Tag: manjunath

  • ನಾವು ಮೋದಿಗೆ ಹೇಳಿದ್ವಿ ಇಂದು ಉತ್ತರ ಸಿಕ್ತು, ಅವ್ರು ಯಾರಿಗೆ ಹೇಳ್ತಾರೆ: ಮಂಜುನಾಥ್ ಸಂಬಂಧಿ

    ನಾವು ಮೋದಿಗೆ ಹೇಳಿದ್ವಿ ಇಂದು ಉತ್ತರ ಸಿಕ್ತು, ಅವ್ರು ಯಾರಿಗೆ ಹೇಳ್ತಾರೆ: ಮಂಜುನಾಥ್ ಸಂಬಂಧಿ

    – ಆಪರೇಷನ್ ಸಿಂಧೂರ ಪಹಲ್ಗಾಮ್ ದಾಳಿಯ ಮೃತರಾದವರಿಗೆ ಅರ್ಪಣೆ

    ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ಉಗ್ರರರು ಪ್ರವಾಸಿಗರ ಮೇಲೆ ದಾಳಿ ಮಾಡಿ, ಮೋದಿಗೆ ಹೇಳಿ ಅಂದಿದ್ದರು. ನಾವು ಮೋದಿಗೆ ಹೇಳಿದ್ದೆವು. ಇಂದು ಉತ್ತರ ಸಿಕ್ಕಿದೆ. ಈಗ ಅವರು ಯಾರಿಗೆ ಹೇಳ್ತಾರೆ ಎಂದು ಪ್ರಶ್ನಿಸುವ ಮೂಲಕ ಪಹಲ್ಗಾಮ್ ಉಗ್ರರ ದಾಳಿಯಲ್ಲಿ(Pahalgam Terror Attack) ಮೃತಪಟ್ಟ ಮಂಜುನಾಥ್ ರಾವ್ ಅವರ ಸಂಬಂಧಿ ಡಾ.ರವಿಕಿರಣ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳಿಗೆ ದಾಳಿ ನಡೆಸಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಳಗ್ಗೆ ಏಳುವಾಗಲೇ ಒಳ್ಳೆಯ ಸುದ್ದಿ ಸಿಕ್ಕಿದೆ. `ಆಪರೇಷನ್ ಸಿಂಧೂರ'(Operation Sindoor) ಹೆಸರು ಕೇಳಿಯೇ ರೋಮಾಂಚನ ಆಯ್ತು. ನಾವು ಚಿಕ್ಕವರಿಂದಲೂ ಕಾಶ್ಮೀರ(Kashmir) ಭಾರತದ ಸಿಂಧೂರ ಎಂದು ಹೇಳುತ್ತಲೇ ಬಂದಿದ್ದೇವೆ. ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಭಾರತೀಯ ಮಹಿಳೆಯರ ಸಿಂಧೂರ ಅಳಿಸುವ ಕೆಲಸ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಕೂಡ ಕೆಲಸ ಆರಂಭಿಸಿದೆ ಎಂದರು. ಇದನ್ನೂ ಓದಿ: ಉಗ್ರರ ಮೇಲಿನ ದಾಳಿಗೆ ಭಾರತದ ಪ್ರಜೆಗಳ ಮೇಲೆ ಗುಂಡು – 7 ಸಾವು

    ಭಾರತೀಯ ಸೇನೆಯು ಉಗ್ರರ ಮೇಲೆ ದಾಳಿ ಮಾಡಿದೆಯೇ ಹೊರತು ನಾಗರೀಕರ ಮೇಲೆ ಮಾಡಿಲ್ಲ. ಆಪರೇಷನ್ ಸಿಂಧೂರವು ಪಹಲ್ಗಾಮ್ ದಾಳಿಯಲ್ಲಿ ಮೃತರಾದವರಿಗೆ ಸಲ್ಲಿಸಿದ ಗೌರವ. ಉಗ್ರರು ದಾಳಿ ಮಾಡುವಾಗ ಮೋದಿಗೆ ಹೇಳಿ ಅಂದಿದ್ದರು. ನಾವು ಮೋದಿಗೆ ಹೇಳಿದ್ದೆವು. ಇಂದು ನಮಗೆ ಉತ್ತರ ಸಿಕ್ಕಿದೆ. ಈಗ ಅವರು ಯಾರಿಗೆ ಹೇಳ್ತಾರೆ ಎಂದು ಕೇಳಲು ಬಯಸ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಸಬ್‌, ಡೇವಿಡ್‌ ಹೆಡ್ಲಿ ತರಬೇತಿ ಪಡೆದ ಕ್ಯಾಂಪ್‌ ಧ್ವಂಸ: ಭಾರತ

    ಭಾರತೀಯ ಸೇನೆಗೆ(Indian Army) ಎಲ್ಲರೂ ಕೂಡ ಸಹಕಾರ ನೀಡಬೇಕು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಕೆಲಸ ಮುಂದುವರೆಯಲಿ ಎಂದರು. ಇದನ್ನೂ ಓದಿ: ಆಪರೇಷನ್ ಸಿಂಧೂರದ ಮೂಲಕ ನರಮೇಧಕ್ಕೆ ಉತ್ತರ: ಅಮಿತ್ ಶಾ ಶ್ಲಾಘನೆ

    ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಂದು ತಡರಾತ್ರಿ 1:44ರ ಸುಮಾರಿಗೆ ಭಾರತೀಯ ಸೇನೆಯು ಪಾಕಿಸ್ತಾನದ 9 ಉಗ್ರರ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಕಾರ್ಯಚರಣೆಗೆ `ಆಪರೇಷನ್ ಸಿಂಧೂರ’ ಎಂದು ಹೆಸರಿಡಲಾಗಿತ್ತು. ಪಹಲ್ಗಾಮ್ ದಾಳಿಯ ಮೂಲಕ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರಿಗೆ ಭಾರತವು ಆಪರೇಷನ್ ಸಿಂಧೂರದ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ.

  • ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ್ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ್ ಅಂತ್ಯಕ್ರಿಯೆ

    ಶಿವಮೊಗ್ಗ: ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಗುಂಡೇಟಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ (Manjunath Rao) ಅವರ ಅಂತ್ಯಕ್ರಿಯೆ ತುಂಗಾ ತೀರದಲ್ಲಿರುವ ರೋಟರಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

    ಪುತ್ರ ಅಭಿಜನ್ ಬ್ರಾಹ್ಮಣ (Brahmin) ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂತ್ಯ ಸಂಸ್ಕಾರದ ಅಂತಿಮ ವಿಧಿವಿಧಾನವು ಗುಂಡಾ ಭಟ್ಟರ ನೇತೃತ್ವದಲ್ಲಿ ನಡೆಯಿತು. ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್‌ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ

    ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 10:30ರ ಸುಮಾರಿಗೆ ಬೆಂಗಳೂರಿನಿಂದ ಶಿವಮೊಗ್ಗದಲ್ಲಿರುವ (Shivamogga) ನಿವಾಸಕ್ಕೆ ತರಲಾಯಿತು. ಬಳಿಕ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12:30ರ ಸುಮಾರಿಗೆ ನಿವಾಸದಲ್ಲಿ ಅಂತಿಮ ವಿಧಿಗಳನ್ನು ಪೂರೈಸಿ ಮಂಜುನಾಥ್‌ರವರ ಅಂತಿಮಯಾತ್ರೆ ಹೊರಟಿತು. ಇದನ್ನೂ ಓದಿ: ನನ್ನನ್ನೂ ಶೂಟ್ ಮಾಡು ಅಂದೆ, ಅವ್ನು ಹೋಗಿ ಮೋದಿಗೆ ಹೇಳು ಅಂದ: ಮಂಜುನಾಥ್ ಪುತ್ರ

    ಅಂತಿಮ ಮೆರವಣಿಗೆಯು ಐಬಿ ಸರ್ಕಲ್ ಮೂಲಕ ಕುವೆಂಪು ರಸ್ತೆಗೆ ಬಂದು, ಜೈಲ್ ಸರ್ಕಲ್‌ನಿಂದ ದುರ್ಗಿಗುಡಿ ಮುಖ್ಯರಸ್ತೆ ಮೂಲಕ ಸೀನಪ್ಪ ಶೆಟ್ಟಿ ಸರ್ಕಲ್‌ಗೆ ತಲುಪಿತು. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್ ಮೂಲಕ ಬಿಹೆಚ್ ರೋಡ್ ನಲ್ಲಿ ಸಾಗಿ, ರೋಟರಿ ಚಿತಾಗಾರವನ್ನು ತಲುಪಿತು. ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಪಾಕ್‌ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ

    ಅಂತಿಮಯಾತ್ರೆ ವೇಳೆ ಮಾರ್ಗದುದ್ದಕ್ಕೂ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟನ್ನು ಮುಚ್ಚಿ ಅಂತಿಮ ನಮನ ಸಲ್ಲಿಸಿದರು. ರೋಟರಿ ಚಿತಾಗಾರಕ್ಕೆ ಮೃತದೇಹ ತಲುಪುತ್ತಲೇ ಶಾಸಕ ಚನ್ನಬಸಪ್ಪ ಹಾಗೂ ವಿವಿಧ ರಾಜಕೀಯ ಮುಖಂಡರು ಮೃತದೇಹಕ್ಕೆ ಹೆಗಲು ನೀಡಿದರು. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ

    ಬಳಿಕ ಪಾರ್ಥಿವ ಶರೀರಕ್ಕೆ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸರ್ಕಾರಿ ಗೌರವ ನೀಡಿದರು. ಗುಂಡಾಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದಿದ್ದು, ಪುತ್ರ ಅಭಿಜನ್ ಕಣ್ಣೀರಿಡುತ್ತಲೇ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್‌

    ಈ ವೇಳೆ ಪತ್ನಿ ಪಲ್ಲವಿ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಚಿವ ಮಧು ಬಂಗಾರಪ್ಪ ಅವರು ಸ್ಥಳದಲ್ಲಿದ್ದು ಮೃತ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

