Tag: Manju mandavya

  • ಉಢಾಳರಾದರೂ ಉರುಳಾಡಿಸಿ ನಗಿಸುತ್ತಾರೆ ಭರತ ಬಾಹುಬಲಿ!

    ಉಢಾಳರಾದರೂ ಉರುಳಾಡಿಸಿ ನಗಿಸುತ್ತಾರೆ ಭರತ ಬಾಹುಬಲಿ!

    ಮಂಜು ಮಾಂಡವ್ಯ, ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶ್ರೀ ಭರತ ಬಾಹುಬಲಿ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಗಣನೀಯ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿತ್ತು. ಯಾವ ಸ್ಟಾರ್ ಡಮ್ ಕೂಡಾ ಇಲ್ಲದ ಈ ಸಿನಿಮಾ ಸುದ್ದಿಯಾಗಿದ್ದದ್ದೇ ಕ್ರಿಯೇಟಿವ್ ಅಂಶಗಳಿಂದ. ಭರತ ಬಾಹುಬಲಿಯದ್ದೊಂದು ವಿಶೇಷವಾದ ಕಥನ ಎಂಬ ನಂಬಿಕೆ ಬಿಡುಗಡೆಯ ಹೊತ್ತಿಗೆಲ್ಲ ಪ್ರೇಕ್ಷಕರ ಮನದಲ್ಲಿ ಪ್ರತಿಷ್ಠಾಪಿತಗೊಂಡು ಬಿಟ್ಟಿತ್ತು. ಆ ಎಲ್ಲ ನಿರೀಕ್ಷೆ, ಕಾತರಗಳನ್ನು ನಿಜವಾಗಿಸುವಂತೆ ಭರಪೂರ ಮನರಂಜನೆಯೊಂದಿಗೆ ಈ ಚಿತ್ರವೀಗ ತೆರೆಗಂಡಿದೆ. ಭರತ ಬಾಹುಬಲಿಯ ಕಾಮಿಡಿ ಝಲಕ್ಕಿನಿಂದಾಗಿ ಪ್ರೇಕ್ಷಕರೆಲ್ಲ ನಗುವಿನಲೆಯಲ್ಲಿ ಮಿಂದೆದ್ದು ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ನೀಡಿದ ತೃಪ್ತ ಭಾವದಿಂದ ಖುಷಿಗೊಂಡಿದ್ದಾರೆ.

    ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ನಿರ್ದೇಶಕನಾಗಿ ತಮ್ಮ ಪ್ರತಿಭೆ ತೋರಿದ್ದ ಮಂಜು ಮಾಂಡವ್ಯ ಈ ಚಿತ್ರದ ಮೂಲಕ ನಾಯಕನಾಗಲೂ ಸೈ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಚಿಕ್ಕಣ್ಣ, ಮಂಜು ಮಾಂಡವ್ಯ ಜುಗಲ್ ಬಂದಿ ತೆರೆ ಮೇಲೆ ಜಾದು ಸೃಷ್ಟಿಸಿದೆ. ಹೊಸ ರೀತಿಯ ಸ್ಕ್ರೀನ್ ಫ್ಲೇ, ಯಾವ ಹಂತದಲ್ಲಿಯೂ ಸಡಿಲಗೊಳ್ಳದ ಕಥೆ, ಪ್ರತಿ ಹಂತದಲ್ಲಿಯೂ ನಗುವಿನ ಸಿಂಚನ ಮಾಡುತ್ತಲೇ ಸಾಗುವ ಎಫೆಕ್ಟೀವ್ ಸಂಭಾಷಣೆಗಳೊಂದಿಗೆ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ನಿಖರವಾಗಿ ಹೇಳಬೇಕೆಂದರೆ ಈ ಭರತ ಬಾಹುಬಲಿ ಉಢಾಳರಾದರೂ ಉರುಳಾಡಿ ನಗುವಂತೆ ಮಾಡುತ್ತಾರೆ.

    ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಭರತ, ಬಾಹುಬಲಿ ಪಾತ್ರದಲ್ಲಿ ಮಿಂಚಿದ್ದಾರೆ. ಅವೆರಡೂ ಹಳ್ಳಿ ಕಂಪು ಹೊದ್ದುಕೊಂಡಿರುವಂಥಾ ಪಾತ್ರಗಳು. ಅದಕ್ಕೆ ಜೀವ ತುಂಬಿರೋ ರೀತಿಯೇ ಇಡೀ ಕಥೆಯ ನಿಜವಾದ ಜೀವಾಳ. ಪುಂಡ ಪೋಲಿಗಳಾಗಿ ತಲೆಹರಟೆ ಮಾಡಿಕೊಂಡು ಊರ ತುಂಬಾ ಅಂಡಲೆಯೋದೇ ಭರತ ಬಾಹುಬಲಿಯ ಫುಲ್ ಟೈಂ ಡ್ಯೂಟಿ. ಈ ನಡುವೆ ಹುಡುಗಾಟದಲ್ಲಿ ಮಾಡಿದ ಕೆಲಸವೇ ಅವರಿಬ್ಬರನ್ನು ಕಾನೂನಿನ ಸರಪಳಿಯಲ್ಲಿ ಬಂಧಿಗಳಾಗುವಂತೆ ಮಾಡುತ್ತದೆ. ಅಪ್ರಾಪ್ತ ಸ್ನೇಹಿತನಿಗೆ ಮದುವೆ ಮಾಡಿಸಿ ಜೈಲಿಗೆ ಸೇರೊ ಭರತ ಬಾಹುಬಲಿ ಬದುಕಿಗೆ ಎಂಟ್ರಿ ಕೊಡುವ ಶ್ರೀ ಇಡೀ ಚಿತ್ರದ ಚಿತ್ರಣವನ್ನೇ ಬದಲಿಸುತ್ತಾಳೆ. ಆ ನಂತರದಲ್ಲಿ ಕಥೆ ಮತ್ತಷ್ಟು ಓಘ ಪಡೆದುಕೊಳ್ಳುತ್ತದೆ. ಮುಂದೆ ಭರತ ಬಾಹುಬಲಿ ತಮ್ಮ ಪೋಲಿತನ ಬಿಟ್ಟು ಸರಿ ಹೋಗ್ತಾರಾ, ಭರತ ಬಾಹುಬಲಿ ಲೈಫಲ್ಲಿ ಏನೇನೆಲ್ಲ ಘಟಿಸುತ್ತವೆ ಅನ್ನೋ ಕುತೂಹಲ ನಿಮಗಿದ್ದರೆ ಈ ಚಿತ್ರವನ್ನು ಖಂಡಿತವಾಗಿಯೂ ಮಿಸ್ ಮಾಡದೆ ನೋಡಲೇಕು. ಇದನ್ನು ಓದಿ: ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್

    ಇಂಥಾ ನಿರೀಕ್ಷೆ ಹೊತ್ತು ಯಾರೇ ಚಿತ್ರಮಂದಿರ ಹೊಕ್ಕರೂ ಭರತ ಬಾಹುಬಲಿ ಖಂಡಿತಾ ನಿರಾಸೆ ಮಾಡುವುದಿಲ್ಲ. ಇಲ್ಲಿರೋದು ತುಂಬ ಸರಳವಾದ ಕಥೆ. ಇಂಟ್ರಸ್ಟಿಂಗ್ ವೇನಲ್ಲಿ ಸ್ಕ್ರೀನ್ ಪ್ಲೇ ಹೆಣೆದು ಅದನ್ನು ತೆರೆ ಮೇಲೆ ಅಷ್ಟೇ ಚೆಂದವಾಗಿ ಪ್ರೊಜೆಕ್ಟ್ ಮಾಡುವ ಮೂಲಕ ನಿರ್ದೇಶಕ ಮಂಜು ಮಾಂಡವ್ಯ ಎಲ್ಲವನ್ನೂ ವಿಶೇಷವಾಗಿಸಿದ್ದಾರೆ. ನಟನಾಗಿಯೂ ಸೈ ಎನಿಸಿಕೊಂಡಿರೋ ಮಂಜು ಮಾಂಡವ್ಯ ಅದಕ್ಕಾಗಿ ತುಂಬಾನೇ ತಾಲೀಮು ನಡೆಸಿರೋದು ತೆರೆ ಮೇಲೆ ಸ್ಪಷ್ಟವಾಗಿಯೇ ಕಾಣಿಸುತ್ತದೆ. ಎಂದಿನಂತೆ ಚಿಕ್ಕಣ್ಣ ಎಲ್ಲರಿಗೂ ಇಷ್ಟವಾಗುತ್ತಾರೆ. ನಾಯಕಿ ಪಾತ್ರದಲ್ಲಿ ಸಾರಾ ಮಹೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಫರ್ವೇಜ್ ಕೆ ಸಿನಿಮಾಟೋಗ್ರಫಿ ಎಲ್ಲರ ಮನಸೆಳೆಯುತ್ತದೆ. ಒಟ್ಟಾರೆಯಾಗಿ ಶ್ರೀ ಭರತ ಬಾಹುಬಲಿ ನಿರೀಕ್ಷೆ ಮೀರಿದ ಫೀಲ್ ಕೊಡುವಂತೆ ಮೂಡಿ ಬಂದಿದೆ.

