Tag: manipura

  • ಮಣಿಪುರದಲ್ಲಿ ಬಿರೇನ್‌ ಸರ್ಕಾರಕ್ಕೆ ಸಂಕಷ್ಟ – ಬಿಜೆಪಿಯ 37ರ ಪೈಕಿ 17 ಶಾಸಕರು ಸಭೆಗೆ ಗೈರು

    ಮಣಿಪುರದಲ್ಲಿ ಬಿರೇನ್‌ ಸರ್ಕಾರಕ್ಕೆ ಸಂಕಷ್ಟ – ಬಿಜೆಪಿಯ 37ರ ಪೈಕಿ 17 ಶಾಸಕರು ಸಭೆಗೆ ಗೈರು

    ಇಂಫಾಲ: ಸಂಘರ್ಷಪೀಡಿತ ಮಣಿಪುರದಲ್ಲಿ (Manipura) ಬಿರೇನ್ ಸಿಂಗ್ ನೇತೃತ್ವದ ಎನ್‌ಡಿಎ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ (Biren Singh) ಅವರ ವಿರುದ್ಧವೇ ಪಕ್ಷದೊಳಗೆ ಅಸಮಾಧಾನ ಬಹಿರಂಗವಾಗಿಯೇ ಸ್ಫೋಟಗೊಂಡಿದೆ.

    ಎನ್‌ಡಿಎಗೆ ನೀಡಿದ್ದ ಬೆಂಬಲವನ್ನು ಎನ್‌ಪಿಪಿ (NPP) ಹಿಂಪಡೆದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲು ಸಿಎಂ ಬಿರೇನ್‌ ಸಿಂಗ್‌ ಕರೆದಿದ್ದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ 27 ಮಂದಿ ಹಾಜರಾಗಿದ್ದರೆ 19 ಮಂದಿ ಗೈರಾಗಿದ್ದರು. ಈ ಪೈಕಿ ಬಿಜೆಪಿಯ 37 ಶಾಸಕರ ಪೈಕಿ 17 ಮಂದಿ ಗೈರಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    19ರಲ್ಲಿ 7 ಶಾಸಕರು ವೈದ್ಯಕೀಯ ಕಾರಣ ಹೇಳಿ ಗೈರು ಹಾಜರಾದರೆ ಉಳಿದ 12 ಜನ ಹೇಳದೇ ಕೇಳದೇ ಗೈರು ಹಾಜರಾಗಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ 7 ಮಂದಿ ಶಾಸಕರು ಮಣಿಪುರವನ್ನೇ ತೊರೆದಿದ್ದಾರೆ. ಸಭೆಗೆ ಗೈರಾಗಿದ್ದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಮಣಿಪುರ | ಉದ್ರಿಕ್ತರಿಗೆ ಹೆದರಿ ಬಂಕರ್‌ ನಿರ್ಮಿಸಿಕೊಂಡ ಸಚಿವ!

    ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಸರ್ಕಾರ ಉಳಿಯುತ್ತಾ? ಅಥವಾ ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಹೈಕಮಾಂಡ್‌ ನಾಯಕರು ಇಲ್ಲಿಯವರೆಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣೆಯಲ್ಲಿ ಬ್ಯುಸಿ ಇದ್ದ ಕಾರಣ ಮಣಿಪುರ ಸರ್ಕಾರದ ವಿಚಾರಕ್ಕೆ ತಲೆ ಹಾಕಿರಲಿಲ್ಲ. ಇಂದು ಚುನಾವಣೆ ಮುಗಿದ ಬಳಿಕ ಬಿಜೆಪಿ ಹೈಕಮಾಂಡ್‌ ಮಣಿಪುರ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

    ಸಿಎಂ ಬಿರೇನ್‌ ಸಿಂಗ್‌ ಕಾರ್ಯವೈಖರಿಗೆ ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ 10 ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಸಭೆಯಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.

    ಒಟ್ಟು 60 ಮಂದಿ ಶಾಸಕರ ಬಲವನ್ನು ಹೊಂದಿರುವ ಮಣಿಪುರ ವಿಧಾನಸಭೆಯಲ್ಲಿ ಎನ್‌ಡಿಎ ಶಾಸಕರ ಸಂಖ್ಯೆ 46 ಇದೆ. ಈ ಪೈಕಿ ಬಿಜೆಪಿ 37, ನಾಗಾ ಪೀಪಲ್ಸ್‌ ಫ್ರಂಟ್‌ 5, ಮೂವರು ಪಕ್ಷೇತರರು, ಜೆಡಿಯು 1 ಸ್ಥಾನವನ್ನು ಹೊಂದಿದೆ.

    14 ಸ್ಥಾನಗಳನ್ನು ವಿಪಕ್ಷಗಳು ಹೊಂದಿವೆ. ಎನ್‌ಪಿಪಿ 7, ಕಾಂಗ್ರೆಸ್‌ 5. ಕೆಪಿಎ 2 ಸ್ಥಾನವನ್ನು ಗಳಿಸಿದೆ. ಬಹುಮತಕ್ಕೆ 31 ಶಾಸಕರ ಸಂಖ್ಯೆ ಬೇಕಾಗಿರುವ ಕಾರಣ ಸದ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ.

