Tag: Mankad

  • ಮಂಕಡ್‌ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್‌ ಎಂದ ಅಂಪೈರ್!

    ಮಂಕಡ್‌ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್‌ ಎಂದ ಅಂಪೈರ್!

    ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ (Big Bash league) ಮೆಲ್ಬರ್ನ್ ಸ್ಟಾರ್ ತಂಡ ಬೌಲರ್ ಆ್ಯಡಂ ಜಂಪಾ (Adam Zampa) ಮಾಡಿದ ಮಂಕಡ್‌ ರನೌಟ್‌ನ್ನು (Mankad Run Out) ಅಂಪೈರ್ ನಾಟೌಟ್‌ ನೀಡಿರುವುದು ವಿವಾದಕ್ಕಿಡಾಗಿದೆ.

    ಮೆಲ್ಬರ್ನ್‌ ರೆನೆಗೇಡ್ಸ್ ತಂಡದ ಪರ ನಾನ್‍ಸ್ಟ್ರೈಕ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟಾಮ್ ರೋಜರ್ಸ್ ಇತ್ತ ಬೌಲಿಂಗ್ ಆರಂಭಿಸುತ್ತಿದ್ದ ಜಂಪಾರನ್ನು ನೋಡಿ ಕ್ರಿಸ್ ಬಿಟ್ಟು ಮುಂದೆ ಓಡಿದ್ದಾರೆ. ಈ ವೇಳೆ ಜಂಪಾ ಮಂಕಡ್‌ ರನೌಟ್ ಮಾಡಿದ್ದಾರೆ. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ

    ಈ ವೇಳೆ ಅನ್‍ಫೀಲ್ಡ್ ಅಂಪೈರ್ ಥರ್ಡ್‌ ಅಂಪೈರ್ ನಿರ್ಧರಿಸುವಂತೆ ತಿಳಿಸಿದ್ದಾರೆ. ಥರ್ಡ್‌ ಅಂಪೈರ್ ನಾಟೌಟ್‌ ಎಂದು ತೀರ್ಪು ನೀಡಿದರು. ಈ ವೇಳೆ ಪ್ರಶ್ನಿಸಿದಾಗ ಜಾಂಪ ಬೌಲಿಂಗ್ ಆಕ್ಷನ್ ಮಾಡಿ ಕ್ರಿಸ್‍ನಲ್ಲಿ ಕೈ ಇದ್ದ ಕಾರಣ ಈ ನಿರ್ಧಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್

    ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಹಲವು ಮಂಕಡ್ ರನೌಟ್ ಕೂಡ ಮಾಡಿ ಅಂಪೈರ್‌ಗಳು ಔಟ್ ಎಂಬ ತೀರ್ಮಾನ ನೀಡಿದ್ದಾರೆ. ಆದರೆ ಇಲ್ಲಿ ಅಂಪೈರ್ ನಾಟೌಟ್‌ ನೀಡಿ ಚರ್ಚೆಗೆ ಗ್ರಾಸವಾಗಿದೆ.

    ಮಂಕಡ್‌ ಔಟ್:
    ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರಿಸ್‌ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್‌ ಎಂದೇ ಪರಿಗಣಿಸಲಾಗುವುದಾಗಿ ಐಸಿಸಿ ನಿಯಮ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    Live Tv
    [brid partner=56869869 player=32851 video=960834 autoplay=true]

  • ಫಸ್ಟ್ ಅಂಡ್ ಫೈನಲ್ ವಾರ್ನಿಂಗ್- ಮಂಕಡ್ ಔಟ್ ಕುರಿತು ಅಶ್ವಿನ್ ಬಹಿರಂಗ ಎಚ್ಚರಿಕೆ

    ಫಸ್ಟ್ ಅಂಡ್ ಫೈನಲ್ ವಾರ್ನಿಂಗ್- ಮಂಕಡ್ ಔಟ್ ಕುರಿತು ಅಶ್ವಿನ್ ಬಹಿರಂಗ ಎಚ್ಚರಿಕೆ

    ದುಬೈ: ಐಪಿಎಲ್ 2019ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮಂಕಡ್ ಅವರನ್ನು ಔಟ್ ಮಾಡಿದ ಆರ್.ಅಶ್ವಿನ್ ಅವರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅಶ್ವಿನ್ ಬಹಿರಂಗವಾಗಿ ಮಂಕಡ್ ವಾರ್ನಿಂಗ್ ನೀಡಿದ್ದಾರೆ.