  • ದರ್ಶನ್‍ಗೆ ಶನಿ ಕಾಟ – ಸಂಕಷ್ಟ ನಿವಾರಣೆಗೆ ಕುಟುಂಬಸ್ಥರಿಂದ ಶನಿ ಶಾಂತಿ ಪೂಜೆ

    ದರ್ಶನ್‍ಗೆ ಶನಿ ಕಾಟ – ಸಂಕಷ್ಟ ನಿವಾರಣೆಗೆ ಕುಟುಂಬಸ್ಥರಿಂದ ಶನಿ ಶಾಂತಿ ಪೂಜೆ

    ಕಾರವಾರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ (Darshan) ಅವರ ಅಕ್ಕ ಹಾಗೂ ಬಾವ ದೇವರ ಮೊರೆ ಹೋಗಿದ್ದಾರೆ. ದರ್ಶನ್‍ಗೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ಅವರ ಬಾವ ಮಂಜುನಾಥ್ (Manjunath), ಶನೇಶ್ವರನ ಮೊರೆ ಹೋಗಿದ್ದಾರೆ.

    ಸದ್ಯ ದರ್ಶನ್ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಅವರು ಬೇರೆ ಬೇರೆ ಸಮಸ್ಯೆಗಳಿಗೂ ಸಿಕ್ಕಿಕೊಂಡಿದ್ದರಂತೆ. ಅದಕ್ಕೆಲ್ಲ ದರ್ಶನ್‍ಗೆ ಶನಿ ದೆಸೆಯೇ ಕಾರಣವಂತೆ. ಹೀಗಾಗಿ ದರ್ಶನ್ ಹಿರಿಯ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ್ ದೇವರ ಮೊರೆ ಹೋಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಕೈಗಾದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ರಾಮೇಶ್ವರ, ಆಂಜನೇಯ, ಶನೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಶನಿ ಶಾಂತಿ ಪೂಜೆ, ನವಗ್ರಹ ಪೂಜೆ, ಪುಷ್ಟಾರ್ಚನೆ ಮಾಡಿಸಿದ್ದಾರೆ. ಇದನ್ನೂ ಓದಿ: `ಡಿ’ಬಾಸ್ ಬಗ್ಗೆ ಮಾತಾಡಿದ್ರೆ ಜೀವಂತ ಸುಡೋದಾಗಿ ಬೆದರಿಕೆ – ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ವಶಕ್ಕೆ 

    ಈ ಬಗ್ಗೆ ಮಾತನಾಡಿರುವ ದೇವಾಲಯದ ಅರ್ಚಕ ಶ್ರೀಪಾದ್ ಭಟ್, ದರ್ಶನ್ ಮೇಲಿರುವ ದುಷ್ಟ ಶಕ್ತಿಗಳ ನಿವಾರಣೆ ಆದಷ್ಟು ಬೇಗ ಆಗಲಿ. ಆದಷ್ಟು ಬೇಗ ಪ್ರಕರಣದಿಂದ ಹೊರ ಬರಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಮನುಷ್ಯನಿಗೆ ಜೀವತಾವಧಿಯಲ್ಲಿ ಶನಿ ಪೀಡೆ ಎಂದು ಬರುತ್ತೆ. ಅಂತಹ ದೋಷಗಳಿದ್ದಾಗ ಆದಷ್ಟು ಬೇಗ ನಿವಾರಣೆ ಆಗಲಿ ಎಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಅಂತ ತಿಳಿಸಿದ್ದಾರೆ.

    ದರ್ಶನ್ ಬಾವ ಮಂಜುನಾಥ್ ಸಹ ನವಗ್ರಹಗಳನ್ನು ಸುತ್ತಿ, ಈಶ್ವರನಿಗೆ ಹೂವಿನ ಹಾರ ಸಮರ್ಪಿಸಿ ಈಗ ಬಂದೊದಗಿದ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ ಮಾಡಿದರು. ಸದ್ಯ ಕೈಗಾ ಅಣು ಸ್ಥಾವರದಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರು. ದರ್ಶನ್ ಅವರನ್ನು ಬಾಲ್ಯದಿಂದ ಕಂಡವರು. ದರ್ಶನ್ ಅವರ ಹಿರಿಯ ಸಹೋದರಿ ದಿವ್ಯಾ ಅವರನ್ನು ವಿವಾಹವಾಗಿದ್ದು ದರ್ಶನ್‍ಗೆ ಸಹ ಅಕ್ಕ ಭಾವನ ಮೇಲೆ ಹೆಚ್ಚು ಪ್ರೀತಿ. ಹೀಗಾಗಿ ಈಗ ಬಂದೊದಗಿದ ಸಂಕಷ್ಟ ಪರಿಹಾರಕ್ಕೆ ದೇವರ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರಚೋದನೆ ಮಾಡಿ ಈ ಸ್ಥಿತಿಗೆ ತಂದಿದ್ದಾರೆ, ಒಳ್ಳೆತನ ಅವರನ್ನು ಕಾಪಾಡುತ್ತೆ: ದರ್ಶನ್ ಬಾವ ಮಂಜುನಾಥ್

