Tag: Manipur violence

  • ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ

    ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ

    ನವದೆಹಲಿ: ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪ್ರಧಾನಿ ಮೋದಿ (Narendra Modi) ಭಾಷಣದ ವೈಖರಿ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಂಸಾಚಾರ, ಅತ್ಯಾಚಾರ, ಹತ್ಯೆಗಳಿಂದ ಮಣಿಪುರ (Manipur violence) ತತ್ತರಿಸಿ ಹೋಗಿದೆ. ಇತ್ತ ಪ್ರಧಾನಿ ಸಂಸತ್‍ನಲ್ಲಿ ನಗುತ್ತಾ, ಜೋಕ್‍ಗಳನ್ನು ಮಾಡಿಕೊಂಡಿದ್ದಾರೆ. ವಿಪಕ್ಷಗಳನ್ನು ಟೀಕಿಸುತ್ತಾ ನಿನಾದಗಳನ್ನು ಹೊರಡಿಸಿದ್ದಾರೆ. ಈ ಹಿಂದೆ ಎಷ್ಟೋ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಈ ಮಟ್ಟಕ್ಕೆ ಇಳಿದು ಮಾತಾಡಿದ ಪ್ರಧಾನಿಯನ್ನು ನಾನು ನೋಡಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

    ಪ್ರಧಾನಿಗಳು ಮಾತಾಡಿದ ರೀತಿ ನೋವು ತಂದಿದೆ. ಪ್ರಧಾನಿ 2 ಗಂಟೆ 13 ನಿಮಿಷಗಳ ಭಾಷಣ ಮಾಡಿದ್ದಾರೆ. ಆದರೆ ಅದರಲ್ಲಿ ಮಣಿಪುರದ ಬಗ್ಗೆ ಪ್ರಸ್ತಾಪ ಇದ್ದಿದ್ದು ಕೇವಲ 2 ನಿಮಿಷ ಮಾತ್ರ. ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರಧಾನಿ ಮರೆತಂತಿದೆ ಎಂದು ಕಿಡಿಕಾರಿದ್ದಾರೆ.

    ಪ್ರಧಾನಿ ಹುದ್ದೆಗೇರಿದ ವ್ಯಕ್ತಿ ದೇಶದ ಪ್ರಜೆಗಳಿಗೆಲ್ಲ ಪ್ರತಿನಿಧಿಯಾಗಿ ಇರಬೇಕು. ಅವರು ಓರ್ವ ರಾಜಕೀಯ ನಾಯಕನಾಗಿ ಮಾತನಾಡಬಾರದು. ಇಲ್ಲಿ ಸಮಸ್ಯೆ ಕಾಂಗ್ರೆಸ್, ಬಿಜೆಪಿ ಎನ್ನುವುದಲ್ಲ. 2024ಕ್ಕೆ ಮೋದಿ ಮತ್ತೆ ಪ್ರಧಾನಿ ಆಗ್ತಾರಾ ಇಲ್ವಾ ಎನ್ನುವ ವಿಚಾರ ಕೂಡ ಅಲ್ಲ. ಮಣಿಪುರದಲ್ಲಿ ಏನು ನಡೆಯುತ್ತಿದೆ. ಅದನ್ನು ಏಕೆ ತಡೆಯಲಾಗುತ್ತಿಲ್ಲ. ಎನ್ನುವುದು ಪ್ರಧಾನ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಲು ಪ್ರಧಾನಿ ಬಳಿ ಸಾಕಷ್ಟು ಅವಕಾಶಗಳಿವೆ. ಆದರೆ ಅವರೇಕೆ ಅವುಗಳನ್ನು ಬಳಸಿಲ್ಲ? ಸೇನೆಯನ್ನು ಕಳಿಸಿ ಎರಡರಿಂದ ಮೂರು ದಿನಗಳಲ್ಲಿ ಶಾಂತಿ ಸ್ಥಾಪಿಸಬಹುದು. ಆದರೆ ಅದನ್ನೇಕೆ ಮಾಡುತ್ತಿಲ್ಲ? ಅವರಿಗೆ ಮಣಿಪುರ ಉರಿಯುತ್ತಲೇ ಇರಬೇಕು ಎಂಬ ಬಯಕೆ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಪ್ರಧಾನಿ ಮೋದಿ ಒಮ್ಮೆಯಾದರೂ ಮಣಿಪುರಕ್ಕೆ ಹೋಗಿ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು, ತಮ್ಮ ಭಾಷಣದ ಕೆಲವನ್ನು ಕಡತದಿಂದ ತೆಗೆದ ಬಗ್ಗೆಯೂ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತ ಮಾತೆ ಎಂಬ ಪದವನ್ನು ಕಡತದಿಂದ ತೆಗೆದಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಹುಲ್ ಗಾಂಧಿ ಆರೋಪಗಳಿಗೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದು, ಈಶಾನ್ಯ ರಾಜ್ಯಗಳ ಬಗ್ಗೆ ಮೋದಿ ಒಂದು ಗಂಟೆಗೂ ಹೆಚ್ಚು ಕಾಲ ಮಾತಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಿ.ಕೆ. ಹರಿಪ್ರಸಾದ್‍ರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರಿಂದಲೇ ಸಂಚು: ಪ್ರಣವಾನಂದ ಸ್ವಾಮೀಜಿ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಶೀಘ್ರದಲ್ಲೇ ಶಾಂತಿಯ ಬೆಳಕನ್ನು ಕಾಣಲಿದೆ: ಮೋದಿ ಭರವಸೆ

    ಮಣಿಪುರ ಶೀಘ್ರದಲ್ಲೇ ಶಾಂತಿಯ ಬೆಳಕನ್ನು ಕಾಣಲಿದೆ: ಮೋದಿ ಭರವಸೆ

    ನವದೆಹಲಿ: ಮಣಿಪುರ (Manipur) ಶೀಘ್ರದಲ್ಲೇ ಮತ್ತೊಮ್ಮೆ ಶಾಂತಿಯ ಬೆಳಕನ್ನು ಕಾಣಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಭರವಸೆ ನೀಡಿದ್ದಾರೆ.