     

  • ದೇವರೆಂದು ನಮ್ಮನ್ನು ನಾವೇ ಸ್ವಯಂ ಘೋಷಿಸಬಾರದು: ಮೋಹನ್‌ ಭಾಗವತ್‌

    ದೇವರೆಂದು ನಮ್ಮನ್ನು ನಾವೇ ಸ್ವಯಂ ಘೋಷಿಸಬಾರದು: ಮೋಹನ್‌ ಭಾಗವತ್‌

    ಪುಣೆ: ದೇವರೆಂದು ನಮ್ಮನ್ನು ನಾವೇ ಸ್ವಯಂಘೋಷಣೆ ಮಾಡಿಕೊಳ್ಳಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

    ಮಣಿಪುರದಲ್ಲಿ (Manipura) ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಮತ್ತು ಭಯ್ಯಾಜಿ ಎಂದು ಜನಪ್ರಿಯರಾಗಿದ್ದ ಶಂಕರ್ ದಿನಕರ್ ಕೇನ್ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ನಾವು ದೇವರಾಗುತ್ತೇವೋ ಇಲ್ಲವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ. ನಾವು ದೇವರಾಗಿದ್ದೇವೆ ಎಂದು ಸ್ವಯಂ ಘೋಷಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ: ಮೋದಿ

    ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಸಿಡಿಲು ಬಡಿದ ನಂತರ ಮೊದಲಿಗಿಂತ ಹೆಚ್ಚು ಕತ್ತಲೆಯಾಗುತ್ತದೆ. ಆದ್ದರಿಂದ ಕೆಲಸಗಾರರು ದೀಪಗಳಂತೆ ಉರಿಯಬೇಕು ಮತ್ತು ಅಗತ್ಯವಿದ್ದಾಗ ಮಾತ್ರ ಹೊಳೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ: ಮೋದಿ

    ಮಣಿಪುರದಲ್ಲಿ ಪರಿಸ್ಥಿತಿ ಕಷ್ಟಕರವಾಗಿದೆ. ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ವ್ಯಾಪಾರ ಅಥವಾ ಸಾಮಾಜಿಕ ಕೆಲಸಕ್ಕಾಗಿ ಅಲ್ಲಿಗೆ ಹೋದವರಿಗೆ ಪರಿಸ್ಥಿತಿ ಇನ್ನಷ್ಟು ಸವಾಲಿನದ್ದಾಗಿದೆ. ಇಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಂಘದ ಸ್ವಯಂಸೇವಕರು ದೃಢವಾಗಿ ನಿಂತು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋಹನ್‌ ಭಾಗವತ್‌ ಆರ್‌ಎಸ್‌ಎಸ್‌ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

     

  • Lok Sabha Elections 2024: ಮಣಿಪುರದ 11 ಬೂತ್‌ಗಳಲ್ಲಿ ಇಂದು ಮರು ಮತದಾನ

    Lok Sabha Elections 2024: ಮಣಿಪುರದ 11 ಬೂತ್‌ಗಳಲ್ಲಿ ಇಂದು ಮರು ಮತದಾನ

    ಇಂಫಾಲ: ಈಶಾನ್ಯ ರಾಜ್ಯದ ಮಣಿಪುರ (Manipura) ಸಂಸದೀಯ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಇಂದು (ಸೋಮವಾರ) ಮರು ಮತದಾನ ಆರಂಭವಾಗಿದೆ.

    ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ (Loksabha Elections 2024) ಮೊದಲ ಹಂತದ ಮತದಾನದ ವೇಳೆ ಕೆಲವು ಕಿಡಿಗೇಡಿಗಳು ಈ ಮತಗಟ್ಟೆಗಳಲ್ಲಿ ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು. ಅದರಂತೆ ಇಂದು ಮತದಾನ ನಡೆಯುತ್ತಿದೆ.

    ಯಾವುದೇ ಅವಘಡ ಸಂಭವಿಸದಂತೆ ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಸಂಬಂಧ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ಮರು ಮತದಾನ ನಡೆಯುತ್ತಿದ್ದು, ನಾವೆಲ್ಲ ಮತದಾನ ಮಾಡಲು ಬಂದಿದ್ದೇವೆ. ಇಂದು ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

    ಖುರೈ ವಿಧಾನಸಭಾ ಕ್ಷೇತ್ರದಲ್ಲಿ ಮೊಯಿರಂಗ್ಯಾಂಪು ಸಾಜೆಬ್ ಅಪ್ಪರ್ ಪ್ರೈಮರಿ ಶಾಲೆ ಮತ್ತು ಎಸ್. ಇಬೋಬಿ ಪ್ರಾಥಮಿಕ ಶಾಲೆ (ಪೂರ್ವ ಭಾಗ), ಕ್ಷೇತ್ರಗಾವೊದಲ್ಲಿ ನಾಲ್ಕು, ತೊಂಗ್ಜುನಲ್ಲಿ ಒಂದು, ಉರಿಪೋಕ್‌ನಲ್ಲಿ ಮೂರು ಮತ್ತು ಕೊಂತೌಜಮ್‌ ಮರುಮತದಾನ ಕೇಂದ್ರಗಳಾಗಿವೆ.