    ಅಶ್ವಿನ್ ಮಂಕಡ್ ಔಟ್ ವಿರುದ್ಧ ಟೀಕೆ ಮಾಡಿದ್ದ ಹಲವರು ಕ್ರೀಡಾ ಸ್ಫೂರ್ತಿ ಇಲ್ಲ ಎಂದಿದ್ದರು. ಆದರೆ ತಮ್ಮ ವಿರುದ್ಧ ವಿಮರ್ಶೆಗಳಿಗೆ ತಿರುಗೇಟು ನೀಡಿದ್ದ ಅಶ್ಚಿನ್, ನಿಯಮಗಳ ಅನ್ವಯ ನಾನು ಔಟ್ ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದರು. ಇದರ ನಡುವೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಶ್ವಿನ್‍ರನ್ನು ಕೈಬಿಟ್ಟಿತ್ತು. ಸದ್ಯ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.

    ಕಳೆದ ವರ್ಷ ಕೇಳಿ ಬಂದಿದ್ದ ಟೀಕೆಗಳಿಂದ ನಿನ್ನೆಯ ಪಂದ್ಯದಲ್ಲಿ ಸ್ವಲ್ಪ ಹಿಂದೇಟು ಹಾಕಿರುವಂತೆ ಕಂಡ ಅಶ್ವಿನ್, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆರಂಭಿಕರ ಆಟಗಾರ ಫಿಂಚ್‍ಗೆ ಎಚ್ಚರಿಕೆ ನೀಡಿದ್ದರು. ಪಂದ್ಯದ 3ನೇ ಓವರಿನ 4ನೇ ಎಸೆತದಲ್ಲಿ ನಾನ್‍ಸ್ಟ್ರೈಕ್‍ನಲ್ಲಿದ್ದ ಫಿಂಚ್, ಬೌಲರ್ ಬೌಲ್ ಮಾಡುವ ಮುನ್ನವೇ ಕ್ರಿಸ್ ಬಿಟ್ಟು ತೆರಳಿದ್ದರು. ಈ ಸಂದರ್ಭದಲ್ಲಿ ಫಿಂಚ್ ಅವರತ್ತ ನೋಡಿ ನಕ್ಕ ಅಶ್ವಿನ್ ಮಂಕಡ್ ವಾರ್ನಿಗ್ ನೀಡಿದರು. ಇದನ್ನೂ ಓದಿ: ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್

    ಪಂದ್ಯದ ಬಳಿಕ ಘಟನೆ ಕುರಿತು ಟ್ವೀಟ್ ಮಾಡಿರುವ ಅಶ್ವಿನ್, ಇದು ಫಸ್ಟ್ ಅಂಡ್ ಫೈನಲ್ ವಾರ್ನಿಂಗ್ 2020. ಇದನ್ನು ಸ್ಪಷ್ಟಪಡಿಸುತ್ತಿದ್ದು, ನನ್ನನ್ನು ದೂಷಿಸಬೇಡಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕ್ಕಿ ಪಾಟಿಂಗ್‍ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ನಾನು ಫಿಂಚ್ ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಶ್ವಿನ್ ಮತ್ತೆ ಮಂಕಡ್ ಪ್ರಯೋಗ ಮಾಡುತ್ತಾರೆ ಎಂಬುದು ಖಚಿತವಾಗಿದೆ.