    ಲೋಕಸಭೆಯಲ್ಲಿ (Lok Sabha) ಗುರುವಾರ ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಭಾಷಣ ಮಾಡುವಾಗ, ಸಂಘರ್ಷ ಪೀಡಿತ ಮಣಿಪುರದ ಜನತೆಗೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ನೀಡಿದ್ದಾರೆ. ದೇಶ ಮತ್ತು ಸಂಸತ್ತು ನಿಮ್ಮೊಂದಿಗಿದೆ ಎಂದು ಮಣಿಪುರದ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಹೇಳಲು ಬಯಸುತ್ತೇನೆ. ಮಣಿಪುರವನ್ನು ಅಭಿವೃದ್ಧಿಪಡಿಸಲು ನಾವು ಕೆಲಸ ಮಾಡುತ್ತೇವೆ ಎಂದು ನಾನು ಮಣಿಪುರದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಭಾಷಣದ ಮಧ್ಯೆ ಸಭಾತ್ಯಾಗ ಮಾಡಿದ ವಿಪಕ್ಷಗಳ ಸಂಸದರು

    ಮಣಿಪುರದಲ್ಲಿ ಹಿಂಸೆ ಶುರುವಾಗಿದೆ. ಬಹಳಷ್ಟು ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ. ಮಾತುಕತೆ ನಡೆಯುತ್ತಿದೆ, ಶಾಂತಿ ಮರುಕಳಿಸಲಿದೆ. ಮಣಿಪುರ ಜನರಲ್ಲೂ ಮನವಿ ಮಾಡುತ್ತೇನೆ. ದೇಶ ನಿಮ್ಮ ಜೊತೆಗೆ ಇದೆ. ಸದನ ನಿಮ್ಮ ಜೊತೆಗಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಕೊಳ್ಳೋಣ ಎಂದು ತಿಳಿಸಿದ್ದಾರೆ.

    ಮಣಿಪುರ ಸಮಸ್ಯೆಯ ಜನಕ ಕಾಂಗ್ರೆಸ್. ಕಾಂಗ್ರೆಸ್ ರಾಜಕಾರಣ ಈ ಸಮಸ್ಯೆಗೆ ಕಾರಣ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರ ಇಚ್ಛೆಯಂತೆ ಆಡಳಿತ ನಡೆಯುತ್ತಿತ್ತು. ಫೈಲ್‌ಗಳ ಮೇಲೆ ಗಾಂಧಿ ಫೋಟೋ ಹಚ್ಚಲು ಬಿಡದ ಸಂದರ್ಭದಲ್ಲಿ ಅಧಿಕಾರ ಯಾರು ಮಾಡುತ್ತಿದ್ದರು? ರಾಷ್ಟ್ರಗೀತೆ ಹಾಡಲು ಬಿಡದ ನಿರ್ಣಯ ಮಾಡಿದ ವೇಳೆ ಸರ್ಕಾರ ಕಾಂಗ್ರೆಸ್‌ನದ್ದಿತ್ತು. ಮಂದಿರದ ಗಂಟೆ ಸಂಜೆ ಐದು ಗಂಟೆಗೆ ಬಂದ್ ಆಗ್ತಿತ್ತು. ಆಗ ಅಧಿಕಾರ ಯಾರದಿತ್ತು? ಇಂಫಾಲ್‌ನ ಇಸ್ಕಾನ್ ಮೇಲೆ ಬಾಂಬ್ ದಾಳಿಯಾದಾಗ ಅಧಿಕಾರ ಯಾರದಿತ್ತು? ಐಎಎಸ್, ಐಪಿಎಸ್ ಅಧಿಕಾರಿಗಳ ಸಂಬಳದ ಒಂದು ಭಾಗ ಭಯೋತ್ಪಾದಕರಿಗೆ ನೀಡಬೇಕಿತ್ತು. ಆಗ ಸರ್ಕಾರ ಯಾರದಿತ್ತು? ಈ ಎಲ್ಲ ಅವಧಿಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ

    ಮಣಿಪುರ ಸರ್ಕಾರ ಕಳೆದ ಆರು ವರ್ಷದಿಂದ ಸಮಸ್ಯೆ ಇತ್ಯರ್ಥ ಪಡಿಸುವ ಪ್ರಯತ್ನ ಮಾಡುತ್ತಿದೆ. ಶಾಂತಿ ಸ್ಥಾಪನೆಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ. ರಾಜಕಾರಣ ದೂರವಿದ್ದಷ್ಟು ಅಲ್ಲಿ ಶಾಂತಿ‌ ನೆಲಸಲಿದೆ. ಈಶಾನ್ಯ ಭಾರತ ವಿಶ್ವದ ಪ್ರಮುಖ ಕೇಂದ್ರ ಪ್ರದೇಶವಾಗಲಿದೆ. ಇದಕ್ಕಾಗಿ ನಾನು ಅಭಿವೃದ್ಧಿ ಮಾಡುತ್ತಿದ್ದೇನೆ. ನಾನು ಬೋರ್ಡ್‌ನ ಹೆಸರಿಗಾಗಿ ಅಭಿವೃದ್ಧಿ ಮಾಡುತ್ತಿಲ್ಲ. ನಮ್ಮ ಸರ್ಕಾರ ಈಶಾನ್ಯ ಭಾರತದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಮಣಿಪುರಕ್ಕಿಂತ ದೊಡ್ಡ ಸಮಸ್ಯೆಗಳು ದೇಶದಲ್ಲಿ ಬಂದಿವೆ. ಅವುಗಳನ್ನು ಒಂದಾಗಿ ಸರಿಪಡಿಸುವ ಕೆಲಸ ಮಾಡಿ. ರಾಜಕಾರಣಕ್ಕಾಗಿ ಮಣಿಪುರದ ಭೂಮಿಯನ್ನು ಬಳಸಬೇಡಿ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಮತ್ತೊಂದು ಭಯಾನಕ ಗ್ಯಾಂಗ್ ರೇಪ್ – ಕರಾಳ ದಿನದ ಕಹಿ ಅನುಭವ ಬಿಚ್ಚಿಟ್ಟ ಸಂತ್ರಸ್ತೆ

    ಮಣಿಪುರದಲ್ಲಿ ಮತ್ತೊಂದು ಭಯಾನಕ ಗ್ಯಾಂಗ್ ರೇಪ್ – ಕರಾಳ ದಿನದ ಕಹಿ ಅನುಭವ ಬಿಚ್ಚಿಟ್ಟ ಸಂತ್ರಸ್ತೆ

