Tag: Manju

  • ಶುಭಾ ಸ್ಕಿಪಿಂಗ್ ಆಡಿದ್ದೇಗೆ ಗೊತ್ತಾ?

    ಶುಭಾ ಸ್ಕಿಪಿಂಗ್ ಆಡಿದ್ದೇಗೆ ಗೊತ್ತಾ?

    ವಾರ ಹಲವು ಟಾಸ್ಕ್‌ಗಳಲ್ಲಿ  ಬಿಗ್‍ಬಾಸ್ ಮನೆಯ ಸದಸ್ಯರಿಗೆ ಸ್ಕಿಪಿಂಗ್ ಟಾಸ್ಕ್ ಕೂಡ ನೀಡಿದ್ದರು. ಎಲ್ಲರೂ ಗಾರ್ಡನ್ ಏರಿಯದಲ್ಲಿ ಸ್ಕಿಪಿಂಗ್ ಟಾಸ್ಕ್ ಆಡಿದರೆ ಶುಭಾ ಮಾತ್ರ ಡಿಫರೆಂಟ್ ಆಗಿ ಸ್ಟೋರ್ ರೂಮ್‍ನಲ್ಲಿ ಸ್ಕಿಪಿಂಗ್ ಆಡಿದ್ದಾರೆ.

    ನಿನ್ನೆ ಎಲ್ಲರೂ ಒಟ್ಟಾಗಿ ಕುಳಿತು ಡೈನಿಂಗ್ ಹಾಲ್‍ನಲ್ಲಿ ಊಟ ಮಾಡುವಾಗ ಶುಭಾ ನಾನು ಜಾಸ್ತಿ ತಿನ್ನುವುದಿಲ್ಲ. ಸ್ಕಿಪಿಂಗ್ ಮಾಡುತ್ತಾ ಜಂಪ್ ಮಾಡಬೇಕು ಅಂತಾ ಮಂಜುಗೆ ಹೇಳುತ್ತಾರೆ. ಆಗ ಮಂಜು ಕ್ಯಾಮೆರಾ ಮುಂದೆ ಹೋಗಿ ಬಿಗ್‍ಬಾಸ್, ಶುಭಾ ಪೂಂಜಾರವರು ಸ್ಕಿಪಿಂಗ್ ಟಾಸ್ಕ್ ಆಡುತ್ತಾರಂತೆ ಹಾಗಾಗಿ ಒಂದು ಅರ್ಧ ಗಂಟೆ ರೆಸ್ಟ್ ಬೇಕು. ಮಾತನಾಡದೇ ಎನರ್ಜಿಯನ್ನು ಸ್ಟೋರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಎನರ್ಜಿ ಸ್ಟೋರ್ ಆಗಬೇಕೆಂದರೆ ನೀವು ಸ್ಟೋರ್ ರೂಮಿಗೆ ಹಾಕಿಕೊಳ್ಳಿ. ಇಷ್ಟು ಹೇಳಿ ನನ್ನ ಎರಡು ಮಾತು ಮುಗಿಸುತ್ತಿದ್ದೇನೆ ಎನ್ನುತ್ತಾರೆ.

    ಈ ವೇಳೆ ಶುಭ ಸೋಲೋ ಟಾಸ್ಕ್ ನೀಡುವಂತೆ ಕೇಳಿ ಎಂದು ಹೇಳಿದಾಗ, ಮಂಜು ಜೋರಾಗಿ ಮಾತನಾಡಬೇಡ ಎನರ್ಜಿ ಹೋಗುತ್ತದೆ ಎಂದು ಹೇಳುತ್ತಿದ್ದಂತೆ ಬಿಗ್‍ಬಾಸ್ ಬೆಲ್ ಹೊಡೆಯುತ್ತಾ ಸ್ಟೋರ್ ರೂಮ್ ಬಾಗಿಲು ಓಪನ್ ಮಾಡುತ್ತಾರೆ.

    ನಂತರ ಸ್ಟೋರ್ ರೂಮಿಗೆ ಹೋಗಿ ಶುಭ ಬಿಗ್‍ಬಾಸ್ ಇದು ನನ್ನ ಲೆಟರ್ ಗಾಗಿ ಸೋಲೋ ಟಾಸ್ಕ್. ರೋಲ್ ಕ್ಯಾಮೆರಾ ಎಂದು ಸ್ಕಿಪಿಂಗ್ ಆಡುತ್ತಾರೆ. ಈ ವೇಳೆ ರಾಜೀವ್ ಹಾಗೂ ಮಂಜು ಶುಭ ದುಪ್ಪಟ್ಟಾ ಹಿಡಿದು ಸ್ಕಿಪಿಂಗ್ ಆಡಲು ಸಹಾಯ ಮಾಡುತ್ತಾರೆ.

    ಸ್ಕಿಪಿಂಗ್ ಆಡುವಾಗ ಮೊದಲೇ ಶುಭಾ ಎಡವುತ್ತಾರೆ. ಆಗ ರಾಜೀವ್ ಮೂರು ಜನ ಆಡಿಸಿದರು ಶುಭಾ ಒಂದೇ ರೌಂಡ್ ಆಡುತ್ತಾರೆ ಎಂದು ರೇಗಿಸುತ್ತಾರೆ.

  • ರಾಜೀವ್-ವಿಶ್ವ ಕುಸ್ತಿಗೆ ಕಾಮೆಂಟ್ರಿ ಕೊಟ್ಟ ಮಂಜು!

    ರಾಜೀವ್-ವಿಶ್ವ ಕುಸ್ತಿಗೆ ಕಾಮೆಂಟ್ರಿ ಕೊಟ್ಟ ಮಂಜು!

    ದೊಡ್ಮನೆಯ ಸದಸ್ಯರು ನಿನ್ನೆ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕನ್ನಡಿಗರು ಹೊಸ ವರುಷವೆಂದೇ ಭಾವಿಸುವ ಯುಗಾದಿ ಹಬ್ಬ ಬಹಳ ಶ್ರೇಷ್ಠವಾದದ್ದು. ಸಾಮಾನ್ಯವಾಗಿ ಯುಗಾದಿಯಂದು ಎಣ್ಣೆ ಸ್ನಾನ ಮಾಡುವ ವಾಡಿಕೆ ಹಿಂದಿನಕಾಲದಿಂದಲೂ ಇದೆ. ಸದ್ಯ ನಿನ್ನೆ ಮನೆಯ ಪರುಷ ಸದಸ್ಯರು ಮೈಗೆ ಎಣ್ಣೆ ಹಚ್ಚಿಕೊಂಡು ಬಿಸಿಲು ಕಾಯಿಸಿದ್ದಾರೆ.

