Tag: Manju

  • ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

    ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

    ಬಿಗ್‍ಬಾಸ್ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್‍ರವರು ವೈಷ್ಣವಿಯವರ ಬಗ್ಗೆ ಹೊಂದಿದ್ದ ಅಭಿಪ್ರಾಯವನ್ನು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ.

    ಆಗ ವೈಷ್ಣವಿಯವರು ಏನದು ಎಂದು ಕುತೂಹಲದಿಂದ ಕೇಳಿದ್ದಾರೆ. ಆಗ ಸುದೀಪ್ ನೀವು ಒಳ್ಳೆ ಕಲಾವಿದೆ ಅಂತ ಗೊತ್ತಿತ್ತು. ರೇಷ್ಮೆ ಸೀರೆ ಉಟ್ಟಿಕೊಳ್ಳುವುದ ಮಾತ್ರವಲ್ಲ ಕೈನ್ಲಲಿ ಕೂಡ ಸದಾ ಹಿಡಿದುಕೊಂಡಿರುತ್ತೀರಾ ಎಂದು ತೋರಿಸಿಕೊಟ್ರಿ. ಆದರೆ ಇಷ್ಟು ಚೆನ್ನಾಗಿ ಹಾಡು ಹೇಳುತ್ತೀರಾ ಎಂದು ಗೊತ್ತಿರಲಿಲ್ಲ. ಶಮಂತ್ ಹತ್ತಿರ ಹಾಡು ಹೇಳಿಸಿ, ನಿಮ್ಮ ಹತ್ತಿರ ಹಾಡು ಹಾಡಿಸಲಿಲ್ಲ ಎಂದರೆ ನ್ಯಾಯ ಅಲ್ಲ. ಹಾಗಾಗಿ ನಮಗೋಸ್ಕರ ಒಂದು ಹಾಡು ಹೇಳಿ ಎಂದು ಕೇಳಿದ್ದಾರೆ.

    ಈ ವೇಳೆ ವೈಷ್ಣವಿ ನಾಚುತ್ತಾ ನನಗೆ ನಾಯರೇ ನಾಯರೇ ಸಾಂಗ್ ಒಂದೇ ಹೇಳಲು ಬರುವುದು ಎಂದು ಹಾಡು ಹಾಡಿದ್ದಾರೆ. ನಂತರ ಹಾಡಿನ ಸಾಲನ್ನು ಕೇಳಿ ಒಂದೇ ಹಾಡಿನಲ್ಲಿ ಎಲ್ಲವನ್ನು ಎಲ್ಲರಿಗೂ ಹೇಳಿಬಿಟ್ರಿ. ಅದನ್ನು ಎಲ್ಲರೂ ಹಾಡು ಅಂದುಕೊಂಡರು, ಆದರೆ ನಾಯಿರೇ ಈ ಹಾಡಿನಲ್ಲಿ ಏನು ಅರ್ಥ ಆಯ್ತು ಮಂಜು ಎಂದು ಸುದೀಪ್ ಹೇಳಿದ್ದಾರೆ.

    ಇದಕ್ಕೆ ಮಂಜು ಅದರಲ್ಲಿ ಬರುವ ನಾಯಿ ಎಂಬ ಮೊದಲ ಪದ ನನಗೆ ಅನಿಸುತ್ತದೆ ಎನ್ನುತ್ತಾರೆ. ಆಗ ಸುದೀಪ್ ನಾಯಿ ಮನದಾಳದ ಮಾತು, ರೇ- ರೇಷ್ಮೆ ಸೀರೆ ಎಂದು ಸುದೀಪ್ ರೇಗಿಸುತ್ತಾರೆ. ನಂತರ ಮತ್ತೆ ನಾಯಿ ರೇ, ನಾಯಿ ರೇ ಎಂದು ವೈಷ್ಣವಿ ಹಾಡು ಹೇಳುತ್ತಾ ಉಪ್ಪಿನಂತೆ ಗಟ್ಟಿ ಈ ನನ್ನ ಮನಸ್ಸು ಎನ್ನುತ್ತಾರೆ. ಈ ವೇಳೆ ಮಂಜು, ಕರೆಕ್ಟ್ ಆಗಿ ಸಾಂಬರ್‍ಗೆ ಉಪ್ಪನ್ನು ಹಾಕುವುದಿಲ್ಲ. ಮನಸ್ಸಿನಲ್ಲಿಯೇ ಉಪ್ಪು, ಹುಳಿ, ಖಾರ ಎಲ್ಲವನ್ನು ಸರಿಯಾಗಿ ಹಾಕುತ್ತಾರೆ ಎಂದಿದ್ದಾರೆ.

    ನನ್ನ ಕಥೆಗೆ ಬಂದ್ರೆ ಅವನು ಅಲ್ಲೇ ಉಡಿಸ್ ಎಂದು ವೈಷ್ಣವಿ ಹೇಳಿದಾಗ, ಇದರ ಅನುಭವ ನನಗೆ ಸಿಕ್ಕಾಪಟ್ಟೆ ಆಗಿದೆ ಎಂದು ಮಂಜು ಹೇಳುತ್ತಾರೆ. ಬಳಿಕ ಇಕ್ಕು, ಇಕ್ಕು, ಒಂದೇ ಇಕ್ಕು, ಚಿಂದಿ ಉಡಾಯಿಸು ಎಂದಾಗ, ಆಗಾಗ ವೈಷ್ಣವಿ ಇಕ್ಕುತ್ತಾನೆ ಇರುತ್ತಾಳೆ ಎಂದು ಮಂಜು ಹಾಸ್ಯ ಮಾಡಿದ್ದಾರೆ.

    ಕೊನೆಯದಾಗಿ ಸುದೀಪ್ ಒಂದೇ ಒಂದು ಹಾಡಿನಲ್ಲಿ ಎಂತೆಂಥಹ ಸಿಂಗರ್ಸ್ ನನ್ನು ವೈಷ್ಣವಿ ಸೈಡಿಗೆ ಹಾಕಿದ್ರು, ಹಾಡು ತುಂಬಾ ಚೆನ್ನಾಗಿದೆ ವೈಷ್ಣವಿಯವರೇ, ಮುಂದಿನ ವಾರ ಯಾವುದು ಬರುತ್ತದೆ ನೋಡೋಣಾ ಎಂದು ತಮಾಷೆ ಮಾಡಿದರು. ಈ ವೇಳೆ ಮನೆ ಮಂದಿಯೆಲ್ಲಾ ವೈಷ್ಣವಿ ಹಾಡನ್ನು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಿಂದ ಪ್ರಿಯಾಂಕಾ ಔಟ್

  • ನಾನು ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡ್ತಿದ್ದೆ: ಶುಭಾ ಪೂಂಜಾ

    ನಾನು ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡ್ತಿದ್ದೆ: ಶುಭಾ ಪೂಂಜಾ

    ಬಿಗ್‍ಬಾಸ್ ಮನೆಯಲ್ಲಿ ಚಿಕ್ಕ ಮಕ್ಕಳಂತೆ ಕ್ಯೂಟ್ ಕ್ಯೂಟ್ ಆಗಿ ಎಲ್ಲರ ಮಧ್ಯೆ ಎಂಟರ್‍ಟೈನ್ ಮಾಡುವ ಶುಭಾ ಪೂಂಜಾಗೆ ಶ್ವಾನ ಎಂದರೆ ಬಹಳ ಇಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಶುಭಾ ಟೈಗರ್‍ ವೊಂದನ್ನು ಕೂಡ ಸಾಕಿರುವುದಾಗಿ ದಿವ್ಯಾ ಉರುಡುಗ ಜೊತೆ ಹೇಳಿದ್ದಾರೆ.