    ಇಂಫಾಲ್: ಅಂದು ನೆರೆಹೊರೆಯ ಮನೆಗಳಿಗೆಲ್ಲಾ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು, ನನ್ನ ಮನೆಗೂ ಬೆಂಕಿ ಬಿದ್ದಿತ್ತು. ಇಬ್ಬರು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು, ಸೊಸೆ, ನಾದಿನಿಯನ್ನ ಕರೆದುಕೊಂಡು ಬೆಂಕಿಬಿದ್ದ ಮನೆಯಿಂದ ತಪ್ಪಿಸಿಕೊಂಡು ಓಡುತ್ತಿದೆ. ವೇಗವಾಗಿ ಓಡುತ್ತಿದ್ದರಿಂದ ಕಾಲು ತಡವರಿಸಿ ಎಡವಿ ಬಿದ್ದೆ. ಅಷ್ಟರಲ್ಲಿ ಯಮಸ್ವರೂಪಿಗಳಂತೆ ಬಂದ ದುಷ್ಕರ್ಮಿಗಳು ನನ್ನನ್ನ ಹಿಡಿದು ಎಳೆದಾಡಿ, ಮನಸ್ಸೋ ಇಚ್ಚೆ ಎಳೆದಾಡಿದ್ರು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರು. ಇದು ಮಣಿಪುರದ ಸಂಘರ್ಷದಲ್ಲಿ (Manipur Violence) ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಕಹಿ ಅನುಭವವನ್ನು ಬಿಚ್ಚಿಟ್ಟ ಪರಿ.

    ಮಣಿಪುರದಲ್ಲಿ (Manipur) ಜನಾಂಗೀಯ ಘರ್ಷಣೆ ನಡೆಯುತ್ತಿದ್ದು ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಮಹಿಳೆಯರು ಆಘಾತಕಾರಿ ಘಟನೆಗಳಲ್ಲಿ ತಾವು ಅನುಭವಿಸಿದ ಕಹಿ ಸತ್ಯಗಳನ್ನ ಬಿಚ್ಚಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಭಯಾಕನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಹಾಗೂ ಅಧಿಕಾರಿಗಳು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನೊಂದ ಜೀವಗಳು ಕಷ್ಟ ಹೇಳಿಕೊಳ್ಳಲು ಮುಂದೆ ಬರುತ್ತಿವೆ.

    ಮಣಿಪುರದಲ್ಲಿ ಸಂಘರ್ಷ ಭುಗಿಲೇಳುತ್ತಿದ್ದಂತೆ ಹಲವು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು. ಇಂತಹ ಸಂದರ್ಭದಲ್ಲಿ ಸುಟ್ಟು ಹೋದ ಮನೆಯಿಂದ 37ರ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ಓಡಿ ಹೋಗುತ್ತಿದ್ದ ವೇಳೆ ಪುರುಷರಿಂದ ಗುಂಪಿಗೆ ಸಿಕ್ಕಿಬಿದ್ದು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ CJI ಹೊರಗೆ – ರಾಜ್ಯಸಭೆಯಲ್ಲಿ ಮಸೂದೆ ಮಂಡನೆ

    ನನ್ನ, ನನ್ನ ಕುಟುಂಬದ ಘನತೆ ಗೌರವ ಹಾಳಾಗುತ್ತದೆ, ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಘಟನೆಯನ್ನು ಬಹಿರಂಗಪಡಿಸಿರಲಿಲ್ಲ. ಸಾಮಾಜಿಕ ಕಳಂಕದಿಂದ ತಪ್ಪಿಸಿಕೊಳ್ಳೋದಕ್ಕಾಗಿ ಅತ್ಯಾಚಾರ ಆಗಿದ್ದರೂ ವಿಷಯವನ್ನ ಮುಚ್ಚಿಟ್ಟಿದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಆದ್ರೆ ಕುಟುಂಬಸ್ಥರು ಧೈರ್ಯತುಂಬಿದ್ದರಿAದ ದೂರು ನೀಡುತ್ತಿದ್ದೇನೆ ಎಂದು ಬಿಷ್ಣುಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಮಹಿಳೆ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಸದ್ಯ ಸಂತ್ರಸ್ತ ಕುಟುಂಬಸ್ಥರು ಪರಿಹಾರ ಶಿಬಿರದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್‌ ಪಕ್ಕಾ!

    ಆ ಕರಳ ದಿನದಲ್ಲಿ ನಡೆದಿದ್ದೇನು?
    ಮೇ 3 ರಂದು ಸಂಜೆ 6:30ರ ವೇಳೆ ದುಷ್ಕರ್ಮಿಗಳ ಗುಂಪೊಂದು ಆಕೆಯ ಮನೆ ಹಾಗೂ ನೆರೆಹೊರೆಯ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾದ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಳು. ವೇಗವಾಗಿ ಓಡುತ್ತಿದ್ದ ವೇಳೆ ರಸ್ತೆಯಲ್ಲಿ ಎಡವಿ ಬಿದ್ದಿದ್ದಾಳೆ. ಅಷ್ಟರಲ್ಲಿ ಸೊಸೆ ಇಬ್ಬರು ಗಂಡುಮಕ್ಕಳನ್ನು ಕರೆದುಕೊಂಡು ಓಡಿ ಹೋಗಿದ್ದಾಳೆ. ಆದ್ರೆ ಎಡವಿ ಬಿದ್ದ ಮಹಿಳೆ ಚೇತರಿಸಿಕೊಂಡು ಎದ್ದೇಳುತ್ತಿದ್ದಂತೆ ಐದಾರು ದುಷ್ಕರ್ಮಿಗಳು ಆಕೆಯನ್ನ ಹಿಡಿದು ಎಳೆದಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ, ಆಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶೂನ್ಯ ಎಫ್‌ಐಆರ್‌ನಲ್ಲಿ ಹೇಳಿಕೆ ದಾಖಲಿಸಿದ್ದಾಳೆ.

    ಶೂನ್ಯ ಎಫ್‌ಐಆರ್ ಅನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ಬೇಕಾದರೂ ದಾಖಲಿಸಬಹುದು. ಪ್ರಕರಣ ದಾಖಲಾದ ಪೊಲೀಸ್ ಠಾಣೆಯು ಎಫ್‌ಐಆರ್ ಅನ್ನು ಸರಿಯಾದ ನ್ಯಾಯವ್ಯಾಪ್ತಿಗೆ ಕಳುಹಿಸಬೇಕು, ನಂತರ ಅದನ್ನು ತನಿಖೆ ಮಾಡಲಾಗುತ್ತದೆ ಎಂದು ಚುರಚಂದಪುರದ ಪೊಲೀಸರು ತಿಳಿಸಿದ್ದಾರೆ.