    ಸಂಘರ್ಷ ಪೀಡಿತ ಮಣಿಪುರದ ಕೆಲವು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿರುವ ಘಟನೆಗಳು ವರದಿಯಾಗಿದ್ದವು. ಈ ನಡುವೆಯೂ ಶುಕ್ರವಾರ ಸಂಜೆ 7 ಗಂಟೆಯವರೆಗೆ ಮಣಿಪುರದಲ್ಲಿ ಶೇ.69.18ರಷ್ಟು ಮತದಾನವಾಗಿತ್ತು.

  • ಮಣಿಪುರಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ

    ಮಣಿಪುರಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಮಣಿಪುರಕ್ಕೆ ತೆರಳಿದ್ದಾರೆ.

    ಹೆಚ್ ಎಎಲ್ ನಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿರುವ ಮುಖ್ಯಮಂತ್ರಿಗಳು ಇಂದು ಮಣಿಪುರದಲ್ಲಿ (Manipura) ನಡೆಯಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatre) ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭ

    ಇಂದಿನಿಂದ ಭಾರತ್ ನ್ಯಾಯ್ ಯಾತ್ರೆ ಎಂಬ ಹೆಸರಿನಲ್ಲಿ ಮಣಿಪುರದಿಂದ ಮಹಾರಾಷ್ಟ್ರದ ಕಡೆಗೆ ರಾಹುಲ್‌ ಗಾಂಧಿ (Rahul Gandhi) ಯಾತ್ರೆ ಮಾಡಲಿದ್ದಾರೆ. ಮಣಿಪುರದಿಂದ ಮುಂಬೈಗೆ 67 ದಿನಗಳ ಅವಧಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 20 ರವರೆಗೆ ಇಂಫಾಲ್‍ನಿಂದ ಮುಂಬೈಗೆ ಯಾತ್ರೆ ಪ್ರಯಾಣಿಸಲಿದೆ.

    ಭಾರತ್ ಜೋಡೋ ನ್ಯಾಯ್ ಯಾತ್ರೆಯು 66 ದಿನಗಳಲ್ಲಿ ಬಸ್ಸುಗಳು ಮತ್ತು ಕಾಲ್ನಡಿಗೆಯಲ್ಲಿ 6,713 ಕಿ.ಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ. ಈ ಪಯಣದುದ್ದಕ್ಕೂ 14 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

  • ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ – ಈ ಕಾಯ್ದೆಯ ವಿಶೇಷತೆ ಏನು?

    ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ – ಈ ಕಾಯ್ದೆಯ ವಿಶೇಷತೆ ಏನು?

    ಇಂಫಾಲ: ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ ಮಣಿಪುರದಲ್ಲಿ (Manipura) ಆಫ್ಸ್ಪಾ (ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಲಾಗಿದೆ.

    ಶಾಂತಿ ಸಾಪನೆಗೆ ನಿಯೋಜಿಸಲಾಗಿರುವ ಆಫ್ಸ್ಫಾ (AFSPA) ಅ.1ರಿಂದ ಜಾರಿಯಾಗುವಂತೆ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ಮೈತೆಯೇ (Meitei) ಸಮುದಾಯದ ಇಬ್ಬರು ವಿದ್ಯಾರ್ಥಿಗಳಿಬ್ಬರ ಮೃತದೇಹ ಫೋಟೋ ವೈರಲ್ ಆದ ಬಳಿಕ ರಾಜ್ಯ ಮತ್ತೆ ಉದ್ವಿಗ್ನಗೊಂಡಿದೆ.

    ಸೆ.26 ರಂದು ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.  ಇದನ್ನೂ ಓದಿ: ನನಗೆ ಈಗಲೂ ಸ್ವಂತ ಮನೆ ಇಲ್ಲ: ಪ್ರಧಾನಿ ಮೋದಿ

    ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದಾಗ ಜುಲೈ 6 ರಂದು ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಕುಕಿ (Kuki) ಸಮುದಾಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಮೈತೆಯೀ ಸಮುದಾಯ ಆರೋಪಿಸಿದೆ.

    ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ 1958 ಏನು ಹೇಳುತ್ತದೆ?
    ಕಾನೂನು ಬಾಹಿರ ವ್ಯಕ್ತಿಗಳ ಮೇಲೆ ಗುಂಡು ಹಾರಿಸಬಹುದು. ಅನುಮಾನಿತ ವ್ಯಕ್ತಿಗಳ ಮೇಲೆ ವಾರಂಟ್ ಇಲ್ಲದೇ ಬಂಧಿಸಬಹುದು. ಯಾವುದೇ ವಾಹನವನ್ನು ತಡೆಗಟ್ಟಿ ತಪಾಸಣೆ ಮಾಡಬಹುದು. ಯೋಧರು ಯಾವುದೇ ಕಾರಣಕ್ಕೂ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸುವ ಹಾಗೂ ವಿಚಾರಣೆ ನಡೆಸಲು ಅವಕಾಶವೇ ಇಲ್ಲ.