    ಬೆಳಗ್ಗೆ ಎದ್ದ ಕೂಡಲೇ ಕಿಚನ್‍ನಲ್ಲಿ ಟಿಫನ್‍ಗೆ ತಯಾರಿ ನಡೆಸುತ್ತಿದ್ದ ವೇಳೆ, ಶುಭಾ ಪೂಂಜಾ ನಾನು ಕನಸಿನಲ್ಲಿ ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡುತ್ತಿದ್ದೆ, ಅದಕ್ಕೆ ಚಿಕನ್ ಕೊಡುತ್ತಿದ್ದೆ. ನನಗೆ ಟೈಗರ್ ಬೇಕು ಎಂದು ಶುಭಾ ಪೂಂಜಾ ದಿವ್ಯಾ ಉರುಡುಗಗೆ ಕೇಳಿದ್ದಾರೆ.

    ಆಗ ದಿವ್ಯಾ ಉರುಡುಗ ಟೈಗರ್ ಹೊರಗಡೆ ಕಾಫಿ ಕುಡಿಯುತ್ತಿದೆ ಎಂದು ಮಂಜುಗೆ ಪರೋಕ್ಷವಾಗಿ ಹೇಳುತ್ತಾರೆ. ಇದಕ್ಕೆ ಶುಭಾ ಅದು ಟೈಗರ್ ಅಲ್ಲ ಕೋತಿ ಮರಿ ಎಂದಾಗ ದಿವ್ಯಾ ಉರುಡುಗ ಅದನ್ನು ನೀನು ಯಾವ ಆಂಗಲ್‍ನಲ್ಲಿ ಬೇಕಾದರೂ ಮಾಡಿಕೊಳ್ಳಬಹುದು, ಅದು ಸ್ವಲ್ಪ ಪಗ್ ತರ ಕಾಣಿಸಬಹುದು, ಆದರೆ ಅದು ಟೈಗರ್ ರೇ ಎನ್ನುತ್ತಾರೆ. ಅದಕ್ಕೆ ಶುಭಾ ಪೂಂಜಾ ಫೇಕ್ ಟೈಗರ್ ಅದು, ಡಬಲ್ ಆ್ಯಕ್ಟಿಂಗ್ ಟೈಗರ್ ಎಂದಿದ್ದಾರೆ.

    ನಂತರ ದಿವ್ಯಾ ಉರುಡುಗ ಅರವಿಂದ್ ತೋರಿಸಿ, ಸ್ಟ್ರಿಕ್ಟ್ ಆಗಿರುವ ಟೈಗರ್ ಬೇಕಾ ಎಂದು ಕೇಳುತ್ತಾರೆ. ಇದಕ್ಕೆ ಶುಭಾ ಅದು ಬರೀ ಕಚ್ಚುತ್ತೆ, ಗುರ್ ಅನ್ನುತ್ತೆ ಎಂದು ಹೇಳುತ್ತಾ ಇಬ್ಬರು ಹಾಸ್ಯ ಮಾಡಿದ್ದಾರೆ.  ಇದನ್ನೂ ಓದಿ:ಮಂಜುಗೆ ಊಟ ಮಾಡಿಸಲು ವೈಷ್ಣವಿ, ಪ್ರಶಾಂತ್ ಸರ್ಕಸ್

  • ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ವಾರ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಬಹಳ ಡಿಫರೆಂಟ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಟಾಸ್ಕ್ ಆರಂಭಕ್ಕೂ ಮುನ್ನ ಮ್ಯೂಸಿಕ್ ವೊಂದನ್ನು ಪ್ಲೇ ಮಾಡಿದಾಗ ಎರಡು ತಂಡದ ಕ್ಯಾಪ್ಟನ್‍ಗಳು ಕನ್ಫೆಕ್ಷನ್ ರೂಮ್‍ಗೆ ಹೋಗಬೇಕಾಗುತ್ತದೆ.

    ಈ ಮಧ್ಯೆ ಮಂಜು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ದಿವ್ಯಾ ಸುರೇಶ್ ನಿಧಾನವಾಗಿ ಡ್ಯಾನ್ಸ್ ಮಾಡುತ್ತಾ ಬರುತ್ತಾರೆ. ಇದನ್ನು ಕಂಡ ಮಂಜು ದಿವ್ಯಾ ಸುರೇಶ್‍ಗೆ ಬೇಗ ಬಾ ಎಂದು ರೇಗುತ್ತಾರೆ. ಇದರಿಂದ ಬೇಸರಗೊಂಡ ದಿವ್ಯಾ ಸುರೇಶ್ ಪ್ರಿಯಾಂಕ ಬಳಿ, ನಾನು ನಡೆದುಕೊಂಡು ಬರಬೇಕಾದರೆ ಮ್ಯೂಸಿಕ್ ಪ್ಲೇ ಆಯಿತು. ಅದಕ್ಕೆ ನಾನು ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದೆ. ಅದಕ್ಕೆ ಬೇಗ ಬಾ ಏನು ಮಾಡುತ್ತಿದ್ಯಾ ಎಂದು ರೇಗುತ್ತಾರೆ. ನನ್ನ ಮೇಲೆ ರೇಗುವ ಅವಶ್ಯಕತೆ ಏನಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಫಸ್ಟ್ ಇನ್ನಿಂಗ್ಸ್‌ನಲ್ಲಿ ಹೇಗಿದ್ವಿ ಹಾಗೇ ಇರಲು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆಗುವುದಿಲ್ಲ ಎಂದು ಹೇಳಿದ್ದೆ ಅವನು, ಅವನು ಇರಲು ಆಗುವುದಿಲ್ಲ ಎಂದರೆ ನಾನು ಹಾಗೆಯೇ ಇರುವುದಕ್ಕೆ ಆಗುವುದಿಲ್ಲ. ನಾನು ಸುಮ್ಮನೆ ಒಬ್ಬಳೇ ಕುಳಿತುಕೊಳ್ಳಲು ಆಗುವುದಿಲ್ಲ, ನಾನು ಎಲ್ಲರ ಜೊತೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ, ಎಲ್ಲರ ಜೊತೆ ಬೆರೆಯಬೇಕಾಗುತ್ತದೆ. ಕೊಟ್ಟಿರುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಸುದೀಪ್ ಸರ್ ಹೇಳಿದ್ರು, ನಾನು ಚೆನ್ನಾಗಿ ಆಟ ಆಡುತ್ತಿದ್ದೇನೆ ಅಂತ, ನಾನು ಕೂಡ ಅದನ್ನೇ ಮಾಡಬೇಕಾಗುತ್ತದೆ. ಸುಮ್ಮನೆ ನನ್ನ ಮೇಲೆ ರೇಗಾಡಿದ, ಅದರ ಅವಶ್ಯತೆ ಇರಲಿಲ್ಲ ಎಂದು ಹೇಳುತ್ತಾರೆ.

    ಅವನು ಶುಭಾ ಜೊತೆ ಬಹಳ ಕ್ಲೋಸ್ ಆಗಿದ್ದಾನೆ. ಅವನು ಕುಳಿತು ಹೋದ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳಲು ನಾನು ಎಷ್ಟು ಯೋಚಿಸುತ್ತೇನೆ ಗೊತ್ತಾ. ನಾನು ನೀನು ಯಾಕೆ ಅಷ್ಟು ಕ್ಲೋಸ್ ಆಗಿದ್ಯಾ ಅಂತ ಒಂದು ಕಂಪ್ಲೇಟ್ ಕೂಡ ಮಾಡಿಲ್ಲ, ನಿನ್ನ ಲೈಫ್, ನೀನು ಏನು ಬೇಕಾದರೂ ಮಾಡಬಹುದು, ಹಾಗೆಯೇ ನನ್ನ ಲೈಫ್ ನಾನು ಏನು ಬೇಕಾದರೂ ಮಾಡಬಹುದು. ನಾನು ಏನು ಮಾಡಿಲ್ಲ ಆದರೂ ಎಲ್ಲರೆದುರು ಸಿಟ್ಟಿನಿಂದ ಬೈಯುವುದು ಎಷ್ಟು ಸರಿ ನಿನ್ನೆ ಕೂಡ ಹೀಗೆ ಮಾಡಿದ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

  • ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

    ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

    ಪ್ರತಿ ಬಾರಿಯಂತೆ ಈ ಸಲ ಕೂಡ ಮನೆಯ ಸ್ಪರ್ಧಿಗಳನ್ನು ವಿಜಯ ಯಾತ್ರೆ ಹಾಗೂ ನಿಂಗೈತೆ ಇರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಬಿಗ್‍ಬಾಸ್ ಡಿಫರೆಂಟ್ ಟಾಸ್ಕ್ ಅನ್ನು ನೀಡಿದ್ದರು. ಅದರಂತೆ ಮೊದಲ ಟಾಸ್ಕ್‌ನಲ್ಲಿ ಗೆದ್ದ ವಿಜಯಯಾತ್ರೆ ತಂಡದವರು ಓಡಾಡಬೇಕಾದರೆ, ನಿಂಗೈತೆ ತಂಡದ ಇಬ್ಬರು ಸದಸ್ಯರು ಬಾಗಿಲನ್ನು ತೆಗೆಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು.

    ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಶುಭಾ ಪೂಂಜಾ ಟಾಸ್ಕ್ ಗೆದ್ದ ಖುಷಿಯಲ್ಲಿ ಮಂಜುರನ್ನು ಸಿಕ್ಕಾಪಟ್ಟೆ ಸತಾಯಿಸಿದ್ದರು. ನಂತರ ‘ಹೀಗೂ ಅಂಟೆ’ ಟಾಸ್ಕ್‌ನಲ್ಲಿ ಗೆದ್ದ ಮಂಜು ಶುಭಾ ಪೂಂಜಾ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾರೆ.

    ಹೀಗೂ ಅಂಟೆ ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಅಂಬೆ ಕಾಲಿನಲ್ಲಿ ಓಡಾಡಬೇಕು ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಮಂಜು, ನನಗೆ ಬಹಳ ಖುಷಿಯಾಗುತ್ತಿದೆ ಅಂತ ಹೇಳಿ, ತಂಡವರೆಲ್ಲರೂ ಶುಭಾ ಪೂಂಜಾ ಹಾಗೂ ಪ್ರಶಾಂತ್‍ರವರನ್ನು ಸೂಚಿಸುತ್ತಾರೆ.

    ಬಳಿಕ ಅಂಬೆ ಕಾಲಿನಲ್ಲಿ ಓಡಾಡಲು ಆರಂಭಿಸಿದ ಶುಭಾಗೆ, ಟೈಂ ಒಂದೇ ರೀತಿ ಇರುವುದಿಲ್ಲ, ಯಾವಾಗಲೂ ತಿರುಗುತ್ತಲೇ ಇರುತ್ತದೆ. ಬಿಗ್ ಬಾಸ್ ಈ ಶಿಕ್ಷೆಯನ್ನು ಎರಡು ದಿನ ತೆಗೆಯಲೇ ಬಿಡಿ, ಜಿಂಕೆ ತರ ಎಗರುತ್ತಿದ್ದೆ, ಯಾಕೆ ಕಪ್ಪೆ ತರ ಕುತಿದ್ಯಾ, ನನ್ನ ಎದುರು ಹಾಕ್ಕೊಂಡವರು ಮಂಡಿ ಬಗ್ಗಿಸಿಯೇ ನಡೆಯಬೇಕು ಎಂದು ಮಂಜು ಅಣುಕಿಸುತ್ತಾರೆ. ಈ ವೇಳೆ ನಾನು ಏನು ಮಾಡಿದೆ ನನಗೆ ಯಾಕೆ ಶಿಕ್ಷೆ ಎಂದು ಪ್ರಶಾಂತ್ ಕೇಳಿದಾಗ, ಚಕ್ರವರ್ತಿಯವರು ಬಾತ್ ರೂಂ ಬಾಗಿಲು ಕುಟ್ಟಿದ್ಯಾಲ್ಲೋ ಚಕ್ರಿ ಬಾಗಿಲು ತೆಗಿ ಅಂತ, ಅದಕ್ಕೆ ಈ ಶಿಕ್ಷೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ರೇಗಿಸಿದ್ದಾರೆ.

    ಒಟ್ಟಾರೆ ಮನೆ ಪೂರ್ತಿ ಅಂಬೆ ಗಾಲಿನಲ್ಲಿ ಶುಭಾ ಪೂಂಜಾ ಓಡಾಡಲು ಪರದಾಡಿದರೆ, ಚಕ್ರವರ್ತಿಯವರು ಒಂದೇ ಚೇರ್ ಮೇಲೆ ಕುಳಿತು ಡ್ರೆಸ್ ಚೇಂಜ್ ಮಾಡಲು ಆಗದೇ ಕಿಚನ್ ಬಳಿಯೇ ಕುಳಿತುಕೊಂಡು ಟಿ-ಶರ್ಟ್ ಬಿಚ್ಚಿ ಮತ್ತೊಂದು ಟಿ-ಶರ್ಟ್ ಕಿಚನ್ ಬಳಿಯೇ ತಂದು ಕೊಡುವಂತೆ ಮನೆಮಂದಿಯನ್ನು ಬೇಡುತ್ತಾ ಒದ್ದಾಡಿದ್ದಾರೆ.

  • ಹುಡುಗಿ ಕೈ ಹೇಗೆ ಹಿಡಿಯಬೇಕು..? – ಮಂಜುಗೆ ಶುಭಾ ಟ್ರೈನಿಂಗ್

    ಹುಡುಗಿ ಕೈ ಹೇಗೆ ಹಿಡಿಯಬೇಕು..? – ಮಂಜುಗೆ ಶುಭಾ ಟ್ರೈನಿಂಗ್

    ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ವಿಚಾರವಾಗಿ ಭಾನುವಾರ ಚರ್ಚೆ ನಡೆದಿದೆ. ಈ ವೇಳೆ ಒಂದು ಹುಡುಗಿಯ ಕೈಯನ್ನು ಹೇಗೆ ಮುಟ್ಟಬೇಕು ಎಂದು ಶುಭಾ ಪೂಂಜಾ ಮಂಜುಗೆ ಟ್ರೈನಿಂಗ್ ನೀಡಿರುವುದಾಗಿ ಹೇಳಿದ್ದಾರೆ.

    ಈ ವಿಚಾರವಾಗಿ ಸುದೀಪ್‍ರವರು, ಮ್ಯಾರೇಜ್ ವಿಚಾರವಾಗಿ ಶುಭಾ ಹತ್ತಿರ ನೀವು ಟ್ಯೂಶನ್ ತೆಗೆದುಕೊಳ್ಳುತ್ತಿದ್ರಿ ಎಂದು ಕೇಳುತ್ತಿದ್ದಂತೆಯೇ ಮಂಜು ಹೌದು, ಹುಡುಗಿಯನ್ನು ಹೇಗೆ ಮುಟ್ಟಬೇಕು, ಹೇಗೆ ನಿಭಾಯಿಸಬೇಕು ಎಂದು ಹೇಳಿ ಕೊಡುತ್ತಿದ್ದರು ಎಂದಿದ್ದಾರೆ. ಆಗ ಶುಭಾ, ನಾವು ಅವನ ಪಕ್ಕ ಕುಳಿತುಕೊಂಡಿದ್ದಾಗ, ತುಂಬಾ ಜೋರಾಗಿ ನಟ್ಟಿಗೆ ತೆಗೆಯುತ್ತಾನೆ. ಅವನು ತುಂಬಾ ಒರಟು, ಒಂದು ರೀತಿ ಪ್ರಾಣಿಯಂತೆ ಹುಡುಗಿಯರ ಕೈಯಿಂದ ನಟ್ಟಿಗೆ ತೆಗೆಯುತ್ತಾನೆ. ಹಾಗಾಗಿ ನೀನು ಮದುವೆಯಾದರೆ ಹೇಗೆ ನಿನ್ನ ಪರಿಸ್ಥಿತಿ ಎಂದು ಹೇಳುತ್ತಾ ಸ್ವಲ್ಪ ಸಮಾಧಾನದಿಂದ ಇರು, ಒಂದು ಹುಡುಗಿ ಕೈಯನ್ನು ಸಾಫ್ಟ್ ಆಗಿ ಹಿಡಿದುಕೋ ಎಂದು ಹೇಳಿಕೊಟ್ಟೆ. ಅದು ಅಲ್ಲದೇ ಈ ವರ್ಷ ಮದುವೆಯಾಗುತ್ತಾನೆ ಅಲ್ವಾ ಸರ್ ಎಂದು ಹೇಳುತ್ತಾರೆ.