    ಇದುವರೆಗೆ ಮಣಿಪುರದಲ್ಲಿ ಸಾವಿರಾರು ಎಫ್‌ಐಆರ್‌ಗಳು ದಾಖಲಾಗಿದೆ. ಅದರಲ್ಲಿ ಒಂದೇ ಪ್ರಕರಣದ ಮೇಲೆ ಅನೇಕ ಝೀರೋ ಎಫ್‌ಐಆರ್‌ಗಳು ದಾಖಲಾಗಿವೆ. ಬೆಂಕಿ ಹಚ್ಚಿ ದಾಳಿ ಮಾಡಿರುವ ಸಂಬಂಧ 4,454 ಕೇಸ್, 4,148 ಲೂಟಿ ಕೇಸ್, ಮನೆ ಆಸ್ತಿ ನಾಶಕ್ಕೆ ಸಂಬಂಧಿಸಿದಂತೆ 4,694 ಕೇಸ್ ಹಾಗೂ ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ 584 ಕೇಸ್‌ಗಳು ದಾಖಲಾಗಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಸಂಘರ್ಷ – ಪೊಲೀಸ್ ಅಧಿಕಾರಿಯನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿದ ಕಿಡಿಗೇಡಿಗಳು

    ಮಣಿಪುರ ಸಂಘರ್ಷ – ಪೊಲೀಸ್ ಅಧಿಕಾರಿಯನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿದ ಕಿಡಿಗೇಡಿಗಳು

    ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ (Manipur Violence) ಕಳೆದ 3 ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಲೇ ಇದ್ದು, ಗುರುವಾರ ಕಿಡಿಗೇಡಿಗಳು ಇಂಫಾಲದಲ್ಲಿ (Imphal) ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿರುವ ಘಟನೆ ನಡೆದಿದೆ.

    ಗುರುವಾರ ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡ ಗುಂಪು ಬಿಷ್ಣುಪುರ್ ಜಿಲ್ಲೆಯ ಮಣಿಪುರ ಸಶಸ್ತ್ರ ಪೊಲೀಸ್ ಎರಡನೇ ಬೆಟಾಲಿಯನ್‌ನ ಕೀರೆನ್‌ಫಾಬಿ ಪೊಲೀಸ್ ಔಟ್‌ಪೋಸ್ಟ್ ಹಾಗೂ ತಂಗಲವಾಯ್ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜನಸಮೂಹ ಹೀಂಗಾಂಗ್ ಹಾಗೂ ಸಿಂಗ್ಜಮೇಯಿ ಪೊಲೀಸ್ ಠಾಣೆಗಳಿಂದಲೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಭದ್ರತಾಪಡೆಗಳು ಅವರ ದಾಳಿಯನ್ನು ವಿಫಲಗೊಳಿಸಿದೆ. ಕೌಟ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    ಕಳೆದ 24 ಗಂಟೆಗಳಲ್ಲಿ ರಾಜ್ಯದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ವಿವಿಧ ಸ್ಥಳಗಳಲ್ಲಿ ಜನರ ಸಮೂಹ ಅಶಿಸ್ತಿನಿಂದ ವರ್ತಿಸಿ ಗುಂಡು ಹಾರಿಸುವ ಹಾಗೂ ಗುಂಪುಗೂಡುವುದು ಸಂಭವಿಸುತ್ತಲೇ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಣಿಪುರದ ಬೆಟ್ಟ ಮತ್ತು ಕಣಿವೆ ಜಿಲ್ಲೆಗಳಲ್ಲಿ ಒಟ್ಟು 129 ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 1,047 ಜನರನ್ನು ಬಂಧಿಸಲಾಗಿದೆ. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಪ್ರಾರಂಭವಾದ ಜನಾಂಗೀಯ ಘರ್ಷಣೆ ಕಳೆದ 3 ತಿಂಗಳಿನಿಂದ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಇದನ್ನೂ ಓದಿ: ಟೈಟ್‌ ಸೆಕ್ಯುರಿಟಿಯೊಂದಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ಆರಂಭ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ವೆಯಾಗಿ 45 ವರ್ಷಗಳಾಯ್ತು, ನನಗೆ ಕೋಪವೇ ಬರಲ್ಲ – ಧನಕರ್ ಹಾಸ್ಯ ಚಟಾಕಿ

    ಮದ್ವೆಯಾಗಿ 45 ವರ್ಷಗಳಾಯ್ತು, ನನಗೆ ಕೋಪವೇ ಬರಲ್ಲ – ಧನಕರ್ ಹಾಸ್ಯ ಚಟಾಕಿ

    ನವದೆಹಲಿ: ಮುಂಗಾರು ಸಂಸತ್ ಅಧಿವೇಶನಕ್ಕೆ ಮಣಿಪುರ ಹಿಂಸಾಚಾರ (Manipur Violence) ವಿಚಾರ ಕಂಟಕವಾಗಿ ಪರಿಣಮಿಸಿದೆ. ಗುರುವಾರವೂ ಉಭಯ ಸದನಗಳಲ್ಲಿ ಗದ್ದಲ ಏರ್ಪಟ್ಟಿದೆ.

    ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ (Jagdeep Dhankhar) ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಡುವೆ ವಾಗ್ಯುದ್ಧ ನಡೆದಿದೆ. ಪ್ರಧಾನಿಯನ್ನ ಅಷ್ಟೇಕೆ ಸಮರ್ಥಿಸಿ ಮಾತಾಡ್ತಿದ್ದೀರಿ? ಮಣಿಪುರ ವಿಚಾರದಲ್ಲಿ ಪ್ರಧಾನಿಯನ್ನ ಏಕೆ ರಕ್ಷಣೆ ಮಾಡ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಧನಕರ್‌, ಯಾರನ್ನೂ ರಕ್ಷಿಸುವ ಅಗತ್ಯ ನನಗಿಲ್ಲ. ಸಂವಿಧಾನ ಮತ್ತು ಸದಸ್ಯರ ಹಕ್ಕುಗಳನ್ನು ರಕ್ಷಣೆ ಮಾಡುವುದು ನನ್ನ ಕೆಲಸ. ನಿಮ್ಮಂಥವರಿಂದ ಇಂಥಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ `ಸಭಾಪತಿ ಅವರಿಗೆ ಮದುವೆಯಾಗಿ 45 ವರ್ಷಗಳಾಗಿದೆ. ಆದರೂ ಪ್ರತಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸುವಾಗ ಏಕೆ ಸಿಡಿಮಿಡಿಗೊಳ್ಳುತ್ತಾರೆ ಅನ್ನೋದೇ ಅರ್ಥವಾಗುತ್ತಿಲ್ಲ’ ಎಂದು ಕುಳಿತುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್, ನಾನು ಮದುವೆಯಾಗಿ 45 ವರ್ಷ ಕಳೆದಿದೆ. ಹಾಗಾಗಿ ನನಗೆ ಕೋಪವೇ ಬರೋದಿಲ್ಲ ಎಂದು ಚಟಾಕಿ ಹಾರಿಸಿದರು. ಇದನ್ನೂ ಓದಿ: ಟ್ರೈನಿಂಗ್ ನೆಪದಲ್ಲಿ ಜ್ಯೂನಿಯರ್‌ಗಳಿಗೆ ಥಳಿಸಿದ NCC ಸೀನಿಯರ್ ಕೆಡೆಟ್- ವೀಡಿಯೋ ವೈರಲ್

    ಇನ್ನು, ಆಡಳಿತ ಮತ್ತು ವಿಪಕ್ಷಗಳ ಧೋರಣೆಗೆ ಬೆಸತ್ತ ಸ್ಪೀಕರ್ ಓಂಬಿರ್ಲಾ ಇವತ್ತು ಕಲಾಪದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, ಸ್ಪೀಕರ್ ಸದನದ ಸಂರಕ್ಷರು, ಅವರು ಬರಬೇಕು ಎಂದು ಕೋರಿದರು. ಇದನ್ನು ಮನ್ನಿಸಿದ ಸ್ಪೀಕರ್ ಮಧ್ಯಾಹ್ನದ ಕಲಾಪವನ್ನ ನಿರ್ವಹಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗೀಕಾರ – ಆಪ್‌ಗೆ ಭಾರೀ ಹಿನ್ನಡೆ

    ಅಲ್ಲದೇ ಗುರುವಾರ ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ದೆಹಲಿ ಸೇವಾ ಮಸೂದೆ ವಿಧೇಯಕವನ್ನು ಮಂಡನೆ ಮಾಡಲಾಯಿತು. ಈ ವೇಳೆ ವಿಧೇಯಕದ ಪ್ರತಿ ಹರಿದೆಸೆದ ಎಎಪಿ ಸಂಸದ ಸುಶೀಲ್ ಸದನದಿಂದ ಅಮಾನಾತಾದರು. ಕೇಂದ್ರದ ವಿರುದ್ಧ ಎಎಪಿ ವಾಗ್ದಾಳಿ ನಡೆಸಿದೆ. ಇದೇ ವೇಳೆ, ಡಿಜಿಟಲ್ ದತ್ತಾಂಶಗಳ ಸಂರಕ್ಷಣಾ ವಿಧೇಯಕವನ್ನು ಸರ್ಕಾರ ಮಂಡಿಸಿದ್ದು, ಲೋಕಸಭೆಯಲ್ಲಿ ಗದ್ದಲ ಉಂಟಾಯ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಪರಿಸ್ಥಿತಿ ಕಠಿಣವಾಗಿದೆ, ತುರ್ತಾಗಿ ಮಧ್ಯಸ್ಥಿಕೆ ವಹಿಸಿ: ರಾಷ್ಟ್ರಪತಿಗೆ INDIA ಒಕ್ಕೂಟ ನಾಯಕರ ಮನವಿ

    ಮಣಿಪುರದಲ್ಲಿ ಪರಿಸ್ಥಿತಿ ಕಠಿಣವಾಗಿದೆ, ತುರ್ತಾಗಿ ಮಧ್ಯಸ್ಥಿಕೆ ವಹಿಸಿ: ರಾಷ್ಟ್ರಪತಿಗೆ INDIA ಒಕ್ಕೂಟ ನಾಯಕರ ಮನವಿ

    ನವದೆಹಲಿ: ಸಂಘರ್ಷ ಪೀಡಿತ ಮಣಿಪುರ (Manipur) ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಮಧ್ಯಸ್ಥಿಕೆ ವಹಿಸುವಂತೆ ವಿಪಕ್ಷಗಳ ಬಣ INDIA ಒಕ್ಕೂಟದ ನಾಯಕರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    ಎರಡು ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಿದ ವಿರೋಧ ಪಕ್ಷಗಳ ಸಂಸದರ 21 ಸದಸ್ಯರ ನಿಯೋಗ ಸೇರಿದಂತೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ ಒಟ್ಟು 31 ಸದಸ್ಯರು ಇಂದು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಇದನ್ನೂ ಓದಿ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೌನ, ನಿರ್ಲಜ್ಜ ಉದಾಸೀನಕ್ಕೆ ಸಾಕ್ಷಿ: INDIA ಒಕ್ಕೂಟದ ಸಂಸದರ ಟೀಕೆ

    ಮಣಿಪುರದ ಪರಿಸ್ಥಿತಿಯು ಕಳೆದ ಕೆಲವು ವಾರಗಳಲ್ಲಿ ನಿರ್ಣಾಯಕ ಹಂತವನ್ನು ತಲುಪಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಆಘಾತಕಾರಿ ವೈರಲ್ ವೀಡಿಯೋ ರಾಷ್ಟ್ರವನ್ನು ಆಘಾತಕ್ಕೆ ತಳ್ಳಿದೆ. ರಾಜ್ಯ ಆಡಳಿತ ಮತ್ತು ಪೊಲೀಸರು ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿ ಬಂಧಿಸಲು ಎರಡು ತಿಂಗಳ ಕಾಲ ವಿಳಂಬ ಮಾಡಿರುವುದು ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಯಾವುದೇ ವಿಳಂಬವಿಲ್ಲದೆ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸಲು ನೀವು ತುರ್ತಾಗಿ ಮಧ್ಯಸ್ಥಿಕೆ ವಹಿಸಬೇಕೆಂದು ವಿನಂತಿಸುತ್ತೇವೆ. ಕಳೆದ 92 ದಿನಗಳ ವಿನಾಶಕ್ಕೆ ಉತ್ತರದಾಯಿತ್ವ ಇರಬೇಕು. ಸಂತ್ರಸ್ತ ಸಮುದಾಯಗಳಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಬದ್ಧರಾಗಬೇಕು. ಮಣಿಪುರದ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ತುರ್ತಾಗಿ ಪ್ರಸ್ತಾಪಿಸಲು ಪ್ರಧಾನ ಮಂತ್ರಿಯ ಮೇಲೆ ಒತ್ತಡ ಹೇರಲು ನಾವು ನಿಮ್ಮನ್ನು ಕೋರುತ್ತೇವೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ?

