Tag: ManiRatnam

  • Thug Life: ಕಮಲ್ ಹಾಸನ್ ಜೊತೆ ಚಿತ್ರೀಕರಣದಲ್ಲಿ ನಟ ಸಿಂಬು ಭಾಗಿ- ಲೀಕ್ ಆಯ್ತು ಫೋಟೋ

    Thug Life: ಕಮಲ್ ಹಾಸನ್ ಜೊತೆ ಚಿತ್ರೀಕರಣದಲ್ಲಿ ನಟ ಸಿಂಬು ಭಾಗಿ- ಲೀಕ್ ಆಯ್ತು ಫೋಟೋ

    ಕಾಲಿವುಡ್ ಸ್ಟಾರ್ ನಟ ಕಮಲ್ ಹಾಸನ್ (Kamal Hasaan) ಸದ್ಯ ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ಥಗ್ ಲೈಫ್’ (Thug Life) ಸಿನಿಮಾದ ಶೂಟಿಂಗ್ ದೆಹಲಿಯಲ್ಲಿ ಭರದಿಂದ ಸಾಗುತ್ತಿದೆ. ಚಿತ್ರೀಕರಣ ಫೋಟೋವೊಂದು ಲೀಕ್ ಆಗಿದೆ. ಕಮಲ್ ಹಾಸನ್ ಜೊತೆ ಭಾಗಿಯಾಗಿರುವ ಸಿಂಬು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಕಮಲ್ ಹಾಸನ್ ನಟನೆಯ 234ನೇ ಚಿತ್ರ ಇದಾಗಿದ್ದು, 36 ವರ್ಷಗಳ ನಂತರ ಮಣಿರತ್ನಂ ಜೊತೆ ಕೈಜೋಡಿಸಿದ್ದಾರೆ. ಇನ್ನೂ ‘ಥಗ್ ಲೈಫ್’ ಚಿತ್ರವು ಏಪ್ರಿಲ್ ಕೊನೆಯ ವಾರದಿಂದ ದೆಹಲಿಯಲ್ಲಿ ಶೂಟಿಂಗ್‌ಗಾಗಿ ಚಿತ್ರತಂಡ ಬೀಡು ಬಿಟ್ಟಿದೆ. ಮೇ 12ರವರೆಗೂ ಚೆನ್ನೈ ಮತ್ತು ದೆಹಲಿಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ:ಥೈಲ್ಯಾಂಡ್ ಬೀಚ್: ಬಿಕಿನಿಯಲ್ಲಿ ಕಾಣಿಸಿಕೊಂಡ ದಿಶಾ

    ಕಮಲ್ ಹಾಸನ್ ನಟನೆಯ ಸಿನಿಮಾದಲ್ಲಿ ತಮಿಳು ನಟ ಸಿಂಬು (Simbu) ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಜೊತೆ ಸಿಂಬು ಚಿತ್ರೀಕರಣಕ್ಕೆ ಭಾಗಿಯಾಗಿರುವ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಕಮಲ್, ಅಭಿರಾಮಿ, ಸಿಂಬು ಇದ್ದಾರೆ. ಕಮಲ್ ಸಖತ್ ಯಂಗ್ ಆಗಿ ಕಾಣಿಸಿಕೊಂಡ್ರೆ, ಸಿಂಬು ಕಪ್ಪು ಕನ್ನಡಕ ಧರಿಸಿರೋದು ನೋಡುಗರ ಗಮನ ಸೆಳೆದಿದೆ.

    ‘ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್, ಸಿಂಬು, ಅಭಿರಾಮಿ, ನಾಸರ್, ಜಯಂ ರವಿ, ತ್ರಿಶಾ, ಗೌತಮ್ ಕಾರ್ತಿಕ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದೆ ಚಿತ್ರತಂಡ.

  • ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ Ponniyin Selvan 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಸಂಜೆ ಅದ್ಧೂರಿಯಾಗಿ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉಳಗನಾಯಗನ್ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ರು. ಟ್ರೈಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಷಾ, ಜಯಂರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಾಚಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್-2 ಸೀಕ್ವೆಲ್ ಟ್ರೈಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ. ಇದನ್ನೂ ಓದಿ: ಪ್ರೀತಿಯ ಹೊಸ ಮಗ್ಗುಲಿಗೆ ಕಣ್ಣಾದ `ಚೌ ಚೌ ಬಾತ್’ ಸಿನಿಮಾ

    ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ. ಅದ್ಧೂರಿ ಮೇಕಿಂಗ್, ಬೃಹತ್ ಸೆಟ್ ಗಳು ಟ್ರೈಲರ್‌ನಲ್ಲಿ ಝಗಮಗಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯಿನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಸಂಗೀತ ಸಿನಿಮಾಕ್ಕಿದೆ.

