Tag: Manju Paavagada

  • ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ದು ವರ್ಷಗಳ ನಂತರ ಕನಸಿನ ರಾಣಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ರಾಮು ನಿಧನದ ನಂತರ ಕುಗ್ಗಿ ಹೋಗಿದ್ದ ಅವರು ಈಗ ಅದೇ ನೋವಿನಲ್ಲೇ ಮತ್ತೆ ನಟನೆಯತ್ತ ಮರಳಿದ್ದಾರೆ. 2017ರಲ್ಲಿ ಬಿಡುಗಡೆಗೊಂಡ ’ಉಪ್ಪು ಹುಳಿ ಖಾರ’ ದಲ್ಲಿ ಮಾಲಾಶ್ರೀ ನಟಿಸಿ, ಗ್ಯಾಪ್ ತೆಗೆದುಕೊಂಡಿದ್ದರು. ಈಗ ಹೆಸರಿಡದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು, ಎರಡನೇ ಬಾರಿ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಸಿನಿಮಾದ ಕಥೆಯೇ ವಿಭಿನ್ನವಾಗಿದೆ ಎಂದಿದ್ದಾರೆ ನಿರ್ದೇಶಕರು. ಸಿನಿಮಾ ಕಥೆಯಲ್ಲಿ ಹದಿನೈದು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮರಳಿರುತ್ತಾರೆ. ಕರೋನ ಮತ್ತು ಲಾಕ್‌ಡೌನ್ ಅವಧಿಯಲ್ಲಿ ನಡೆದಂತ ನೈಜ ಘಟನೆಗಳನ್ನು ತೆಗೆದುಕೊಂಡು ಅದಕ್ಕೆ ಆಕ್ಷನ್ ಥ್ರಿಲ್ಲರ್ ಜತೆಗೆ ಸೆಂಟಿಮೆಂಟ್ ಅಂಶಗಳನ್ನು  ಸೇರಿಸಿ ಸಿನಿಮಾ ಮಾಡುತ್ತಿದ್ದಾರಂತೆ ನಿರ್ದೇಶಕರು. ಬಹುತೇಕ ಸನ್ನಿವೇಶಗಳು ಆಸ್ಪತ್ರೆಯಲ್ಲಿ ನಡೆಯುತ್ತದೆ. ಹಾಡುಗಳಿಗೆ ಅವಕಾಶವಿರುವುದಿಲ್ಲ. ಆದರೂ ಹಿನ್ನಲೆ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ರವೀಂದ್ರ ವೆಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಸಿನಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ.ಎಸ್.ಚಂದ್ರಶೇಖರ್ ಅವರ ಸ್ವರ್ಣಗಂಗ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ತಾರಗಣದಲ್ಲಿ ವೈದ್ಯರಾಗಿ ಪ್ರಮೋದ್‌ಶೆಟ್ಟಿ, ಪೋಲೀಸ್ ಆಗಿ ರಂಗಾಯಣರಘು, ಸಾಧುಕೋಕಿಲ, ಬಿಗ್‌ಬಾಸ್ ವಿಜೇತ ಮಂಜುಪಾವಗಡ, ಕುರಿರಂಗ, ಅಶ್ವಿನ್, ವರ್ದನ್ ಇದ್ದಾರೆ. ಸದ್ದಿಲ್ಲದೇ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತವನ್ನು ಯುಗಾದಿ ತರುವಾಯ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