  • ಪ್ರಚೋದನೆ ಮಾಡಿ ಈ ಸ್ಥಿತಿಗೆ ತಂದಿದ್ದಾರೆ, ಒಳ್ಳೆತನ ಅವರನ್ನು ಕಾಪಾಡುತ್ತೆ: ದರ್ಶನ್ ಬಾವ ಮಂಜುನಾಥ್

    ಪ್ರಚೋದನೆ ಮಾಡಿ ಈ ಸ್ಥಿತಿಗೆ ತಂದಿದ್ದಾರೆ, ಒಳ್ಳೆತನ ಅವರನ್ನು ಕಾಪಾಡುತ್ತೆ: ದರ್ಶನ್ ಬಾವ ಮಂಜುನಾಥ್

    ಕಾರವಾರ: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಪೊಲೀಸರ ತನಿಖೆ ಎದುರಿಸುತ್ತಿದ್ದು, ದರ್ಶನ್ ಸಹೋದರಿ ದಿವ್ಯ ಅವರ ಪತಿ ಮಂಜುನಾಥ್ (Manjunath) ಮೊದಲ ಬಾರಿಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ.

    ಅವರನ್ನು ಪ್ರವೋಕ್ ಮಾಡಿ ಈ ಸ್ಥಿತಿಗೆ ತಂದಿದ್ದಾರೆ. ಅವರ ಗುಣ ಈ ರೀತಿಯಾಗಿಲ್ಲ. ಅವರು ಖುಷಿಯಾಗಿ ಓಡಾಡಿಕೊಂಡಿದ್ದರು. ಅವರಿಗೆ ಕಿರಿ ಕಿರಿಯಾಗುವಂತೆ ಮಾಡಿದಾಗ ಈ ರೀತಿ ಆ್ಯಕ್ಷನ್ ತೆಗೆದುಕೊಳ್ಳುವ ಹಾಗೆ ಮಾಡಿ ಸಮಸ್ಯೆ ಆಗುತ್ತಿದೆ. ಅವರ ಒಳ್ಳೆತನ ಅವರನ್ನು ಕಾಪಾಡುತ್ತದೆ ಎಂದು ನೋವು ತೋಡಿಕೊಂಡರು. ಇದನ್ನೂ ಓದಿ: ಫ್ಯಾನ್ಸ್ ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? – ದರ್ಶನ್ ಕೃತ್ಯ ಖಂಡಿಸಿದ ರಮ್ಯಾ

    ಅವರ ಬೇಸಿಕ್ ಗುಣ ಅದಲ್ಲ. ಖುಷಿಯಾಗಿ ಜಾಲಿಯಾಗಿ ಇರುವವರು ಅವರು. ಪ್ರಾಣಿ-ಪಕ್ಷಿ ಅಂದುಕೊಂಡು ಚೆನ್ನಾಗಿದ್ದರು. ಕೋರ್ಟ್ ಎಲ್ಲಾ ತೀರ್ಮಾನ ಮಾಡುತ್ತೆ. ಅವರ ಲೈಫ್ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ನೋಡೋರು ಬೇರೆ ಥರ ತಿಳಿದುಕೊಂಡಿದ್ದಾರೆ. ಜನರೆಲ್ಲಾ ಶಾಂತರಾಗಿರಬೇಕು. ಒಳ್ಳೆಯ ತೀರ್ಮಾನ ಬಂದು ಸರಿ ಹೋಗುತ್ತದೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಅಭಿಮಾನಿಗಳು ಸಂತೋಷವಾಗಿರಬೇಕು. ಡಿ ಬಾಸ್ ಮತ್ತೆ ಬರುತ್ತಾರೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಖುಷಿಯಾಗಿ ಇರಬೇಕು ಎಂದರು. ಇದನ್ನೂ ಓದಿ: ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

    ಅವರು ಹೊರಗೆ ಬಂದ ಮೇಲೆ ಮತ್ತೆ ಸಿನಿಮಾ ಮಾಡಿಕೊಂಡು ಇರಬೇಕು. ಜನರಿಗೆ ಸಹಾಯ ಮಾಡಿಕೊಂಡು ಖುಷಿಯಾಗಿ ಇರಬೇಕು. ಅವರು ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಎಲ್ಲಾ ಒಳ್ಳೆಯದಾಗಿ ಹೊರಬರುವ ನಿರೀಕ್ಷೆ ಇದೆ. ಅವರ ಒಳ್ಳೆತನ ಅವರನ್ನು ಕಾಪಾಡುತ್ತೆ ಎಂದು ಹೇಳಿದರು. ಇದನ್ನೂ ಓದಿ: G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?

  • ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ ಆಸ್ತಿ ಎಷ್ಟು ಗೊತ್ತಾ?

    ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಮೈತ್ರಿ (ಬಿಜೆಪಿ-ಜೆಡಿಎಸ್)‌ ಅಭ್ಯರ್ಥಿಯಾಗಿ ಡಾ. ಸಿ.ಎನ್.ಮಂಜುನಾಥ್‌ (C.N.Manjunath) ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಆಸ್ತಿ ವಿವರ ಘೋಷಿಸಿಕೊಂಡಿದ್ದು, 98.36 ಕೋಟಿ ಆಸ್ತಿ ಒಡೆಯರಾಗಿದ್ದಾರೆ.

    ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2023-24 ರ ಹಣಕಾಸು ವರ್ಷದಲ್ಲಿ 1.57 ಕೋಟಿ ಆದಾಯ ಬಂದಿದೆ. ಅದರಲ್ಲಿ 42,847 ರೂ. ಕೃಷಿಯಿಂದ ಬಂದ ಆದಾಯ. ಡಾ.ಮಂಜುನಾಥ್‌ ಪತ್ನಿ ಅನುಸೂಯ 1,57,01,260 ಕೋಟಿ ರೂ. ಆದಾಯ ಹೊಂದಿದ್ದಾರೆ. ಇದನ್ನೂ ಓದಿ: 62.82 ಕೋಟಿ ಒಡೆಯ ಹೆಚ್‌ಡಿಕೆ- ಪತಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆ!

    ಮಂಜುನಾಥ್‌ ಅವರ ಕೈಯಲ್ಲಿ 1,97,622 ರೂಪಾಯಿ ಇದೆ. 4ಕೋಟಿ ಮೌಲ್ಯದ ಒಟ್ಟು 6.79 ಕೆ.ಜಿ ಚಿನ್ನ ಹೊಂದಿದ್ದಾರೆ. 55 ಲಕ್ಷ ರೂ. ಮೌಲ್ಯದ ಎರಡು ಕಾರು ಹೊಂದಿದ್ದಾರೆ. ಒಟ್ಟು 6.98 ಕೋಟಿ ಚರಾಸ್ತಿ ಹಾಗೂ 36.65 ಕೋಟಿ ಸ್ಥಿರಾಸ್ತಿ ಇದೆ. 3.74 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ.

    ಹೆಂಡತಿ ಅನುಸೂಯ ಹೆಸರಲ್ಲಿ 17.36 ಕೋಟಿ ಚರಾಸ್ತಿ ಹಾಗೂ 35.30 ಕೋಟಿ ಸ್ಥಿರಾಸ್ತಿ ಇದೆ. ಅವರ ಪತ್ನಿ ಕೈಯಲ್ಲಿ 3,04,706 ರೂ. ಇದೆ. ಒಟ್ಟು 11.02 ಕೋಟಿ ರೂ. ಸಾಲ ಮಾಡಿದ್ದಾರೆ. 13 ಲಕ್ಷ ಬೆಲೆಬಾಳುವ ಒಂದು ಕಾರು ಹೊಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧೆ!

    ಮಂಜುನಾಥ್‌ ಅವರ ಅವಿಭಕ್ತ ಕುಟುಂಬದ ಹೆಸರಲ್ಲಿ 75 ಲಕ್ಷ ರೂ. ಚರಾಸ್ತಿ ಮತ್ತು 1.32 ಕೋಟಿ ಸ್ಥಿರಾಸ್ತಿ ಇದೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ.

  • ಸೋಮವಾರ ಬಿಜೆಪಿ ಸೇರ್ಪಡೆ: ಡಾ. ಮಂಜುನಾಥ್‌

    ಸೋಮವಾರ ಬಿಜೆಪಿ ಸೇರ್ಪಡೆ: ಡಾ. ಮಂಜುನಾಥ್‌

    ನವದೆಹಲಿ: ಸೋಮವಾರ ಬೆಂಗಳೂರಲ್ಲಿ ಅಧಿಕೃತವಾಗಿ ಬಿಜೆಪಿ (BJP) ಸೇರುತ್ತಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರದ (Bengaluru Rural) ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್‌ (Dr. Manjunath) ಹೇಳಿದ್ದಾರೆ.

    ದೆಹಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಇದುವರೆಗೂ ಅವರನ್ನು ಭೇಟಿಯಾಗಿರಲಿಲ್ಲ. ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಚುನಾವಣೆಗೆ ಸಹಕಾರ ಕೇಳಿ ಧನ್ಯವಾದ ಹೇಳಿದ್ದೇನೆ ಎಂದರು.  ಇದನ್ನೂ ಓದಿ: WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

     

    ವೈಯಕ್ತಿಕವಾಗಿ ಯಾರನ್ನು ಟೀಕೆ ಮಾಡಬಾರದು. ಇದೊಂದು ಧರ್ಮ ಯುದ್ಧ. ನಾನು ರಾಜಕೀಯಕ್ಕೆ ಬಂದಿರುವುದು ರಾಜಕೀಯ ಮಾಡಲು ಅಲ್ಲ. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿದ್ದಾರೆ ಒಟ್ಟು 5.42 ಕೋಟಿ ಮತದಾರರು – ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು?