    ಟ್ರೈಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಐಶ್ವರ್ಯ ರೈ (Aishwarya Rai), ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ದೊಡ್ಡ ಕ್ಯಾನ್ವಸ್ ಚಿತ್ರದಲ್ಲಿದೆ.

  • `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಣಿರತ್ನಂ (Maniratnam) ನಿರ್ದೇಶನದ `ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರಮಂದಿರದಲ್ಲಿ ಮ್ಯಾಜಿಕ್ ಮಾಡಿತ್ತು. ಪ್ರೇಕ್ಷಕರು ಈ ಸಿನಿಮಾ ನೋಡಿ ಖುಷಿಪಟ್ಟಿದ್ದರು. ಈ ಪಾರ್ಟ್ 2 ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

    ಐತಿಹಾಸಿಕ ಸ್ಟೋರಿ, ಸ್ಟಾರ್ ಡೈರೆಕ್ಟರ್, ಸ್ಟಾರ್ ತಾರಾಗಣ, ಅದ್ದೂರಿ ಮೇಕಿಂಗ್, ಸಂಗೀತ ಮಾಂತ್ರಿಕನ ಮ್ಯೂಸಿಕ್ ಇದೆಲ್ಲವೂ ಒಳಗೊಂಡ ಸಿನಿಮಾವೇ ‘ಪೊನ್ನಿಯಿನ್ ಸೆಲ್ವನ್’. ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಇದನ್ನೂ ಓದಿ: `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕ ಮಹಾಶಯರಿಂದಲೂ ಬಹುಪರಾಕ್ ಪಡೆದುಕೊಂಡಿತ್ತು. ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ತೆರೆ ಮೇಲೆ ಕಮಾಲ್ ಮಾಡಿತ್ತು. ಎಲ್ಲೆಡೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಇದೀಗ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ. ಸೀಕ್ವಲ್ 2 ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

    ಲೇಖಕ ಹಾಗೂ ಸ್ವಾತಂತ್ರ‍್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಭಾಗ ವರ್ಲ್ ವೈಡ್ ಅಭೂತ ಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಎರಡನೇ ಸೀಕ್ವೆಲ್ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದೆ ಚಿತ್ರತಂಡ. ಏಪ್ರಿಲ್ 28ಕ್ಕೆ `ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಬರಲಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಈ ಅದ್ದೂರಿ ಸಿನಿಮಾ ನಿರ್ಮಾಣವಾಗಿದ್ದು, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • 250 ಕೋಟಿ ಕಲೆಕ್ಷನ್‌ನತ್ತ `ಪೊನ್ನಿಯನ್ ಸೆಲ್ವನ್’ ಸಿನಿಮಾ

    250 ಕೋಟಿ ಕಲೆಕ್ಷನ್‌ನತ್ತ `ಪೊನ್ನಿಯನ್ ಸೆಲ್ವನ್’ ಸಿನಿಮಾ

    ಸೌತ್‌ನಲ್ಲಿ ಮೋಡಿ ಮಾಡುತ್ತಿರುವ `ಪೊನ್ನಿಯನ್ ಸೆಲ್ವನ್'(Ponniyin Selvan) ಸಿನಿಮಾ ಗಲ್ಲಾಪೆಟ್ಟಿಗೆ ಲೂಟಿ ಮಾಡುತ್ತಿದೆ. `ಬಾಹುಬಲಿ’ 2 ಮತ್ತು `ವಿಕ್ರಮ್’ ಚಿತ್ರದ ದಾಖಲೆ ಸೆಡ್ಡು ಹೊಡೆದು 250 ಕೋಟಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.