    ಈ ವೇಳೆ ಮಜಾ ಎನಾಪ್ಪಾ ಅಂದರೆ ಸಿಕ್ಸ್ ಪ್ಯಾಕ್ ಹೊಂದಿರುವ ರಾಜೀವ್ ಸಿಂಗರ್ ವಿಶ್ವ ಜೊತೆ ಕುಸ್ತಿ ಆಡಿದ್ದಾರೆ. ಈ ವೇಳೆ ಇದನ್ನು ಕಂಡು ಮಂಜು ಒಳ್ಳೆಯ ಕಾಂಪಿಟೇಟರ್ ನನ್ನು ಸೆಲೆಕ್ಟ್ ಮಡಿಕೊಂಡಿದ್ದೀಯಾ ಶಿಷ್ಯ, ರಿಟೈಡ್ ಆದ ಮೇಲೆ ಇನ್ನೂ ಮಕ್ಕಳು ಮರಿಗೆ ಹೇಳಿಕೊಡಬೇಕು. ನೀನು ಯಾಕಂದ್ರೆ ದೊಡ್ಡವರು ಯಾರು ಬರುತ್ತಾರೆ.

    ಸಣ್ಣ ಸಣ್ಣ ಮಕ್ಕಳು ಪುಟಾಣಿ ಬೇಬಿ ಸಿಟ್ಟಿಂಗ್ ಮಕ್ಕಳಿಗೆ ನಾನು ಕರೆದೆ, ಆ ಮಕ್ಕಳು ಈ ದೇಹ ನೋಡಿದ ತಕ್ಷಣ ವಾವ್ ಅಂತ ಹೇಳುತ್ತಾರೆ. ನೀನು ಅವರ ಜೊತೆಯಲ್ಲಿಯೇ ಖುಷಿಯಾಗಿ ಆಡಿಕೊಂಡು, ಖುಷಿಪಡಿಸಿಕೊಂಡು ಇರಬೇಕು ಅಷ್ಟೇ ಎಂದು ಕಾಮೆಂಟ್ರಿ ಕೊಡುತ್ತಾರೆ.

    ಕಿಡ್ಸ್ ಕೇರ್ ಓಪನ್ ಮಾಡಿ ಮಕ್ಕಳಿಗೆ ಕುಸ್ತಿ ಕಲಿಸು ಅಷ್ಟೇ. ನಿನ್ನ ಸರಿ ಸಮಾನವಾಗಿ ಆಡಲು ಯಾರ ಕೈನಲ್ಲಿಯೂ ಸಾಧ್ಯವಾಗುವುದಿಲ್ಲ. ಕೈ ನಡುಗುತ್ತದೆ, ತೊಡೆ ಅಲ್ಲಾಡುತ್ತದೆ. ಮುಗೀತು ಕಥೆ ಕ್ರಿಕೆಟ್ ಕೋಚ್, ಗರಡಿ ಕೋಚ್, ಮಸಾಜ್ ಸೆಂಟರ್ ಕಾಲು ನೋವು ಕೈ ನೋವು, ಕೀಲು ನೋವು, ಮಂಡಿ ನೋವು ಅಷ್ಟೇ ಎಂದು ಅಣುಕಿಸುತ್ತಾರೆ.

    ಮಂಜು ಕಾಂಮೆಂಟ್ರಿ ಕೇಳಿ ಮನೆ ಮಂದಿ ಫುಲ್ ನಗುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

  • ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಷ್ಟುದಿನ ಮನೆಯಲ್ಲಿ ಸೈಲೆಂಟ್ ಆಗಿದ್ದ ವೈಷ್ಣವಿ, ಗರ್ಲ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನೀಡಿದಾಗಲಿಂದಲೂ ಮನೆಯಲ್ಲಿ ರೌಡಿಯಂತೆ ಅವಾಜ್ ಹಾಕುತ್ತಾ ಮಿಂಚುತ್ತಿದ್ದಾರೆ.

    ನಿನ್ನೆ ರಘು ಬಾಯ್ಸ್ ಹಾಸ್ಟೆಲ್‍ಗೆ ವೈಷ್ಣವಿಯನ್ನು ಎತ್ತಿಕೊಂಡು ಹೋಗಿ ಹಾಕೋಣ. ಎರಡು ಪಾಯಿಂಟ್ ಆದರೂ ಸಿಗುತ್ತದೆ ಎಂದು ಅಣಕಿಸುತ್ತಿರುತ್ತಾರೆ. ಆಗ ವೈಷ್ಣವಿ ಧೈರ್ಯ ಇದ್ದರೆ ಇಲ್ಲಿ ಬಂದು ಮಾತಾಡು ಎಂದು ಅವಾಜ್ ಹಾಕುತ್ತಾರೆ. ಆಗ ರಘು ವೈಷ್ಣವಿ ಚಪ್ಪಲಿಯನ್ನು ಜೋರಾಗಿ ಒದೆಯುತ್ತಾರೆ. ನಂತರ ವೈಷ್ಣವಿಯವರ ಮತ್ತೊಂದು ಕಾಲಿನ ಚಪ್ಪಲಿಯನ್ನು ಶಮಂತ್ ಹಾಗೂ ರಘು ಸೇರಿಕೊಂಡು ಗಾರ್ಡನ್ ಏರಿಯಾದ ಮೇಲಿರುವ ಸ್ಪೀಕರ್‍ವೊಂದರ ಮೇಲೆ ಇಡುತ್ತಾರೆ.

    ನಂತರ ವೈಷ್ಣವಿಯನ್ನು ಎಳೆದುಕೊಂಡು ಹೋಗಲು ಮಂಜು, ರಾಜೀವ್, ಶಮಂತ್, ರಘು ಪ್ರಯತ್ನಿಸುತ್ತಾರೆ. ಈ ವೇಳೆ ಶುಭ ವೈಷ್ಣವಿಯನ್ನು ಸೇವ್ ಮಾಡಲು ಶುಭಾ ಪೂಂಜಾ ಸಖತ್ ಸರ್ಕಸ್ ನಡೆಸುತ್ತಾರೆ. ಆದರೂ ಬಿಡದ ಹುಡುಗರು ವೈಷ್ಣವಿಯನ್ನು ಬಾಯ್ಸ್ ಹಾಸ್ಟೆಲ್ ವಿಭಾಗಕ್ಕೆ ಎಳೆದುಕೊಂಡು ಹೋಗುತ್ತಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ವೈಷ್ಣವಿ ಓಡಿ ಬರುತ್ತಾರೆ. ಮತ್ತೆ ವೈಷ್ಣವಿಯನ್ನು ಎತ್ತಿಕೊಂಡು ಬಿಸಾಕಿ ಬಿಡುತ್ತೇನೆ ಎಂದು ಮಂಜು ಹೇಳುತ್ತಾರೆ.

