Tag: Manju Maandavya

  • ನಕ್ಕು ನಗಿಸಲು ಬರ್ತಿದ್ದಾರೆ ಶ್ರೀ ಭರತ ಬಾಹುಬಲಿ

    ನಕ್ಕು ನಗಿಸಲು ಬರ್ತಿದ್ದಾರೆ ಶ್ರೀ ಭರತ ಬಾಹುಬಲಿ

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಜುಗಲ್‍ಬಂದಿಯಾಗಿ ನಟಿಸಿರೋ ಶ್ರೀ ಭರತ ಬಾಹುಬಲಿ ಚಿತ್ರ ಜನವರಿ 17ಕ್ಕೆ ರಾಜ್ಯದ್ಯಂತ ತೆರೆ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಜನಪ್ರಿಯರಾಗಿದ್ದ ಮಂಜು ಮಾಂಡವ್ಯ ನಟನಾಗಿ ಅಭಿನಯಿಸುತ್ತಿರುವ ಚಿತ್ರವಿದು.

    ನಟನೆ ಜೊತೆಗೆ ಚಿತ್ರಕ್ಕೆ ನಿರ್ದೇಶನ ಕೂಡ ಮಂಜು ಮಾಂಡವ್ಯ ಮಾಡಿದ್ದಾರೆ. ಒಂದೊಳ್ಳೆ ಟೀಂ ಕಟ್ಟಿಕೊಂಡು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಇರೋ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ ಮಂಜು ಮಾಂಡವ್ಯ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

    ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೈಲರ್ ಕೂಡ ಒಳ್ಳೆಯ ಟಾಕ್ ಕ್ರಿಯೇಟ್ ಮಾಡಿದ್ದು ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಪರ್ವೇಜ್.ಕೆ ಸಿನಿಮಾಟೋಗ್ರಾಫಿ ಶ್ರೀ ಭರತ ಬಾಹುಬಲಿ ಚಿತ್ರಕ್ಕಿದೆ. ಶ್ರೀನಿವಾಸ್ ಮೂರ್ತಿ, ಪುಷ್ಪಲತಾ, ಕರಿಸುಬ್ಬು, ಶ್ರೇಯಾ ಶೆಟ್ಟಿ, ಅಚ್ಯುತ್ ರಾವ್ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 17ಕ್ಕೆ ಭರತ ಬಾಹುಬಲಿ ಕಥೆ ನೋಡಲು ರೆಡಿಯಾಗಿ.

  • ಚಿಕ್ಕಣ್ಣ-ಮಂಜು ಮಾಂಡವ್ಯ ಜುಗಲ್‍ಬಂದಿಯ ಚಿತ್ರ ಈ ವಾರ ತೆರೆಗೆ!

    ಚಿಕ್ಕಣ್ಣ-ಮಂಜು ಮಾಂಡವ್ಯ ಜುಗಲ್‍ಬಂದಿಯ ಚಿತ್ರ ಈ ವಾರ ತೆರೆಗೆ!

    ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಈಗ ತಾವೇ ಕ್ಯಾಮೆರಾ ಮುಂದೆ ಬಂದು ಡೈಲಾಗ್ ಹೇಳ್ತಿದ್ದಾರೆ.

    ಹೌದು, ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದೆಯಂತೆ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದು, ಟ್ರೈಲರ್ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡ್ತಿವೆ. ಜನವರಿ 17ಕ್ಕೆ ಶ್ರೀ ಭರತ ಬಾಹುಬಲಿ ಚಿತ್ರ ತೆರೆಗೆ ಬರಲು ರೆಡಿಯಾಗಿದ್ದು, ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.