    ಮಣಿರತ್ನಂ (Maniratnam) ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಸೆಪ್ಟೆಂಬರ್ 30ರಂದು ರಿಲೀಸ್ ಆಗಿತ್ತು. ಪೌರಾಣಿಕ ಸಿನಿಮಾಗೆ ಪ್ರೇಕ್ಷಕ ಪ್ರಭುಗಳು ಅಸ್ತು ಎಂದಿದ್ದಾರೆ. 13 ದಿನಗಳಲ್ಲಿ ಸಿನಿಮಾ 227 ಕೋಟಿ ಕಲೆಕ್ಷನ್ ಮಾಡಿ, 250 ಕೋಟಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.

    ಇನ್ನೂ ತಮಿಳುನಾಡಿನಲ್ಲಿ `ಬಾಹುಬಲಿ 2′(Bahubali 2) ಸಿನಿಮಾ ಮತ್ತು `ವಿಕ್ರಮ್’ (Vikram) ಚಿತ್ರದ ದಾಖಲೆಯನ್ನ ದಾಟುವ ಸಾಧ್ಯತೆ ಕೂಡಯಿದೆ. ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಜಯರಾಂ, ತ್ರಿಷಾ, ನಟನೆಯ ಈ ಚಿತ್ರಕ್ಕೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಭಾರತದಲ್ಲಿ 217 ಕೋಟಿ ಗಳಿಸಿ, 250 ಕೋಟಿ ಕಲೆಕ್ಷನ್ ಮಾಡುವತ್ತ ನುಗ್ಗುತ್ತಿದೆ. ವಿಶ್ವಾದ್ಯಂತ 450 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ನೆನಪಲ್ಲಿ `ಪೊನ್ನಿಯನ್ ಸೆಲ್ವನ್’ ತಂಡಕ್ಕೆ ನಿರೂಪಕಿ ಅನುಶ್ರೀ ವಿಶೇಷ ಗಿಫ್ಟ್

    ಅಪ್ಪು ನೆನಪಲ್ಲಿ `ಪೊನ್ನಿಯನ್ ಸೆಲ್ವನ್’ ತಂಡಕ್ಕೆ ನಿರೂಪಕಿ ಅನುಶ್ರೀ ವಿಶೇಷ ಗಿಫ್ಟ್

    ತಮಿಳಿನ ಬಹುನಿರೀಕ್ಷಿತ ಸಿನಿಮಾ `ಪೊನ್ನಿಯನ್ ಸೆಲ್ವನ್’ (Ponniyin Selvan) ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರದ ಪ್ರಚಾರ ಕಾರ್ಯ ಕೂಡ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ವೇಳೆ ಸ್ಯಾಂಡಲ್‌ವುಡ್ ನಟಿ ಕಮ್ ನಿರೂಪಕಿ ಅನುಶ್ರೀ (Anushree) ಅಪ್ಪು ಮುಖವಿರುವ ವಿಶೇಷ ನಾಣ್ಯವನ್ನ ಚಿತ್ರತಂಡಕ್ಕೆ ಗಿಫ್ಟ್ ಮಾಡಿದ್ದಾರೆ.

    `ಮಣಿರತ್ನಂ’ (Maniratnam) ನಿರ್ದೇಶನದ ನಿರೀಕ್ಷಿತ ಸಿನಿಮಾ `ಪೊನ್ನಿಯನ್ ಸೆಲ್ವನ್’ ಚಿತ್ರದಲ್ಲಿ ಐಶ್ವರ್ಯ ರೈ, ವಿಕ್ರಮ್, ಕಾರ್ತಿ, ತ್ರಿಷಾ, ಜಯಂ ರವಿ ಹೀಗೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಸೆಪ್ಟೆಂಬರ್ 30ಕ್ಕೆ ತೆರೆಗೆ ಬರಲು ಈ ಚಿತ್ರ ರೆಡಿಯಾಗಿದೆ. ಹಾಗಾಗಿ ಈ ಚಿತ್ರದ ಪ್ರಚಾರ ಕಾರ್ಯ ಕೂಡ ಚೆನ್ನೈನಲ್ಲಿ ಕೂಡ ಭರ್ಜರಿ ನಡೆದಿದೆ. ಇನ್ನೂ ಈ ಚಿತ್ರತಂಡಕ್ಕೆ ಪುನೀತ್‌ ರಾಜ್‌ಕುಮಾರ್‌ ನೆನಪಿಗಾಗಿ ಕನ್ನಡದ ನಟಿ ಅನುಶ್ರೀ ವಿಶೇಷ ಉಡುಗೊರೆಯೊಂದನ್ನ ನೀಡಿ, ಎಲ್ಲರ ಗಮನ ಸೆಳೆದಿದ್ದಾರೆ. ಈ ಕುರಿತು ನಟ ವಿಕ್ರಮ್ ಪ್ರಭು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸೋನಂ ಕಪೂರ್ ಮಗುವಿಗೆ ನಾಮಕರಣ: ಮುದ್ದು ಮಗನ ಹೆಸರೇನು ಗೊತ್ತಾ?