    ಆಗ ಶುಭ ಮಂಜುರವರ ಒಂದು ಚಪ್ಪಲಿಯನ್ನು ದೂರಕ್ಕೆ ಎಸೆದರೆ ವೈಷ್ಣವಿ ಮತ್ತೊಂದು ಚಪ್ಪಲಿಯನ್ನು ಸ್ಪೀಕರ್ ಮೇಲೆ ಎಸೆಯಲು ಹೋಗಿ ಬಿಗ್ ಮನೆಯ ಕಾಂಪೌಂಡ್‍ನಿಂದ ಹೊರಕ್ಕೆ ಎಸೆಯುತ್ತಾರೆ. ಈ ವೇಳೆ ಇದನ್ನು ಕಂಡು ಮನೆ ಮಂದಿಯೆಲ್ಲಾ ಸೂಪರ್ ಎಂದು ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

    ಬಳಿಕ ಮಂಜು ಶನಿವಾರ ನೀನು ಹೀಲ್ಸ್ ಚಪ್ಪಲಿ ಹಾಕಿಕೊಳ್ಳುತ್ತೀಯಾ ಅಲ್ವಾ? ಐತೆ ಇರು ಎಂದು ರೇಗಿಸುತ್ತಾರೆ.

  • ಮಾವ ಅನ್ನೋದು ಕೆಟ್ಟ ಪದನಾ- ಪ್ರಶಾಂತ್‍ಗೆ ಕಿಚ್ಚನ ಪ್ರಶ್ನೆ

    ಮಾವ ಅನ್ನೋದು ಕೆಟ್ಟ ಪದನಾ- ಪ್ರಶಾಂತ್‍ಗೆ ಕಿಚ್ಚನ ಪ್ರಶ್ನೆ

    ಬಿಗ್‍ಬಾಸ್ ಕಾರ್ಯಕ್ರಮ ಐದನೇ ವಾರದತ್ತ ಮುನ್ನುಗ್ಗುತ್ತಿದ್ದು, ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರಿಗೆ ಮಾವ ಅನ್ನೋದು ಕೆಟ್ಟ ಪದನಾ ಎಂಬ ಪ್ರಶ್ನೆ ಕೇಳಿದ್ದಾರೆ.

    ಕಳೆದ ವಾರ ಪ್ರಶಾಂತ್ ಸಂಬರ್ಗಿಯವರು ಮಂಜುರನ್ನು ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಜಗಳ ಮಾಡಿದ್ದರು. ಈ ವೇಳೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ದೊಡ್ಡ ವಾಗ್ವಾದವೇ ನಡೆದಿತ್ತು. ಸದ್ಯ ನಿನ್ನೆ ಈ ವಿಚಾರವಾಗಿ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿ ಜೊತೆ ಪ್ರಸ್ತಾಪಿಸಿದ್ದಾರೆ.

    ಪ್ರಶಾಂತ್‍ರವರೇ, ಮಾಜಿ ಮಾವನಾಗಲು ತೀರ್ಮಾನ ಮಾಡಿದ್ದೇಕೆ ಎಂದು ಕಿಚ್ಚ ಕೇಳುತ್ತಾರೆ. ಆಗ ಮುಂದೆ ಮಾವ ಎಂದು ಹಿಂದೆ ನನ್ನನ್ನು ಗೇಲಿ ಮಾಡುತ್ತಾರೆ ಎಂಬ ಮಾತು ನನ್ನ ಕಿವಿಗೆ ಬಿತ್ತು. ಹಾಗಾಗಿ ಎಲ್ಲರ ಬಳಿ ಹೋಗಿ ನನ್ನ ತಂದೆ-ತಾಯಿ ಇಟ್ಟಿರುವ ಹೆಸರಿಟ್ಟು ಕರೆಯಿರಿ ಪ್ರೀತಿ ಜಾಸ್ತಿ ಇದೆ ಅಂತಾ ಕೇಳಿಕೊಂಡೆ ಎಂದು ಹೇಳುತ್ತಾರೆ.

    ಹಿಂದೆಗಡೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನಿಮಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ, ಹೀಗೆ ಜೆನರಲಿ ಬಂದು ಈ ತರ ಡಬಲ್ ಮಿನಿಂಗ್ ಇದೆ ಎಂದು ಹೇಳಿದರು. ಆಗ ಬೇಡ ಯಾಕೆ ನನ್ನ ಇಮೇಜ್ ಹಾಳು ಮಾಡಿಕೊಳ್ಳಬೇಕು ಎಂದು ಒಬ್ಬೊಬ್ಬರಿಗೂ ಹೋಗಿ ವೈಯಕ್ತಿಕವಾಗಿ ಮನವಿ ಮಾಡಿಕೊಂಡಿದ್ದೇನೆ ಎಂದರು.