  • ದಿವ್ಯಾ ಸುರೇಶ್‍ರನ್ನೇ ಮದ್ವೆಯಾಗ್ತೀರಾ…?- ಅಭಿಮಾನಿಗಳ ಪ್ರಶ್ನೆಗೆ ಮಂಜು ಖಡಕ್ ಉತ್ತರ

    ದಿವ್ಯಾ ಸುರೇಶ್‍ರನ್ನೇ ಮದ್ವೆಯಾಗ್ತೀರಾ…?- ಅಭಿಮಾನಿಗಳ ಪ್ರಶ್ನೆಗೆ ಮಂಜು ಖಡಕ್ ಉತ್ತರ

    ಬಿಗ್‍ಬಾಸ್ ಸ್ಪರ್ಧಿಮಂಜು ಪಾವಗಡ ಅವರು ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದರು. ಆಗ ದಿವ್ಯಾ ಸುರೇಶ್ ಮತ್ತು ಮಂಜು ಮದುವೆ ಕುರಿತಾಗಿ ಇಂಟ್ರೆಸ್ಟಿಂಗ್ ಮಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ನಿಮ್ಮ ನೆಚ್ಚಿನ ಕಾಮಿಡಿಯನ್, ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವುದು, ಬಿಗ್‍ಬಾಸ್ ಕುರಿತಾಗಿ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ ಅಭಿಮಾನಿಗಳು ಬಿಗ್‍ಬಾಸ್ ಮನೆಯಲ್ಲಿ ಜೊತೆಗೆ ಇರುತ್ತಿದ್ದ ದಿವ್ಯಾ ಸುರೇಶ್ ಕುರಿತಾಗಿ ಕೇಳಿದ್ದಾರೆ. ಆದರೆ ಮಂಜು ಮಾತ್ರ ದಿವ್ಯಾ ಸುರೇಶ್ ಕುರಿತಾಗಿ ಕೊಂಚ ಡಿಫರೆಂಟ್ ಆಗಿ ಏರು ಧ್ವನಿಯಲ್ಲಿ ಉತ್ತರಿಸಿದ್ದಾರೆ.

    ಮಂಜು ಅವರ ಮದುವೆಯ ಕುರಿತಾಗಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಯನ್ನು ಕೇಳಿದ್ದಾರೆ. ನಿಮ್ಮ ಮದುವೆ ಯಾವಾಗ? ಹುಡುಗಿ ಯಾರು? ನೀವು ಯಾಕೆ ದಿವ್ಯಾ ಸುರೇಶ್ ಅವರನ್ನು ಮದುವೆಯಾಗಬಾರದು ಎಂದು ಪ್ರಶ್ನಿಸಿದಾಗ ಮಂಜು ಅವರು ನಾನು ಯಾಕೆ ದಿವ್ಯಾಳನ್ನು ಮದುವೆಯಾಗಬೇಕು? ನಾನು ಅವಳು ಒಳ್ಳೆಯ ಸ್ನೇಹಿತರು ಅಷ್ಟೆ ಬೇರೆ ಏನೂ ಇಲ್ಲ. ನಾನು ತಮಾಷೆ ಮಾಡುತ್ತಿದ್ದೆ ಅಷ್ಟೆ ಎಂದು ಹೇಳಿದ್ದಾರೆ. ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಆದರೆ ದಿವ್ಯಾ ಸುರೇಶ್ ಅವರನ್ನು ಅಲ್ಲ… ಬೇರೆ ಹುಡುಗಿಯನ್ನು ನೋಡುತ್ತಿದ್ದೇನೆ ಎಂದು ಹೇಳುವ ಮೂಲಕವಾಗಿ ದಿವ್ಯಾ ಸುರೇಶ್ ಮತ್ತು ಅವರ ಮಧ್ಯೆ ಇರುವ ಗಾಸಿಪ್ ಕುರಿತಾಗಿ ತೆರೆ ಎಳೆದಿದ್ದಾರೆ.

    ಲೈವ್‍ನಲ್ಲಿ ಮಂಜು ಅವರು ಅಭಿಮಾನಿಗಳ ಪ್ರಶ್ನೆಗೆ ಸಖತ್ ಮಜವಾಗಿ ಉತ್ತರ ಕೊಟ್ಟಿದ್ದಾರೆ. ಮಂಜು ಲೈವ್‍ನಲ್ಲಿಯೇ ಸಾಕಷ್ಟು ಕಾಮಿಡಿಯನ್ನು ಮಾಡಿದ್ದಾರೆ. ಬಿಗ್‍ಬಾಸ್ ಜರ್ನಿ ಕುರಿತಾಗಿ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. 10 ವಾರಗಳು ನನ್ನ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ಹೀಗೆ ಸಪೋರ್ಟ್ ಮಾಡಿ ಮುಂದಿನ ದಿನಗಳಲ್ಲಿ ಎಂದು ಹೇಳಿದ್ದಾರೆ.

  • ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಬಿಗ್‍ಬಾಸ್ ಮನೆಯಲ್ಲಿ ಇಷ್ಟು ದಿನಗಳ ಚೆನ್ನಾಗಿದ್ದ ಮಾವ-ಅಳಿಯನ ಮಧ್ಯೆ ಜಗಳ ಶುರುವಾಗಿದೆ. ಮಾವ, ಅಳಿಯ ಎಂದು ಕರೆದುಕೊಳ್ಳುತ್ತಿದ್ದ ಅವರು ಏನು.. ಏನು ಎಂದು ಮಾತಿಗೆ ಮಾತು ಬೆಳಸುವಷ್ಟರಮಟ್ಟಿಗೆ ಕಿತ್ತಾಡಿಕೊಂಡಿದ್ದಾರೆ.

    ಚದುರಂಗದ ಆಟದಲ್ಲಿ ಬಿಗ್‍ಬಾಸ್ ಕೆಲವು ನಿಯಮಗಳನ್ನು ಹಾಕಿದ್ದಾರೆ. ಈ ನಿಯಮವನ್ನು 2 ಗುಂಪಿನ ತಂಡದ ಸದಸ್ಯರು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಕುರಿತಾಗಿ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರ್ಗಿಯ ಮಧ್ಯೆ ಜಗಳವಾಗಿದೆ.

     ಮನೆಯಲ್ಲಿ ಚದುರಂಗದ ಆಟ ನಡೆಯುತ್ತಿದೆ. ಈ ಆಟದಲ್ಲಿ ಕೆಲವು ನಿಯಮಗಳನ್ನು ಬಿಗ್‍ಬಾಸ್ ಹಾಕಿದ್ದಾರೆ. ಒಬ್ಬ ಸ್ಪರ್ಧಿ ತಮ್ಮ ಆಟವನ್ನು ಮಗಿಸಿ ಬಿಗ್‍ಬಾಸ್ ಹೇಳುವವರೆಗೂ ಮನೆಯಿಂದ ಸ್ಪರ್ಧಿಗಳು ಹೊರಗೆ ಬರುವಂತಿಲ್ಲ. ಆದರೆ ಸಂಬರ್ಗಿ ಹೊರಗೆ ಬಂದಿದ್ದಾರೆ. ಮಾವ ನೀನು ಅವರು ಹೇಳುವ ಮೊದಲೆ ಯಾಕೆ ಹೊರಗೆ ಬರುತ್ತಿಯಾ ಪೌಲ್ ಎಂದು ಹೇಳಿದ್ದರೆ ಏನು ಮಾಡುತ್ತಿದ್ದೆ? ಎಂದ ಮಂಜು ಅವರದ್ದೇ ಗುಂಪಿನ ಸದಸ್ಯನಾಗಿರುವ ಸಬಂರ್ಗಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

    ಚದುರಂಗದ ಆಟದಲ್ಲಿ ಸೋತು ಸಂಬರ್ಗಿ ಆಟದಿಂದ ಹೊರೆ ಇದ್ದಾರೆ. ಚಂದ್ರಕಲಾ ಮೋಹನ್ ನೀಡಿದ್ದ ಸವಾಲನ್ನು ಸ್ವೀಕರಿಸಿದ ಅರವಿಂದ್ ಆಟವನ್ನು ಪೂರ್ತಿ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಅರವಿಂದ್ ಅವರಿಗೆ ಶುಭಕೋರಲು ಹೊರಗೆ ಬಂದಿದ್ದಾರೆ. ಈ ವೇಳೆ ರೂಲ್ಸ್ ಬ್ರೇಕ್ ಮಾಡಿರುವ ಕುರಿತಾಗಿ ಮನೆಯಲ್ಲಿ ಜಗಳವಾಗಿದೆ.