    ಕಾಯ್ದೆ ಯಾವಾಗ ಜಾರಿಯಾಯಿತು?
    ಸಶಸ್ತ್ರ ಪಡೆಗಳ ಕಾಯ್ದೆಯನ್ನು ಮೊದಲು ಭಾರತದಲ್ಲಿ ಜಾರಿಗೆ ತಂದವರು ಬ್ರಿಟಿಷರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ದೇಶದ ಸ್ವಾತಂತ್ರ‍್ಯ ಹೋರಾಟಗಾರರ ವಿರುದ್ಧ ಈ ಕಾಯ್ದೆಯನ್ನು ಬಳಸಿ ಅವರನ್ನು ನಿಯಂತ್ರಿಸಲಾಗುತ್ತಿತ್ತು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಮಿತ್ರ ಪಕ್ಷವನ್ನು ಕಳೆದುಕೊಂಡ NDA – ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌

    ಮಣಿಪುರದಲ್ಲಿ ಮಿತ್ರ ಪಕ್ಷವನ್ನು ಕಳೆದುಕೊಂಡ NDA – ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌

    ಇಂಫಾಲ: ಮೂರು ತಿಂಗಳಿನಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipura) ನಡೆಯುತ್ತಿರುವ ಹಿಂಸಾಚಾರದಿಂದಾಗಿ ಎನ್‌ಡಿಎ (NDA) ತನ್ನ ಮಿತ್ರ ಪಕ್ಷವನ್ನು ಕಳೆದುಕೊಂಡಿದೆ. ಸಿಎಂ ಎನ್ ಬಿರೇನ್ ಸಿಂಗ್ (N Biren Singh) ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕುಕಿ ಸಮುದಾಯದ ಇಬ್ಬರು ಶಾಸಕರು ಹಿಂದಕ್ಕೆ ಪಡೆದಿದ್ದಾರೆ.

    ಇಬ್ಬರು ಶಾಸಕರನ್ನು ಹೊಂದಿರುವ ಕುಕಿ ಪೀಪಲ್ಸ್ ಅಲಯನ್ಸ್ (Kuki People’s Alliance) ರಾಜ್ಯಪಾಲ ಅನುಸೂಯಾ ಉಯ್ಕೆ ಅವರಿಗೆ ಪತ್ರ ಬರೆದು ಬೆಂಬಲ ಹಿಂಪಡೆಯುವುದಾಗಿ ಘೋಷಿಸಿದೆ. ಇಬ್ಬರು ಶಾಸಕರು ಬೆಂಬಲ ಹಿಂದಕ್ಕೆ ಪಡೆದಿದ್ದರಿಂದ ಬಿರೇನ್ ಸಿಂಗ್ ಅವರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ.  ಇದನ್ನೂ ಓದಿ: ಟೊಮೆಟೋ ಬೆಲೆ ಭಾರೀ ಇಳಿಕೆ – ರೈತರಿಗೆ ಆತಂಕ ಶುರು

    60 ಮಂದಿ ಶಾಸಕ ಸ್ಥಾನವನ್ನು ಹೊಂದಿರುವ ಮಣಿಪುರ ವಿಧಾನಸಭೆಯಲ್ಲಿ ಪ್ರಸ್ತುತ 10 ಮಂದಿ ಕುಕಿ ಸಮುದಾಯದ ಶಾಸಕರಿದ್ದಾರೆ. ಈ ಪೈಕಿ 7 ಮಂದಿ ಬಿಜೆಪಿ, ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್, ಒಬ್ಬರು ಪಕ್ಷೇತರ ಶಾಸಕರಿದ್ದಾರೆ.

    ಒಟ್ಟು 32 ಬಿಜೆಪಿ ಶಾಸಕರು, 5 ಮಂದಿ ಎನ್‌ಪಿಎಫ್‌, 3 ಮಂದಿ ಪಕ್ಷೇತರ ಶಾಸಕರ ಬೆಂಬಲ ಬಿರೇನ್ ಸಿಂಗ್ ಸರ್ಕಾರಕ್ಕಿದೆ. 7 ಮಂದಿ ಎನ್‌ಪಿಪಿ, 5 ಕಾಂಗ್ರೆಸ್‌, 6 ಮಂದಿ ಜೆಡಿಯು ಶಾಸಕರಿದ್ದಾರೆ.