    ನಂತರ ಈ ರೀತಿ ಮಾಹಿತಿ ಕೊಟ್ಟವರು ನಾನು ಹೇಳಿದ್ದು ಸುಳ್ಳು ಎಂದು ಕೂಡ ಹೇಳುತ್ತಾರೆ. ಆಗ ನೀವು ಸೀರಿಯಸ್ ಆಗಿ ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡಬೇಕಾಗಿತ್ತು ಎಂದಾಗ, ನಾನು ಈ ವಿಚಾರವಾಗಿ ಕೇಳಿದಾಗ ನಾನು ಹೇಳಿದ್ದು ಸುಳ್ಳು, ಆದರೆ ಹೊರಗಡೆ ಈ ರೀತಿ ದ್ವಂಧ ಅರ್ಥ ಬರುತ್ತದೆ. ನಿನ್ನ ಹೆಸರಿರುವಾಗ ನೀನು ಯಾಕೆ ಈ ರೀತಿ ಕರೆಸಿಕೊಳ್ಳುತ್ತಿದ್ದಿಯಾ ಎಂದು ಹೇಳಿದರು. ಆಗ ನನಗೂ ಆಚೆ ಇರಲಿ, ಬಿಡಲಿ ನನ್ನ ಹೆಸರಿನಲ್ಲಿ ಕರೆಸಿಕೊಳ್ಳಬೇಕು ಎಂದು ಅನಿಸಿತು ಎಂದು ಹೇಳುತ್ತಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಮಂಜು, ನಾನು ಒಬ್ಬರನ್ನು ಗೇಲಿ ಮಾಡುತ್ತೇನೆ, ರೇಗಿಸುತ್ತೇನೆ ಎಂದರೆ ತುಂಬಾ ಪ್ರೀತಿಸುತ್ತೇನೆ ಎಂದು ಅರ್ಥ. ಇಲ್ಲಿಗೆ ಬಂದು 40 ದಿನ ಆಗಿದೆ. ಅಂದಿನಿಂದ ನಾನು ಮಾವ ಎಂದು ಕರೆದುಕೊಂಡು ಬರುತ್ತಿದ್ದೇನೆ. ಆದರೆ ಸಡನ್ ಆಗಿ ಹಾಗೇ ಕರೆಯಬೇಡ ಎಂದಾಗ ನಾನು ಆಗುವುದಿಲ್ಲ ಎಂದು ಹೇಳಿದೆ. ಈ ಮಾತನ್ನು ಮುಂಚೆಯೇ ಹೇಳಿದ್ದರೆ ಬಹುಶಃ ಒಪ್ಪಿಕೊಳ್ಳುತ್ತಿದ್ದೆ. ಆದರೆ ಚಕ್ರವರ್ತಿಯವರು ಬಂದ ನಂತರ ಅವರ ಮಾತನ್ನು ಕೇಳಿ ಇವರು ಮಾತನಾಡಿದ್ದು, ನನಗೆ ಇಷ್ಟವಾಗಲಿಲ್ಲ. ಬೇರೆಯವರ ಮಾತು ಕೇಳಿ ನೀವು ಹೇಗೆ ನಿರ್ಧರಿಸುತ್ತೀರಾ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ.

  • ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಬಿಗ್‍ಬಾಸ್ ಮನೆಯ ಸದಸ್ಯರಿಗೆ ಪ್ರತಿ ನಿತ್ಯ ಒಂದಲ್ಲಾ ಒಂದು ಚುಟುವಟಿಕೆ ನೀಡುತ್ತಿರುತ್ತಾರೆ. ಸದ್ಯ ಹೊರಗಿನಿಂದ ಬಂದ ಸ್ಪರ್ಧಿಗಳು ಮನೆ ಒಳಗಿರುವ ಸದಸ್ಯರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು, ಪೆಟ್ಟಿಗೆಯೊಂದರಲ್ಲಿ ಕೆಲವು ವಸ್ತುಗಳಿದ್ದು, ಅವುಗಳನ್ನು ಸೂಕ್ತ ಕಾರಣಗಳೊಂದಿಗೆ ಮನೆಯ ಸದಸ್ಯರಿಗೆ ನೀಡುವಂತೆ ಸೂಚಿಸಿದ್ದರು.

    ಅದರಂತೆ ಈ ಚಟುವಟಿಕೆ ವೇಳೆ ಪ್ರಿಯಾಂಕ ತಿಮ್ಮೇಶ್, ಯಾವಾಗಲೂ ದಿವ್ಯಾ ಸುರೇಶ್, ಮಂಜು ಜೊತೆಗೆ ಇರುತ್ತಾರೆ. ಇದು ಒಬ್ಬರಿಗೆ ಮೀಸಲಾಗಿರುವಂತೆ ಕಾಣಿಸುತ್ತದೆ. ಹಾಗಾಗಿ ನೀವು ಎಲ್ಲರ ಜೊತೆಗೂ ಬೆರೆಯಬೇಕು ಎಂದು ಬಕೆಟ್ ನೀಡಿದರು. ಇದಾದ ನಂತರ ದಿವ್ಯಾ ಸುರೇಶ್, ಪ್ರಿಯಾಂಕ ಬಳಿ ಹೋಗಿ, ನಾನು ಮಂಜು ಜೊತೆಗೆ ಇರುತ್ತೇನೆ ಎಂದು ಹೇಳಿದ್ರಲ್ಲಾ, ನಿಮಗೆ ಯಾಕೆ ಹಾಗೆ ಅನಿಸಿತು? ನೀವು ಯಾವ ರೀತಿ ನೋಡುತ್ತಿದ್ದೀರಾ ಎಂಬುವುದನ್ನು ಹೇಳುತ್ತೀರಾ ಎಂದು ಕೇಳುತ್ತಾರೆ.

    ಆಗ ಪ್ರಿಯಾಂಕ ನಾನು ನಿಮ್ಮೆಲ್ಲರನ್ನು ಹೊರಗಿನಿಂದಲೇ ಪರಿಚಯ ಮಾಡಿಕೊಂಡಿದ್ದೇನೆ. ನೀವು ಯಾವಾಗಲೂ ಮಂಜು ಜೊತೆಯಲ್ಲಿಯೇ ಇರುತ್ತೀರಾ ಅದು ತಪ್ಪೋ, ಸರಿಯೋ ನನಗೆ ಗೊತ್ತಿಲ್ಲ. ನೀವು ಬೇರೆಯವರೊಂದಿಗೆ ಬೆರೆಯದೇ ಇರುವುದು ಕಾಣಿಸುತ್ತಿದೆ.

    ನಿಮಗೆ ಅವರ ಜೊತೆಯಲ್ಲಿಯೇ ಮಾತನಾಡಲು, ಕಂಫರ್ಟ್ ಎಂದು ಅನಿಸಿದರೆ, ಪ್ರೀತಿ, ವಿಶ್ವಾಸವಿದ್ದರೆ ಅವರೊಂದಿಗೆಯೇ ಇರಿ ತೊಂದರೆ ಏನು ಇಲ್ಲ. ನಾವು ಸಾವಿರ ತರ ನೋಡಿಕೊಳ್ಳುತ್ತೇವೆ. ಎಲ್ಲರ ದೃಷ್ಟಿ ಒಂದೇ ರೀತಿ ಇರುವುದಿಲ್ಲ. ನಾನು ನನ್ನ ವೀವ್‍ನಲ್ಲಿ ಹೇಳುತ್ತೇನೆ. ನೀವು ನಿಮ್ಮ ವೀವ್‍ನಲ್ಲಿ ಯೋಚನೆ ಮಾಡಿಕೊಳ್ಳಿ ಅಷ್ಟೇ ಎಂದು ಹೇಳುತ್ತಾರೆ.

