್ವೀಪಗಳ ಮುಖ್ಯ ಭೂಭಾಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ.

    ತರುವಾಯ, ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಎದುರಿಸುತ್ತಿರುವ ಪ್ರಸ್ತುತ ನಿರ್ಬಂಧಗಳು ಮತ್ತು ಸವಾಲುಗಳನ್ನು ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಈ ಸವಾಲುಗಳನ್ನು ಪರಿಹರಿಸಲು, ರಾಜ್ಯ ಸಚಿವರಾದ ಮಂಕಾಳ್ ಎಸ್. ವೈದ್ಯ ಅವರು ಮಾತನಾಡಿ, ಕರ್ನಾಟಕ ರಾಜ್ಯದಿಂದ ಲಕ್ಷದ್ವೀಪ ದ್ವೀಪಗಳಿಗೆ ಹಾಲು ಉತ್ಪನ್ನಗಳು, ಔಷಧಿಗಳು ಮತ್ತು ತಾಜಾ ಉತ್ಪನ್ನಗಳಂತಹ ಅಗತ್ಯ ಸರಕುಗಳ ಸಾಗಣೆಯನ್ನು ಹೆಚ್ಚಿಸಲು ಕರ್ನಾಟಕ ಪ್ರಬಲ್ಯವಾಗಿದೆ ಎಂದು ತಿಳಿಸಿದರು.

    ಹೆಚ್ಚುವರಿಯಾಗಿ, ವ್ಯಾಪಾರ ಮಾರ್ಗಗಳನ್ನು ಮತ್ತಷ್ಟು ಸುಗಮಗೊಳಿಸಲು ಹಳೆಯ ಮಂಗಳೂರು ಬಂದರು ಸಮೀಪದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಯುಟಿಎಲ್ಎಗೆ ನೆರವು ನೀಡುವಂತೆ ಸಚಿವ ಮಂಕಾಳ್ ಎಸ್‌ ವೈದ್ಯ ಅವರು ಮನವಿ ಮಾಡಿಕೊಂಡರು.

    ಈ ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್‌ ಪುರ ಹಾಗೂ ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು, ರಾಜ್ಯ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

  • ನಾನು ಬಹಳ ದುಬಾರಿ.. 50, 100 ಕೋಟಿಗೆಲ್ಲ ಸೇಲ್ ಆಗಲ್ಲ: ಸಚಿವ ಮಂಕಾಳ್ ವೈದ್ಯ

    ನಾನು ಬಹಳ ದುಬಾರಿ.. 50, 100 ಕೋಟಿಗೆಲ್ಲ ಸೇಲ್ ಆಗಲ್ಲ: ಸಚಿವ ಮಂಕಾಳ್ ವೈದ್ಯ

    ಕಾರವಾರ: ನಾನು ಬಹಳ ದುಬಾರಿ ಇದ್ದೇನೆ. 50, 100 ಕೋಟಿಗೆಲ್ಲ ನಾನು ಸೇಲ್ ಆಗಲ್ಲ. ಹಾಗಾಗಿ ನನ್ನನ್ನು ಬಿಜೆಪಿಯಯವರು ಸಂಪರ್ಕ ಮಾಡಿಲ್ಲ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಮಾತನಾಡಿದ ಅವರು, 2,500 ಕೋಟಿಗೆ ಸಿಎಂ ಹುದ್ದೆ, 100 ಕೋಟಿಗೆ ಶಾಸಕ ಸ್ಥಾನ ಬಿಜೆಪಿಯ ಸಂಪ್ರದಾಯ. ಈ ಮಾತಿನ ಹಿಂದೆ ಬಿಜೆಪಿಯ ನಾಯಕರೇ ಹೇಳಿದ್ರು. ಹಾಗಾಗಿ, ದುಡ್ಡಿನಲ್ಲಿ ಮತ್ತೆ ಸರ್ಕಾರ ಮಾಡುವ ಕನಸು ಕಾಣುತ್ತಿದ್ದಾರೆ. ನನಗಂತೂ ಇದುವರೆಗೂ ಬಿಜೆಪಿ ಯಾವ ನಾಯಕರೂ ಸಂಪರ್ಕ ಮಾಡಿಲ್ಲ ಎಂದರು.