    ಕಾಂಗ್ರೆಸ್‌ನ ಡಿಕೆ ಸುರೇಶ್‌ (DK Suresh) ಅವರನ್ನು ಮಣಿಸಲು ಬಿಜೆಪಿ, ಜೆಡಿಎಸ್‌ (BJP, JDS) ಒಂದಾಗಿ ಡಾ. ಮಂಜುನಾಥ್‌ ಅವರನ್ನು ಕಣಕ್ಕೆ ಇಳಿಸಿದೆ.

     

  • 2 ದಿನದಲ್ಲಿ ರಾಜಕೀಯಕ್ಕೆ ಸೇರ್ಪಡೆ: ಮೋದಿಯನ್ನು ಹಾಡಿ ಹೊಗಳಿದ ಡಾ.ಮಂಜುನಾಥ್‌

    2 ದಿನದಲ್ಲಿ ರಾಜಕೀಯಕ್ಕೆ ಸೇರ್ಪಡೆ: ಮೋದಿಯನ್ನು ಹಾಡಿ ಹೊಗಳಿದ ಡಾ.ಮಂಜುನಾಥ್‌

    ಬೆಂಗಳೂರು: ಅಧಿಕೃತವಾಗಿ 2-3 ದಿನಗಳಲ್ಲಿ ನಾನು ರಾಜಕೀಯಕ್ಕೆ ಸೇರ್ಪಡೆ ಆಗುತ್ತೇನೆ ಎಂದು ಡಾ.ಮಂಜುನಾಥ್‌ (Dr. Manjunath) ಹೇಳಿದ್ದಾರೆ.

    ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪನವರನ್ನು (BS Yediyurappa) ಭೇಟಿ ಮಾಡಿದ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಸರ್ಕಾರ (PM Narendra Modi Government) ಸಾಧಕರಿಗೆ, ಪರಿಣಿತರಿಗೆ ಪ್ರೊತ್ಸಾಹ ಕೊಡುತ್ತಿದ್ದಾರೆ. ಹೀಗಾಗಿ ನಾನು ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇನೆ ಎಂದು ತಿಳಿಸಿದರು.

    ಹೃದ್ರೋಗ ಕ್ಷೇತ್ರದಲ್ಲಿ ಕಾಂತ್ರಿಕಾರಕ ಕೆಲಸ ಮಾಡಿದ್ದೇವೆ. ಮೋದಿ ಅವರಿಗೆ ಹ್ರಾಟ್ರಿಕ್ ಎಲೆಕ್ಷನ್ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯಡಿಯೂರಪ್ಪ ಅವರ ಜೊತೆ ಮಾತಾಡಿದ್ದೇನೆ. ರಾಜಕೀಯದಲ್ಲೂ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಯಡಿಯೂರಪ್ಪ ಮಾತನಾಡಿ, ಇಡೀ ನಾಡಿಗೆ ಗೊತ್ತಿರುವಂತೆ ಡಾ ಮಂಜುನಾಥ್ ಲಕ್ಷಾಂತರ ಜನರ ಪ್ರಾಣ ಉಳಿಸಿದ್ಧಾರೆ. ಅವರು ಬಿಜೆಪಿ ಸೇರ್ಪಡೆ ಆಗಲಿದ್ದು, ಇಂತಹವರನ್ನ ಅವಿರೋಧವಾಗಿ ಗೆಲ್ಲಿಸಿಕೊಡಬೇಕಿತ್ತು. ಆದರೆ ಚುನಾವಣಾ ರಾಜಕೀಯ ಅನಿವಾರ್ಯ. ಅವರ ಪಕ್ಷ ಸೇರ್ಪಡೆ ಬಗ್ಗೆ ಮೋದಿ ಅವರಿಗೂ ಮಾಹಿತಿ ನೀಡಿದ್ದೆವು. ಅವರು ಕೂಡ ಬಹಳ ಸಂತೋಷಪಟ್ಟರು ಎಂದು ತಿಳಿಸಿದರು.

  • ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ

    ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ಈ ಬಾರಿ ಡಾ. ಮಂಜುನಾಥ್‌ (Dr Manjunath) ಕಣಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರಾಜಕೀಯ ಪ್ರವೇಶಕ್ಕೆ ಡಾ. ಮಂಜುನಾಥ್‌ ಸಮ್ಮತಿ ಸೂಚಿಸುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Devegowda) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಜೆಡಿಎಸ್‌ ಕಚೇರಿಯಲ್ಲಿ ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ.ಮಂಜುನಾಥ್‌ ಅವರ ರಾಜಕೀಯ ಪ್ರವೇಶದ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಮಂಜುನಾಥ್‌ ಇಡೀ ದೇಶಾದ್ಯಂತ ತಮ್ಮದೇ ಆದ ಹೆಸರು ಮಾಡಿದ್ದಾರೆ. ಮುಗಿಲೆತ್ತರಕ್ಕೆ ಹೆಸರು ಮಾಡಿರುವ ಅವರು ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಬರುವುದು ಸರಿಯಲ್ಲ. ಅವರಿಗೆ ಈಗ ಒಂದು ಒಳ್ಳೆ ಸ್ಥಾನವಿದೆ ಎಂದು ಉತ್ತರಿಸಿದರು.