    ನಂತರ ದಿವ್ಯಾ ಸುರೇಶ್ ಬೇರೆ ರೀತಿ ಏನಾದರೂ ಹೊರಗಡೆ ಬಿಂಬಿಸುತ್ತಿದ್ದಿಯಾ ಎಂದು ಕೇಳಿದಾಗ, ಪ್ರಿಯಾಂಕ ಹಾಗೇ ಏನೆಲ್ಲ. ನೀವಿಬ್ಬರು ಒಳ್ಳೆಯ ಫ್ರೆಂಡ್ಸ್, ಮಂಜು ಅವರು ಕೂಡ ಯಾವತ್ತು ಕೆಟ್ಟ ರೀತಿ ನಡೆದುಕೊಂಡಿಲ್ಲ. ನೀವು ಕೂಡ ಯಾವತ್ತು ಹಾಗೇ ನಡೆದುಕೊಂಡಿಲ್ಲ. ನನಗೆ ನೀವಿಬ್ಬರು ಕಪಲ್ ರೀತಿ ಕಾಣಿಸಿಲ್ಲ. ನೀವಿಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದೀರಾ ಎಂದು ಪ್ರಿಯಾಂಕ ಅಭಿಪ್ರಾಯ ತಿಳಿಸಿದ್ದಾರೆ.

  • ನನ್ನ ಮದ್ವೆಯಾಗಲ್ವ ಅಂತ ಮಂಜುನ ದಿವ್ಯಾ ಕೇಳಿದ್ಯಾಕೆ..?

    ನನ್ನ ಮದ್ವೆಯಾಗಲ್ವ ಅಂತ ಮಂಜುನ ದಿವ್ಯಾ ಕೇಳಿದ್ಯಾಕೆ..?

    ಬಿಗ್ ಬಾಸ್ ಆರಂಭವಾದಾಗಲೇ ಮಂಜು ಹಾಗೂ ದಿವ್ಯಾ ಸುರೇಶ್ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಈ ವಿಚಾರ ಚರ್ಚೆಗೆ ಗ್ರಾಸವಾಗ್ತಿದ್ದಂತೆಯೇ ಇಬ್ಬರೂ ಬೇರೆಯವರ ಜೊತೆಗೂ ಬರೆಯಲು ಆರಂಭಿಸಿದ್ದರು. ಈ ಮಧ್ಯೆ ಇದೀಗ ದಿವ್ಯಾ ಸುರೇಶ್ ಅವರು ಮಂಜು ಬಳಿ ನನ್ನ ಮದುವೆಯಾಗಲ್ವ ಎಂದು ಕೇಳಿ ಮತ್ತೆ ಅಚ್ಚರಿ ಹುಟ್ಟಿಸಿದ್ದಾರೆ.

    ಹೌದು. ಮಂಜು, ಶುಭಾ ಹಾಗೂ ದಿವ್ಯಾ ಸುರೇಶ್ ಮೂವರು ಒಟ್ಟಿಗೆ ಕುಳಿತು ಮಾತಾಡ್ತಿದ್ದರು. ಈ ವೇಳೆ ದಿವ್ಯಾ ಅವರು ಶುಭಾ ಬಳಿ ಹೇರ್ ಫಾಲ್ ಬಗ್ಗೆ ಹೇಳಿಕೊಂಡರು. ಇತ್ತ ಮಂಜು.. ನಂಗೆ ಬಿಳಿ ಕೂದಲೇ ಇರ್ಲಿಲಲ್ಲ, ಈಗ ಬಿಳಿ ಕೂದಲು ಬರ್ತಿವೆ. ಹೋಗೋಷ್ಟರಲ್ಲಿ ತಲೆ ತುಂಬಾ ಬೆಳ್ಳಗೆ ಆಗ್ಬೇಕು ಅಂದ್ರು. ಆಗ ದಿವ್ಯಾ, ಹೊಸ ಲುಕ್ ಚೆನ್ನಾಗಿರುತ್ತೆ.. ನೀನು ಹೆಂಗಿದ್ರೂ ಚೆನ್ನಾಗಿರ್ತಿಯಾ ಬಿಡು ಅಂದ್ರು.

    ಆಗ ಮಂಜು.. ಅಲ್ಲ ನಿನಿಗೆ ಚೆನ್ನಾಗಿ ಕಾಣ್ತೀನಿ. ಮದ್ವೆ ಆಗಬೇಕಲ್ವಮ್ಮ. ಈವಾಗ್ಲೇ ವಯಸ್ಸು ತುಂಬಾ ಆಗ್ಬಿಟ್ಟದೆ ಅಂತ ಶುರು ಮಾಡಿದ್ರು. ಇದೇ ವೇಳೆ ದಿವ್ಯಾ… ಅಂದ್ರೆ ನನ್ನ ಮದುವೆ ಆಗಲ್ವ ಎಂದು ಪ್ರಶ್ನೆ ಹಾಕಿಯೇ ಬಿಟ್ಟರು. ದಿವ್ಯಾ ಪ್ರಶ್ನೆ ಕೇಳಿ ಕಳವಳಗೊಂಡ ಮಂಜು.. ಯೋಚನೆ ಮಾಡ್ತಾ ಇದ್ದೀನಿ ಏನ್ ಮಾಡಬೇಕು ಅಂತ ಹೇಳುವ ಮೂಲಕ ಜಾರಿಕೊಂಡ್ರು.

    ಅಲ್ಲದೆ ಸ್ವಲ್ಪ ಹೊತ್ತಿನ ಬಳಿಕ ಅಲ್ಲಮ್ಮ ನೀನು ಮೂರು ವರ್ಷ ಮದುವೆ ಆಗಲ್ಲ ಅಂತ ಹೇಳಿದ್ದಿ ಅಲ್ವ. ಆದ್ರೆ ನಂಗೆ ಬಿಗ್‍ಬಾಸ್ ಮನೆಯಿಂದ ಹೋದ ತಕ್ಷಣ ಮದುವೆ ಆಗ್ಬೇಕು. 2-3 ವರ್ಷ ಕಾಯೋ ಸೀನೇ ಇಲ್ಲ. ಆಗಲ್ಲಮ್ಮ ವಯಸ್ಸಾಗಿದೆ ಅಂತ ಹೇಳಿದ್ದಾರೆ. ಆಗ ಶುಭಾನೂ ಮಂಜು ಮಾತಿಗೆ ದನಿಗೂಡಿಸಿದ್ರು. ಇಬ್ಬರದ್ದೂ ಇದೇ ವರ್ಷ ಮದುವೆ ಅಲ್ವ ನೈಸ್ ಅಂತ ದಿವ್ಯಾ ಸುರೇಶ್ ಹೇಳಿದ್ರು.

    ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದು ಹೊರಗೆ ಬಂದ ಬಳಿಕ ಮನೆಯೊಳಗೆ ಕ್ಲೋಸ್ ಆಗಿದ್ದವರನ್ನೇ ಮದ್ವೆಯಾಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಮತ್ತೆ ಒಂದಾದ ಮಂಜು-ಪ್ರಶಾಂತ್!