    ಕೋವಿಡ್ ಹಗರಣ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಅಥವಾ ದೇಶದಲ್ಲಿ ವಸ್ತುವನ್ನ ಖರೀದಿ ಮಾಡಬೇಕಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರದಲ್ಲಿ ವಿದೇಶದಿಂದ ವಸ್ತು ಖರೀದಿ ಮಾಡಿದ್ದಾರೆ. ಇಲ್ಲಿ ರೇಟ್ 350 ರೂ. ಇಂಪೋರ್ಟ್ ರೇಟ್, 350 ರೂ. ಸ್ವದೇಶಿ ಎಂದು ಬಿಜೆಪಿಗರು ದೊಡ್ಡದಾಗಿ ಹೇಳುತ್ತಾರೆ. ಇದಕ್ಕಿಂತ ಪ್ರೂಫ್ ಏನು ಬೇಕು. ಈ ಹಗರಣದ ನೇರ ಕೈವಾಡ ಅಂದಿನ ಬಿಜೆಪಿ ಸರ್ಕಾರದ ಸಿಎಂ ಹಾಗೂ ಸಚಿವರಾಗಿದ್ದ ಶ್ರೀರಾಮುಲು, ಅದನ್ನು ಮುಚ್ಚಿಹಾಕಲು ಸುಧಾಕರ್‌ಗೆ ಸಚಿವರನ್ನಾಗಿ ಮಾಡಿದರು. ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

    ವಕ್ಛ್ ಬಗ್ಗೆ ಮಾತನಾಡಿವ ಬಿಜೆಪಿಗರು ಈ ಹಿಂದೆ ಸಿಎಂ ಆಗಿದ್ದ ಬೊಮ್ಮಾಯಿ ವಕ್ಛ್ ಆಸ್ತಿ ಯಾರಾದರು ದುರುಪಯೋಗ ಮಾಡಿಕೊಂಡರೆ ದೇವರಿಗೆ ಅನ್ಯಾಯ ಮಾಡಿದಂತೆ ಎಂದರು. ಈಗ ವಕ್ಛ್ ಆಸ್ತಿ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ದುರುಪಯೋಗ ಆಗಿದ್ದರೆ ಸರಿಪಡಿಸುತ್ತೇನೆ. ಎಲ್ಲೂ ದುರುಪಯೋಗ ಆಗದಿದ್ದರೆ ಇವರು ಹೇಳುವುದು ಸುಳ್ಳು ಎಂದು ತರಾಟೆಗೆ ತೆಗೆದುಕೊಂಡರು.

  • ಕರ್ನಾಟಕ ಸರ್ಕಾರ ಆರ್ಥಿಕವಾಗಿ ಸುಭದ್ರ.. ಗ್ಯಾರಂಟಿ ಯೋಜನೆಗೆ ಹಣದ ಕೊರತೆ ಇಲ್ಲ: ಸಚಿವ ಮಂಕಾಳು ವೈದ್ಯ

    ಕರ್ನಾಟಕ ಸರ್ಕಾರ ಆರ್ಥಿಕವಾಗಿ ಸುಭದ್ರ.. ಗ್ಯಾರಂಟಿ ಯೋಜನೆಗೆ ಹಣದ ಕೊರತೆ ಇಲ್ಲ: ಸಚಿವ ಮಂಕಾಳು ವೈದ್ಯ

    ಕಾರವಾರ: ಗ್ಯಾರಂಟಿ ಯೋಜನೆ ಸರ್ಕಾರ ಹಾಗೂ ‌ಡಿ.ಕೆ.ಶಿವಕುಮಾರ್ ಅವರ ಕನಸ್ಸಿನ‌ ಯೋಜನೆ. ಯಾವ ಗ್ಯಾರಂಟಿಯನ್ನೂ ಸರ್ಕಾರ ಬಂದ್ ಮಾಡುವುದಿಲ್ಲ ಎಂದು ಸಚಿವ ಮಂಕಾಳು ವೈದ್ಯ (Mankal Vaidya) ತಿಳಿಸಿದರು.

    ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಜನರಿಗೆ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ. ಸರ್ಕಾರದ ಬಳಿ ಗ್ಯಾರಂಟಿಗೆ ಹಣದ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 17 ಕೆರೆ ತುಂಬಿಸಿದವ್ರನ್ನ ಭಗೀರಥ ಅನ್ನೋದಾದ್ರೆ 107 ಕೆರೆ ತುಂಬಿಸಿದ ನನ್ನನ್ನು ಏನಂತೀರಿ? – ಹೆಚ್‌ಡಿಕೆ

    ಗ್ಯಾರಂಟಿಗಾಗಿ ಬಜೆಟ್‌ನಲ್ಲಿ ತಗಲುವುದು ಶೇ.20 ರಷ್ಟು ಹಣ ಮಾತ್ರ. ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತಂದ ಬಳಿಕ ಸರ್ಕಾರ ದಿವಾಳಿ ಆಗಿಲ್ಲ. ಬೇರೆ ರಾಜ್ಯದಲ್ಲಿ ಜಾರಿಗೆ ತರುವಾಗ ಬಜೆಟ್ ನೊಡುವಂತೆ ಖರ್ಗೆಯವರು ಹೇಳಿದ್ದಾರೆ. ಕರ್ನಾಟಕ ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದೆ. ನಮ್ಮ ಸರ್ಕಾರದ 20% ಬಜೆಟ್ ಮಾತ್ರ ಗ್ಯಾರಂಟಿಗೆ ಬಳಸುತ್ತಿದ್ದೇವೆ. ಉಳಿದ ಹಣದಲ್ಲಿ ಎಂದಿನಂತೆ ರಾಜ್ಯದ ಅಭಿವೃದ್ದಿ ಕಾರ್ಯ ಮುಂದುವರೆದಿದೆ ಎಂದರು.

  • ಮಂಗಳೂರು, ಕಾರವಾರದಲ್ಲಿ ಬಂದರು ನಿರ್ಮಾಣ – 13 ಐಲ್ಯಾಂಡ್ ಅಭಿವೃದ್ಧಿ: ಮಂಕಾಳ್ ವೈದ್ಯ

    ಮಂಗಳೂರು, ಕಾರವಾರದಲ್ಲಿ ಬಂದರು ನಿರ್ಮಾಣ – 13 ಐಲ್ಯಾಂಡ್ ಅಭಿವೃದ್ಧಿ: ಮಂಕಾಳ್ ವೈದ್ಯ

    ಬೆಂಗಳೂರು: ಮಂಗಳೂರು (Mangaluru) ಮತ್ತು ಕಾರವಾರದಲ್ಲಿ (Karawara) ಬಂದರು ನಿರ್ಮಾಣ ಮಾಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಮಂಕಾಳ್ ವೈದ್ಯ (Mankal Vaidya) ತಿಳಿಸಿದ್ದಾರೆ.

    ಉತ್ತರ ಕನ್ನಡ,  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ಮಂಕಾಳ್ ವೈದ್ಯ, ಕಾರವಾರ, ಮಂಗಳೂರಿನಲ್ಲಿ ಬಂದರು ಮಾಡಲು ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ. 1 ಕೋಟಿ ರೂ. ನಿಂದ 1 ಸಾವಿರ ಕೋಟಿ ರೂ.ನಲ್ಲಿ ಬಂದರು (Port) ಮಾಡಬಹುದು. ಯಾವ ಮಾದರಿಯಲ್ಲಿ ಬಂದರು ಮಾಡಬೇಕು ಎಂದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಮಾರುಕಟ್ಟೆ ಮತ್ತು ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ಬಂದರು ಮಾಡಲು ಚರ್ಚೆಯಾಗಿದೆ. ಆದಷ್ಟು ಬೇಗ ಇದಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡುವುದಾಗಿ ತಿಳಿಸಿದರು.