    ಮಂಜು ನಾನು ಹೇಳಿಕೊಡುತ್ತಿರುವುದನ್ನು ಸರಿಯಾಗಿ ಕಲಿಯುತ್ತಿಲ್ಲ. ಒಂದು ಹುಡುಗಿ ಕೈಯನ್ನು ಹೀಗೆ ಹಿಡಿದುಕೊಳ್ಳಬೇಕು ಎಂದರೆ ಒಳ್ಳೆ ಚಪಾತಿ ರೀತಿ ಕೈ ಇಡುತ್ತಾನೆ ಎನ್ನುತ್ತಾರೆ. ಆಗ ಸುದೀಪ್, ಮಂಜುಗೆ ಅರವಿಂದ್ ಕೈಯನ್ನು ಹುಡುಗಿ ಕೈ ಎಂದು ತಿಳಿದುಕೊಂಡು ಹಿಡಿದುಕೊಳ್ಳುವಂತೆ ಹೇಳುತ್ತಾರೆ. ಈ ವೇಳೆ ಅರವಿಂದ್ ಮಂಜುಗೆ ಕೈ ನೀಡಲು ಆಟ ಆಡಿಸುತ್ತಾರೆ. ನಂತರ ಹೀಗೆ ಹಿಡಿದುಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ ಎಂದು ಮಂಜು ಕೈ ಹಿಡಿದು ತೋರಿಸುತ್ತಾರೆ. ಈ ವೇಳೆ ಸುದೀಪ್‍ರವರು, ಇಷ್ಟು ಕೆಟ್ಟದಾಗಿ ಹೇಳಿಕೊಟ್ರಾ? ಇಷ್ಟು ದಿನ ಡೀಲ್ ಮಾಡಿರುವುದೇ ಚಪಾತಿ ಜೊತೆ, ಯಾರು ಮಂಜು ನನ್ನ ಕೈ ಹಿಡಿದುಕೋ ಎಂದು ಕೈ ನೀಡಿದ್ದಾರೆ. ಈಗ ಅರವಿಂದ್‍ರವರೇ ನಿಮಗೆ ಕೈ ಕೊಡಲಿಲ್ಲ ಎಂದು ಹಾಸ್ಯ ಮಾಡುತ್ತಾರೆ.

    ಜೊತೆಗೆ ಒಂದು ಕ್ಯೂಟ್ ಎಕ್ಸ್‌ಪ್ರೇಶನ್‌ ಕೂಡ ಹೇಳಿಕೊಟ್ಟಿರುವುದಾಗಿ ಹೇಳಿ ಕೊಟ್ಟಿದ್ದೇನೆ. ಆದರೆ ಅದು ಕೂಡ ಅವನಿಗೆ ಬರುವುದಿಲ್ಲ ಎಂದು ಶುಭಾ ಬೈಯ್ಯುತ್ತಾರೆ. ಆಗ ಆ ಎಕ್ಸ್‌ಪ್ರೇಶನ್‌ ತೋರಿಸುವಂತೆ ಸುದೀಪ್ ಮಂಜುಗೆ ಕೇಳಿದಾಗ ತಪ್ಪಾಯಿತು ಬಿಟ್ಟುಬಿಡಿ ಸರ್, ನನಗೆ ಆ ರೀತಿ ಎಕ್ಸ್‌ಪ್ರೇಶನ್‌ ನೀಡಲು ಬರುವುದಿಲ್ಲ. ಕೈ ಕಾಲು ನಡುಗುತ್ತಿದೆ ಎನ್ನುತ್ತಾರೆ. ನಂತರ ವೈಷ್ಣವಿ ಕಡೆಗೆ ಮಂಜು ಪ್ರೀತಿಯ ಎಕ್ಸ್‍ಪ್ರೇಶನ್ ಕೊಡುತ್ತಾರೆ. ಅದಕ್ಕೆ ಅವನು ಸರಿಯಾಗಿ ಎಕ್ಸ್‌ಪ್ರೇಶನ್‌ ತೋರಿಸುವುದಿಲ್ಲ ಎಂದು ಶುಭಾ ಜಸ್ಟ್ ಲೈಟ್ ಆಗಿ, ರೊಮ್ಯಾಂಟಿಕ್ ಆಗಿ, ಹೈಬ್ರೋ ಎತ್ತಿ, ಕ್ಯೂಟ್ ಆಗಿ ನೋಡಬೇಕು ಎಂದು ಎಕ್ಸ್‌ಪ್ರೇಶನ್‌ ತೋರಿಸುತ್ತಾರೆ.

    ಇದನ್ನು ಕಂಡು ಸುದೀಪ್‍ರವರು ಇದನ್ನು ಇನ್ಮುಂದೆ ನಾನು ಟ್ರೈ ಮಾಡುತ್ತೇನೆ, ಎಲ್ಲರೂ ಟ್ರೈ ಮಾಡಿ, ಇಡೀ ವಾರ ಯಾರೇ ಎದುರುಗಡೆ ಬಂದರೆ ಇದೇ ಎಕ್ಸ್‌ಪ್ರೇಶನ್‌ ಕೊಡೋಣಾ ಮುಂದೆ ಏನೇನು ಆಗುತ್ತದೆ. ಯಾರು ಹೊಡಿಸಿಕೊಳ್ಳುತ್ತೀರಿ, ಯಾರು ಬೈಸಿಕೊಳ್ಳುತ್ತೀರಾ ಆಮೇಲೆ ನೋಡೋಣಾ ಎನ್ನುತ್ತಾರೆ. ಈ ವೇಳೆ ಮನೆಮಂದಿಯೆಲ್ಲಾ ಶುಭಾ ಎಕ್ಸ್‌ಪ್ರೇಶನ್‌, ಸುದೀಪ್ ಜೋಕ್ ಕೇಳಿ ಎದ್ದು ಬಿದ್ದು ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ:ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್ 

  • ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ ಅಂತ ಕಿರುಚಾಡಿದ ಪ್ರಶಾಂತ್

    ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ ಅಂತ ಕಿರುಚಾಡಿದ ಪ್ರಶಾಂತ್

    ಬಿಗ್‍ಬಾಸ್ ನೀಡಿದ್ದ  ನೋಟು ಮುದ್ರಿಸುವ ಟಾಸ್ಕ್ ವೇಳೆ ಏಪ್ರನ್‍ಗಾಗಿ ಮಂಜು ಹಾಗೂ ಪ್ರಶಾಂತ್ ನಡುವೆ ಕಾದಾಟ ನಡೆದಿದೆ.

    ಇಬ್ಬರ ಜಗಳ ಮಧ್ಯೆ ಪ್ರವೇಶಿಸಿದ ಕ್ಯಾಪ್ಟನ್ ದಿವ್ಯಾ ಉರುಡುಗ ಮೊದಲು ಏಪ್ರನ್ ಕತ್ತಿಗೆ ಹಾಕಿಕೊಂಡಿದ್ದು ಮಂಜು ಆಗಿರುವುದರಿಂದ ಏಪ್ರನ್ ಮಂಜುಗೆ ಸೇರಬೇಕೆಂದು ಪ್ರಶಾಂತ್‍ರಿಂದ ಏಪ್ರನ್ ಹಿಂಪಡೆದು ಮಂಜುಗೆ ನೀಡುತ್ತಾರೆ. ಇದರಿಂದ ಬೇಸರಗೊಂಡ ಪ್ರಶಾಂತ್, ತಪ್ಪು ನಿರ್ಧಾರ ತೆಗೆದುಕೊಂಡು ನಮ್ಮ ಮಾರ್ಯದೆ ತೆಗಿತಿದ್ದಾಳೆ ಎಂದು ಬೈದು, ಬೆಡ್ ರೂಮ್‍ಗೆ ಹೋಗಿ ಅಳುತ್ತಾರೆ.