    ಚಿತ್ರ: ಶ್ರೀ ಭರತ ಬಾಹುಬಲಿ
    ನಿರ್ದೇಶನ: ಮಂಜು ಮಾಂಡವ್ಯ
    ನಿರ್ಮಾಪಕ: ಟಿ. ಶ್ರೀನಿವಾಸ್
    ಸಂಗೀತ: ಮಣಿಕಾಂತ್ ಕದ್ರಿ
    ತಾರಾಬಳಗ: ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಮಹೇಶ್, ಶ್ರೀನಿವಾಸ್ ಮೂರ್ತಿ, ಇತರರು.

    ರೇಟಿಂಗ್: 3.5/5

  • ಬಿಡುಗಡೆಯಾಯ್ತು ಶ್ರೀ ಭರತಬಾಹುಬಲಿ – ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್

    ಬಿಡುಗಡೆಯಾಯ್ತು ಶ್ರೀ ಭರತಬಾಹುಬಲಿ – ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್

    ಬೆಂಗಳೂರು: ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಶ್ರೀ ಭರತಬಾಹುಬಲಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಗೆಳೆಯನ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಶುಭಹಾರೈಸಿದ್ದಾರೆ.

    ‘ಶ್ರೀ ಭರತಬಾಹುಬಲಿ’ ಚಿತ್ರದಲ್ಲಿ ನಾಯಕನಾಗಿರುವ ಗೆಳೆಯನಿಗೆ ಯಶ್ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಂಜು ಅವರ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡು ಯಶ್ ಗೆಳೆಯನ ಹೊಸ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ.

    ಈ ಹಿಂದೆ ಕೂಡ ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು. ಟ್ರೈಲರ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡಿದ್ದು, ಇಂದು ಶ್ರೀ ಭರತ ಬಾಹುಬಲಿ ಚಿತ್ರ ತೆರೆಕಂಡಿದೆ. ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    https://www.facebook.com/TheOfficialYash/posts/2813680548859338

    ಪೋಸ್ಟ್ ನಲ್ಲಿ ಏನಿದೆ?
    ಬರಹಗಾರನಾಗಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿ, ನಿರ್ದೇಶಕನಾಗಿ ಜನಮನಗೆದ್ದ ಗೆಳೆಯ ಮಂಜುಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಶ್ರೀ ಭರತಬಾಹುಬಲಿ ಅವತಾರದಲ್ಲಿ ನಿಮ್ಮುಂದೆ ಬಂದಿದ್ದಾರೆ. ಚಿಕ್ಕನೂ ಜೊತೆಗಿದ್ದಾನೆ ಇಬ್ಬರಿಗೂ ಒಳ್ಳೆಯದಾಗಲಿ. ಶ್ರೀ ಭರತಬಾಹುಬಲಿ ಯಶಸ್ವಿಯಾಗಲಿ ಎಂದು ಬರೆದು ಫೋಟೋ ಹಾಕಿ ಯಶ್ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಗೆ ಯಶ್ ಅಭಿಮಾನಿಗಳು ಕಮೆಂಟ್ ಮಾಡಿ ಮಂಜು ಹಾಗೂ ಅವರ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

    ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೊಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದ್ದು, ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

  • ವರ್ಷಾಂತ್ಯಕ್ಕೆ ಭರತ ಬಾಹುಬಲಿಯ ಮಸ್ತ್ ಹಾಡಿನ ಕೊಡುಗೆ

    ವರ್ಷಾಂತ್ಯಕ್ಕೆ ಭರತ ಬಾಹುಬಲಿಯ ಮಸ್ತ್ ಹಾಡಿನ ಕೊಡುಗೆ

    ಮಾಸ್ಟರ್ ಫೀಸ್ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಮಂಜು ಮಾಂಡವ್ಯ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ಡೈರೆಕ್ಷನ್ ಕ್ಯಾಪ್ ಜೊತೆ ನಟನಾಗಿ ಬೆಳ್ಳಿತೆರೆಯಲ್ಲಿ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ಮಂಜು ಮಾಂಡವ್ಯ, ಚಿಕ್ಕಣ್ಣ ಮುಖ್ಯ ಭೂಮಿಕೆಯ ಈ ಚಿತ್ರದ ಟಪ್ಪಾಂಗೋಚಿ ಸಾಂಗ್ ರಿಲೀಸ್ ಆಗಿದೆ. ಕ್ಯಾಚಿ ಲಿರಿಕ್ಸ್ ಇರೋ ಈ ಸಾಂಗ್ ಎಲ್ಲರನ್ನೂ ರಂಜಿಸುತ್ತಿದೆ. ಈ ಹಾಡಿಗೆ ಮಂಜು ಮಾಂಡವ್ಯ ಲಿರಿಕ್ಸ್ ಬರೆಯೋದರ ಜೊತೆ ಹಾಡು ಹಾಡಿ ಸ್ಟೆಪ್ಪು ಹಾಕಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಟಪ್ಪಾಂಗೋಚಿ ಸಾಂಗ್‍ಗೆ ಮಸ್ತ್ ಸ್ಟೆಪ್ ಹಾಕಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಹಾಕಿರೋ ಸೆಟ್‍ನಲ್ಲಿ ಕಲರ್ ಫುಲ್ ಆಗಿ ಮೂಡಿಬಂದಿರೋ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಮೆಲೋಡಿ ಸಾಂಗ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ. ವರ್ಷಾಂತ್ಯಕ್ಕೆ ರಿಲೀಸ್ ಆಗಿರೋ ಈ ಹಾಡು ಇಯರ್ ಎಂಡ್ ಸೆಲೆಬ್ರೇಷನ್‍ಗೆ ಹೇಳಿ ಮಾಡಿಸಿದಂತಿದೆ.

    ಜನವರಿ ಹದಿನೇಳಕ್ಕೆ ಶ್ರೀ ಭರತ ಬಾಹುಬಲಿ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ. ನಿರ್ದೇಶನ, ನಟನೆ, ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿರೋ ನಿರ್ದೇಶಕ ಮಂಜು ಮಾಂಡವ್ಯ ಈಗ ಹಾಡುಗಾರರಾಗಿಯೂ ಬಡ್ತಿ ಪಡೆದಿರೋದು ವಿಶೇಷ ಸಂಗತಿ.

  • ನಡುವೆ ಅಂತರವಿಲ್ಲದ ದೃಶ್ಯಗಳಲ್ಲಿ ಐಶಾನಿ ಶೆಟ್ಟಿ!

    ನಡುವೆ ಅಂತರವಿಲ್ಲದ ದೃಶ್ಯಗಳಲ್ಲಿ ಐಶಾನಿ ಶೆಟ್ಟಿ!