     

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರಕ್ಕೆ INDIA ಮೈತ್ರಿಕೂಟದ ನಿಯೋಗ ಭೇಟಿ

    ಮಣಿಪುರಕ್ಕೆ INDIA ಮೈತ್ರಿಕೂಟದ ನಿಯೋಗ ಭೇಟಿ

    ನವದೆಹಲಿ: ಸುಮಾರು 3 ತಿಂಗಳಿಂದ ಹಿಂಸಾಚಾರ ಪೀಡಿತವಾಗಿರುವ ಮಣಿಪುರಕ್ಕೆ (Manipura) ಐಎನ್‌ಡಿಐಎ (INDIA) ಮೈತ್ರಿಕೂಟದ 21 ಜನರ ನಿಯೋಗ 2 ತಂಡಗಳಾಗಿ 2 ದಿನಗಳ ಭೇಟಿ ಕೈಗೊಂಡಿದೆ.

    ಚುರಾಚಂದ್‍ಪುರ ಕುಕಿ ಜನಾಂಗದ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಜನರ ಜೊತೆ ಸಂವಾದ ನಡೆಸಿತು. ಬಳಿಕ ಮಾತನಾಡಿದ ನಿಯೋಗದ ಸದಸ್ಯರು,ಕೇಂದ್ರ ಸರ್ಕಾರ ಶೀಘ್ರವೇ ನಿಯೋಗ ರವಾನಿಸದೇ ಇರುವುದು ದುರಾದೃಷ್ಟ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಈವರೆಗೆ ನಿದ್ದೆ ಮಾಡುತ್ತಿತ್ತಾ ಎಂದು ಪ್ರಶ್ನಿಸಿದರು.

    ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 2 ದಿನ ಮಣಿಪುರದಲ್ಲಿ ಪರಿಶೀಲನೆ ಮಾಡಲಿರುವ ವಿಪಕ್ಷಗಳ ನಿಯೋಗ ಲೋಕಸಭೆಯಲ್ಲಿ ವರದಿ ಮಂಡಿಸಿ ಸರ್ಕಾರದ ವಿರುದ್ಧ ಮುಗಿಬೀಳಲಿವೆ.  ಇದನ್ನೂ ಓದಿ: ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಹಸ್ತಕ್ಷೇಪ: ಮಾಜಿ ಸೇನಾ ಮುಖ್ಯಸ್ಥ

    ಐಎನ್‌ಡಿಐಎ ನಿಯೋಗದ ಭೇಟಿ ತೋರಿಕೆ ಎಂದು ಬಿಜೆಪಿ ಟೀಕಿಸಿದೆ. ಮಣಿಪುರಕ್ಕೆ ಹೋಗುವ ನಿಮಗೆ ಪಶ್ಚಿಮ ಬಂಗಾಳಕ್ಕೆ ಹೋಗಲು ಸಮಯ ಇಲ್ಲವೇ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್‌ ವಾಗ್ದಾಳಿ ನಡೆಸಿದರು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?

    ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?

    ಚಂಡೀಗಢ: ಪಂಜಾಬ್‍ನಲ್ಲಿ ಆಮ್ ಆದ್ಮಿ (Aam Aadmi) ಪಕ್ಷ ಅಧಿಕಾರಕ್ಕೆ ಏರಲಿದೆ, ಕಾಂಗ್ರೆಸ್ (Congress) ಧೂಳೀಪಟವಾಗಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್‍ (Exit Poll) ಗಳು ಹೇಳಿವೆ. ಆದರೆ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿಲ್ಲ. 2017ರಲ್ಲಿಯೂ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು ಕೂಡ ಎಎಪಿ (AAP) ಬರುತ್ತೆ ಎಂದು. ಆದರೆ ಗೆದ್ದಿದ್ದು ಮಾತ್ರ ಕಾಂಗ್ರೆಸ್ ಆಗಿತ್ತು. ಹೀಗಾಗಿ ಈ ಬಾರಿಯೂ ಅದೇ ಮ್ಯಾಜಿಕ್ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.

    Exit Poll- ಪಂಜಾಬ್‍ನಲ್ಲಿ ಆಪ್ ಸರ್ಕಾರ 
    ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಆಪ್‍ಗೆ ಸ್ಪಷ್ಟ ಬಹುಮತ ಬರುತ್ತದೆ. ಸರ್ವೇ ಪ್ರಕಾರ ಆಪ್- 68, ಕಾಂಗ್ರೆಸ್ 28 ಸ್ಥಾನ ಸಿಗಲಿದ್ದು, ಅಕಾಲಿದಳ 19, ಬಿಜೆಪಿ (BJP)ಗೆ 4 ಸ್ಥಾನ ಸಾಧ್ಯತೆ ಇದೆ. ಕಾಂಗ್ರೆಸ್ ಒಳಜಗಳದಿಂದ ಅಧಿಕಾರ ನಷ್ಟವಾಗಬಹುದು. ಇಲ್ಲಿ ಬಿಜೆಪಿಗೆ ಕ್ಯಾಪ್ಟನ್ ಮೈತ್ರಿ ವರ್ಕೌಟ್ ಆಗಿಲ್ಲ. ಅತಂತ್ರವಾದಲ್ಲಿ ಅಕಾಲಿಗಳ ಜೊತೆ ಆಪ್ ಮೈತ್ರಿ ಸಾಧ್ಯತೆ ಇದೆ. ಇದನ್ನೂ ಓದಿ: ಗುರುವಾರ ಪಂಚರಾಜ್ಯ ಚುನಾವಣಾ ಫಲಿತಾಂಶ- ಯುಪಿಯಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ..?