    ಬಳಿಕ ಟಾಸ್ಕ್ ನಡೆಯುತ್ತಿದ್ದ ವೇಳೆ ಕ್ಯಾಪ್ಟನ್ ನೀವು ಇಂದು ಮೋಸದ ಆಟ ಆಡಿದ್ದೀರಾ ಎಂದು ಪ್ರಶಾಂತ್ ಹೇಳುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಾನು ಯಾವುದೇ ತಪ್ಪು ನಿರ್ಧಾರ ನೀಡಿಲ್ಲ ಎಂದಿದ್ದಾರೆ. ನಂತರ ಮಂಜುನೂ ಮೋಸ ಮಾಡಿದ್ದಾನೆ, ನೀನು ಕೂಡ ಮೋಸ ಮಾಡಿದ್ಯಾ ಎಂದು ಪದೇ ಪದೇ ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಮೈಕ್ ಏನಾದರೂ ಬೇಕಾ ಎಂದು ಕೇಳುತ್ತಾರೆ. ಇದಕ್ಕೆ ಮೈಕ್‍ನನ್ನು ಮೇಲಕ್ಕೆ ಎತ್ತಿ ಹಿಡಿದುಕೊಂಡು, ಮಂಜುನೂ ಮೋಸ ಮಾಡಿದ್ದಾನೆ, ದಿವ್ಯಾ ಉರುಡುಗನೂ ಮೋಸ ಮಾಡಿದ್ದಾಳೆ ಎಂದು ಕಿರುಚುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ಥ್ಯಾಂಕ್ಯು ಎಂದು ಅಣುಕಿಸುತ್ತಾರೆ.

    ನಂತರ ಅರವಿಂದ್ ಜೊತೆ ಇದೇ ವಿಚಾರವಾಗಿ ಚರ್ಚಿಸಿದ ದಿವ್ಯಾ ಉರುಡುಗ, ಟಾಸ್ಕ್ ಬುಕ್‍ನನ್ನು ಓದುತ್ತಾರೆ. ಕುತ್ತಿಗೆಗೆ ಮೊದಲು ಏಪ್ರಿನ್ ಧರಿಸುವ 5 ಮಂದಿ ಆ ಸುತ್ತಿನಲ್ಲಿ ನೋಟು ಮುದ್ರಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಪ್ರಶಾಂತ್‍ರವರು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಅವನು ಕುತ್ತಿಗೆಗೆ ಹಾಕಿಕೊಂಡಿಲ್ಲ. ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಹಾಕಿಕೊಂಡಿರಲಿಲ್ಲ ಎಂದು ವಾದಿಸಿದ್ದಾರೆ. ಜೊತೆಗೆ ಇಂದು ನಿನ್ನಲ್ಲಿ ಬೇಧ-ಭಾವವಿದೆ ಎಂದು ಕಿಡಿಕಾರಿದ್ದಾರೆ.

    ಇದಕ್ಕೆ ನಿಮ್ಮ ಮಾತಿನ ಮೇಲೆ ಅಲ್ಲ, ನನ್ನ ಕಣ್ಣಿನ ಮೇಲೆ ನನಗೆ ನಂಬಿಕೆ ಇದೆ, ಅವನು ಕುತ್ತಿಗೆಗೆ ಏಪ್ರನ್ ಹಾಕಿಕೊಂಡಿದ್ದನ್ನು ನೋಡಿದ್ದೇನೆ. ಆಗ ನಿಮ್ಮ ಕೈನಲ್ಲಿ ಏಪ್ರನ್ ಇತ್ತು. ಅದರ ಆಧಾರ ಮೇಲೆ ನಾನು ಮಂಜುಗೆ ಏಪ್ರನ್ ಕೊಟ್ಟಿದ್ದೇನೆ. ನನಗೆ ಗೊತ್ತಿದೆ ನಾನು ಸರಿ ಮಾಡುತ್ತಿದ್ದೇನೋ, ತಪ್ಪು ಮಾಡುತ್ತಿದ್ದೇನೋ, ನನ್ನ ಪ್ರಕಾರ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಸರಿ, ತಪ್ಪು ಯಾವುದು ಎಂದು ನೀವು ಹೇಳಿಕೊಡಬೇಕಾಗಿಲ್ಲ ಎಂದು ಗುಡುಗಿದ್ದಾರೆ.

  • ಚಿನ್ನಿಬಾಂಬ್ ನನ್ನ ಕಳಪೆಗೆ ಹಾಕಿದ್ರು: ಶುಭಾ ಪೂಂಜಾ

    ಚಿನ್ನಿಬಾಂಬ್ ನನ್ನ ಕಳಪೆಗೆ ಹಾಕಿದ್ರು: ಶುಭಾ ಪೂಂಜಾ

    ಬಿಗ್‍ಬಾಸ್ ಮನೆಯಲ್ಲಿ ಸದಾ ಎಂಟರ್ಟೈನ್ ಮಾಡುತ್ತಾ ಮನೆ ಮಂದಿ ಹಾಗೂ ವೀಕ್ಷಕರಿಗೆ ನಗುವಿನ ಕಚಗುಳಿ ನೀಡುತ್ತಿದ್ದ ಶುಭಾ ಪೂಂಜಾ ಈ ವಾರ ಕಳಪೆ ಬೋರ್ಡ್ ಪಡೆದು ಜೈಲಿಗೆ ಹೋಗಿದ್ದಾರೆ.

    ಈ ವಾರ ಬಿಗ್‍ಬಾಸ್ ನೀಡಿದ್ದ ಟಾಸ್ಕ್‍ಗಳಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ ಹಾಗೂ ಮನೆಯ ಕೆಲಸಗಳಲ್ಲಿ ಅಷ್ಟಾಗಿ ಪಾಲ್ಗೊಂಡಿಲ್ಲ ಎಂದು ದಿವ್ಯಾ ಸುರೇಶ್, ರಘು, ಪ್ರಶಾಂತ್, ವೈಷ್ಣವಿ, ಶಮಂತ್, ನಿಧಿ ಸುಬ್ಬಯ್ಯ, ದಿವ್ಯಾ ಉರುಡುಗ, ಶುಭಾ ಪೂಂಜಾರನ್ನು ಕಳಪೆಗೆ ಸೂಚಿಸಿದ್ದರು.

    ಇದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡ ಶುಭಾ ಪೂಂಜಾ, ಕಳಪೆ ಡ್ರೆಸ್ ಧರಿಸಿ ಖುಷಿಯಾಗಿ ಜೈಲಿಗೆ ಹೋಗುತ್ತಾರೆ. ಈ ವೇಳೆ ಶಮಂತ್ ಆದಷ್ಟು ಬೇಗ ಬೇಲ್ ತರಿಸಿ ಬಿಡಿಸಿಕೊಂಡು ಹೋಗುತ್ತೇನೆ, ಭಯ ಪಡಬೇಡ ಅಂದರೆ, ದಿವ್ಯಾ ಉರುಡುಗ ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬೇಡ ಎನ್ನುತ್ತಾರೆ.