    ವಿಪಕ್ಷಗಳ ಒಕ್ಕೂಟದ ಸಂಸದರ ನಿಯೋಗವು ಮಣಿಪುರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದರು. ಬಿಷ್ಣುಪುರ ಜಿಲ್ಲೆಯ ಇಂಫಾಲ್‌, ಮೊಯಿರಾಂಗ್‌, ಚುರಾಚಂದ್‌ಪುರ ಸೇರಿ ಹಲವಾರು ಶಿಬಿರಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಜನಾಂಗೀಯ ಘರ್ಷಣೆಯಿಂದ ಸ್ಥಳಾಂತರಗೊಂಡ ಸ್ಥಳೀಯರ ಜೊತೆ ಸಂವಾದ ಕೂಡ ನಡೆಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಆಗಸ್ಟ್ 8ರಿಂದ 10ರವರೆಗೆ ಲೋಕಸಭೆಯಲ್ಲಿ ಚರ್ಚೆ

    ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಆಗಸ್ಟ್ 8ರಿಂದ 10ರವರೆಗೆ ಲೋಕಸಭೆಯಲ್ಲಿ ಚರ್ಚೆ

    ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ವಿಚಾರಕ್ಕೆ ಸಂಬಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ INDIA ಸಲ್ಲಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಆಗಸ್ಟ್ 8ರಿಂದ 10ರವರೆಗೆ ನಡೆಸಲು ನಿರ್ಧರಿಸಿದೆ.

    ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ (No-Confidence Motion) ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಉತ್ತರ ನೀಡಲಿದ್ದಾರೆ. ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅವಿಶ್ವಾಸ ನಿರ್ಣಯ ಮಂಡಿಸಿದರು. ಸೋನಿಯಗಾಂಧಿ, ಫಾರೂಕ್ ಅಬ್ದುಲ್ಲಾ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಂಸದರು ನಿರ್ಣಯಕ್ಕೆ ಬೆಂಬಲ ನೀಡಿದ್ದರು. ಇದನ್ನೂ ಓದಿ: ತರಕಾರಿ ಬೆಲೆ ಏರಿಕೆ – ಆಜಾದ್‌ಪುರ ಮಂಡಿ ತರಕಾರಿ ಮಾರುಕಟ್ಟೆಗೆ ರಾಗಾ ಭೇಟಿ

    ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ದಿನಾಂಕ ನಿಗದಿ ಮಾಡಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳ ಉಪಸ್ಥಿತಿಯಿಲ್ಲದೆ ಅವಿಶ್ವಾಸ ನಿರ್ಣಯ ಚರ್ಚೆಯ ದಿನಾಂಕ ಅಂತಿಮಗೊಳಿಸಲಾಗಿದೆ ಎಂದು ಆರೋಪಿಸಿವೆ. ಆಗಸ್ಟ್ 8ರಿಂದ 10ರ ಬದಲಿಗೆ ನಾಳೆಯೇ ಚರ್ಚೆ ನಡೆಯಬೇಕು ಎಂದು ಹಲವು ನಾಯಕರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ?

    ನವದೆಹಲಿ: ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ನಿವೃತ್ತ ಮಹಿಳಾ ನ್ಯಾಯಾಧೀಶರ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಚಿಂತನೆ ನಡೆಸಿದೆ.

    ಪ್ರಕರಣದ ವಿಶೇಷ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ತ್ರಿ ಸದಸ್ಯ ಪೀಠ, ಈವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? – ಯೋಗಿ ಆದಿತ್ಯನಾಥ್ ಪ್ರಶ್ನೆ

    ವಾದ ಪ್ರತಿವಾದ ಆಲಿಸಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ CJI ಚಂದ್ರಚೂಡ್, ನಮ್ಮ ಬಳಿ ಎರಡು ಆಯ್ಕೆಗಳಿವೆ. ಮೊದಲನೇಯದಾಗಿ ನಾವು ಓರ್ವ ಮಹಿಳಾ‌, ಓರ್ವ ಪುರುಷ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬಹುದು, ವಾಸ್ತವಾಂಶ ತಿಳಿಯಲು ನಾವು ಸಮಿತಿ ರಚನೆ ಮಾಡಬೇಕಾಗುತ್ತದೆ. ಇನ್ನು 2ನೇ ಆಯ್ಕೆ ಸರ್ಕಾರ ಇಲ್ಲಿಯವರೆಗೂ ಏನು ಮಾಡಿದೆ? ಅನ್ನೋದರ ಮೇಲೆ ನಿರ್ಧಾರವಾಗುತ್ತೆ. ಈವರೆಗೂ ಸರ್ಕಾರ ತೆಗೆದುಕೊಂಡ‌ ಕ್ರಮಗಳು ತೃಪ್ತಿಕರವಾಗಿದ್ದರೇ ನಾವು ಮಧ್ಯಪ್ರವೇಶ ಮಾಡದೇ ಇರುವುದು. ಇದನ್ನೂ ಓದಿ: ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ

    ಈ ಹಿನ್ನೆಲೆಯಲ್ಲಿ ನಮಗೆ ವಸ್ತುನಿಷ್ಠ ವರದಿಬೇಕು. ಈವರೆಗೂ 6,000 ಎಫ್‌ಐಆರ್ ವಿವರಗಳನ್ನ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಅಧಿಕಾರಿಗಳು ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಅನ್ನೋ ಮಾಹಿಯೂ ಬೇಕು. ದಾಖಲಾಗಿರುವ 6,000 FIRಗಳ ವಿಭಜನೆ ಮಾಡಬೇಕು. ಅದರಲ್ಲಿ ಎಷ್ಟು ಶೂನ್ಯ ಎಫ್‌ಐಆರ್ ದಾಖಲಾಗಿವೆ? ಎಷ್ಟು ಜನರ ಬಂಧನವಾಗಿದೆ? ಎಷ್ಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ? ಎಷ್ಟು ಮಂದಿ 156(3), ಎಷ್ಟು ಸೆಕ್ಷನ್ 164 ಹೇಳಿಕೆಗಳನ್ನ ದಾಖಲಿಸಲಾಗಿದೆ? ಎಂಬ ಮಾಹಿತಿ ಬೇಕು ಎಂದು ಸಿಜೆಐ ಚಂದ್ರಚೂಡ್ ನಿರ್ದೇಶಿಸಿದ್ದಾರೆ.