    ಒಟ್ಟು ಸ್ಥಾನಗಳು 117, ಬಹುಮತಕ್ಕೆ 59
    ಇಂಡಿಯಾ ಟುಡೇ:
    ಆಪ್‌ 76-90, ಕಾಂಗ್ರೆಸ್‌ 19-31, ಅಕಾಲಿ ದಳ 7-11, ಬಿಜೆಪಿ + 1-4, ಇತರರು 01

    ರಿಪಬ್ಲಿಕ್‌:
    ಆಪ್‌ 62-70, ಕಾಂಗ್ರೆಸ್‌ 23-31, ಅಕಾಲಿ ದಳ 16-24, ಬಿಜೆಪಿ+ 1-3,ಇತರರು 1-3

    ಟೈಮ್ಸ್‌ ನೌ:
    ಆಪ್‌ 70, ಕಾಂಗ್ರೆಸ್‌ 22, ಅಕಾಲಿ ದಳ 19, ಬಿಜೆಪಿ 05, ಇತರರು 0-1

    ಟುಡೇಸ್ ಚಾಣಕ್ಯ
    ಆಪ್‌ 100, ಕಾಂಗ್ರೆಸ್‌ 10, ಅಕಾಲಿ ದಳ 06, ಬಿಜೆಪಿ 01, ಇತರರು 00

    ಜನ ಕೀ ಬಾತ್‌
    ಆಪ್‌ 72, ಕಾಂಗ್ರೆಸ್‌ 24, ಅಕಾಲಿ ದಳ 15, ಬಿಜೆಪಿ + 05, ಇತರರು 01

    2017ರ ಫಲಿತಾಂಶ:
    ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ  18, ಇತರರು 02

    ಉತ್ತರಾಖಂಡ್ ಮತ್ತು ಮಣಿಪುರದ ಕತೆ ಏನು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋದಾದ್ರೆ
    Exit Poll- ಬಿಜೆಪಿಗೆ ‘ಮಣಿ'(60)… ಅತಂತ್ರ ‘ಖಂಡ`!(70)
    ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಬಿಜೆಪಿ- 30, ಕಾಂಗ್ರೆಸ್- 13, ಇತರರಿಗೆ 17 ಸ್ಥಾನಗಳು ಬರಬಹುದು. ಅತಂತ್ರವಾದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂಭವವೂ ಇದೆ.

    ಒಟ್ಟು ಸ್ಥಾನಗಳು 70, ಬಹುಮತಕ್ಕೆ 36
    ಇಂಡಿಯಾ ಟುಡೇ
    ಬಿಜೆಪಿ + 41, ಕಾಂಗ್ರೆಸ್‌ 25, ಆಪ್ 0, ಬಿಎಸ್‌ಪಿ 3, ಇತರರು 4

    ರಿಪಬ್ಲಿಕ್‌
    ಬಿಜೆಪಿ+ 35-39, ಕಾಂಗ್ರೆಸ್‌ 28-24, ಆಪ್‌ 0-3, ಬಿಎಸ್‌ಪಿ 0, ಇತರರು 0

    ಟೈಮ್ಸ್‌ ನೌ
    ಬಿಜೆಪಿ+ 37, ಕಾಂಗ್ರೆಸ್‌ 31, ಆಪ್‌ 01, ಬಿಎಸ್‌ಪಿ, ಇತರರು 0

    ಟುಡೇಸ್‌ ಚಾಣಕ್ಯ
    ಬಿಜೆಪಿ 43, ಕಾಂಗ್ರೆಸ್‌ 24, ಇತರರು 3

    ಜನ ಕೀ ಬಾತ್‌
    ಬಿಜೆಪಿ 32 -41, ಕಾಂಗ್ರೆಸ್‌ 27-35, ಆಪ್‌ 0-1, ಇತರರು 0

    ಒಟ್ಟು ಸ್ಥಾನ 70 ಬಹುಮತಕ್ಕೆ 36
    2017ರ ಫಲಿತಾಂಶ ಬಿಜೆಪಿ 57, ಕಾಂಗ್ರೆಸ್ 11, ಇತರರು 2

    ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಉತ್ತರಾಖಂಡ (Uttarakhand) ಅತಂತ್ರವಾಗಲಿದೆ. ಸರ್ವೇ ಪ್ರಕಾರ ಬಿಜೆಪಿ 35, ಕಾಂಗ್ರೆಸ್ 32, ಎಎಪಿ 1, ಇತರೆ 2 ಸ್ಥಾನಗಳು ಬರಲಿದೆ. ಸಮೀಕ್ಷೆ ನಿಜವಾದ್ರೆ ಎರಡೂ ಪಕ್ಷಗಳಿಗೂ ಸರ್ಕಾರ ರಚನೆ ಸಮಾನ ಅವಕಾಶ ಇರಲಿದೆ. ಇಲ್ಲಿಯೂ ಕುದುರೆ ವ್ಯಾಪಾರ ಸಾಧ್ಯತೆ, ಕಾಂಗ್ರೆಸ್-ಬಿಜೆಪಿ ರಣತಂತ್ರ ಹೂಡುವ ಸಾಧ್ಯತೆಗಳಿವೆ.

    ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
    ಇಂಡಿಯಾ ಟುಡೇ
    ಬಿಜೆಪಿ 33-43, ಕಾಂಗ್ರೆಸ್‌ 4-8, ಎನ್‌ಪಿಎಫ್‌ 0, ಎನ್‌ಪಿಪಿ 4-8, ಇತರರು 6-15

    ರಿಪಬ್ಲಿಕ್‌
    ಬಿಜೆಪಿ 27-31, ಕಾಂಗ್ರೆಸ್‌ 11-17, ಎನ್‌ಪಿಎಫ್‌ 6-10, ಎನ್‌ಪಿಪಿ 2-6, ಇತರರು 3-7

    ಟೈಮ್ಸ್‌ ನೌ
    ಬಿಜೆಪಿ 32-38, ಕಾಂಗ್ರೆಸ್‌ 12-17, ಎನ್‌ಪಿಎಫ್‌ 3-5, ಎನ್‌ಪಿಪಿ 2-5, ಇತರರು 0

    ಜನಕೀ ಬಾತ್‌
    ಬಿಜೆಪಿ 23-28, ಕಾಂಗ್ರೆಸ್‌ 14-10, ಎನ್‌ಪಿಎಫ್‌ 8-5, ಎನ್‌ಪಿಪಿ 7-8, ಇತರರು 0

    2017ರ ಫಲಿತಾಂಶ
    ಬಿಜೆಪಿ 21, ಕಾಂಗ್ರೆಸ್ 28, ಇತರರು 11

  • ಬಿಜೆಪಿ ಸರ್ಕಾರದಿಂದ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಅಡಿಪಾಯ: ನರೇಂದ್ರ ಮೋದಿ

    ಬಿಜೆಪಿ ಸರ್ಕಾರದಿಂದ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಅಡಿಪಾಯ: ನರೇಂದ್ರ ಮೋದಿ

    ಇಂಫಾಲ್: ಮಣಿಪುರದಲ್ಲಿ ಮುಂದಿನ 25 ವರ್ಷಗಳವರೆಗಿನ ಅಭಿವೃದ್ಧಿಗೆ ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರವು ಅಡಿಪಾಯ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

    ಮಣಿಪುರದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಮಣಿಪುರದ ಸರ್ವಾಂಗೀಣ ಅಭಿವೃದ್ಧಿಗೂ ಶ್ರಮಿಸಿದೆ. ಜೊತೆಗೆ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇವೆ. ಬಿಜೆಪಿಯ ಉತ್ತಮ ಆಡಳಿತ ಹಾಗೂ ಸದುದ್ದೇಶವನ್ನು ನೀವೂ ನೋಡಿದ್ದೀರಿ. ಇದರಿಂದಾಗಿ ಪುನಃ ಮಣಿಪುರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಮಣಿಪುರ ರಚನೆಯಾಗಿ ಕಳೆದ ತಿಂಗಳಿಗೆ 50 ವರ್ಷಗಳು ಪೂರ್ಣಗೊಂಡಿದೆ. ಈ ವೇಳೆ ರಾಜ್ಯದಲ್ಲಿ ಹಲವಾರು ಸರ್ಕಾರಗಳು ಬಂದು ಹೋಗಿವೆ. ಆದರೆ ದಶಕಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‍ನಿಂದ ರಾಜ್ಯವೂ ಅಸಮಾನತೆಗೆ ಕಾರಣವಾಗಿತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಅಸಾಧ್ಯವಾದುದ್ದನ್ನು ಸಾಧ್ಯ ಮಾಡಿ ತೋರಿಸಿದೆ. ಮಣಿಪುರದ ಕೆಲವು ಪ್ರದೇಶಗಳಲ್ಲಿ ಇದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಮುಂದೆ ಬರುತ್ತಿದ್ದಾರೆ ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂಸಾಚಾರ, ಶಾಲಾ- ಕಾಲೇಜುಗಳಿಗೆ ರಜೆ: ಸೋಮವಾರ ನಡೆದಿದ್ದು ಏನು?

    ಮಣಿಪುರ ವಿಧಾನಸಭಾ ಚುನಾವಣೆಯ ಮತದಾನವು ಮಾ. 5ರಂದು ನಡೆದರೆ ಮಾ.10ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರಬಲ ಪೈಪೋಟಿಯಲ್ಲಿದೆ.

  • ತಮಿಳು, ಬಂಗಾಳಿಗಳ ಮನಗೆಲ್ಲಲು `ಭಾಷಾ’ ಬಾಣ ಪ್ರಯೋಗಿಸಲಿದ್ದಾರೆ ಅಮಿತ್ ಶಾ!