    ಮತ್ತೆ ಒಂದಾದ ಮಂಜು-ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕಿತ್ತಾಡಿಕೊಂಡಿದ್ದ ಮಂಜು ಹಾಗೂ ಪ್ರಶಾಂತ್ ನಿನ್ನೆ ಮತ್ತೆ ಒಂದಾಗಿದ್ದಾರೆ.

    ಮೊದಮೊದಲಿಗೆ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗ ಪ್ರಶಾಂತ್ ಸಂಬರ್ಗಿಯನ್ನು ಮಂಜು ಪವಾಗಡ ಮಾವ ಎಂದು ಕರೆಯಲು ಆರಂಭಿಸಿದರು. ಅಂದಿನಿಂದ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮಾವ ಎಂದೇ ಫೇಮಸ್ ಆದರು.

    ಆದರೆ ಎರಡು ದಿನಗಳ ಹಿಂದೆ ಪ್ರಶಾಂತ್ ಸಂಬರ್ಗಿ, ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಸ್ವಿಮಿಂಗ್ ಪೂಲ್ ಬಳಿ ಮಂಜು ಮೇಲೆ ರೇಗಾಡಿ ಜಗಳ ಮಾಡಿದ್ದರು. ಈ ಮಧ್ಯೆ ಪ್ರಶಾಂತ್ ದಿವ್ಯಾ ಸುರೇಶ್ ಹೆಸರು ಎತ್ತಿದ್ದಕ್ಕೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಇವರಿಬ್ಬರ ಜಗಳಕ್ಕೆ ಬಿಗ್‍ಮನೆ ಕಾವೇರಿತ್ತು.

    ಇದೀಗ ನಿನ್ನೆ ಮಂಜು ಪ್ರಶಾಂತ್ ಬಳಿ ಹೋಗಿ ಸಾರಿ ಎಂದು ಕೇಳಿದ್ದಾರೆ. ಈ ವೇಳೆ ಪ್ರಶಾಂತ್ ನಾನು ನಿನಗೆ ಮೊದಲಿನಿಂದಲೂ ನಾಲ್ಕು ಬಾರಿ ಮಾವ ಎಂದು ಕರೆಯಬೇಡ ಅಂತ ಹೆಳಿದ್ದೆ. ಅಲ್ಲದೇ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ರಿಕ್ವೆಸ್ಟ್ ಕೂಡ ಮಾಡಿಕೊಂಡಿದ್ದೆ, ಆದರೂ ನೀನು ಹಾಗೆಯೇ ಕರೆಯುತ್ತಿದೆ ಎಂದು ಹೇಳುತ್ತಾರೆ.

    ಈ ವೇಳೆ ಮಂಜು ನಾನು ಮೊದಲಿನಿಂದಲೂ ನಿಮಗೆ ಮಾವ ಎಂದು ಕರೆದು ಅಭ್ಯಾಸ ಆಗಿ ಹೋಯಿತು. ಹಾಗಾಗಿ ನಿಮ್ಮನ್ನು ಹಾಗೇ ಕರೆಯುತ್ತಿದ್ದೆ ಎಂದು ಹೇಳಿದಾಗ ಹೋಗಲಿ ಬಿಡು ಇಬ್ಬರು ಮಾತನಾಡಿದ್ದು, ತಪ್ಪಾಗಿದೆ ಎಂದು ಹೇಳಿ ಹೆಗಲ ಮೇಲೆ ಕೈ ಹಾಕಿಕೊಂಡು ಒಟ್ಟಿಗೆ ಹೋಗುತ್ತಾರೆ.

  • ಟಾಸ್ಕ್ ನಲ್ಲಿ ಸಂಬರ್ಗಿ ವೀಕ್ನೆಸ್ ಬಯಲು ಮಾಡಿದ ಕ್ಯಾಪ್ಟನ್ ಮಂಜು

    ಟಾಸ್ಕ್ ನಲ್ಲಿ ಸಂಬರ್ಗಿ ವೀಕ್ನೆಸ್ ಬಯಲು ಮಾಡಿದ ಕ್ಯಾಪ್ಟನ್ ಮಂಜು

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಪದೇ ಪದೇ ತಕರಾರುಗಳನ್ನು ಮಾಡಿಕೊಂಡು ಸ್ಪರ್ಧಿಗಳೊಂದಿಗೆ ಮಾತಿನ ಸಮರಕ್ಕೆ ಸಿದ್ಧರಾಗುವ ಪ್ರಶಾಂತ್ ಸಂಬರ್ಗಿ ಅವರ ವೀಕ್ನೆಸ್ ಒಂದನ್ನು ಮನೆಯ ಕ್ಯಾಪ್ಟನ್ ಮಂಜು ಅವರು ಬಯಲು ಮಾಡಿದ್ದಾರೆ.

    ಬಿಗ್‍ಮನೆಯಲ್ಲಿ ನಡೆದ ‘ಬಾಲು ಬಲಿ’ ಟಾಸ್ಕ್ ನಂತರ ಸ್ಪರ್ಧಿಗಳೆಲ್ಲರೂ ಅಲ್ಲಲ್ಲಿ ಗುಂಪುಗುಂಪಾಗಿ ಕುಳಿತು ಆಟದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಈ ವೇಳೆ ಮಾತಿಗಿಳಿದ ಅರವಿಂದ್, ಶುಭಾ, ನಿಧಿ ಮತ್ತು ಮಂಜು… ಪ್ರಶಾಂತ್ ಅವರ ಬಗ್ಗೆ ವಿಮರ್ಶೆ ಮಾಡಲು ಮುಂದಾಗಿದ್ದಾರೆ.

    ಅರವಿಂದ್, ಪ್ರಶಾಂತ್ ಅವರು ಟಾಸ್ಕ್ ಎಂದು ಬಂದಾಗ ಸರಿಯಾಗಿ ಆಟವಾಡುವುದಿಲ್ಲ. ಬೇರೆ ಟೈಮ್‍ನಲ್ಲಿ ಮಾತ್ರ ಎಲ್ಲಾ ತರಹದ ಮಾತುಗಳು ಕೂಡ ಅವರ ಬಾಯಲ್ಲಿ ಬರುತ್ತದೆ. ಗೇಮ್ ಬಗ್ಗೆ ಹಲವು ಬಗೆಯ ವಿಮರ್ಶೆಗಳನ್ನು ಮಾತನಾಡುತ್ತಾರೆ. ಆದರೆ ಅವರ ಸರದಿ ಬಂದಾಗ ಆಟದಲ್ಲಿ ಸರಿಯಾಗಿ ಆಟವಾಡುವುದಿಲ್ಲ ಎಂದಿದ್ದಾರೆ. ಇದಕ್ಕೆ ನಿಧಿ ಹಾಗೂ ಶುಭಾ ದನಿಗೂಡಿಸಿದ್ದಾರೆ.