    ʻಅಪ್ಪು ಅಣ್ಣನ ಮುಖವಿರುವ ಬೆಳ್ಳಿ ನಾಣ್ಯವನ್ನು ನಮ್ಮ ಚಿತ್ರದ ಪ್ರಚಾರ ಕಾರ್ಯದಲ್ಲಿ ಕನ್ನಡ ಚಿತ್ರರಂಗದ ನಿರೂಪಕಿ ಅನುಶ್ರೀ ಅವರು ಮತ್ತು ಅವರ ತಂಡದಿಂದ ಅಪ್ಪು ಕುರಿತ ನಾಣ್ಯವನ್ನು ಪ್ರತಿಯೊಬ್ಬರಿಗೂ ಉಡುಗೊರೆಯಾಗಿ ನೀಡಿದ್ದರು. ಅಪ್ಪು ಎಂತಹ ಅದ್ಭುತ ವ್ಯಕ್ತಿ, ಅವರ ಪ್ರೀತಿ ಇನ್ನೂ ನಮ್ಮಲ್ಲಿ ಅನೇಕರ ನಡುವೆ ಇದೆ ಎಂದು ನಟ ವಿಕ್ರಮ್ ಪ್ರಭು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Vikram Prabhu (@iamvikramprabhu)

    ಇನ್ನೂ ನಿರೂಪಕಿ ಅನುಶ್ರೀ ಅವರು ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ನೆನಪಿಗಾಗಿ ಚಿತ್ರತಂಡಕ್ಕೆ ಅಪ್ಪು ನಾಣ್ಯ ನೀಡಿರುವ ಅನುಶ್ರೀ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಖಾತ್ಯ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

    ಖಾತ್ಯ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

    ಮುಂಬೈ: ಭಾರತೀಯ ಸಿನಿಮಾರಂಗದಲ್ಲಿ ಹೆಸರುವಾಸಿಯಾದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಮಣಿರತ್ನಂ(63) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗಲೇ ಮಣಿರತ್ನಂ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮುಂಬೈನಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

    ನಿರ್ದೇಶಕ ಮಣಿರತ್ನಂ ಅವರ ಅನಾರೋಗ್ಯ ಕುರಿತಾಗಿ ಸಾಮಾಜಿಕ ಜಾಲತಾಣಗಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಮಣಿರತ್ನಂ ಅವರಿಗೆ ಈ ಹಿಂದೆಯೇ ಅಂದರೆ 2004 ರಲ್ಲಿ ‘ಯುವ’ ಸಿನಿಮಾ ಶೂಟಿಂಗ್ ನಲ್ಲಿದ್ದ ಸಂದರ್ಭದಲ್ಲಿ ಸೆಟ್‍ನಲ್ಲಿಯೇ ಹೃದಯಾಘಾತವಾಗಿತ್ತು. ಇದೇ ಕಾರಣದಿಂದ 2015 ರಲ್ಲಿ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

    ಮಣಿರತ್ನಂ ಅವರು ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪ್ರಸ್ತುತ ‘ಪೊನ್ನಿಯನ್ ಸೆಲ್ವನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ‘ಅಮರಾರ್ ಕಲ್ಕಿ’ ಕಾದಂಬರಿಯನ್ನು ಆಧಾರಿತ ಚಿತ್ರವಾಗಿದೆ.

    https://twitter.com/LokeshJey/status/1140297666800152576

    ಈ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳಾದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಅಮಿತಾಭ್ ಬಚ್ಚನ್, ಅಮಲಾ ಪೌಲ್, ಜಯರಾಮ್ ರವಿ, ಕಾರ್ತಿ ಮತ್ತು ಅನುಷ್ಕಾ ಶೆಟ್ಟಿ ಮುಂತಾದ ನಾಯಕರು ಅಭಿನಯಿಸುತ್ತಿದ್ದಾರೆ.