    ತಮಿಳು, ಬಂಗಾಳಿಗಳ ಮನಗೆಲ್ಲಲು `ಭಾಷಾ’ ಬಾಣ ಪ್ರಯೋಗಿಸಲಿದ್ದಾರೆ ಅಮಿತ್ ಶಾ!

    ನವದೆಹಲಿ: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಣತತಂತ್ರ ಹೂಡಿದ್ದಾರೆ.

    ಹೌದು. ಈ ಎರಡು ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲೆಂದೇ ಅಮಿತ್ ಶಾ ತಮಿಳು ಹಾಗೂ ಬಂಗಾಳಿ ಭಾಷೆಗಳನ್ನು ಕಲಿಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲ ಕಡಿಮೆ ಇದ್ದು, ಪ್ರತಿ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಜಯಗಳಿಸಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಎಡಪಕ್ಷಗಳು ಜಯಗಳಿಸುತ್ತಿವೆ. ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ಈಗ ಬಿಜೆಪಿಯ ಚುನಾವಣಾ ಚಾಣಕ್ಯ ಸಿದ್ಧತೆ ನಡೆಸುತ್ತಿದ್ದಾರೆ. ತವರು ರಾಜ್ಯವನ್ನು ಮತ್ತೊಮ್ಮೆ ಗೆಲ್ಲುವ ರಣತಂತ್ರದ ನಡುವೆಯೂ `ಭಾಷಾ’ ಅಧ್ಯಯನದಲ್ಲಿ ಅಮಿತ್ ಶಾ ಬ್ಯುಸಿಯಾಗಿರುವುದು ಇದೀಗ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

    ಈ ಎರಡು ರಾಜ್ಯಗಳಲ್ಲಿ ಮಾತೃಭಾಷೆಯಲ್ಲೇ ಜನರೊಂದಿಗೆ ವ್ಯವಹರಿಸಿದ್ರೆ ಚುನಾವಣೆಗೆ ಲಾಭ ಎನ್ನುವ ನಿಟ್ಟಿನಲ್ಲಿ ಶಾ ಈ ತೀರ್ಮಾನಕ್ಕೆ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಶಾ ಅಸ್ಸಾಂ, ಮಣಿಪುರ ಭಾಷೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರಂತೆ. ಒಟ್ಟಿನಲ್ಲಿ ಗುಜರಾತ್ ಚುನಾವಣೆಯ ಬ್ಯುಸಿ ನಡುವೆಯೂ ದಕ್ಷಿಣದತ್ತ ಅಮಿತ್ ಶಾ ಕಣ್ಣು ಹಾಕಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

    ಈಗಾಗಲೇ ಶಾ ಅವರಿಗೆ ತಮಿಳು, ಬೆಂಗಾಳಿ, ಅಸ್ಸಾಂ ಹಾಗೂ ಮಣಿಪುರಿ ಭಾಷೆಗಳನ್ನು ಕಲಿಸಲು ವೃತ್ತಿಪರ ಶಿಕ್ಷಕರು ಆಯ್ಕೆಯಾಗಿದ್ದು, ಶಾ ತಮ್ಮ ಭಾಷಾ ಕಲಿಕೆಯನ್ನು ಮುಂದುವರಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರ ತರಗತಿಗಳು ನಡೆಯುತ್ತಿವೆ. ಸದ್ಯಕ್ಕೆ ಶಾ ಎರಡೂ ಭಾಷೆಗಳಲ್ಲಿ ಮಾತನಾಡುವಷ್ಟು ಕಲಿತಿದ್ದಾರೆ. ಆದರೆ ನಿರರ್ಗಳವಾಗಿ ಮಾತನಾಡಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಒಟ್ಟಿನಲ್ಲಿ ತಮಿಳುನಾಡು ಹಾಗೂ ಬಂಗಾಳ ರಾಜ್ಯದಲ್ಲೂ ಗೆದ್ದು, ಬಿಜೆಪಿ ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಅಮಿತ್ ಶಾ ಈ ಉಪಾಯ ಹೂಡಿದ್ದಾರೆ. ಆಯಾ ರಾಜ್ಯದ ಭಾಷೆಯಲ್ಲೇ ಜನರೊಂದಿಗೆ ಮಾತನಾಡಿದ್ರೆ ಮಾತ್ರ ಜನ ಇನ್ನೂ ತಮ್ಮೊಂದಿಗೆ ಹತ್ತಿರವಾಗುತ್ತಾರೆ. ಹೀಗೆ ಮಾಡಿದ್ದಲ್ಲಿ ತಮ್ಮ ಪಕ್ಷಕ್ಕೆ ಜನ ಮತ ನೀಡಬಹುದೆಂಬ ಉದ್ದೇಶ ಅವರದ್ದಾಗಿದೆ.

    https://www.youtube.com/watch?v=wVLDqd8Tgaw&feature=youtu.be&a=