    ನಂತರ ಬೆಡ್ ಮೇಲೆ ಕುಳಿತುಕೊಳ್ಳಲು ಹೋಗುವ ಶುಭಾ ಬಿಗ್‍ಬಾಸ್ ಇಲ್ಲಿ ಹಾಸಿಗೆನೇ ಇಲ್ಲ ಎಂದು ಹೇಳುತ್ತಾ, ಕ್ಯಾಮೆರಾ ಮುಂದೆ ನಿಂತು ಚಿನ್ನಿ ಬಾಂಬ್ ನನ್ನ ಕಳಪೆಗೆ ಹಾಕಿದ್ರು ಎಂದು ಹಾಸ್ಯ ಮಾಡುತ್ತಾರೆ. ಅಲ್ಲದೇ ಮಧ್ಯ ರಾತ್ರಿ ಕುಳಿತುಕೊಂಡು ಚಂಪೂ ಎಂದು ಕೂಗುತ್ತಾ, ಬಿಗ್ ಬಾಸ್ ಮಂಜನನ್ನು ಕಳುಹಿಸಿ ನಾನು ಒಬ್ಬಳೇ ಮಲಗುವುದಿಲ್ಲ ಪ್ಲೀಸ್ ಎನ್ನುತ್ತಾರೆ. ಇದನ್ನು ಕೇಳಿಸಿಕೊಂಡ ದಿವ್ಯಾ ಉರುಡುಗ ಬೆಡ್‍ರೂಮ್‍ನಲ್ಲಿ ಮಲಗಿದ್ದ ಮಂಜುರಿಗೆ ಶುಭಾ ನಿನ್ನನ್ನು ಕರೆಳುತ್ತಿದ್ದಾಳೆ ನೋಡು ಎಂದು ಎಬ್ಬಿಸಿ ನಂತರ ಶುಭಾ ಬಳಿ ಕಳುಹಿಸಿಕೊಡುತ್ತಾರೆ.

  • ಈ ಭೂಮಿ ಆಕಾಶ ಇರುವವರೆಗೆ ಇದು ಸಾಧ್ಯವಿಲ್ಲ ಎಂದ ಮಂಜ

    ಈ ಭೂಮಿ ಆಕಾಶ ಇರುವವರೆಗೆ ಇದು ಸಾಧ್ಯವಿಲ್ಲ ಎಂದ ಮಂಜ

    ದೊಡ್ಮನೆಯಲ್ಲಿ ಒಂದು ಕಡೆ ಟಾಸ್ಕ್ ಭರಾಟೆಯಾದರೆ. ಇನ್ನೊಂದು ಕಡೆ ಸ್ಪರ್ಧಿಗಳ ನಡುವೆ ಜಗಳ, ಮನಸ್ತಾಪ ಜೋರಾಗಿದೆ. ಈ ನಡುವೆ ಬೆಳಗ್ಗೆ ಎದ್ದು ಮಾತಿಗಿಳಿದ ಶುಭಾ ಪೂಂಜಾ ಅವರಿಗೆ ಮಂಜು ಈ ವಿಷಯ ಮಾತ್ರ ಈ ಭೂಮಿ ಆಕಾಶ ಇರುವವರೆಗೆ ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.

    ಬಿಗ್ ಮನೆಯಲ್ಲಿ ಬೆಳಗ್ಗೆ ಎದ್ದು ಮಂಜು, ಶಮಂತ್, ದಿವ್ಯಾ ಉರುಡುಗ ಕಿಚನ್ ನಲ್ಲಿ ಅಡುಗೆ ತಯಾರಿಯಲ್ಲಿ ತೊಡಗಿಕೊಂಡಿದ್ದಾಗ ಬಂದ ಶುಭಾ ಮಾತಿಗಿಳಿದಿದ್ದಾರೆ ಬಳಿಕ ನಾನು ಸ್ನಾನಕ್ಕೆ ಹೋಗುತ್ತೇನೆ ಎಂದು ಹೊರಟಿದ್ದಾರೆ. ಈ ಸಂದರ್ಭ ದಿವ್ಯಾ ಮತ್ತು ಮಂಜು ದಯವಿಟ್ಟು ಹೋಗು ಮೊದಲಿಗೆ ಆ ಕೆಲಸ ಮಾಡು ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಶುಭಾ ಆಯ್ತು ನಾನು ಈ ದಿನ ಪೂರ್ತಿ ನಿಮ್ಮಿಂದ ದೂರ ಇರುತ್ತೇನೆ. ನಿಮ್ಮ ಹತ್ತಿರ ಬರುವುದಿಲ್ಲ ನೀವೇ ಬೋರ್ ಆಯ್ತು ಬಾ ಎಂದು ಕರೆಯಬೇಕು ಎಂದರು.

    ಈ ಮಾತನ್ನು ಕೇಳಿಸಿಕೊಂಡ ಮಂಜು ದಯವಿಟ್ಟು ಇದನ್ನು ಮಾಡು ಪ್ಲೀಸ್. ನೀನು ಜೀವನದಲ್ಲಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀಯ. ನಿನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಬೇಡ ನೀನೊಬ್ಬಳು ಸ್ವಾಭಿಮಾನಿ ಎಂಬುದನ್ನು ತೋರಿಸಿಕೊಡು ಎಂದಿದ್ದಾರೆ. ಇದನ್ನೂ ಓದಿ : ಅಂದುಕೊಂಡಂತೆ ಮಾಡಿದ ದಿವ್ಯಾ – ಕ್ಯಾಪ್ಟನ್ ಆಗಿ ಹೊಸ ದಾಖಲೆ

    ನೀನು ಮತ್ತು ದಿವ್ಯಾ ಇಬ್ಬರೂ ಕೂಡ ನಮಗೆ ಈ ರೀತಿ ಇರಲು ಸಾಧ್ಯವಿಲ್ಲ ದಯಾವಿಟ್ಟು ಮಾತನಾಡು ವಾಪಸ್ ಬಾ. ನಾವಿಬ್ಬರು ನಿನ್ನೊಂದಿಗೆ ಮಾತನಾಡದೆ ಇರಲಾಗದೆ ಸಾಯುತ್ತಿದ್ದೇವೆ. ನಮ್ಮ ಲೈಫ್‍ನಲ್ಲಿ ಈ ರೀತಿ ಇರಲು ಸಾಧ್ಯವಿಲ್ಲ ಎಂದು ನನ್ನ ಬಳಿ ಹೇಳಬೇಕು ಅಲ್ಲಿವರೆಗೆ ನಾನು ಬರಲ್ಲ ಈ ರೀತಿ ಮಾತನಾಡದೆ ಇರುತ್ತೇನೆ ಎಂದು ಶುಭಾ ಹೇಳಿದ್ದಾರೆ.

    ಈ ಭೂಮಿ ಆಕಾಶ ಇರುವವರೆಗೆ ನೀನು ನಮ್ಮೊಂದಿಗೆ ಮಾತನಾಡದೆ ಇರಲು ಸಾಧ್ಯವಿಲ್ಲ. ನಿನ್ನಿಂದ ಮಾತನಾಡದೆ ಇರಲು ಖಂಡಿತ ಆಗುವುದಿಲ್ಲ ಎಂದು ಮತ್ತೆ ಮಂಜು ಶುಭಾ ಗೆ ಟಾಂಗ್ ನೀಡಿದ್ದಾರೆ. ಹಾಗೆ ದಿವ್ಯಾ ಕೂಡ ನೀನು ದಿನ ಪೂರ್ತಿ ಬಿಡು ತಿಂಡಿ ತಿನ್ನುವ ವರೆಗೆ ನಮ್ಮೊಂದಿಗೆ ಮಾತನಾಡದೆ ಇರು ಎಂದು ಹೇಳಿದ್ದಾರೆ.

  • ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ಬಿಗ್ ಮನೆಯಲ್ಲಿ ಸದಾ ಒಂದಲ್ಲ ಒಂದು ವಿಷಯಗಳಲ್ಲಿ ಸುದ್ದಿಯಾಗುತ್ತಿರುವ ದಿವ್ಯಾ ಸುರೇಶ್ ಮತ್ತು ಮಂಜು ಜೋಡಿ ಇದೀಗ ತಮ್ಮಲ್ಲಿ ಕೆಲ ಬದಲಾವಣೆಗಳನ್ನು ಕಂಡುಕೊಂಡಿದೆ. ಟಾಸ್ಕ್ ಒಂದರಲ್ಲಿ ಆಡುವ ಮುನ್ನ ದಿವ್ಯಾ ತನ್ನ ತಂಡಕ್ಕೆ ಹೇಳಿದ ಸಲಹೆಯ ಬಗ್ಗೆ ಮಂಜು ವಿರೋಧ ವ್ಯಕ್ತಪಡಿಸಿ ದಿವ್ಯಾಗೆ ಬುದ್ಧಿವಾದವನ್ನು ಹೇಳಿದ್ದಾರೆ.