    ನಿನಗೆ ಮಾತ್ರ ಅಲ್ಲ ನನಗೂ ಜವಾಬ್ದಾರಿ ಇದೆ. ನಿನಗೆ ಒಬ್ಬನಿಗೆ ಬುದ್ದಿವಂತಿಕೆ ಇಲ್ಲ. ನೀನು ಯಾಕೆ ಆಚೆ ಬಂದೆ. ಸರಿ ಇರಲ್ಲ ಹೇಳುತ್ತಿದ್ದೇನೆ ಎಂದು ಸಂಬರ್ಗಿ ಮಂಜುಗೆ ಅವಾಜ್ ಹಾಕಿದ್ದಾರೆ. ಮಂಜು ಮಾತ್ರ ರೂಲ್ಸ್ ವಿಚಾರವಾಗಿ ಮೊದಲು ನಿಧಾನವಾಗಿ ಹೇಳಿದ್ದರು ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದಿದೆ. ಈ ವೇಳೆ ಮನೆಯ ಕ್ಯಾಪ್ಟನ್ ಅರವಿಂದ್ ಮಧ್ಯ ಪ್ರವೇಶಿಸಿ ಇಬ್ಬರ ಜಗಳವನ್ನು ತಡೆದಿದ್ದಾರೆ. ಇಂದು ಪ್ರಸಾರವಾಗಲಿರುವ ಎಪಿಸೋಡ್‍ನಲ್ಲಿ ಈ ಕುರಿತಾಗಿ ಎನೆಲ್ಲಾ ಡ್ರಾಮಾ ನಡೆಯಲಿದೆ ಎಂಬುದನ್ನು ಕಾದು ನೋಡ ಬೇಕಿದೆ.

  • ಒಂಟಿ ಮನೆಯ ಫಸ್ಟ್ ಡೇ ಪ್ರೇಮ್ ಕಹಾನಿ

    ಒಂಟಿ ಮನೆಯ ಫಸ್ಟ್ ಡೇ ಪ್ರೇಮ್ ಕಹಾನಿ

    ಬೆಂಗಳೂರು: ಬಿಗ್‍ಬಾಸ್ ಮನೆಯ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡ ಸೆಲೆಬ್ರಿಟಿಗಳು ಮನೆ ಪ್ರವೇಶ ಮಾಡಿದ ನಂತರ ಮೊದಲ ದಿನ ಹೇಗೆ ನಮ್ಮನ್ನು ರಂಜಿಸುತ್ತಾರೆ. ಏನು ಸುದ್ದಿ ಸಿಗಬಹುದು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಒಂದು ಪ್ರೇಮ್ ಕಹಾನಿ ಕಣ್ಣಿಗೆ ಬಿದ್ದಿದೆ.

    ಹಾಸ್ಯ ನಟ ಮಂಜು ಪಾವಗಡ ಮತ್ತು ಮಾಡೆಲ್ ದಿವ್ಯಾ ಸುರೇಶ್ ನಡುವಿನ ಒಂದು ಸಣ್ಣ ವೀಡಿಯೋ ಇಬ್ಬರ ನಡುವೆ ನಡೆದ ಸಂಭಾಷಣೆ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಮಾತಿನ ಭರದಲ್ಲಿ ನಿಮಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿ ಮಂಜು ಜೋರಾಗಿ ನಕ್ಕಿದ್ದಾರೆ. ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಸಖತ್ ಕ್ಯೂಟ್ ಎಂದಿದ್ದಾರೆ.

    ದಿವ್ಯಾ ಸುರೇಶ್ ತಮ್ಮ ಬಟ್ಟೆಗಳನ್ನು ಜೋಡಿಸುವ ಸಮಯದಲ್ಲಿ ಅಲ್ಲೇ ಇದ್ದ ಮಂಜು ಪಾವಗಡ ಅವರಿಗೆ ಬಟ್ಟೆ ಮಡಿಚಿಕೊಡಲು ಹೇಳಿದ್ದಾರೆ. ಆಗ ಮಂಜು, ನಿಮಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ಏನೇ ಇದ್ದರೂ ಹೇಳಿ ಎಂದಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ನಿಮ್ಮ ಕೈಯಲ್ಲಿ ಕೆಲಸ ಮಾಡಿಸಲ್ಲ. ನಿಮ್ಮ ಕೈಗಳಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ದಿವ್ಯ ಉರುಡುಗ ನಕ್ಕು ಇವತ್ತಿಗೆ ಇಷ್ಟು ಸಾಕು, ಇವರು ಇನ್ನು ನಿದ್ದೆ ಮಾಡಲ್ಲ ಎಂದು ಕಾಲೆಳೆದಿದ್ದಾರೆ.