    ನಂತರ ಮಾತು ಪ್ರಾರಂಭಿಸಿದ ಮಂಜು, ಪ್ರಶಾಂತ್ ಅವರ ಸಮಸ್ಯೆ ಏನು ಗೊತ್ತಾ? ಗುಂಪಿನಲ್ಲಿ ಟಾಸ್ಕ್ ಕೊಟ್ಟರೆ ಅವರು ಯಾವುದನ್ನು ಬೇಕಾದರು ಮಾಡಲು ರೆಡಿ. ಆದರೆ ಒಬ್ಬರೇ ಮಾಡುವ ಟಾಸ್ಕ್ ಕೊಟ್ಟರೆ ಅವರ ಅಪ್ಪನ ಆಣೆ ಮಾಡುವುದಿಲ್ಲ. ಅವರು ಮಾತಿನಲ್ಲಿ ಮಾತ್ರ ಇತರರಿಗೆ ಹಲವು ರೀತಿಯ ಚಮಕ್ ಕೊಡುತ್ತಾರೆ ಎಂದರು.

    ಈ ಸಂದರ್ಭ ಹಿಂದಿನ ಕೆಲವು ಟಾಸ್ಕ್‍ಗಳು ಮುಗಿದ ನಂತರ ಸಂಬರ್ಗಿ ಹೇಳಿದ ಕೆಲವು ಮಾತುಗಳನ್ನು ನಿಧಿ ನೆನಪಿಸಿಕೊಂಡು ನಕ್ಕರು. ಸಂಬರ್ಗಿ ಕರ್ನಾಟಕದಲ್ಲಿ ಸಮಸ್ಯೆ ಬಂದಾಗ ಯಾವ ರೀತಿ ಧ್ವನಿ ಎತ್ತುತ್ತಿದ್ದರೋ ಅದೇ ರೀತಿ ಬಿಗ್ ಮನೆಯಲ್ಲೂ ದನಿ ಎತ್ತುತ್ತಿದ್ದಾರೆ. ಇದನ್ನು ನೋಡುತ್ತಿರುವ ಕೆಲವು ಸ್ಪರ್ಧಿಗಳ ಮನದಲ್ಲಿ ಬೇಸರ ಹೊಗೆಯಾಡುತ್ತಿದೆ.

  • ಮಂಜುರನ್ನು ಸುಳ್ಳುಗಾರ ಎಂದ ದಿವ್ಯಾ ಸುರೇಶ್!

    ಮಂಜುರನ್ನು ಸುಳ್ಳುಗಾರ ಎಂದ ದಿವ್ಯಾ ಸುರೇಶ್!

    -ಮಂಜು ಮಾತನಾಡದ್ದಕ್ಕೆ ಮುನಿಸಿಕೊಂಡ ದಿವ್ಯಾ ಸುರೇಶ್

    ಬಿಗ್‍ಬಾಸ್ ಶೋ ಆರಂಭದಲ್ಲಿಯೇ ಮಂಜು ಎಣೆದ ಬಲೆಗೆ ಬಿದ್ದ ದಿವ್ಯಾ ಸುರೇಶ್, ಇದೀಗ ಎಲ್ಲಿಯೇ ಹೋದರೂ, ಬಂದರೂ ಮಂಜು ಜಪ ಮಾಡುತ್ತಾರೆ. ಹಲವಾರು ಬಾರಿ ಈ ಜೋಡಿ ಕಿತ್ತಾಡಿದರು, ಮುನಿಸಿಕೊಂಡರೂ ನಂತರ ಕೆಲವೇ ಸಮಯದಲ್ಲಿ ಎಲ್ಲವನ್ನು ಮರೆತು ಒಟ್ಟಿಗೆ ಹೊಂದಿಕೊಂಡು ಖುಷಿಖುಷಿಯಾಗಿರುತ್ತಾರೆ. ಸದ್ಯ ನಿನ್ನೆ ದಿವ್ಯಾ ಸುರೇಶ್ ಮಂಜು ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಮುನಿಸಿಕೊಂಡು ಚಿಕ್ಕಮಕ್ಕಳಂತೆ ನೀನು ನನ್ನ ಜೊತೆ ಮಾತನಾಡುತ್ತಿಲ್ಲ ಎಂದು ಮಂಜು ಬಳಿ ಹೇಳಿಕೊಂಡಿದ್ದಾರೆ.

    ನಾನು ದಿವ್ಯಾ ಉರುಡುಗನ ಕರೆದೆ ಆದರೆ ಅವಳು ವಾಶ್ ರೂಮ್‍ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು. ನೀನು ಕೂಡ ನನ್ನ ಜೊತೆ ಮಾತನಾಡುತ್ತಿಲ್ಲ. ಅಲ್ಲಿ ನಾನು ಶುಭಾ ನಿಂತಿದ್ದಾಗ ಶುಭಾರನ್ನು ಮಾತ್ರ ಆಚೆ ಹೋಗಲು ಕರೆದೆ ಎಂದಾಗ, ಇಲ್ಲ ನಾನು ಯಾರನ್ನು ಕರೆದಿಲ್ಲ ಎಂದು ಮಂಜು ಹೇಳುತ್ತಾರೆ. ಇದಕ್ಕೆ ದಿವ್ಯಾ ಇಲ್ಲ ನೀನು ಕರೆದೆ ಅಂದಾಗ, ಶುಭಾ ಚಿಕನ್ ಕೊಟ್ಟ ನಂತರ ಕರೆದೆ, ಆ ವೇಳೆ ನೀನು ಪ್ರಶಾಂತ್ ಜೊತೆ ಮಾತನಾಡುತ್ತಿದ್ದೆ. ಹಾಗಾಗಿ ಕರೆಯುವುದು ಬೇಡ ಎಂದು ಸುಮ್ಮನಾದೆ ಅಂತಾರೆ.