    ಈ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಎಂದು ನಾನು ಒತ್ತಾಯಿಸುತ್ತಿಲ್ಲ. ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನವನ್ನು ನಾವು ಮಾಡುವುದಿಲ್ಲ. ರಾಜಕೀಯಕ್ಕೆ ಬರುವುದಕ್ಕೆ ಅವರು ಸಮ್ಮತಿ ಸೂಚಸುವುದಿಲ್ಲ ಅಂತ ಅಂದುಕೊಂಡಿದ್ದೇನೆ ಎಂದರು.  ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ – ಕೊನೆಯ 10 ನಿಮಿಷದ ಕಂಪ್ಲೀಟ್‌ ವರದಿ ಓದಿ

    ಮೈತ್ರಿ ಸೀಟು ಹಂಚಿಕೆ, ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಕೇಳಿದ್ದಕ್ಕೆ, ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗಗಲಿದೆ. ಅಮಿತ್ ಶಾ ಮತ್ತು ನಡ್ಡಾ ಯಾವ್ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಸ್ಪರ್ಧೆ ವಿಚಾರವನ್ನ ಮೋದಿ, ಅಮಿತ್ ಶಾ ಕುಳಿತು ಚರ್ಚೆ ಮಾಡುತ್ತಾರೆ ಎಂದು ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಇಲ್ಲಿಯವರೆಗೂ ಅಧಿಕೃತವಾಗಿ ಮಂಜುನಾಥ್‌ ಎಲ್ಲಿಯೂ ತಮ್ಮ ನಿರ್ಧಾರವನ್ನು ತಿಳಿಸಿಲ್ಲ.  ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಮೈಸೂರಿನ (Mysuru) ನಾಗರಿಕರ ಪರವಾಗಿ ಫೆ.26 ರಂದು ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದ ಮಂಜುನಾಥ್‌ ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದರು.

  • ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ

    ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ

    ಬೆಂಗಳೂರು: ಕಾಂಗ್ರೆಸ್‍ನವರು (Congress) ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ವಾರ್ ಶುರು ಮಾಡಿದ್ದಾರೆ. ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ ನಮ್ಮ ಬಳಿಯು ಕಾರ್ಯಕರ್ತರಿದ್ದಾರೆ, ಹುಡುಗರಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಮಂಜುನಾಥ್ (Ex MLA Manjunath) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪೋಸ್ಟರ್ ಮೂಲಕ ಅಪಪ್ರಚಾರ ನಡೆಯುತ್ತಿದೆ. ಈ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಈ ಹಿಂದೆ ಪೇ ಸಿಎಂ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡಿದ್ರು. ಈ ಪೋಸ್ಟರ್ ಅಪಪ್ರಚಾರದ ಬಗ್ಗೆ ನಾವೆಲ್ಲಾ ಸಭೆ ನಡೆಸಿದ್ದೇವೆ. ನಾವು ಈ ರೀತಿಯ  ಪೋಸ್ಟರ್ ಮಾಡಿ ಅಂಟಿಸುವುದು ದೊಡ್ಡ ಕೆಲಸ ಅಲ್ಲ. ನಮ್ಮ ಬಳಿಯೂ ಕಾರ್ಯಕರ್ತರ ಪಡೆ ಇದೆ ಎಂದರು.

    ಪೋಸ್ಟರ್ ಎಲ್ಲಿ ಪ್ರಿಂಟ್ ಮಾಡಿಸಬೇಕು?. ಹೇಗೆ ಮಾಡಿಸಬೇಕು ಅನ್ನೋದು ನಮಗೆ ಗೊತ್ತಿದೆ. ನಾವು ಸರ್ಕಾರಕ್ಕೆ, ಗೃಹ ಇಲಾಖೆಗೆ ಎಚ್ಚರಿಕೆ ಕೊಡ್ತಾ ಇದ್ದೀವಿ. ಇದು ಇಲ್ಲಿಗೆ ಮುಗಿಯಬೇಕು. ನಾವು ಮೈ ಕೊಡವಿ ನಿಂತರೆ ಮುಂದೆ ಏನಾಗುತ್ತೆ. ಮುಂದೆ ಯಾವ ಯಾವ ರೀತಿಯ ವೆರೈಟಿ ಪೋಸ್ಟರ್ ಡಿಸೈನ್ ಮಾಡಿಸಿ ಅಂಟಿಸಬೇಕು ನಮಗೆ ಗೊತ್ತಿದೆ. ಇದರ ಹಿಂದೆ ಡಿಸಿಎಂ ಡಿಕೆ. ಶಿವಕುಮಾರ್  (DK Shivakumar) ಮತ್ತು ಅವರ ಬೆಂಬಲಿಗರು ಇದ್ದಾರೆ ಎಂದು ಹೇಳಿದರು.