    ಎಲ್ಲ ಮಾಹಿತಿಯನ್ನ ಆಗಸ್ಟ್‌ 1ರಂದು ಕೋರ್ಟ್‌ಗೆ ನೀಡಬೇಕು ಎಂದು ಅವರು ಇದೇ ವೇಳೆ ಸೂಚಿಸಿದರು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿವರಗಳನ್ನ ನೀಡಲು ಹೆಚ್ಚಿನ ಸಮಯವನ್ನ ಕೋರಿದರು. ಆದ್ರೆ ನ್ಯಾಯಾಲಯವು ನಿರಾಕರಿಸಿತು.

    ಪ್ರಕರಣದ ಬಗ್ಗೆ ಎಸ್‌ಐಟಿ ರಚನೆ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯವನ್ನ ಸುಪ್ರೀಂಕೋರ್ಟ್ ಕೇಳಿದೆ. ಎಸ್‌ಐಟಿ ರಚನೆ ಅಂತಿಮವಾದ್ರೆ ಯಾರನ್ನ ಸೇರ್ಪಡೆ ಮಾಡಬಹುದು? ಒಳ್ಳೆಯ ಹೆಸರುಗಳಿದ್ದರೆ ತಿಳಿಸಿ, ನಾವು ಆ ಹೆಸರುಗಳನ್ನು ಪರಿಶೀಲಿಸಬೇಕು ಎಂದು ಪೀಠ ಹೇಳಿ, ವಿಚಾರಣೆಯನ್ನ ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು.

    ಮಣಿಪುರು ಘಟನೆ ಸಮರ್ಥಿಸಲು ಸಾಧ್ಯವಿಲ್ಲ:
    ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಮಣಿಪುರ ಘಟನೆಗೆ ಸಮರ್ಥಿಸಲು ಸಾಧ್ಯವಿಲ್ಲ ಎಂದು ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ವಿಚಾರಣೆ ವೇಳೆ ವಕೀಲ ಬಾನ್ಸುರಿ ಸ್ವರಾಜ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಅವರು, ಮಣಿಪುರ ಘಟನೆಯ ಜೊತೆಗೆ ಇತರೆ ಘಟನೆಗಳ ಹೋಲಿಕೆ ಮಾಡುವುದು ಸರಿಯಲ್ಲ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಗುಂಪುಗಳು ಮಹಿಳೆಯರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣಗಳು ತನಿಖೆಯಾಗಬೇಕು ಎಂದರು.

    ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿಯೂ ಮಹಿಳೆಯರ ವಿರುದ್ಧದ ಅಪರಾಧಗಳು ನಡೆಯುತ್ತಿವೆ ಎಂಬುದನ್ನ ಒಪ್ಪಿಕೊಳ್ಳಲಾಗಿದೆ. ಆದ್ರೆ ಮಣಿಪುರದ ಪರಿಸ್ಥಿತಿ ವಿಭಿನ್ನವಾಗಿದೆ ಮತ್ತು ಅದನ್ನ ಇತರ ಘಟನೆಗಳಿಗೆ ಹೋಲಿಸುವ ಮೂಲಕ ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೌನ, ನಿರ್ಲಜ್ಜ ಉದಾಸೀನಕ್ಕೆ ಸಾಕ್ಷಿ: INDIA ಒಕ್ಕೂಟದ ಸಂಸದರ ಟೀಕೆ

    ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೌನ, ನಿರ್ಲಜ್ಜ ಉದಾಸೀನಕ್ಕೆ ಸಾಕ್ಷಿ: INDIA ಒಕ್ಕೂಟದ ಸಂಸದರ ಟೀಕೆ

    – ಸಂಘರ್ಷ ಪೀಡಿತ ಮಣಿಪುರಕ್ಕೆ INDIA ಒಕ್ಕೂಟದ 21 ಸಂಸದರ ನಿಯೋಗ ಭೇಟಿ; ರಾಜ್ಯಪಾಲರಿಗೆ ಜ್ಞಾಪನಾ ಪತ್ರ ಸಲ್ಲಿಕೆ

    ಇಂಫಾಲ್: ಮಣಿಪುರ ಹಿಂಸಾಚಾರ (Manipur Violence) ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಪಕ್ಷಗಳ INDIA ಒಕ್ಕೂಟ ಈಗ ಮಣಿಪುರಕ್ಕೆ ಭೇಟಿ ನೀಡಿದೆ. INDIA ಒಕ್ಕೂಟದ 21 ಸಂಸದರ ನಿಯೋಗವು ಭಾನುವಾರ ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಿತು.

    ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ (Anusuiya Uikey) ಅವರನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಸಂಘರ್ಷದ ಕುರಿತು ತಮ್ಮ ಜ್ಞಾಪನಾ ಪತ್ರವನ್ನು ಸಹ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ, ಮೇ ಆರಂಭದಿಂದ ರಾಜ್ಯವನ್ನು ಆವರಿಸಿರುವ ಜನಾಂಗೀಯ ಹಿಂಸಾಚಾರದಿಂದ ನೊಂದಿರುವ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದಾರೆ. ಇದನ್ನೂ ಓದಿ:

    ನಿಯೋಗವು ಚುರಾಚಂದ್‌ಪುರ, ಇಂಫಾಲ್ ಮತ್ತು ಮೊಯಿರಾಂಗ್‌ನಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದೆ. ‘ಸಂಘರ್ಷದ ಆರಂಭದಿಂದಲೂ ಎರಡೂ ಕಡೆಯವರು ಬಿಚ್ಚಿಟ್ಟ ಹಿಂಸಾಚಾರದ ಕರಾಳ ಸನ್ನಿವೇಶಗಳು, ಸಂತ್ರಸ್ತರ ಆತಂಕ, ಅನಿಶ್ಚಿತತೆ, ನೋವು ಮತ್ತು ದುಃಖದ ಕಥೆಗಳನ್ನು ಕೇಳಿ ನಾವು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇವೆ. ಎಲ್ಲಾ ಸಮುದಾಯಗಳಲ್ಲಿ ಕೋಪ ಮತ್ತು ಪರಕೀಯತೆಯ ಭಾವನೆ ಇದೆ. ಇದನ್ನು ತಡ ಮಾಡದೇ ಪರಿಹರಿಸಬೇಕು’ ಎಂದು ನಿಯೋಗವು ಜ್ಞಾಪನಾ ಪತ್ರದಲ್ಲಿ ಒತ್ತಾಯಿಸಿದೆ.