    ಬೆಂಗಳೂರು: ಐಶಾನಿ ಶೆಟ್ಟಿ ಗೊತ್ತಲ್ಲ? ನೀನಾಸಂ ಸತೀಶ್ ಅವರ ರಾಕೆಟ್ ಮೂಲಕ ಮುಖ್ಯ ನಾಯಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತವರು. ಅದಾದ ನಂತರವೂ ಸಾಕಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿರುವ ಐಶಾನಿ ಇತ್ತೀಚೆಗಷ್ಟೇ `ಕಾಜಿ’ ಎನ್ನುವ ಕಿರುಚಿತ್ರವನ್ನು ನಿರ್ದೇಶಿಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು.

    ಸದ್ಯ ಪ್ರಖ್ಯಾತ್ ಪರಮೇಶ್ ಎಂಬ ಹೊಸ ಹುಡುಗ ನಾಯಕನಾಗಿರುವ ‘ನಡುವೆ ಅಂತರವಿರಲಿ’ ಚಿತ್ರದಲ್ಲಿ ಐಶಾನಿ ಶೆಟ್ಟಿ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಸರಿಗೆ ನಡುವೆ ಅಂತರವಿರಲಿ ಎಂದಿದ್ದರೂ ಈ ಚಿತ್ರದ ಫೋಟೋಗಳು ಸಖತ್ ಹಾಟ್ ಆಗಿವೆ. ಅಂತರವಿರದ ದೃಶ್ಯಗಳಲ್ಲಿ ಐಶಾನಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪರದೆ ಹಂಚಿಕೊಂಡಿದ್ದಾರೆ. ಈ ಚಿತ್ರ ಈಗಿನ ಜನರೇಷನ್ ನೈಜ ಘಟನೆಯ ಕಥಾವಸ್ತು, ಪ್ರೀಮೆಚ್ಯೂರ್ಡ್ ಲವ್ ಸ್ಟೋರಿಯಾಗಿರುತ್ತೆ ಅನ್ನೋದು ನಿರ್ದೇಶಕರ ವಿವರಣೆ. ಹಾಗಾದರೆ ಹದಿಹರೆಯದ ಹುಡುಗ ಹುಡುಗಿಯ ಹುಡುಗಾಟಿಕೆ ಸ್ವಲ್ಪ ಜಾಸ್ತೀನೇ ಇರಬಹುದು!

    ಬೃಂದಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀನ್-ಜಿ.ಕೆ. ನಾಗರಾಜು ನಿರ್ಮಾಣದ, ‘ನಡುವೆ ಅಂತರವಿರಲಿ’ ಚಿತ್ರೀಕರಣ ಸದ್ದುಗದ್ದಲವಿಲ್ಲದೆ ಪೂರೈಸಿ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಚಿತ್ರದ ಚಿತ್ರ ಕಥೆ-ನಿರ್ದೇಶನ ರವೀನ್, ಸಂಭಾಷಣೆ – ಮಂಜು ಮಾಂಡವ್ಯ, ಛಾಯಾಗ್ರಹಣ-ಯೋಗಿ, ಸಂಗೀತ-ಕದ್ರಿ ಮಣಿಕಾಂತ್, ಸಂಕಲನ-ಗಣೇಶ್ ಮಲ್ಲಯ್ಯ, ಸಾಹಸ-ರವಿವರ್ಮ, ನೃತ್ಯ – ಮುರಳಿ, ಸಾಹಿತ್ಯ-ಡಾ.ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗೌಸ್‍ಫೀರ್. ಸಹನಿರ್ದೇಶನ-ರಾಮಕೃಷ್ಣ, ನಿರ್ವಹಣೆ- ಮೈಸೂರ್ ಕೃಷ್ಣ, ತಾರಾಗಣದಲ್ಲಿ – ಪ್ರಖ್ಯಾತ್ ಪರಮೇಶ್, ಐಶಾನಿ ಶೆಟ್ಟಿ, ಚಿಕ್ಕಣ್ಣ, ರಕ್ಷಿತ್ ಕುಮಾರ್, ತುಳಸಿ ಶಿವಮಣಿ, ಅರುಣಾ ಬಾಲರಾಜ್, ಶ್ರೀನಿವಾಸಪ್ರಭು, ಮಂಜು ಮಾಂಡವ್ಯ ಮುಂತಾದವರಿದ್ದಾರೆ.