    ಪೋಸ್ಟರ್ ಗಳ ಬಗ್ಗೆ ನಮ್ಮ ನಾಯಕರು ಮಾತನಾಡಬೇಡಿ ಅಂದಿದ್ರು. ಅದಕ್ಕೆ ನಾವು ಸುಮ್ಮನಿದ್ದೇವೆ. ಈ ಪೋಸ್ಟರ್ ಗಳು (Poster) ಇಲ್ಲಿಗೆ ನಿಲ್ಲಲಿಲ್ಲ ಅಂದ್ರೆ ಮುಂದೆ ಮಾರಾಮಾರಿ ನಡೆಯಬಹುದು. ಅದಕ್ಕೆ ಸರ್ಕಾರವೇ ಹೊಣೆ ಆಗುತ್ತೆ. ನಾವು ಬಳೆತೊಟ್ಟುಕೊಂಡು ಬಂದಿಲ್ಲಾ ನಾವು ರಾಜಕೀಯ ಮಾಡೋದಕ್ಕೆ ಬಂದಿದ್ದೇವೆ. ಬೆಂಗಳೂರಲ್ಲಿ ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಜನರಿಗೆ ತಿಳಿಸ್ತಿದ್ದಾರೆ. ಇವರು ಮಾಡಿದೆಲ್ಲಾ ಸರಿ ಅಂದಿದ್ರೆ ಇದ್ಯಾವುದು ಮಾಡ್ತಿರಲಿಲ್ಲ ಎಂದು ತಿಳಿಸಿದರು.

    ಅಧಿಕಾರ ಇದೆ ಅಂತ ಮಾಡಬೇಡಿ. ರಾಜಕಾರಣದಲ್ಲಿ ಎಲ್ಲರು ಸಾಚಾಗಳಲ್ಲ. ವೈಯಕ್ತಿಕ ಜೀವನವೇ ಬೇರೆನಿಮ್ಮದು ವೈಯಕ್ತಿಕ ಬದುಕಿದೆ ಮುಜುಗರಕ್ಕೀಡಾಗ್ತಿರಾ ಎಂದು ಎಚ್ಚರಿಸಿದ್ದಾರೆ. ಪೇ ಸಿಎಂ ಇರುವ ಕ್ಯೂ ಆರ್ ಇರುವ ಪೋಸ್ಟರ್ ಅಂಟಿಸಿದ್ರು. ಎಲೆಕ್ಷನ್ ನಲ್ಲಿ ಸ್ಮಾರ್ಟ್ ಕಾರ್ಡ್‍ಗಳನ್ನ ನೀಡಿದ್ದ ಏಜೆನ್ಸಿಯೇ ಇವತ್ತು ಕೆಲಸ ಮಾಡುತ್ತಿದೆ. ಆ ತರ ಏಜೆನ್ಸಿಗಳನ್ನ ಇಟ್ಟುಕೊಂಡು ಕೆಟ್ಟಕೆಲಸ ಮಾಡೋದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

  • ನೇರವಾಗಿ ಒಟಿಟಿಯಲ್ಲಿ ರಿಲೀಸ್ ಪಾವನಾ ನಟನೆಯ ‘ರುದ್ರಿ’ ಸಿನಿಮಾ

    ನೇರವಾಗಿ ಒಟಿಟಿಯಲ್ಲಿ ರಿಲೀಸ್ ಪಾವನಾ ನಟನೆಯ ‘ರುದ್ರಿ’ ಸಿನಿಮಾ

    ಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ‘ರುದ್ರಿ’ (Rudri) ಸಿನಿಮಾ ನೇರವಾಗಿ ಇಂದು ಬಿಡುಗಡೆ ಆಗಿದೆ. ನೇರವಾಗಿ ‘ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿ ಆಪ್’ (NAMMAFLIX) ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಿಂದ ನಿರ್ಮಾಪಕರು ಒಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ.

    ಗೊಂಬೆಗಳ ಲವ್ ಖ್ಯಾತಿಯ ಪಾವನಾ (Pavana) ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದು, ಬಡಿಗೇರ ರಾಘವೇಂದ್ರ (Badigera Raghavendra) ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಠಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ರುದ್ರಿ ಭಾಗಿಯಾಗಿದೆ. ಅಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

    ರುದ್ರಿ ಸಿನಿಮಾ 90ರ ದಶಕದ ಕಥೆ. ಆ ಕಾಲದಲ್ಲಿ ಇನ್ನೂ ಮಹಿಳೆಯರಿಗೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳುವಂತಹ ಧೈರ್ಯವಿರಲಿಲ್ಲ. ಅಂತಹ ಮಹಿಳೆಯೊಬ್ಬರ ಶೋಷಣೆಯ ಕಥೆಯನ್ನು ರುದ್ರಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು.

    ಸಿ.ಆರ್. ಮಂಜುನಾಥ್ (Manjunath) ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಧೂ ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ.  ಸುಧಾ ಪ್ರಸನ್ನ ಸೇರಿದಂತೆ ಹಲವು ನುರಿತ ಕಲಾವಿದರ ತಂಡವೇ ತಾರಾಗಣದಲ್ಲಿದೆ.