    ಮಣಿಪುರ ಸಂಘರ್ಷದಲ್ಲಿ ಇದುವರೆಗೂ 140 ಕ್ಕೂ ಹೆಚ್ಚು ಸಾವು, 500 ಕ್ಕೂ ಹೆಚ್ಚು ಮಂದಿಗೆ ಗಾಯ, 5,000 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ ಅಂಕಿಅಂಶಗಳಿವೆ. ಎರಡು ಸಮುದಾಯಗಳ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಫಲ್ಯವಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಇದುವರೆಗೂ 60,000 ಕ್ಕಿಂತ ಹೆಚ್ಚು ಜನರ ತಮ್ಮ ನೆಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಆಗಿದ್ದಾರೆ ಎಂದು ಪತ್ರದಲ್ಲಿ ಒಕ್ಕೂಟ ಹೇಳಿದೆ.

    ಆದ್ಯತೆಯ ಆಧಾರದ ಮೇಲೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ವಿವಿಧ ಸ್ಟ್ರೀಮ್‌ಗಳ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದ್ಯತೆಯಾಗಿರಬೇಕು ಎಂದು ನಿಯೋಗವು ಪತ್ರದ ಮೂಲಕ ಸಲಹೆ ನೀಡಿದೆ.

    ಕಳೆದ ಮೂರು ತಿಂಗಳಿನಿಂದ ಮುಂದುವರಿದ ಇಂಟರ್ನೆಟ್ ನಿಷೇಧವು ಆಧಾರರಹಿತ ವದಂತಿಗಳನ್ನು ಹೆಚ್ಚಿಸುತ್ತಿದೆ. ಇದು ಅಸ್ತಿತ್ವದಲ್ಲಿರುವ ಅಪನಂಬಿಕೆಯನ್ನು ಹೆಚ್ಚಿಸುತ್ತದೆ. ಗೌರವಾನ್ವಿತ ಪ್ರಧಾನಿಯವರ ಮೌನವು ಮಣಿಪುರದ ಹಿಂಸಾಚಾರದ ಬಗ್ಗೆ ಅವರ ನಿರ್ಲಜ್ಜ ಉದಾಸೀನತೆಯನ್ನು ತೋರಿಸುತ್ತದೆ ಎಂದು ನಿಯೋಗ ತರಾಟೆಗೆ ತೆಗೆದುಕೊಂಡಿದೆ.

    ಸಂಘರ್ಷ ಪೀಡಿತ ಮಣಿಪುರಕ್ಕೆ INDIA ಒಕ್ಕೂಟದ 21 ಸಂಸದರ ನಿಯೋಗವು ಎರಡು ದಿನಗಳ ಭೇಟಿ ಕೈಗೊಂಡಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ರಾಜಕೀಯ ಮಾಡಲು ನಾವು ರಾಜ್ಯದಲ್ಲಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸ್ಪಷ್ಟಪಡಿಸಿದ್ದಾರೆ. ‘ನಾವು ಜನಾಂಗೀಯ ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಲು ಮತ್ತು ಸಮಸ್ಯೆ ತಿಳಿಯಲು ಇಲ್ಲಿಗೆ ಬಂದಿದ್ದೇವೆ. ಹಿಂಸಾಚಾರದ ಅಂತ್ಯ ಮತ್ತು ಶಾಂತಿಯ ಮರುಸ್ಥಾಪನೆಯನ್ನು ನಾವು ಬಯಸುತ್ತೇವೆ. ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇಡೀ ಜಗತ್ತು ಗಮನಿಸುತ್ತಿದೆ’ ಎಂದು ಮಾತನಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI

    ನವದೆಹಲಿ: ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (VBI) ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಕೇಂದ್ರ ಸರ್ಕಾರದ (Union Government) ಶಿಫಾರಸಿನ ಬಳಿಕ ಅಧಿಕೃತವಾಗಿ ದೂರು ದಾಖಲಿಸಿಕೊಂಡಿರುವ ಕೇಂದ್ರೀಯ ತನಿಖಾ ದಳ ತನಿಖೆ ಆರಂಭಿಸಿದೆ.

    ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ತನಿಖಾ ಸಂಸ್ಥೆ ಈ FIR ದಾಖಲಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದ ನಂತರ ಈ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?

    CBI ಸೆಕ್ಷನ್ 153A, 398, 427, 436, 448, 302, 354, 364, 326, 376, 34 ಐಪಿಸಿ ಮತ್ತು 25 (1-C)A ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನ ಈಗಾಗಲೇ ಬಂಧಿಸಲಾಗಿದ್ದು, ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನ್ ಕೂಡ ವಶಪಡಿಸಿಕೊಳ್ಳಲಾಗಿದೆ.

    ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸಲಿದ್ದು, ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಅವರನ್ನು ವಿಚಾರಣೆಗೆ ಒಳಪಡಿಸಲಿದೆ. ಬಳಿಕ ಸಂತ್ರಸ್ತರ ಹೇಳಿಕೆಗಳನ್ನ ದಾಖಲಿಸುತ್ತದೆ. ಎಲ್ಲ ಪ್ರಕ್ರಿಯೆ ಬಳಿಕ ಅಪರಾಧ ಸ್ಥಳವನ್ನ ಸಹ ಪರಿಶೀಲಿಸಲಿದೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ -‌ ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್‌ ಹಾಕಿದ್ದ ಪಾಪಿ ಪ್ರೇಮಿ!

    ಮಣಿಪುರದ ವೈರಲ್ ವೀಡಿಯೊದ ತನಿಖೆಯನ್ನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ವಹಿಸಿಕೊಳ್ಳಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿತ್ತು. ವಿಚಾರಣೆಯನ್ನು ಮಣಿಪುರದ ಹೊರಗೆ ನಡೆಸಲು ನಿರ್ದೇಶಿಸುವಂತೆ ಅಫಿಡವಿಟ್ ಮೂಲಕ ಮನವಿ ಮಾಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]