    ಮೀನುಗಾರರಿಗೆ 200 ಲೀಟರ್ ಡೀಸೆಲ್ ಕೊಡುವುದಾಗಿ ಹೇಳಿದ್ದೇವೆ ಅದನ್ನು ಕೊಡುತ್ತೇವೆ. ಮೀನುಗಾರರಿಗೆ ಸೀಮೆಎಣ್ಣೆ ಬಗ್ಗೆ ಸಮಸ್ಯೆ ‌ಇತ್ತು. ಇದರಿಂದ ಮೀನುಗಾರಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ 10 ತಿಂಗಳು ಬಿಳಿ ಸೀಮೆಎಣ್ಣೆಯನ್ನು ಸರ್ಕಾರವೇ ಖರೀದಿ ಮಾಡಿ 35 ರೂಪಾಯಿ ಸಬ್ಸಿಡಿ ದರದಲ್ಲಿ ಮೀನುಗಾರಿಕೆ (Fishing) ಮಾಡುವವರಿಗೆ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ಕೊಡುತ್ತಿಲ್ಲ. ಹೀಗಾಗಿ ದೇಶದಲ್ಲಿ ‌ಮೊದಲ ಬಾರಿಗೆ ನಾವೇ ಸೀಮೆಎಣ್ಣೆ ‌ಕೊಡುತ್ತಿದ್ದೇವೆ. ಸರ್ಕಾರ 300 ಲೀಟರ್ ನೀಡಲು ಸಿದ್ದ ಎಂದು ಹೇಳಿದರು.  ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಿಂದೂಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ರಿಷಿ ಸುನಾಕ್‌, ಪತ್ನಿ ಅಕ್ಷತಾ ಮೂರ್ತಿ

    ಬೆಂಗಳೂರಿನಲ್ಲಿ ನವೆಂಬರ್ 21 ರಂದು ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು 8 ಲಕ್ಷ ಮೌಲ್ಯದ ಮೀನುಗಾರರಿಗೆ ಮೀನು ಮಾರಾಟ ಮಾಡುವ ಗಾಡಿ ಕೊಡುತ್ತಿದ್ದೇವೆ. 300 ಗಾಡಿ ಪೈಕಿ ಬೆಂಗಳೂರಿಗೆ 150 ಗಾಡಿ ಕೊಡುತ್ತಿದ್ದೇವೆ. ಸರ್ಕಾರ ಸೆಕ್ಯುರಿಟಿ ಫಂಡ್ ಹೆಸರಿನಲ್ಲಿ ಫಲಾನುಭವಿಗಳಿಂದ 2 ಲಕ್ಷ ರೂ. ಡೆಪಾಸಿಟ್ ಪಡೆದುಕೊಳ್ಳುತ್ತದೆ. ಎಸ್‌ಸಿ ಎಸ್‌ಟಿ ಫಲಾನುಭವಿಗಳಿಂದ 1.5 ಲಕ್ಷ ರೂ. ಡೆಪಾಸಿಟ್‌ ತೆಗೆದುಕೊಳ್ಳುತ್ತೇವೆ ಎಂದರು.

     

    3 ಜಿಲ್ಲೆಗಳಲ್ಲಿ 13 ಐಲ್ಯಾಂಡ್ ಗುರುತಿಸಿದ್ದು, ಅಭಿವೃದ್ಧಿ ಮಾಡಲು ಪಿಪಿಪಿ ಮಾಡೆಲ್ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಐಲ್ಯಾಂಡ್ ಅಭಿವೃದ್ಧಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಈ‌ ನಿಟ್ಟಿನಲ್ಲಿ ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ ಎಂದರು. ಅಂಕೋಲದಲ್ಲಿ (Ankola)‌ ವಿಮಾನ ನಿಲ್ದಾಣಕ್ಕೆ (Air Port) ಬೇಕಾದ ಜಮೀನು ಖರೀದಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಭೂಮಿ ಕೊಡುವವರಿಗೆ ಪರ್ಯಾಯ ಭೂಮಿ ನೀಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

  • ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಯುವಕ

    ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಯುವಕ

    ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್ (Congress) ಭರ್ಜರಿಯಾಗಿ ಜಯಗಳಿಸಿದ್ದು, ಇದರ ಬೆನ್ನಲ್ಲೇ ಕೇಸರಿ ಬಾವುಟದ ಪಕ್ಕ ಇಸ್ಲಾಂ ಬಾವುಟ ಹಾರಿಸಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkala) ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದು, ಅಭ್ಯರ್ಥಿ ಮಂಕಾಳು ವೈದ್ಯರಿಗೆ ಗೆಲುವಾಗಿದೆ. ಹೀಗಾಗಿ ಭಟ್ಕಳದ ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಹಿಡಿದು ನಗರದ ಬೀದಿಯಲ್ಲಿ ಸಂಭ್ರಮಿಸಿದ್ದಲ್ಲದೇ ಭಟ್ಕಳ ಸಂಶುದ್ದೀನ್ ಸರ್ಕಲ್ ಮೇಲೆ ನಿಂತು ಕೇಸರಿ ಬಾವುಟದ ಪಕ್ಕದಲ್ಲಿ ಇಸ್ಲಾಂ ಧ್ವಜ ಹಿಡಿದು ಸಂಭ್ರಮಾಚರಣೆ ನಡೆಸಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಅವರು ಬಿಜೆಪಿಯ ಸುನಿಲ್ ನಾಯಕ್ ವಿರುದ್ಧ 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಮಂಕಾಳು ವೈದ್ಯರ ಗೆಲುವನ್ನು ಸಂಭ್ರಮಿಸುವ ವೇಳೆ ಭಟ್ಕಳ ಪಟ್ಟಣದಲ್ಲಿರುವ ಸಂಶುದ್ದೀನ್ ವೃತ್ತದ ಮೇಲೇರಿದ ಮುಸ್ಲಿಂ ಯುವಕರು ಕೇಸರಿ ಧ್ವಜದ ಪಕ್ಕ ನಿಂತು ಇಸ್ಲಾಂ ಧ್ವಜ ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿನ ಜವಾಬ್ದಾರಿ ನಾನೇ ಹೊರುತ್ತೇನೆ: ಬೊಮ್ಮಾಯಿ

    ಮಂಕಾಳು ವೈದ್ಯ ಭಾವಚಿತ್ರವಿರುವ ಧ್ವಜ, ಅಂಬೇಡ್ಕರ್‌ರ ಧ್ವಜದೊಂದಿಗೆ ಮುಸ್ಲಿಂ ಧ್ವಜ ಪ್ರದರ್ಶನ ಮಾಡಿ ವೃತ್ತದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜದ ಪಕ್ಷದಲ್ಲೇ ಮುಸ್ಲಿಂ ಧ್ವಜ ಹಾಕಿದ್ದಾರೆ. ಸದ್ಯ ಇದರ ವೀಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಹಿಂದೂಗಳ ಹೆಣ ಎತ್ತಲೂ ಯಾರು ಇರಬಾರದು:
    ಕಾಂಗ್ರೆಸ್‌ಗೆ ಬಹುಮತ ಬರುತ್ತಿದ್ದಂತೆ ಇದರ ಸಂತೋಷಕ್ಕೆ ಭಟ್ಕಳದಲ್ಲಿ ಇಸ್ಲಾಂ ಧ್ವಜ ಹಾರಿಸಲಾಯಿತು. ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಮಾಜಘಾತುಕ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಹಿಂದೂಗಳ ಹೆಣ ಎತ್ತಲೂ ಯಾರೂ ಇರಬಾರದು. ಕರ್ನಾಟಕದಲ್ಲಿ ಇನ್ನು ಮುಂದೆ ಮುಸ್ಲಿಂ ಹವಾ, ಅಲ್ಲಾಹು ಅಕ್ಬರ್ ಎಂದು ಮುಸ್ಲಿಂ ಯುವಕನೊಬ್ಬ ಮಾಡಿದ ಕಾಮೆಂಟ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19 ಮುನ್ನಡೆ LIVE Updates