    ಆಗ ದಿವ್ಯಾ ಸುರೇಶ್ ಲಯರ್, ಸುಳ್ಳು ಪುರಕ, ಬೇಜಾರಾಗುತ್ತಿದೆ ನನಗೆ ಯಾರು ಮಾತನಾಡಿಸುತ್ತಿಲ್ಲ. ಎಲ್ಲರೂ ಸಿಟ್ಟಿನಲ್ಲಿದ್ದಾರೆ, ನನ್ನ ಪಾಯಿಟ್ಸ್ ಜಾಸ್ತಿ ಇರುವುದರಿಂದ ಸಿಟ್ಟಿನಲ್ಲಿದ್ದಾರೆ ಎಂದು ಹೇಳುತ್ತಾರೆ. ಆಗ ಮಂಜು ಇರಬಹುದು ಅವರಿಗೆ ಜಾಸ್ತಿ ಇದ್ದಾಗ ನೀನು ಸಿಟ್ಟಿನಲ್ಲಿ ಇದ್ದಾ? ಇಲ್ವಾಲ್ಲ ಬಿಡು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾರೆ.

    ಈ ವೇಳೆ ದಿವ್ಯಾ ನೀನು ಕೂಡ ಮಾತನಾಡುತ್ತಿಲ್ಲ. ಆಚೆ ಕೂಡ ನನ್ನನ್ನು ಕರೆದಿಲ್ಲ. ಅಳು ಬರುತ್ತಿದೆ ಅಂತಾರೆ, ಆಗ ಮಂಜು ಹಾಗೇಲ್ಲ ಏನು ಇಲ್ಲ ಬಾ ಎಂದು ಬೆನ್ನು ತಟ್ಟಿ, ಹೆಗಲ ಮೇಲೆ ಕೈ ಹಾಕಿಕೊಂಡು ಸಮಾಧಾನ ಪಡಿಸುತ್ತಾರೆ. ಸದ್ಯ ಇಬ್ಬರಿಬ್ಬರ ಮಧ್ಯೆ ಇರುವ ಅಂಡರ್‍ಸ್ಟಡಿಂಗ್‍ಗೆ ಜನ ಮನಸೋತಿದ್ದಾರೆ ಎಂದೇ ಹೇಳಬಹುದಾಗಿದೆ.

  • ದಿವ್ಯಾ ಸುರೇಶ್‍ನ ಇಷ್ಟಪಡ್ತಿದ್ದೀನೆಂದು ಮನಸಾರೆ ಹೇಳಿದ ಮಂಜು

    ದಿವ್ಯಾ ಸುರೇಶ್‍ನ ಇಷ್ಟಪಡ್ತಿದ್ದೀನೆಂದು ಮನಸಾರೆ ಹೇಳಿದ ಮಂಜು

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನಗಳು ಮುಂದೆ ಹೋಗುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕಾಲಕಳೆಯುತ್ತಿದ್ದಾರೆ. ಈ ನಡುವೆ ಕೆಲ ಸ್ಪರ್ಧಿಗಳಿಗೆ ಕೆಲವರಲ್ಲಿ ಪ್ರೀತಿ ಚಿಗುರೊಡೆದಿದೆ. ಇದೇ ಸಾಲಿನಲ್ಲಿ ಮಂಜು ಅವರು ಕೂಡ ದಿವ್ಯಾ ಸುರೇಶ್ ರನ್ನು ಕಂಡು ಮನಸಾರೆ ಇಷ್ಟಪಡುತ್ತಿದ್ದೇನೆಂದು ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.

    ಶುಭಾ, ಮಂಜು ಬಳಿ ಬಂದು ನೀನು ನನ್ನ ಹಾಗೆ ಮನಸ್ಥಿತಿಯವನು, ನಿನಗೆ ಬೇರೊಬ್ಬರೊಂದಿಗೆ ಯಾವುದನ್ನು ಮುಚ್ಚಿಡಲು ಆಗುವುದಿಲ್ಲ. ಹಾಗಾಗಿ ನಿನ್ನ ಬಳಿ ಒಂದು ಪ್ರಶ್ನೆ ಕೇಳುತ್ತೇನೆ. ಪ್ರಾಮಾಣಿಕವಾಗಿ ಉತ್ತರ ಕೊಡು ಎಂದು ಉಪಾಯದಿಂದ ನಿನಗೆ ದಿವ್ಯಾ ಸುರೇಶ್ ಮೇಲೆ ನಿಜವಾಗಿಯೂ ಲವ್ ಆಗಿಲ್ವ, ಅವಳನ್ನು ಇಷ್ಟಪಡುತ್ತೀಯಾ ಎಂದು ಕೇಳಿದ್ದಾರೆ.

    ಶುಭಾ ಅವರ ಪ್ರಶ್ನೆಗೆ ಉತ್ತರಿಸಿದ ಮಂಜು 100% ಇಷ್ಟಪಡುತ್ತೇನೆ. ಆದರೆ ಆ ರೀತಿಯಲ್ಲ. ಕೆಲವೊಮ್ಮೆ ಅನಿಸುತ್ತದೆ ಆದರೆ ಅದು ನಿಜಜೀವನದಲ್ಲಿ ಆಗಲ್ಲ ಅನಿಸುತ್ತೆ. ಒಂದೊಮ್ಮೆ ಆಕೆಯೊಂದಿಗೆ ನಾನು ಪ್ರೀತಿ ವಿಷಯವಾಗಿ ಮಾತನಾಡಿದ್ದೆ. ಆಗ ದಿವ್ಯ ತನ್ನ ಕಷ್ಟಗಳನ್ನು ನನ್ನೊಂದಿಗೆ ಹೇಳಿಕೊಂಡಿದ್ದಾಳೆ. ಆಕೆ ಜೀವನದಲ್ಲಿ ತುಂಬಾ ನೊಂದಿದ್ದಾಳೆ. ಆಕೆಗೆ ನನ್ನಂತಹ ಒಬ್ಬ ಉತ್ತಮ ಸ್ನೇಹಿತ ಬೇಕಾಗಿದ್ದಾನೆ ಎಂದು ಅವಳ ಅಭಿಪ್ರಾಯವಾಗಿತ್ತು. ಹಾಗಾಗಿ ಅವಳೊಂದಿಗೆ ಸ್ನೇಹಿತನಾಗಿರುತ್ತೇನೆ. ಅವಳು ನನ್ನನ್ನು ತುಂಬಾ ಅರ್ಥ ಮಾಡಿಕೊಂಡಿದ್ದಾಳೆ. ಅದು ನನಗೆ ಖುಷಿ ಎಂದು ಶುಭಾ ಜೊತೆ ಮಂಜು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

    ಬಿಗ್‍ಮನೆಯಲ್ಲಿ ಇರುವಷ್ಟು ದಿನ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡಾಗ ಇಷ್ಟಪಡುವುದು ಸಹಜ. ಆದರೆ ಅದು ಮುಂದಿನ ದಿನಗಳಲ್ಲಿ ಯಾವ ರೀತಿ ಮುಂದುವರಿಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.