    ಪ್ರಾಣ ಹೋದರೂ ಸರಿ ಏನು ಬೇಕಾದರೂ ಮಾಡುತ್ತೀನಿ.. ಯಾವಾಗ ಬೇಕಾದರೂ ನಿಮಗೋಸ್ಕರ ಮಾಡುತ್ತೇನೆ. ಮಾತಿಗಿಂತ ವಿಶ್ವಾಸ ಬೇಕಾ ನಿಮಗೆ ಪ್ರೀತಿ, ವಿಶ್ವಾಸಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದಿದ್ದಾರೆ. ಇದನ್ನೆಲ್ಲಾ ನಂಬಲ್ಲ ದಿವ್ಯ ಎಂದಿದ್ದಾರೆ. ಪ್ರಪಂಚದಲ್ಲಿ ಸಾವಿರ ಜನರನ್ನ ನೋಡಿರಬಹುದು. ಆದರೆ ಆ ಸಾವಿರದ 1ನೇ ಜನನೇ ನಾನು ಎಂದಿದ್ದಾರೆ. ಆಗ ದಿವ್ಯಾ ನೀವು ಚೆನ್ನಾಗಿರಬೇಕು ಅಷ್ಟೇ ನನಗೆ ಎಂದು ನಕ್ಕಿದ್ದಾರೆ.

    ದಿವ್ಯಾ ಸುರೇಶ್ ಅವರ ಕುಟುಂಬದ ಕುರಿತಾಗಿ ವಿಚಾರ ಮಾಡುವಾಗ ಕೆಲವು ವಿಚಾರಗಳನ್ನು ಮಾತನಾಡುತ್ತಾ ನಾನು  ಉನ್ನತ ಶಿಕ್ಷಣವನ್ನು 8 ವರ್ಷ ಮಾಡಿದ್ದೇನೆ. ಪಿಯುಸಿಯಲ್ಲಿ ಒಂದೇ ವಿಷಯವನ್ನು 8 ವರ್ಷ ಬರೆದಿದ್ದೇನೆ. ಈಗಲೂ ಬರೆಯುತ್ತೇನೆ. ಕಷ್ಟ ಪಟ್ಟಿದ್ದೇನೆ 8 ವರ್ಷ ಬರೆದಿದ್ದೇನೆ. ನಮ್ಮ ಅಪ್ಪ ಈಗಲೂ ಬರೆಯಲು ಹೇಳುತ್ತಾರೆ ಆದರೆ ಆಗುತ್ತಿಲ್ಲ. 8 ವರ್ಷ ಬರೆದಿರುವ ಕುರಿತಾಗಿ ನನಗೆ ಹೆಮ್ಮೆ ಇದೆ ಎಂದು ಹೇಳುತ್ತಾ ಆ್ಯಪಲ್‍ನ್ನು ಕಚ್ಚಿ ತಿಂದು ನಕ್ಕಿದ್ದಾರೆ.

    ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದಾರೆ. ಈ ಇಬ್ಬರಿಂದ ಇನ್ನೂ ಹೆಚ್ಚಿನ ಮನರಂಜನೆ ಸಿಗಬಹುದು ಎಂದು ಅಭಿಮಾನಿಗಳು ನೀರಿಕ್ಷಿಸುತ್ತಿದ್ದಾರೆ. ಮಂಜು ಅವರು ತನ್ನದೇ ಶೈಲಿಯಲ್ಲಿ ಮಾತನಾಡುತ್ತಾ ಎಲ್ಲರನ್ನು ನಕ್ಕುನಗಿಸುತ್ತಾ ಮನೆಯವರ ಮುಖದಲ್ಲಿ ನಗು ತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.