    ಬಿಗ್‍ಬಾಸ್ ನೀಡಿದ್ದ ನಿಲ್ಲು ನಿಲ್ಲು ಕಾವೇರಿ ಟಾಸ್ಕ್ ನಲ್ಲಿ ಕ್ವಾಟ್ಲೆಕಿಲಾಡಿಗಳು ಮತ್ತು ಸೂರ್ಯ ಸೇನೆ ತಂಡಗಳು ಭರ್ಜರಿಯಾಗಿ ಪ್ರದರ್ಶನ ನೀಡಿದೆ. ಈ ಮೊದಲು ತಂಡದಲ್ಲಿ ಆಡುವ ಆಟಗಾರರ ಹಸರನ್ನು ಆಯ್ಕೆ ಮಾಡುವಾಗ ಕ್ವಾಟ್ಲೆಕಿಲಾಡಿಗಳು ತಂಡದ ಸದಸ್ಯೆ ದಿವ್ಯಾ ತಮ್ಮ ತಂಡಕ್ಕೆ ನೀಡಿದ ಸಲಹೆಯೊಂದರ ಬಗ್ಗೆ ಮಂಜು ಟಾಸ್ಕ್ ಮುಗಿದ ಬಳಿಕ ವಿವರಣಾತ್ಮಕವಾದ ಬುದ್ಧಿವಾದ ಹೇಳಿ ತಂಡಕ್ಕೆ ಬೂಸ್ಟ್ ತುಂಬಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಂದ್ರೂ ಚಪ್ಪಲಿ ಕದಿಯುವ ಬುದ್ಧಿ ಬಿಡದ ಸ್ಪರ್ಧಿ..!

    ಕ್ವಾಟ್ಲೆಕಿಲಾಡಿಗಳು ತಂಡದ ಕ್ಯಾಪ್ಟನ್ ಮಂಜು, ತಮ್ಮ ತಂಡದ ಸದಸ್ಯರು ಆಟ ಆಡಲು ಪ್ರಾರಂಭಿಸುವ ಮೊದಲು ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೊಂದಿರಬೇಕು. ತಂಡ ಎಂದು ಬಂದಾಗ ನಾವೆಲ್ಲರೂ ಜೊತೆಯಾಗಿ ಆಟದಲ್ಲಿ ತೊಡಗಿಕೊಳ್ಳಬೇಕು. ದಿವ್ಯಾ ನೀನು ಆಡಲು ಹೊರಟಾಗ ಮೊದಲು ಬೇರೆ ಯಾರನ್ನಾದರು ಕಳುಹಿಸಿದರೆ ಒಳ್ಳೆದು ಎಂದು ಹೇಳಿದ್ದೆ. ಆ ರೀತಿ ಹೇಳದೆ ನೀನು ತುಂಬಾ ಆತ್ಮವಿಶ್ವಾಸದಿಂದ ಹೋಗುತ್ತಿದ್ದರೆ ನಮ್ಮ ತಂಡದ ಎಲ್ಲಾ ಸದಸ್ಯರಿಗೆ ಅದು ಪ್ರೋತ್ಸಾಹ ನೀಡಿದಂತೆ ಆಗುತ್ತಿತ್ತು. ನೀನು ಬಲಿಷ್ಠ ಆಟಗಾರ್ತಿ ಎಂದು ನಾವು ನಂಬಿಕೆ ಇಟ್ಟಿರುತ್ತೇವೆ. ಆಗ ನೀನು ವಿಶ್ವಾಸ ಕಳೆದುಕೊಂಡರೆ ನಮ್ಮ ತಂಡಕ್ಕೆ ಅದೇ ಮೊದಲ ಸೋಲಾಗುತ್ತದೆ. ನಮ್ಮಲ್ಲಿರುವ ಭಯವನ್ನು ನಾವು ಇತರರಿಗೆ ತೋರಿಸಿಕೊಳ್ಳಬಾರದು. ಮೊದಲ ಹೆಜ್ಜೆ ಇತತರಿಗೆ ಬೇಗ ಪ್ರಭಾವ ಬೀರುತ್ತದೆ ಮುಂದೆ ಈ ತಪ್ಪು ಮಾಡಬೇಡ ಎಂದು ಮಂಜು ತಿಳಿಹೇಳಿದ್ದಾರೆ.

  • ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ

    ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ

    ಬಿಗ್‍ಬಾಸ್ ಸೀಸನ್-8ರ ವಾರದ ಸಂಚಿಕೆಯಲ್ಲಿ ಮೊದಲ ಬಾರಿಗೆ ದೊಡ್ಮನೆ ಹೊತ್ತಿ ಉರಿದಿದೆ. ಚಕ್ರವರ್ತಿ ಚಂದ್ರಚೂಡ್‍ರವರು ಲ್ಯಾಗ್ ಮಂಜು ವಿರುದ್ಧ ಕಿಚ್ಚನ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೊದಲನೇಯದಾಗಿ ಮಾತು ಆರಂಭಿಸಿದ ಚಕ್ರವರ್ತಿಯವರು, ನನಗೆ ಮೂರು ವಿಷಯ ಕಾಡುತ್ತಿದೆ. ಮಂಜುರವರು ಎಲಿಮಿನೇಷನ್ ವೇಳೆ ಹಳೆಯದನ್ನು ಯಾವುದನ್ನೂ ಮಾತನಾಡಬಾರದು ಬೆಂಕಿಯಲ್ಲಿ ಸುಟ್ಟಾಗಿದೆ ಎಂದರು. ನಂತರ ನನ್ನ ತಂದೆ, ತಾಯಿ ಹಳ್ಳಿಯ ಮುಗ್ಧ ಜನ ನನಗೆ ಅವರು ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರ್ಗಿ ಕೆಟ್ಟವರು ಅವರ ಜೊತೆ ಸೇರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ನಾನು ಅವರ ತಂದೆ, ತಾಯಿಗೆ ಗೌರವ ಕೊಡುತ್ತೇನೆ. ಅವರು ನನ್ನ ಜೊತೆ ಸೇರಬೇಡ ಎಂದ ಮೇಲೆ ಮಂಜುರವರು ನನಗೆ ಅಣ್ಣಾ ಎಂದು ಕರೆಯಬಾರದು ಎಂದು ಚಕ್ರವರ್ತಿಯವರು ಕೆಂಡಕಾರಿದ್ದಾರೆ.

    ನನ್ನ ತಂದೆ ತಾಯಿ ಕೂಡ ನನಗೆ ಒಂದು ಹೇಳಿ ಕಳುಹಿಸಿದ್ದಾರೆ, ಎಲಿಮಿನೇಷನ್ ರೌಂಡ್ ವೇಳೆ ಹೇಳಬೇಕಾಗಿತ್ತು. ಆದರೆ ಈಗ ಟೈಮ್ ಬಂದಿದೆ ಎಂದು ಕೊಳ್ಳುತ್ತೇನೆ. ಕರ್ನಾಟಕದಲ್ಲಿ ಸುಮಾರು 363ಕ್ಕೂ ಹೆಚ್ಚು ಭಾಷೆಯ ಸೊಗಡುಗಳಿದೆ. ಈ ಎಲ್ಲ ಭಾಷೆಯ ಸೊಗಡಿನಲ್ಲಿಯು ನುಗ್ಗೆ ಕಾಯಿಗೂ ಹಾಗೂ ಮಾವಿನ ಹಣ್ಣಿಗೂ ಒಂದು ಸಂಬಂಧವಿದೆ. ಒಂದು ಹೆಣ್ಣು ಮಗಳಿಗೆ ನಿನ್ನೆ ನುಗ್ಗೆ ಕಾಯಿ ತಿನ್ನಿಸಿದೆ ಇಂದು ಮಾವಿನ ಹಣ್ಣು ತಿನ್ನಿಸುತ್ತಿದ್ದಾನೆ ಎಂದರೆ ಇದು ಸಿನಿಮಾದಲ್ಲಿ ಬಂದಿರುವುದು ಮಾತ್ರವಲ್ಲ ಒಂದು ಸೈಟಿಫಿಕ್ ರೀಸನ್ ಇದೆ. ಎಲ್ಲ ಪ್ರಾಂತ್ಯಗಳಲ್ಲಿಯೂ ಇದು ಗಂಡ ಹೆಂಡತಿಯರ ನಾಟಕ.

    ನಂತರ ಬಾರೇ ಸರಸಕ್ಕೆ ಎಂದು ಸ್ನೇಹಿತರನ್ನು ಕರೆಯುವುದಿಲ್ಲ. ಅಲ್ಲದೇ ನನ್ನನ್ನೇ ಸ್ವಲ್ಪದಿನ ಭಾವನಾಗಿ ಮಾಡಿಕೊಂಡಿದ್ದರು. ನನ್ನ ಜೊತೆ ಕೊಟ್ಟು ತೆಗೆದುಕೊಳ್ಳುವ ವಿಷಯ ಕೂಡ ನಡೆದಿತ್ತು. ಲೇ ಹೆಂಡ್ತಿ ಬಾರೇ ಎಂದು ಮಾತನಾಡಿದ್ದು, ಇದನ್ನು ಜಗತ್ತು ಮಾತನಾಡಿದೆ, ಕರ್ನಾಟಕವೂ ಮಾತನಾಡಿದೆ, ನಾನು ಮಾತನಾಡಿದ್ದೇನೆ. ಒಂದು ಹೆಣ್ಣನ್ನು ಒಂದು ಶೋ ಗೋಸ್ಕರ ಈ ಮನುಷ್ಯ ಹೇಗೆ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾನೆ? ಅವರರವರ ಇಷ್ಟ ಇರಬಹುದು, ಆದರೆ ನಾವು ಅದರ ಪಾಲುದಾರರಲ್ಲ. ಆದರೆ ನಾನು ಸದಸ್ಯ ಎಂದ ಮೇಲೆ ನಾನು ನನ್ನ ಅಭಿಪ್ರಾಯವನ್ನು ಒಳಗಡೆಯು ಹೇಳಿದ್ದೇನೆ. ಇದು ಕೃತಕವಾಗಿ ಕಾಣಿಸುತ್ತಿದೆ ಅಂತ ಅದನ್ನೇ ಹೊರಗಡೆಯು ಹೇಳಿದ್ದೇನೆ.

    ಇದೇ ಮಂಜು ಪಾವಗಡರವರಿಗೆ ನೀನು ಹಳ್ಳಿ ಹಕ್ಕಿ, ಹಳ್ಳಿ ಪ್ರತಿಭೆ ತೆನಾಲಿ ರಾಮ ಆಗಬೇಕು. ಇದನ್ನು ಮಾಡಬೇಡ ಎಂದು ಹೇಳಿದ್ದೇನೆ. ಅಲ್ಲದೇ ನಿನ್ನೆಯಿಂದ ನನಗೆ ನೀನು ಹಾಗೇ ಹೋಗಿ ಬಿಡು ಎಂದು ಪದೇ ಪದೇ ಹೇಳುತ್ತಿದ್ದಾರೆ. ಬಿಗ್‍ಬಾಸ್ ಯಾರಪ್ಪನ ಆಸ್ತಿ. ಬಿಗ್‍ಬಾಸ್‍ನನ್ನು ಯಾರು ಯಾರಿಗೂ ಬರೆದುಕೊಟ್ಟಿಲ್ಲ ಎಂದು ಕೆಂಡಕಾರಿದ್ದಾರೆ.

    ನನ್ನ ತಂದೆ ತಾಯಿ ನನಗೆ ಸರಸಕ್ಕೆ ಕರೆಯುವುದನ್ನು ಕಲಿಸಿಲ್ಲ. ಮಾವಿನ ಹಣ್ಣಿನ ಜೋಕ್‍ಗಳ ತರಹ, ಪತ್ತರವಳ್ಳಿ ಎಂಬ ಪದ ಇದೆ. ಪತ್ತರವಳ್ಳಿ ಎಂದರೆ ಕರ್ನಾಟಕದ ಡಿಕ್ಷನರಿಯಲ್ಲಿ ಆರು ಉಪಭಾಷೆಗಳಲ್ಲಿ ಬರುತ್ತದೆ. ಅದರ ಅರ್ಥ ಬೇಲಿ ಸಂದಿಯಲ್ಲಿ ನಡೆಯುವ ಕಾಮ. ಅದು ನಾನು ಹುಟ್ಟಾಕಿರುವುದಲ್ಲ, ಅವರು ಮನೆಯಲ್ಲಿ ಕರೆಯುತ್ತಿರುವ ಪದ. ಹೊರಗಡೆ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಲ್ಲೂ ಹಾಗೆಯೇ ಇರಬೇಕಾಗಿತ್ತು, ಈಗ ಸರಿಪಡಿಸಿಕೊಳ್ಳುತ್ತಿದ್ದಾರೆ ಅದನ್ನು ಮೆಚ್ಚುತ್ತೇನೆ.

    ಒಂದು ಹಳ್ಳಿಯ ಹುಡುಗ ಹೇಗೆ ಹೀಗೆ ನಡೆದುಕೊಳ್ಳಲು ಸಾಧ್ಯ. ಯಾರ ಕಥೆಗಳನ್ನು ಕೇಳುವುದಿಲ್ಲ, ಯಾರ ಪ್ರತಿಭೆಗಳನ್ನು ಕೇಳುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ. ತನ್ನದೇ ತೃತೀಯ ದರ್ಜೆಗಳ ಜೋಕ್‍ಗಳನ್ನು ನಾವು ಕೇಳಬೇಕು ಎಂದು ಹರಿಹಾಯ್ದಿದ್ದಾರೆ.

    ನನಗೆ ಈ ಮನೆಯಲ್ಲಿ ಮುದ್ದಾದ ಪ್ರೀತಿಯ ಜೋಡಿ ಕಂಡಿದೆ. ಒಂದು ಮುದ್ದಾದ ಸ್ನೇಹದ ಜೋಡಿ ಕಂಡಿದೆ, ಒಂದಷ್ಟು ವಿಶ್ವಾಸಗಳು ಕಂಡಿದೆ, ತಂಗಿ ಕಂಡಿದೆ. ನಾನು ಅದನ್ನು ಗೌರವಿಸುತ್ತೇನೆ. ಆದರೆ ಆಟದ ಕಾರಣಕ್ಕೆ ನನ್ನ ಮಾನವೀಯತೆಯನ್ನು ನನ್ನ ಓದನ್ನು ನನ್ನ ಜ್ಞಾನವನ್ನು ಕಳೆದುಕೊಳ್ಳಲು ತಯಾರಿಲ್ಲ. ಅವರ ತಂದೆ, ತಾಯಿ ಹೇಳಿ ಕಳುಹಿಸಿದ್ದಾರೆ ಅಲ್ವಾ ಸರ್ ನಾನು ಎಷ್ಟು ಸಂಗಡ ಈ ಮನೆಯಲ್ಲಿ ಇರುತ್ತೇನೋ ಅಷ್ಟು ಹೊತ್ತು ನನ್ನ ಸಂಗಡ ಮಾಡಬಾರದು. ಗೌರವವಾರ್ಥವಾಗಿ ಹೇಳುತ್ತಿದ್ದೇನೆ ಬಿಗ್‍ಬಾಸ್ ಮನೆ ಯಾರಿಗೂ ಸೇರಿದ್ದಲ್ಲ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್‍ರವರು ಈ ಮನೆಯ ಸದಸ್ಯರು, ಈ ಮನೆಯಲ್ಲಿ ಯಾವುದೇ ಕೃತಕತೆ ನಡೆದರೂ ನನ್ನ ಯುದ್ಧ ಆರಂಭ. ಅದು ಒಂದು ಕ್ಷಣ ಇದ್ದರೂ ಸರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಇಲ್ಲಿವರೆಗೂ ಅವರನ್ನು ಏಕವಚನದಲ್ಲಿ ಕರೆದಿಲ್ಲ – ದಿವ್ಯಾ